QuoteChristmas is the time to remember the invaluable teachings of Jesus Christ: PM Modi during #MannKiBaat
QuoteWe believe in ‘Nishkaam Karma’, which is serving without expecting anything in return. We are the believers in ‘Seva Parmo Dharma’: PM during #MannKiBaat
Quote#MannKiBaat: Guru Gobind Singh ji’s life, filled with courage and sacrifice, is a source of inspiration for all of us, says PM Modi
QuoteIndian democracy welcomes our 21st century 'New India Voters': PM Modi on new age voters during #MannKiBaat
QuoteThe power of vote is the biggest in a democracy. It is the most effective means of bringing positive change in the lives of millions of people: PM during #MannKiBaat
Quote#MannKiBaat: The young voters of 18 to 25 years of age are the ‘New India Youth.’ They are filled with energy and enthusiasm, says PM Modi
QuoteOur vision of a ‘New India’ is one that is free from the menace of casteism, communalism, corruption, filth and poverty: PM Modi during #MannKiBaat
Quote#MannKiBaat: PM Narendra Modi speaks about organising mock parliament in India’s districts to educate new age voters
QuoteLet us welcome the New Year with the smallest happiness and commence the journey from a ‘Positive India’ towards a 'Progressive India': PM Modi during #MannKiBaat
Quote#MannKiBaat: Swachhata Andolan is a clear demonstration of how problems can be changed and solved through public participation, says Prime Minister
Quote#MannKiBaat: PM Modi speaks about Haj, says government has done away with ‘Mehram’ aspect
Quote‘Nari Shakti’ can take India’s development journey to new heights: PM Modi during #MannKiBaat

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ.

ಮನದ ಮಾತಿನ (‘ಮನ್ ಕಿ ಬಾತ್ ’) ಈ ವರ್ಷದ ಕೊನೆಯ ಆವೃತ್ತಿ ಇದಾಗಿದೆ. 2017 ರ ಕೊನೆಯ ದಿನವೂ ಇದಾಗಿರುವುದು ಸಂಯೋಗವೇ ಅಲ್ಲವೇ. ಈ ವರ್ಷಪೂರ್ತಿ ನಾನು ಮತ್ತು ನೀವು ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಮನದ ಮಾತಿಗಾಗಿ ನೀವು ಕಳುಹಿಸಿದಂತಹ ಸಾಕಷ್ಟು ಪತ್ರಗಳು, ಕಾಮೆಂಟ್ಸ್, ವಿಚಾರಗಳ ವಿನಿಮಯ, ಇವೆಲ್ಲ ನನಗಂತೂ ಯಾವತ್ತೂ ಹೊಸ ಶಕ್ತಿಯನ್ನು ತುಂಬಿ ತರುತ್ತವೆ. ಕೆಲ ಗಂಟೆಗಳ ನಂತರ ಈ ಸಂವತ್ಸರ ಬದಲಾಗಿ ಹೋಗುತ್ತದೆ, ಆದರೆ ನಮ್ಮ ಮಾತಿನ ಈ ನಂಟು ಮುಂದೆಯೂ ಹೀಗೆ ಸಾಗುತ್ತಲಿರುತ್ತದೆ. ಮುಂಬರುವ ವರ್ಷದಲ್ಲಿ ನಾವು ಇನ್ನೂ ಹೊಸ ಹೊಸ ವಿಷಯಗಳ ಬಗ್ಗೆ ಮಾತನಾಡೋಣ, ಹೊಸ ಅನುಭವಗಳನ್ನು ಹಂಚಿಕೊಳ್ಳೋಣ. ನಿಮ್ಮೆಲ್ಲರಿಗೂ 2018 ರ ಅನಂತ ಅನಂತ ಶುಭಾಶಯಗಳು.

ಕೆಲ ದಿನಗಳ ಹಿಂದೆ ಡಿಸೆಂಬರ್ 25 ರಂದು ವಿಶ್ವಾದ್ಯಂತ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತದಲ್ಲೂ ಜನರು ಸಾಕಷ್ಟು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸಿದರು. ಕ್ರಿಸ್‍ಮಸ್ ಹಬ್ಬದಂದು ನಾವೆಲ್ಲರೂ ಜೀಸಸ್ ಕ್ರೈಸ್ತರ ಮಹಾನ್ ಬೋಧನೆಯನ್ನು ಸ್ಮರಿಸುತ್ತೇವೆ ಮತ್ತು ಜೀಸಸ್ ಕ್ರೈಸ್ತ ಎಲ್ಲಕ್ಕಿಂತ ಹೆಚ್ಚು ಒತ್ತು ಕೊಟ್ಟಿದ್ದು ಸೇವಾ ಮನೋಭಾವನೆಗೆ. ಸೇವೆಯ ಮನೋಭಾವನೆಯ ಸಾರವನ್ನು ನಾವು ಬೈಬಲ್‍ನಲ್ಲಿ ಕಾಣುತ್ತೇವೆ.

The Son of Man has come, not to be served,

But to serve,

And to give his life, as blessing

to all humankind.

ಇದು ಸೇವೆಯ ಮಹತ್ವವೇನೆಂದು ಸಾರುತ್ತದೆ. ವಿಶ್ವದ ಯಾವುದೇ ಜಾತಿಯಾಗಲಿ, ಧರ್ಮವಾಗಲಿ, ಪರಂಪರೆಯಾಗಲಿ, ವರ್ಣವೇ ಆಗಲಿ, ಆದರೆ ಸೇವಾಭಾವನೆ ಎಂಬುದು ಮಾನವೀಯ ಮೌಲ್ಯಗಳ ಅಮೂಲ್ಯ ಪ್ರತಿರೂಪದಂತಿದೆ.

ನಮ್ಮ ದೇಶದಲ್ಲಿ ನಿಷ್ಕಾಮ ಕರ್ಮದ ವಿಚಾರ ಮಾತನಾಡುತ್ತಾರೆ. ಅಂದರೆ ಯಾವುದೇ ಫಲಾಪೇಕ್ಷೆ ಇರದಂತಹ ಸೇವೆ. ನಮ್ಮಲ್ಲಿ ‘ಸೇವಾ ಪರಮೋ ಧರ್ಮಃ’ ಎಂದು ಹೇಳಲಾಗಿದೆ.

ಅಲ್ಲದೆ ಜೀವಿಗಳ ಸೇವೆಯೇ ಶಿವ ಸೇವೆ ಎಂದು ಹೇಳಲಾಗಿದೆ ಮತ್ತು ಗುರುದೇವ ರಾಮಕೃಷ್ಣ ಪರಮಹಂಸರು ಶಿವ ಭಾವನೆಯಿಂದ ಜೀವಿಗಳ ಸೇವೆಯನ್ನು ಮಾಡಿ ಎಂದು ಹೇಳಿದ್ದಾರೆ ಅಂದರೆ, ಸಂಪೂರ್ಣ ವಿಶ್ವದಲ್ಲಿ ಈ ಮಾನವೀಯ ಮೌಲ್ಯಗಳು ಒಂದೇ ತೆರನಾಗಿವೆ. ಬನ್ನಿ ನಾವೆಲ್ಲರೂ ಮಹಾಪುರುಷರನ್ನು ನೆನೆಯುತ್ತಾ, ಪವಿತ್ರ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮ ಈ ಮಹಾನ್ ಮೌಲ್ಯಗಳ ಪರಂಪರೆಗೆ ನವ ಚೈತನ್ಯ ತುಂಬೋಣ, ಹೊಸ ಶಕ್ತಿ ತುಂಬೋಣ ಮತ್ತು ಸ್ವತಃ ಅದನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡೋಣ.

ನನ್ನ ಪ್ರಿಯ ದೇಶಬಾಂಧವರೇ, ಈ ವರ್ಷ ಗುರು ಗೋವಿಂದ್ ಸಿಂಗ್ ಅವರ 350 ನೇ ಪ್ರಕಾಶ ವರ್ಷವೂ ಆಗಿದೆ. ಗುರು ಗೋವಿಂದ್ ಸಿಂಗ್‍ರ ಸಾಹಸಮಯ ಮತ್ತು ತ್ಯಾಗಭರಿತ ಅಸಾಧಾರಣ ಜೀವನ, ನಮ್ಮೆಲ್ಲರಿಗೂ ಪ್ರೇರಣೆಯ ಸೆಲೆಯಾಗಿದೆ. ಗುರು ಗೋವಿಂದ್ ಸಿಂಗ್‍ರು ಅಮೂಲ್ಯವಾದ ಜೀವನ ಮೌಲ್ಯಗಳನ್ನು ಬೋಧಿಸಿದರು ಮತ್ತು ಅದೇ ಮೌಲ್ಯಗಳ ಆಧಾರದ ಮೇಲೆ ತಮ್ಮ ಜೀವನ ಸವೆಸಿದರು. ಒಬ್ಬ ಗುರು, ಕವಿ, ದಾರ್ಶನಿಕ, ಮಹಾನ್ ಯೋಧರೂ ಆಗಿದ್ದ ಗುರು ಗೋವಿಂದ್ ಸಿಂಗ್‍ರು ಈ ಎಲ್ಲ ಪಾತ್ರಗಳಲ್ಲೂ ಜನರಿಗೆ ಪ್ರೇರಣೆ ನೀಡುವಂಥ ಕೆಲಸ ಮಾಡಿದ್ದಾರೆ. ಅವರು ಅನ್ಯಾಯ ಮತ್ತು ಅನೀತಿ ವಿರುದ್ಧ ಹೋರಾಡಿದರು. ಜನರಿಗೆ ಜಾತಿ ಮತ್ತು ಧರ್ಮದ ಬಂಧನವನ್ನು ತೊಡೆದು ಹಾಕುವಂತೆ ಬೋಧಿಸಿದರು. ಈ ಪ್ರಯತ್ನದಲ್ಲಿ ಅವರಿಗೆ ವ್ಯಕ್ತಿಗತವಾಗಿ ಬಹಳಷ್ಟು ಕಳೆದುಕೊಳ್ಳಬೇಕಾಯಿತು. ಆದರೂ ಅವರು ಎಂದಿಗೂ ದ್ವೇಷದ ಭಾವನೆಯನ್ನು ಬೆಳೆಯಲು ಬಿಡಲಿಲ್ಲ. ಜೀವನದ ಪ್ರತಿ ಕ್ಷಣದಲ್ಲಿಯೂ ಪ್ರೀತಿ, ತ್ಯಾಗ ಮತ್ತು ಶಾಂತಿ ಸಂದೇಶ – ಸಾರಿದರು. ಎಂಥ ಅದ್ಭುತವಾದ ವಿಶೇಷತೆಗಳಿಂದ ಕೂಡಿದ ವ್ಯಕ್ತಿತ್ವ ಅವರದ್ದು? ಈ ವರ್ಷದ ಆರಂಭದಲ್ಲಿ ಪಟನಾಸಾಹಿಬ್‍ನಲ್ಲಿ ಆಯೋಜಿಸಲಾದ ಗುರು ಗೋವಿಂದ್ ಸಿಂಗ್ ಅವರ 350 ನೇ ವರ್ಷದ ಪ್ರಕಾಶ ಉತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರೆತಿರುವುದು ನನ್ನ ಸೌಭಾಗ್ಯವೇ ಸರಿ. ಬನ್ನಿ ನಾವೆಲ್ಲರೂ ಗುರು ಗೋವಿಂದ್ ಸಿಂಗ್ ಅವರ ಮಹಾನ್ ಬೋಧನೆ ಮತ್ತು ಪ್ರೇರಣಾದಾಯಕ ಜೀವನದಿಂದ ಕಲಿಯುತ್ತಾ ಜೀವನ ರೂಪಿಸಿಕೊಳ್ಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಸಂಕಲ್ಪ ಕೈಗೊಳ್ಳೋಣ.

