ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಲೆ. ಜನರಲ್ ಎಚ್.ಆರ್. ಮೆಕ್ ಮಾಸ್ಟರ್ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಲೆ. ಜನರಲ್ ಎಚ್.ಆರ್. ಮೆಕ್ ಮಾಸ್ಟರ್ ಅವರು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಶುಭಾಶಯಗಳನ್ನು ಪ್ರಧಾನಿಯವರಿಗೆ ತಿಳಿಸಿದರು. ಪ್ರಧಾನಿಯವರು ಎರಡೂ ಕಡೆಯ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಮತ್ತು ಭಾರತ – ಅಮೆರಿಕ ಕಾರ್ಯಕ್ರಮಗಳಲ್ಲಿ ಮುಂದಡಿ ಇಡುವ ಕುರಿತ ಸಕಾರಾತ್ಮಕವಾದ ಡೋನಾಲ್ಡ್ ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆಯನ್ನು ಸ್ಮರಿಸಿದರು.
ಲೆಫ್ಟಿನೆಂಟ್ ಜನರಲ್ ಎಚ್.ಆರ್. ಮೆಕ್ ಮಾಸ್ಟರ್ ಅವರು ಆಫ್ಘಾನಿಸ್ತಾನ, ಪಶ್ಚಿಮ ಏಷ್ಯಾ ಮತ್ತು ಡಿಪಿಆರ್.ಕೆ. ಸೇರಿದಂತೆ ವಿಸ್ತರಿತ ವಲಯದ ಭದ್ರತಾ ಪರಿಸ್ಥಿತಿಯ ಕುರಿತಂತೆ ಪ್ರಧಾನಮಂತ್ರಿಯವರೊಂದಿಗೆ ತಮ್ಮ ನಿಲುವು ಹಂಚಿಕೊಂಡರು. ಈ ಮಾತುಕತೆಯ ವೇಳೆ, ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಲು ಎರಡೂ ರಾಷ್ಟ್ರಗಳು ಹೇಗೆ ಒಗ್ಗೂಡಿ ಕೆಲಸ ಮಾಡುವುದು ಮತ್ತು ಮುಂದುವರಿದ ಪ್ರಾದೇಶಿಕ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡರು.