ಮಾಜಿ ಕೇಂದ್ರ ಸಚಿವ ಶ್ರೀ ಕೆ.ಜೆ. ಅಲ್ಫೋನ್ಸ್ ಅವರು ತಮ್ಮ 'ಭಾರತದ ವೇಗವರ್ಧನೆ: 7 ವರ್ಷಗಳ ಮೋದಿ ಸರಕಾರ' ಪುಸ್ತಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೊಡುಗೆಯಾಗಿ ನೀಡಿದರು. ಅಲ್ಫೋನ್ಸ್ ಅವರು ತಮ್ಮ ʻಭಾರತದ ವೇಗವರ್ಧನೆʼ ಕೃತಿಯಲ್ಲಿ ಭಾರತದ ಸುಧಾರಣಾ ಪಯಣದ ಆಯಾಮಗಳನ್ನು ಸೆರೆಹಿಡಿಯಲು ಪ್ರಶಂಸನೀಯ ಪ್ರಯತ್ನ ಮಾಡಿರುವುದಾಗಿ ಪ್ರಧಾನಿ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ನನ್ನ ಗೌರವಾನ್ವಿತ ಸಹೋದ್ಯೋಗಿ ಶ್ರೀ ಅಲ್ಫೋನ್ಸ್ @alphonstourism ಅವರು ತಮ್ಮ 'ಭಾರತದ ವೇಗವರ್ಧನೆ' ಎಂಬ ಕೃತಿಯಲ್ಲಿ ಭಾರತದ ಸುಧಾರಣಾ ಪ್ರಯಾಣದ ವಿವಿಧ ಆಯಾಮಗಳನ್ನು ಸೆರೆಹಿಡಿಯುವಲ್ಲಿ ಪ್ರಶಂಸನೀಯ ಪ್ರಯತ್ನ ಮಾಡಿದ್ದಾರೆ. ಅವರಿಂದ ಪುಸ್ತಕದ ಪ್ರತಿಯನ್ನು ಸ್ವೀಕರಿಸಲು ಸಂತೋಷವಾಯಿತು," ಎಂದಿದ್ದಾರೆ.
My valued colleague, Shri @alphonstourism has made a commendable effort to encapsulate facets of India’s reform journey in his work, ‘Accelerating India.’ Delighted to receive a copy from him. pic.twitter.com/CP25NfJPaj
— Narendra Modi (@narendramodi) August 26, 2021