ನನ್ನ ಪ್ರಿಯ ದೇಶಬಾಂಧವರೆ ನಮಸ್ಕಾರ. ಕೋವಿಡ್ 19 ರ ವಿರುದ್ಧ ದೇಶ ಯಾವ ರೀತಿ ಸಂಪೂರ್ಣ ಶಕ್ತಿಯನ್ನು ಬಳಸಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ನಾವು ನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದೊಂದು ಬಹುದೊಡ್ಡ ಮಹಾಮಾರಿಯಾಗಿದೆ ಮತ್ತು ಇದೇ ಸಾಂಕ್ರಾಮಿಕದ ಮಧ್ಯೆ ಭಾರತ ಹಲವಾರು ಬಗೆಯ ಪ್ರಾಕೃತಿಕ ವಿಪತ್ತುಗಳನ್ನು ಕೂಡ ಬಲಯುತವಾಗಿ ಎದುರಿಸಿದೆ. ಈ ಸಮಯದಲ್ಲಿ ಅಂಫಾನ್ ಚಂಡಮಾರುತ ಮತ್ತು ನಿಸರ್ಗ ಚಂಡಮಾರುತ ಅಪ್ಪಳಿಸಿತು. ಅನೇಕ ರಾಜ್ಯಗಳಲ್ಲಿ ನೆರೆ ಬಂತು. ಸಣ್ಣ ಪುಟ್ಟ ಭೂಕಂಪಗಳು ಆದವು. ಭೂಮಿ ಕುಸಿಯಿತು. ಇದೀಗ ಕಳೆದ 10 ದಿನಗಳಲ್ಲಿ ದೇಶ 2 ದೊಡ್ಡ ಚಂಡಮಾರುತಗಳನ್ನು ಎದುರಿಸುತ್ತಿದೆ. ಪಶ್ಚಿಮ ಸಮುದ್ರ ತೀರದಲ್ಲಿ ಚಂಡಮಾರುತ ತಾವು-ತೆ ಮತ್ತು ಪೂರ್ವ ತಟದಲ್ಲಿ ಚಂಡಮಾರುತ ಯಾಸ್ ಅಪ್ಪಳಿಸಿದ್ದು ಹಲವಾರು ರಾಜ್ಯಗಳ ಮೇಲೆ ಪ್ರಭಾವ ಬೀರಿವೆ. ದೇಶ ಮತ್ತು ದೇಶದ ಜನತೆ ಇದರ ವಿರುದ್ಧ ಸಂಪೂರ್ಣ ಶಕ್ತಿಯಿಂದ ಹೋರಾಡಿ ಅತ್ಯಂತ ಕಡಿಮೆ ಸಾವು ನೋವುಗಳಾಗುವಂತೆ ನೋಡಿಕೊಂಡರು. ಈಗ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಹೆಚ್ಚೆಚ್ಚು ಜನರ ಜೀವವನ್ನು ಉಳಿಸುತ್ತಿರುವುದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಆಪತ್ತಿನ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಚಂಡಮಾರುತದಿಂದ ತತ್ತರಿಸಿದ ಎಲ್ಲ ರಾಜ್ಯಗಳ ಜನತೆ ಅಪಾರ ಸಾಹಸವನ್ನು ತೋರ್ಪಡಿಸಿದ್ದಾರೆ, ಈ ಸಂಕಷ್ಟ ಸಮಯದಲ್ಲಿ ಸಂಮಯದಿಂದ ಧೈರ್ಯದಿಂದ ಅದನ್ನು ಎದುರಿಸಿದ್ದಾರೆಯೋ ಆ ಎಲ್ಲ ನಾಗರಿಕರಿಗೆ ನಾನು ಹೃದಯಪೂರ್ವಕ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಯಾರು ಮುಂದುವರಿದು ಪರಿಹಾರ ಮತ್ತು ಸಂರಕ್ಷಣಾ ಕಾರ್ಯದಲ್ಲಿ ಕೆಲಸದಲ್ಲಿ ಪಾಲ್ಗೊಂಡರೋ ಅವರೆಲ್ಲರಿಗೂ ಎಷ್ಟು ಮೆಚ್ಚುಗೆ ತೋರಿದರೂ ಅದು ಕಡಿಮೆಯೇ. ಅವರೆಲ್ಲರಿಗೂ ನಾನು ವಂದಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಆಡಳಿತ ಎಲ್ಲರೂ ಒಗ್ಗೂಡಿ ಈ ಆಪತ್ತನ್ನು ಎದುರಿಸಲು ಮುಂದಾಗಿದ್ದಾರೆ. ತಮ್ಮ ಬಂಧುಗಳನ್ನು ಕಳೆದುಕೊಂಡವರೆಲ್ಲರ ಬಗ್ಗೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಈ ಆಪತ್ತನ್ನು ಎದುರಿಸಿದ ಎಲ್ಲರೊಂದಿಗೆ ನಾವೆಲ್ಲರೂ ಈ ಸಂಕಷ್ಟದ ಸಮಯದಲ್ಲಿ ಸಂಪೂರ್ಣ ಬೆಂಬಲಕ್ಕೆ ನಿಂತಿದ್ದೇವೆ.
ನನ್ನ ಪ್ರಿಯ ದೇಶಬಾಂಧವರೆ ಸವಾಲು ಎಷ್ಟೇ ದೊಡ್ಡದಾಗಿರಲಿ ಭಾರತದ ವಿಜಯದ ಸಂಕಲ್ಪವೂ ಅಷ್ಟೇ ದೊಡ್ಡದಾಗಿದೆ. ದೇಶದ ಸಾಮೂಹಿಕ ಶಕ್ತಿ ಮತ್ತು ನಮ್ಮ ಸೇವಾಭಾವ ದೇಶವನ್ನು ಎಲ್ಲ ಸಂಕಷ್ಟದಿಂದ ಪಾರು ಮಾಡಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ವೈದ್ಯರು, ಸುಶ್ರೂಷಕಿಯರು ಮತ್ತು ಮುಂಚೂಣಿ ಹೋರಾಟಗಾರರು- ತಮ್ಮ ಬಗೆಗಿನ ಆಲೋಚನೆಯನ್ನು ತೊರೆದು ಹಗಲು ರಾತ್ರಿ ಕೆಲಸ ಮಾಡಿದ್ದಾರೆ ಮತ್ತು ಇಂದಿಗೂ ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಇದೆಲ್ಲದರ ಮಧ್ಯೆ ಕೊರೊನಾ 2ನೇ ಅಲೆಯ ವಿರುದ್ಧ ಹೋರಾಡುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಅದೆಷ್ಟೋ ಜನರಿದ್ದಾರೆ. ನಮೋ ಆಪ್ ಮತ್ತು ಪತ್ರಗಳ ಮೂಲಕ ಹಲವಾರು ಶ್ರೋತೃಗಳು ಮನದ ಮಾತಿನಲ್ಲಿ ನನ್ನೊಂದಿಗೆ ಈ ವಾರಿಯರ್ಸ್ ಬಗ್ಗೆ ಮಾತನಾಡುವ ಕುರಿತು ಆಗ್ರಹಿಸಿದ್ದಾರೆ.
ಸ್ನೇಹಿತರೆ, 2 ನೇ ಅಲೆ ಬಂದಾಗ ಇದ್ದಕ್ಕಿದ್ದಂತೆ ಆಮ್ಲಜನಕದ ಬೇಡಿಕೆ ಬಹಳಷ್ಟು ಹೆಚ್ಚಾಯಿತು. ಇದು ಬಹುದೊಡ್ಡ ಸವಾಲಾಗಿತ್ತು. ವೈದ್ಯಕೀಯ ಆಮ್ಲಜನಕವನ್ನು ದೇಶದ ದೂರ ಪ್ರದೇಶಗಳಿಗೆ ತಲುಪಿಸುವುದು ಬಹುದೊಡ್ಡ ಸವಾಲಾಗಿತ್ತು. ಆಮ್ಲಜನಕದ ಟ್ಯಾಂಕರ್ ಗಳು ಹೆಚ್ಚು ವೇಗವಾಗಿ ತಲುಪಬೇಕು. ಸ್ವಲ್ಪ ಅಲಕ್ಷವಾದರೂ ವಿಸ್ಪೋಟವಾಗುವಂತಹ ಆತಂಕವಿರುತ್ತದೆ. ಔದ್ಯಮಿಕ ಆಮ್ಲಜನಕವನ್ನು ಉತ್ಪಾದಿಸುವ ಅನೇಕ ಘಟಕಗಳು ದೇಶದ ಪೂರ್ವಭಾಗದಲ್ಲಿವೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಆಮ್ಲಜನಕ ಸರಬರಾಜು ಮಾಡಲು ಕೂಡ ಹಲವು ದಿನಗಳು ಬೇಕಾಗುತ್ತವೆ.
ದೇಶದ ಎದುರಿಗಿರುವ ಈ ಸವಾಲಿನ ಸ್ಥಿತಿಯಲ್ಲಿ ದೇಶಕ್ಕೆ cryogenic tanker ವಾಹನ ಚಾಲಕರು, oxygen express, Air Force ನ pilot ಗಳು ಸಹಾಯ ಮಾಡಿದರು. ಇಂಥ ಅನೇಕ ಜನರು ಯುದ್ಧೋಪಾದಿಯಲ್ಲಿ ಕೆಲಸ ಮಾಡಿ ಲಕ್ಷಾಂತರ ಜನರ ಜೀವನ ಉಳಿಸಿದರು. ಇಂದು ಮನದ ಮಾತಿನಲ್ಲಿ ಇಂದು ನಮ್ಮೊಂದಿಗೆ ಇಂಥ ಒಬ್ಬ ಸ್ನೇಹಿತರು ಪಾಲ್ಗೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದ ಜೌನ್ಪು ರದ ನಿವಾಸಿ ಶ್ರೀಯುತ ದಿನೇಶ್ ಉಪಾಧ್ಯಾಯ ಅವರು …
ಮೋದಿಯವರು: ದಿನೇಶ್ ಅವರೆ ನಮಸ್ಕಾರ
ದಿನೇಶ್ ಉಪಾಧ್ಯಾಯ: ಸರ್, ನಮಸ್ಕಾರ
ಮೋದಿಯವರು: ಎಲ್ಲಕ್ಕಿಂತ ಮೊದಲು ನಿಮ್ಮ ಬಗ್ಗೆ ನಮಗೆ ತಿಳಿಸಿ
ದಿನೇಶ್ ಉಪಾಧ್ಯಾಯ: ಸರ್ ನನ್ನ ಹೆಸರು ದಿನೇಶ್ ಬಾಬುಲ್ನಾಸಥ್ ಉಪಾಧ್ಯಾಯ. ನಾನು ಜೌನ್ಪುುರ ಜಿಲ್ಲೆಯ ಅಂಚೆ - ಜಮುವಾ ಹಸನ್ ಪುರ ಗ್ರಾಮದ ನಿವಾಸಿಯಾಗಿದ್ದೇನೆ.
ಮೋದಿಯವರು: ಉತ್ತರ ಪ್ರದೇಶದವರಾ?
ದಿನೇಶ್: ಹೌದು ಸರ್
ಮೋದಿಯವರು: ಹೌದಾ
ದಿನೇಶ್: ಸರ್ ನನಗೆ ಒಬ್ಬ ಮಗನಿದ್ದಾನೆ, ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಮತ್ತು ತಂದೆ ತಾಯಿ ಇದ್ದಾರೆ.
ಮೋದಿಯವರು: ನೀವು ಏನು ಕೆಲಸ ಮಾಡುತ್ತೀರಿ?
ದಿನೇಶ್: ಸರ್ ನಾನು ಆಮ್ಲಜನಕದ ಟ್ಯಾಂಕರ್ ಚಾಲಕನಾಗಿದ್ದೇನೆ. Liquid oxygen….
ಮೋದಿಯವರು: ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆಯೇ?
ದಿನೇಶ್: ಹಾಂ ಸರ್ ವಿದ್ಯಾಭ್ಯಾಸ ಚೆನ್ನಾಗಿ ನಡೆದಿದೆ. ಇಬ್ಬರು ಹೆಣ್ಣು ಮಕ್ಕಳು ಮತ್ತು ಮಗ ಓದುತ್ತಿದ್ದಾರೆ.
ಮೋದಿಯವರು: ಆನ್ ಲೈನ್ ಅಭ್ಯಾಸ ಚೆನ್ನಾಗಿ ನಡೆದಿದೆಯೇ?
ದಿನೇಶ್: ಹಾಂ ಸರ್, ಚೆನ್ನಾಗಿ ಓದುತ್ತಿದ್ದಾರೆ. ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಸರ್, 15-17 ವರ್ಷಗಳಿಂದ ನಾನು ಆಮ್ಲಜನಕದ ಟ್ಯಾಂಕರ್ ಚಲಾಯಿಸುತ್ತಿದ್ದೇನೆ.
ಮೋದಿಯವರು: ಹೌದಾ! ನೀವು 15-17 ವರ್ಷಗಳಿಂದ ನಾನು ಆಮ್ಲಜನಕ ಹೊತ್ತೊಯ್ಯುತ್ತಿದ್ದೀರಿ ಎಂದಾದಲ್ಲಿ ನೀವು ಕೇವಲ ಒಬ್ಬ ಚಾಲಕನಲ್ಲ. ಲಕ್ಷಾಂತರ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದೀರಿ.
ದಿನೇಶ್: ಸರ್ ನಮ್ಮ ಕೆಲಸವೇ ಅದಲ್ಲವೇ ಸರ್, ನಮ್ಮ ಆಮ್ಲಜನಕದ ಕಂಪನಿ ಐನಾಕ್ಸ ನಮ್ಮ ಬಗ್ಗೆ ಬಹಳ ಕಾಳಜಿವಹಿಸುತ್ತದೆ. ನಾವು ಎಲ್ಲಿಯೇ ಆಮ್ಲಜನಕವನ್ನು ತಲುಪಿಸುತ್ತೇವೆ ಎಂದಾಗ ನಮಗೆ ಬಹಳ ಸಂತೋಷವೆನಿಸುತ್ತದೆ.
ಮೋದಿಯವರು: ಆದರೆ ಪ್ರಸ್ತುತ ಕೊರೊನಾ ಸಮಯದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ?
