ಸ್ಟಾಕ್ ಹೋಂನಲ್ಲಿಂದು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡೆನ್ಮಾರ್ಕ್ ಪ್ರಧಾನಮಂತ್ರಿ ಲಾರ್ಸ್ ಲೊಕ್ಕೆ ರಸ್ಮೆಸ್ಸೇನ್, ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಜುಹಾ ಸಿಪಿಲಾ, ಐಸ್ ಲ್ಯಾಂಡ್ ಪ್ರಧಾನಮಂತ್ರಿ ಕಟ್ರೀನಾ ಜಕೋಬ್ ದೊತ್ತೇರ್, ನಾರ್ವೆಯ ಪ್ರಧಾನಮಂತ್ರಿ ಏರ್ನಾ ಸೋಲ್ಬೆರ್ಗ್ ಮತ್ತು ಸ್ವೀಡನ್ ಪ್ರಧಾನಮಂತ್ರಿ ಸ್ಟೀಫೆನ್ ಲಾಫ್ವೆನ್ ಅವರುಗಳು ಭಾರತದ ಪ್ರಧಾನಿ ಮತ್ತು ಸ್ವೀಡನ್ ಪ್ರಧಾನಮಂತ್ರಿ ಆಯೋಜನೆಯಲ್ಲಿ ಶೃಂಗಸಭೆ ನಡೆಸಿದರು.
ಶೃಂಗದ ವೇಳೆ, ಪ್ರಧಾನಮಂತ್ರಿಯವರು ನಾರ್ಡಿಕ್ ರಾಷ್ಟ್ರಗಳು ಮತ್ತು ಭಾರತದ ನಡುವೆ ಆಳವಾದ ಸಹಕಾರದ ನಿರ್ಣಯ ಮಾಡಿದರು ಮತ್ತು ಜಾಗತಿಕ ಭದ್ರತೆ, ಆರ್ಥಿಕ ಪ್ರಗತಿ, ನಾವಿನ್ಯ ಮತ್ತು ಹವಾಮಾನ ಬದಲಾವಣೆಯಂಥ ಪ್ರಮುಖ ವಿಷಯಗಳ ಮೇಲೆ ಚರ್ಚೆಯನ್ನು ಕೇಂದ್ರೀಕರಿಸಿದರು. ಸಮಗ್ರ ಪ್ರಗತಿಯನ್ನು ಸಾಧಿಸಲು ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಯನ್ನು ಸಾಧಿಸಲು ಮುಕ್ತ ವ್ಯಾಪಾರ ಮಹತ್ವ ಪ್ರತಿಪಾದಿಸಿ, ಅದು ವೇಗವರ್ಧಕ ಎಂದು ಪ್ರಧಾನಿ ಪುನರುಚ್ಚರಿಸಿದರು. ಅಂತರ ಸಂಪರ್ಕಿತ ವಿಶ್ವದಲ್ಲಿ ನಾವಿನ್ಯತೆ ಮತ್ತು ಡಿಜಿಟಲ್ ಪರಿವರ್ತನೆಯ ಚಾಲಿತ ಅಭಿವೃದ್ಧಿ ಅಗತ್ಯ ಎಂದು ಒಪ್ಪಿದ ಪ್ರಧಾನಮಂತ್ರಿಯವರು, ನಾರ್ಡಿಕ್ ದೇಶಗಳು ಮತ್ತು ಭಾರತ ನಡುವಿನ ಬೆಳೆಯುತ್ತಿರುವ ಕಾರ್ಯಕ್ರಮ ಇದಕ್ಕೆ ಪೂರಕ ಎಂದರು. ಜಾಗತಿಕ ನಾವಿನ್ಯತೆಯ ನಾಯಕರಾದ ನಾರ್ಡಿಕ್ ರಾಷ್ಟ್ರಗಳ ಪಾತ್ರವನ್ನು ಅವರು ಒತ್ತಿ ಹೇಳಿದರು. ನಾವಿನ್ಯತೆಯ ವ್ಯವಸ್ಥೆಗೆ ನಾರ್ಡಿಕ್ ದೃಷ್ಟಿಕೋನವು ಸಾರ್ವಜನಿಕ ಮತ್ತು ಖಾಸಗಿ ವಲಯದ ಮತ್ತು ಶೈಕ್ಷಣಿಕ ಸಂಸ್ಥೆಗಳ ಬಲವಾದ ಸಹಯೋಗದಿಂದ ಕೂಡಿದ್ದು, ಇದರ ಬಗ್ಗೆ ಚರ್ಚಿಸಿ, ಭಾರತದ ಶ್ರೀಮಂತ ಪ್ರತಿಭೆ ಮತ್ತು ಕೌಶಲವನ್ನು ಗುರುತಿಸಲಾಗಿದೆ ಎಂದರು.
