ಕ್ರ.ಸಂ. |
ಸಹಿ ಹಾಕಲಾದ ಒಪ್ಪಂದಗಳು |
ಒಪ್ಪಂದಗಳ ವ್ಯಾಪ್ತಿ |
1. |
ಹೈಡ್ರೋಕಾರ್ಬನ್ ವಲಯದಲ್ಲಿ ಸಹಕಾರಕ್ಕಾಗಿ ಒಡಂಬಡಿಕೆ |
ಈ ವಿಷಯದಲ್ಲಿನ ಸಹಕಾರವು ಕಚ್ಚಾ ತೈಲದ ಮೂಲ, ನೈಸರ್ಗಿಕ ಅನಿಲದಲ್ಲಿ ಸಹಯೋಗ, ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವರ್ಧನೆ ಮತ್ತು ಸಂಪೂರ್ಣ ಹೈಡ್ರೋಕಾರ್ಬನ್ ಮೌಲ್ಯ ಸರಪಳಿಯಲ್ಲಿ ಪರಿಣತಿ ಹಂಚಿಕೊಳ್ಳುವುದನ್ನು ಒಳಗೊಂಡಿದೆ. |
2. |
ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿ ಒಪ್ಪಂದ |
ಜಂಟಿ ಚಟುವಟಿಕೆಗಳು, ವೈಜ್ಞಾನಿಕ ಸಾಮಗ್ರಿಗಳು, ಮಾಹಿತಿ ಮತ್ತು ಸಿಬ್ಬಂದಿಯ ವಿನಿಮಯದ ಮೂಲಕ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವುದು. |
3. |
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ (2024-27) |
ರಂಗಭೂಮಿ, ಸಂಗೀತ, ಲಲಿತಕಲೆಗಳು, ಸಾಹಿತ್ಯ, ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ವಿನಿಮಯ ಮತ್ತು ಸಹಕಾರವನ್ನು ಉತ್ತೇಜಿಸುವುದು ಸೇರಿದಂತೆ ಭಾರತ ಮತ್ತು ಗಯಾನಾ ನಡುವೆ ಸಾಂಸ್ಕೃತಿಕ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. |
4. |
ಭಾರತೀಯ ʻಫಾರ್ಮಾಕೊಪೊಯಿಯಾʼ ನಿಯಂತ್ರಣ ಮತ್ತು ಮಾನ್ಯತೆಗಾಗಿ ಭಾರತೀಯ ಫಾರ್ಮಾಕೊಪೊಯಿಯಾ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಪ್ಪಂದ |
ಆಯಾ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಔಷಧಗಳ ನಿಯಂತ್ರಣ ಕ್ಷೇತ್ರದಲ್ಲಿ ನಿಕಟ ಸಹಕಾರವನ್ನು ಅಭಿವೃದ್ಧಿಪಡಿಸುವ ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಮಹತ್ವವನ್ನು ಗುರುತಿಸುವುದು. |
5. |
ಜನೌಷಧ ಯೋಜನೆ (ಪಿಎಂಬಿಜೆಪಿ) ಅನುಷ್ಠಾನಕ್ಕಾಗಿ ಮೆಸರ್ಸ್ ʻಎಚ್‌ಎಲ್‌ಎಲ್ ಲೈಫ್ ಕೇರ್ ಲಿಮಿಟೆಡ್ʼ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಪ್ಪಂದ |
ʻಪಿಎಂಬಿಜೆಪಿʼ ಕಾರ್ಯಕ್ರಮದಡಿ ʻಕ್ಯಾರಿಕಾಮ್ʼ ದೇಶಗಳ ಸಾರ್ವಜನಿಕ ಖರೀದಿ ಏಜೆನ್ಸಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧಗಳ ಪೂರೈಕೆ. |
6. |
ವೈದ್ಯಕೀಯ ಉತ್ಪನ್ನಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ʻಸಿಡಿಎಸ್‌ಸಿಒʼ ಮತ್ತು ಗಯಾನಾದ ಆರೋಗ್ಯ ಸಚಿವಾಲಯದ ನಡುವೆ ಒಡಂಬಡಿಕೆ |
