ಥೈಲ್ಯಾಂಡ್ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀಮತಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಂಟಿಯಾನ್‌ನಲ್ಲಿ ನಡೆಯುತ್ತಿರುವ ಪೂರ್ವ ಏಷ್ಯಾ ಶೃಂಗಸಭೆ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಪ್ರಧಾನ ಮಂತ್ರಿಗಳ ನಡುವಿನ ಮೊದಲ ಭೇಟಿ ಇದಾಗಿದೆ.
ಥಾಯ್ ಪ್ರಧಾನಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಶಿನಾವತ್ರಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆ ಸಲ್ಲಿಸಿದರು, ಸತತ ಮೂರನೇ ಬಾರಿ ಭಾರತದ ಪ್ರಧಾನಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಮೋದಿಯವರಿಗೆ ಸಹ ಪ್ರತಿಯಾಗಿ ಪೇಟೊಂಗ್ಟಾರ್ನ್ ಶಿನಾವತ್ರಾ ಶುಭಾಶಯ ತಿಳಿಸಿದರು.
ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಿದರು. ಉಪ-ಪ್ರಾದೇಶಿಕ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟ ಸಹಕಾರವನ್ನು ರೂಪಿಸುವ ಮಾರ್ಗಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ, ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (BIMSTEC) ಮೂಲಕ ಪ್ರಾದೇಶಿಕ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಿದರು.
ಈ ವರ್ಷ ದಶಕವನ್ನು ಪೂರೈಸಿರುವ ಭಾರತದ 'ಆಕ್ಟ್ ಈಸ್ಟ್' ನೀತಿ ಮತ್ತು ಇಂಡೋ-ಫೆಸಿಫಿಕ್ ನ ಭಾರತದ ದೃಷ್ಟಿಕೋನದಡಿಯಲ್ಲಿ ಥೈಲ್ಯಾಂಡ್‌ನೊಂದಿಗಿನ ಭಾರತದ ಸಂಬಂಧಗಳ ಪ್ರಮುಖ ಆಧಾರಸ್ತಂಭವಾಗಿದೆ,
Met PM Paetongtarn Shinawatra in Lao PDR. Thailand is a deeply valued friend of India’s. Our talks were focused on how to improve trade ties between our nations and to boost cultural linkages. We also see great scope in sectors like defence, shipping, digital innovations and… pic.twitter.com/aXXhydrWPX
— Narendra Modi (@narendramodi) October 11, 2024
ได้พบกับคุณแพทองธาร ชินวัตร นายกรัฐมนตรีของไทย ที่ สปป.ลาว ประเทศไทยเป็นมิตรที่ทรงคุณค่าอย่างลึกซึ้งของอินเดีย การหารือของเรามุ่งเน้นไปที่แนวทางการยกระดับความสัมพันธ์ทางการค้าระหว่างประเทศของเรา และส่งเสริมความสัมพันธ์ทางวัฒนธรรม นอกจากนี้ เรายังมองเห็นโอกาสอันมากมายในภาคส่วนต่าง… pic.twitter.com/DrW9fcj7vu
— Narendra Modi (@narendramodi) October 11, 2024