21 ನೇ ಶತಮಾನದ ನಿರ್ಣಾಯಕ ಪಾಲುದಾರಿಕೆಯನ್ನು ವ್ಯಾಖ್ಯಾನಿಸುವ  ಯುಎಸ್-ಭಾರತ ಸಮಗ್ರ ಜಾಗತಿಕ ಮತ್ತು ಕಾರ್ಯತಂತ್ರದ ಸಹಭಾಗಿತ್ವವು ಜಾಗತಿಕ ಒಳಿತಿಗಾಗಿ  ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ನಿರ್ಣಾಯಕವಾಗಿ ತಲುಪಿಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋಸೆಫ್ ಆರ್ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ದೃಢಪಡಿಸಿದರು. ಅಮೆರಿಕ ಮತ್ತು ಭಾರತ ನಡುವೆ ಅಭೂತಪೂರ್ವ ಮಟ್ಟದ ವಿಶ್ವಾಸ ಮತ್ತು ಸಹಯೋಗ ಬೆಳೆದ  ಐತಿಹಾಸಿಕ ಅವಧಿಯ ಬಗ್ಗೆ ನಾಯಕರು ಉಲ್ಲೇಖಿಸಿದರು. ನಮ್ಮ ದೇಶಗಳು ಹೆಚ್ಚು ಪರಿಪೂರ್ಣ ಒಕ್ಕೂಟಗಳಾಗಲು ಮತ್ತು ನಮ್ಮ ಹಂಚಿಕೆಯ ಭವಿಷ್ಯವನ್ನು  ತಲುಪಲು ಪ್ರಯತ್ನಿಸುತ್ತಿರುವುದರಿಂದ ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನಿನ ನಿಯಮ, ಮಾನವ ಹಕ್ಕುಗಳು, ಬಹುತ್ವ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಎತ್ತಿಹಿಡಿಯುವಲ್ಲಿ ಯುಎಸ್-ಭಾರತ ಪಾಲುದಾರಿಕೆಯು ಆಧಾರವಾಗಿರಬೇಕು ಎಂದು ನಾಯಕರು ದೃಢಪಡಿಸಿದರು. ಯುಎಸ್-ಭಾರತ ಪ್ರಮುಖ ರಕ್ಷಣಾ ಪಾಲುದಾರಿಕೆಯನ್ನು ಜಾಗತಿಕ ಭದ್ರತೆ ಮತ್ತು ಶಾಂತಿಯ ಆಧಾರಸ್ತಂಭವನ್ನಾಗಿ ಮಾಡಿದ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು, ಕಾರ್ಯಾಚರಣೆಯಲ್ಲಿ  ಸಮನ್ವಯದ ಹೆಚ್ಚಳ, ಮಾಹಿತಿ ಹಂಚಿಕೆ ಮತ್ತು ರಕ್ಷಣಾ ಕೈಗಾರಿಕಾ ನಾವೀನ್ಯತೆಯ ಪ್ರಯೋಜನಗಳನ್ನು ಎತ್ತಿ ತೋರಿಸಿದರು. ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ನಮ್ಮ ಜನರು, ನಮ್ಮ ನಾಗರಿಕ ಮತ್ತು ಖಾಸಗಿ ವಲಯಗಳು ಮತ್ತು ಆಳವಾದ ಬಂಧಗಳನ್ನು ರೂಪಿಸಲು ತಮ್ಮ  ಸರ್ಕಾರಗಳ ದಣಿವರಿಯದ ಪ್ರಯತ್ನಗಳು ಮುಂಬರುವ ದಶಕಗಳಲ್ಲಿ ಯುಎಸ್-ಭಾರತ ಪಾಲುದಾರಿಕೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ  ಎಂಬ ಬಗ್ಗೆ ನಿರಂತರ ಆಶಾವಾದ ಮತ್ತು ಅತ್ಯಂತ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿಶ್ವ ವೇದಿಕೆಯಲ್ಲಿ ಭಾರತದ ನಾಯಕತ್ವಕ್ಕೆ, ವಿಶೇಷವಾಗಿ ಜಿ -20 ಮತ್ತು ಜಾಗತಿಕ ದಕ್ಷಿಣದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವ ಹಾಗು  ಮುಕ್ತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಅನ್ನು ಖಚಿತಪಡಿಸಿಕೊಳ್ಳಲು ಕ್ವಾಡ್ ಅನ್ನು ಬಲಪಡಿಸುವ ಬದ್ಧತೆಗೆ ಅಧ್ಯಕ್ಷ ಬೈಡನ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಜಾಗತಿಕ ಪ್ರತಿಕ್ರಿಯೆಯನ್ನು ಬೆಂಬಲಿಸುವುದರಿಂದ ಹಿಡಿದು ಪ್ರಪಂಚದಾದ್ಯಂತದ ಸಂಘರ್ಷಗಳ ವಿನಾಶಕಾರಿ ಪರಿಣಾಮಗಳನ್ನು ಪರಿಹರಿಸುವವರೆಗೆ ಅತ್ಯಂತ ಒತ್ತಡದ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುವ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಪೋಲೆಂಡ್ ಮತ್ತು ಉಕ್ರೇನ್ ಗೆ ಐತಿಹಾಸಿಕ ಭೇಟಿ ನೀಡಿದ್ದಕ್ಕಾಗಿ ಅಧ್ಯಕ್ಷ ಬೈಡನ್ ಅವರು ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದರು, ದಶಕಗಳಲ್ಲಿ ಮೊದಲ ಬಾರಿಗೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಐತಿಹಾಸಿಕ ಭೇಟಿಗಾಗಿ ಮತ್ತು ಶಾಂತಿ ಸಂದೇಶಕ್ಕಾಗಿ ಹಾಗು  ಉಕ್ರೇನ್ ಗೆ ಅದರ ಇಂಧನ ಕ್ಷೇತ್ರ ಸೇರಿದಂತೆ ನೀಡಲಾಗುತ್ತಿರುವ  ಮಾನವೀಯ ಬೆಂಬಲಕ್ಕಾಗಿ ಮತ್ತು ಯುಎನ್ ಚಾರ್ಟರ್ ಸೇರಿದಂತೆ ಅಂತರರಾಷ್ಟ್ರೀಯ ಕಾನೂನಿನ ಪ್ರಾಮುಖ್ಯತೆಯ ಬಗ್ಗೆಯೂ ಅವರು  ಶ್ಲಾಘಿಸಿದರು. ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗಗಳನ್ನು ಭದ್ರಪಡಿಸಲು ಸಂಯೋಜಿತ ಕಡಲ ಪಡೆಗಳೊಂದಿಗೆ ಕೆಲಸ ಮಾಡಲು 2025ರಲ್ಲಿ ಸಂಯೋಜಿತ ಕಾರ್ಯಪಡೆ 150 ರ ಸಹ-ನಾಯಕತ್ವವನ್ನು   ಭಾರತ ವಹಿಸಿಕೊಳ್ಳಲಿದ್ದು, ಮಧ್ಯಪ್ರಾಚ್ಯದಲ್ಲಿ ನಿರ್ಣಾಯಕ ಕಡಲ ಮಾರ್ಗಗಳು ಸೇರಿದಂತೆ ನೌಕಾಯಾನ ಸ್ವಾತಂತ್ರ್ಯ ಮತ್ತು ವಾಣಿಜ್ಯ ರಕ್ಷಣೆಗೆ ತಮ್ಮ ಬೆಂಬಲವನ್ನು ನಾಯಕರು ಪುನರುಚ್ಚರಿಸಿದರು. ಪುನಾರಚಿತ  ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸೇರಿದಂತೆ ಭಾರತದ ಪ್ರಮುಖ ಧ್ವನಿಯನ್ನು ಪ್ರತಿಬಿಂಬಿಸಲು ಜಾಗತಿಕ ಸಂಸ್ಥೆಗಳನ್ನು ಸುಧಾರಿಸುವ ಉಪಕ್ರಮಗಳನ್ನು ಯುನೈಟೆಡ್ ಸ್ಟೇಟ್ಸ್ ಬೆಂಬಲಿಸುತ್ತದೆ ಎಂಬ ಸಂಗತಿಯನ್ನು  ಅಧ್ಯಕ್ಷ ಬೈಡೆನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಹಂಚಿಕೊಂಡರು. ಭೂಮಿಗೆ ಸ್ವಚ್ಛ, ಅಂತರ್ಗತ, ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ಸಮೃದ್ಧ ಭವಿಷ್ಯವನ್ನು ನಿರ್ಮಿಸುವ ಪ್ರಯತ್ನಗಳ ಯಶಸ್ಸಿಗೆ ಯುಎಸ್-ಭಾರತ ನಿಕಟ ಸಹಭಾಗಿತ್ವವು ಅತ್ಯಗತ್ಯ ಎಂದು ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಾಹ್ಯಾಕಾಶ, ಅರೆವಾಹಕಗಳು ಮತ್ತು ಸುಧಾರಿತ ದೂರಸಂಪರ್ಕ ಸೇರಿದಂತೆ ಪ್ರಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಕಾರವನ್ನು ಆಳಗೊಳಿಸುವಲ್ಲಿ ಮತ್ತು ವಿಸ್ತರಿಸುವಲ್ಲಿ ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನದ ಉಪಕ್ರಮದ (ಐಸಿಇಟಿ) ಯಶಸ್ಸನ್ನು ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಶ್ಲಾಘಿಸಿದರು. ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಜೈವಿಕ ತಂತ್ರಜ್ಞಾನ ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ಸಹಯೋಗದ ವೇಗವನ್ನು ಸುಧಾರಿಸಲು ನಿಯಮಿತ ಕಾರ್ಯಕ್ರಮಗಳನ್ನು ಹೆಚ್ಚಿಸಲು ಇಬ್ಬರೂ ನಾಯಕರು ಬದ್ಧರಾಗಿದ್ದಾರೆ. ನಿರ್ಣಾಯಕ ಕೈಗಾರಿಕೆಗಳಿಗೆ ಹೆಚ್ಚು ಸುರಕ್ಷಿತ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಮತ್ತು ಒಟ್ಟಾಗಿ ನಾವೀನ್ಯತೆಯ ಪ್ರಮುಖ ದಿಗಂತದಲ್ಲಿ  ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಕ್ವಾಡ್ ಮತ್ತು ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾದ ಯುಎಸ್-ಭಾರತ-ಆರ್.ಒ.ಕೆ. ತ್ರಿಪಕ್ಷೀಯ ತಂತ್ರಜ್ಞಾನ ಉಪಕ್ರಮವೂ  ಸೇರಿದಂತೆ ಸಮಾನ ಮನಸ್ಕ ಪಾಲುದಾರರೊಂದಿಗೆ ಸಹಯೋಗವನ್ನು ಬಲಪಡಿಸುವ ಪ್ರಯತ್ನಗಳನ್ನು ಅವರು ಉಲ್ಲೇಖಿಸಿದರು. ಭಾರತ-ಯುಎಸ್ ಸೇರಿದಂತೆ ತಂತ್ರಜ್ಞಾನ ಭದ್ರತೆಗೆ ಸಂಬಂಧಿಸಿದಂತೆ,  ರಫ್ತು ನಿಯಂತ್ರಣಗಳ ಸಮಸ್ಯೆಗಳನ್ನು ನಿವಾರಿಸಲು,  ಉನ್ನತ ತಂತ್ರಜ್ಞಾನ ವಾಣಿಜ್ಯವನ್ನು ಹೆಚ್ಚಿಸಲು ಮತ್ತು ಎರಡೂ ದೇಶಗಳ ನಡುವೆ ತಂತ್ರಜ್ಞಾನ ವರ್ಗಾವಣೆಗೆ ಇರುವ ಅಡೆತಡೆಗಳನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ದ್ವಿಗುಣಗೊಳಿಸುವಂತೆ ನಾಯಕರು ತಮ್ಮ ಸರ್ಕಾರಗಳಿಗೆ ನಿರ್ದೇಶನ ನೀಡಿದರು. ವ್ಯೂಹಾತ್ಮಕ ವ್ಯಾಪಾರ ಮಾತುಕತೆ. ದ್ವಿಪಕ್ಷೀಯ ಸೈಬರ್ ಸೆಕ್ಯುರಿಟಿ ಮಾತುಕತೆ, ವಿಚಾರ ವಿನಿಮಯದ ಮೂಲಕ ಆಳವಾದ ಸೈಬರ್ ಸ್ಪೇಸ್ ಸಹಕಾರಕ್ಕಾಗಿ ಹೊಸ ಕಾರ್ಯವಿಧಾನಗಳನ್ನು ನಾಯಕರು ಅನುಮೋದಿಸಿದರು. ಸೌರ, ಪವನ ಮತ್ತು ಪರಮಾಣು ಶಕ್ತಿಯಲ್ಲಿ ಯುಎಸ್-ಭಾರತ ಸಹಕಾರವನ್ನು ವಿಸ್ತರಿಸುವ ಅವಕಾಶಗಳನ್ನು ಹುಡುಕುವುದು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್ ತಂತ್ರಜ್ಞಾನಗಳ ಅಭಿವೃದ್ಧಿ ಸೇರಿದಂತೆ ಶುದ್ಧ ಇಂಧನದ ಉತ್ಪಾದನೆ ಮತ್ತು ನಿಯೋಜನೆಯನ್ನು ವಿಸ್ತರಿಸಲು ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಭವಿಷ್ಯಕ್ಕಾಗಿ ತಂತ್ರಜ್ಞಾನ ಪಾಲುದಾರಿಕೆಯನ್ನು ರೂಪಿಸುವುದು

