ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅರ್ಜೆಂಟೀನಾ ಅಧ್ಯಕ್ಷ ಶ್ರೀ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು 26 ಜೂನ್ 2022 ರಂದು ಮ್ಯೂನಿಚ್‌ನಲ್ಲಿ ಭೇಟಿ ಮಾಡಿದರು.
ಉಭಯ ನಾಯಕರ ನಡುವಿನ ಮೊದಲ ದ್ವಿಪಕ್ಷೀಯ ಸಭೆ ಇದಾಗಿದೆ. 2019 ರಲ್ಲಿ ಆರಂಭಿಸಲಾದ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯನ್ನು ನಾಯಕರು ಪರಿಶೀಲಿಸಿದರು. ವ್ಯಾಪಾರ ಮತ್ತು ಹೂಡಿಕೆ, ದಕ್ಷಿಣ-ದಕ್ಷಿಣ ಸಹಕಾರ ವಿಶೇಷವಾಗಿ ಔಷಧೀಯ ವಲಯದಲ್ಲಿ; ಹವಾಮಾನ ಕ್ರಮಗಳು, ನವೀಕರಿಸಬಹುದಾದ ಇಂಧನ, ಪರಮಾಣು ಔಷಧ, ವಿದ್ಯುಚ್ಚಾಲಿತ ಸಂಚಾರ ವ್ಯವಸ್ಥೆ, ರಕ್ಷಣಾ ಸಹಕಾರ, ಕೃಷಿ ಮತ್ತು ಆಹಾರ ಭದ್ರತೆ, ಸಾಂಪ್ರದಾಯಿಕ ಔಷಧ, ಸಾಂಸ್ಕೃತಿಕ ಸಹಕಾರ, ಹಾಗೆಯೇ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಸಮನ್ವಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು. ಈ ಕ್ಷೇತ್ರಗಳಲ್ಲಿ ತಮ್ಮ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.
Reviewed the full range of the India-Argentina friendship during the very productive meeting with President @alferdez in Munich. Stronger cooperation between our nations will greatly benefit our people. pic.twitter.com/bBe32Wg850
— Narendra Modi (@narendramodi) June 26, 2022