ಕ್ರ.ಸಂ.

ಸಹಿ ಹಾಕಲಾದ ಒಪ್ಪಂದಗಳು

ಒಪ್ಪಂದಗಳ ವ್ಯಾಪ್ತಿ

1.

ಹೈಡ್ರೋಕಾರ್ಬನ್ ವಲಯದಲ್ಲಿ ಸಹಕಾರಕ್ಕಾಗಿ ಒಡಂಬಡಿಕೆ

ಈ ವಿಷಯದಲ್ಲಿನ ಸಹಕಾರವು ಕಚ್ಚಾ ತೈಲದ ಮೂಲ, ನೈಸರ್ಗಿಕ ಅನಿಲದಲ್ಲಿ ಸಹಯೋಗ, ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮತ್ತು ಸಂಪೂರ್ಣ ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಲ್ಲಿ ಪರಿಣತಿ ಹಂಚಿಕೊಳ್ಳುವುದನ್ನು ಒಳಗೊಂಡಿದೆ.

2.

ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಒಪ್ಪಂದ

ಜಂಟಿ ಚಟುವಟಿಕೆಗಳು, ವೈಜ್ಞಾನಿಕ ಸಾಮಗ್ರಿಗಳು, ಮಾಹಿತಿ ಮತ್ತು ಸಿಬ್ಬಂದಿಯ ವಿನಿಮಯದ ಮೂಲಕ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವುದು.

3.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (2024-27)

ರಂಗಭೂಮಿ, ಸಂಗೀತ, ಲಲಿತಕಲೆಗಳು, ಸಾಹಿತ್ಯ, ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸುವುದು ಸೇರಿದಂತೆ ಭಾರತ ಮತ್ತು ಗಯಾನಾ ನಡುವೆ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

4.

ಭಾರತೀಯ ʻಫಾರ್ಮಾಕೊಪೊಯಿಯಾʼ ನಿಯಂತ್ರಣ ಮತ್ತು ಮಾನ್ಯತೆಗಾಗಿ ಭಾರತೀಯ ಫಾರ್ಮಾಕೊಪೊಯಿಯಾ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಪ್ಪಂದ

ಆಯಾ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಔಷಧಗಳ ನಿಯಂತ್ರಣ ಕ್ಷೇತ್ರದಲ್ಲಿ ನಿಕಟ ಸಹಕಾರವನ್ನು ಅಭಿವೃದ್ಧಿಪಡಿಸುವ ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮಹತ್ವವನ್ನು ಗುರುತಿಸುವುದು.

5.

ಜನೌಷಧ ಯೋಜನೆ (ಪಿಎಂಬಿಜೆಪಿ) ಅನುಷ್ಠಾನಕ್ಕಾಗಿ ಮೆಸರ್ಸ್ ʻಎಚ್‌ಎಲ್‌ಎಲ್ ಲೈಫ್ ಕೇರ್ ಲಿಮಿಟೆಡ್ʼ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಪ್ಪಂದ

ʻಪಿಎಂಬಿಜೆಪಿʼ ಕಾರ್ಯಕ್ರಮದಡಿ ʻಕ್ಯಾರಿಕಾಮ್ʼ ದೇಶಗಳ ಸಾರ್ವಜನಿಕ ಖರೀದಿ ಏಜೆನ್ಸಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಗಳ ಪೂರೈಕೆ.

6.

ವೈದ್ಯಕೀಯ ಉತ್ಪನ್ನಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ʻಸಿಡಿಎಸ್‌ಸಿಒʼ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಡಂಬಡಿಕೆ

ಔಷಧೀಯ ಬಳಕೆಗೆ ಕಚ್ಚಾ ವಸ್ತುಗಳು, ಜೈವಿಕ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಸೇರಿದಂತೆ ಔಷಧಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ನೀತಿ ಮತ್ತು ಸಹಕಾರ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ.

7.

ಡಿಜಿಟಲ್ ರೂಪಾಂತರಕ್ಕಾಗಿ, ದೊಡ್ಡ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ʻಇಂಡಿಯಾ ಸ್ಟ್ಯಾಕ್ʼ ಒಪ್ಪಂದ

ಸಾಮರ್ಥ್ಯ ವರ್ಧನೆ, ತರಬೇತಿ ಕಾರ್ಯಕ್ರಮಗಳು, ಉತ್ತಮ ಕಾರ್ಯವಿಧಾನಗಳ ವಿನಿಮಯ, ಸಾರ್ವಜನಿಕ ಅಧಿಕಾರಿಗಳು ಮತ್ತು ತಜ್ಞರ ವಿನಿಮಯ, ಪೈಲಟ್ ಅಥವಾ ಡೆಮೊ ಪರಿಹಾರಗಳ ಅಭಿವೃದ್ಧಿ ಇತ್ಯಾದಿಗಳ ಮೂಲಕ ಡಿಜಿಟಲ್ ರೂಪಾಂತರದ ಕ್ಷೇತ್ರಗಳಲ್ಲಿ ಸಹಕಾರವನ್ನು ಸ್ಥಾಪಿಸುವುದು.

8.

ಗಯಾನಾದಲ್ಲಿ ʻಯುಪಿಐʼ ತರಹದ ವ್ಯವಸ್ಥೆಯನ್ನು ನಿಯೋಜಿಸಲು ʻಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ʼ ಮತ್ತು ಗಯಾನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವೆ ಒಡಂಬಡಿಕೆ

ಗಯಾನಾದಲ್ಲಿ ರಿಯಲ್ ಟೈಮ್ ಪೇಮೆಂಟ್ ಸಿಸ್ಟಮ್ ನಂತಹ ʻಯುಪಿಐʼ ಅನ್ನು ಜಾರಿಗೊಳಿಸುವ ಸಾಧ್ಯತೆಗಾಗಿ ಪರಸ್ಪರ ಬಯಕೆಯನ್ನು ಅರ್ಥಮಾಡಿಕೊಳ್ಳುವುದು ಈ ಒಪ್ಪಂದದ ಉದ್ದೇಶವಾಗಿದೆ.

9.

ʻಪ್ರಸಾರ ಭಾರತಿʼ ಮತ್ತು ಗಯಾನಾದ ರಾಷ್ಟ್ರೀಯ ಸಂವಹನ ಜಾಲದ ನಡುವೆ ಪ್ರಸಾರ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗಕ್ಕಾಗಿ ಒಪ್ಪಂದ

ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಮನರಂಜನೆ, ಕ್ರೀಡೆ, ಸುದ್ದಿ ಕ್ಷೇತ್ರಗಳಲ್ಲಿ ಪರಸ್ಪರ ಆಸಕ್ತಿಯ ಕ್ಷೇತ್ರಗಳಾಗಿ ಕಾರ್ಯಕ್ರಮಗಳನ್ನು ವಿನಿಮಯ ಮಾಡಿಕೊಳ್ಳುವುದು.

10.

ʻಎನ್‌ಡಿಐʼ (ಗಯಾನಾದ ರಾಷ್ಟ್ರೀಯ ರಕ್ಷಣಾ ಸಂಸ್ಥೆ) ಮತ್ತು ʻಆರ್‌ಆರ್‌ಯುʼ (ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, ಗುಜರಾತ್) ನಡುವೆ ಒಡಂಬಡಿಕೆ

ಈ ತಿಳಿವಳಿಕೆ ಒಪ್ಪಂದವು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಅಧ್ಯಯನಗಳಲ್ಲಿ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯನ್ನು ಹೆಚ್ಚಿಸಲು ಎರಡೂ ಸಂಸ್ಥೆಗಳ ನಡುವೆ ಸಹಯೋಗದ ನೀತಿಯನ್ನು ರೂಪಿಸುವ ಗುರಿ ಹೊಂದಿದೆ.

 

  • Yash Wilankar January 29, 2025

    Namo 🙏
  • Vivek Kumar Gupta January 20, 2025

    नमो ..🙏🙏🙏🙏🙏
  • Vivek Kumar Gupta January 20, 2025

    नमो ..........................🙏🙏🙏🙏🙏
  • கார்த்திக் January 01, 2025

    🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️🏵️ 🙏🏾Wishing All a very Happy New Year 🙏 🌺🌺🌺🌺🌺🌺🌺🌺🌺🌺🌺🌺🌺🌺🌺
  • Yogendra Nath Pandey Lucknow Uttar vidhansabha December 18, 2024

    नमो नमो
  • Preetam Gupta Raja December 09, 2024

    जय श्री राम
  • கார்த்திக் December 08, 2024

    🌺ஜெய் ஸ்ரீ ராம்🌺जय श्री राम🌺જય શ્રી રામ🌹 🌺ಜೈ ಶ್ರೀ ರಾಮ್🌺ଜୟ ଶ୍ରୀ ରାମ🌺Jai Shri Ram 🌹🌹 🌺জয় শ্ৰী ৰাম🌺ജയ് ശ്രീറാം 🌺 జై శ్రీ రామ్ 🌹🌸
  • JYOTI KUMAR SINGH December 08, 2024

    🙏
  • Gopal Singh Chauhan December 07, 2024

    Jay shree ram
  • parveen saini December 06, 2024

    Namo
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
How the makhana can take Bihar to the world

Media Coverage

How the makhana can take Bihar to the world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 25 ಫೆಬ್ರವರಿ 2025
February 25, 2025

Appreciation for PM Modi’s Effort to Promote Holistic Growth Across Various Sectors