ರಾಷ್ಟ್ರೀಯ ಭದ್ರತೆ, ಮುಂದಿನ ಪೀಳಿಗೆಯ ದೂರಸಂಪರ್ಕ ಮತ್ತು ಹಸಿರು ಇಂಧನ ಅನ್ವಯಿಕೆ/ಬಳಕೆಗಾಗಿ ಸುಧಾರಿತ ಸಂವೇದಿ, ಸಂವಹನ ಮತ್ತು ವಿದ್ಯುತ್ ಎಲೆಕ್ಟ್ರಾನಿಕ್ಸ್ ಮೇಲೆ ಕೇಂದ್ರೀಕರಿಸಿದ ಹೊಸ ಅರೆವಾಹಕ ಫ್ಯಾಬ್ರಿಕೇಷನ್ ಸ್ಥಾವರವನ್ನು ಸ್ಥಾಪಿಸುವ ಪ್ರಮುಖ  ವ್ಯವಸ್ಥೆಯನ್ನು ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಶ್ಲಾಘಿಸಿದರು. ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೈಡ್ ಮತ್ತು ಸಿಲಿಕಾನ್ ಕಾರ್ಬೈಡ್ ಅರೆವಾಹಕಗಳನ್ನು ತಯಾರಿಸುವ ಉದ್ದೇಶದಿಂದ ಸ್ಥಾಪಿಸಲಾಗುವ ಎಫ್ಎಬಿಯನ್ನು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ನಿನ ಬೆಂಬಲ ಮತ್ತು ಭಾರತ್ ಸೆಮಿ, 3 ಆರ್ಡಿಟೆಕ್ ಮತ್ತು ಯುಎಸ್ ಬಾಹ್ಯಾಕಾಶ ಪಡೆ ನಡುವಿನ ಕಾರ್ಯತಂತ್ರದ ತಂತ್ರಜ್ಞಾನ ಪಾಲುದಾರಿಕೆಯಿಂದ ಸಕ್ರಿಯಗೊಳಿಸಲಾಗುವುದು.

