ಪಿಎಂ-ಕಿಸಾನ್ ಯೋಜನೆ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡ ತರುವಾಯ, ಪ್ರಧಾನಮಂತ್ರಿ ಮೋದಿ, ಪಿಎಂ-ಕಿಸಾನ್ ಯೋಜನೆಯಡಿ ಎಲ್ಲ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ವಿತರಿಸುವ ಸ್ಯಾಚುರೇಷನ್ ಅಭಿಯಾನದ ಅನಾವರಣ ಮಾಡಿದ್ದಾರೆ. ಈ ಪ್ರಯತ್ನದ ಭಾಗವಾಗಿ, ದೇಶದಾದ್ಯಂತ ಪಿಎಂ ಕಿಸಾನ್ ಯೋಜನೆಯ 25ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒದಗಿಸಲಾಗುತ್ತಿದೆ.
ಹೆಚ್ಚಿನ ಬೇಸಾಯದ ವೆಚ್ಚವನ್ನು ನಿಭಾಯಿಸಲು ಬ್ಯಾಂಕುಗಳಿಂದ ಸಾಂಸ್ಥಿಕ ಸಾಲವನ್ನು ಪಡೆಯಲು ರೈತರಿಗೆ ಸಹಾಯ ಮಾಡುವ ಸಲುವಾಗಿ ಕೆಸಿಸಿ ಯೋಜನೆಯಿಂದ ರೈತರಿಗೆ ಲಾಭವಾಗಲೆಂದು ಕೇಂದ್ರ ಸರ್ಕಾರ ಇದಕ್ಕೆ ಚಾಲನೆ ನೀಡಿದೆ.
ಗ್ರಾಮೀಣ ಪ್ರದೇಶದ 2000ಕ್ಕೂ ಹೆಚ್ಚು ಬ್ಯಾಂಕ್ ಶಾಖೆಗಳಿಗೆ ರೈತರಿಗೆ ಕೆಸಿಸಿ ಕಾರ್ಡ್ ಪೂರೈಸುವ ಗುರಿ ನೀಡಲಾಗಿದೆ. ರೈತರು ಶೇಕಡ 4ರ ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಲಿದ್ದಾರೆ. ಸರ್ಕಾರ ಇದಕ್ಕಾಗಿ 20 ಸಾವಿರ ಕೋಟಿ ರೂ. ಅಂದಾಜು ಮಾಡಿದ್ದು, ಇದನ್ನು ಕೆಸಿಸಿ ಕಾರ್ಡ್ ದಾರರಿಗೆ ಸಾಲ ಮಂಜೂರು ಮಾಡಲು ಬಳಸಲಾಗುತ್ತದೆ.