ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ನವೆಂಬರ್ 2ರಂದು ಯುನೈಟೆಡ್ ಕಿಂಗ್ ಡಮ್ ನ ಗ್ಲಾಸ್ಗೋದಲ್ಲಿ ಸಿಒಪಿ26 ಶೃಂಗಸಭೆಯ ಸಂದರ್ಭದಲ್ಲಿ ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಶ್ರೀ ಶೇರ್ ಬಹದ್ದೂರ್ ದೇವುಭಾ ಅವರನ್ನು ಭೇಟಿ ಮಾಡಿದರು.
ಕೋವಿಡ್-19 ವಿರುದ್ಧದ ಸದ್ಯ ನಡೆಯುತ್ತಿರುವ ಹೋರಾಟದ ಪ್ರಯತ್ನಗಳ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಹಕಾರ ಸಂಬಂಧ ಮತ್ತಷ್ಟು ಬಲವರ್ಧನೆಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಸಾಂಕ್ರಾಮಿಕದ ಸಮಯದಲ್ಲಿ ಭಾರತ ಮತ್ತು ನೇಪಾಳದ ನಡುವೆ ವಿಶೇಷವಾಗಿ ಲಸಿಕೆ, ಔಷಧ ಮತ್ತು ವೈದ್ಯಕೀಯ ಸಾಧನಗಳನ್ನು ಪೂರೈಕೆಯ ಮೂಲಕ ಮತ್ತು ಗಡಿಗಳಲ್ಲಿ ಸರಕುಗಳ ಮುಕ್ತ ಸಂಚಾರ ಖಾತ್ರಿಪಡಿಸಿದ್ದಕ್ಕಾಗಿ ಮತ್ತು ಭಾರತ ನೇಪಾಳದ ನಡುವೆ ಅತ್ಯುತ್ತಮ ಸಹಕಾರ ಕಾಯ್ದುಕೊಂಡಿದ್ದನ್ನು ಉಲ್ಲೇಖಿಸಿದರು. ಕೋವಿಡ್ ನಂತರದ ಆರ್ಥಿಕ ಪುನಶ್ಚೇತನ ನಿಟ್ಟಿನಲ್ಲಿ ಅತ್ಯಂತ ನಿಕಟವಾಗಿ ಕಾರ್ಯನಿರ್ವಹಿಸಲು ಉಭಯ ನಾಯಕರು ಒಪ್ಪಿದರು.
ನೇಪಾಳದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಈ ಇಬ್ಬರು ನಾಯಕರು ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ದೇವುಬಾ ಮುಖಾಮುಖಿ ಭೇಟಿ ಮಾಡಿದರು.
प्रधानमन्त्री @SherBDeuba सँग भारत-नेपाल मित्रताका धेरै पक्षहरूमा फलदायी छलफल भयो। विश्वव्यापी महामारी विरुद्ध लड्न र दिगो विकास प्रवर्द्धनसँग सम्बन्धित विषयहरू हाम्रो द्विपक्षीय मित्रताका महत्वपूर्ण आयामहरू हुन्। pic.twitter.com/dBvO4lZOaC
— Narendra Modi (@narendramodi) November 2, 2021
Had a productive discussion with PM @SherBDeuba on multiple aspects of the India-Nepal friendship. Subjects relating to fighting the global pandemic and furthering sustainable development are key parts of our bilateral friendship. pic.twitter.com/JKtMbXgb9X
— Narendra Modi (@narendramodi) November 2, 2021