ಚಿಪ್ ಉತ್ಪಾದನೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪರಸ್ಪರ ಪ್ರಯೋಜನಕಾರಿ ಸಂಪರ್ಕಗಳನ್ನು ಹೆಚ್ಚಿಸಲು ಮತ್ತು ಶೂನ್ಯ ಹಾಗು  ಕಡಿಮೆ ಹೊರಸೂಸುವಿಕೆಯನ್ನು ಅಳವಡಿಸಿಕೊಂಡ  ವಾಹನಗಳು,  ಇಂಟರ್ನೆಟ್ ಆಫ್ ಥಿಂಗ್ಸ್ ಉಪಕರಣಗಳಂತಹ ಪರಿವರ್ತನಾಶೀಲ  ಪ್ರಗತಿಯನ್ನು ಸಕ್ರಿಯಗೊಳಿಸುವುದಕ್ಕಾಗಿ  ಭಾರತದ ಕೋಲ್ಕತ್ತಾದಲ್ಲಿ ಗ್ಲೋಬಲ್ ಫೌಂಡ್ರೀಸ್ (ಜಿಎಫ್) ರಚಿಸುವ ಮೂಲಕ ಸ್ಥಿತಿಸ್ಥಾಪಕ, ಸುರಕ್ಷಿತ ಮತ್ತು ಸುಸ್ಥಿರ ಅರೆವಾಹಕ ಪೂರೈಕೆ ಸರಪಳಿಗಳನ್ನು ಸುಗಮಗೊಳಿಸುವ ಸಂಯೋಜಿತ ಪ್ರಯತ್ನಗಳನ್ನು ನಾಯಕರು ಶ್ಲಾಘಿಸಿದರು.  ಎಐ, ಮತ್ತು ಡೇಟಾ ಕೇಂದ್ರಗಳು. ಭಾರತದೊಂದಿಗೆ ದೀರ್ಘಕಾಲೀನ, ಗಡಿಯಾಚೆಗಿನ ಉತ್ಪಾದನೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಅನ್ವೇಷಿಸುವ ಜಿಎಫ್ ನ ಯೋಜನೆಗಳನ್ನು ಅವರು ಗಮನಿಸಿದರು, ಇದು ಉಭಯ  ದೇಶಗಳಲ್ಲಿ ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಒದಗಿಸುತ್ತದೆ. ಅಂತರರಾಷ್ಟ್ರೀಯ ತಂತ್ರಜ್ಞಾನ ಭದ್ರತೆ ಮತ್ತು ನಾವೀನ್ಯತೆ (ಐಟಿಎಸ್ಐ) ನಿಧಿಗೆ ಸಂಬಂಧಿಸಿದಂತೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ನಡುವಿನ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಅವರು ಕೊಂಡಾಡಿದರು.

