ಕ್ರ.ಸಂ. |
ದಸ್ತಾವೇಜಿನ ಹೆಸರು |
ಭಾರತದ ಪರ ಅಂಕಿತ ಹಾಕಿದವರು |
ಕೊರಿಯಾಪರ ಅಂಕಿತ ಹಾಕಿದವರು |
ಉದ್ದೇಶಗಳು |
1 |
ಮೇಲ್ದರ್ಜೆಗೇರಿಸಲಾದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಆರಂಭಿಕ ಹಾರ್ವೆಸ್ಟ್ ಪ್ಯಾಕೇಜ್ ಕುರಿತ ಜಂಟಿ ಹೇಳಿಕೆ (ಸಿಇಪಿಎ) |
ಶ್ರೀ ಸುರೇಶ್ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಭಾರತ |
ಕೊರಿಯಾ ಗಣರಾಜ್ಯದ ವಾಣಿಜ್ಯ, ಕೈಗಾರಿಕೆ ಮತ್ತು ಇಂಧನ ಖಾತೆಯ ಘನತೆವೆತ್ತ ಸಚಿವರಾದ ಕಿಮ್ ಹ್ಯುನ್ -ಚೋಂಗ್ |
ವ್ಯಾಪಾರ-ಉದಾರೀಕರಣಕ್ಕಾಗಿ (ಸೀಗಡಿ,ಮೃದ್ವಂಗಿಗಳು ಮತ್ತು ಸಂಸ್ಕರಿಸಿದ ಮೀನುಗಳು ಸೇರಿದಂತೆ) ಪ್ರಮುಖ ಕ್ಷೇತ್ರಗಳನ್ನು ಗುರುತಿಸುವ ಮೂಲಕ ಭಾರತ-ಕೊರಿಯಾ ಗಣರಾಜ್ಯದ ನಡುವೆ ನಡೆಯುತ್ತಿರುವ ಮಾತುಕತೆ ಸಿಇಪಿಎ ಅನ್ನು ನವೀಕರಿಸಲು ಅನುವು ಮಾಡಿಕೊಡಲು |
2 |
ವ್ಯಾಪಾರ ಪರಿಹಾರ ಕುರಿತ ಎಂ.ಓ.ಯು. |
ಶ್ರೀ ಸುರೇಶ್ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಭಾರತ |
ವಾಣಿಜ್ಯ, ಕೈಗಾರಿಕೆ ಮತ್ತು ಇಂಧನ ಖಾತೆಯ ಘನತೆವೆತ್ತ ಸಚಿವರಾದ ಕಿಮ್ ಹ್ಯುನ್ -ಚೋಂಗ್ |
ಸರ್ಕಾರಿ ಅಧಿಕಾರಿಗಳು ಮತ್ತು ಕ್ಷೇತ್ರದ ಪರಿಣತರನ್ನೊಳಗೊಂಡ ಸಹಕಾರ ಸಮಿತಿ ಸ್ಥಾಪಿಸಿ ಅವುಗಳೊಂದಿಗೆ ಸಮಾಲೋಚನೆ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ತ್ಯಾಜ್ಯಸುರಿಯುವುದಕ್ಕೆ ತಡೆ, ಸಹಾಯಧನ, ಎದುರಾಳಿಗಳ ನಿಗ್ರಹ ಮತ್ತು ಸುರಕ್ಷತೆಯ ಕ್ರಮಗಳು ಸೇರಿ ವಾಣಿಜ್ಯ ಪರಿಹಾರ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ. |
3 |
ಭವಿಷ್ಯದ ಕಾರ್ಯತಂತ್ರ ಗುಂಪಿನ ಕುರಿತ ಎಂ.ಓ.ಯು. |
ಶ್ರೀ ಸುರೇಶ್ ಪ್ರಭು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು, ಭಾರತ ಮತ್ತು ಡಾ. ಹರ್ಷವರ್ಧನ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಭಾರತ |
ಕೊರಿಯಾ ಗಣರಾಜ್ಯದ ವಾಣಿಜ್ಯ, ಕೈಗಾರಿಕೆ ಮತ್ತು ಇಂಧನ ಖಾತೆಯ ಘನತೆವೆತ್ತ ಸಚಿವರಾದ ಕಿಮ್ ಹ್ಯುನ್ –ಚೋಂಗ್ ಹಾಗೂ ಶ್ರೀ ಯೂ ಯುಂಗ್ ಮಿನ್ ಕೊರಿಯಾ ಗಣರಾಜ್ಯದ ವಿಜ್ಞಾನ ಮತ್ತು ಐಸಿಟಿ ಸಚಿವರು. |
