ತಿಳುವಳಿಕಾ ಒಡಂಬಡಿಕೆಗಳು ಮತ್ತು ಒಪ್ಪಂದಗಳ ವಿನಿಮಯ
ಕ್ರಮ ಸಂಖ್ಯೆ |
ತಿಳುವಳಿಕಾ ಒಡಂಬಡಿಕೆ/ಒಪ್ಪಂದದ ಹೆಸರು |
ತಾಂಜೇನಿಯಾ ಕಡೆಯಿಂದ ಪ್ರತಿನಿಧಿ |
ಭಾರತದ ಪ್ರತಿನಿಧಿ |
|
ಡಿಜಿಟಲ್ ರೂಪಾಂತರಕ್ಕಾಗಿ ಜನಸಾಮಾನ್ಯರ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸಹಕಾರಕ್ಕಾಗಿ ಭಾರತ ಗಣರಾಜ್ಯದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ತಾಂಜೇನಿಯಾ ಗಣರಾಜ್ಯದ ಮಾಹಿತಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಡುವೆ ಒಪ್ಪಂದ |
ಗೌರವಾನ್ವಿತ ನಾಪ್ ಎಂ. ನೌಯೆ, ತಾಂಜೇನಿಯಾದ ಮಾಹಿತಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು |
ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
ಭಾರತ ಗಣರಾಜ್ಯದ ಭಾರತೀಯ ನೌಕಾಪಡೆ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ʻತಾಂಜೇನಿಯಾ ಶಿಪ್ಪಿಂಗ್ ಏಜೆನ್ಸಿಗಳ ನಿಗಮʼದ ನಡುವೆ ʻಹಡಗು ಚಲನವಲನ ಪೂರ್ವ ಮಾಹಿತಿʼ(ವೈಟ್ ಶಿಪ್ಪಿಂಗ್ ಇನ್ಫರ್ಮೇಶನ್) ಹಂಚಿಕೊಳ್ಳುವ ಕುರಿತು ತಾಂತ್ರಿಕ ಒಪ್ಪಂದ |
ಗೌರವಾನ್ವಿತ ಶ್ರೀ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು |
ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
2023-2027ನೇ ಸಾಲಿನಲ್ಲಿ ಭಾರತ ಸರ್ಕಾರ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ಸರ್ಕಾರದ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ |
ಗೌರವಾನ್ವಿತ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು |
ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
ತಾಂಜೇನಿಯಾದ ʻರಾಷ್ಟ್ರೀಯ ಕ್ರೀಡಾ ಮಂಡಳಿʼ ಮತ್ತು ʻಭಾರತೀಯ ಕ್ರೀಡಾ ಪ್ರಾಧಿಕಾರʼದ ನಡುವೆ ಕ್ರೀಡಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಡಂಬಡಿಕೆ |
ಗೌರವಾನ್ವಿತ ಶ್ರೀ ಜನವರಿ ವೈ. ಮಕಾಂಬಾ, ತಾಂಜೇನಿಯಾದ ವಿದೇಶಾಂಗ ವ್ಯವಹಾರಗಳು ಮತ್ತು ಪೂರ್ವ ಆಫ್ರಿಕಾದ ಸಹಕಾರ ಸಚಿವರು |
ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
ಭಾರತ ಗಣರಾಜ್ಯದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಬರುವ ʻಜವಾಹರಲಾಲ್ ನೆಹರು ಬಂದರು ಪ್ರಾಧಿಕಾರʼ ಮತ್ತು ತಾಂಜೇನಿಯಾ ಸಂಯುಕ್ತ ಗಣರಾಜ್ಯದ ʻತಾಂಜೇನಿಯಾ ಹೂಡಿಕೆ ಕೇಂದ್ರʼದ ನಡುವೆ ತಾಂಜೇನಿಯಾದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗಾಗಿ ಒಪ್ಪಂದ |
ಗೌರವಾನ್ವಿತ ಪ್ರೊ. ಕಿಟಿಲಾ ಎ. ಕುಂಬೊ, ತಾಂಜೇನಿಯಾದ ಯೋಜನೆ ಮತ್ತು ಹೂಡಿಕೆ ರಾಜ್ಯ ಸಚಿವರು |
ಡಾ. ಎಸ್. ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು |
|
ಕಡಲ ಉದ್ಯಮದಲ್ಲಿ ಸಹಕಾರಕ್ಕಾಗಿ ʻಕೊಚ್ಚಿನ್ ಶಿಪ್ ಯಾರ್ಡ್ ಲಿಮಿಟೆಡ್ʼ ಮತ್ತು ʻಮೆರೈನ್ ಸರ್ವೀಸಸ್ ಕಂಪನಿ ಲಿಮಿಟೆಡ್ʼ ನಡುವೆ ಒಡಂಬಡಿಕೆ |
ಶ್ರೀಮತಿ ಅನಿಸಾ ಕೆ. ಎಂಬೆಗಾ, ಭಾರತದಲ್ಲಿನ ತಾಂಜೇನಿಯಾದ ಹೈಕಮಿಷನರ್ |
ಶ್ರೀ ಬಿನಯ ಶ್ರೀಕಂಠ ಪ್ರಧಾನ್, ತಾಂಜೇನಿಯಾದಲ್ಲಿನ ಭಾರತದ ಹೈಕಮಿಷನರ್ |