ಈ ಶೃಂಗಸಭೆಯು ಸಮೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಕ್ಲೀನ್ ಇಂಡಿಯಾದೊಂದಿಗೆ ಭಾರತ ಸರ್ಕಾರ ಕೈಗೊಂಡಿರುವನಾವಿನ್ಯತೆ ಮತ್ತು ಡಿಜಿಟಲ್ ಉಪಕ್ರಮಗಳನ್ನು ಪ್ರತಿಪಾದಿಸಿತು. ಶುದ್ಧ ತಂತ್ರಜ್ಞಾನದಲ್ಲಿ ನಾರ್ಡಿಕ್ ಪರಿಹಾರ, ಸಾಗರ ಪರಿಹಾರ, ಬಂದರುಗಳ ಆಧುನೀಕರಣ, ಆಹಾರ ಸಂಸ್ಕರಣೆ, ಆರೋಗ್ಯ, ಜೀವನ ವಿಜ್ಞಾನ ಮತ್ತು ಕೃಷಿಯ ಪ್ರಸ್ತಾಪ ಮಾಡಲಾಯಿತು. ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಗುರಿ ಹೊಂದಿರುವ ಶೃಂಗಸಭೆಯು ನಾರ್ಡಿಕ್ ಸುಸ್ಥಿರ ನಗರಗಳ ಯೋಜನೆಯನ್ನು ಸ್ವಾಗತಿಸಿತು.

ಪ್ರಧಾನಮಂತ್ರಿಗಳು 2030 ಕಾರ್ಯಕ್ರಮದ ಅನುಷ್ಠಾನಕ್ಕೆ ಸದಸ್ಯ ರಾಷ್ಟ್ರಗಳಿಗೆ ಬೆಂಬಲ ನೀಡಲು ವಿಶ್ವಸಂಸ್ಥೆಯನ್ನು ಸಮರ್ಥಗೊಳಿಸುವುದನ್ನು ಖಾತ್ರಿ ಪಡಿಸಲು, ವಿಶ್ವಸಂಸ್ಥೆಯ ಮಹಾ ಪ್ರಧಾನಕಾರ್ಯದರ್ಶಿಯವರ ಸುಧಾರಣಾ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು ಮತ್ತು ಅಭಿವೃದ್ಧಿ, ಶಾಂತಿ ಕಾರ್ಯಾಚರಣೆ, ಶಾಂತಿವರ್ಧನೆ ಮತ್ತು ಸಂಘರ್ಷ ತಡೆ ಕ್ಷೇತ್ರಗಳೂ ಸೇರಿದಂತೆ ವಿಶ್ವಸಂಸ್ಥೆಯ ಬಲವರ್ಧನೆ ಪ್ರಸ್ತಾಪಗಳನ್ನು ಪರಿಗಣಿಸಿದರು. 21ನೇ ಶತಮಾನದ ವಾಸ್ತವಗಳಿಗೆ ಅನುಗುಣವಾಗಿ ವಿಶ್ವಸಂಸ್ಥೆಯನ್ನು ಹೆಚ್ಚು ಪ್ರತಿನಿಧಿತ್ವಗೊಳಿಸಲು, ಹೊಣೆಗಾರನನ್ನಾಗಿಸಲು, ಸಮರ್ಥ ಮತ್ತು ಸ್ಪಂದನಾತ್ಮಕಗೊಳಿಸಲು ಅದರ ಶಾಶ್ವತ ಮತ್ತು ತಾತ್ಕಾಲಿಕ ಸದಸ್ಯರ ವಿಸ್ತರಣೆ ಸೇರಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಅಗತ್ಯವನ್ನು ನಾರ್ಡಿಕ್ ದೇಶಗಳು ಮತ್ತು ಭಾರತ ಪುನರುಚ್ಚರಿಸಿದವು. ಶಾಶ್ವತ ಮತ್ತ ತಾತ್ಕಾಲಿಕ ಸದಸ್ಯರೊಂದಿಗೆ ವಿಶ್ವಸಂಸ್ಥೆಯ ಪುನಾರಚಿತ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯ ರಾಷ್ಟ್ರವಾಗಲು ಬಲವಾದ ಅಭ್ಯರ್ಥಿ ಎಂಬುದನ್ನು ನಾರ್ಡಿಕ್ ರಾಷ್ಟ್ರಗಳು ಒಪ್ಪಿದವು.