ದಿನೇಶ್: ಹೌದು ಸರ್ ಬಹಳ ಹೆಚ್ಚಾಗಿದೆ.
ಮೋದಿಯವರು: ನೀವು ಟ್ರಕ್ನಳ ಚಾಲಕ ಆಸನದ ಮೇಲೆ ಕುಳಿತಾಗ ನಿಮ್ಮ ಭಾವನೆ ಹೇಗಿರುತ್ತದೆ? ಹಿಂದಕ್ಕೆ ಹೋಲಿಸಿದಲ್ಲಿ ಇಂದು ನಿಮ್ಮ ಅನುಭವದಲ್ಲಿ ಏನು ಬದಲಾವಣೆಯಾಗಿದೆ? ಬಹಳ ಒತ್ತಡ ಇರಬಹುದಲ್ಲವೇ? ಮಾನಸಿಕ ಒತ್ತಡ ಇರಬಹುದು? ಕುಟುಂಬದ ಚಿಂತೆ, ಕೊರೊನಾ ವಾತಾವರಣ, ಜನರಿಂದ ಒತ್ತಡ, ಬೇಡಿಕೆ? ಏನೇನಾಗುತ್ತದೆ.
ದಿನೇಶ್: ಸರ್ ನಮಗೆ ಚಿಂತೆಯೇನೂ ಇಲ್ಲ. ನಮ್ಮ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ, ನಮ್ಮ ಆಮ್ಲಜನಕದಿಂದ ಯಾರದೇ ಜೀವನ ಉಳಿಯುತ್ತದೆ ಎಂದರೆ ಬಹಳ ಹೆಮ್ಮೆಯೆನಿಸುತ್ತದೆ.
ಮೋದಿಯವರು: ಬಹಳ ಉತ್ತಮ ರೀತಿಯಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ. ಇಂದು ಈ ಮಹಾಮಾರಿಯ ಸಂದರ್ಭದಲ್ಲಿ ಜನರು ನಿಮ್ಮ ಕೆಲಸದ ಮಹತ್ವವನ್ನು ಗಮನಿಸುತ್ತಿದ್ದಾರೆ. ಇದರ ಬಗ್ಗೆ ಈ ಹಿಂದೆ ಅಷ್ಟೊಂದು ಪರಿಗಣನೆ ಇರಲಿಲ್ಲ. ಇಂದು ನಿಮ್ಮ ಕೆಲಸದ ಬಗ್ಗೆ ಮತ್ತು ನಿಮ್ಮ ಬಗ್ಗೆ ಅವರ ಭಾವನೆಗಳು ಬದಲಾಗಿವೆಯೇ?
ದಿನೇಶ್: ಹೌದು ಸರ್, ಈ ಹಿಂದೆ ಆಮ್ಲಜನಕದ ಟ್ಯಾಂಕರ್ ಚಾಲಕರು ಎಲ್ಲಿಯೇ ವಾಹನ ದಟ್ಟಣೆಯ್ಲಲಿ ಸಿಲುಕಿರುತ್ತಿದ್ದೆವು ಆದರೆ ಇಂದು ಸರ್ಕಾರ ಕೂಡ ನಮಗೆ ಬಹಳ ಸಹಾಯ ಮಾಡುತ್ತಿದೆ. ನಾವು ಎಲ್ಲಿಗೆ ಪಯಣಿಸಿದರೂ ಎಷ್ಟು ಬೇಗ ತಲುಪಿ ಜನರ ಜೀವ ಉಳಿಸಬಲ್ಲೆವು ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ ಸರ್. ಊಟ ತಿಂಡಿ ಸಿಗಲಿ ಸಿಗದಿರಲಿ, ಯಾವುದೇ ಸಮಸ್ಯೆ ಬರಲಿ ನಾವು ಆಸ್ಪತ್ರೆಗೆ ಟ್ಯಾಂಕರ್ ತೆಗೆದುಕೊಂಡು ತಲುಪಿದಾಗ ಜನರು ನಮ್ಮನ್ನು ನೋಡಿ ಆಸ್ಪತ್ರೆಯವರು ಮತ್ತು ರೋಗಿಯ ಬಂಧುಗಳು ವಿಜಯದ ವಿ ಸಂಕೇತ ತೋರುತ್ತಾರೆ.
ಮೋದಿಯವರು: ಹೌದಾ ವಿಕ್ಟರಿಯ ವಿ ಸಂಕೇತ ತೋರುತ್ತಾರಾ?
ದಿನೇಶ್: ಹೌದು ಸರ್! ವಿ ಸಂಕೇತ ಇಲ್ಲ ಹೆಬ್ಬೆಟ್ಟಿನ ಸಂಕೇತ ತೋರಿದಾಗ ನಮಗೆ ಜೀವನದಲ್ಲಿ ಯಾವುದಾದರೂ ಒಳ್ಳೆ ಕೆಲಸ ಮಾಡಿದುದರಿಂದಲೇ ಈ ಜೀವ ಉಳಿಸುವ ಅವಕಾಶ ದೊರೆತಿದೆ ಎಂದು ಸಮಾಧಾನವಾಗುತ್ತದೆ
ಮೋದಿಯವರು: ಚಾಲನೆಯ ಸುಸ್ತು ನಿರಾಳವಾಗಬಹುದು
ದಿನೇಶ್: ಹೌದು ಸರ್. ಹೌದು ಸರ್
ಮೋದಿಯವರು: ಮನೆಗೆ ಬಂದ ಮೇಲೆ ಮಕ್ಕಳೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುತ್ತೀರಾ?
ದಿನೇಶ್: ಇಲ್ಲ ಸರ್, ಮಕ್ಕಳು ಗ್ರಾಮದಲ್ಲಿರುತ್ತಾರೆ. ಇಲ್ಲಿ ನಾವು INOX Air Product ಚಾಲಕನ ಕೆಲಸ ಮಾಡುತ್ತಿದ್ದೇವೆ. 8-9 ತಿಂಗಳ ನಂತರ ಮನೆಗೆ ಹೋಗುತ್ತೇನೆ.
ಮೋದಿಯವರು: ಯಾವಾಗಲಾದರೂ ದೂರವಾಣಿ ಕರೆ ಮಾಡಿ ಮಕ್ಕಳೊಂದಿಗೆ ಮಾತಾಡುತ್ತೀರಲ್ಲವೆ?
ದಿನೇಶ್: ಹಾಂ ಸರ್ ಮಾತಾಡುತ್ತೇನೆ.
ಮೋದಿಯವರು: ಆಗ ಅವರ ಮನದಲ್ಲಿ ಅಪ್ಪಾ ಇಂಥ ಸಮಯದಲ್ಲಿ ಹುಷಾರಾಗಿರಿ ಎಂಬ ಭಾವನೆ ಇರಬಹುದಲ್ಲವೇ?
ದಿನೇಶ್: ಅಪ್ಪಾ ಕೆಲಸ ಮಾಡಿ ಆದರೆ ಸುರಕ್ಷತೆ ವಹಿಸಿ ಎಂದು ಹೇಳುತ್ತಾರೆ. ನಮ್ಮ ಮಾನ್ಗಾಂ ವ್ ಘಟಕ ಕೂಡ ಇದೆ. ಐನಾಕ್ಸ್ ನಮಗೆ ಬಹಳ ಸಹಾಯ ಮಾಡುತ್ತದೆ.
ಮೋದಿ - ಒಳ್ಳೆಯದು. ದಿನೇಶ್ ಅವರೆ ನನಗೂ ಕೂಡಾ ಬಹಳ ಸಂತೋಷವಾಯಿತು. ನಿಮ್ಮ ಮಾತುಗಳನ್ನು ಕೇಳಿ, ಮತ್ತು ಕೊರೋನಾ ವಿರುದ್ಧದ ಈ ಹೋರಾಟದಲ್ಲಿ ಎಂತೆಂತಹ ಜನರು, ಯಾವ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ದೇಶದ ಜನತೆಗೆ ಕೂಡಾ ತಿಳಿದು ಬರುತ್ತದೆ. ಜನರ ಜೀವ ಉಳಿದರೆ ಸಾಕೆಂದು ನೀವು 8-9 ತಿಂಗಳುಗಳ ಕಾಲ ನಿಮ್ಮ ಮಕ್ಕಳನ್ನು ಭೇಟಿ ಮಾಡುತ್ತಿಲ್ಲ, ಕುಟುಂಬದವರನ್ನು ಭೇಟಿ ಮಾಡುತ್ತಿಲ್ಲ. ದೇಶದ ಜನತೆ ಈ ವಿಷಯ ಕೇಳಿದಾಗ, ಈ ಹೋರಾಟವನ್ನು ನಾವು ಗೆಲ್ಲುತ್ತೇವೆಂದು ದೇಶಕ್ಕೆ ಹೆಮ್ಮೆ ಉಂಟಾಗುತ್ತದೆ ಏಕೆಂದರೆ, ದಿನೇಶ್ ಉಪಾಧ್ಯಾಯರಂತಹ ಲಕ್ಷ ಲಕ್ಷ ಜನರು ಸಂಪೂರ್ಣವಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ.
ದಿನೇಶ್- ಸರ್, ನಾವೆಲ್ಲರೂ ಕೊರೋನಾವನ್ನು ಎಂದಾದರೊಂದು ದಿನ ಖಂಡಿತಾ ಸೋಲಿಸುತ್ತೇವೆ ಸರ್.
ಮೋದಿ - ಒಳ್ಳೆಯದು ದಿನೇಶ್ ಅವರೆ, ನಿಮ್ಮ ಈ ಭಾವನೆಯೇ ದೇಶದ ಶಕ್ತಿಯಾಗಿದೆ. ಬಹಳ ಧನ್ಯವಾದ ದಿನೇಶ್ ಅವರೆ, ನಿಮ್ಮ ಮಕ್ಕಳಿಗೆ ನನ್ನ ಆಶೀರ್ವಾದ ತಿಳಿಸಿ.
ದಿನೇಶ್- ಸರಿ ಸರ್. ನಮಸ್ಕಾರ
ಮೋದಿ -ಧನ್ಯವಾದ
ದಿನೇಶ್- ನಮಸ್ಕಾರ ನಮಸ್ಕಾರ
ಮೋದಿ -ಧನ್ಯವಾದ
ಸ್ನೇಹಿತರೆ, ದಿನೇಶ್ ಅವರು ಹೇಳಿದಂತೆ, ಒಬ್ಬ ಟ್ಯಾಂಕರ್ ಚಾಲಕ ಆಮ್ಲಜನಕ(tanker driver oxygen) ತೆಗೆದುಕೊಂಡು ಆಸ್ಪತ್ರೆ ತಲುಪಿದಾಗ ಅವರು ಪರಮಾತ್ಮ ಕಳುಹಿಸಿಕೊಟ್ಟ ದೂತನಂತೆಯೇ ಕಂಡುಬರುತ್ತಾರೆ. ಈ ಕೆಲಸ ಎಷ್ಟು ಜವಾಬ್ದಾರಿಯಿಂದ ಕೂಡಿರುತ್ತದೆ ಮತ್ತು ಇದರಲ್ಲಿ ಎಷ್ಟು ಮಾನಸಿಕ ಒತ್ತಡ ಕೂಡಾ ಇರುತ್ತದೆ ಎಂದು ನಾವು ಅರ್ಥ ಮಾಡಿಕೊಳ್ಳಬಲ್ಲೆವು.
ಸ್ನೇಹಿತರೆ, ಸವಾಲಿನ ಈ ಸಮಯದಲ್ಲಿ, ಆಮ್ಲಜನಕದ ರವಾನೆಯನ್ನು ಸುಲಭಗೊಳಿಸುವುದಕ್ಕಾಗಿ ಭಾರತೀಯ ರೈಲ್ವೇ ಕೂಡಾ ಮುಂದೆ ಬಂದಿದೆ. ಆಕ್ಸಿಜನ್ ಎಕ್ಸ್ ಪ್ರೆಸ್, ಆಕ್ಸಿಜನ್ ರೈಲ್ ಇವು ರಸ್ತೆಯ ಮೇಲೆ ಸಾಗುವ ಆಕ್ಸಿಜನ್ ಟ್ಯಾಂಕರ್ ಗಳಿಗಿಂತ ಅಧಿಕ ವೇಗದಲ್ಲಿ, ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕವನ್ನು ದೇಶದ ಮೂಲೆ ಮೂಲೆಗೆ ತಲುಪಿಸಿದೆ. ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ಅನ್ನು ಸಂಪೂರ್ಣವಾಗಿ ಮಹಿಳೆಯರು ಚಾಲನೆ ಮಾಡುತ್ತಿದ್ದಾರೆಂದು ಕೇಳಿ, ತಾಯಂದಿರಿಗೆ, ಸೋದರಿಯರಿಗೆ ಹೆಮ್ಮೆ ಎನಿಸುತ್ತದೆ. ದೇಶದ ಪ್ರತಿಯೊಬ್ಬ ಮಹಿಳೆಗೂ ಹಮ್ಮೆ ಎನಿಸುತ್ತದೆ. ಇಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯೆನಿಸುತ್ತದೆ. ನಾನು ಆಕ್ಸಿಜನ್ಎಬಕ್ಸ್ ಪ್ರೆಸ್ ನ ಓರ್ವ ಲೋಕೋ ಪೈಲಟ್ ಶಿರೀಷಾ ಗಜನಿ ಅವರನ್ನು ಮನ್ ಕಿ ಬಾತ್ ಗೆ ಆಹ್ವಾನಿಸಿದ್ದೇನೆ.
ಮೋದಿ - ಶಿರೀಷಾ ಅವರೆ ನಮಸ್ಕಾರ
ಶಿರೀಷಾ - ನಮಸ್ಕಾರ ಸರ್. ಹೇಗಿದ್ದೀರಿ?