4ನೇ ಕೈಗಾರಿಕಾ ಕ್ರಾಂತಿಯ ಪ್ರಯೋಜನ ಪಡೆದುಕೊಳ್ಳಲು ವಾಣಿಜ್ಯೀಕರಣಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನದ ಅಭಿವೃದ್ಧಿ ಸಹಕಾರಕ್ಕಾಗಿ. ಈ ಕ್ಷೇತ್ರಗಳಲ್ಲಿ ವೃದ್ಧರಿಗೆ ಮತ್ತು ದಿವ್ಯಾಂಗರಿಗೆ ಇಂಟರ್ನೆಟ್ ಆಫ್ ಥಿಂಗ್ಸ್ (ಐಓಟಿ), ಕೃತಕ ಬುದ್ಧಿಮತ್ತೆ (ಎ.ಐ.), ಬೃಹತ್ ದತ್ತಾಂಶ, ಸ್ಮಾರ್ಟ್ ಕಾರ್ಖಾನೆ, 3 ಮುದ್ರಣ, ಎಲೆಕ್ಟ್ರಿಕ್ ವಾಹನ, ಮುಂದುವರಿದ ಸಲಕರಣೆ ಮತ್ತು ಕೈಗೆಟಕುವ ದರದ ಆರೋಗ್ಯ ಆರೈಕೆಯೂ ಸೇರಿದೆ. |
4 |
2018-2022ರ ಅವಧಿಗಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ |
ಶ್ರೀ ರಾಘವೇಂದ್ರ ಸಿಂಗ್, ಕಾರ್ಯದರ್ಶಿ, ಸಂಸ್ಕೃತಿ ಸಚಿವಾಲಯ, |
ಭಾರತದಲ್ಲಿನ ಕೊರಿಯಾ ಗಣರಾಜ್ಯದ ರಾಯಭಾರಿ ಘನತೆವೆತ್ತ ಶಿನ್ ಬಾಂಗ್ ಕಿಲ್ |
ಸಂಗೀತ ಮತ್ತು ನೃತ್ಯ, ರಂಗಭೂಮಿ, ಕಲಾ ಪ್ರದರ್ಶನ, ಪುರಾತತ್ವ ದಾಖಲೀಕರಣ, ಮಾನವಶಾಸ್ತ್ರ, ಸಮೂಹ ಮಾಧ್ಯಮ ಕಾರ್ಯಕ್ರಮ ಮತ್ತು ವಸ್ತುಸಂಗ್ರಹಾಲಯ ಪ್ರದರ್ಶನ ಕ್ಷೇತ್ರದಲ್ಲಿನ ಸಾಂಸ್ಥೀಕೃತ ಸಹಕಾರಕ್ಕಾಗಿ ಜನರೊಂದಿಗಿನ ಬಾಂಧವ್ಯ ಮತ್ತು ಸಂಸ್ಕೃತಿಯನ್ನು ಆಳಗೊಳಿಸಲು. |
5 |
ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನಾ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್.ಐ.ಆರ್.) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಯ ರಾಷ್ಟ್ರೀಯ ಮಂಡಳಿ (ಎನ್.ಎಸ್.ಟಿ.) ನಡುವೆ ಎಂ.ಓ.ಯು. |
ಡಾ. ಗಿರೀಶ್ ಸಾಹ್ನಿ, ಡಿ.ಜಿ., ಸಿ.ಎಸ್.ಐ.ಆರ್. |
ಡಾ. ವೂನ್ ಕ್ವಾಂಗ್ ಯುನ್, ಅಧ್ಯಕ್ಷರು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಮಂಡಳಿ, (ಎನ್.ಎಸ್.ಟಿ.) |
ಕೈಗೆಟಕುವ ದರದ ಜಲ ಶುದ್ಧೀಕರಣ ತಂತ್ರಜ್ಞಾನ, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ, ಹೊಸ/ಪರ್ಯಾಯ ವಸ್ತುಗಳು, ಸಾಂಪ್ರದಾಯಿಕ ಮತ್ತು ಪುರಾತನ ವೈದ್ಯ ಮತ್ತು ತಂತ್ರಜ್ಞಾನ ಪ್ಯಾಕೇಜಿಂಗ್ ಹಾಗೂ ವಾಣಿಜ್ಯೀಕರಣ ಸೇರಿದಂತೆವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರಗಳ ಸಂಶೋಧನೆಯ ಸಹಕಾರಕ್ಕಾಗಿ. |
6 |
ಸಂಶೋಧನೆ ವಿನ್ಯಾಸ ಮತ್ತು ಗುಣಮಟ್ಟಗಳ ಸಂಸ್ಥೆ (ಆರ್.ಡಿ.ಎಸ್.ಓ.) ಮತ್ತು ಕೊರಿಯಾದ ರೈಲು ರಸ್ತೆ ಸಂಶೋಧನಾ ಸಂಸ್ಥೆ (ಕೆ.ಆರ್.ಆರ್.ಐ.) ನಡುವೆ ಸಹಕಾರಕ್ಕಾಗಿ ಎಂ.ಓ.ಯು.
