ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಗೌರವಾನ್ವಿತ ಆಂಥೋನಿ ಅಲ್ಬನೀಸ್ ಎಂಪಿ ಅವರು 2024ರ ನವೆಂಬರ್ 19ರಂದು ರಿಯೋ ಡಿ ಜನೈರೊದಲ್ಲಿ ನಡೆದ ʻಗ್ರೂಪ್ ಆಫ್ 20ʼ (ಜಿ 20) ಶೃಂಗಸಭೆಯ ನೇಪಥ್ಯದಲ್ಲಿ ಎರಡನೇ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆ ನಡೆಸಿದರು.

2025ರಲ್ಲಿ ನಡೆಯಲಿರುವ ʻಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆʼಯ ಐದನೇ ವಾರ್ಷಿಕೋತ್ಸವಕ್ಕೆ ಮುಂಚಿತವಾಗಿ, ಹವಾಮಾನ ಬದಲಾವಣೆ ಮತ್ತು ನವೀಕರಿಸಬಹುದಾದ ಇಂಧನ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ಸಂಶೋಧನೆ, ಕೌಶಲ್ಯಗಳು, ಸಾರಿಗೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ, ಸಮುದಾಯ ಮತ್ತು ಸಾಂಸ್ಕೃತಿಕ ಸಂಪರ್ಕಗಳು ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಉಭಯ ಪ್ರಧಾನ ಮಂತ್ರಿಗಳು ಪರಿಶೀಲಿಸಿದರು.

ಉಭಯ ಪ್ರಧಾನ ಮಂತ್ರಿಗಳು ನಮ್ಮ ವಲಯದ ಪರಸ್ಪರ ಸಮಾನ ಹಿತಾಸಕ್ತಿಗಳ ಬಗ್ಗೆ ಬೆಳಕು ಚೆಲ್ಲಿದರು. ನಿಕಟ ದ್ವಿಪಕ್ಷೀಯ ಸಂಬಂಧಗಳಿಂದ  ಉಭಯ ರಾಷ್ಟ್ರಗಳಿಗೆ ಹಾಗೂ ವಿಶಾಲ ಪ್ರದೇಶಕ್ಕೆ ಪ್ರಯೋಜನವಾಗಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನಿರಂತರವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಉನ್ನತ ಮಟ್ಟದ ಸಂಪರ್ಕ ಮತ್ತು ಸಚಿವರ ಪಾಲ್ಗೊಳ್ಳುವಿಕೆಯನ್ನು ಅವರು ಸ್ವಾಗತಿಸಿದರು. ಸಹಕಾರವನ್ನು ಆಳಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನ ಮಂತ್ರಿಗಳು ಪರಸ್ಪರ ಲಾಭಕ್ಕಾಗಿ ಪ್ರಯತ್ನಗಳನ್ನು ಕೇಂದ್ರೀಕರಿಸಲು ಮತ್ತು ವೇಗಗೊಳಿಸಲು ಸಹಮತ ವ್ಯಕ್ತಪಡಿಸಿದರು. ಪರಸ್ಪರ ಹಂಚಿಕೊಂಡ ಸಾಮಾನ್ಯ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಉಪಕ್ರಮಗಳನ್ನು ಘೋಷಿಸಿದರು.


ಆರ್ಥಿಕತೆ, ವ್ಯಾಪಾರ ಮತ್ತು ಹೂಡಿಕೆ

ʻಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದʼದ(ಇಸಿಟಿಎ) ಅಡಿಯಲ್ಲಿ ಸಕ್ರಿಯಗೊಳಿಸಲಾದ ಸರಕು ಮತ್ತು ಸೇವೆಗಳಿಗೆ ಹೆಚ್ಚುತ್ತಿರುವ ದ್ವಿಮುಖ ವ್ಯಾಪಾರ, ವ್ಯಾಪಾರ ತೊಡಗಿಸಿಕೊಳ್ಳುವಿಕೆ ಮತ್ತು ಮಾರುಕಟ್ಟೆ ಪ್ರವೇಶದ ಬಗ್ಗೆ ಪ್ರಧಾನ ಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಆರ್ಥಿಕ ಸಂಬಂಧದ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ, ಸಮತೋಲಿತ ಮತ್ತು ಪರಸ್ಪರ ಪ್ರಯೋಜನಕಾರಿ ಸಮಗ್ರ ಆರ್ಥಿಕ ಸಹಕಾರ ಒಪ್ಪಂದದ (ಸಿಇಸಿಎ) ದಿಕ್ಕಿನಲ್ಲಿ ಉತ್ತಮ ಕೆಲಸ ಆಗಿರುವುದನ್ನು ಅವರು ಸ್ವಾಗತಿಸಿದರು.