ಮೋದಿ - ನಾನು ಚೆನ್ನಾಗಿದ್ದೇನೆ. ಶಿರೀಷಾ ಅವರೆ, ನೀವು ರೈಲ್ವೇ ಪೈಲಟ್ ಆಗಿ ಕೆಲಸ ಮಾಡುತ್ತಿದ್ದೀರೆಂದು ನಾನು ಕೇಳಿದ್ದೇನೆ ಮತ್ತು ನಿಮ್ಮ ಇಡೀ ಮಹಿಳಾ ತಂಡ ಈ ಆಕ್ಸಿಜನ್ ಎಕ್ಸ್ ಪ್ರೆಸ್ ಚಾಲನೆ ಮಾಡುತ್ತಿದೆಯೆಂದು ನನಗೆ ತಿಳಿಸಲಾಗಿದೆ. ಶಿರೀಷಾ ಅವರೆ ನೀವು ಬಹಳ ಉತ್ತಮ ಕೆಲಸ ಮಾಡುತ್ತಿರುವಿರಿ. ಕೊರೋನಾ ಕಾಲದಲ್ಲಿ ನಿಮ್ಮಂತಹ ಅನೇಕ ಮಹಿಳೆಯರು ಮುಂದೆ ಬಂದು ಕೊರೋನಾದೊಂದಿಗಿನ ಹೋರಾಟದಲ್ಲಿ ದೇಶಕ್ಕೆ ಶಕ್ತಿ ತುಂಬಿದ್ದೀರಿ. ನೀವು ಕೂಡಾ ನಾರಿ ಶಕ್ತಿಯ ಒಂದು ಬಹು ದೊಡ್ಡ ಉದಾಹರಣೆಯಾಗಿರುವಿರಿ. ಈ ಪ್ರೇರಣೆ ನಿಮಗೆ ದೊರೆಯುತ್ತಿರುವುದು ಎಲ್ಲಿಂದ ಎನ್ನುವುದನ್ನು ದೇಶ ತಿಳಿದುಕೊಳ್ಳಲು ಬಯಸುತ್ತದೆ, ನಾನು ತಿಳಿದುಕೊಳ್ಳಲು ಬಯಸುತ್ತೇನೆ.
ಶಿರೀಷಾ - ಸರ್, ನನಗೆ ಪ್ರೇರಣೆ ನನ್ನ ತಾಯಿ ತಂದೆಯರಿಂದ ದೊರೆಯುತ್ತದೆ. ನನ್ನ ತಂದೆ ಸರ್ಕಾರಿ ಉದ್ಯೋಗಿ ಸರ್. ವಾಸ್ತವದಲ್ಲಿ ನನಗೆ ಇಬ್ಬರು ಅಕ್ಕಂದಿರಿದ್ದಾರೆ ಸರ್. ನಾವು ಮೂವರು ಸದಸ್ಯರು, ಕೇವಲ ಮಹಿಳೆಯರು. ಆದರೆ ನನ್ನ ತಂದೆ ಕೆಲಸ ಮಾಡುವುದಕ್ಕೆ ಬಹಳ ಪ್ರೋತ್ಸಾಹ ನೀಡುತ್ತಾರೆ ಸರ್. ನನ್ನದೊಡ್ಡ ಅಕ್ಕ ಬ್ಯಾಂಕೊಂದರಲ್ಲಿ ಸರ್ಕಾರಿಉದ್ಯೋಗ ಮಾಡುತ್ತಿದ್ದಾಳೆ ಮತ್ತು ನಾನು ರೈಲ್ವೆಯಲ್ಲಿ ನಿಯೋಜನೆಗೊಂಡಿದ್ದೇನೆ. ನನ್ನ ತಾಯಿತಂದೆ ನನಗೆ ಪ್ರೋತ್ಸಾಹ ನೀಡುತ್ತಾರೆ. (Actually I am having two elder sister, sir. We are three members, ladies only but my father giving very encourage to work. My first sister doing government job in bank and I am settled in railway. My parents only encourage me.)
ಮೋದಿ - ಒಳ್ಳೆಯದು ಶಿರೀಷಾ ಅವರೆ, ನೀವು ಸಾಧಾರಣ ದಿನಗಳಲ್ಲಿ ಕೂಡಾ ರೈಲ್ವೇಗೆ ನಿಮ್ಮ ಸೇವೆ ಸಲ್ಲಿಸಿದ್ದೀರಿ. ಟ್ರೈನ್ ಅನ್ನು ಸಾಧಾರಣವಾಗಿ ಚಾಲನೆ ಮಾಡಿದ್ದೀರಿ ಆದರೆ, ಒಂದೆಡೆ ಆಮ್ಲಜನಕಕ್ಕೆ ಇಷ್ಟೊಂದು ಬೇಡಿಕೆ ಇರುವಾಗ, ಮತ್ತು ನೀವು ಆಮ್ಲಜನಕವನ್ನು ಕೊಂಡೊಯ್ಯುವಾಗ ಸ್ವಲ್ಪ ಜವಾಬ್ದಾರಿಯುತ ಕೆಲಸವಲ್ಲವೇ, ಸ್ವಲ್ಪ ಹೆಚ್ಚಿನ ಜವಾಬ್ದಾರಿ ಇರುತ್ತದೆ ಅಲ್ಲವೇ? ಸಾಮಾನ್ಯ ಸರಕುಗಳನ್ನು ಕೊಂಡೊಯ್ಯುವುದು ಬೇರೆ, ಆಮ್ಲಜನಕವಂತೂ ಬಹಳ ಸೂಕ್ಷ್ಮವೂ ಆಗಿರುತ್ತದೆ, ಇವೆಲ್ಲ ನಿಮ್ಮ ಅನುಭವಕ್ಕೆ ಬಂದಿವೆಯೇ?
ಶಿರೀಷಾ- ಈ ಕೆಲಸ ಮಾಡುವುದಕ್ಕೆ ನನಗೆ ಸಂತೋಷವೆನಿಸಿತು. ಆಮ್ಲಜನಕ ವಿಶೇಷ (Oxygen special) ನೀಡುವ ಸಮಯದಲ್ಲಿ ಎಲ್ಲಾ ವಿಷಯಗಳನ್ನೂ ಗಮನಿಸಲಾಯಿತು, ಸುರಕ್ಷತೆ, ರಚನೆ, ಎಲ್ಲಿಯಾದರೂ ಸೋರಿಕೆಯಿದೆಯೇ ಎಂದು ಪರೀಕ್ಷಿಸಿ ನೋಡಲಾಯಿತು. ನಂತರ, ಭಾರತೀಯ ರೈಲ್ವೇ ಕೂಡಾ ಬಹಳ ಬೆಂಬಲ ನೀಡುತ್ತದೆ ಸರ್. ಈ ಆಕ್ಸಿಜನ್ ಚಾಲನೆ ಮಾಡುವುದಕ್ಕೆ ನನಗೆ ಹಸಿರು ಮಾರ್ಗ(green path) ನೀಡಲಾಯಿತು. ಈ ರೈಲು ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್ ತಲುಪಿತು. ರೈಲ್ವೇ ಕೂಡಾ ಇಷ್ಟೊಂದು ಜವಾಬ್ದಾರಿ ತೆಗೆದುಕೊಂಡಿತು ಮತ್ತು ನಾನು ಕೂಡಾ ಜವಾಬ್ದಾರಿ ತೆಗೆದುಕೊಂಡೆ ಸರ್.
ಮೋದಿ - ವಾಹ್... ಒಳ್ಳೆಯದು ಶಿರೀಷಾ ಅವರೆ, ನಾನು ನಿಮ್ಮನ್ನು ಬಹಳ ಅಭಿನಂದಿಸುತ್ತೇನೆ ಮತ್ತು ಮೂರೂ ಹೆಣ್ಣು ಮಕ್ಕಳಿಗೆ ಇಷ್ಟೊಂದು ಪ್ರೇರಣೆ ನೀಡಿರುವ ಮತ್ತು ಅವರನ್ನು ಇಷ್ಟೊಂದು ಮುಂದೆ ತಂದಿರುವ ಈ ರೀತಿಯ ಪ್ರೋತ್ಸಾಹ ನೀಡಿರುವ ನಿಮ್ಮತಂದೆ- ತಾಯಿಗೆ ವಿಶೇಷವಾಗಿ ನನ್ನ ನಮನ ಸಲ್ಲಿಸುತ್ತೇನೆ. ಮತ್ತು ಇಂತಹ ತಾಯಿ ತಂದೆಗೆ ನಮಸ್ಕರಿಸುತ್ತೇನೆ ಮತ್ತು ಈ ರೀತಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಮತ್ತು ಉತ್ಸಾಹವನ್ನೂ ತೋರಿರುವ ಸೋದರಿಯರೆಲ್ಲರಿಗೂ ನಮಸ್ಕರಿಸುತ್ತೇನೆ. ಬಹಳ ಬಹಳ ಧನ್ಯವಾದ ಶಿರೀಷಾ ಅವರೆ.
ಶಿರೀಷಾ -ಧನ್ಯವಾದ ಸರ್. ಥ್ಯಾಂಕ್ಯೂ ಸರ್. ನನಗೆ ನಿಮ್ಮ ಆಶೀರ್ವಾದ ಬೇಕು ಸರ್.
ಮೋದಿ - ಪರಮಾತ್ಮನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ, ನಿಮ್ಮ ತಾಯಿತಂದೆಯ ಆಶೀರ್ವಾದವಿರಲಿ. ಧನ್ಯವಾದ.
ಶಿರೀಷಾ -ಧನ್ಯವಾದ ಸರ್.
ಸ್ನೇಹಿತರೆ, ನಾವು ಈಗಷ್ಟೇ ಶಿರೀಷಾ ಅವರ ಮಾತುಗಳನ್ನು ಕೇಳಿದೆವು. ಅವರ ಅನುಭವ ಪ್ರೇರಣೆಯನ್ನೂ ನೀಡುತ್ತದೆ, ಭಾವುಕರನ್ನಾಗಿ ಕೂಡಾ ಮಾಡುತ್ತದೆ. ವಾಸ್ತವದಲ್ಲಿ ಈ ಹೋರಾಟ ಎಷ್ಟು ದೊಡ್ಡದೆಂದರೆ, ಇದರಲ್ಲಿ ನಮ್ಮ ದೇಶವು ರೈಲ್ವೇಯಂತೆಯೇ, ಜಲ, ಭೂಮಿ, ಆಕಾಶ, ಈ ಮೂರೂ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿದೆ. ಒಂದೆಡೆ ಖಾಲಿ ಟ್ಯಾಂಕರ್ ಗಳನ್ನು ವಾಯುಪಡೆಯ ವಿಮಾನಗಳ ಮೂಲಕ ಆಮ್ಲಜನಕದ ಘಟಕಗಳವರೆಗೆ ತಲುಪಿಸುವ ಕೆಲಸ ನಡೆಯುತ್ತಿದೆ, ಮತ್ತೊಂದೆಡೆ ಹೊಸ ಆಮ್ಲಜನಕ ಘಟಕಗಳ ಸ್ಥಾಪನೆಯ ಕೆಲಸವನ್ನುಕೂಡಾ ಪೂರ್ಣಗೊಳಿಸಲಾಗುತ್ತಿದೆ. ಇದರೊಂದಿಗೆ, ವಿದೇಶಗಳಿಂದ ಆಮ್ಲಜನಕ, ಆಮ್ಲಜನಕ ಸಾಂದ್ರಕಗಳು (oxygen concentrators)ಮತ್ತು ಕ್ರಯೋಜೆನಿಕ್ ಟ್ಯಾಂಕರ್(cryogenic tankers) ಗಳನ್ನು ದೇಶಕ್ಕೆ ತರಲಾಗುತ್ತಿದೆ. ಆದ್ದರಿಂದ, ಇದರಲ್ಲಿ ನೌಕಾಪಡೆಯೂ ಸೇರಿದೆ, ಭೂ ಸೇನೆಯೂ ಸೇರಿದೆ ಮತ್ತು ಡಿಆರ್ಡಿಒ (DRDO) ದಂತಹ ನಮ್ಮ ಸಂಸ್ಥೆಗಳೂ ತೊಡಗಿಕೊಂಡಿವೆ. ಇದರಲ್ಲಿ ನಮ್ಮ ಅನೇಕ ವಿಜ್ಞಾನಿಗಳು, ಉದ್ಯಮದ ತಜ್ಞರು, ಮತ್ತು ತಾಂತ್ರಿಕ ಸಿಬ್ಬಂದಿ ಕೂಡಾ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಕೆಲಸಗಳನ್ನು ತಿಳಿದುಕೊಳ್ಳುವ, ಅರ್ಥ ಮಾಡಿಕೊಳ್ಳುವ ಜಿಜ್ಞಾಸೆ ದೇಶವಾಸಿಗಳೆಲ್ಲರ ಮನದಲ್ಲಿದೆ. ಆದ್ದರಿಂದ, ನಮ್ಮೊಂದಿಗೆ ನಮ್ಮ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ ಅವರು ಸೇರಲಿದ್ದಾರೆ.
ಮೋದಿ - ಪಟ್ನಾಯಕ್ ಅವರೆ, ಜೈ ಹಿಂದ್.
ಗ್ರೂಪ್ ಕ್ಯಾಪ್ಟನ್ :ಸರ್ ಜೈ ಹಿಂದ್. ಸರ್ ನಾನು ಗ್ರೂಪ್ ಕ್ಯಾಪ್ಟನ್ ಎ.ಕೆ. ಪಟ್ನಾಯಕ್. ವಾಯು ಸೇನೆ ಸ್ಟೇಷನ್ ಹಿಂಡನ್ ನಿಂದ ಮಾತನಾಡುತ್ತಿದ್ದೇನೆ.
ಮೋದಿ - ಪಟ್ನಾಯಕ್ ಅವರೆ, ಕೊರೋನಾದೊಂದಿಗಿನ ಹೋರಾಟದಲ್ಲಿ ನೀವು ಬಹು ದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದೀರಿ. ವಿಶ್ವದೆಲ್ಲೆಡೆ ಹೋಗಿ ಟ್ಯಾಂಕರ್ ತರುವುದು, ಟ್ಯಾಂಕರ್ ಇಲ್ಲಿಗೆ ತಲುಪಿಸುವುದು. ಓರ್ವ ಸೈನಿಕನಾಗಿ ಒಂದು ಭಿನ್ನ ರೀತಿಯ ಕೆಲಸವನ್ನು ನೀವು ಮಾಡಿರುವಿರಿ. ಕೊಲ್ಲು ಇಲ್ಲವೇ ಮಡಿ ಎಂದು ಓಡಬೇಕಾಗಿತ್ತು, ನೀವು ಇಂದು ಜೀವಗಳನ್ನು ಉಳಿಸಲು ಓಡುತ್ತಿರುವಿರಿ. ನಿಮಗೆ ಹೇಗನಿಸುತ್ತಿದೆ ಎಂದು ನಾನು ತಿಳಿಯಬಯಸುತ್ತೇನೆ.