|
ಶ್ರೀ ಎಂ. ಹುಸೇನ್, ಡಿ.ಜಿ., ಆರ್.ಡಿ.ಎಸ್.ಓ. |
ಶ್ರೀ. ನಾ ಹೀ –ಸ್ಯುಂಗ್, ಅಧ್ಯಕ್ಷರು, ಕೆ.ಆರ್.ಆರ್.ಐ. |
ರೈಲ್ವೆ ಸಂಶೋಧನೆ, ರೈಲ್ವೆ ಕುರಿತ ಅನುಭವಗಳ ವಿನಿಮಯ ಮತ್ತು ರೈಲ್ವೆ ಕೈಗಾರಿಕೆಯ ಅಭಿವೃದ್ಧಿಗಾಗಿ ಸಹಕಾರ. ಎರಡೂ ಕಡೆಯವರು ಭಾರತದಲ್ಲಿ ಮುಂದುವರಿದ ರೈಲ್ವೆ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯವಸ್ಥೆ ಸ್ಥಾಪಿಸುವುದೂ ಸೇರಿದಂತೆ ಜಂಟಿ ಸಂಶೋಧನಾ ಯೋಜನೆಗಳ ಅನುಷ್ಠಾನ ಮತ್ತು ಯೋಜನೆಯ ಅನ್ವೇಷಣೆ ಮಾಡಲಿವೆ. |
7 |
ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಆರ್ಥಶಾಸ್ತ್ರ ಕ್ಷೇತ್ರದ ಸಹಕಾರ ಕುರಿತ ಎಂ.ಓ.ಯು. |
ಡಾ. ಹರ್ಷವರ್ಧನ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಭಾರತ |
ಶ್ರೀ ಯು ಯುಂಗ್ ಮಿನ್, ಕೊರಿಯಾ ಗಣರಾಜ್ಯದ ವಿಜ್ಞಾನ ಮತ್ತು ಐಸಿಟಿ ಸಚಿವರು. |
ಜೈವಿಕ ತಂತ್ರಜ್ಞಾನ ಮತ್ತು ಜೈವಿಕ ಬೃಹತ್ ದತ್ತಾಂಶವನ್ನು ಆರೋಗ್ಯ, ವೈದ್ಯಕೀಯ, ಕೃಷಿ, ಮೀನುಗಾರಿಕೆ ಉತ್ಪನ್ನಗಳು, ಡಿಜಿಟಲ್ ಆರೋಗ್ಯ ಆರೈಕೆ,ನಿಖರ ಔಷಧ,ಮಿದುಳಿನ ಸಂಶೋಧನೆ,ಮತ್ತು ಮುಂದಿನ ಪೀಳಿಗೆಯ-ವೈದ್ಯಕೀಯ ಉಪಕರಣಗಳಲ್ಲಿ ಅಳವಡಿಸಿಕೊಳ್ಳುವ ಸಹಕಾರಕ್ಕಾಗಿ. |
8 |
ಐ.ಸಿ.ಟಿ. ಮತ್ತು ದೂರಸಂಪರ್ಕ ಕ್ಷೇತ್ರದ ಸಹಕಾರ ಕುರಿತ ಎಂ.ಓ.ಯು. |
ಶ್ರೀ ಮನೋಜ್ ಸಿನ್ಹಾ, ದೂರ ಸಂಪರ್ಕ ಖಾತೆ ರಾಜ್ಯ ಸಚಿವರು, ಭಾರತ |
ಶ್ರೀ ಯು ಯುಂಗ್ ಮಿನ್, ಕೊರಿಯಾ ಗಣರಾಜ್ಯದ ವಿಜ್ಞಾನ ಮತ್ತು ಐಸಿಟಿ ಸಚಿವರು. |
