ವಿಶ್ವ ಮಹಿಳಾ ದಿನದಂದು ಪ್ರಧಾನಮಂತ್ರಿ ಅವರ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಡಾ. ಮಾಳ್ವಿಕ ಅಯ್ಯರ್, ‘ವಾಸ್ತವತೆಯನ್ನು ಸ್ವೀಕರಿಸುವುದು ನಮಗೆ ನಾವೇ ನೀಡುವ ಅತಿದೊಡ್ಡ ಬಹುಮಾನ’. ನಮ್ಮ ಬದುಕನ್ನು ನಾವೇ ನಿಯಂತ್ರಿಸಿಕೊಳ್ಳಲು ಸಾಧ್ಯವಿಲ್ಲ, ಆದರೆ ಜೀವನದ ನಿಟ್ಟಿನಲ್ಲಿ ನಮ್ಮ ವರ್ತನೆಗಳನ್ನು ನಾವು ಖಂಡಿತ ನಿಯಂತ್ರಿಸಿಕೊಳ್ಳಬಹುದು. ಅಂತಿಮವಾಗಿ ನಾವು ನಮಗೆ ಎದುರಾಗುವ ಸವಾಲುಗಳಿಂದ ಬದುಕುಳಿಯುವುದು ಅದರಿಂದ ಮಾತ್ರ ಸಾಧ್ಯ’ ಎಂದು ಹೇಳಿದ್ದಾರೆ.
ಡಾ. ಅಯ್ಯರ್, 13ನೇ ವರ್ಷದವರಾಗಿದ್ದಾದ ಭೀಕರ ಬಾಂಬ್ ಸ್ಫೋಟಕ್ಕೆ ತುತ್ತಾಗಿ, ತನ್ನ ಕೈ ಮತ್ತು ಕಾಲುಗಳು ಗಂಭೀರವಾಗಿ ಗಾಯಗೊಂಡಿದ್ದರೂ ಛಲದಿಂದ ಬದುಕುಳಿದಿದ್ದಾರೆ. ಆದರೆ ಅವರು ತಮ್ಮ ನಿಶ್ಚಯ ಬಿಟ್ಟುಕೊಡಲಿಲ್ಲ. ಆಕೆ ಕಠಿಣ ಶ್ರಮಪಟ್ಟರು ಮತ್ತು ಪಿಎಚ್ ಡಿ ಪಡೆಯುವವರೆಗೆ ಓದಿದರು. ಅವರು “ಬಿಟ್ಟು ಕೊಡುವುದು ಆಯ್ಕೆಯಾಗಬಾರದು, ನಿಮ್ಮ ಇತಿಮಿತಿಗಳನ್ನು ಮರೆಯಿರಿ ಮತ್ತು ವಿಶ್ವವನ್ನು ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಎದುರಿಸಿ’ ಎಂದರು.
ಡಾ. ಅಯ್ಯರ್, ಬದಲಾವಣೆಗೆ ಶಿಕ್ಷಣ ಅತ್ಯಂತ ಅವಶ್ಯಕ ಎಂದು ನಂಬಿರುವವರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಟ್ವಿಟ್ಟರ್ ಮೂಲಕ ಅವರು ಹೀಗೆ ಬರೆಯುತ್ತಾರೆ. “ನಾವು ತಾರತಮ್ಯದ ವರ್ತನೆಯ ಬಗ್ಗೆ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಅಗತ್ಯವಿದೆ. ವಿಕಲಚೇತನರನ್ನು ದುರ್ಬಲರು ಮತ್ತು ಅವಲಂಬಿತರು ಎಂದು ತೋರಿಸುವ ಬದಲು, ಅವರನ್ನು ಮಾದರಿ ಎಂಬಂತೆ ನಾವು ಜನರಿಗೆ ತೋರಿಸುವ ಅಗತ್ಯವಿದೆ’.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ‘ಮಹಿಳೆ ನಮ್ಮೆಲ್ಲರಿಗೂ ಸ್ಫೂರ್ತಿ’ ಅಭಿಯಾನಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದ ಡಾ. ಮಾಳ್ವಿಕ ಅಯ್ಯರ್, “ನಮ್ಮ ನಡವಳಿಕೆ ಅಥವಾ ವರ್ತನೆ ನಾವು ವಿಕಲಾಂಗತೆ ವಿರುದ್ಧ ಹೋರಾಡುವ ಅರ್ಧ ಯುದ್ಧ ಎಂದು ಭಾವಿಸಬೇಕು. ಪ್ರಧಾನಿ ಅವರು, ಮಹಿಳಾ ದಿನದ ಬಗ್ಗೆ ನನ್ನ ಅನಿಸಿಕೆಗಳನ್ನು ಪ್ರಸಾರ ಮಾಡಲು ಆಯ್ಕೆ ಮಾಡಿರುವುದು ಭಾರತ ದಿವ್ಯಾಂಗರ ಬಗ್ಗೆ ಶತಮಾನಗಳಷ್ಟು ಹಳೆಯದಾದ ಮೂಢನಂಬಿಕೆಗಳನ್ನು ಹೊಡೆದೋಡಿಸಿ, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಂಬುವಂತೆ ಮಾಡಿದೆ’ ಎಂದು ಹೇಳಿದ್ದಾರೆ
Acceptance is the greatest reward we can give to ourselves. We can’t control our lives but we surely can control our attitude towards life. At the end of the day, it is how we survive our challenges that matters most.
— Narendra Modi (@narendramodi) March 8, 2020
Know more about me and my work- @MalvikaIyer #SheInspiresUs pic.twitter.com/T3RrBea7T9