'ಮೇಕ್ ಇನ್ ಇಂಡಿಯಾ' ಮತ್ತು 'ಫ್ಯೂಚರ್ ಮೇಡ್ ಇನ್ ಆಸ್ಟ್ರೇಲಿಯಾ' ಪೂರಕ ಮತ್ತು ಸಹಯೋಗದ ಸಾಮರ್ಥ್ಯವನ್ನು ಹೊಂದಿವೆ. ಜೊತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲು, ಆರ್ಥಿಕ ಬೆಳವಣಿಗೆಯನ್ನು ಅನಾವರಣಗೊಳಿಸಲು ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಭವಿಷ್ಯದ ಸಮೃದ್ಧಿಯನ್ನು ಭದ್ರಪಡಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿಗಳು ಅಭಿಪ್ರಾಯಪಟ್ಟರು. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರತಿಬಿಂಬಿಸುವ ಹೆಚ್ಚಿನ ದ್ವಿಮುಖ ಹೂಡಿಕೆಗಳಿಗೆ ಉಭಯ ನಾಯಕರು ಕರೆ ನೀಡಿದರು. ಇದೇ ವೇಳೆ, ಎರಡೂ ದೇಶಗಳ ಆರ್ಥಿಕತೆಗಳ ನಡುವೆ ಹೆಚ್ಚಿನ ಸಮನ್ವಯವನ್ನು ಸಾಧಿಸುವ ಮಾರ್ಗಗಳನ್ನು ಅನ್ವೇಷಿಸಲು ಹಾಗೂ ಎರಡೂ ದಿಕ್ಕುಗಳಲ್ಲಿ ಪರಸ್ಪರ ಪ್ರಯೋಜನಕಾರಿ ಹೂಡಿಕೆಗಳನ್ನು ಉತ್ತೇಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ʻಆಸ್ಟ್ರೇಲಿಯಾ-ಭಾರತ ವ್ಯಾಪಾರ ವಿನಿಮಯ ಕೇಂದ್ರʼ(ಎಐಬಿಎಕ್ಸ್) ಕಾರ್ಯಕ್ರಮವನ್ನು ಜುಲೈ 2024ರಿಂದ ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸಿರುವುದನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳನ್ನು ಸಂಪರ್ಕಿಸಲು ಮತ್ತು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ವ್ಯವಹಾರಗಳ ವಿಶ್ವಾಸ ಮತ್ತು ಸಾಮರ್ಥ್ಯಗಳನ್ನು ʻಎಐಬಿಎಕ್ಸ್ʼ ಕಾರ್ಯಕ್ರಮವು ಹೆಚ್ಚಿಸುತ್ತಲೇ ಇದೆ.


ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ

ಭಾರತ ಮತ್ತು ಆಸ್ಟ್ರೇಲಿಯಾ ಹವಾಮಾನ ಉಪಕ್ರಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವೇಗವಾಗಿ ಮುಂದುವರಿಯಲು, ಒಟ್ಟಾಗಿ ಕೆಲಸ ಮಾಡಲು ನಮ್ಮ ಪೂರಕ ಸಾಮರ್ಥ್ಯಗಳನ್ನು ನಿಯೋಜಿಸುವ ಮಹತ್ವಾಕಾಂಕ್ಷೆಯನ್ನು ಪರಸ್ಪರ ಹಂಚಿಕೊಂಡಿವೆ. ಸೌರ ಪಿವಿ, ಹಸಿರು ಜಲಜನಕ, ಇಂಧನ ಸಂಗ್ರಹಣೆ, ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ದ್ವಿಮುಖ ಹೂಡಿಕೆಯಂತಹ ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರದ ನೀತಿ ಚೌಕಟ್ಟನ್ನು ಒದಗಿಸುವ ʻಭಾರತ-ಆಸ್ಟ್ರೇಲಿಯಾ ನವೀಕರಿಸಬಹುದಾದ ಇಂಧನ ಪಾಲುದಾರಿಕೆʼ(ಆರ್‌ಇಪಿ) ಆರಂಭವನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಭವಿಷ್ಯದ ನವೀಕರಿಸಬಹುದಾದ ಇಂಧನ ಕಾರ್ಯಪಡೆಗಾಗಿ ಕೌಶಲ್ಯ ತರಬೇತಿಯನ್ನು ಸಹ ʻಆರ್‌ಇಪಿʼ ನವೀಕರಿಸಿದೆ.