ಜನವರಿ 1 2018 ಅಂದರೆ ನಾಳೆ ನನ್ನ ದೃಷ್ಟಿಯಲ್ಲಿ ಒಂದು ವಿಶೇಷ ದಿನವಾಗಿದೆ. ನಿಮಗೆ ಆಶ್ಚರ್ಯವಾಗಬಹುದು, ಹೊಸ ವರ್ಷ ಬರುತ್ತಲೇ ಇರುತ್ತದೆ, ಜನವರಿ 1 ಸಹ ಪ್ರತಿವರ್ಷವೂ ಬರುತ್ತದೆ, ಆದರೆ ಇಂದು ವಿಶೇಷ ಎಂದು ಹೇಳುತ್ತಿದ್ದೇನೆ ಅಂದ ಮೇಲೆ ನಿಜಕ್ಕೂ ವಿಶೇಷವಾಗಿದೆ. ಯಾರು 2000 ಅಥವಾ ಅದರ ನಂತರ ಜನಿಸಿದ್ದಾರೋ ಅಂದರೆ 21ನೇ ಶತಮಾನದಲ್ಲಿ ಯಾರು ಜನಿಸಿದ್ದಾರೋ ಅವರು 2018 ರ ಜನವರಿ 1 ರಂದು eligible voters ಆಗಲಾರಂಭಿಸುತ್ತಾರೆ. ಭಾರತೀಯ ಗಣತಂತ್ರವು 21ನೇ ಶತಮಾನದ ಮತದಾರರನ್ನು ‘New India Voters’ಗಳನ್ನು ಸ್ವಾಗತಿಸ್ಮತ್ತದೆ. ನಮ್ಮ ಯುವಜನತೆಗೆ ನಾನು ಅಭಿನಂದಿಸುತ್ತೇನೆ ಮತ್ತು ನೀವೆಲ್ಲರೂ ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಎಂದು ಆಗ್ರಹಿಸುತ್ತೇನೆ. ಸಂಪೂರ್ಣ ಹಿಂದುಸ್ತಾನವು ನಿಮ್ಮನ್ನು 21ನೇ ಶತಮಾನದ ಮತದಾರರ ರೂಪದಲ್ಲಿ ಸ್ವಾಗತಿಸಲು ಹಾತೊರೆಯುತ್ತಿದೆ. 21ನೇ ಶತಮಾನದ ಮತದಾರರ ರೂಪದಲ್ಲಿ ನೀವೂ ಗೌರವದ ಅನುಭೂತಿ ಹೊಂದುತ್ತಿರಬಹುದು. ನಿಮ್ಮ ಮತವು ‘New Indiaದ ಆಧಾರವಾಗಲಿದೆ. ಪ್ರಜಾಸತ್ತಾತ್ಮಕತೆಯಲ್ಲಿ ಮತದಾನದ ಶಕ್ತಿ ಬಹುದೊಡ್ಡ ಶಕ್ತಿಯಾಗಿದೆ. ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮತದಾನ ಅತ್ಯಂತ ಪ್ರಭಾವಿ ಸಾಧನವಾಗಿದೆ. ನೀವು ಕೇವಲ ಮತ ನೀಡುವ ಅಧಿಕಾರ ಮಾತ್ರ ಪಡೆಯುತ್ತಿಲ್ಲ, ನೀವು 21 ನೇ ಶತಮಾನದ ಭಾರತ ಹೇಗಿರಬೇಕು? 21 ನೇ ಶತಮಾನದ ಭಾರತದ ನಿಮ್ಮ ಕನಸುಗಳೇನು? ಎನ್ಮ್ನವ ಆಶಯದೊಂದಿಗೆ ನೀವೂ ಭಾರತದ 21 ನೇ ಶತಮಾನದ ನಿರ್ಮಾತೃವಾಗಬಹುದು. ಇದರ ಆರಂಭ ಜನವರಿ 1 ರಿಂದ ವಿಶೇಷವಾಗಿ ಆಗುತ್ತಲಿದೆ. ಇಂದು ನಮ್ಮ ಮನದ ಮಾತಿನಲ್ಲಿ 18 ರಿಂದ 25 ವಯೋಮಾನದ ಶಕ್ತಿಯುತ ಸಂಕಲ್ಪಭರಿತ ನಮ್ಮ ಯಶಸ್ವಿ ಯುವಜನರೊಂದಿಗೆ ಮಾತನಾಡಬಯಸುತ್ತೇನೆ. ನಾನು ಇವರನ್ನು ‘New India Youth’ಎಂದು ಭಾವಿಸುತ್ತೇನೆ. New India Youth ಎಂಬುದರ ಅರ್ಥ – ಹುರುಪು, ಉತ್ಸಾಹ ಮತ್ತು ಶಕ್ತಿ. ನಮ್ಮ ಈ ಶಕ್ತಿಯುತ ಯುವಕರ ಕೌಶಲ್ಯ ಮತ್ತು ಸಾಮಥ್ರ್ಯದಿಂದಲೇ ನಮ್ಮ ‘New India’ಕನಸು ನನಸಾಗಲಿದೆ ಎಂಬುದು ನನ್ನ ವಿಶ್ವಾಸ. ಈಗ ನಾವು ನವಭಾರತದ ಬಗ್ಗೆ ಮಾತನಾಡುತ್ತಿರುವಾಗ ಅದು ಜಾತಿವಾದ, ಸಂಪ್ರದಾಯವಾದ, ಆತಂಕವಾದ, ಭ್ರಷ್ಟಾಚಾರ ಎಂಬ ವಿಷಗಳಿಂದ ಮುಕ್ತವಾಗಿರಬೇಕು. ಮಾಲಿನ್ಯ ಮತ್ತು ಬಡತನ ಮುಕ್ತವಾಗಬೇಕು . ‘New India’ – ದಲ್ಲಿ ಎಲ್ಲರಿಗೆ ಸಮಾನ ಅವಕಾಶಗಳಿರಬೇಕು. ಎಲ್ಲರ ಆಸೆ ಆಕಾಂಕ್ಷೆಗಳು ಕೈಗೂಡಬೇಕು. ನವಭಾರತದಲ್ಲಿ ಶಾಂತಿ, ಒಗ್ಗಟ್ಟು ಮತ್ತು ಸದ್ಭಾವನೆ ನಮ್ಮ ಮಾರ್ಗದರ್ಶಕ ಶಕ್ತಿಯಾಗಿರಬೇಕು.

