‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನದ ಭಾಗವಾಗಿ, ಮಹಾರಾಷ್ಟ್ರದ ವಿಜಯ ಪವಾರ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಸುಂದರ ಬಂಜಾರ ಕರಕುಶಲ ಕಲೆಯನ್ನು ಹಂಚಿಕೊಂಡಿದ್ದಾರೆ ಮತ್ತು ಆ ಕಲಾಕೃತಿಗಳನ್ನು ಎಲ್ಲರಿಗೂ ಚಿರಪರಿಚಿತಗೊಳಿಸಿದ್ದಾರೆ.
ವಿಜಯ ಪವಾರ್ ಕಳೆದೆರಡು ದಶಕಗಳಿಂದ ಬಂಜಾರ ಕರಕುಶಲ ಕಲೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಆಕೆ ಹೇಗೆ ತಮ್ಮ ಮಾರ್ಗದರ್ಶನದಲ್ಲಿ ಸಹಸ್ರಾರು ಮಹಿಳೆಯರಿಗೆ ಪ್ರೋತ್ಸಾಹ ನೀಡಲಾಯಿತು ಎಂಬ ಅಂಶವನ್ನು ತಿಳಿಸಿದ್ದಾರೆ.
ಮರಾಠಿಯಲ್ಲಿ ಟ್ವೀಟ್ ಮಾಡಿರುವ ಆ ಮಹಿಳೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಗೊರ್ಮಾತಿ ಕಲೆ’ಯನ್ನು ಉತ್ತೇಜಿಸಲು ಪ್ರೋತ್ಸಾಹ ನೀಡಿರುವುದೇ ಅಲ್ಲದೆ, ಆರ್ಥಿಕ ನೆರವನ್ನೂ ಸಹ ನೀಡಿದ್ದಾರೆ ಎಂದು ಹೇಳಿದ್ದಾರೆ. ಬಂಜಾರ ಕರಕುಶಲ ಕಲೆಯ ಜೊತೆ ಗುರುತಿಸಿಕೊಂಡಿರುವ ಮಹಿಳೆಯರಿಗೆ ಹೆಮ್ಮೆಯ ಅಥವಾ ವೈಭವದ ವಿಚಾರ ಎಂದು ತಿಳಿಸಿದ್ದಾರೆ.
You have heard about handicrafts from different parts of India. My fellow Indians, I present to you handicrafts of the Banjara community in rural Maharashtra. I have been working on this for the last 2 decades and have been assisted by a thousand more women- Vijaya Pawar pic.twitter.com/A3X47245E3
— Narendra Modi (@narendramodi) March 8, 2020