ಭಾರತದ ʻಖನಿಜ್ ಬಿದೇಶ್ ಲಿಮಿಟೆಡ್ʼ(ಕೆಎಬಿಐಎಲ್‌) ಮತ್ತು ಆಸ್ಟ್ರೇಲಿಯಾದ ʻಕ್ರಿಟಿಕಲ್ ಮಿನರಲ್ಸ್ ಆಫೀಸ್ʼ ನಡುವಿನ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿನ ಪ್ರಗತಿಯು ವಾಣಿಜ್ಯ ಸಂಪರ್ಕಗಳನ್ನು ಬೆಳೆಸಲು ಮತ್ತು ಪೂರೈಕೆ ಸರಪಳಿ ವೈವಿಧ್ಯೀಕರಣ ಹಿತಾಸಕ್ತಿಗಳನ್ನು ಮುನ್ನಡೆಸಲು ಒಂದು ಸದಾವಕಾಶವೆಂದು ಪ್ರಧಾನ ಮಂತ್ರಿಗಳು ಉಲ್ಲೇಖಿಸಿದರು. ಪರಸ್ಪರರ ಸಮ್ಮೇಳನಗಳಲ್ಲಿ ಭಾಗವಹಿಸುವುದು ಸೇರಿದಂತೆ ಸಂಶೋಧನೆ ಮತ್ತು ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ವಿನಿಮಯದ ಪಾತ್ರವನ್ನು ನಾಯಕರು ಒತ್ತಿಹೇಳಿದರು; ಜೊತೆಗೆ, ಬ್ಯಾಟರಿಗಳು ಮತ್ತು ರೂಫ್ ಟಾಪ್ ಸೌರಶಕ್ತಿಯಂತಹ ತಂತ್ರಜ್ಞಾನಗಳಿಗೆ ಒಳಹರಿವು ಸೇರಿದಂತೆ ಜಾಗತಿಕ ಶುದ್ಧ ಇಂಧನ ಪರಿವರ್ತನೆಗೆ ಬೆಂಬಲವಾಗಿ ನಿರ್ಣಾಯಕ ಖನಿಜಗಳ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ಸುಸ್ಥಿರ ಅಭ್ಯಾಸಗಳು ಮಹತ್ವವನ್ನೂ ಅವರು ಒತ್ತಿ ಹೇಳಿದರು.

ಬಾಹ್ಯಾಕಾಶ ಸಂಸ್ಥೆ ಮತ್ತು ಬಾಹ್ಯಾಕಾಶ ಉದ್ಯಮ ಮಟ್ಟದಲ್ಲಿ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಬಾಹ್ಯಾಕಾಶ ಪಾಲುದಾರಿಕೆಯನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಗಗನಯಾನ ಕಾರ್ಯಾಚರಣೆಗಳನ್ನು ಬೆಂಬಲಿಸುವಲ್ಲಿ ಸಹಕಾರ; ಜೊತೆಗೆ 2026ರಲ್ಲಿ ಭಾರತೀಯ ಉಡ್ಡಯನ ವಾಹನದಲ್ಲಿ ಆಸ್ಟ್ರೇಲಿಯಾದ ಉಪಗ್ರಹಗಳ ಯೋಜಿತ ಉಡಾವಣೆ ಹಾಗೂ ಉಭಯ ದೇಶಗಳ ಬಾಹ್ಯಾಕಾಶ ಉದ್ಯಮಗಳ ನಡುವಿನ ಜಂಟಿ ಯೋಜನೆಗಳು ಈ ಆಳವಾದ ಸಹಯೋಗಕ್ಕೆ ಉದಾಹರಣೆಯಾಗಿದೆ ಎಂದು ನಾಯಕರು ಸಹಮತ ವ್ಯಕ್ತಪಡಿಸಿದರು.


ರಕ್ಷಣಾ ಮತ್ತು ಭದ್ರತಾ ಸಹಕಾರ

ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ರಕ್ಷಣಾ ಮತ್ತು ಭದ್ರತಾ ಸ್ತಂಭದ ಅಡಿಯಲ್ಲಿ ಸುಸ್ಥಿರ ಪ್ರಗತಿಯನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಎರಡೂ ದೇಶಗಳ ಉನ್ನತ ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆ ಹಾಗೂ ಕಾರ್ಯತಂತ್ರದ ಒಮ್ಮತದ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ 2025ರಲ್ಲಿ ರಕ್ಷಣಾ ಮತ್ತು ಭದ್ರತಾ ಸಹಕಾರದ ಜಂಟಿ ಘೋಷಣೆಯನ್ನು ನವೀಕರಿಸುವ ಹಾಗೂ ಬಲಪಡಿಸುವ ಉದ್ದೇಶವನ್ನು ಅವರು ವ್ಯಕ್ತಪಡಿಸಿದರು. ಸಾಮೂಹಿಕ ಶಕ್ತಿಯನ್ನು ಹೆಚ್ಚಿಸಲು, ಎರಡೂ ದೇಶಗಳ ಭದ್ರತೆಗೆ ಕೊಡುಗೆ ನೀಡಲು ಹಾಗೂ ಪ್ರಾದೇಶಿಕ
ಶಾಂತಿ-ಭದ್ರತೆಗೆ ಪ್ರಮುಖ ಕೊಡುಗೆ ನೀಡಲು ಉಭಯ ದೇಶಗಳ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಯೋಗದ ದೀರ್ಘಕಾಲೀನ ದೃಷ್ಟಿಕೋನದ ಬಗ್ಗೆ ಪ್ರಧಾನ ಮಂತ್ರಿಗಳು ನಿರೀಕ್ಷೆ ವ್ಯಕ್ತಪಡಿಸಿದರು.