ಗ್ರೂಪ್ ಕ್ಯಾಪ್ಟನ್- ಸರ್, ಈ ಸಂಕಷ್ಟದ ಸಮಯದಲ್ಲಿ ನಮ್ಮ ದೇಶವಾಸಿಗಳಿಗೆ ಸಹಾಯ ಮಾಡುತ್ತಿದ್ದೇನೆ ಇದು ನಮ್ಮ ಅತಿದೊಡ್ಡ ಸೌಭಾಗ್ಯವಾಗಿದೆ ಸರ್ ಮತ್ತು ನಮಗೆ ಯಾವ ಅಭಿಯಾನ ದೊರೆತಿದೆಯೋ ಅದನ್ನು ನಾವು ಉತ್ತಮವಾಗಿ ನಿಭಾಯಿಸುತ್ತಿದ್ದೇವೆ. ನಮ್ಮ ತರಬೇತಿ ಮತ್ತು ಬೆಂಬಲ ಸೇವೆಗಳು ನಮಗೆ ಸಂಪೂರ್ಣ ಸಹಾಯ ಮಾಡುತ್ತಿವೆ ಮತ್ತು ಅತ್ಯಂತ ಮುಖ್ಯವಾದ ವಿಷಯವೆಂದರೆ ಇದರಲ್ಲಿ ನಮಗೆ ದೊರೆತಿರುವ ವೃತ್ತಿಪರ ಸಂತೃಪ್ತಿ ಬಹಳ ಉನ್ನತ ಮಟ್ಟದ್ದಾಗಿದೆ ಮತ್ತು ಇದರಿಂದಾಗಿಯೇ ನಿರಂತರ ಕಾರ್ಯಾಚರಣೆ ಮಾಡಲು ನಮಗೆ ಸಾಧ್ಯವಾಗುತ್ತಿದೆ.
ಮೋದಿ - ನೀವು ಇಂದಿನ ದಿನಗಳಲ್ಲಿ ಏನೇನು ಪ್ರಯತ್ನ ಮಾಡುತ್ತಿರುವಿರೋ ಅದು ಕೂಡ ಅತ್ಯಂತ ಕಡಿಮೆ ಸಮಯದಲ್ಲಿ ಎಲ್ಲ ಕೆಲಸ ಮಾಡಬೇಕಾಗಿ ಬಂತು. ಇಂಥ ಸಮಯದಲ್ಲಿ ಹೇಗಿತ್ತು ಪರಿಸ್ಥಿತಿ
ಗ್ರೂಪ್ ಕ್ಯಾಪ್ಟನ್-ಸರ್, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಆಮ್ಲಜನಕದ ಟ್ಯಾಂಕರ್ಗಳನ್ನು ಮತ್ತು ದ್ರವ ರೂಪದ ಆಮ್ಲಜನಕದ ಕಂಟೈನರ್ ಗಳನ್ನು ಸ್ಥಳೀಯವಾಗಿ ಮತ್ತು ಅಂತಾರಾಷ್ಟ್ರೀಯ ಮೂಲಗಳಿಂದ ಸಂಗ್ರಹಿಸುತ್ತಿದ್ದೇವೆ. ಸುಮಾರು 16 ಸಾವಿರ ಸಾರ್ಟಿಸ್ ಗೂ ಹೆಚ್ಚು ಏರ್ ಫೋರ್ಸ್ ಸಾಗಣೆ ಮಾಡಿದೆ. ಇದಕ್ಕಾಗಿ 3 ಸಾವಿರಕ್ಕೂ ಹೆಚ್ಚು ಕಿ ಮೀ ಹಾರಾಟ ಮಾಡಲಾಗಿದೆ. ಸುಮಾರು 160 ಅಂತಾರಾಷ್ಟ್ರೀಯ ಮಿಶನ್ ಕೈಗೊಳ್ಳಲಾಗಿದೆ. ಹಿಂದೆ ಸ್ಥಳೀಯ ಆಮ್ಲಜನಕದ ಟ್ಯಾಂಕರ್ಗಆಳನ್ನು ತಲುಪಿಸಲು 2-3 ದಿನಗಳು ಬೇಕಾಗುತ್ತಿದ್ದರೆ ಈಗ 2-3 ಗಂಟೆಗಳಲ್ಲಿ ತಲುಪಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಿಶನ್ ನಲ್ಲಿಯೂ 24 ಗಂಟೆ ನಿರಂತರ ಕೆಲಸ ಮಾಡಿ ದೇಶಕ್ಕೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೆಚ್ಚೆಚ್ಚು ಆಮ್ಲಜನಕದ ಸಿಲಿಂಡರ್ ತಲುಪಿಸುವ ಕೆಲಸವನ್ನು ಏರ್ ಫೋರ್ಸ್ನಿಂ ದ ಮಾಡಲಾಗುತ್ತಿದೆ ಸರ್.
ಮೋದಿಯವರು: ಕ್ಯಾಪ್ಟನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮಗೆ ಎಲ್ಲೆಲ್ಲಿ ಓಡಾಡಬೇಕಾಯಿತು.
ಗ್ರೂಪ್ ಕ್ಯಾಪ್ಟನ್: ಸರ್, ಕಡಿಮೆ ಅವಧಿಯ ಸೂಚನೆ ಮೇರೆಗೆ ನಮಗೆ ಸಿಂಗಪೂರ್, ದುಬೈ, ಬೆಲ್ಜಿಯಂ, ಜರ್ಮನ್ ಮತ್ತು ಬ್ರಿಟನ್ ಈ ಎಲ್ಲ ದೇಶಗಳಿಂದ ಇಂಡಿಯನ್ ಏರ್ ಫೋರ್ಸ್ ನ ವಿವಿಧ ಫ್ಲೀಟ್ ಗಳು Iಐ-76, ಅ-17 ಮತ್ತು ಎಲ್ಲ ಇತರ ವಿಮಾನಗಳು ಅ-130 ಗಾಗಿ ಹಾರಾಟ ನಡೆಸಿದ್ದವು. ನಮ್ಮ ತರಬೇತಿ ಮತ್ತು ಹುಮ್ಮಸ್ಸಿನಿಂದಾಗಿಯೇ ನಾವು ಸಕಾಲಕ್ಕೆ ಈ ಮಿಶನ್ ಪೂರ್ಣಗೊಳಿಸಲು ಸಾಧ್ಯವಾಯಿತು ಸರ್.
ಮೋದಿ: ಈ ಬಾರಿ ಭೂ ಸೇನೆ, ವಾಯು ಸೇನೆ, ನೌಕಾಪಡೆಯ ಎಲ್ಲ ಸೈನಿಕರು ಈ ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತರಾಗಿದ್ದಾರೆ ಎಂದು ದೇಶ ಹೆಮ್ಮೆಪಡಲಿದೆ. ಕ್ಯಾಪ್ಟನ್ ನೀವು ಕೂಡ ಬಹಳ ದೊಡ್ಡ ಜವಾಬ್ದಾರಿ ನಿರ್ವಹಿಸಿದ್ದೀರಿ. ಹಾಗಾಗಿ ನಿಮಗು ಕೂಡಾ ನಾನು ಅಭಿನಂದಿಸುತ್ತೇನೆ.
ಕ್ಯಾಪ್ಟನ್: ಧನ್ಯವಾದಗಳು ಸರ್. ನಾವು ತನುಮನದಿಂದ ಸಂಪೂರ್ಣ ಪ್ರಯತ್ನ ಮಾಡುತ್ತಿದ್ದೇವೆ ಮತ್ತು ನನ್ನ ಮಗಳು ಅದಿತಿ ಕೂಡ ನನ್ನ ಜೊತೆಗಿದ್ದಾಳೆ ಸರ್.
ಮೋದಿ: ತುಂಬಾ ಒಳ್ಳೇದು!
ಅದಿತಿ: ನಮಸ್ತೆ ಮೋದಿಯವರೆ
ಮೋದಿ: ನಮಸ್ತೆ ಮಗು… ನಮಸ್ತೆ ಅದಿತಿ, ನೀವು ಎಷ್ಟು ವರ್ಷದವರು?
ಅದಿತಿ: ನಾನು 12 ವರ್ಷದವಳಾಗಿದ್ದೇನೆ. 8 ನೇ ತರಗತಿಯಲ್ಲಿ ಓದುತ್ತಿದ್ದೇನೆ.
ಮೋದಿ: ನಿಮ್ಮ ತಂದೆ ಹೊರಗಡೆ ಹೋದಾಗ ಸಮವಸ್ತ್ರದಲ್ಲಿರುತ್ತಾರೆಯೇ?
ಅದಿತಿ: ಹಾಂ! ಅವರ ಬಗ್ಗೆ ನನಗೆ ಬಹಳ ಹೆಮ್ಮೆಯೆನಿಸುತ್ತದೆ. ಅವರು ಇಷ್ಟೊಂದು ಮಹತ್ವಪೂರ್ಣ ಕೆಲಸ ಮಾಡುತ್ತಿರುವುದಕ್ಕೆ ಎಲ್ಲ ಕೊರೊನಾ ಪೀಡಿತರಿಗೆ ಸಹಾಯ ಮಾಡುತ್ತಿದ್ದಾರೆ, ಯಾವೆಲ್ಲ ದೇಶಗಳಿಂದ ಆಮ್ಲಜನಕದ ಟ್ಯಾಂಕರ್ ಗಳನ್ನು ತರುತ್ತಿದ್ದಾರೆ ಎಂಬುದಕ್ಕೆ ಬಹಳ ಹೆಮ್ಮೆಯೆನಿಸುತ್ತದೆ.
ಮೋದಿ: ಆದರೆ ಮಗಳು ಅಪ್ಪನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾಳಲ್ಲವೇ?
ಅದಿತಿ: ಹೌದು, ನಾನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ಈ ಮಧ್ಯೆ ಅವರು ಮನೆಯಲ್ಲಿ ಇರುವುದು ಕಡಿಮೆಯಾಗಿದೆ ಏಕೆಂದರೆ ಬಹಳ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ಮಾಡುತ್ತಿದ್ದಾರೆ ಮತ್ತು ಕೊರೊನಾ ಪೀಡಿತರಿಗೆ ಸಕಾಲಕ್ಕೆ ಆಮ್ಲಜನಕ ದೊರೆಯಲೆಂದು, ಅವರ ಪ್ರಾಣ ಕಾಪಾಡಲೆಂದು ಆಮ್ಲಜನಕದ ಕಂಟೈನರ್ಗಳನ್ನು, ಟ್ಯಾಂಕರ್ ಗಳನ್ನು ಅವುಗಳ ಉತ್ಪಾದನಾ ಘಟಕಗಳಿಗೆ ತಲುಪಿಸುತ್ತಿದ್ದಾರೆ.
ಮೋದಿ: ಹಾಗಾದರೆ ಆಮ್ಲಜನಕದಿಂದಾಗಿ ಜೀವ ಉಳಿಸುತ್ತಿರುವ ವಿಷಯ ಈಗ ಮನೆ ಮನೆಗೆ ತಿಳಿದ ವಿಷಯವಾಗಿದೆಯಲ್ಲವೇ ಮಗು…
ಅದಿತಿ: ಹಾಂ.
ಮೋದಿ: ನಿಮ್ಮ ಸ್ನೇಹಿತರು, ನಿನ್ನ ಸಹಪಾಠಿಗಳು ನಿಮ್ಮ ತಂದೆ ಆಮ್ಲಜನಕದ ಸರಬರಾಜಿನ ಸೇವೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ನಿಮ್ಮನ್ನು ಬಹಳ ಆದರದಿಂದ ನೋಡುತ್ತಾರೆ ಅಲ್ಲವೆ?
ಅದಿತಿ: ಹಾಂ, ನನ್ನ ಎಲ್ಲ ಸ್ನೇಹಿತರು ನಿಮ್ಮ ತಂದೆ ಇಷ್ಟೊಂದು ಮಹತ್ವದ ಕೆಲಸ ಮಾಡುತ್ತಿದ್ದಾರೆ ಮತ್ತು ನಿನಗೆ ಬಹಳ ಹೆಮ್ಮೆ ಎನ್ನಿಸಬಹುದಲ್ಲವೇ ಎಂದು ಹೇಳುತ್ತಾರೆ. ಆಗ ನನಗೆ ಬಹಳ ಹೆಮ್ಮೆಯೆನ್ನಿಸುತ್ತದೆ. ನನ್ನ ಸಂಪೂರ್ಣ ಕುಟುಂಬ, ನನ್ನ ಅಜ್ಜಿ ತಾತ, ಎಲ್ಲರೂ ನನ್ನ ತಂದೆ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ. ನನ್ನ ತಾಯಿ ಮತ್ತು ಆ ಎಲ್ಲ ವೈದ್ಯರು, ಅವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಂಪೂರ್ಣ ಆರ್ಮ್ ಫೋರ್ಸ್, ನನ್ನ ಅಪ್ಪನ ಸ್ಕಾಡ್ರನ್ ನ ಎಲ್ಲ ಅಂಕಲ್ ಗಳು ಮತ್ತು ಸೇನೆ ಎಲ್ಲರೂ ಬಹಳ ಕೆಲಸ ಮಾಡುತ್ತಿದ್ದಾರೆ ಮತ್ತು ಕೊರೊನಾ ವಿರುದ್ಧದ ಈ ಹೋರಾಟವನ್ನು ಖಂಡಿತ ಗೆಲ್ಲುತ್ತಾರೆ ಎಂದು ನನಗೆ ವಿಶ್ವಾಸವಿದೆ.
ಮೋದಿ: ಹೆಣ್ಣು ಮಕ್ಕಳು ಮಾತಾಡಿದರೆ ಅವಳ ನಾಲಿಗೆ ಮೇಲೆ ಸರಸ್ವತಿ ವಾಸವಿರುತ್ತಾಳೆ ಎಂದು ನಮ್ಮಲ್ಲಿ ಹೇಳಲಾಗುತ್ತದೆ. ಖಂಡಿತ ನಾವು ಗೆಲ್ಲುತ್ತೇವೆ ಎಂದು ಅದಿತಿ ಹೇಳುತ್ತಿರಬೇಕಾದರೆ ಖಂಡಿತ ಇದು ದೇವರ ವಾಣಿ ಎನ್ನಬಹುದಾಗಿದೆ. ಅದಿತಿ ನೀವು ಈಗ ಆನ್ ಲೈನ್ ನಲ್ಲಿ ಓದುತ್ತಿರಬಹುದಲ್ಲವೇ?