ನನ್ನ ಈ ‘New India Youth’ ಮುಂದೆ ಬಂದು ನವ ಭಾರತ ನಿರ್ಮಾಣ ಹೇಗಿರಬೇಕೆಂದು ಚಿಂತಿಸಬೇಕು. ತಮಗಾಗಿಯೂ ಅವರು ಒಂದು ದಾರಿಯನ್ನು ಆಯ್ದುಕೊಳ್ಳಲಿ, ತಾವು ಯಾರೊಂದಿಗೆ ಒಡನಾಟದಲ್ಲಿರುವರೋ ಅವರನ್ನು ಈ ಮಾರ್ಗದಲ್ಲಿ ಒಗ್ಗೂಡಿಸಿ ಯಾತ್ರೆ ಮುಂದುವರಿಸಲಿ. ನೀವೂ ಮುಂದುವರಿಯಿರಿ. ದೇಶವೂ ಮುಂದುವರಿಯಲಿ, ನಿಮ್ಮೊಂದಿಗೆ ಈಗ ಮಾತನಾಡುತ್ತಿರುವಾಗ, ನಾವು ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದು mock parliament ಆಯೋಜಿಸಬಹುದೇ? ಎಂಬ ಆಲೋಚನೆ ನನಗೆ ಬರುತ್ತಿದೆ. ಅಲ್ಲಿ ಈ 18 ರಿಂದ 25 ರ ವಯೋಮಾನದ ಯುವಕರು ಜೊತೆಗೂಡಿ New India ಕುರಿತು ಚಿಂತನೆ ನಡೆಸಲಿ, ಹೊಸ ದಾರಿಗಳನ್ನು ಶೋಧಿಸಲಿ, ಯೋಜನೆಗಳನ್ನು ರೂಪಿಸಲಿ. 2022ರ ಮೊದಲೇ ನಾವು ನಮ್ಮ ಸಂಕಲ್ಪಗಳನ್ನು ಹೇಗೆ ಸಿದ್ಧಿಸಿಕೊಳ್ಳಬೇಕು? ನಮ್ಮ ಸ್ವಾತಂತ್ರ್ಯ ಸೇನಾನಿಗಳು ನೋಡಿದಂತಹ ಕನಸುಗಳನ್ನು ನನಸಾಗಿಸುವಂಥ ಬಾರತವನ್ನು ಹೇಗೆ ನಿರ್ಮಾಣ ಮಾಡೋಣ? ಎನ್ನುವ ವಿಚಾರ ಮಂಥನ ನಡೆಯಲಿ. ಮಾಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಆಂದೋಲನವನ್ನು ಜನಾಂದೋಲನವನ್ನಾಗಿಸಿದ್ದರು. ನನ್ನ ಯುವ ಸ್ನೇಹಿತರೇ ಈ 21ನೇ ಶತಮಾನದ ಭವ್ಯ-ದಿವ್ಯ ಭಾರತಕ್ಕಾಗಿ ಒಂದು ಜನಾಂದೋಲನ ಆರಂಭಿಸಬೇಕು ಎಂಬುದು ಕಾಲದ ಬೇಡಿಕೆಯಾಗಿದೆ. ಅದು ವಿಕಾಸದ ಜನಾಂದೋಲನ. ಪ್ರಗತಿಯ ಜನಾಂದೋಲನ. ಸಾಮಥ್ರ್ಯವುಳ್ಳ ಶಕ್ತಿಶಾಲಿ ಭಾರತದ ಜನಾಂದೋಲನವಾಗಬೇಕು. ಆಗಸ್ಟ್ 15 ರ ವೇಳೆಗೆ ದಿಲ್ಲಿಯಲ್ಲಿ ಒಂದು mock parliament ಆಯೋಜನೆಯಾಗಲಿ, ಇದರಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ಒಬ್ಬ ಯುವಕ ಮುಂದಿನ 5 ವರ್ಷಗಳಲ್ಲಿ ನವಭಾರತದ ನಿರ್ಮಾಣ ಹೇಗೆ ಮಾಡಬಹುದು? ಸಂಕಲ್ಪದಿಂದ ಸಿದ್ಧಿಯನ್ನು ಹೇಗೆ ಸಾಧಿಸಬಹುದು? ಎಂಬ ವಿಷಯದ ಕುರಿತು ಚರ್ಚೆ ಮಾಡಬಹುದು. ಇಂದು ಯುವಕರಿಗಾಗಿ ಸಾಕಷ್ಟು ಅವಕಾಶಗಳು ಉದ್ಭವವಾಗಿವೆ. Skill Development ನಿಂದ Innovation ಮತ್ತು entrepreneurship ವರೆಗೆ ನಮ್ಮ ಯುವಕರು ಮುಂದೆ ಬರುತ್ತಿದ್ದಾರೆ ಮತ್ತು ಸಫಲರಾಗುತ್ತಿದ್ದಾರೆ. ಈ ಎಲ್ಲ ಅವಕಾಶಗಳ ಯೋಜನೆಗಳ ಮಾಹಿತಿ ಈ ‘New India Youth’ ಗೆ ಒಂದೇ ಸೂರಿನಡಿ ಹೇಗೆ ಸಿಗಬಹುದು ಮತ್ತು 18 ವರ್ಷ ತುಂಬುತ್ತಲೇ ಅವರಿಗೆ ಈ ಜಗತ್ತಿನ ಬಗ್ಗೆ, ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ದೊರೆಯುವಂತೆ ಹಾಗೂ ಇದರ ಲಾಭವನ್ನೂ ಅವರು ಪಡೆಯುವಂತಹ ಒಂದು ವ್ಯವಸ್ಥೆಯನ್ನು ನಿರ್ಮಿಸಬಹುದೇ ಎಂಬುದು ನನ್ನ ಆಶಯವಾಗಿದೆ.

ನನ್ನ ಪ್ರಿಯ ದೇಶಬಂಧುಗಳೇ, ಕಳೆದ ಮನದ ಮಾತಿನಲ್ಲಿ ನಿಮ್ಮೊಂದಿಗೆ positivity ಯ ಮಹತ್ವದ ಕುರಿತು ಮಾತನಾಡಿದ್ದೆ. ನನಗೆ ಸಂಸ್ಕøತದ ಒಂದು ಶ್ಲೋಕ ನೆನಪಾಗುತ್ತಿದೆ.

उत्साहो बलवानार्य, नास्त्युत्साहात्परं बलम् |

सोत्साहस्य च लोकेषु न किंचिदपि दुर्लभम् ||

ಇದರರ್ಥ ಉತ್ಸಾಹದಿಂದ ತುಂಬಿದ ಒಬ್ಬ ವ್ಯಕ್ತಿ ಅತ್ಯಂತ ಬಲಶಾಲಿಯಾಗಿರುತ್ತಾನೆ, ಏಕೆಂದರೆ ಉತ್ಸಾಹಕ್ಕೆ ಮೀರಿದ್ದು ಇನ್ನಾವುದೂ ಇಲ್ಲ. Positivity ಮತ್ತು ಉತ್ಸಾಹಭರಿತ ವ್ಯಕ್ತಿಗೆ ಯಾವುದೂ ಅಸಂಭವವಲ್ಲ. ‘Pessimism leads to weakness, optimism to power ’ಎಂದು ಇಂಗ್ಲೀಷ್ ನಲ್ಲಿ ಗಾದೆಯಿದೆ. ನಾನು ಕಳೆದ ಮನದ ಮಾತಿನಲ್ಲಿ 2017 ರ positive moments share ಮಾಡಿ ಎಂದು ಮತ್ತು 2018 ರ ಸ್ವಾಗತವನ್ನು positive atmosphere ನಲ್ಲಿ ಮಾಡಿರಿ ಎಂದು ಜನರಿಗೆ ಮನವಿ ಮಾಡಿದ್ದೆ. ಜನರು social media platform, MyGov ಮತ್ತು NarendraModi App ಮೂಲಕ ಬಹು ದೊಡ್ಡ ಪ್ರಮಾಣದಲ್ಲಿ positive response ನೀಡಿದರು. ತಮ್ಮ ಅನುಭವ ಹಂಚಿಕೊಂಡರು ಎಂಬುದು ನನಗೆ ಬಹಳ ಆನಂದ ತಂದಿದೆ. # Positive India hashtag (# ಟ್ಯಾಗ್ ) ನೊಂದಿಗೆ ಲಕ್ಷಾಂತರ ಟ್ವೀಟ್ ಮಾಡಲಾಯಿತು. ಇದು ಸುಮಾರು 150 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಿತು. ಒಂದು ರೀತಿಯಲ್ಲಿ ಭಾರತದಲ್ಲಿ ಆರಂಭವಾದ positivity ಸಂಚಾರವು ವಿಶ್ವಾದ್ಯಂತ ಪಸರಿಸಿದೆ. ಬಂದಂತಹ tweets ಮತ್ತು response ನಿಜಕ್ಕೂ ಬಹಳ ಸ್ಫೂರ್ತಿದಾಯಕವಾಗಿದ್ದವು. ಅದು ಒಂದು ಹಿತವಾದ ಅನುಭವವಾಗಿತ್ತು. ಕೆಲ ದೇಶಬಂಧುಗಳು ತಮ್ಮ ಮನದ ಮೇಲೆ ವಿಶೇಷ ಪ್ರಭಾವ ಬೀರಿದ, ಸಕಾರಾತ್ಮಕ ಪ್ರಭಾವ ಬೀರಿದ ಕೆಲವು ಘಟನೆಗಳನ್ನು ಹಂಚಿಕೊಂಡರು. ಕೆಲವರು ತಮ್ಮ ವೈಯುಕ್ತಿಕ ಅನುಭವಗಳನ್ನೂ ಹಂಚಿಕೊಂಡರು.

ಬೈಟ್

# ನನ್ನ ಹೆಸರು ಮೀನು ಭಾಟಿಯಾ. ನಾನು ದೆಹಲಿಯ ಮಯೂರ್ ವಿಹಾರ್, ಪಾಕೆಟ್ ಒನ್, ಫೇಜ್ 1, ನಲ್ಲಿ ವಾಸವಾಗಿದ್ದೇನೆ. ನನ್ನ ಮಗಳು ಎಂ ಬಿ ಎ ಓದಬೇಕೆಂದಿದ್ದಳು. ಅದಕ್ಕಾಗಿ ನನಗೆ ಬ್ಯಾಂಕ್‍ನಿಂದ ಸಾಲ ಬೇಕಾಗಿತ್ತು. ನನಗದು ಬಹಳ ಸರಳವಾಗಿ ಸಿಕ್ಕಿತು ಮತ್ತು ನನ್ನ ಮಗಳ ಓದು ಮುಂದುವರಿದಿದೆ.