ರಕ್ಷಣಾ ಸಮರಾಭ್ಯಾಸಗಳು, ಹೆಚ್ಚುತ್ತಿರುವ ವಿನಿಮಯಗಳ ಆವರ್ತನ ಹಾಗೂ ಬಾಹುಳ್ಯ, ಪರಸ್ಪರ ಸರಕು-ಸಾಗಣೆ ಬೆಂಬಲ ವ್ಯವಸ್ಥೆಯ ಅನುಷ್ಠಾನದ ಮೂಲಕ ಹೆಚ್ಚುತ್ತಿರುವ ಪರಸ್ಪರ ಕಾರ್ಯಸಾಧ್ಯತೆಯನ್ನು ನಾಯಕರು ಶ್ಲಾಘಿಸಿದರು.

ಕಾರ್ಯಾಚರಣೆಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು, ಪರಸ್ಪರ ಹಂಚಿಕೊಂಡ ಸಮಾನ ಕಾಳಜಿಗಳು ಮತ್ತು ಸವಾಲುಗಳನ್ನು ಪರಿಹರಿಸಲು ಹಾಗೂ ಮುಕ್ತ, ಅಂತರ್ಗತ, ಶಾಂತಿಯುತ, ಸ್ಥಿರ, ಸಮೃದ್ಧ ಇಂಡೋ-ಪೆಸಿಫಿಕ್ ಕಡೆಗೆ ಕೆಲಸ ಮಾಡಲು ಕಡಲ ಕ್ಷೇತ್ರದ ಜಾಗೃತಿಯನ್ನು ಹೆಚ್ಚಿಸುವ ವ್ಯವಸ್ಥೆಗಳು ಅಗತ್ಯವನ್ನು ಉಭಯ ನಾಯಕರು ಸಹಮತಿಸಿದರು. ಜೊತೆಗೆ, ಹೆಚ್ಚಿದ ಮತ್ತು ಪರಸ್ಪರ ರಕ್ಷಣಾ ಮಾಹಿತಿ ಹಂಚಿಕೆಯನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಜಂಟಿ ಕಡಲ ಭದ್ರತೆ ಸಹಯೋಗ ರಸ್ತೆ ನಕ್ಷೆಯನ್ನು ಅಭಿವೃದ್ಧಿಪಡಿಸಲು ಅವರು ಸಮ್ಮತಿಸಿದರು. ಪರಿಚಿತ ಕಾರ್ಯಾಚರಣೆ ಮೂಲಕ ಉಭಯ ದೇಶಗಳು ಪರಸ್ಪರ ಪ್ರದೇಶಗಳಿಂದ ವಿಮಾನ ನಿಯೋಜನೆಯನ್ನು ಮುಂದುವರಿಸಲು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು.

ಕಡಲ ಉದ್ಯಮ ಸೇರಿದಂತೆ ರಕ್ಷಣಾ ಉದ್ಯಮ, ಸಂಶೋಧನೆ ಹಾಗೂ ವಸ್ತುಗಳ ವಿಚಾರದಲ್ಲಿ ಸಹಕಾರದ ಮಹತ್ವವನ್ನು ಪ್ರಧಾನ ಮಂತ್ರಿಗಳು ಎತ್ತಿ ತೋರಿದರು. ಜೊತೆಗೆ, ಪರ್ತ್‌ನಲ್ಲಿ ನಡೆದ ʻಹಿಂದೂ ಮಹಾಸಾಗರ ರಕ್ಷಣಾ ಮತ್ತು ಭದ್ರತೆ ಸಮ್ಮೇಳನ-2024ʼ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಭೂ ಪಡೆಗಳ ಪ್ರದರ್ಶನದಲ್ಲಿ ಭಾರತೀಯ ರಕ್ಷಣಾ ಕೈಗಾರಿಕೆಗಳ ಮೊದಲ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದರು. ಪರಸ್ಪರರ ಪ್ರಮುಖ ರಕ್ಷಣಾ ವ್ಯಾಪಾರ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶಗಳು ಸೇರಿದಂತೆ ಭಾರತ ಮತ್ತು ಆಸ್ಟ್ರೇಲಿಯಾದ ರಕ್ಷಣಾ ಕೈಗಾರಿಕಾ ನೆಲೆಗಳು ಮತ್ತು ರಕ್ಷಣಾ ನವೋದ್ಯಮಗಳ ನಡುವಿನ ಅಂತರ ಸಂಪರ್ಕವನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ರಚನಾತ್ಮಕ ಚರ್ಚೆಗಳನ್ನು ಮುಂದುವರಿಸಲು ಮತ್ತು ಮುಂದಿನ ಕ್ರಮಗಳನ್ನು ವಿವರಿಸಲು ಮುಂದಿನ ದಿನಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರಕ್ಷಣಾ ಉದ್ಯಮದ ನಿಯೋಗದ ಭೇಟಿಗಳನ್ನು ನಿರೀಕ್ಷಿಸುತ್ತಿರುವುದಾಗಿ ಅವರು ಹೇಳಿದರು.