ದೂರಸಂಪರ್ಕ/ಐ.ಸಿ.ಟಿ. ಸೇವೆಗಳಮತ್ತು ಮುಂದಿನ ಪೀಳಿಗೆಯ ನಿಸ್ತಂತು ಸಂಪರ್ಕ ಜಾಲ ಅಂದರೆ 5ಜಿ, ಕ್ಲೌಡ್ ಕಂಪ್ಯೂಟಿಂಗ್, ಬೃಹತ್ ದತ್ತಾಂಶ, ಐಓಟಿ, ಎಐ ಮತ್ತು ಅವುಗಳ ಸೇವೆಯಲ್ಲಿನ ಆನ್ವಯಿಕಗಳು, ವಿಪತ್ತು ನಿರ್ವಹಣೆ, ತುರ್ತು ಸ್ಪಂದನೆ ಮತ್ತು ಸೈಬರ್ ಸುರಕ್ಷತೆಯಅಭಿವೃದ್ಧಿ, ಆಧುನೀಕರಣ ಮತ್ತು ಅತ್ಯಾಧುವಿಕತೆಯ ಸಹಕಾರಕ್ಕಾಗಿ. |
9 |
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಆರ್.ಓ.ಕೆ. (ನೋಡಲ್ ಸಂಸ್ಥೆಗಳು:ಎನ್.ಎಸ್.ಐ.ಸಿ. – ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ) ಮತ್ತು (ಆರ್.ಓ.ಕೆ.ಯ ಸಣ್ಣ ಮತ್ತು ಮಧ್ಯಮ ವಾಣಿಜ್ಯ ನಿಗಮ –ಸಿಬಿಸಿ) ನಡುವೆ ಎಂ.ಓ.ಯು. |
ಶ್ರೀ ರವೀಂದ್ರ ನಾಥ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ (ಎನ್.ಎಸ್.ಐ.ಸಿ.) |
ಶ್ರೀ ಲೀ ಸಾಂಗ್ ಜಿಕ್, ಅಧ್ಯಕ್ಷರು, ಸಣ್ಣ ಮತ್ತು ಮಧ್ಯಮ ವಾಣಿಜ್ಯ ನಿಗಮ |
ಎರಡೂ ದೇಶಗಳಲ್ಲಿಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಅವುಗಳ ಸ್ಪರ್ಧಾತ್ಮಕತೆಅಭಿವೃದ್ಧಿಯ ಸಹಕಾರಕ್ಕಾಗಿ. ಭಾರತ –ಕೊರಿಯಾ ಗಣರಾಜ್ಯ ತಂತ್ರಜ್ಞಾನ ವಿನಿಮಯ ಕೇಂದ್ರ ಸ್ಥಾಪನೆಯ ಸಾಧ್ಯತೆಯನ್ನೂ ಎರಡೂ ದೇಶಗಳು ಅನ್ವೇಷಿಸಲಿವೆ. |
10 |
ಗುಜರಾತ್ ಸರ್ಕಾರ ಮತ್ತು ಕೊರಿಯಾ ವಾಣಿಜ್ಯ ಉತ್ತೇಜನ ಸಂಸ್ಥೆ (ಕೆ.ಓ.ಟಿ.ಆರ್.ಎ.) ನಡುವೆ ಎಂ.ಓ.ಯು. |
ಶ್ರೀ ಎಂ.ಕೆ. ದಾಸ್, ಪ್ರಧಾನ ಕಾರ್ಯದರ್ಶಿ, ಕೈಗಾರಿಕೆ ಮತ್ತು ಗಣಿ, ಗುಜರಾತ್ ಸರ್ಕಾರ. |
ಶ್ರೀ ಕ್ವಾನ್ ಪಿಯಾಂಗ್ ವೋ, ಅಧ್ಯಕ್ಷ ಮತ್ತು ಸಿಇಓ, ಕೊರಿಯಾ ವಾಣಿಜ್ಯ ಹೂಡಿಕೆ ಉತ್ತೇಜನ ಸಂಸ್ಥೆ |