ಜಾಗತಿಕ ಮಾರುಕಟ್ಟೆಗಳಿಗೆ ರಫ್ತು ಮಾಡಲು ಫೋರ್ಡ್ ಮೋಟಾರ್ ಕಂಪನಿಯು ತನ್ನ ಚೆನ್ನೈ ಸ್ಥಾವರವನ್ನು ಬಳಸಲು ಉದ್ದೇಶ ಪತ್ರವನ್ನು (ಆಶಯ ಪತ್ರ) ಸಲ್ಲಿಸಿರುವುದು ಸೇರಿದಂತೆ ಯುಎಸ್, ಭಾರತೀಯ ಮತ್ತು ಅಂತರರಾಷ್ಟ್ರೀಯ ವಾಹನ ಮಾರುಕಟ್ಟೆಗಳಿಗೆ ಸುರಕ್ಷಿತ, ಸುಭದ್ರ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಉದ್ಯಮವು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ನಾಯಕರು ಸ್ವಾಗತಿಸಿದರು.

2025 ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸಲು ನಾಸಾ ಮತ್ತು ಇಸ್ರೋದ ಮೊದಲ ಜಂಟಿ ಪ್ರಯತ್ನದ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು. ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯ ಗುಂಪಿನ ಅಡಿಯಲ್ಲಿನ ಉಪಕ್ರಮಗಳು ಮತ್ತು ವಿಚಾರ ವಿನಿಮಯವನ್ನು ಅವರು ಶ್ಲಾಘಿಸಿದರು ಮತ್ತು 2025 ರ ಆರಂಭದಲ್ಲಿ ಅದರ ಮುಂದಿನ ಸಭೆ ಸಹಕಾರದ ಹೆಚ್ಚುವರಿ ಮಾರ್ಗಗಳನ್ನು ತೆರೆಯುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ನಾಗರಿಕ ಮತ್ತು ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವುದು ಸೇರಿದಂತೆ ಜಂಟಿ ಅನ್ವೇಷಣೆ ಮತ್ತು ಕಾರ್ಯತಂತ್ರದ ಸಹಯೋಗಗಳನ್ನು ಆಳಗೊಳಿಸುವ ಅವಕಾಶಗಳನ್ನು ಮುಂದುವರಿಸಲು ಅವರು ಪ್ರಮಾಣ  ಮಾಡಿದರು.

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಗಳ ನಡುವಿನ ಸಹಯೋಗವನ್ನು ಹೆಚ್ಚಿಸುವ ಪ್ರಯತ್ನಗಳನ್ನು ನಾಯಕರು ಸ್ವಾಗತಿಸಿದರು. 2024 ರ ಜೂನ್ ಐಸಿಇಟಿ ಸಭೆಯಲ್ಲಿ ಸಹಿ ಹಾಕಿದ ಉದ್ದೇಶ ಪತ್ರದ  ಹೇಳಿಕೆಯನ್ನು ಕಾರ್ಯಗತಗೊಳಿಸುವ ಆಯ್ಕೆಗಳನ್ನು ಗುರುತಿಸುವುದು ಸೇರಿದಂತೆ ಯುಎಸ್ ಮತ್ತು ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ಹೆಚ್ಚಿನ ಪರಿಣಾಮ ಬೀರುವ ಆರ್ &ಡಿ ಪಾಲುದಾರಿಕೆಯನ್ನು ಬೆಂಬಲಿಸಲು ಯುಎಸ್-ಇಂಡಿಯಾ ಗ್ಲೋಬಲ್ ಚಾಲೆಂಜಸ್ ಇನ್ಸ್ಟಿಟ್ಯೂಟಿಗೆ  ಮುಂದಿನ ಐದು ವರ್ಷಗಳಲ್ಲಿ ಯುಎಸ್ ಮತ್ತು ಭಾರತ ಸರ್ಕಾರದ ಧನಸಹಾಯದಲ್ಲಿ 90+ ಮಿಲಿಯನ್ ಡಾಲರ್ ಸಂಗ್ರಹಿಸಲು ಅವರು ಯೋಜಿಸಿದ್ದಾರೆ. ಅಮೆರಿಕ ಮತ್ತು ಭಾರತೀಯ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಪ್ರಯೋಗಾಲಯಗಳು ಮತ್ತು ಖಾಸಗಿ ವಲಯದ ಸಂಶೋಧಕರ ನಡುವಿನ ಸಹಯೋಗವನ್ನು ವಿಸ್ತರಿಸಲು ಹೊಸ ಯುಎಸ್-ಇಂಡಿಯಾ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಆರ್ &ಡಿ ಫೋರಂ ಅನ್ನು ಪ್ರಾರಂಭಿಸುವುದನ್ನು ನಾಯಕರು ಸ್ವಾಗತಿಸಿದರು.

