ಕೋವಿಡ್-19 ವಿರುದ್ಧ 2021ರ ಜನವರಿ 16ರಂದು ಯಶಸ್ವಿ ಲಸಿಕೆ ಆಂದೋಲನ ಆರಂಭಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ನೆರೆಯ ರಾಷ್ಟ್ರಗಳ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಶ್ರೀ ಗೊತಬಯ ರಾಜಪಕ್ಸ ತಮ್ಮ ಟ್ವೀಟ್ ಸಂದೇಶದಲ್ಲಿ “ಕೋವಿಡ್-19 ವಿರುದ್ಧ ಯಶಸ್ವಿ ಲಸಿಕೆ ಬಿಡುಗಡೆ ಮಾಡಿದ್ದಕ್ಕಾಗಿ ಮತ್ತು ನೆರೆಯ ಮಿತ್ರ ರಾಷ್ಟ್ರಗಳ ಬಗ್ಗೆ ತೋರುತ್ತಿರುವ ಉದಾರತೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನನ್ನ ಹೃದಯಪೂರ್ವಕ ಅಭಿನಂದನೆಗಳು.’’ಎಂದು ಹೇಳಿದ್ದಾರೆ.
My heartiest congratulations to Prime Minister Shri @narendramodi on the successful roll out of the #COVID19 vaccine & his generosity towards friendly neighbouring countries. #COVID19Vaccination #india #SriLanka pic.twitter.com/ToscTxwge6
— Gotabaya Rajapaksa (@GotabayaR) January 17, 2021
ಶ್ರೀಲಂಕಾದ ಪ್ರಧಾನಮಂತ್ರಿ ಶ್ರೀ ಮಹಿಂದ ರಾಜಪಕ್ಸ ತಮ್ಮ ಟ್ವೀಟ್ ಸಂದೇಶದಲ್ಲಿ “ಕೋವಿಡ್-19 ವಿರುದ್ಧ ಬೃಹತ್ ಲಸಿಕೆ ಆಂದೋಲನ ಆರಂಭಿಸಿದ್ದು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಅದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಈ ಭೀಕರ ಸಾಂಕ್ರಾಮಿಕ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ನಾವು ಭಾವಿಸುತ್ತೇವೆ’’ಎಂದು ಹೇಳಿದ್ದಾರೆ.
Congratulations PM @narendramodi and the Government of India on taking this very important step with this massive #COVID19Vaccination drive. We are starting to see the beginning of the end to this devastating pandemic. @IndiainSL https://t.co/fcx8bO7RfV
— Mahinda Rajapaksa (@PresRajapaksa) January 16, 2021
ಮಾಲ್ಡವೀಸ್ ಗಣರಾಜ್ಯದ ಅಧ್ಯಕ್ಷ ಶ್ರೀ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಕೋವಿಡ್-19 ವಿರುದ್ಧ ಭಾರತದ ಜನಸಂಖ್ಯೆಗೆ ಲಸಿಕೆ ಹಾಕುವ ಮಹತ್ವದ ಕಾರ್ಯ ಆರಂಭಿಸಿರುವುದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇನೆ. ಈ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಲಿದ್ದೀರಿ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಮತ್ತು ಅಂತಿಮವಾಗಿ ನಾವು ಕೋವಿಡ್-19 ಬಿಕ್ಕಟ್ಟು ಅಂತ್ಯವಾಗಲಿರುವುದನ್ನು ಕಾಣಲಿದ್ದೇವೆ’’ಎಂದು ಹೇಳಿದ್ದಾರೆ.
Congratulations to PM @narendramodi and the Indian government for its landmark program to vaccinate India’s population against COVID-19. I’m highly confident that you’ll be successful in this endeavor and that we are finally seeing an end to the COVID-19 scourge.
— Ibrahim Mohamed Solih (@ibusolih) January 17, 2021
ಭೂತಾನ್ ಪ್ರಧಾನಮಂತ್ರಿ ಡಾ. ಲೋಟೇ ತ್ಸೆರಿಂಗ್ ಅವರು ತಮ್ಮ ಟ್ವೀಟ್ ನಲ್ಲಿ “ಕೋವಿಡ್-19 ವಿರುದ್ಧ ರಾಷ್ಟ್ರವ್ಯಾಪಿ ಯಶಸ್ವಿ ಲಸಿಕೆ ಆಂದೋಲನ ಆರಂಭಿಸಿರುವುದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಭಾರತದ ಜನತೆಯನ್ನು ಅಭಿನಂದಿಸುತ್ತೇನೆ. ಈ ಸಾಂಕ್ರಾಮಿಕ ಅವಧಿಯಲ್ಲಿ ಎಲ್ಲರೂ ಅನುಭವಿಸಿದ ಯಾತನೆಗಳಿಗೆ ಇದು ಉತ್ತರ ನೀಡಲಿದೆ ಎಂಬ ಭರವಸೆ ನನಗಿದೆ.” ಎಂದು ಹೇಳಿದ್ದಾರೆ.
I would like to congratulate PM @narendramodi and the people of India for the landmark launch of nationwide COVID-19 vaccination drive today. We hope it comes as an answer to pacify all the sufferings we have endured this pandemic. https://t.co/f921VupuJn pic.twitter.com/M9q3KKLFo3
— PM Bhutan (@PMBhutan) January 16, 2021