# ನನ್ನ ಹೆಸರು ಜ್ಯೋತಿ ರಾಜೇಂದ್ರ ವಾಡೆ. ನಾನು ಬೋಡಲ್‍ನಿಂದ ಮಾತಾಡುತ್ತಿದ್ದೇನೆ. ಪ್ರತಿ ತಿಂಗಳು ಒಂದು ರೂಪಾಯಿ ವಂತಿಗೆಯ ವಿಮೆ ಮಾಡಿಸಿದ್ದೆವು. ನನ್ನ ಪತಿ ಅದನ್ನು ಮಾಡಿಸಿದ್ದರು. accident ನಲ್ಲಿ ಅವರ ಮೃತ್ಯುವಾಯಿತು. ಆಗ ನಮ್ಮ ಸ್ಥಿತಿ ಹೇಗಿತ್ತು ಎಂಬುದು ನಮಗೇ ಗೊತ್ತು. ಸರ್ಕಾರದ ಈ ನೆರವಿನಿಂದ ನಮಗೆ ಬಹಳ ಲಾಭವಾಯಿತು ಮತ್ತು ಅದರಿಂದ ನಾನೂ ಸ್ವಲ್ಪ ಸುಧಾರಿಸಿಕೊಳ್ಳಲು ಸಾಧ್ಯವಾಯಿತು.

# ನನ್ನ ಹೆಸರು ಸಂತೋಷ ಜಾಧವ್. ನನ್ನ ಗ್ರಾಮ ಭಿನ್ನರ್ ನಲ್ಲಿ 2017 ರಲ್ಲಿ National Highway ನಿರ್ಮಾಣವಾಗಿದೆ. ಇದರಿಂದಾಗಿ ನಮ್ಮ ರಸ್ತೆಗಳು ಬಹಳ ಉತ್ತಮವಾಗಿವೆ ಮತ್ತು business ಕೂಡಾ ವೃದ್ಧಿಸಲಿದೆ.

# ನನ್ನ ಹೆಸರು ದೀಪಾಂಶು ಅಹುಜಾ. ನಾನು ಉತ್ತರಪ್ರದೇಶದ ಸಾದತ್‍ಗಂಜ್ ಗ್ರಾಮ, ಸಹಾರನ್‍ಪುರ್ ಜಿಲ್ಲೆಯ ನಿವಾಸಿಯಾಗಿದ್ದೇನೆ. ನಮ್ಮ ಸೈನಿಕರು 2 ಮಹತ್ತರವಾದ ಕೆಲಸಗಳನ್ನು ಮಾಡಿದ್ದಾರೆ. ಒಂದು ಪಾಕಿಸ್ತಾನದಲ್ಲಿ ಅವರು ನಡೆಸಿದ surgical strike. ಇದರಿಂದ ಉಗ್ರವಾದದ launching pads ಅವುಗಳನ್ನು ನಾಶ ಮಾಡಲಾಯಿತು ಜೊತೆಗೆ ಡೊಕ್ಲಾಮ್‍ನಲ್ಲಿ ನಮ್ಮ ಸೈನಿಕರು ತೋರಿದ ಪರಾಕ್ರಮ ಅಸಾಮಾನ್ಯವಾಗಿತ್ತು.

# ನನ್ನ ಹೆಸರು ಸತೀಶ್ ಬೇವಾನಿ. ನಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯಿತ್ತು. ಕಳೆದ 40 ವರ್ಷಗಳಿಂದ ನಾವು ಸೇನೆಯ ಪೈಪ್‍ಲೈನ್‍ನನ್ನೇ ನಂಬಿಕೊಂಡಿದ್ದೆವು. ಈಗ ಪ್ರತ್ಯೇಕವಾದ independent ಪೈಪ್‍ಲೈನ್ ಅಳವಡಿಸಲಾಗಿದೆ. 2017 ರಲ್ಲಿ ಈ ಎಲ್ಲ ಅನುಕೂಲಗಳು ನಮಗೆ ದೊರೆತಿವೆ.

ಹೀಗೆ ಬಹಳಷ್ಟು ಜನರು ತಮ್ಮ ತಮ್ಮ ಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತಿವೆ. ವಾಸ್ತವದಲ್ಲಿ ಇದೇ ‘New India’ಆಗಿದೆ. ಇದನ್ನು ನಾವೆಲ್ಲರೂ ಸೇರಿ ನಿರ್ಮಿಸುತ್ತಿದ್ದೇವೆ. ಬನ್ನಿ ಇವೇ ಸಣ್ಣ ಪುಟ್ಟ ಸಂತೋಷಗಳ ಜೊತೆಗೆ ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡೋಣ. ಹೊಸ ವರ್ಷವನ್ನು ಆರಂಭಿಸೋಣ ಮತ್ತು ‘positive India’ ದೊಂದಿಗೆ ‘progressive India’ ದಡೆಗೆ ಧೃಡವಾದ ಹೆಜ್ಜೆ ಇಡೋಣ. ನಾವು positivity ಬಗ್ಗೆ ಮಾತಾಡುವಾಗ ನನಗೂ ಒಂದು ಮಾತನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸುತ್ತಿದೆ. ಇತ್ತೀಚೆಗೆ ನನಗೆ ಕಾಶ್ಮೀರದ ಆಡಳಿತಾತ್ಮಕ ಸೇವೆಯ ಟಾಪರ್ ಅಂಜುಮ್ ಬಶೀರ್ ಖಾನ್ ಖಟ್ಟಕ್ ಅವರ ಪ್ರೇರಣಾದಾಯಕ ಕಥೆ ಬಗ್ಗೆ ತಿಳಿದುಬಂತು. ಅವರು ಭಯೋತ್ಪಾದನೆ ಮತ್ತು ದ್ವೇಶದ ಅಗ್ನಿಯಿಂದ ಹೊರಬಂದು Kashmir Administrative Service ನಲ್ಲಿ ಟಾಪರ್ ಆಗಿ ಹೊರ ಹೊಮ್ಮಿದರು. 1990 ರಲ್ಲಿ ಉಗ್ರವಾದಿಗಳು ಅವರ ಪೂರ್ವಜರ ಮನೆಯನ್ನು ಭಸ್ಮ ಮಾಡಿದ್ದರು ಎಂಬುದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಅಲ್ಲಿ ಉಗ್ರವಾದ ಮತ್ತು ಹಿಂಸೆ ಎಷ್ಟು ಪ್ರಮಾಣದಲ್ಲಿತ್ತೆಂದರೆ ಅವರ ಕುಟುಂಬವರ್ಗದವರಿಗೆ ತಮ್ಮ ಪೂರ್ವಿಕರ ನೆಲವನ್ನು ತೊರೆದು ಹೊರನಡೆಯಬೇಕಾಯಿತು. ಒಬ್ಬ ಪುಟ್ಟ ಮಗುವಿಗೆ ತನ್ನ ಸುತ್ತಮುತ್ತಲೂ ಇದ್ದ ಇಂಥ ಹಿಂಸೆಯ ವಾತಾವರಣ ಮನಸ್ಸಿನ ತುಂಬ ಅಂಧಕಾರಾತ್ಮಕ ಮತ್ತು ಕಹಿಯಾದ ಭಾವನೆಯನ್ನು ಮೂಡಿಸಲು ಸಾಕಾಗಿತ್ತು. ಆದರೆ ಅಂಜುಮ್ ಹೀಗೆ ಆಗಲು ಆಸ್ಪದ ಕೊಡಲಿಲ್ಲ. ಅವರು ಎಂದಿಗೂ ಆಸೆಯ ಎಳೆಯನ್ನು ಬಿಡಲಿಲ್ಲ. ಅವರು ತಮಗಾಗಿ ಒಂದು ಬೇರೆಯೇ ದಾರಿಯನ್ನು ಆಯ್ದುಕೊಂಡರು. ಅದು ಜನತೆಯ ಸೇವೆಯ ದಾರಿ. ಅವರು ಅತ್ಯಂತ ಕಠಿಣ ಪರಿಸ್ಥಿತಿಯಿಂದ ಹೊರ ಬಂದು ಸಫಲತೆಯ ತಮ್ಮ ಕಥೆಯನ್ನು ತಾವೇ ಬರೆದರು. ಇಂದು ಅವರು ಕೇವಲ ಜಮ್ಮು ಮತ್ತು ಕಾಶ್ಮೀರ ಮಾತ್ರವಲ್ಲದೆ ದೇಶದ ಎಲ್ಲ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ. ಪರಿಸ್ಥಿತಿಗಳು ಎಷ್ಟೇ ಸಂಕಷ್ಟದಾಯಕವಾಗಿದ್ದರೂ ಸಕಾರಾತ್ಮಕ ಕೆಲಸಗಳಿಂದ ನಿರಾಶೆಯ ಕಾರ್ಮೊಡಗಳನ್ನು ಧ್ವಂಸಗೊಳಿಸಬಹುದಾಗಿದೆ ಎಂಬುದನ್ನು ಅಂಜುಂ ಸಾಬೀತುಪಡಿಸಿದ್ದಾರೆ.