ಮುಂದಿನ ಪೀಳಿಗೆಯ ದೂರಸಂಪರ್ಕ, ಸಂಪರ್ಕಿತ ವಾಹನಗಳು (ಅಂತರ್ಜಾಲದ ಜೊತೆ ಜೋಡಿಸಲ್ಪಟ್ಟು ವಾಹನದ ಹೊರಗಿನ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಚಾಲಕರಿಗೆ ಒದಗಿಸುವಂತಹ ವ್ಯವಸ್ಥೆ ಇರುವ ವಾಹನಗಳು) , ಯಂತ್ರ ಕಲಿಕೆಯಂತಹ ಕ್ಷೇತ್ರಗಳಲ್ಲಿ ಜಂಟಿ ಯುಎಸ್-ಭಾರತ ಸಂಶೋಧನಾ ಯೋಜನೆಗಳನ್ನು ಸಕ್ರಿಯಗೊಳಿಸಲು ಸಂಯೋಜಿತ 5+ ಮಿಲಿಯನ್ ಡಾಲರ್ ಅನುದಾನದ ಬೆಂಬಲದೊಂದಿಗೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ಮತ್ತು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡುವೆ 11 ಧನಸಹಾಯ ನಿಧಿಗಳನ್ನು ನಾಯಕರು ಘೋಷಿಸಿದರು. ಅರೆವಾಹಕಗಳು, ಮುಂದಿನ ಪೀಳಿಗೆಯ ಸಂವಹನ ವ್ಯವಸ್ಥೆಗಳು, ಸುಸ್ಥಿರತೆ ಮತ್ತು ಹಸಿರು ತಂತ್ರಜ್ಞಾನಗಳು ಮತ್ತು ಬುದ್ಧಿವಂತ (ಇಂಟೆಲಿಜೆಂಟ್) ಸಾರಿಗೆ ವ್ಯವಸ್ಥೆಗಳ ಕ್ಷೇತ್ರಗಳಲ್ಲಿ ಜಂಟಿ ಯುಎಸ್-ಭಾರತ ಮೂಲ ಮತ್ತು ಅನ್ವಯಿಕ ಸಂಶೋಧನೆಯನ್ನು ಸಕ್ರಿಯಗೊಳಿಸಲು ಸುಮಾರು 10 ಮಿಲಿಯನ್ ಡಾಲರ್ ಸಂಯೋಜಿತ ವೆಚ್ಚದೊಂದಿಗೆ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 12 ಧನಸಹಾಯ ನಿಧಿಗಳನ್ನು  ನೀಡಲಾಗುವುದು ಎಂದು ನಾಯಕರು ಘೋಷಿಸಿದರು. ಇದಲ್ಲದೆ, ಎನ್ಎಸ್ಎಫ್ ಮತ್ತು ಎಂಇಐಟಿವೈ ಎರಡೂ ಕಡೆಯ ಮೂಲಭೂತ ಮತ್ತು ಅನ್ವಯಿಕ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಸಮನ್ವಯಗೊಳಿಸಲು ಸಂಶೋಧನಾ ಸಹಯೋಗಕ್ಕಾಗಿ ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿವೆ.

ಸಂಕೀರ್ಣ ವೈಜ್ಞಾನಿಕ ಸವಾಲುಗಳನ್ನು ಎದುರಿಸಲು ಮತ್ತು ಸಂಶ್ಲೇಷಿತ ಮತ್ತು ಎಂಜಿನಿಯರಿಂಗ್ ಜೀವಶಾಸ್ತ್ರ, ವ್ಯವಸ್ಥೆಗಳು ಮತ್ತು ಕಂಪ್ಯೂಟೇಶನಲ್ ಬಯಾಲಜಿ ಮತ್ತು ಭವಿಷ್ಯದ ಜೈವಿಕ ಉತ್ಪಾದನಾ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಲು ಅಡಿಪಾಯವಾಗಿರುವ ಇತರ ಸಂಬಂಧಿತ ಕ್ಷೇತ್ರಗಳಲ್ಲಿನ ಪ್ರಗತಿಯನ್ನು ಬಳಸಿಕೊಳ್ಳುವ ನವೀನ ಪರಿಹಾರಗಳನ್ನು ಆವಿಷ್ಕರಿಸಲು ಭಾರತದ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮತ್ತು ಯುನೈಟೆಡ್ ಸ್ಟೇಟಿನ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು 2024 ರ ಫೆಬ್ರವರಿಯಲ್ಲಿ ಸಹಯೋಗದ ಸಂಶೋಧನಾ ಯೋಜನೆಗಳಿಗೆ ಮೊದಲ ಜಂಟಿ ಆಹ್ವಾನವನ್ನು/ಕರೆಯನ್ನು ಘೋಷಿಸಿದ್ದನ್ನು ನಾಯಕರು ಶ್ಲಾಘಿಸಿದರು. ಜೈವಿಕ ಆರ್ಥಿಕತೆ. ಪ್ರಸ್ತಾಪಗಳ ಮೊದಲ ಕರೆಯ ಅಡಿಯಲ್ಲಿ, ಜಂಟಿ ಸಂಶೋಧನಾ ತಂಡಗಳು ಉತ್ಸಾಹದಿಂದ ಪ್ರತಿಕ್ರಿಯಿಸಿದ್ದು, 2024 ರ ಅಂತ್ಯದ ವೇಳೆಗೆ ಫಲಿತಾಂಶಗಳನ್ನು ಘೋಷಿಸುವ ಸಾಧ್ಯತೆಯಿದೆ.

ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಮತ್ತು ಇತರ ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚುವರಿ ಸಹಕಾರವನ್ನು ನಾಯಕರು ಉಲ್ಲೇಖಿಸಿದರು. ಆಗಸ್ಟ್ ನಲ್ಲಿ ವಾಷಿಂಗ್ಟನ್ ನಲ್ಲಿ ನಡೆದ ಯುಎಸ್-ಇಂಡಿಯಾ ಕ್ವಾಂಟಮ್ ಸಮನ್ವಯ ಕಾರ್ಯವಿಧಾನದ ಎರಡನೇ ಸಭೆಯನ್ನು ಅವರು ಪ್ರಸ್ತಾಪಿಸಿದರು ಮತ್ತು ಯುಎಸ್-ಇಂಡಿಯಾ ಸೈನ್ಸ್ ಅಂಡ್ ಟೆಕ್ನಾಲಜಿ ಎಂಡೋಮೆಂಟ್ ಫಂಡ್ (ಐಯುಎಸ್ಎಸ್ಟಿಎಫ್) ಮೂಲಕ ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ಕುರಿತು ದ್ವಿರಾಷ್ಟ್ರೀಯ ಸಂಶೋಧನೆ ಹಾಗು  ಅಭಿವೃದ್ಧಿ ಸಹಕಾರಕ್ಕಾಗಿ ಹದಿನೇಳು ಹೊಸ ನಿಧಿಗಳನ್ನು ಘೋಷಿಸಿರುವುದನ್ನು ಸ್ವಾಗತಿಸಿದರು. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಹೊಸ ಖಾಸಗಿ ವಲಯದ ಸಹಕಾರವನ್ನು ಅವರು ಸ್ವಾಗತಿಸಿದರು, ಉದಾಹರಣೆಗೆ ಐಬಿಎಂ ಇತ್ತೀಚೆಗೆ ಭಾರತ ಸರ್ಕಾರದೊಂದಿಗೆ ಅಂತಿಮಗೊಳಿಸಿದ ತಿಳಿವಳಿಕೆ ಒಪ್ಪಂದವನ್ನು ಅವರು ಉಲ್ಲೇಖಿಸಿದರು. ಇದು ಭಾರತದ ಐರಾವತ ಸೂಪರ್ ಕಂಪ್ಯೂಟರ್ನಲ್ಲಿ ಐಬಿಎಂನ ವಾಟ್ಸಾನ್ಸ್ ವೇದಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಹೊಸ ಎಐ ನಾವೀನ್ಯತೆ/ಅನ್ವೇಷಣಾ ಅವಕಾಶಗಳನ್ನು ಹೆಚ್ಚಿಸುತ್ತದೆ, ಸುಧಾರಿತ ಅರೆವಾಹಕ ಪ್ರೊಸೆಸರ್ಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಹಯೋಗವನ್ನು ಹೆಚ್ಚಿಸುತ್ತದೆ ಮತ್ತು ಭಾರತದ ರಾಷ್ಟ್ರೀಯ ಕ್ವಾಂಟಮ್ ಮಿಷನ್ ಗೆ  ಬೆಂಬಲವನ್ನು ಹೆಚ್ಚಿಸುತ್ತದೆ.

5 ಜಿ ನಿಯೋಜನೆ ಮತ್ತು ಮುಂದಿನ ಪೀಳಿಗೆಯ ದೂರಸಂಪರ್ಕದ ಸುತ್ತ ಹೆಚ್ಚು ವಿಸ್ತಾರವಾದ ಸಹಕಾರವನ್ನು ನಿರ್ಮಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ನಾಯಕರು ಶ್ಲಾಘಿಸಿದರು; ಭಾರತೀಯ ಸಂಸ್ಥೆಗಳೊಂದಿಗೆ ದಕ್ಷಿಣ ಏಷ್ಯಾ ಸೇರಿದಂತೆ ವಿಶ್ವಾದ್ಯಂತ ಈ ಕಾರ್ಯಪಡೆ ತರಬೇತಿ ಉಪಕ್ರಮವನ್ನು ಬೆಳೆಸಲು ಆರಂಭಿಕ $ 7 ಮಿಲಿಯನ್ ಹೂಡಿಕೆಯೊಂದಿಗೆ ಏಷ್ಯಾ ಓಪನ್ ರಾನ್ ಅಕಾಡೆಮಿಯನ್ನು ವಿಸ್ತರಿಸುವ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟಿನ  ಯೋಜನೆಗಳು ಇದರಲ್ಲಿ ಸೇರಿವೆ.

