ಕ್ರ.ಸಂ.

ತಿಳುವಳಿಕೆ ಒಪ್ಪಂದ/ ಒಪ್ಪಂದಗಳ ಹೆಸರು

ಉದ್ದೇಶಗಳು

1

2024 ರಿಂದ 2029 ರವರೆಗಿನ ರಷ್ಯಾದ ದೂರಪ್ರಾಚ್ಯದಲ್ಲಿ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರದ ಕಾರ್ಯಕ್ರಮ ಮತ್ತು ರಷ್ಯಾದ ಒಕ್ಕೂಟದ ಆರ್ಕ್ಟಿಕ್ ವಲಯದಲ್ಲಿ ಸಹಕಾರ ತತ್ವಗಳು

ರಷ್ಯಾದ ದೂರಪ್ರಾಚ್ಯ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಜಂಟಿ ಹೂಡಿಕೆ ಯೋಜನೆಗಳಲ್ಲಿ ಮತ್ತಷ್ಟು ಹೆಚ್ಚಳಕ್ಕೆ ಅನುಕೂಲ ಕಲ್ಪಿಸುವುದು.

2

ಹವಾಮಾನ ಬದಲಾವಣೆ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಯ ವಿಷಯಗಳ ಕುರಿತು ಭಾರತ ಗಣರಾಜ್ಯದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ರಷ್ಯಾ ಒಕ್ಕೂಟದ ಆರ್ಥಿಕ ಅಭಿವೃದ್ಧಿ ಸಚಿವಾಲಯದ ನಡುವಿನ ತಿಳುವಳಿಕೆ ಒಪ್ಪಂದ

ಹವಾಮಾನ ಬದಲಾವಣೆ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಯ ವಿಷಯಗಳ ಕುರಿತು ಜಂಟಿ ಕಾರ್ಯಕಾರಿ ಗುಂಪಿನ ಸ್ಥಾಪನೆ.

ಕಡಿಮೆ-ವೆಚ್ಚದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮಾಹಿತಿ / ಉತ್ತಮ ಅಭ್ಯಾಸಗಳ ವಿನಿಮಯ ಮತ್ತು ಸಹಯೋಗದ ಸಂಶೋಧನೆ.

3

ರಷ್ಯಾ ಒಕ್ಕೂಟದ ರಾಜ್ಯ ನೋಂದಣಿ, ಕ್ಯಾಡಾಸ್ಟ್ರೆ (ಪಹಣಿ) ಮತ್ತು ಕಾರ್ಟೋಗ್ರಫಿ (ನಕ್ಷಾ ಶಾಸ್ತ್ರ) ಯಲ್ಲಿ ಸರ್ವೆ ಆಫ್ ಇಂಡಿಯಾ ಮತ್ತು ಫೆಡರಲ್ ಸೇವೆಯ ನಡುವಿನ ತಿಳುವಳಿಕೆ ಒಪ್ಪಂದ

ಜಿಯೋಡೆಸಿ (ಮಾಪನ ವಿಜ್ಞಾನ), ಕಾರ್ಟೋಗ್ರಫಿ (ನಕ್ಷಾ ಶಾಸ್ತ್ರ) ಮತ್ತು ಪ್ರಾದೇಶಿಕ ಡೇಟಾ ಮೂಲಸೌಕರ್ಯದಲ್ಲಿ ಜ್ಞಾನ ಮತ್ತು ಅನುಭವದ ವಿನಿಮಯ; ವೃತ್ತಿಪರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ; ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರ.

4

ಧ್ರುವ ಮತ್ತು ಸಾಗರ ಸಂಶೋಧನೆಗಾಗಿ ರಾಷ್ಟ್ರೀಯ ಕೇಂದ್ರ, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರ ಮತ್ತು ಆರ್ಕ್ಟಿಕ್ ಮತ್ತು ಅಂಟಾರ್ಕ್ಟಿಕ್ ಸಂಶೋಧನಾ ಸಂಸ್ಥೆ ನಡುವೆ ಧ್ರುವ ಪ್ರದೇಶಗಳಲ್ಲಿ ಸಂಶೋಧನೆ ಮತ್ತು ಲಾಜಿಸ್ಟಿಕ್ಸ್ ಸಹಕಾರ

ಸಂಪನ್ಮೂಲಗಳು ಮತ್ತು ಡೇಟಾವನ್ನು ಹಂಚಿಕೊಳ್ಳುವ ಮೂಲಕ ಧ್ರುವ ಪರಿಸರಗಳು ಮತ್ತು ಅವುಗಳ ವ್ಯತ್ಯಾಸದ ಅಧ್ಯಯನದಲ್ಲಿ ಸಹಕಾರ; ಧ್ರುವ ಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್; ಜಂಟಿ ಸಂಶೋಧನೆ; ಸಿಬ್ಬಂದಿ ವಿನಿಮಯ; ಮತ್ತು ಧ್ರುವ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಭಾಗವಹಿಸುವಿಕೆ.