ಸಂಸದೀಯ ಸಹಕಾರ

ಅಂತರ ಸಂಸದೀಯ ಸಹಕಾರವು ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಪ್ರಮುಖ ಅಂಶವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನ ಮಂತ್ರಿಗಳು  ನಿರಂತರ ವಿನಿಮಯವನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.

ಶಿಕ್ಷಣ, ಕ್ರೀಡೆ ಮತ್ತು ಜನರ ನಡುವಿನ ಸಂಬಂಧಗಳು

ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಜನರು-ಜನರ ನಡುವೆ ಹೆಚ್ಚುತ್ತಿರುವ ಸಂಪರ್ಕದ ಬಲವನ್ನು ಇಬ್ಬರೂ ನಾಯಕರು ಗುರುತಿಸಿದರು. ಭಾರತೀಯ ಪರಂಪರೆಗೆ ಆಸ್ಟ್ರೇಲಿಯನ್ನರ ಮಹತ್ವದ ಕೊಡುಗೆಯನ್ನು ಸ್ವಾಗತಿಸಿದರು ಮತ್ತು ಈ 'ಜೀವಂತ ಸೇತುವೆ'ಯನ್ನು ಮತ್ತಷ್ಟು ಬಲಪಡಿಸಲು ಸಹಮತಿಸಿದರು.

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಹೊಸ ಕಾನ್ಸುಲೇಟ್ ಜನರಲ್ ಮತ್ತು ಬ್ರಿಸ್ಬೇನ್‌ನಲ್ಲಿ ಭಾರತದ ಹೊಸ ಕಾನ್ಸುಲೇಟ್ ಜನರಲ್ ತೆರೆಯುವ ಪ್ರಸ್ತಾಪವನ್ನು ಪ್ರಧಾನ ಮಂತ್ರಿಗಳು ಸ್ವಾಗತಿಸಿದರು. ಇವು ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಆಳಗೊಳಿಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಚಲನಶೀಲತೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಅವಕಾಶಗಳು ಆರ್ಥಿಕ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿಯಾಗಿವೆ ಎಂದು ಪ್ರಧಾನ ಮಂತ್ರಿಗಳು ಗುರುತಿಸಿದರು. ಅಕ್ಟೋಬರ್ 2024ರಲ್ಲಿ ಭಾರತಕ್ಕಾಗಿ ಆಸ್ಟ್ರೇಲಿಯಾದ ʻವರ್ಕಿಂಗ್ ಹಾಲಿಡೇ ಮೇಕರ್ ವೀಸಾʼ ಕಾರ್ಯಕ್ರಮವನ್ನು ಅವರು ಸ್ವಾಗತಿಸಿದರು. ಆರಂಭಿಕ ವೃತ್ತಿಪರರ ಪ್ರಯಾಣವನ್ನು ಉತ್ತೇಜಿಸುವ ಮತ್ತು ʻಪ್ರತಿಭಾವಂತ ಆರಂಭಿಕ-ವೃತ್ತಿಪರರಿಗಾಗಿ ಆಸ್ಟ್ರೇಲಿಯಾದ  ಮೊಬಿಲಿಟಿ ಅರೇಂಜ್ಮೆಂಟ್ ಸ್ಕೀಮ್ʼ(ಮ್ಯಾಟ್ಸ್) ಪ್ರಾರಂಭವನ್ನು ಎದುರು ನೋಡುತ್ತಿರುವುದಾಗಿ ಪ್ರಧಾನ ಮಂತ್ರಿಗಳು ಹೇಳಿದರು. ಇದು ಭಾರತದ ಕೆಲವು ಪ್ರತಿಭಾವಂತ ʻಸ್ಟೆಮ್ʼ ಪದವೀಧರರಿಗೆ ಆಸ್ಟ್ರೇಲಿಯಾದ ಉದ್ಯಮ ಪ್ರವೇಶವನ್ನು ಒದಗಿಸುವ ನಿಟ್ಟಿನಲ್ಲಿ ನೆರವಾಗಲಿದೆ.

ಬಲವಾದ ಮತ್ತು ಬೆಳೆಯುತ್ತಿರುವ ಶೈಕ್ಷಣಿಕ ಪಾಲುದಾರಿಕೆಯ ಮೌಲ್ಯವನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಸ್ಥಾಪಿಸುತ್ತಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದರು. 2024ರ ಅಕ್ಟೋಬರ್‌ನಲ್ಲಿ ನಡೆದ ಎರಡನೇ ʻಆಸ್ಟ್ರೇಲಿಯಾ ಭಾರತ ಶಿಕ್ಷಣ ಮತ್ತು ಕೌಶಲ್ಯ ಮಂಡಳಿ ಸಭೆʼಯು ಶೈಕ್ಷಣಿಕ ಮತ್ತು ಕೌಶಲ್ಯ ಸಹಕಾರವನ್ನು ಮುನ್ನಡೆಸಲು ಸಹಾಯ ಮಾಡಿದೆ ಎಂದು ಪ್ರಧಾನ ಮಂತ್ರಿಗಳು ಗಮನಿಸಿದರು.

ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು, ಜನರ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಕ್ರೀಡೆ ಮಹತ್ವದ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನ ಮಂತ್ರಿಗಳು ಒತ್ತಿ ಹೇಳಿದರು. ತರಬೇತಿ ಮತ್ತು ಕಾರ್ಯಪಡೆ ಅಭಿವೃದ್ಧಿ, ಕ್ರೀಡಾ ವಿಜ್ಞಾನ ಮತ್ತು ಔಷಧ ಹಾಗೂ ಪ್ರಮುಖ ಕ್ರೀಡಾ ಕಾರ್ಯಕ್ರಮ ನಿರ್ವಹಣೆಯ ಮೇಲೆ ಗಮನ ಕೇಂದ್ರೀಕರಿಸಿ, ಸಾಮರ್ಥ್ಯ ವರ್ಧನೆಯಲ್ಲಿ ತೊಡಗಿಸಿಕೊಳ್ಳಲು ಅವರು ಸಹಮತ ವ್ಯಕ್ತಪಡಿಸಿದರು.

ಪ್ರಾದೇಶಿಕ ಮತ್ತು ಬಹುಪಕ್ಷೀಯ ಸಹಕಾರ

ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮುಕ್ತ, ಸರ್ವಾಂಗೀಣ, ಸ್ಥಿರ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಬೆಂಬಲಿಸುವ ಬದ್ಧತೆಯನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಎಲ್ಲಾ ಸಮುದ್ರಗಳು ಮತ್ತು ಸಾಗರಗಳಲ್ಲಿ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸಲು ಸಾಧ್ಯವಾಗುವಂತಹ ಪರಿಸ್ಥಿತಿಯ ಮಹತ್ವವನ್ನು ಪ್ರಧಾನ ಮಂತ್ರಿಗಳು ಒತ್ತಿಹೇಳಿದರು, ವಿಶೇಷವಾಗಿ ನೌಕಾಯಾನ ಮತ್ತು ಓವರ್ ಫ್ಲೈಟ್ ಸ್ವಾತಂತ್ರ್ಯ ಸೇರಿದಂತೆ ಸಮುದ್ರದ ಕಾನೂನು ಕುರಿತ ವಿಶ್ವಸಂಸ್ಥೆಯ ಒಪ್ಪಂದದ(ಯುಎನ್ಸಿಎಲ್ಒಎಸ್) ಬಗ್ಗೆ ವಿಶೇಷವಾಗಿ ಹೇಳಿದರು.

ʻಇಂಡೋ-ಪೆಸಿಫಿಕ್ʼಗೆ ನೈಜ, ಸಕಾರಾತ್ಮಕ ಮತ್ತು ಶಾಶ್ವತ ಪರಿಣಾಮವನ್ನು ನೀಡುವ, ಮುಕ್ತ, ಸರ್ವಾಂಗೀಣ ಮತ್ತು ಸ್ಥಿತಿಸ್ಥಾಪಕ ಪ್ರದೇಶಕ್ಕಾಗಿ ತಮ್ಮ ಪರಸ್ಪರ ಸಮಾನ ಆಶಯವನ್ನು ಮುಂದುವರಿಸಲು, ಜಾಗತಿಕ ಒಳಿತಿಗಾಗಿ ʻಕ್ವಾಡ್ʼ ಮೂಲಕ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ಸಾಂಕ್ರಾಮಿಕ ರೋಗಗಳು ಮತ್ತು ಕಾಯಿಲೆಗಳನ್ನು ತಡೆಯಲು; ನೈಸರ್ಗಿಕ ವಿಪತ್ತುಗಳಿಗೆ ಸ್ಪಂದಿಸಲು; ಕಡಲ ಡೊಮೇನ್ ಜಾಗೃತಿ ಮತ್ತು ಕಡಲ ಭದ್ರತೆಯನ್ನು ಬಲಪಡಿಸಲು; ಉನ್ನತ ಗುಣಮಟ್ಟದ ಭೌತಿಕ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಸಜ್ಜುಗೊಳಿಸುವುದು ಮತ್ತು ನಿರ್ಮಿಸಲು; ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡಿ ಪ್ರಯೋಜನ ಪಡೆಯಲು; ಹವಾಮಾನ ಬದಲಾವಣೆಯ ಅಪಾಯವನ್ನು ಎದುರಿಸಲು; ಸೈಬರ್ ಭದ್ರತೆಯನ್ನು ಹೆಚ್ಚಿಸಲು; ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕರನ್ನು ಬೆಳೆಸಲು ಪಾಲುದಾರ ದೇಶಗಳಿಗೆ ಸಹಾಯ ಮಾಡಲು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೊಳ್ಳಲು ʻಕ್ವಾಡ್‌ʼನ ನಿರಂತರ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. 2025ರಲ್ಲಿ ಭಾರತದಲ್ಲಿ ನಡೆಯಲಿರುವ ʻಕ್ವಾಡ್ʼ ನಾಯಕರ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾಕ್ಕೆ ಆತಿಥ್ಯ ವಹಿಸಲು ಪ್ರಧಾನಿ ಮೋದಿ ಎದುರು ನೋಡುತ್ತಿದ್ದಾರೆ.