ಅದಿತಿ: ಹಾಂ, ಈಗ ಎಲ್ಲವೂ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ಈಗ ಮನೆಯಲ್ಲೂ ನಾವು ಎಲ್ಲ ಬಗೆಯ ಮುಂಜಾಗೃತೆ ವಹಿಸುತ್ತಿದ್ದೇವೆ. ಎಲ್ಲಿಯೇ ಹೊರಗಡೆ ಹೋಗಬೇಕಾದರೆ ಡಬಲ್ ಮಾಸ್ಕ್ ಧರಿಸಿ ಎಲ್ಲ ಬಗೆಯ ನೈರ್ಮಲ್ಯ ಕಾಪಾಡಿಕೊಳ್ಳುವತ್ತ ಗಮನಹರಿಸುತ್ತಿದ್ದೇವೆ.
ಮೋದಿ: ಅದಿತಿ ನಿಮ್ಮ ಹವ್ಯಾಸಗಳೇನು? ನಿಮಗೆ ಏನು ಇಷ್ಟ?
ಅದಿತಿ: ಈಜು ಮತ್ತು ಬಾಸ್ಕೆಟ್ ಬಾಲ್ ಆಡುವುದು ನನ್ನ ಹವ್ಯಾಸ ಆದರೆ ಈಗ ಕೊರೊನಾ ಸಮಯದಲ್ಲಿ ಅದು ಬಂದ್ ಆಗಿದೆ. ಬೇಕಿಂಗ್ ಮತ್ತು ಕುಕಿಂಗ್ ನನ್ನ ಆಸಕ್ತಿಯಾಗಿದೆ. ನಾನು ಬೇಕಿಂಗ್ ಮತ್ತು ಕುಕಿಂಗ್ ಮಾಡುತ್ತೇನೆ ಮತ್ತು ಅಪ್ಪ ಇಷ್ಟೆಲ್ಲ ಕೆಲಸ ಮಾಡಿ ಬಂದಾಗ ಅವರಿಗಾಗಿ ಕೇಕ್ ಮತ್ತು ಕುಕ್ಕೀಸ್ ತಯಾರಿಸುತ್ತೇನೆ.
ಮೋದಿ: ವಾವ್, ವ್ಹಾ.. ಒಳ್ಳೇದು ಅದಿತಿ, ಬಹಳ ದಿನಗಳ ನಂತರ ನಿಮಗೆ ಅಪ್ಪನ ಜೊತೆ ಸಮಯ ದೊರೆತಿದೆ. ಕ್ಯಾಪ್ಟನ್ ತುಂಬಾ ಸಂತೋಷವಾಯಿತು. ನಿಮಗೂ ಅನಂತ ಅಭಿನಂದನೆಗಳು. ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರೆ ನಮ್ಮ ಭೂ ಸೇನೆ, ವಾಯು ಸೇನೆ ಮತ್ತು ನೌಕಾಪಡೆಯ ಸಮಸ್ತ ಯೋಧರಿಗೂ ಸಲ್ಯೂಟ್ ಮಾಡುತ್ತೇನೆ. ಧನ್ಯವಾದ ಸೋದರ.
ಕ್ಯಾಪ್ಟನ್: ಧನ್ಯವಾದಗಳು ಸರ್
ಸ್ನೇಹಿತರೆ, ನಮ್ಮ ಯೋಧರು ಮಾಡಿದ ಕೆಲಸಕ್ಕೆ ದೇಶವೇ ನಮಿಸುತ್ತದೆ. ಇದೇ ರೀತಿ ಲಕ್ಷಾಂತರ ಜನರು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಅವರು ಮಾಡುತ್ತಿರುವ ಕೆಲಸ ಅವರ ದೈನಂದಿನ ಕೆಲಸದ ಭಾಗವಲ್ಲ. ಇಂಥ ವಿಪತ್ತನ್ನು ಜಗತ್ತು 100 ವರ್ಷಗಳ ನಂತರ ಎದುರಿಸುತ್ತಿದೆ. ಒಂದು ಶತಮಾನದ ನಂತರ ಇಂಥ ದೊಡ್ಡ ಸಂಕಷ್ಟ ಬಂದಿದೆ, ಹಾಗಾಗಿ ಇಂಥ ಕೆಲಸದ ಅನುಭವ ಯಾರ ಬಳಿಯೂ ಇರಲಿಲ್ಲ.
ಇದರ ಹಿಂದೆ ದೇಶಸೇವೆಯ ಛಲವಿದೆ ಮತ್ತು ಒಂದು ಸಂಕಲ್ಪಶಕ್ತಿಯಿದೆ. ಇದರಿಂದಲೇ ಹಿಂದೆಂದೂ ಆಗದ ಕೆಲಸವನ್ನು ದೇಶ ಮಾಡಿದೆ. ನೀವು ಅದನ್ನು ಅಂದಾಜಿಸಬಹುದು. ಸಾಮಾನ್ಯವಾಗಿ ನಮ್ಮ ಬಳಿ ದಿನಕ್ಕೆ 900 ಮೆಟ್ರಿಕ್ ಟನ್ ದ್ರಗವರೂಪದ ವೈದ್ಯಕೀಯ ಆಮ್ಲಜನಕದ ಉತ್ಪತ್ತಿಯಾಗುತ್ತಿತ್ತು. ಈಗ ಅದು ಶೇ 10 ಕ್ಕಿಂತಲೂ ಹೆಚ್ಚಾಗಿ ಪ್ರತಿದಿನಕ್ಕೆ 9500 ಮೆಟ್ರಿಕ್ ಟನ್ ನಷ್ಟು ಉತ್ಪಾದನೆಯಾಗುತ್ತಿದೆ. ಈ ಆಮ್ಲಜನಕವನ್ನು ನಮ್ಮ ಯೋಧರು ದೇಶದ ದೂರದ ಪ್ರದೇಶಗಳಿಗೆ ತಲುಪಿಸುತ್ತಿದ್ದಾರೆ.
ನನ್ನ ಪ್ರಿಯ ದೇಶಬಾಂಧವರೆ, ಆಮ್ಲಜನಕ ತಲುಪಿಸುವಲ್ಲಿ ದೇಶದಲ್ಲಿ ಎಷ್ಟೆಲ್ಲ ಪ್ರಯತ್ನಗಳು ನಡೆಯುತ್ತಿವೆ. ಎಷ್ಟೊಂದು ಜನರು ಕೈಜೋಡಿಸುತ್ತಿದ್ದಾರೆ, ನಾಗರಿಕನ ಮಟ್ಟದಲ್ಲಿ ಈ ಎಲ್ಲ ಕೆಲಸಗಳು ಪ್ರೇರಣಾದಾಯಕವಾಗಿವೆ. ಒಂದು ತಂಡದ ರೂಪದಲ್ಲಿ ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ನನಗೆ ಬೆಂಗಳೂರಿನ ಉರ್ಮಿಳಾ ಅವರ ಪತಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದಾರೆ ಮತ್ತು ಅವರು ಇಷ್ಟೊಂದು ಸವಾಲುಗಳ ಮಧ್ಯೆ ಅವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ತಿಳಿಸುತ್ತಾರೆ.
ಸ್ನೇಹಿತರೆ, ಕೊರೊನಾದ ಆರಂಭದಲ್ಲಿ ದೇಶದಲ್ಲಿ ಒಂದೇ ಪರೀಕ್ಷಾ ಪ್ರಯೋಗಾಲಯವಿತ್ತು. ಆದರೆ ಇಂದು ಎರಡೂವರೆ ಸಾವಿರಕ್ಕಿಂತ ಹೆಚ್ಚು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ದಿನಕ್ಕೆ ಕೇವಲ 100 ಪರೀಕ್ಷೆಗಳು ನಡೆಯುತ್ತಿದ್ದವು ಇಂದು ದಿನಕ್ಕೆ 20 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳು ನಡೆಯುತ್ತಿವೆ. ಇಲ್ಲಿವರೆಗೆ ದೇಶದಲ್ಲಿ 33 ಕೋಟಿಗೂ ಹೆಚ್ಚು ಮಾದರಿ ಪರೀಕ್ಷೆ ನಡೆಸಲಾಗಿದೆ. ಇಂಥ ಸ್ನೇಹಿತರಿಂದಲೇ ಇಷ್ಟೊಂದು ಅಗಾಧ ಕೆಲಸ ಸಾಧ್ಯವಾಗುತ್ತಿದೆ. ಮುಂಚೂಣಿ ಕಾರ್ಯಕರ್ತರು ಮಾದರಿ ಸಂಗ್ರಹದ ಕೆಲಸದಲ್ಲಿ ತೊಡಗಿದ್ದಾರೆ. ಸೋಂಕಿತರ ಮಧ್ಯೆ ಹೋಗುವುದು, ಅವರ ಮಾದರಿ ಸಂಗ್ರಹಿಸುವುದು ಎಂಥ ದೊಡ್ಡ ಸೇವೆ ಅಲ್ಲವೆ. ತಮ್ಮ ಸುರಕ್ಷತೆಗಾಗಿ ಈ ಸ್ನೇಹಿತರು ಇಂಥ ಬಿಸಿಲಿನ ತಾಪದಲ್ಲಿಯೂ ನಿರಂತರವಾಗಿ ಪಿಪಿಇ ಕಿಟ್ ಧರಿಸಬೇಕಾಗಿರುತ್ತದೆ. ತದನಂತರ ಮಾದರಿ ಪ್ರಯೋಗಾಲಯಕ್ಕೆ ತಲುಪುತ್ತದೆ. ಆದ್ದರಿಂದಲೇ ನಾನು ನಿಮ್ಮ ಸಲಹೆ ಸೂಚನೆಗಳನ್ನು ಓದುವಾಗ ಈ ಸ್ನೇಹಿತರ ಪ್ರಸ್ತಾಪ ಮಾಡಬೇಕೆಂದು ನಿರ್ಧರಿಸಿದೆ. ಇವರ ಅನುಭವದಿಂದ ನಮಗೂ ಬಹಳಷ್ಟು ಕಲಿಯಲು ಸಿಗುತ್ತದೆ. ಹಾಗಾದರೆ ಬನ್ನಿ ದೆಹಲಿಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿರುವ ನಮ್ಮ ಸ್ನೇಹಿತ ಪ್ರಕಾಶ್ ಕಾಂಡ್ಪಾಈಲ್ ಅವರೊಂದಿಗೆ ಮಾತನಾಡೋಣ.
ಮೋದಿ - ಪ್ರಕಾಶ್ಅವರೇ ನಮಸ್ಕಾರ
ಪ್ರಕಾಶ್- ಗೌರವಾದರಣೀಯ ಪ್ರಧಾನಮಂತ್ರಿಯವರೇ ನಮಸ್ಕಾರ
ಮೋದಿ - ಪ್ರಕಾಶ್ಅವರೆ, ಎಲ್ಲಕ್ಕಿಂತ ಮೊದಲು ನೀವು ಮನ್ ಕಿ ಬಾತ್ ನ ನಮ್ಮ ಎಲ್ಲಾ ಶ್ರೋತೃಗಳಿಗೆ ನಿಮ್ಮ ಬಗ್ಗೆ ತಿಳಿಸಿಕೊಡಿ. ನೀವು ಎಷ್ಟು ಕಾಲದಿಂದ ಈ ಕೆಲಸ ಮಾಡುತ್ತಿರುವಿರಿ ಮತ್ತು ಕೊರೋನಾದ ಸಮಯದಲ್ಲಿ ನಿಮ್ಮ ಅನುಭವ ಹೇಗಿದೆ, ಏಕೆಂದರೆ ದೇಶದ ಇಂತಹ ಜನರಿಗೆ ಈ ರೀತಿಯಲ್ಲಿ ಇದು ಟಿವಿಯಲ್ಲಿ ಕಾಣಿಸುವುದಿಲ್ಲ ಅಥವಾ ದಿನಪತ್ರಿಕೆಗಳಲ್ಲಿ ಕಂಡುಬರುವುದಿಲ್ಲ. ಆದರೂ ಕೂಡಾ ಓರ್ವ ಋಷಿಯ ರೀತಿಯಲ್ಲಿ ಲ್ಯಾಬ್ ನಲ್ಲಿದ್ದು ಕೊಂಡು ಕೆಲಸ ಮಾಡುತ್ತಿರುವಿರಿ. ನೀವು ಈ ಕುರಿತು ಹೇಳಿದಾಗ, ದೇಶದಲ್ಲಿ ಯಾವ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎನ್ನುವ ಕುರಿತು ದೇಶವಾಸಿಗಳಿಗೆ ತಿಳಿದುಬರುತ್ತದೆ.