ಕಳೆದ ವಾರವಷ್ಟೇ ನನಗೆ ಜಮ್ಮು ಮತ್ತು ಕಾಶ್ಮೀರದ ಕೆಲ ಹೆಣ್ಣುಮಕ್ಕಳನ್ನು ಭೇಟಿಯಾಗುವ ಅವಕಾಶ ಅಭಿಸಿತು. ಅವರಲ್ಲಿರುವಂಥ ಭಾವನೆಗಳು, ಉತ್ಸಾಹ, ಕನಸುಗಳು ಮತ್ತು ಅವರು ಜೀವನದಲ್ಲಿ ಯಾವ್ಯಾವ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಬಯಸುತ್ತಾರೆ, ಅವರು ಎಷ್ಟೊಂದು ಆಶಾವಾದದ ಜೀವನವುಳ್ಳವರಾಗಿದ್ದಾರೆ ಎಂಬುದು ತಿಳಿದು ಬಂತು. ಅವರೊಂದಿಗೆ ನಾನು ಮಾತಾಡಿದಾಗ ಅವರಲ್ಲಿ ಒಂದಂಶವೂ ನಿರಾಶೆಯ ಕುರುಹು ಇರಲಿಲ್ಲ. ಉತ್ಸಾಹವಿತ್ತು, ಹುಮ್ಮಸ್ಸಿತ್ತು, ಶಕ್ತಿಯಿತ್ತು, ಕನಸುಗಳಿದ್ದವು, ಸಂಕಲ್ಪವಿತ್ತು. ಆ ಹೆಣ್ಣುಮಕ್ಕಳೊಂದಿಗೆ ನಾನು ಮಾತಾಡಿದ ಅಷ್ಟೊತ್ತೂ ನನಗೂ ಪ್ರೇರಣೆ ದೊರೆಯಿತು ಮತ್ತು ದೇಶದ ಶಕ್ತಿ ಇದೇ ಅಲ್ಲವೇ, ಇವರೇ ನಮ್ಮ ಯುವಜನತೆಯಲ್ಲವೇ ಮತ್ತು ಇವರೇ ನಮ್ಮ ದೇಶದ ಭವಿಷ್ಯ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶದಲ್ಲಷ್ಟೇ ಅಲ್ಲ, ಎಲ್ಲಿಯೇ ಅಗಲಿ ಕೆಲವೊಮ್ಮೆ ಪ್ರಸಿದ್ಧ ಧಾರ್ಮಿಕ ಸ್ಥಳದ ಬಗ್ಗೆ ಚರ್ಚೆ ಆಗುತ್ತದೆಯೋ ಆಗ ಕೇರಳದ ಶಬರಿಮಲೆಯ ಬಗ್ಗೆ ಮಾತು ಬರುವುದು ತುಂಬಾ ಸ್ವಾಭಾವಿಕ. ವಿಶ್ವ-ಪ್ರಸಿದ್ಧವಾದ ಈ ಮಂದಿರದಲ್ಲಿ ಭಗವಾನ್ ಐಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆಯಲು ಪ್ರತಿವರ್ಷ ಕೋಟಿ ಕೋಟಿ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಎಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೋ, ಯಾವ ಸ್ಥಳಕ್ಕೆ ಇಷ್ಟೊಂದು ದೊಡ್ಡ ಮಹಾತ್ಮೆ ಇದೆಯೋ ಅಲ್ಲಿ, ಅದರಲ್ಲೂ ವಿಶೇಷವಾಗಿ ಬೆಟ್ಟಗಳ ಮತ್ತು ಕಾಡಿನ ನಡುವೆ ಇರುವ ಆ ಜಾಗದಲ್ಲಿ, ಸ್ವಚ್ಚತೆಯನ್ನು ಕಾಪಾಡುವುದು ಎಷ್ಟು ದೊಡ್ಡ ಸವಾಲಾಗಿರಬಹುದು? ಆದರೆ ಈ ಸಮಸ್ಯೆಯನ್ನು ಸಹ ಸಂಸ್ಕಾರವನ್ನಾಗಿ ಹೇಗೆ ಬದಲಾಯಿಸಬಹುದು, ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ಹೇಗೆ ಹುಡುಕಬಹುದು ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಅದೆಂತಹ ಶಕ್ತಿ ಇರುತ್ತದೆ ಎನ್ನುವುದಕ್ಕೆ ಶಬರಿಮಲೆ ಮಂದಿರವು ತಂತಾನೇ ಒಂದು ಉದಾಹರಣೆಯ ರೀತಿಯಲ್ಲಿ ನಿಲ್ಲುತ್ತದೆ. ಪಿ. ವಿಜಯನ್ ಎನ್ನುವ ಹೆಸರಿನ ಒಬ್ಬ ಪೋಲಿಸ್ ಆಫೀಸರ್ “ಪುಣ್ಯಂ ಪೂಂಕವನಂ” (Punyam Poonkavanam) ಎನ್ನುವ ಒಂದು ಕಾರ್ಯಕ್ರಮ ಪ್ರಾರಂಭಿಸಿದರು ಮತ್ತು ಆ ಕಾರ್ಯಕ್ರಮದ ಮೂಲಕ ಸ್ವಚ್ಚತೆಗಾಗಿ ಜಾಗೃತಿ ಮೂಡಿಸುವ ಒಂದು ಸ್ವಯಂಪ್ರೇರಿತ ಪ್ರಚಾರ ಆರಂಭಿಸಿದರು. ಯಾವುದೇ ಯಾತ್ರಿಗಳು ಬಂದರೂ ಅವರು ಸ್ವಚ್ಚತೆಯ ಕಾರ್ಯಕ್ರಮದಲ್ಲಿ ಒಂದಿಲ್ಲೊಂದು ರೀತಿಯ ಶ್ರಮದಾನ ಮಾಡದೆ ಅವರ ಯಾತ್ರೆ ಸಂಪೂರ್ಣವಾಗದೇ ಇರುವ ರೀತಿಯಲ್ಲಿ ಒಂದು ಪರಂಪರೆಯನ್ನೇ ಸೃಷ್ಟಿಸಿದರು. ಈ ಆಂದೋಲನದಲ್ಲಿ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಪ್ರತಿಯೊಬ್ಬ ಯಾತ್ರಿಕನೂ ಇದೂ ಸಹಾ ಭಗವಂತನ ಪೂಜೆಯ ಒಂದು ಭಾಗವೇ ಎಂದು ಭಾವಿಸಿ ಸ್ವಲ್ಪವಾದರೂ ಸಮಯ ಸ್ವಚ್ಚತೆಗಾಗಿ ಕೆಲಸ ಮಾಡುತ್ತಾರೆ, ಮಾಲಿನ್ಯ ನಿರ್ಮೂಲನೆಗೆ ಕೆಲಸ ಮಾಡುತ್ತಾರೆ. ಪ್ರತಿದಿನ ಬೆಳಗ್ಗೆ ಇಲ್ಲಿ ಸ್ವಚ್ಚತಾ ಕಾರ್ಯಕ್ರಮದ ದೃಶ್ಯ ಬಹಳ ಅದ್ಭುತವಾಗಿರುತ್ತದೆ ಮತ್ತು ಎಲ್ಲಾ ಯಾತ್ರಾರ್ಥಿಗಳು ಇದರಲ್ಲಿ ಸೇರುತ್ತಾರೆ. ಎಷ್ಟೇ ದೊಡ್ಡ ಪ್ರಸಿದ್ಧ ವ್ಯಕ್ತಿಯಾಗಿರಲಿ, ಎಷ್ಟೇ ಧನಿಕನಾಗಿರಲಿ, ಎಷ್ಟೇ ದೊಡ್ಡ ಆಫೀಸರ್ ಆಗಿರಲಿ, ಎಲ್ಲರೂ ಒಬ್ಬ ಸಾಮಾನ್ಯ ಯಾತ್ರಿಯಂತೆ ಈ “ಪುಣ್ಯಂ ಪೂಂಕವನಂ” (Punyam Poonkavanam) ಕಾರ್ಯಕ್ರಮದ ಭಾಗವಾಗುತ್ತಾರೆ ಮತ್ತು ಸ್ವಚ್ಚಗೊಳಿಸಿಯೇ ಮುಂದೆ ಸಾಗುತ್ತಾರೆ. ದೇಶವಾಸಿಗಳಿಗೆ ಇಂತಹ ಅದೆಷ್ಟೋ ಉದಾಹರಣೆಗಳು ಕಾಣಸಿಗುತ್ತವೆ. ಶಬರಿಮಲೆಯಲ್ಲಿ ಇಷ್ಟೊಂದು ಮುಂದುವರೆದಿರುವ ಈ “ಪುಣ್ಯಂ ಪೂಂಕವನಂ” (Punyam Poonkavanam) ಸ್ವಚ್ಚತಾ-ಅಭಿಯಾನವು ಪ್ರತಿ ಯಾತ್ರಿಯ, ಯಾತ್ರೆಯ ಭಾಗವಾಗಿ ಹೋಗುತ್ತದೆ. ಅಲ್ಲಿ ಕಠೋರ ವ್ರತದ ಜೊತೆಗೆ ಸ್ವಚ್ಚತೆಯ ಕಠಿಣ ಸಂಕಲ್ಪವೂ ಜೊತೆಜೊತೆಯಾಗಿ ನಡೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪೂಜ್ಯ ಬಾಪೂರವರು ಜೀವನಪೂರ್ತಿ ಯಾವ ಕೆಲಸಕ್ಕೆ ಹೋರಾಟ ಮಾಡಿದ್ದರೋ, ಪ್ರಯತ್ನ ಪಡುತ್ತಿದ್ದರೋ, ‘ಸ್ವಚ್ಚ-ಭಾರತ’, ‘ಕೊಳಕು ಮುಕ್ತ ಭಾರತ’ ಎನ್ನುವ, ಯಾವ ಕೆಲಸವು ಅಪೂರ್ಣವಾಗಿತ್ತೋ ಅಂತಹ ಅವರ ಕನಸಿನ ಸ್ವಚ್ಚ ಭಾರತವನ್ನು ಪೂಜ್ಯ ಬಾಪೂರವರ 150ನೇ ಜಯಂತಿಯಂದು ಅವರಿಗೆ ಕೊಡುವುದಕ್ಕಾಗಿ, 2014 ನೇ ಅಕ್ಟೋಬರ್ 2 ರ ಪೂಜ್ಯ ಬಾಪೂರವರ ಜನ್ಮ ಜಯಂತಿಯಂದು, ನಾವೆಲ್ಲರೂ ಸಂಕಲ್ಪ ಮಾಡಿ ನಿರ್ಧರಿಸಿದ್ದೆವು. ಆ ದಿಕ್ಕಿನಲ್ಲಿ ನಾವೆಲ್ಲರೂ ಏನಾದರೂ ಸ್ವಲ್ಪ ಮಾಡೋಣ. ಸ್ವಚ್ಛತೆಯ ಬಗ್ಗೆ ದೇಶದಲ್ಲಿ ವ್ಯಾಪಕವಾದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮಗ್ರವಾಗಿ ಸಾರ್ವಜನಿಕ ಸಹಭಾಗಿತ್ವದಿಂದ ಕೂಡ ಪರಿವರ್ತನೆ ಕಾಣಿಸುತ್ತಿದೆ. ನಗರ ಪ್ರದೇಶಗಳಲ್ಲಿ ಬರುವ 2018 ರ ಜನವರಿ 4 ರಿಂದ ಮಾರ್ಚ್ 10 ರ ನಡುವೆ ನೈರ್ಮಲ್ಯದ ಸಾಧನೆಯ ಮಟ್ಟವನ್ನು ಮೌಲ್ಯಮಾಪನ ಮಾಡಲು ಜಗತ್ತಿನಲ್ಲೇ ಎಲ್ಲಕ್ಕಿಂತ ದೊಡ್ಡದಾದ ‘ಸ್ವಚ್ಚ ಸರ್ವೇಕ್ಷಣೆ 2018’ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯನ್ನು 4 ಸಾವಿರಕ್ಕೂ ಅಧಿಕ ನಗರಗಳಲ್ಲಿ ಸುಮಾರು 40 ಕೋಟಿ ಜನಸಂಖ್ಯೆಯೊಂದಿಗೆ ಮಾಡಲಾಗುವುದು. ಈ ಸಮೀಕ್ಷೆಯಲ್ಲಿ ಮೌಲ್ಯಮಾಪನ ಮಾಡುವ ಅಂಶಗಳಲ್ಲಿ ನಗರಗಳಲ್ಲಿ ಬಯಲು ಶೌಚದಿಂದ ಮುಕ್ತಿ; ಕಸದ ಸಂಗ್ರಹಣೆ; ಕಸವನ್ನು ತೆಗೆದುಕೊಂಡು ಹೋಗಲು ವಾಹನದ ವ್ಯವಸ್ಥೆ; ವೈಜ್ಞಾನಿಕ ವಿಧಾನದಿಂದ ಕಸದ ಸಂಸ್ಕರಣೆ; ನಡುವಳಿಕೆಗಳನ್ನು ಬದಲಿಸಲು ಮಾಡುತ್ತಿರುವ ಪ್ರಯತ್ನಗಳು; ಸಾಮರ್ಥ್ಯದ ಉನ್ನತೀಕರಣ ಮತ್ತು ಸ್ವಚ್ಚತೆಗಾಗಿ ಮಾಡಿರುವ ಅವಿಷ್ಕಾರಿಕ ಪ್ರಯತ್ನಗಳು ಮತ್ತು ಈ ಕೆಲಸಕ್ಕೆ ಸಾರ್ವಜನಿಕ ಸಹಭಾಗಿತ್ವ – ಮುಂತಾದವುಗಳು ಸೇರಿರುತ್ತವೆ.

