ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾಶಿಯ ದೇವ್ ದೀಪಾವಳಿಯಲ್ಲಿ ಭಾರತದ ಸಾಂಸ್ಕೃತಿಕ ವೈಭವದ ದರ್ಶನ ಪಡೆದ ಹಲವಾರು ರಾಷ್ಟ್ರಗಳ ರಾಜತಾಂತ್ರಿಕರ ಉಪಸ್ಥಿತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಶ್ರೀ ಮೋದಿಯವರು 'ಎಕ್ಸ್' ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದಾರೆ.
"ಕಾಶಿಯು ದೇವ್ ದೀಪಾವಳಿಗೆ ಸಮಾನಾರ್ಥಕವಾಗಿದೆ. ಈ ವರ್ಷವೂ ಆಚರಣೆಗಳು ಅದ್ಧೂರಿಯಾಗಿದ್ದು, ಅಷ್ಟೇ ಸಂತೋಷದಾಯಕವಾಗಿದೆ. ಹಲವಾರು ರಾಷ್ಟ್ರಗಳ ರಾಜತಾಂತ್ರಿಕ ಪ್ರಮುಖರು ಭಾರತದ ಸಾಂಸ್ಕೃತಿಕ ಚೈತನ್ಯದ ಒಂದು ನೋಟವನ್ನು ಕಣ್ತುಂಬಿಕೊಂಡಿರುವುದು ಇನ್ನಷ್ಟು ಸಂತಸ ತಂದಿದೆ," ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
Kashi is synonymous with Dev Deepavali and this year as well, the celebrations have been grand. Equally gladdening is the august presence of diplomats from several nations, who have got a glimpse of India’s cultural vibrancy. pic.twitter.com/86LsctHjrj
— Narendra Modi (@narendramodi) November 27, 2023