ಪ್ರಕಾಶ್- ನಾನು ದೆಹಲಿ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ Institute of Liver and Biliary Sciences ಹೆಸರಿನ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಆರೋಗ್ಯ-ಕ್ಷೇತ್ರದ ಅನುಭವ 22 ವರ್ಷಗಳದ್ದು. ಐಎಲ್ ಬಿ ಎಸ್ ಗಿಂತ ತ ಮೊದಲು ಕೂಡಾ ನಾನು ದೆಹಲಿಯ ಅಪೋಲೋ ಆಸ್ಪತ್ರೆ, ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ರೋಟರ್ ಬ್ಲಡ್ ಬ್ಯಾಂಕ್ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಸರ್, ನಾನು ಎಲ್ಲಾ ಜಾಗದಲ್ಲೂ ರಕ್ತ-ಕೋಶ ವಿಭಾಗದಲ್ಲಿ ನನ್ನ ಸೇವೆ ಸಲ್ಲಿಸಿದ್ದೇನೆ, ಆದರೆ ಕಳೆದ ವರ್ಷ 2020 ರ ಏಪ್ರಿಲ್ 1 ರಿಂದ ನಾನು ILBS Virology Department ಆಧರಿತ Covid testing lab ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಸ್ಸಂದೇಹವಾಗಿ, ಕೋವಿಡ್ ಮಹಾಮಾರಿಯಿಂದಾಗಿ ಆರೋಗ್ಯ ಮತ್ತು ಆರೋಗ್ಯ ಸಂಬಂಧಿತ ಎಲ್ಲಾ ಸಾಧನ- ಸಂಪನ್ಮೂಲಗಳ ಮೇಲೆ ಅತ್ಯಧಿಕ ಒತ್ತಡ ಬಿತ್ತು, ಆದರೆ ಈ ಸಂಘರ್ಷದ ಅವಧಿಯನ್ನು ನಾನು ನಿಜವಾದ ಅರ್ಥದಲ್ಲಿ ಒಂದು ಅವಕಾಶವೆಂದು ಭಾವಿಸುತ್ತೇನೆ. ರಾಷ್ಟ್ರ, ಮಾನವೀಯತೆ, ಸಮಾಜ ನಮ್ಮಿಂದ ಅಧಿಕ ಜವಾಬ್ದಾರಿ, ಸಹಯೋಗ, ನಮ್ಮಿಂದ ಹೆಚ್ಚು ಸಾಮಥ್ರ್ಯ ನಮ್ಮಿಂದ ಹೆಚ್ಚು ದಕ್ಷತೆಯ ಪ್ರದರ್ಶನ ನಿರೀಕ್ಷಿಸುತ್ತದೆ ಮತ್ತು ಆಶಿಸುತ್ತದೆ. ಅಲ್ಲದೇ ಸರ್, ನಾವು ನಮ್ಮದೇಶದ, ಮಾನವೀಯತೆಯ, ಸಮಾಜದ ಅಪೇಕ್ಷೆ ಮತ್ತು ನಿರೀಕ್ಷೆಗೆ ಅನುಗುಣವಾಗಿ ನಮ್ಮ ಮಟ್ಟದಲ್ಲಿ ಒಂದು ಹನಿಯಷ್ಟಾದರೂ ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ, ನನಸಾಗಿಸಿದಾಗ, ಒಂದು ಹೆಮ್ಮೆಯ ಭಾವನೆ ಮೂಡುತ್ತದೆ. ನಮ್ಮ ಕುಟುಂಬದವರು ಕೂಡಾ ಭಯಭೀತರಾಗಿದ್ದಾಗ ಮತ್ತು ಅವರಿಗೆ ಸ್ವಲ್ಪ ಅಂಜಿಕೆಯುಂಟಾದಾಗ, ಅಂತಹ ಸಂದರ್ಭದಲ್ಲಿ, ಕುಟುಂಬದಿಂದ ದೂರವಾಗಿ ಗಡಿಗಳಲ್ಲಿ ವಿಷಮ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ದೇಶದರಕ್ಷಣೆ ಮಾಡುತ್ತಿರುವ ನಮ್ಮದೇಶದ ಸೈನಿಕರನ್ನು ನೆನಪಿಸಿಕೊಳ್ಳುತ್ತೇನೆ. ಅವರಿಗೆ ಹೋಲಿಸಿದಲ್ಲಿ ನಮಗಿರುವ ಅಪಾಯ ಕಡಿಮೆ, ಬಹಳವೇ ಕಡಿಮೆ. ಅವರು ಕೂಡಾ ಈ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಒಂದು ರೀತಿಯಲ್ಲಿ ನನ್ನ ಕೆಲಸದಲ್ಲಿ ಅವರು ಕೂಡಾ ಸಹಕಾರ ನೀಡುತ್ತಾರೆ ಮತ್ತು ಈ ಆಪತ್ತಿನ ಸಮಯದಲ್ಲಿ ಸಮಾನರೂಪದಲ್ಲಿ ಅವರಿಂದ ಸಾಧ್ಯವಾಗುವಷ್ಟು ಸಹಕಾರವನ್ನು ಅವರು ನಿಭಾಯಿಸುತ್ತಾರೆ.
ಮೋದಿ - ಪ್ರಕಾಶ್ ಅವರೇ, ಒಂದೆಡೆ ಸರ್ಕಾರ ಎಲ್ಲರಿಗೂ ಹೇಳುತ್ತಿದೆ ಅಂತರ ಕಾಯ್ದುಕೊಳ್ಳಿ, ಅಂತರ ಕಾಯ್ದುಕೊಳ್ಳಿ, ಕೊರೋನಾದಲ್ಲಿ ಪರಸ್ಪರರಿಂದ ದೂರವಿರಿ ಎಂದು. ಮತ್ತು ನೀವಂತೂ ಮುಂದೆ ನಿಂತು, ಕೊರೋನಾದ ಮಾರಕಗಳ ನಡುವೆಯೇ ಇರಬೇಕಾಗುತ್ತದೆ, ಅವುಗಳ ಮುಂದಿನಿಂದಲೇ ಹಾದು ಹೋಗಬೇಕಾಗುತ್ತದೆ. ಹಾಗಿರುವಾಗ, ಇದು ಇದೊಂದು ನಿಮ್ಮನ್ನು ನೀವೇ ಜೀವನದ ಸಂಕಷ್ಟಕ್ಕೆ ದೂಡಿಕೊಳ್ಳುವಂತಹ ವಿಷಯವಾಗಿರುತ್ತದೆ, ಹೀಗಾಗಿ ಕುಟುಂಬದವರಿಗೆ ಚಿಂತೆಯಾಗುವುದು ಸಹಜವೇ ಆಗಿದೆ. ಆದರೂ ಸಹ, ಈ lab technician ನ ಕೆಲಸ ಪ್ರಮುಖ ಕೆಲಸಗಳಲ್ಲಿ ಒಂದಾಗಿದೆ. ಮತ್ತು ಇಂತಹ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಎರಡನೆಯದಾಗಿದೆ ಕೆಲಸದ ಗಂಟೆಗಳು ಕೂಡಾ ಹೆಚ್ಚಾಗಿರಬಹುದಲ್ಲವೇ? ರಾತ್ರಿಗಳನ್ನು ಪ್ರಯೋಗಾಲಯದಲ್ಲೇ ಕಳೆಯಬೇಕಾಗುತ್ತದಲ್ಲವೇ? ಏಕೆಂದರೆ ಇಷ್ಟೊಂದು ಕೋಟಿ ಜನರ ಟೆಸ್ಟಿಂಗ್ ನಡೆಯುತ್ತಿರುವಾಗ ಕೆಲಸದ ಹೊರೆ ಕೂಡಾ ಹೆಚ್ಚಾಗಿರಬಹುದಲ್ಲವೇ? ಆದರೆ ನಿಮ್ಮ ಸುರಕ್ಷತೆಗಾಗಿ ಕೂಡಾ ನೀವು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೀರೋ ಅಥವಾ ತೆಗೆದುಕೊಳ್ಳುವುದಿಲ್ಲವೋ?
ಪ್ರಕಾಶ್-ಖಂಡಿತವಾಗಿಯೂ ತೆಗೆದುಕೊಳ್ಳುತ್ತೇವೆ ಸರ್. ನಮ್ಮ ILBS ನಲ್ಲಿರುವ ಪ್ರಯೋಗಾಲಯ, ಡಬ್ಲ್ಯು ಹೆಚ್ ಓ (WHO) ನಿಂದ ಮಾನ್ಯತೆ ಪಡೆದುಕೊಂಡಿದೆ. ಆದ್ದರಿಂದಎಲ್ಲಾ ಶಿಷ್ಟಾಚಾರಗಳು ಅಂತರರಾಷ್ಟ್ರೀಯ ಪ್ರಮಾಣದ್ದಾಗಿವೆ, ನಾವು ಲ್ಯಾಬ್ ನಲ್ಲಿ ಮೂರು-ಸ್ತರದ, ನಮ್ಮ ಉಡುಪನ್ನು ಧರಿಸಿಕೊಂಡು ನಮ್ಮ ಕೆಲಸ ಮಾಡುತ್ತೇವೆ. ಮತ್ತು ಅದಕ್ಕೆ ಪೂರ್ಣ discarding, labelling ಮತ್ತು testing ಸಂಬಂಧಿತ ಪೂರ್ಣ ಶಿಷ್ಟಾಚಾರವಿದ್ದು, ಆ ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ಸರ್ ಪರಮಾತ್ಮನ ಅನುಗ್ರಹದಿಂದ ನನ್ನ ಕುಟುಂಬ ಮತ್ತು ನನ್ನ ಪರಿಚಯಸ್ಥರಲ್ಲಿ ಹೆಚ್ಚಿನ ಮಂದಿ ಇದುವರೆಗೂ ಈ ಸಾಂಕ್ರಾಮಿಕಕ್ಕೆ ತುತ್ತಾಗಿಲ್ಲ. ಒಂದು ವಿಷಯವೆಂದರೆ ನೀವು ಮುನ್ನೆಚ್ಚರಿಕೆ ವಹಿಸಿದಲ್ಲಿ, ಮತ್ತು ಸಹನೆಯಿಂದ ಇದ್ದಲ್ಲಿ, ನೀವು ಇದರಿಂದ ಸ್ವಲ್ಪಮಟ್ಟಿಗೆ ತಪ್ಪಿಸಿಕೊಳ್ಳಬಹುದು.
ಮೋದಿ - ಪ್ರಕಾಶ್ ಅವರೆ, ನಿಮ್ಮಂತಹ ಸಾವಿರಾರು ಜನರು ಕಳೆದ ಒಂದು ವರ್ಷದಿಂದ ಲ್ಯಾಬ್ ನಲ್ಲಿ ಕುಳಿತಿದ್ದಾರೆ ಮತ್ತು ಇಷ್ಟೊಂದು ಶ್ರಮಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ದೇಶ ಇದನ್ನು ಅರ್ಥ ಮಾಡಿಕೊಳ್ಳುತ್ತಿದೆ. ಆದರೆ ಪ್ರಕಾಶ್ ಅವರೆ, ನಾನು ನಿಮ್ಮ ಮೂಲಕ ನಿಮ್ಮ ಕಾರ್ಯಕ್ಷೇತ್ರದ ಎಲ್ಲಾ ಸಹೋದ್ಯೋಗಿಗಳಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುತ್ತಿದ್ದೇನೆ. ದೇಶವಾಸಿಗಳ ಪರವಾಗಿ ಧನ್ಯವಾದ ಹೇಳುತ್ತಿದ್ದೇನೆ ಮತ್ತು ನೀವು ಆರೋಗ್ಯದಿಂದಿರಿ, ನಿಮ್ಮ ಕುಟುಂಬ ಆರೋಗ್ಯದಿಂದಿರಲಿ. ನನ್ನ ಅನೇಕಾನೇಕ ಶುಭಾಶಯಗಳು.
ಪ್ರಕಾಶ್-ಧನ್ಯವಾದ ಪ್ರಧಾನ ಮಂತ್ರಿಗಳೇ. ನನಗೆ ಈ ಅವಕಾಶ ನೀಡಿದ್ದಕ್ಕಾಗಿ ನಾನು ನಿಮಗೆ ಬಹಳ ಕೃತಜ್ಞನಾಗಿದ್ದೇನೆ.
ಮೋದಿ -ಧನ್ಯವಾದ ಸೋದರಾ.
ಸ್ನೇಹಿತರೆ, ಒಂದು ರೀತಿಯಲ್ಲಿ ನಾನು ಸೋದರ ಪ್ರಕಾಶ್ ಅವರೊಂದಿಗೆ ಮಾತನಾಡಿದೆನಾದರೂ, ಅವರ ಮಾತಿನಲ್ಲಿ ಸಾವಿರಾರು Lab technicians ಗಳ ಸೇವೆಯ ಪರಿಮಳ ನಮ್ಮನ್ನು ತಲಪುತ್ತಿದೆ. ಈ ಮಾತುಗಳಲ್ಲಿ ಕಂಡುಬರುತ್ತಿರುವ ಸಾವಿರಾರು- ಲಕ್ಷಾಂತರ ಜನರ ಸೇವಾಭಾವನೆಯು ನಮ್ಮೆಲ್ಲರಿಗೂ ನಮ್ಮ ಜವಾಬ್ದಾರಿಯನ್ನು ನೆನಪಿಸುತ್ತದೆ. ಎಷ್ಟೊಂದು ಶ್ರಮ ಮತ್ತು ಸಮರ್ಪಣಾ ಭಾವದಿಂದ ಸೋದರ ಪ್ರಕಾಶ್ ನಂತಹ ನಮ್ಮ ಸ್ನೇಹಿತರು ಕೆಲಸ ಮಾಡುತ್ತಿದ್ದಾರೋ, ಅಷ್ಟೇ ನಿಷ್ಠೆಯಿಂದ ಅವರ ಸಹಕಾರವು ಕೊರೋನಾ ಸೋಲಿಸಲು ನಮಗೆ ಬಹಳ ಸಹಾಯ ಮಾಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಈಗಷ್ಟೇ ನಮ್ಮ `Corona Warriors' ಬಗ್ಗೆ ಚರ್ಚಿಸುತ್ತಿದ್ದೆವು. ಕಳೆದ ಒಂದೂವರೆ ವರ್ಷದಲ್ಲಿ ನಾವು ಇವರುಗಳ ಅನೇಕ ಸಮರ್ಪಣೆ ಮತ್ತು ಪರಿಶ್ರಮವನ್ನು ನೋಡಿದ್ದೇವೆ. ಆದರೆ ಈ ಹೋರಾಟದಲ್ಲಿದೇಶದ ಅನೇಕ ಕ್ಷೇತ್ರಗಳ ಅನೇಕ Warriors ಗಳ ಪಾತ್ರ ಕೂಡಾ ಬಹಳ ದೊಡ್ಡದಿದೆ. ಯೋಚಿಸಿ ನೋಡಿ, ನಮ್ಮ ದೇಶದ ಮೇಲೆ ಇಷ್ಟು ದೊಡ್ಡ ಸಂಕಟ ಬಂದೊದಗಿದೆ, ಇದರ ಪರಿಣಾಮ ದೇಶದ ಪ್ರತಿಯೊಂದು ವ್ಯವಸ್ಥೆಯ ಮೇಲೂ ಉಂಟಾಗಿದೆ. ಕೃಷಿ-ವ್ಯವಸ್ಥೆಯು ಈ ದಾಳಿಯಿಂದ ಸಾಕಷ್ಟು ಪ್ರಮಾಣದಲ್ಲಿ ತನ್ನನ್ನು ತಾನು ರಕ್ಷಿಸಿಕೊಂಡಿದೆ. ಕೇವಲ ಸುರಕ್ಷಿತವಾಗಿ ಮಾತ್ರವಲ್ಲ, ಪ್ರಗತಿಯನ್ನು ಕೂಡಾ ಸಾಧಿಸಿದೆ, ಮುಂದೆ ಸಾಗಿದೆ ಕೂಡಾ. ಈ ಮಹಾಮಾರಿಯ ಕಾಲದಲ್ಲಿ ಕೂಡಾ ನಮ್ಮ ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆಂದು ನಿಮಗೆ ಗೊತ್ತೇ? ರೈತರು ದಾಖಲೆಯ ಉತ್ಪಾದನೆ ಮಾಡಿದ್ದಾರೆ, ಹೀಗಾಗಿ ದೇಶ ಈ ಬಾರಿ ದಾಖಲೆಯ ಖರೀದಿ ಕೂಡಾ ಮಾಡಿದೆ. ಈ ಬಾರಿ ಅನೇಕ ಪ್ರದೇಶಗಳಲ್ಲಂತೂ ಸಾಸಿವೆಗಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಗಿಂತಲೂ ಹೆಚ್ಚಿನ ಬೆಲೆ ದೊರೆತಿದೆ. ದಾಖಲೆಯ ಆಹಾರ ಧಾನ್ಯಗಳ ಉತ್ಪಾದನೆ ಕಾರಣದಿಂದಾಗಿಯೇ ನಮ್ಮದೇಶ ಪ್ರತಿಯೊಬ್ಬ ದೇಶವಾಸಿಗೂ ಬೆಂಬಲ ನೀಡಲು ಸಾಧ್ಯವಾಗಿದೆ. ಇಂದು ಈ ಬಿಕ್ಕಟ್ಟಿನ ಸಮಯದಲ್ಲಿ 80 ಕೋಟಿ ಬಡವರಿಗೆ ಉಚಿತ ಪಡಿತರ ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಬಡವನ ಮನೆಯಲ್ಲಿ ಒಲೆ ಹಚ್ಚದ ದಿನ ಎಂದಿಗೂ ಬಾರದಂತೆ ಮಾಡಲಾಗುತ್ತಿದೆ.