ʻಪೂರ್ವ ಏಷ್ಯಾ ಶೃಂಗಸಭೆʼ(ಇಎಎಸ್), ʻಆಸಿಯಾನ್ ಪ್ರಾದೇಶಿಕ ವೇದಿಕೆʼ ಮತ್ತು ʻಆಸಿಯಾನ್ ರಕ್ಷಣಾ ಸಚಿವರ ಸಭೆ ಪ್ಲಸ್ʼ ಸೇರಿದಂತೆ ಆಸಿಯಾನ್ ಕೇಂದ್ರೀಕರಣ ಮತ್ತು ಆಸಿಯಾನ್ ನೇತೃತ್ವದ ಪ್ರಾದೇಶಿಕ ವಾಸ್ತುಶಿಲ್ಪಕ್ಕೆ ತಮ್ಮ ಬದ್ಧತೆಯನ್ನು ಪ್ರಧಾನ ಮಂತ್ರಿಗಳು ಪುನರುಚ್ಚರಿಸಿದರು. ʻಇಂಡೋ-ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನʼದ (ಎಒಐಪಿ) ಪ್ರಾಯೋಗಿಕ ಅನುಷ್ಠಾನಕ್ಕೆ ನಿರಂತರ ಬೆಂಬಲ ಸೂಚಿಸುವುದಾಗಿ ನಾಯಕರು ಹೇಳಿದರು. ʻಇಂಡೋ-ಪೆಸಿಫಿಕ್ ಸಾಗರ ಉಪಕ್ರಮʼದ(ಐಪಿಒಐ) ಅಡಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಅವರು ಗಮನಿಸಿದರು ಮತ್ತು ಕಡಲ ಪರಿಸರವನ್ನು ಸಂರಕ್ಷಿಸುವಲ್ಲಿ, ಸಮುದ್ರ ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು, ಸಮುದ್ರ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆ ಮಾಡಲು ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದರು. ಆಸ್ಟ್ರೇಲಿಯಾದ ಹಿಂದೂ ಮಹಾಸಾಗರದ ರಾಜಧಾನಿ ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ಜಂಟಿಯಾಗಿ ಆಯೋಜಿಸಿರುವ 2024ನೇ ಸಾಲಿನ ʻಹಿಂದೂ ಮಹಾಸಾಗರ ಸಮ್ಮೇಳನʼದ ಯಶಸ್ಸಿನ ಬಗ್ಗೆ ಪ್ರಧಾನ ಮಂತ್ರಿಗಳು ಗಮನ ಸೆಳೆದರು. ಈ ಪ್ರದೇಶದ ಸವಾಲುಗಳನ್ನು ಎದುರಿಸಲು ಹಿಂದೂ ಮಹಾಸಾಗರ ಪ್ರದೇಶದ ಪ್ರಮುಖ ವೇದಿಕೆಯಾಗಿ ʻಹಿಂದೂ ಮಹಾಸಾಗರ ರಿಮ್ ಅಸೋಸಿಯೇಷನ್ʼಗೆ(ಐಒಆರ್‌ಎ) ತಮ್ಮ ಬಲವಾದ ಬೆಂಬಲವನ್ನು ಅವರು ಪುನರುಚ್ಚರಿಸಿದರು ಮತ್ತು 2025ರಲ್ಲಿ ಭಾರತವು ʻಐಒಆರ್‌ಎʼ ಅಧ್ಯಕ್ಷತೆ ವಹಿಸಿಕೊಂಡಾಗ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ಹೇಳಿದರು.

