ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಎನ್.ಡಿ.ಎ ಸರಕಾರ ಕೈಗೊಂಡ ಕಾರ್ಯ ಚಟುವಟಿಕೆಗಳು, ಯೋಜನೆಗಳು, ಹಾಗೂ ನೀತಿಗಳನ್ನು ವಿಶ್ವದ ಅನೇಕ ಸಂಸ್ಥೆಗಳು ಬದಲಾವಣೆಯ ಪ್ರಕ್ರಿಯೆಯೆಂದು ಗುರುತಿಸಿ ಪ್ರಶಂಸಿಸಿವೆ.
2015-16ರಲ್ಲಿ 6.4% ಅಭಿವೃದ್ದಿಯಾಗಿದ್ದು ಇದು 2014-15 ರ ಸಾಲಿನಲ್ಲಿದ್ದ ವಾರ್ಷಿಕ 5.6%ಕ್ಕಿಂತ ಬಹಳ ಅಧಿಕವಾಗಿದೆ . ಇದನ್ನು ವಿಶ್ವ ಸಂಸ್ಥೆ ಮೋದಿ ಡೆವಿಡೆಂಡ್ ( ಲಾಭಾಂಶ ) ವೆಂದು ಗುರುತಿಸಿ ಪ್ರಶಂಸಿಸಿತು.
ವಿಶ್ವ ಸಂಸ್ಥೆಯ ಅಧ್ಯಕ್ಷರು ಭಾರತಕ್ಕೊಬ್ಬ ಯೋಚನಾಬದ್ಧ ಚಿಂತನಾರ್ಹ ಜನನಾಯಕ ಸಿಕ್ಕಿದ್ದಾನೆಂದು ಪ್ರಶಂಸಿಸಿದರು. ಇವರ ಕಾರ್ಯ ವೈಖರಿ ಅತ್ಯಂತ ವಿಶೇಷವಾಗಿದ್ದು, ಇದಕ್ಕೆ ಜನ್ ಧನ್ ಯೋಜನೆ ಮೂಲಕ ಜನಸಾಮಾನ್ಯನರನ್ನೆಲ್ಲ ಆರ್ಥಿಕ ವ್ಯವಸ್ಥೆಹೆ ತರಲು ಮಾಡಿದ ಪ್ರಯತ್ನವೇ ಸಾಕ್ಷಿ ಎಂದರು
ಐ.ಎಮ್. ಎಫ್. ದೇಶದ ಆರ್ಥಿಕ ಬದಲಾವಣೆಯ ಪರ್ವವನ್ನು ಅತ್ಯುತ್ತಮ ರೀತಿಯ ಸುಧಾರಣಾ ವ್ಯವಸ್ಥೆ ಎಂದು ತಿಳಿಸಿದೆ. ಇದು ಬಂಡವಾಳ ಹೂಡಿಕೆದಾರರ ವಿಶ್ವಾಸ ಬೆಳೆಸಲಿದೆ. ಎಂದು ತನ್ನ ವರದಿಯಲ್ಲಿ ತಿಳಿಸಿದೆ
ವಿಶ್ವದ ಇನ್ನೊಂದು ದಿಗ್ಗಜ ಆರ್ಥಿಕ ಸಂಸ್ಥೆ ಓಇಸಿಡಿ (Organisation for Economic Co-operation and Development -OECD) ಅತ್ಯಂತ ಧೃಡ ಭಲಿಷ್ಠ ಹಾಗೂ ಸಮರ್ಥ ಆರ್ಥಿಕತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಈ ದೇಶದಲ್ಲಿ ನಾವು ಕಾಣ ಬಹುದು ಎಂದು ತಿಳಿಸಿದೆ.
ಜಾಗತಿಕ ಸಂಸ್ಥೆ ಮೂಡಿ, ಸಕಾರಾತ್ಮಕ ದರ ವನ್ನು ಸಬಲತೆಯ ಲಕ್ಷಣವಾಗಿ ಸೂಚಿಸಿದೆ .ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಇದರ ಶ್ರೇಯಸ್ಸು ಮೋದಿ ಅವರ ತಂಡಕ್ಕೆ ಹೋಗುತ್ತದೆ.
ಉತ್ತಮ ಸ್ಪಂದನ ವಿಶ್ವ ಸಂಸ್ಥೆಯಿಂದ ಬಂತು. ಜಾಗತಿಕ ಆರ್ಥಿಕ ಪರಿಸ್ಥಿತಿಯ ಅರ್ಧ ವಾರ್ಷಿಕ ವರದಿಯಲ್ಲಿ ಭಾರತದ ಪ್ರಗತಿಯನ್ನು ಈ ವಾರ್ಷಿಕ ಸಾಲಿಗೆ 7% ಹೆಚ್ಚಳ ಗುರುತಿಸಿದ್ದು, ಮುಂಬರುವ ವರ್ಷಕ್ಕೆ ಇದು ಪೂರಕವಾಗಲಿದೆ.
ಸುಧಾರಣಾವಾದಿ ಪ್ರಧಾನ ಮಂತ್ರಿ ತ್ವರಿತಗತಿಯಲ್ಲಿ ಬದಲಾವಣೆ ತರುವ ಹುಮ್ಮಸ್ಸು ಹೊಂದಿದ್ದಾರೆ, ಇದನ್ನು ಜಗತ್ತೇ ಆಕರ್ಷಿಸಿದೆ. ಇದು ದೇಶದ ಆರ್ಥಿಕತೆಗೊಂದು ಆಶಾದಾಯಕ ಹೊಸ ದಿಗಂತವಾಗಿ ಬದಲಾಗಲಿದೆ.