ಸ್ನೇಹಿತರೆ, ಇಂದು ನಮ್ಮ ದೇಶದ ರೈತರು, ಅನೇಕ ಕ್ಷೇತ್ರಗಳಲ್ಲಿ ಹೊಸ ವ್ಯವಸ್ಥೆಗಳ ಪ್ರಯೋಜನ ಪಡೆದು ಅದ್ಭುತಗಳನ್ನು ಮಾಡಿ ತೋರಿಸುತ್ತಿದ್ದಾರೆ. ಉದಾಹರಣೆಗೆ ಅಗರ್ತಲಾದ ರೈತರನ್ನೇ ನೋಡಿ! ಈ ರೈತರು ಬಹಳ ಉತ್ತಮವಾದ ಹಲಸಿನ ಹಣ್ಣು ಬೆಳೆಯುತ್ತಾರೆ. ಇದರ ಬೇಡಿಕೆ ದೇಶ ವಿದೇಶಗಳಲ್ಲೂ ಇರಬಹುದು, ಆದ್ದರಿಂದ ಈ ಬಾರಿ ಅಗರ್ತಲಾದ ರೈತರು ಹಲಸಿನ ಹಣ್ಣನ್ನು ರೈಲಿನ ಮೂಲಕ ಗುವಾಹಟಿವರೆಗೂ ತಂದರು. ಗುವಾಹಟಿಯಿಂದ ಈ ಹಲಸನ್ನು ಲಂಡನ್ ಗೆ ಕಳುಹಿಸುತ್ತಿದ್ದಾರೆ. ಹಾಗೆಯೇ ಬಿಹಾರದ `ಶಾಹಿ ಲೀಚಿ' ಹೆಸರನ್ನೂ ಕೇಳಿರಬಹುದು. ಇದರ ಗುರುತು ಬಲಿಷ್ಟವಾಗಿರಬೇಕೆಂದು ಮತ್ತು ರೈತರಿಗೆ ಹೆಚ್ಚು ಲಾಭದೊರೆಯಬೇಕೆಂದು, 2018 ರಲ್ಲಿ ಸರ್ಕಾರವು ಶಾಹಿ ಲೀಚಿಗೆ GI TAG ನೀಡಿತ್ತು. ಈ ಬಾರಿ ಬಿಹಾರದ ಈ ಶಾಹಿ ಲಿಚಿಯನ್ನು ಕೂಡಾ ವಿಮಾನದಲ್ಲಿ ಲಂಡನ್ಗೆ ಕಳುಹಿಸಿಕೊಡಲಾಗಿದೆ. ಪೂರ್ವದಿಂದ ಪಶ್ಚಿಮ, ಉತ್ತರದಿಂದ ದಕ್ಷಿಣಕ್ಕೆ ನಮ್ಮ ದೇಶವು ಇಂತಹ ವಿಶಿಷ್ಟ ರುಚಿ ಮತ್ತು ಉತ್ಪನ್ನಗಳಿಂದ ತುಂಬಿದೆ. ದಕ್ಷಿಣ ಭಾರತದಲ್ಲಿ, ವಿಜಯನಗರದ ಮಾವಿನ ಹಣ್ಣಿನ ಬಗ್ಗೆ ನೀವು ಖಂಡಿತಾ ಕೇಳಿರುತ್ತೀರಲ್ಲವೇ? ಈ ಹಣ್ಣನ್ನು ತಿನ್ನಬೇಕೆಂದು ಯಾರು ಬಯಸುವುದಿಲ್ಲ ಹೇಳಿ. ಆದ್ದರಿಂದ, ಈಗ ನೂರಾರು ಟನ್ ವಿಜಯನಗರದ ಮಾವಿನ ಹಣ್ಣನ್ನು ಕಿಸಾನ್-ರೈಲು ದೆಹಲಿಗೆ ತಲುಪಿಸುತ್ತಿದೆ. ದೆಹಲಿ ಮತ್ತು ಉತ್ತರ ಭಾರತದ ಜನರಿಗೆ ವಿಜಯನಗರದ ಮಾವಿನ ಹಣ್ಣು ಸವಿಯಲು ದೊರೆಯುತ್ತದೆ ಮತ್ತು ರೈತರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಕಿಸಾನ್-ರೈಲ್ ಈಗಿನವರೆಗೂ ಹತ್ತಿರ-ಹತ್ತಿರ 2 ಲಕ್ಷಟನ್ ಉತ್ಪನ್ನವನ್ನು ಸಾಗಿಸಿದೆ. ಈಗ ಹಣ್ಣು, ತರಕಾರಿಗಳು, ಬೇಳೆಕಾಳುಗಳನ್ನು ದೇಶದ ದೂರದೂರದ ಪ್ರದೇಶಗಳಿಗೆ ಬಹಳ ಕಡಿಮೆ ಖರ್ಚಿನಲ್ಲಿ ಕಳುಹಿಸಿಕೊಡಲು ರೈತರಿಗೆ ಸಾಧ್ಯವಾಗುತ್ತಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 30 ರಂದು ನಾವು ಮನದ ಮಾತು ಆಡುತ್ತಿದ್ದೇವೆ ಮತ್ತು ಕಾಕತಾಳೀಯವೆಂಬಂತೆ ಇದು ಸರ್ಕಾರದ 7 ವರ್ಷಗಳು ಪೂರ್ಣಗೊಳ್ಳುವ ಸಮಯವಾಗಿದೆ. ಈ ವರ್ಷಗಳಲ್ಲಿ, ದೇಶವು 'ಎಲ್ಲರೊಂದಿಗೆ, ಎಲ್ಲರ ಅಭಿವೃದ್ಧಿ, ಎಲ್ಲರ-ವಿಶ್ವಾಸ' ಮಂತ್ರವನ್ನು ಅನುಸರಿಸುತ್ತಿದೆ. ದೇಶದ ಸೇವೆಯಲ್ಲಿ ನಾವೆಲ್ಲರೂ ಪ್ರತಿಕ್ಷಣವೂ ಸಮರ್ಪಣಾ ಭಾವದೊಂದಿಗೆ ಕೆಲಸ ಮಾಡಿದ್ದೇವೆ. ಅನೇಕ ಸ್ನೇಹಿತರು ನನಗೆ ಪತ್ರಗಳನ್ನು ಬರೆದು ಕಳುಹಿಸಿದ್ದಾರೆ ಮತ್ತು 'ಮನ್ ಕಿ ಬಾತ್' ನಲ್ಲಿ, ನಮ್ಮ 7 ವರ್ಷಗಳ ಪಯಣದ ಬಗ್ಗೆಯೂ ಚರ್ಚಿಸಬೇಕುಎಂದು ಕೇಳಿದ್ದಾರೆ. ಸ್ನೇಹಿತರೇ, ಈ 7 ವರ್ಷಗಳಲ್ಲಿ ಯಾವುದೇ ಸಾಧನೆ ಮಾಡಿದರೂ ಅದು ದೇಶದ್ದಾಗಿದೆ, ದೇಶವಾಸಿಗಳದ್ದಾಗಿದೆ. ಈ ವರ್ಷಗಳಲ್ಲಿ ನಾವು ರಾಷ್ಟ್ರೀಯ ಹೆಮ್ಮೆಯ ಅನೇಕ ಕ್ಷಣಗಳನ್ನು ಒಟ್ಟಿಗೆ ಅನುಭವಿಸಿದ್ದೇವೆ. ಈಗ ಭಾರತವು ಇತರ ದೇಶಗಳ ಚಿಂತನೆಯ ಪ್ರಕಾರ ಮತ್ತು ಅವರ ಒತ್ತಡದಂತೆ ನಡೆಯುವುದಿಲ್ಲ, ತನ್ನ ಮನೋ ನಿಶ್ಚಯದಂತೆ ನಡೆಯುತ್ತದೆ ಎನ್ನುವುದನ್ನು ಗಮನಿಸಿದಾಗ ನಮ್ಮೆಲ್ಲರಿಗೂ ಹೆಮ್ಮೆಯೆನಿಸುತ್ತದೆ. ನಮ್ಮ ವಿರುದ್ಧ ಸಂಚು ರೂಪಿಸುವವರಿಗೆ ಭಾರತ ಈಗ ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ನಾವು ನೋಡಿದಾಗ, ನಮ್ಮ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಭಾರತ ರಾಜಿ ಮಾಡಿಕೊಳ್ಳದಿದ್ದಾಗ, ನಮ್ಮ ಸೇನಾಪಡೆಗಳ ಬಲ ಹೆಚ್ಚಾದಾಗ, ಹೌದು, ನಾವು ಸರಿಯಾದ ಹಾದಿಯಲ್ಲಿದ್ದೇವೆ ಎಂದು ನಮಗೆ ಭಾಸವಾಗುತ್ತದೆ.