ನಗರ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಕೃಷಿ ಸಂಬಂಧಿತ ಕೈಗಾರಿಕೆಗಳು, ನವೋದ್ಯಮ ಪರಿಸರ ವ್ಯವಸ್ಥೆ, ಕೌಶಲ ತರಬೇತಿ ಮತ್ತು ಅಭಿವೃದ್ಧಿ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಹಕಾರದ ಮೂಲಕ ದಕ್ಷಿಣ ಕೊರಿಯಾ ಕಂಪನಿಗಳು ಮತ್ತು ಗುಜರಾತ್ ರಾಜ್ಯ ಸರ್ಕಾರದ ನಡುವೆ ಕೈಗಾರಿಕೆ ಮತ್ತು ಹೂಡಿಕೆ ಬಾಂಧವ್ಯ ವರ್ಧನೆಗಾಗಿ. ಕೆ.ಓ.ಟಿ.ಆರ್.ಎ. ಅಹ್ಮದಾಬಾದ್ ನಲ್ಲಿ ಒಂದು ಕಚೇರಿ ತೆರೆಯಲಿದ್ದು, ವೈಬರೆಂಟ್ ಗುಜರಾತ್ ಜಾಗತಿಕ ಮೇಳ 2019ರ ಪ್ರಮುಖ ಪಾಲುದಾರ ಸಂಘಟನೆಯಾಗಲಿದೆ. |
11 |
ರಾಣಿ ಸುರಿರತ್ನಾ ಸ್ಮಾರಕ ಯೋಜನೆಗೆ ಸಂಬಂಧಿಸಿದಂತೆ ಎಂ.ಓ.ಯು. |
ಶ್ರೀ ಅವ್ನೀಶ್ ಕುಮಾರ್ ಅವಸ್ತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು, ಪ್ರವಾಸೋದ್ಯಮದ ಡಿಜಿ ಉತ್ತರ ಪ್ರದೇಶ ಸರ್ಕಾರ. . |
ಭಾರತದಲ್ಲಿನ ಕೊರಿಯಾ ಗಣರಾಜ್ಯದ ರಾಯಭಾರಿ ಘನತೆವೆತ್ತ ಶಿನ್ ಬಾಂಗ್ ಕಿಲ್ |
ಕ್ರಿ.ಶ.48ರಲ್ಲಿ ಕೊರಿಯಾಗೆ ಹೋಗಿ ದೊರೆ ಕಿಮ್ ಸುರೋರನ್ನು ಮದುವೆಯಾದ ಅಯೋಧ್ಯೆಯ ಶ್ರೇಷ್ಠ ರಾಜಕುಮಾರಿ ಸುರಿರತ್ನ (ರಾಣಿ ಹುರ್ ಹ್ವಾಂಗ್ –ಓಕೆ)ರ ಹಾಲಿ ಇರುವ ಸ್ಮಾರಕ ಮೇಲ್ದರ್ಜೆಗೇರಿಸಲು ಅನುವು ಮಾಡಿಕೊಡಲು. ದೊಡ್ಡ ಸಂಖ್ಯೆಯ ಕೊರಿಯನ್ನರು ತಾವು ಈ ರಾಜಕುಮಾರಿಯ ಸಂತತಿಯವರೆಂದು ಗುರುತಿಸಿಕೊಳ್ಳುತ್ತಾರೆ. ಹೊಸ ಸ್ಮಾರಕವು ಭಾರತ ಮತ್ತು ಕೊರಿಯಾ ಗಣರಾಜ್ಯದ ದೀರ್ಘಕಾಲೀನ ಸ್ನೇಹ ಸಂಬಂಧ ಮತ್ತು ಹಂಚಿಕೆಯ ಸಾಂಸ್ಕೃತಿಕ ಪರಂಪರೆಯಗೌರವದ ಸಂಕೇತವಾಗಲಿದೆ. |