5

ಭಾರತದ ಪ್ರಸಾರ ಭಾರತಿ ಮತ್ತು ANO "TV-Novosti" (ರಷ್ಯಾ ಟುಡೆ ಟಿವಿ ಚಾನೆಲ್), ರಷ್ಯಾ ನಡುವಿನ ಪ್ರಸಾರದಲ್ಲಿ ಸಹಕಾರ ಮತ್ತು ಸಹಯೋಗದ ಕುರಿತು ತಿಳುವಳಿಕೆ ಒಪ್ಪಂದ

ಕಾರ್ಯಕ್ರಮಗಳ ವಿನಿಮಯ, ಸಿಬ್ಬಂದಿ ಮತ್ತು ತರಬೇತಿ ಸೇರಿದಂತೆ ಪ್ರಸಾರ ಕ್ಷೇತ್ರದಲ್ಲಿ ಸಹಕಾರ.

6

ಭಾರತೀಯ ಔಷಧೀಯ ಆಯೋಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಮತ್ತು ರಷ್ಯಾ ಒಕ್ಕೂಟದ ಆರೋಗ್ಯ ಸಚಿವಾಲಯದ ಫೆಡರಲ್ ರಾಜ್ಯ ಬಜೆಟ್ ಸಂಸ್ಥೆ "ಔಷಧಿ ಉತ್ಪನ್ನಗಳ ತಜ್ಞರ ಮೌಲ್ಯಮಾಪನದ ವೈಜ್ಞಾನಿಕ ಕೇಂದ್ರ" ನಡುವಿನ ತಿಳುವಳಿಕೆ ಒಪ್ಪಂದ

ಮಾಹಿತಿ ವಿನಿಮಯ ಮತ್ತು ಸಾಮರ್ಥ್ಯ ನಿರ್ಮಾಣದ ಮೂಲಕ ಮಾನವ ಬಳಕೆಗೆ ಉತ್ತಮ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.

7

ರಷ್ಯಾ ಒಕ್ಕೂಟದ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯಲ್ಲಿ ಭಾರತೀಯ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಅಂತಾರಾಷ್ಟ್ರೀಯ ವಾಣಿಜ್ಯ ಮಧ್ಯಸ್ಥಿಕೆ ನ್ಯಾಯಾಲಯದ ನಡುವಿನ ಸಹಕಾರ ಒಪ್ಪಂದ

ವಾಣಿಜ್ಯ ಸ್ವರೂಪದ ನಾಗರಿಕ ಕಾನೂನು ವಿವಾದಗಳ ಇತ್ಯರ್ಥಕ್ಕೆ ಅನುಕೂಲ ಕಲ್ಪಿಸುವುದು

8

ಇನ್ವೆಸ್ಟ್ ಇಂಡಿಯಾ ಮತ್ತು ಜೆ ಎಸ್‌ ಸಿ "ರಷ್ಯನ್ ನೇರ ಹೂಡಿಕೆ ನಿಧಿಯ ಮ್ಯಾನೇಜ್ಮೆಂಟ್ ಕಂಪನಿ" ನಡುವಿನ ಜಂಟಿ ಹೂಡಿಕೆ ಉತ್ತೇಜನಾ ಚೌಕಟ್ಟಿನ ಒಪ್ಪಂದ

ಹೂಡಿಕೆ ಸಹಕಾರವನ್ನು ಉತ್ತೇಜಿಸುವ ಮತ್ತು ಬೆಳೆಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ರಷ್ಯಾದ ಕಂಪನಿಗಳಿಂದ ಹೂಡಿಕೆಗೆ ಅನುಕೂಲ ಕಲ್ಪಿಸುವುದು

9

ಭಾರತದ ವ್ಯಾಪಾರ ಉತ್ತೇಜನಾ ಮಂಡಳಿ ಮತ್ತು ಆಲ್ ರಷ್ಯಾ ಸಾರ್ವಜನಿಕ ಸಂಸ್ಥೆ "ಬಿಸಿನೆಸ್ ರಷ್ಯಾ" ನಡುವಿನ ತಿಳುವಳಿಕೆ ಒಪ್ಪಂದ

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಉತ್ತೇಜನ, B2B ಸಭೆಗಳನ್ನು ಆಯೋಜಿಸುವುದು, ವ್ಯಾಪಾರ ಪ್ರೋತ್ಸಾಹ ಕಾರ್ಯಕ್ರಮಗಳು ಮತ್ತು ವ್ಯಾಪಾರ ನಿಯೋಗಗಳ ವಿನಿಮಯ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s retail inflation eases to 7-month low of 3.61% in February

Media Coverage

India’s retail inflation eases to 7-month low of 3.61% in February
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮಾರ್ಚ್ 2025
March 12, 2025

Appreciation for PM Modi’s Reforms Powering India’s Global Rise