"ಇನ್ನೋವೇಶನ್ ಹ್ಯಾಂಡ್ಶೇಕ್" (ಅನ್ವೇಷಣಾ ಹಸ್ತಲಾಘವ)  ಕಾರ್ಯಸೂಚಿಯಡಿ ಉಭಯ ದೇಶಗಳ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ವಾಣಿಜ್ಯ ಇಲಾಖೆ ಮತ್ತು ವಾಣಿಜ್ಯ ಹಾಗು ಕೈಗಾರಿಕಾ ಸಚಿವಾಲಯದ ನಡುವೆ 2023 ರ ನವೆಂಬರ್ ನಲ್ಲಿ  ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರದ ಪ್ರಗತಿಯನ್ನು ನಾಯಕರು ಅವಲೋಕಿಸಿ ಸ್ವಾಗತಿಸಿದರು. ಅಂದಿನಿಂದ, ನವೋದ್ಯಮಗಳು (ಸ್ಟಾರ್ಟ್ಅಪ್ಗಳು), ಖಾಸಗಿ ಈಕ್ವಿಟಿ ಮತ್ತು ವೆಂಚರ್ ಬಂಡವಾಳ ಸಂಸ್ಥೆಗಳು, ಕಾರ್ಪೊರೇಟ್ ಹೂಡಿಕೆ ಇಲಾಖೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಟ್ಟುಗೂಡಿಸಲು ಮತ್ತು ಸಂಪರ್ಕಗಳನ್ನು ರೂಪಿಸಲು ಹಾಗು ನಾವೀನ್ಯತೆಯಲ್ಲಿ ಹೂಡಿಕೆಯನ್ನು ವೇಗಗೊಳಿಸಲು ಉಭಯ ಕಡೆಯವರು ಯುಎಸ್ ಮತ್ತು ಭಾರತದಲ್ಲಿ ಎರಡು ಉದ್ಯಮ ದುಂಡುಮೇಜಿನ ಸಭೆಗಳನ್ನು ನಡೆಸಿದ್ದಾರೆ.

ಮುಂದಿನ ಪೀಳಿಗೆಯ ರಕ್ಷಣಾ ಪಾಲುದಾರಿಕೆಗೆ ಶಕ್ತಿ ತುಂಬುವುದು

31 ಜನರಲ್ ಅಟಾಮಿಕ್ಸ್ ಎಂಕ್ಯೂ -9 ಬಿ (16 ಸ್ಕೈ ಗಾರ್ಡಿಯನ್ ಮತ್ತು 15 ಸೀ ಗಾರ್ಡಿಯನ್) ರಿಮೋಟ್ ಪೈಲಟ್ ವಿಮಾನಗಳು ಮತ್ತು ಅವುಗಳ ಸಂಬಂಧಿತ ಉಪಕರಣಗಳನ್ನು ಖರೀದಿಸುವ ನಿಟ್ಟಿನಲ್ಲಿ ಭಾರತದ ಪ್ರಗತಿಯನ್ನು ಅಧ್ಯಕ್ಷ ಬೈಡನ್ ಸ್ವಾಗತಿಸಿದರು, ಇದು ಎಲ್ಲಾ ಕ್ಷೇತ್ರಗಳಲ್ಲಿ ಭಾರತದ ಸಶಸ್ತ್ರ ಪಡೆಗಳ ಗುಪ್ತಚರ, ಕಣ್ಗಾವಲು ಮತ್ತು ಬೇಹುಗಾರಿಕೆ (ಐಎಸ್ಆರ್) ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.

ಜೆಟ್ ಎಂಜಿನ್ ಗಳು, ಯುದ್ಧಸಾಮಗ್ರಿಗಳು ಮತ್ತು ಭೂಮಿ  ಮೇಲಿನ ಚಲನೆಯ  ವ್ಯವಸ್ಥೆಗಳಿಗೆ ಆದ್ಯತೆಯ ಸಹ-ಉತ್ಪಾದನಾ ವ್ಯವಸ್ಥೆಗಳನ್ನು ರೂಪಿಸಲು  ಚಾಲ್ತಿಯಲ್ಲಿರುವ  ಸಹಯೋಗ ಸೇರಿದಂತೆ ಯುಎಸ್-ಭಾರತ ರಕ್ಷಣಾ ಕೈಗಾರಿಕಾ ಸಹಕಾರ ಮಾರ್ಗಸೂಚಿಯಡಿ ಆಗಿರುವ ಗಮನಾರ್ಹ ಪ್ರಗತಿಯನ್ನು ನಾಯಕರು ಗುರುತಿಸಿದರು. ಸಮುದ್ರದೊಳಗಿನ ಮತ್ತು ಕಡಲ ಡೊಮೇನ್ ಜಾಗೃತಿಯನ್ನು ಬಲಪಡಿಸುವ ಮಾನವರಹಿತ ಮೇಲ್ಮೈ ವಾಹನ ವ್ಯವಸ್ಥೆಗಳ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗಾಗಿ ಲಿಕ್ವಿಡ್ ರೊಬೊಟಿಕ್ಸ್ ಮತ್ತು ಸಾಗರ್ ಡಿಫೆನ್ಸ್ ಎಂಜಿನಿಯರಿಂಗ್ ತಂಡವನ್ನು ಒಳಗೊಂಡಂತೆ ರಕ್ಷಣಾ ಕೈಗಾರಿಕಾ ಪಾಲುದಾರಿಕೆಯನ್ನು ವಿಸ್ತರಿಸುವ ಪ್ರಯತ್ನಗಳನ್ನು ಅವರು ಸ್ವಾಗತಿಸಿದರು. ರಕ್ಷಣಾ ಸರಕು ಮತ್ತು ಸೇವೆಗಳ ಪರಸ್ಪರ ಪೂರೈಕೆಯನ್ನು ಹೆಚ್ಚಿಸುವ ಪೂರೈಕೆ ವ್ಯವಸ್ಥೆಗಳ ಭದ್ರತೆ (ಎಸ್ ಒಎಸ್ ಎ)ಗೆ ಸಂಬಂಧಿಸಿದ ಇತ್ತೀಚಿನ ತೀರ್ಮಾನವನ್ನು ನಾಯಕರು ಶ್ಲಾಘಿಸಿದರು. ರಕ್ಷಣಾ ಸರಕು ಮತ್ತು ಸೇವೆಗಳ ಪರಸ್ಪರ ಪೂರೈಕೆಯನ್ನು ಮತ್ತಷ್ಟು ಸಕ್ರಿಯಗೊಳಿಸಲು ಆಯಾ ರಕ್ಷಣಾ ಖರೀದಿ ವ್ಯವಸ್ಥೆಗಳನ್ನು ಸರಿಹೊಂದಿಸುವ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ಮುಂದುವರಿಸಲು ಇಬ್ಬರೂ ನಾಯಕರು ಬದ್ಧರಾಗಿದ್ದಾರೆ.