ಸ್ನೇಹಿತರೆ, ನನಗೆ ದೇಶವಾಸಿಗಳಿಂದ ದೇಶದ ಮೂಲೆ ಮೂಲೆಗಳಿಂದ ಸಂದೇಶ, ಪತ್ರಗಳು ಬರುತ್ತವೆ. 70 ವರ್ಷಗಳ ನಂತರ ತಮ್ಮ ಗ್ರಾಮದಲ್ಲಿ ಮೊದಲ ಬಾರಿಗೆ ವಿದ್ಯುಚ್ಛಕ್ತಿ ಬಂದಿತೆಂದು, ಅವರ ಪುತ್ರ-ಪುತ್ರಿಯರು ಬೆಳಕಿನಲ್ಲಿ, ಫ್ಯಾನ್ ಅಡಿಯಲ್ಲಿ ಕುಳಿತು ಪಾಠ ಓದುತ್ತಿದ್ದಾರೆಂದು ಎಷ್ಟೊಂದು ಜನರು ದೇಶಕ್ಕೆ ಧನ್ಯವಾದ ಹೇಳುತ್ತಾರೆ. ನಮ್ಮ ಗ್ರಾಮ ಈಗ ಸುಸಜ್ಜಿತ ರಸ್ತೆಗಳ ಮೂಲಕ ನಗರದೊಂದಿಗೆ ಸಂಪರ್ಕಿಸಲಾಗಿದೆ ಎಂದು ಎಷ್ಟೊಂದು ಜನರು ಹೇಳುತ್ತಾರೆ. ರಸ್ತೆ ನಿರ್ಮಾಣವಾದ ನಂತರ, ಮೊದಲ ಬಾರಿಗೆ ತಾವು ಕೂಡಾ ವಿಶ್ವದ ಇತರ ಭಾಗಕ್ಕೆ ಸೇರಿದವರೆಂಬ ಭಾವನೆ ಮೂಡಿತೆಂದು ಒಂದು ಬುಡಕಟ್ಟು ಪ್ರದೇಶದ ಕೆಲವು ಸ್ನೇಹಿತರು ನನಗೆ ಸಂದೇಶ ಕಳುಹಿಸಿದ್ದರೆಂದು ನನಗೆ ನೆನಪಿದೆ. ಅಂತಯೇ ಕೆಲವರು ಬ್ಯಾಂಕ್ ಖಾತೆ ತೆರೆದ ಸಂತಸ ಹಂಚಿಕೊಂಡರೆ, ಕೆಲವು ವಿವಿಧ ಯೋಜನೆಗಳ ಸಹಾಯದಿಂದ ಹೊಸ ಉದ್ಯೋಗ ಆರಂಭಿಸಿದ ಸಂತಸ ಹಂಚಿಕೊಳ್ಳುತ್ತಾರೆ. ಆ ಸಂತೋಷದಲ್ಲಿ ಭಾಗಿಯಾಗಲು ನನ್ನನ್ನೂ ಆಮಂತ್ರಿಸುತ್ತಾರೆ. `ಪ್ರಧಾನ ಮಂತ್ರಿ ಆವಾಸ್ ಯೋಜನೆ' ಮೂಲಕ ಮನೆ ದೊರೆತ ನಂತರ ಗೃಹಪ್ರವೇಶಕ್ಕೆ ಬರಬೇಕೆಂದು ನಮ್ಮ ದೇಶವಾಸಿಗಳಿಂದ ನನಗೆ ಆಮಂತ್ರಣ ದೊರೆಯುತ್ತಲೇ ಇರುತ್ತದೆ. ಈ 7 ವರ್ಷಗಳಲ್ಲಿ, ನಿಮ್ಮೆಲ್ಲರ ಇಂತಹ ಕೋಟ್ಯಂತರ ಸಂತಸದಲ್ಲಿ ನಾನು ಕೂಡಾ ಭಾಗಿಯಾಗಿದ್ದೇನೆ. ಈಗ ಕೆಲವೇ ದಿನಗಳಿಗೆ ಮುನ್ನ, ಹಳ್ಳಿಯೊಂದರಿಂದ ಕುಟುಂಬವೊಂದು `ಜಲ್ ಜೀವನ್ ಮಿಶನ್' ಮುಖಾಂತರ ಮನೆಯಲ್ಲಿ ಅಳವಡಿಸಲಾದ ನಲ್ಲಿಯ ಒಂದು ಫೋಟೋ ತೆಗೆದು ಕಳುಹಿಸಿಕೊಟ್ಟಿತ್ತು. ಅವರು ಆ ಫೋಟೋ ಅಡಿಯಲ್ಲಿ ಹೀಗೆಂದು ಬರೆದಿದ್ದರು? `ನನ್ನ ಗ್ರಾಮದ ಜೀವನಾಧಾರ' ಹೀಗೆ ಎಷ್ಟೊಂದು ಕುಟುಂಬಗಳಿವೆ. ಸ್ವಾತಂತ್ರ್ಯ ದೊರೆತ 7 ದಶಕಗಳಲ್ಲಿ ನಮ್ಮ ದೇಶದ ಕೇವಲ ಮೂರೂವರೆ ಕೋಟಿ ಗ್ರಾಮದ ಮನೆಗಳಲ್ಲಿ ಮಾತ್ರಾ ನೀರಿನ ಸಂಪರ್ಕವಿತ್ತು. ಆದರೆ ಕಳೆದ 21 ತಿಂಗಳುಗಳಲ್ಲೇ, ಎಲ್ಲಾ ನಾಲ್ಕೂವರೆ ಕೋಟಿ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ಕಲ್ಪಿಸಲಾಯಿತು. ಇವುಗಳಲ್ಲಿ 15 ತಿಂಗಳುಗಳಂತೂ ಕೊರೋನಾ ಕಾಲವಾಗಿತ್ತು. ಇದೇ ರೀತಿಯಲ್ಲಿ ಆಯುಷ್ಮಾನ್ ಯೋಜನೆಯಿಂದ ಕೂಡಾ ದೇಶದಲ್ಲಿ ಹೊಸ ಭರವಸೆ ಮೂಡಿದೆ. ಬಡವನೊಬ್ಬ ಉಚಿತ ಚಿಕಿತ್ಸೆಯಿಂದ ಗುಣಮುಖನಾಗಿ ಮನೆಗೆ ಹಿಂದಿರುಗಿ ಬಂದಾಗ ಆತನಿಗೆ ಹೊಸ ಜೀವನ ದೊರೆತಂತೆ ಭಾಸವಾಗುತ್ತದೆ. ದೇಶ ತನ್ನೊಂದಿಗಿದೆ ಎಂಬ ವಿಶ್ವಾಸ ಆತನಲ್ಲಿ ಮೂಡುತ್ತದೆ. ಇಂತಹ ಎಷ್ಟೊಂದು ಕುಟುಂಬಗಳ ಆಶೀರ್ವಾದ, ಕೋಟ್ಯಂತರ ಮಾತೆಯರ ಆಶೀರ್ವಾದ ಪಡೆದು ನಮ್ಮದೇಶ ಬಲಿಷ್ಟವಾಗಿ, ಅಬಿವೃದ್ಧಿಯ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ.
ಸ್ನೇಹಿತರೆ, ಈ 7 ವರ್ಷಗಳಲ್ಲಿ, ಭಾರತವು ` ಡಿಜಿಟಲ್ ಪಾವತಿ ಮೂಲಕ ಕೊಡು-ಪಡೆಯುವಲ್ಲಿ (ಕೊಡುಕೊಳ್ಳುವಿಕೆಯಲ್ಲಿ)' ವಿಶ್ವಕ್ಕೆ ಹೊಸ ದಿಕ್ಕು ತೋರುವ ಕೆಲಸ ಮಾಡಿದೆ. ಇಂದು ಯಾವುದೇ ಸ್ಥಳದಿಂದಲೂ, ಬಹಳ ಸುಲಭವಾಗಿ ನೀವು ಕ್ಷಣ ಮಾತ್ರದಲ್ಲಿ ಡಿಜಿಟಲ್ ಪಾವತಿ ಮಾಡಿಬಿಡುತ್ತೀರಿ, ಕೊರೋನಾದ ಈ ಸಮಯದಲ್ಲಿ ಕೂಡಾ ಬಹಳ ಉಪಯುಕ್ತವೆಂದು ಸಾಬೀತಾಗುತ್ತಿದೆ. ಇಂದು ದೇಶವಾಸಿಗಳಲ್ಲಿ ಸ್ವಚ್ಛತೆಯ ಬಗ್ಗೆ ಗಂಬೀರತೆ ಮತ್ತು ಜಾಗರೂಕತೆ ಹೆಚ್ಚಾಗುತ್ತಿದೆ. ನಾವು ದಾಖಲೆಯ ಸಂಖ್ಯೆಯ ಉಪಗ್ರಹ ಕೂಡಾ ಯೋಜಿಸುತ್ತಿದ್ದೇವೆ ಮತ್ತು ದಾಖಲೆಯ ರಸ್ತೆಗಳನ್ನು ಕೂಡಾ ನಿರ್ಮಿಸುತ್ತಿದ್ದೇವೆ. ಈ 7 ವರ್ಷಗಳಲ್ಲಿ ದೇಶದ ಅನೇಕ ಹಳೆಯ ವಿವಾದಗಳನ್ನು ಕೂಡಾ ಸಂಪೂರ್ಣ ಶಾಂತಿ ಮತ್ತು ಸೌಹಾರ್ದದೊಂದಿಗೆ ಬಗೆಹರಿಸಲಾಗಿದೆ. ಈಶಾನ್ಯದಿಂದ ಕಾಶ್ಮೀರದವರೆಗೂ ಶಾಂತಿ ಮತ್ತು ಅಭಿವೃದ್ಧಿಯ ಒಂದು ಹೊಸ ಭರವಸೆ ಮೂಡಿದೆ. ಸ್ನೇಹಿತರೆ, ದಶಕಗಳಿಂದ ಆಗಿರದಂತಹ ಈ ಕೆಲಸಗಳು ಈ 7 ವರ್ಷಗಳಲ್ಲಿ ಹೇಗಾಯಿತೆಂದು ನೀವು ಯೋಚಿಸಿರುವಿರಾ? ಇವೆಲ್ಲವೂ ಹೇಗಾಯಿತೆಂದರೆ ಈ 7 ವರ್ಷಗಳಲ್ಲಿ ನಾವು ಸರ್ಕಾರ ಮತ್ತು ಜನತೆಗಿಂತ ಹೆಚ್ಚಾಗಿ ಒಂದು ದೇಶವಾಗಿ ಕೆಲಸ ಮಾಡಿದ್ದೇವೆ, ಒಂದು ತಂಡದಂತೆ ಕೆಲಸ ಮಾಡಿದ್ದೇವೆ, `ಟೀಂಇಂಡಿಯಾ' ರೂಪದಲ್ಲಿ ಕೆಲಸ ಮಾಡಿದ್ದೇವೆ. ಪ್ರತಿಯೊಬ್ಬ ನಾಗರಿಕನೂ ದೇಶವನ್ನು ಮುನ್ನಡೆಸಲು ಕೆಲವು ಹೆಜ್ಜೆ ಮುಂದಿಡುವ ಪ್ರಯತ್ನ ಪಟ್ಟಿದ್ದಾನೆ. ಹೌದು, ಎಲ್ಲಿ ಸಫಲತೆ ಇರುತ್ತದೆಯೋ ಅಲ್ಲಿ ಪರೀಕ್ಷೆಗಳು ಕೂಡಾ ಇರುತ್ತವೆ. ಈ 7 ವರ್ಷಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಅನೇಕ ಪರೀಕ್ಷೆಗಳನ್ನು ಎದುರಿಸಿದ್ದೇವೆ ಮತ್ತು ಪ್ರತಿಬಾರಿಯೂ ನಾವು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ಕೊರೋನಾ ಮಹಾಮಾರಿಯ ರೂಪದಲ್ಲಿ, ಇಷ್ಟು ದೊಡ್ಡ ಪರೀಕ್ಷೆ ಸತತವಾಗಿ ಮುಂದುವರಿಯುತ್ತಿದೆ. ಸಂಪೂರ್ಣ ವಿಶ್ವವನ್ನೇ ತೊಂದರೆಗೆದೂಡಿದ ಬಿಕ್ಕಟ್ಟು ಇದಾಗಿದ್ದು, ಎಷ್ಟೊಂದು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ದೊಡ್ಡ ದೊಡ್ಡ ದೇಶಗಳು ಕೂಡಾ ಇದರ ಕಬಂಧ ಬಾಹುಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ. ಈ ಜಾಗತಿಕ ಮಹಾಮಾರಿಯ ನಡುವೆಯೇ ಭಾರತ, `ಸೇವೆ ಮತ್ತು ಸಹಯೋಗ' ದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನಾವು ಮೊದಲ ಅಲೆಯಲ್ಲಿ ಕೂಡಾ ಸಂಪೂರ್ಣ ಹುರುಪಿನಿಂದ ಹೋರಾಟ ನಡೆಸಿದೆವು, ಈ ಬಾರಿಕೂಡಾ ವೈರಾಣುವಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾರತ ವಿಜಯಿಯಾಗುತ್ತದೆ. `ಎರಡು ಗಜ ಅಂತರ', ಮಾಸ್ಕ್ ಧರಿಸುವ ನಿಯಮವೇ ಇರಲಿ, ಅಥವಾ ಲಸಿಕೆಯೇ ಆಗಿರಲಿ, ನಾವು ಸಡಿಲಗೊಳಿಸಬಾರದು. ಗೆಲುವಿಗೆ ಇದೇ ನಮ್ಮ ಹಾದಿಯಾಗಿದೆ. ಮುಂದಿನಬಾರಿ ನಾವು `ಮನದ ಮಾತು` ಸಂದರ್ಭದಲ್ಲಿ ಬೇಟಿಯಾದಾಗ, ದೇಶವಾಸಿಗಳ ಇನ್ನೂ ಅನೇಕ ಪ್ರೇರಣಾತ್ಮಕ ಉದಾಹರಣೆಗಳ ಕುರಿತು ಎಲ್ಲರೂ ಮಾತನಾಡೋಣ ಮತ್ತು ಹೊಸ ವಿಷಯಗಳ ಬಗ್ಗೆ ಚರ್ಚಿಸೋಣ. ನೀವು ನಿಮ್ಮ ಸಲಹೆ ಸೂಚನೆಗಳನ್ನು ನನಗೆ ಇದೇರೀತಿ ಕಳುಹಿಸುತ್ತಿರಿ. ನೀವೆಲ್ಲರೂ ಆರೋಗ್ಯವಾಗಿರಿ, ದೇಶವನ್ನು ಇದೇ ರೀತಿ ಮುನ್ನಡೆಸುತ್ತಿರಿ. ಅನಂತಾನಂತ ಧನ್ಯವಾದಗಳು.
India has been fighting COVID-19 but at the same time, the nation has witnessed a few natural disasters too.
— PMO India (@PMOIndia) May 30, 2021
In the last ten days the western and eastern coast saw two cyclones. #MannKiBaat pic.twitter.com/AJh4GPc6wN
PM @narendramodi appreciates those involved in cyclone relief efforts. #MannKiBaat pic.twitter.com/jMS8qXIj4w
— PMO India (@PMOIndia) May 30, 2021
My thoughts are with those affected due to the recent cyclones in India, says PM @narendramodi. #MannKiBaat pic.twitter.com/aLtt8TkN1w
— PMO India (@PMOIndia) May 30, 2021
During #MannKiBaat, PM @narendramodi converses with Dinesh Upadhyay Ji, who drives a liquid oxygen tanker. He hails from Jaunpur in Uttar Pradesh. https://t.co/kSJrBcy4Bt
— PMO India (@PMOIndia) May 30, 2021
PM @narendramodi speaks to Sireesha Ji, who is associated with the Oxygen Express. https://t.co/kSJrBcy4Bt
— PMO India (@PMOIndia) May 30, 2021
Group Captain Patnaik shares his experiences during the time of COVID-19, especially helping people with oxygen supplies as a part of the efforts of the Air Force. https://t.co/kSJrBcy4Bt #MannKiBaat
— PMO India (@PMOIndia) May 30, 2021
Our front-line workers have played a remarkable role in fighting COVID-19. #MannKiBaat pic.twitter.com/7hk4ia8FMD
— PMO India (@PMOIndia) May 30, 2021
During #MannKiBaat, PM @narendramodi spoke to a lab technician Prakash Ji. https://t.co/kSJrBcy4Bt
— PMO India (@PMOIndia) May 30, 2021
A tribute to the hardworking farmer of India, who has played a key role in feeding the nation during these times of COVID-19. #MannKiBaat pic.twitter.com/8CfVFe7W6p
— PMO India (@PMOIndia) May 30, 2021
7 years of 'Sabka Saath, Sabka Vikas, Sabka Vishwas.' #MannKiBaat pic.twitter.com/zRwLaTWwD7
— PMO India (@PMOIndia) May 30, 2021
Ensuring betterment in the lives of 130 crore Indians. #MannKiBaat pic.twitter.com/5VUkfvHeIc
— PMO India (@PMOIndia) May 30, 2021
Top quality healthcare for every Indian. #MannKiBaat pic.twitter.com/ObLWMhiUDI
— PMO India (@PMOIndia) May 30, 2021
Working together as a team for India's progress. #MannKiBaat pic.twitter.com/O9jXW5HREQ
— PMO India (@PMOIndia) May 30, 2021
Wear your mask.
— PMO India (@PMOIndia) May 30, 2021
Follow social distancing.
Get vaccinated. #MannKiBaat pic.twitter.com/JFlKHL0NDy