ಈ ಸಮೀಕ್ಷೆಯ ಸಮಯದಲ್ಲಿ ಬೇರೆ ಬೇರೆ ತಂಡಗಳಾಗಿ ನಗರಗಳನ್ನು ತಪಾಸಣೆ ಮಾಡುತ್ತೇವೆ. ನಾಗರೀಕರೊಂದಿಗೆ ಮಾತನಾಡಿ ಅವರ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುತ್ತೇವೆ. ‘ಸ್ವಚ್ಚತಾ ಆಪ್’ ನ ಉಪಯೋಗದ ಬಗ್ಗೆ ಮತ್ತು ವಿಭಿನ್ನ ಪ್ರಕಾರದ ಸೇವೆಗಳಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ. ನಗರದ ಸ್ವಚ್ಚತೆ ಜನರ ಸ್ವಭಾವವಾಗುವಂತೆ, ನಗರದ ಸ್ವಭಾವವಾಗುವಂತೆ ಮಾಡುವ ಎಲ್ಲಾ ವ್ಯವಸ್ಥೆಗಳು ನಗರಗಳಲ್ಲಿ ಮಾಡಲಾಗಿದೆಯೇ ಎನ್ನುವುದನ್ನು ಸಹ ಈ ಸಮೀಕ್ಷೆಯಲ್ಲಿ ನೋಡಲಾಗುತ್ತದೆ. ಸ್ವಚ್ಚತೆ ಬರೀ ಸರ್ಕಾರಕ್ಕೆ ಸೀಮಿತವಾಗಿರದೆ, ಇದರಲ್ಲಿ ಪ್ರತಿಯೊಬ್ಬ ನಾಗರೀಕ ಮತ್ತು ನಾಗರೀಕ ಸಂಘಟನೆಗಳಿಗೆ ಕೂಡ ಹೆಚ್ಚಿನ ಜವಾಬ್ದಾರಿ ಇದೆ. ಮುಂಬರುವ ದಿನಗಳಲ್ಲಿ ನಡೆಯುವ ಸ್ವಚ್ಚತಾ ಸಮೀಕ್ಷೆಯಲ್ಲಿ ಎಲ್ಲರೂ ಹೆಚ್ಚು ಹೆಚ್ಚಾಗಿ ಭಾಗವಹಿಸಿ ಎನ್ನುವುದು ಪ್ರತಿಯೊಬ್ಬ ನಾಗರೀಕರಲ್ಲೂ ನನ್ನ ಮನವಿ.

ನಿಮ್ಮ ನಗರ ಹಿಂದೆ ಉಳಿಯಬಾರದು, ನಿಮ್ಮ ಬೀದಿ, ಬಡಾವಣೆ ಹಿಂದೆ ಉಳಿಯಬಾರದು, ಇದಕ್ಕಾಗಿ ಕ್ರಮಗಳನ್ನು ಕೈಗೊಳ್ಳಿ. ಮನೆಯಲ್ಲಿ ಒಣ ಕಸ ಮತ್ತು ಹಸಿ ಕಸ ಬೇರೆ ಬೇರೆಯಾಗಿ ವಿಂಗಡಿಸುವುದು; ನೀಲಿ ಮತ್ತು ಹಸಿರು ಕಸದ ಡಬ್ಬಿಗಳನ್ನು ಉಪಯೋಗಿಸುವುದು ಇಂದು ನಿಮಗೆ ಅಭ್ಯಾಸವಾಗಿ ಹೋಗಿದೆ ಎನ್ನುವುದರ ಬಗ್ಗೆ ನನಗೆ ಬಲವಾದ ನಂಬಿಕೆಯಿದೆ. reduce, re-use ಮತ್ತು re-cycle ಎನ್ನುವ ಸಿದ್ಧಾಂತ ಕಸಕ್ಕೆ ಬಹಳ ಹೊಂದಿಕೆಯಾಗುತ್ತದೆ. ಈ ಸಮೀಕ್ಷೆಯ ಆಧಾರದ ಮೇಲೆ ನಗರಗಳ ಅರ್ಹತಾ ಶ್ರೇಯಾಂಕವನ್ನು ಮಾಡಿದಾಗ – ಒಂದು ವೇಳೆ ನಿಮ್ಮ ನಗರವು ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರೆ ಇಡೀ ದೇಶದ ಅರ್ಹತಾ ಶ್ರೇಯಾಂಕದಲ್ಲಿ, ಮತ್ತು ಒಂದು ಲಕ್ಷಕ್ಕೆ ಕಡಿಮೆ ಜನಸಂಖ್ಯೆ ಹೊಂದಿದ್ದರೆ ಪ್ರಾದೇಶಿಕ ಅರ್ಹತಾ ಶ್ರೇಯಾಂಕದಲ್ಲಿ ಉನ್ನತ ಮಟ್ಟದ ಸ್ಥಾನವನ್ನು ಗಿಟ್ಟಿಸಿಕೊಳ್ಳಬೇಕು ಎನ್ನುವುದು ನಿಮ್ಮ ಕನಸಾಗಿರಬೇಕು ಮತ್ತು ಅದಕ್ಕಾಗಿ ನಿಮ್ಮ ಪ್ರಯತ್ನ ಇರಬೇಕು.