ಪ್ರಧಾನಮಂತ್ರಿಗಳು ಸುಸ್ಥಿರ ಅಭಿವೃದ್ಧಿ ಮತ್ತು ಮಹತ್ವಾಕಾಂಕ್ಷೆಯ ಪ್ಯಾರಿಸ್ ಒಪ್ಪಂದ ಅನುಷ್ಠಾನಕ್ಕಾಗಿ 2030 ಕಾರ್ಯಕ್ರಮವನ್ನು ಜಾರಿ ಮಾಡಲು ತಮ್ಮ ಸಂಪೂರ್ಣ ಬದ್ಧತೆಯನ್ನು ಪುನರುಚ್ಚರಿಸಿದರು. ಶುದ್ಧ ಇಂಧನ ವ್ಯವಸ್ಥೆ, ನವೀಕರಿಸಬಹುದಾದ ವಿದ್ಯುತ್ ಮತ್ತು ಇಂಧನ, ಇಂಧನ ದಕ್ಷತೆಯ ಹೆಚ್ಚಳ ಮತ್ತು ಶುದ್ಧ ಇಂಧನ ಉತ್ಪಾದನೆಗೆ ತಂತ್ರಜ್ಞಾನಕ್ಕೆ ಪ್ರಯತ್ನ ಮುಂದುವರಿಸಲು ಒಪ್ಪಿಗೆ ಸೂಚಿಸಿದರು. ಸಮಗ್ರ ಅಭಿವೃದ್ಧಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಅರ್ಥಪೂರ್ಣವಾಗಿ ಮತ್ತು ಸಂಪೂರ್ಣವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮುಖವಾದ್ದು ಎಂದು ಹೇಳಿದ ಪ್ರಧಾನಮಂತ್ರಿಯವರು, ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡಲು ಸಮ್ಮತಿಸಿದರು.
ಬಲವಾದ ಪಾಲುದಾರಿಕೆ, ನಾವಿನ್ಯತೆ, ಆರ್ಥಿಕ ಪ್ರಗತಿ, ಸುಸ್ಥಿರ ಪರಿಹಾರ ಮತ್ತು ಪರಸ್ಪರರಿಗೆ ಲಾಭವಾಗುವಂಥ ವಾಣಿಜ್ಯ ಮತ್ತು ಹೂಡಿಕೆಯ ಹೆಚ್ಚಳಕ್ಕೆ ನೆರವಾಗುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಒಪ್ಪಿದರು. ಶಿಕ್ಷಣ, ಸಂಸ್ಕೃತಿ, ಕಾರ್ಮಿಕರ ಸಂಚಾರ ಮತ್ತು ಪ್ರವಾಸೋದ್ಯಮದ ಮೂಲಕ ಬಲವಾದ ಜನರೊಂದಿಗಿನ ಸಂಪರ್ಕದ ಬಗ್ಗೆ ಶೃಂಗಸಭೆಯಲ್ಲಿ ಒತ್ತು ನೀಡಲಾಯಿತು, ಈ ಎಲ್ಲ ಕ್ಷೇತ್ರದಲ್ಲೂ ನಾರ್ಡಿಕ್ ರಾಷ್ಟ್ರಗಳು ಮತ್ತು ಭಾರತ ನಿರಂತರವಾಗಿ ಸಂಖ್ಯೆ ಮತ್ತು ಆಸಕ್ತಿಯಲ್ಲಿ ಹೆಚ್ಚಳ ಕಾಣಲಿದೆ ಎಂದು ಪ್ರತಿಪಾದಿಸಲಾಯಿತು.