ಭಾರತ ಮತ್ತು ಸ್ವೀಡನ್ ನಡುವಿನ ಎಂ.ಓ.ಯು.ಗಳು/ಒಪ್ಪಂದಗಳು
- ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ಉದ್ಯಮಶೀಲತೆ ಮತ್ತು ನಾವಿನ್ಯತೆ ಸಚಿವಾಲಯಗಳ ನಡುವೆಸುಸ್ಥಿರ ಭವಿಷ್ಯ ಕುರಿತಂತೆ ಭಾರತ – ಸ್ವೀಡನ್ ನಾವಿನ್ಯತೆಯ ಪಾಲುದಾರಿಕೆಯ ಜಂಟಿ ಘೋಷಣೆ.
ಭಾರತ ಮತ್ತು ಡೆನ್ಮಾರ್ಕ್ ನಡುವೆ ಎಂ.ಓ.ಯುಗಳು/ ಒಪ್ಪಂದಗಳು
- ಭಾರತದ ವಸತಿ ಮತ್ತು ನಗರ ವ್ಯವಹಾರಗಳಸಚಿವಾಲಯ ಮತ್ತು ಡೆನ್ಮಾರ್ಕ್ ನ ಕೈಗಾರಿಕೆ, ವಾಣಿಜ್ಯ ಮತ್ತು ಹಣಕಾಸು ವ್ಯವಹಾರಗಳ ಸಚಿವಾಲಯದ ನಡುವೆ ಸುಸ್ಥಿರ ಸ್ಮಾರ್ಟ್ ನಗರಾಭಿವೃದ್ಧಿ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ.
- ಪಶು ಸಂಗೋಪನೆ ಮತ್ತು ಹೈನುಗಾರಿಕೆ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಡ್ಯಾನಿಶ್ ಪಶು ಮತ್ತು ಆಹಾರ ಆಡಳಿತ, ಡೆನ್ಮಾರ್ಕ್ ನ ಪರಿಸರ ಮತ್ತು ಆಹಾರ ಸಚಿವಾಲಯದ ನಡುವೆ ತಿಳಿವಳಿಕೆ ಒಪ್ಪಂದ.
- ಆಹಾರ ಭದ್ರತೆ ಸಹಕಾರಕ್ಕಾಗಿ ಭಾರತದ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತು ಡ್ಯಾನಿಷ್ ಪಶು ಮತ್ತ ಆಹಾರ ಆಡಳಿತದ ನಡುವೆ ತಿಳಿವಳಿಕೆ ಒಪ್ಪಂದ.
- ಕೃಷಿ ಸಂಶೋಧನೆ ಮತ್ತು ಶಿಕ್ಷಣದ ಸಹಕಾರಕ್ಕಾಗಿ ಭಾರತೀಯ ಕೃಷಿ ಸಂಶೋಧನೆ ಮಂಡಳಿ ಮತ್ತು ಕೋಪೆನ್ ಹೇಗನ್ ವಿಶ್ವವಿದ್ಯಾಲಯ, ವಿಜ್ಞಾನ ಭೋಧನೆ, ಡೆನ್ಮಾರ್ಕ್ ನಡುವೆ ತಿಳಿವಳಿಕೆ ಒಪ್ಪಂದ.
ಭಾರತ ಮತ್ತು ಐಸ್ ಲ್ಯಾಂಡ್ ನಡುವೆ ಎಂ.ಓ.ಯುಗಳು/ ಒಪ್ಪಂದಗಳು
• ಹಿಂದಿ ಭಾಷೆಯ ಐಸಿಸಿಆರ್ ಪೀಠ ಸ್ಥಾಪನೆಗೆ ಭಾರತೀಯ ಸಾಂಸ್ಕೃತಿಕ ಬಾಂಧವ್ಯ ಮಂಡಳಿ ಮತ್ತು ಐಸ್ ಲ್ಯಾಂಡ್ ವಿಶ್ವವಿದ್ಯಾಲಯದ ನಡುವೆ ತಿಳಿವಳಿಕೆ ಒಪ್ಪಂದ.