2018 ನೇ ಜನವರಿ 4 ರಿಂದ ಮಾರ್ಚ್ 10 ರವರೆಗೆ ನಡೆಯುವ ಈ ಸ್ವಚ್ಚತಾ ಸಮೀಕ್ಷೆಯ ಈ ಆರೋಗ್ಯಕರ ಸ್ಪರ್ಧೆಯಲ್ಲಿ ನೀವು ಹಿಂದುಳಿಯುವುದಿಲ್ಲ ಎನ್ನುವುದು ಪ್ರತಿ ನಗರದಲ್ಲೂ ಒಂದು ಸಾರ್ವಜನಿಕ ಚರ್ಚೆಯ ವಿಷಯವಾಗಬೇಕು. “ನಮ್ಮ ನಗರ – ನಮ್ಮ ಪ್ರಯತ್ನ”, “ನಮ್ಮ ಪ್ರಗತಿ-ದೇಶದ ಪ್ರಗತಿ” ಎನ್ನುವುದು ನಿಮ್ಮೆಲ್ಲರ ಕನಸಾಗಬೇಕು. ಬನ್ನಿ, ಈ ಸಂಕಲ್ಪದೊಂದಿಗೆ ನಾವೆಲ್ಲರೂ ಮತ್ತೊಮ್ಮೆ ಪೂಜ್ಯ ಬಾಪೂರವರನ್ನು ಸ್ಮರಿಸುತ್ತಾ, ಸ್ವಚ್ಚ ಭಾರತದ ಸಂಕಲ್ಪ ಮಾಡುತ್ತಾ ಪುರುಷಾರ್ಥದ ಪರಾಕಾಷ್ಠೆ ತಲುಪೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೊಂದು ವಿಶಯಗಳು ನೋಡುವುದಕ್ಕೆ ಬಹಳ ಚಿಕ್ಕದಾಗಿ ಕಂಡರೂ ಒಂದು ಸಮಾಜದ ರೂಪದಲ್ಲಿ ನಮ್ಮ ಪರಿಚಯದ ಮೇಲೆ ತುಂಬಾ ಪ್ರಭಾವ ಬೀರುವಂತೆ ಮಾಡುತ್ತಿರುತ್ತದೆ. ಇಂದು ‘ಮನದ ಮಾತು’ ಎಂಬ ಈ ಕಾರ್ಯಕ್ರಮದ ಮೂಲಕ ನಾನು ನಿಮ್ಮೊಂದಿಗೆ ಅಂತಹ ಒಂದು ಮಾತನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಬರುವ ಮಾಹಿತಿಗಳಲ್ಲಿ ಒಂದು ವಿಷಯ ತಿಳಿದು ಬಂತು. ಒಂದುವೇಳೆ ಯಾರಾದರೂ ಮುಸ್ಲಿಂ ಮಹಿಳೆ ಹಜ್ ಯಾತ್ರೆಗೆ ಹೋಗಲು ಬಯಸಿದರೆ ಅವರು ಮಹರಮ್ ಅಂದರೆ ತಮ್ಮ ಪುರುಷ ರಕ್ಷಕರಿಲ್ಲದೆ ಅಲ್ಲಿಗೆ ಹೋಗುವಂತಿಲ್ಲ. ನಾನು ಇದರ ಬಗ್ಗೆ ಮೊದಲ ಬಾರಿ ಕೇಳಿದಾಗ – ಇದು ಹೀಗೇಕೆ? ಈ ರೀತಿಯ ಕಾನೂನು ಯಾರು ಮಾಡಿರಬಹುದು? ಈ ತಾರತಮ್ಯ ಏಕೆ? ಎಂದು ಯೋಚಿಸತೊಡಗಿದೆ. ಅದರ ಬಗ್ಗೆ ಆಳವಾಗಿ ಚಿಂತಿಸಿದಾಗ ನನಗೆ ಆಶ್ಚರ್ಯವಾಯಿತು ಏಕೆಂದರೆ ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕವೂ ಈ ನಿರ್ಬಂಧ ಹಾಕಿದವರು ನಾವೇ ಆಗಿದ್ದೇವೆ. ದಶಕಗಳಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು, ಆದರೆ ಅದರ ಬಗ್ಗೆ ಚರ್ಚೆಯೇ ಆಗುತ್ತಿರಲಿಲ್ಲ. ಎಷ್ಟೋ ಮುಸ್ಲಿಂ ದೇಶಗಳಲ್ಲಿ ಕೂಡ ಈ ನಿಯಮ ಇಲ್ಲ. ಆದರೆ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಈ ಅಧಿಕಾರ ಇರಲಿಲ್ಲ. ನಮ್ಮ ಸರಕಾರವು ಇದರ ಬಗ್ಗೆ ಗಮನ ಹರಿಸಿ, ನಮ್ಮ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಸಹ ಅವಶ್ಯಕವಾದ ದಿಟ್ಟಹೆಜ್ಜೆ ಇಟ್ಟು, 70 ವರ್ಷಗಳಿಂದ ನಡೆದುಬರುತ್ತಿರುವ ಸಂಪ್ರದಾಯವನ್ನು ಮುರಿದು ಈ ನಿರ್ಬಂಧವನ್ನು ನಾವು ತೆಗೆದುಹಾಕಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಇಂದು ಮುಸ್ಲಿಂ ಮಹಿಳೆಯರು ಪುರುಷ ರಕ್ಷಕರ ಜೊತೆ ಇಲ್ಲದೆ ಹಜ್ ಯಾತ್ರೆಗೆ ಹೋಗಬಹುದು.

ಈ ಸಾರಿ ಸರಿಸುಮಾರು 1300 ಮುಸ್ಲಿಂ ಮಹಿಳೆಯರು ಪುರುಷ ರಕ್ಷಕರರಿಲ್ಲದೆ ಹಜ್ ಯಾತ್ರೆಗೆ ಹೋಗಲು ಅರ್ಜಿ ಹಾಕಿದ್ದಾರೆ ಮತ್ತು ದೇಶದ ಬೇರೆ ಬೇರೆ ಭಾಗಗಳಿಂದ –ಕೇರಳದಿಂದ ಉತ್ತರದವರೆಗೆ ಮಹಿಳೆಯರು ಹೆಚ್ಹು ಹೆಚ್ಚಾಗಿ ಹಜ್ ಯಾತ್ರೆ ಕೈಗೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬಂಟಿಗರಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಹಜ್ ಯಾತ್ರೆಗೆ ಹೋಗಲು ಖಚಿತವಾಗಿ ಅನುಮತಿ ದೊರಕಿಸಿಕೊಡುವಂತೆ ನಾನು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಿದ್ದೇನೆ. ಸಾಮಾನ್ಯವಾಗಿ ಹಜ್ ಯಾತ್ರಿಗಳಿಗೆ ಲಾಟರಿ ವ್ಯವಸ್ಥೆ ಇದೆ. ಆದರೆ ಒಬ್ಬೊಂಟಿ ಮಹಿಳೆಯರನ್ನು ಈ ಲಾಟರಿ ವ್ಯವಸ್ಥೆಯಿಂದ ಹೊರಗಿಟ್ಟು ಅವರಿಗೆ ವಿಶೇಷ ವರ್ಗದಲ್ಲಿ ಅವಕಾಶ ಕೊಡಬೇಕು ಎಂದು ನಾನು ಬಯಸುತ್ತೇನೆ. ಭಾರತದ ವಿಕಾಸ ಯಾತ್ರೆಯು ನಮ್ಮ ಸ್ತ್ರೀ ಶಕ್ತಿಯ ಬಲದಿಂದ, ಅವರ ಪ್ರತಿಭೆಯ ಭರವಸೆಯಿಂದ ಮುಂದುವರೆಯುತ್ತಿದೆ ಮತ್ತು ಮುಂದುವರೆಯುತ್ತಲೇ ಇರುತ್ತದೆ. ನಮ್ಮ ಮಹಿಳೆಯರಿಗೆ ಕೂಡ ಪುರುಷರಿಗೆ ಸಮಾನವಾದ ಅಧಿಕಾರ ಸಿಗಲಿ, ಸಮಾನ ಅವಕಾಶಗಳು ಸಿಗಲಿ, ಅದರಿಂದ ಅವರೂ ಸಹ ಪ್ರಗತಿಯ ಮಾರ್ಗದಲ್ಲಿ ಒಟ್ಟೊಟ್ಟಿಗೆ ಮುಂದುವರೆಯುವಂತಾಗಲಿ ಎನ್ನುವುದು ನಮ್ಮ ನಿರಂತರ ಪ್ರಯತ್ನವಾಗಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ನಮಗೆ ಒಂದು ಐತಿಹಾಸಿಕ ಪರ್ವವಾಗಿದೆ. ಆದರೆ ಈ ವರ್ಷ 26 ಜನವರಿ 2018 ರ ದಿನ ವಿಶೇಷ ರೂಪದಲ್ಲಿ ನೆನಪಿನಲ್ಲಿ ಉಳಿಯಲಿದೆ. ಈ ವರ್ಷ ಗಣತಂತ್ರ ದಿವಸದ ಸಮಾರೋಪ ಸಮಾರಂಭಕ್ಕೆ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ಹತ್ತು ದೇಶಗಳ ಮುಖಂಡರು ಮುಖ್ಯ ಅತಿಥಿಗಳಾಗಿ ಭಾರತಕ್ಕೆ ಬರಲಿದ್ದಾರೆ. ಗಣತಂತ್ರ ದಿವಸದಂದು ಈ ಸಾರಿ ಒಬ್ಬರಲ್ಲ, ಹತ್ತು ಮುಖ್ಯ ಅತಿಥಿಗಳು ಇರುತ್ತಾರೆ. ಭಾರತದ ಇತಿಹಾಸದಲ್ಲಿ ಹಿಂದೆಂದೂ ಹೀಗೆ ಆಗಿರಲಿಲ್ಲ. 2017, ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ದೇಶಗಳು ಹಾಗೂ ಭಾರತಕ್ಕೆ ಒಂದು ರೀತಿಯ ವಿಶೇಷವಾಗಿದೆ. 2017 ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟವು ತನ್ನ 50 ವರ್ಷವನ್ನು ಪೂರೈಸಿತು ಮತ್ತು ಇದೇ 2017 ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಜೊತೆ ಭಾರತದ ಸಹಭಾಗಿತ್ವದ 25 ವರ್ಷಗಳು ಸಹ ಪೂರ್ತಿಯಾಗಿವೆ. ಜನವರಿ 26 ರಂದು ವಿಶ್ವದ ಹತ್ತು ದೇಶಗಳ ಈ ಮಹಾನ್ ನಾಯಕರುಗಳು ಒಗ್ಗೂಡುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

ಪ್ರೀತಿಯ ದೇಶವಾಸಿಗಳೇ, ಇದು ಹಬ್ಬಗಳ ಋತುವಾಗಿದೆ. ಹಾಗೆಯೇ ನಮ್ಮ ದೇಶ ಒಂದು ರೀತಿಯಲ್ಲಿ ಹಬ್ಬಗಳ ದೇಶವಾಗಿದೆ. ಬಹುಶಃ ಹಬ್ಬದೊಂದಿಗೆ ಗುರುತಿಸದ ದಿನಗಳು ನಮ್ಮಲ್ಲಿ ಇಲ್ಲದೇ ಇರಬಹುದು. ಈಗಷ್ಟೇ ನಾವೆಲ್ಲರೂ ಕ್ರಿಸ್ಮಸ್ ಆಚರಿಸಿದ್ದೇವೆ ಮತ್ತು ಮುಂದೆ ಹೊಸ ವರ್ಷ ಬರಲಿದೆ. ಬರಲಿರುವ ಹೊಸ ವರ್ಷ ನಿಮಗೆಲ್ಲರಿಗೂ ಹೆಚ್ಚಿನ ಸಂತೋಷ, ಸುಖ ಮತ್ತು ಸಮೃದ್ಧಿಯನ್ನು ಹೊತ್ತು ತರಲಿ. ನಾವೆಲ್ಲರೂ ಹೊಸ ಆಶಯ, ಹೊಸ ಉತ್ಸಾಹ, ಹೊಸ ಭರವಸೆ ಮತ್ತು ಹೊಸ ಸಂಕಲ್ಪದೊಂದಿಗೆ ಮುಂದೆ ನಡೆಯೋಣ, ದೇಶವನ್ನೂ ಸಹ ಮುನ್ನಡೆಸೋಣ. ಜನವರಿ ತಿಂಗಳು ಸೂರ್ಯನು ಉತ್ತರಾಯಣಕ್ಕೆ ಪಥ ಬದಲಿಸುವ ಕಾಲ ಮತ್ತು ಇದೇ ತಿಂಗಳಲ್ಲಿ ಮಕರ ಸಂಕ್ರಾಂತಿ ಆಚರಿಸುತ್ತೇವೆ. ಇದು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಪರ್ವ.

