ಕುವೇತ್ ನಲ್ಲಿ ವಾಸಿಸುತ್ತಿರುವ ಎನ್.ಆರ್.ಐ. ವಿದ್ಯಾರ್ಥಿ ಮಾ. ರಿದ್ಧಿರಾಜ್ ಕುಮಾರ್, ಭಾರತೀಯ ಸೇನೆಯ ಕಲ್ಯಾಣ ನಿಧಿಗೆ 18,000 ರೂಪಾಯಿಗಳ ದೇಣಿಗೆಯ ಚೆಕ್ ಅನ್ನು ಪ್ರಧಾನಮಂತ್ರಿಯವರಿಗೆ ಅರ್ಪಿಸಿದರು. ಅವರು 80 ಕೆಡಿ (ಕುವೇತ್ ದಿನಾರ್), ದೇಣಿಗೆ ಮೊತ್ತಕ್ಕೆ ಸಮನಾದ ಹಣವನ್ನು ಎಸಿಇಆರ್ ನಲ್ಲಿ ಬಹುಮಾನದ ಮೊತ್ತವಾಗಿ ಗೆದ್ದಿದ್ದರು. ಮಾ. ರಿದ್ಧಿರಾಜ್ ಕುಮಾರ್ ಶ್ರೀ ನರೇಂದ್ರ ಮೋದಿ ಅವರನ್ನು ತಮ್ಮ ತಾಯಿಯೊಂದಿಗೆ ಇಂದು ಇಲ್ಲಿ ಭೇಟಿ ಮಾಡಿದರು.
ಕುವೇತ್ ನ ಭಾರತೀಯ ಶೈಕ್ಷಣಿಕ ಶಾಲೆಯ ವಿದ್ಯಾರ್ಥಿಯಾದ ಮಾ. ರಿದ್ಧಿರಾಜ್, ಆಸ್ಟ್ರೇಲಿಯಾ ಶೈಕ್ಷಣಿಕ ಸಂಶೋಧನಾ ಮಂಡಳಿ (ಎ.ಸಿ.ಇ.ಆರ್.) ನಡೆಸಿದ ಶ್ರೇಷ್ಠತೆಗಾಗಿ ಸುಧಾರಿತ ಶಿಕ್ಷಣ ಕಲಿಕೆಯ ಅಂತಾರಾಷ್ಟ್ರೀಯ ಮಾನದಂಡ ಪರೀಕ್ಷೆ (International Bench Mark Test)ನಲ್ಲಿ ಈ ಬಹುಮಾನ ಗೆದ್ದಿದ್ದರು. ಮಾ. ರಿದ್ಧಿರಾಜ್ ಮಧ್ಯಪ್ರಾಚ್ಯದಲ್ಲಿ ಗಣಿತ ಮತ್ತು ವಿಜ್ಞಾನ ಎರಡರಲ್ಲೂ ಪಾರಮ್ಯ ಮೆರೆದಿದ್ದರು ಮತ್ತು 80 ಕುವೇತ್ ದಿನಾರ್ ಗೆದ್ದಿದ್ದರು.
ಶ್ರೀ ನರೇಂದ್ರ ಮೋದಿ ಅವರು ಮಾ. ರಿದ್ಧಿರಾಜ್ ಅವರ ಔದಾರ್ಯ ಮತ್ತು ಶೈಕ್ಷಣಿಕ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಈ ಬಾಲಕ ತನ್ನ ಖಾತೆಯಲ್ಲಿ ಹಲವು ನಾವಿನ್ಯತೆಯ ಯೋಜನೆಗಳನ್ನು ಹೊಂದಿದ್ದಾನೆ ಎಂಬುದನ್ನೂ ಪ್ರಧಾನಿ ತಿಳಿದರು.
‘ಪ್ರತಿಯೊಂದು ಮಗುವೂ ಬುದ್ಧಿಶಾಲಿ ಯೋಜನೆ’ಯಲ್ಲಿ ತಾವು ಕೆಲಸ ಮಾಡುತ್ತಿರುವುದಾಗಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲು ಭಾರತದಲ್ಲಿ ಶಿಕ್ಷಕರಿಗೆ ಉಚಿತವಾಗಿ ವಿಚಾರಸಂಕಿರಣ ಏರ್ಪಡಿಸುತ್ತಿರುವುದಾಗಿ ವಿದ್ಯಾರ್ಥಿಯ ತಾಯಿ ಶ್ರೀಮತಿ ಕೃಪಾ ಭಟ್ ಪ್ರಧಾನಮಂತ್ರಿಯವರಿಗೆ ತಿಳಿಸಿದರು. ನಾವಿನ್ಯಪೂರ್ಣ ಕಲಿತಾ ಯೋಜನೆಯನ್ನು ಪಸರಿಸಲು ಅವರು ತೋರುತ್ತಿರುವ ಬದ್ಧತೆಗೆ ಪ್ರಧಾನಮಂತ್ರಿ ಆಕೆಯನ್ನೂ ಅಭಿನಂದಿಸಿದರು.