ಪೆಸಿಫಿಕ್ ದ್ವೀಪ ರಾಷ್ಟ್ರಗಳ ಅಗತ್ಯಗಳು ಮತ್ತು ಆದ್ಯತೆಗಳನ್ನು ಬೆಂಬಲಿಸಲು ಪೆಸಿಫಿಕ್‌ನಲ್ಲಿ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಪ್ರಧಾನ ಮಂತ್ರಿಗಳು ಒಪ್ಪಿಕೊಂಡರು. ಮತ್ತು ಹವಾಮಾನ ಉಪಕ್ರಮ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಪೆಸಿಫಿಕ್ ಆದ್ಯತೆಗಳನ್ನು ಬೆಂಬಲಿಸುವ ಉಭಯ ದೇಶಗಳ ನಿರಂತರ ಬದ್ಧತೆಯ ಬಗ್ಗೆ ಗಮನ ಸೆಳೆದರು. ಪ್ರಾದೇಶಿಕ ಸವಾಲುಗಳನ್ನು ಎದುರಿಸುವಲ್ಲಿ ʻಪೆಸಿಫಿಕ್ ದ್ವೀಪಗಳ ವೇದಿಕೆʼ ಮತ್ತು ʻನೀಲಿ ಪೆಸಿಫಿಕ್ ಖಂಡಕ್ಕಾಗಿ ಅದರ 2050ರ ಕಾರ್ಯತಂತ್ರʼವು ವಹಿಸಿರುವ ಮಹತ್ವದ ಪಾತ್ರವನ್ನು ಅವರು ದೃಢಪಡಿಸಿದರು.
ʻಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆʼ(ಎಫ್ಐಪಿಐಸಿ) ಚೌಕಟ್ಟಿನ ಮೂಲಕ ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ ಅಭಿವೃದ್ಧಿ ಪಾಲುದಾರಿಕೆಯನ್ನು ವಿಸ್ತರಿಸುವಲ್ಲಿ ಭಾರತದ ಪಾತ್ರವನ್ನು ಪ್ರಧಾನಿ ಅಲ್ಬನೀಸ್ ಗುರುತಿಸಿದರು. ಎರಡೂ ದೇಶಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಬೆಂಬಲಿಸಲು ಎದುರು ನೋಡುತ್ತಿವೆ.

ಪ್ರಧಾನಮಂತ್ರಿಗಳು ಸಮಕಾಲೀನ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ನಡೆಯುತ್ತಿರುವ ಸಂಘರ್ಷಗಳನ್ನು ಪರಿಹರಿಸುವ ಕರೆಯನ್ನು ಅವರು ಪುನರುಚ್ಚರಿಸಿದರು. ಭಯೋತ್ಪಾದಕ ಹಣಕಾಸು ನಿಗ್ರಹದ ನಿಟ್ಟಿನಲ್ಲಿ ಒಂದು ಜಾಗತಿಕ ಮಾನದಂಡವಾಗಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯಾಗಿ ʻಹಣಕಾಸು ಕ್ರಿಯಾ ಕಾರ್ಯಪಡೆʼಯಲ್ಲಿ ಸಹಕಾರವನ್ನು ಹೆಚ್ಚಿಸುವುದು ಸೇರಿದಂತೆ ಭಯೋತ್ಪಾದನೆಯ ಅಪಾಯವನ್ನು ಎದುರಿಸುವಲ್ಲಿ ಎಲ್ಲಾ ದೇಶಗಳ ಮಹತ್ವವನ್ನು ಅವರು ಒತ್ತಿ ಹೇಳಿದರು. ಎಲ್ಲಾ ರೂಪಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಉಭಯ ನಾಯಕರು ತೀವ್ರವಾಗಿ ಖಂಡಿಸಿದರು.


ಪ್ರಧಾನಮಂತ್ರಿಗಳು ದ್ವಿಪಕ್ಷೀಯ ಕಾರ್ಯಕ್ರಮಗಳ ಪ್ರಗತಿಯ ಬಗ್ಗೆ ತಮ್ಮ ಸಕಾರಾತ್ಮಕ ಮೌಲ್ಯಮಾಪನವನ್ನು ಹಂಚಿಕೊಂಡರು. ಪರಸ್ಪರ ಲಾಭಕ್ಕಾಗಿ ಮತ್ತು ಪ್ರದೇಶದ ಪ್ರಯೋಜನಕ್ಕಾಗಿ ಸಂಬಂಧಗಳನ್ನು ಮತ್ತಷ್ಟು ಆಳಗೊಳಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಐದನೇ ವಾರ್ಷಿಕೋತ್ಸವದ ಮಹತ್ವವನ್ನು ಒಪ್ಪಿಕೊಂಡ ಪ್ರಧಾನ ಮಂತ್ರಿಗಳು, 2025ರಲ್ಲಿ ಈ ಮೈಲುಗಲ್ಲನ್ನು ಸೂಕ್ತ ರೀತಿಯಲ್ಲಿ ಸ್ಮರಿಸುವ ಅವಕಾಶಗಳನ್ನು ಸ್ವಾಗತಿಸಿದರು. 2025ರಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಾರ್ಷಿಕ ಶೃಂಗಸಭೆಗಾಗಿ ಉಭಯ ನಾಯಕರು ಎದುರು ನೋಡುತ್ತಿದ್ದಾರೆ.  

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Ayushman driving big gains in cancer treatment: Lancet

Media Coverage

Ayushman driving big gains in cancer treatment: Lancet
NM on the go

Nm on the go

Always be the first to hear from the PM. Get the App Now!
...
PM Modi meets Chief Minister of Odisha
December 23, 2024

The Prime Minister, Shri Narendra Modi, met today Chief Minister of Odisha, Shri Mohan Charan Majhi.

The Prime Minister's Office posted on X:
"Chief Minister of Odisha, Shri Mohan Charan Majhi, met Prime Minister @narendramodi