ಹಾಗೆಯೇ ಕೂಡ ನಮ್ಮ ಪ್ರತಿಯೊಂದು ಕಾಲವೂ ಒಂದಿಲ್ಲೊಂದು ರೂಪದಲ್ಲಿ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಆದರೆ ವಿವಿಧತೆಯಿಂದ ತುಂಬಿರುವ ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯ ಈ ಅದ್ಭುತ ಘಟನೆಯನ್ನು ಬೇರೆ ಬೇರೆ ರೂಪದಲ್ಲಿ ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಉತ್ತರಭಾರತದಲ್ಲಿ ‘ಲೋಹಡಿ’ ಯ ಆನಂದ ಇರುತ್ತದೆ, ಯು,ಪಿ. ಮತ್ತು ಬಿಹಾರಗಳಲ್ಲಿ ಖಿಚಡಿ ಮತ್ತು ತಿಲ್-ಸಂಕ್ರಾಂತಿಯ ನಿರೀಕ್ಷೆ ಇರುತ್ತದೆ. ರಾಜಾಸ್ಥಾನದಲ್ಲಿ ‘ಸಂಕ್ರಾಂತ್’ ಎಂದು ಹೇಳಲಿ, ಅಸ್ಸಾಂ ನಲ್ಲಿ ‘ಮಾಘ-ಬಿಹೂ’ ಅಥವಾ ತಮಿಳುನಾಡಿನಲ್ಲಿ ‘ಪೊಂಗಲ್’ ಎನ್ನಲಿ, ಇವೆಲ್ಲಾ ಹಬ್ಬಗಳೂ ಆಯಾ ಪ್ರದೇಶಗಳಲ್ಲಿ ವಿಶೇಷವಾಗಿವೆ ಮತ್ತು ಅವುಗಳಿಗೆ ಅದರದ್ದೇ ಆದ ಮಹತ್ವ ಇದೆ. ಈ ಎಲ್ಲಾ ಹಬ್ಬಗಳೂ ಬಹುಶಃ ಜನವರಿ 13 ರಿಂದ 17 ರ ಮಧ್ಯೆ ಆಚರಿಸಲ್ಪಡುತ್ತವೆ. ಈ ಎಲ್ಲಾ ಹಬ್ಬಗಳ ಹೆಸರು ಬೇರೆ ಬೇರೆ, ಆದರೆ ಇವುಗಳ ಮೂಲ ತತ್ವ ಒಂದೇ ಆಗಿದೆ. ಅದೆಂದರೆ ಪ್ರಕೃತಿ ಮತ್ತು ಕೃಷಿಯ ಜೊತೆಗಿನ ಸಂಬಂಧ.

ಎಲ್ಲಾ ದೇಶವಾಸಿಗಳಿಗೂ ಈ ಹಬ್ಬಗಳ ಹಾರ್ದಿಕ ಶುಭಾಶಯಗಳು. ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೊಸ ವರ್ಷ 2018 ರ ಶುಭಾಶಯಗಳು. ಅನಂತಾನಂತ ಧನ್ಯವಾದಗಳು ಪ್ರೀತಿಯ ದೇಶವಾಸಿಗಳೇ.

2018 ರಲ್ಲಿ ಮತ್ತೊಮ್ಮೆ ಮಾತನಾಡೋಣ.

ಧನ್ಯವಾದಗಳು.

  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷
  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷🌷
  • krishangopal sharma Bjp January 07, 2025

    नमो नमो 🙏 जय भाजपा 🙏🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌹🌷🌷🌷🌷🌷🌷🌷🌷🌹🌷🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌹🌷🌷🌷🌷🌷🌷🌷🌹🌷🌷🌹🌷🌷🌷
  • Atul Kumar Mishra December 04, 2024

    नमो नमो
  • Biswaranjan Mohapatra December 03, 2024

    jai shri Ram🙏
  • ram Sagar pandey November 07, 2024

    🌹🙏🏻🌹जय श्रीराम🙏💐🌹
  • Jitender Kumar Haryana BJP State President June 24, 2024

    Delhi court
  • Jitender Kumar Haryana BJP State President June 18, 2024

    Mistake by election commission
  • rida rashid February 19, 2024

    Jay ho
  • ज्योती चंद्रकांत मारकडे February 08, 2024

    जय हो
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian toy industry on a strong growthtrajectory; exports rise 40%, imports drop 79% in 5 years: Report

Media Coverage

Indian toy industry on a strong growthtrajectory; exports rise 40%, imports drop 79% in 5 years: Report
NM on the go

Nm on the go

Always be the first to hear from the PM. Get the App Now!
...
PM chairs a High-Level Meeting to review Ayush Sector
February 27, 2025
QuotePM undertakes comprehensive review of the Ayush sector and emphasizes the need for strategic interventions to harness its full potential
QuotePM discusses increasing acceptance of Ayush worldwide and its potential to drive sustainable development
QuotePM reiterates government’s commitment to strengthen the Ayush sector through policy support, research, and innovation
QuotePM emphasises the need to promote holistic and integrated health and standard protocols on Yoga, Naturopathy and Pharmacy Sector

Prime Minister Shri Narendra Modi chaired a high-level meeting at 7 Lok Kalyan Marg to review the Ayush sector, underscoring its vital role in holistic wellbeing and healthcare, preserving traditional knowledge, and contributing to the nation’s wellness ecosystem.

Since the creation of the Ministry of Ayush in 2014, Prime Minister has envisioned a clear roadmap for its growth, recognizing its vast potential. In a comprehensive review of the sector’s progress, the Prime Minister emphasized the need for strategic interventions to harness its full potential. The review focused on streamlining initiatives, optimizing resources, and charting a visionary path to elevate Ayush’s global presence.

During the review, the Prime Minister emphasized the sector’s significant contributions, including its role in promoting preventive healthcare, boosting rural economies through medicinal plant cultivation, and enhancing India’s global standing as a leader in traditional medicine. He highlighted the sector’s resilience and growth, noting its increasing acceptance worldwide and its potential to drive sustainable development and employment generation.

Prime Minister reiterated that the government is committed to strengthening the Ayush sector through policy support, research, and innovation. He also emphasised the need to promote holistic and integrated health and standard protocols on Yoga, Naturopathy and Pharmacy Sector.

Prime Minister emphasized that transparency must remain the bedrock of all operations within the Government across sectors. He directed all stakeholders to uphold the highest standards of integrity, ensuring that their work is guided solely by the rule of law and for the public good.

The Ayush sector has rapidly evolved into a driving force in India's healthcare landscape, achieving significant milestones in education, research, public health, international collaboration, trade, digitalization, and global expansion. Through the efforts of the government, the sector has witnessed several key achievements, about which the Prime Minister was briefed during the meeting.

• Ayush sector demonstrated exponential economic growth, with the manufacturing market size surging from USD 2.85 billion in 2014 to USD 23 billion in 2023.

•India has established itself as a global leader in evidence-based traditional medicine, with the Ayush Research Portal now hosting over 43,000 studies.

• Research publications in the last 10 years exceed the publications of the previous 60 years.

• Ayush Visa to further boost medical tourism, attracting international patients seeking holistic healthcare solutions.

• The Ayush sector has witnessed significant breakthroughs through collaborations with premier institutions at national and international levels.

• The strengthening of infrastructure and a renewed focus on the integration of artificial intelligence under Ayush Grid.

• Digital technologies to be leveraged for promotion of Yoga.

• iGot platform to host more holistic Y-Break Yoga like content

• Establishing the WHO Global Traditional Medicine Centre in Jamnagar, Gujarat is a landmark achievement, reinforcing India's leadership in traditional medicine.

• Inclusion of traditional medicine in the World Health Organization’s International Classification of Diseases (ICD)-11.

• National Ayush Mission has been pivotal in expanding the sector’s infrastructure and accessibility.

• More than 24.52 Cr people participated in 2024, International Day of Yoga (IDY) which has now become a global phenomenon.

• 10th Year of International Day of Yoga (IDY) 2025 to be a significant milestone with more participation of people across the globe.

The meeting was attended by Union Health Minister Shri Jagat Prakash Nadda, Minister of State (IC), Ministry of Ayush and Minister of State, Ministry of Health & Family Welfare, Shri Prataprao Jadhav, Principal Secretary to PM Dr. P. K. Mishra, Principal Secretary-2 to PM Shri Shaktikanta Das, Advisor to PM Shri Amit Khare and senior officials.