ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಸ್ತುತ ಖಾಸಗಿ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಕೀನ್ಯಾದ ಮಾಜಿ ಪ್ರಧಾನಿ ಹೆಚ್.ಇ. ರೈಲಾ ಅಮೊಲೊ ಒಡಿಂಗಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಇಬ್ಬರು ನಾಯಕರು ದಶಕಗಳ ಹಿಂದಿನ ಸೌಹಾರ್ದ ವೈಯಕ್ತಿಕ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು ಮೂರೂವರೆ ವರ್ಷಗಳ ನಂತರ ಶ್ರೀ ಒಡಿಂಗಾ ಅವರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು. 2008 ರಿಂದ ಭಾರತ ಮತ್ತು ಕೀನ್ಯಾ ಎರಡರಲ್ಲೂ ಮಿಸ್ಟರ್ ಒಡಿಂಗಾ ಅವರೊಂದಿಗಿನ ಅವರ ಬಹು ಸಂವಾದಗಳನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು, ಹಾಗೆಯೇ 2009 ಮತ್ತು 2012 ರಲ್ಲಿ ವೈಬ್ರೆಂಟ್ ಗುಜರಾತ್ ಶೃಂಗಸಭೆಗೆ ಅವರು ನೀಡಿದ ಬೆಂಬಲವನ್ನು ನೆನಪಿಸಿಕೊಂಡರು.
ಉಭಯ ನಾಯಕರು ಪರಸ್ಪರ ಆಸಕ್ತಿಯ ಇತರ ವಿಷಯಗಳ ಬಗ್ಗೆಯೂ ಚರ್ಚಿಸಿದರು. ಭಾರತ-ಕೀನ್ಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ಶ್ರೀ ಒಡಿಂಗಾ ಅವರ ಉತ್ತಮ ಆರೋಗ್ಯ ಮತ್ತು ಭವಿಷ್ಯದ ಪ್ರಯತ್ನಗಳಿಗಾಗಿ ತಮ್ಮ ಶುಭಾಶಯಗಳನ್ನು ತಿಳಿಸಿದರು.
Delighted to receive my friend H.E. Raila Amolo Odinga, former Prime Minister of Kenya. I fondly recollect my past interactions with him in India and Kenya.
— Narendra Modi (@narendramodi) February 13, 2022
India and Kenya enjoy strong bilateral relations and we welcome further strengthening of our ties. pic.twitter.com/vz39ij5y4f