ಔಷಧೀಯ ಬಳಕೆಗೆ ಕಚ್ಚಾ ವಸ್ತುಗಳು, ಜೈವಿಕ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳು ಸೇರಿದಂತೆ ಔಷಧಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ನೀತಿ ಮತ್ತು ಸಹಕಾರ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಇದು ಹೊಂದಿದೆ. |
7. |
ಡಿಜಿಟಲ್ ರೂಪಾಂತರಕ್ಕಾಗಿ, ದೊಡ್ಡ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ʻಇಂಡಿಯಾ ಸ್ಟ್ಯಾಕ್ʼ ಒಪ್ಪಂದ |
ಸಾಮರ್ಥ್ಯ ವರ್ಧನೆ, ತರಬೇತಿ ಕಾರ್ಯಕ್ರಮಗಳು, ಉತ್ತಮ ಕಾರ್ಯವಿಧಾನಗಳ ವಿನಿಮಯ, ಸಾರ್ವಜನಿಕ ಅಧಿಕಾರಿಗಳು ಮತ್ತು ತಜ್ಞರ ವಿನಿಮಯ, ಪೈಲಟ್ ಅಥವಾ ಡೆಮೊ ಪರಿಹಾರಗಳ ಅಭಿವೃದ್ಧಿ ಇತ್ಯಾದಿಗಳ ಮೂಲಕ ಡಿಜಿಟಲ್ ರೂಪಾಂತರದ ಕ್ಷೇತ್ರಗಳಲ್ಲಿ ಸಹಕಾರವನ್ನು ಸ್ಥಾಪಿಸುವುದು. |
8. |
ಗಯಾನಾದಲ್ಲಿ ʻಯುಪಿಐʼ ತರಹದ ವ್ಯವಸ್ಥೆಯನ್ನು ನಿಯೋಜಿಸಲು ʻಎನ್‌ಪಿಸಿಐ ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ʼ ಮತ್ತು ಗಯಾನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಡುವೆ ಒಡಂಬಡಿಕೆ |
ಗಯಾನಾದಲ್ಲಿ ರಿಯಲ್ ಟೈಮ್ ಪೇಮೆಂಟ್ ಸಿಸ್ಟಮ್ ನಂತಹ ʻಯುಪಿಐʼ ಅನ್ನು ಜಾರಿಗೊಳಿಸುವ ಸಾಧ್ಯತೆಗಾಗಿ ಪರಸ್ಪರ ಬಯಕೆಯನ್ನು ಅರ್ಥಮಾಡಿಕೊಳ್ಳುವುದು ಈ ಒಪ್ಪಂದದ ಉದ್ದೇಶವಾಗಿದೆ. |
9. |
ʻಪ್ರಸಾರ ಭಾರತಿʼ ಮತ್ತು ಗಯಾನಾದ ರಾಷ್ಟ್ರೀಯ ಸಂವಹನ ಜಾಲದ ನಡುವೆ ಪ್ರಸಾರ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಯೋಗಕ್ಕಾಗಿ ಒಪ್ಪಂದ |
ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಮನರಂಜನೆ, ಕ್ರೀಡೆ, ಸುದ್ದಿ ಕ್ಷೇತ್ರಗಳಲ್ಲಿ ಪರಸ್ಪರ ಆಸಕ್ತಿಯ ಕ್ಷೇತ್ರಗಳಾಗಿ ಕಾರ್ಯಕ್ರಮಗಳನ್ನು ವಿನಿಮಯ ಮಾಡಿಕೊಳ್ಳುವುದು. |
10. |
ʻಎನ್‌ಡಿಐʼ (ಗಯಾನಾದ ರಾಷ್ಟ್ರೀಯ ರಕ್ಷಣಾ ಸಂಸ್ಥೆ) ಮತ್ತು ʻಆರ್‌ಆರ್‌ಯುʼ (ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ, ಗುಜರಾತ್) ನಡುವೆ ಒಡಂಬಡಿಕೆ |
ಈ ತಿಳಿವಳಿಕೆ ಒಪ್ಪಂದವು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಅಧ್ಯಯನಗಳಲ್ಲಿ ಸಂಶೋಧನೆ, ಶಿಕ್ಷಣ ಮತ್ತು ತರಬೇತಿಯನ್ನು ಹೆಚ್ಚಿಸಲು ಎರಡೂ ಸಂಸ್ಥೆಗಳ ನಡುವೆ ಸಹಯೋಗದ ನೀತಿಯನ್ನು ರೂಪಿಸುವ ಗುರಿ ಹೊಂದಿದೆ. |