ಎಲ್ಲಾ ವಿಮಾನ ಮತ್ತು ವಿಮಾನ ಎಂಜಿನ್ ಭಾಗಗಳು ಸೇರಿದಂತೆ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಪರಿಶೀಲನೆ (ಎಂಆರ್ಒ) ವಲಯದ ಮೇಲೆ ಶೇಕಡಾ 5 ರಷ್ಟು ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ನಿಗದಿಪಡಿಸುವ ಭಾರತದ ನಿರ್ಧಾರವನ್ನು ಅಧ್ಯಕ್ಷ ಬೈಡನ್ ಸ್ವಾಗತಿಸಿದರು, ಆ ಮೂಲಕ ತೆರಿಗೆ ರಚನೆಯನ್ನು ಸರಳಗೊಳಿಸಲಾಗಿದೆ ಮತ್ತು ಭಾರತದಲ್ಲಿ ಎಂಆರ್ಒ ಸೇವೆಗಳಿಗೆ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು ದಾರಿ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟರು.  ಪ್ರಮುಖ ವಾಯುಯಾನ ಕೇಂದ್ರವಾಗುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ಸಹಯೋಗವನ್ನು ಉತ್ತೇಜಿಸಲು ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ನಾಯಕರು ಉದ್ಯಮವನ್ನು ಪ್ರೋತ್ಸಾಹಿಸಿದರು. ವಿಮಾನಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ ದುರಸ್ತಿ ಸೇರಿದಂತೆ ಭಾರತದ ಎಂಆರ್ ಒ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಯುಎಸ್ ಉದ್ಯಮದ ಬದ್ಧತೆಗಳನ್ನು ನಾಯಕರು ಸ್ವಾಗತಿಸಿದರು.

ಲಾಕ್ಹೀಡ್ ಮಾರ್ಟಿನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ನಡುವೆ ಇತ್ತೀಚೆಗೆ ಅಂಕಿತ ಹಾಕಲಾದ ಸಿ -130 ಜೆ ಸೂಪರ್ ಹರ್ಕ್ಯುಲಸ್ ವಿಮಾನ ಒಪ್ಪಂದವನ್ನು ನಾಯಕರು ಶ್ಲಾಘಿಸಿದರು. ದೀರ್ಘಕಾಲದ ಉದ್ಯಮ ಸಹಕಾರವನ್ನು ನಿರ್ಮಿಸುವ ಈ ಒಪ್ಪಂದವು ಸಿ -130 ಸೂಪರ್ ಹರ್ಕ್ಯುಲಸ್ ವಿಮಾನವನ್ನು ನಿರ್ವಹಿಸುವ ಭಾರತೀಯ ನೌಕಾಪಡೆ ಮತ್ತು ಜಾಗತಿಕ ಪಾಲುದಾರರ ಸನ್ನದ್ಧತೆಯನ್ನು ಬೆಂಬಲಿಸಲು ಭಾರತದಲ್ಲಿ ಹೊಸ ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ದುರಸ್ತಿ (ಎಂಆರ್ ಒ ) ಸೌಲಭ್ಯವನ್ನು ಸ್ಥಾಪಿಸುತ್ತದೆ. ಇದು ಯುಎಸ್-ಭಾರತ ರಕ್ಷಣಾ ಮತ್ತು ಏರೋಸ್ಪೇಸ್ ಸಹಕಾರದಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ ಮತ್ತು ಎರಡೂ ಕಡೆಯ ಆಳವಾದ ಕಾರ್ಯತಂತ್ರ ಮತ್ತು ತಂತ್ರಜ್ಞಾನ ಪಾಲುದಾರಿಕೆ ಸಂಬಂಧಗಳನ್ನು ಪ್ರತಿಬಿಂಬಿಸುತ್ತದೆ.

ಭಾರತ-ಯು.ಎಸ್. ಸರ್ಕಾರಗಳು, ವ್ಯವಹಾರೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಬೆಳೆಯುತ್ತಿರುವ ರಕ್ಷಣಾ ನಾವೀನ್ಯತೆ ಸಹಯೋಗವನ್ನು ನಾಯಕರು ಶ್ಲಾಘಿಸಿದರು. ರಕ್ಷಣಾ ವೇಗವರ್ಧನೆ ಪರಿಸರ ವ್ಯವಸ್ಥೆ (ಇಂಡಸ್-ಎಕ್ಸ್) ಉಪಕ್ರಮವನ್ನು 2023 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈ ತಿಂಗಳ ಆರಂಭದಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಮೂರನೇ ಇಂಡಸ್-ಎಕ್ಸ್ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸಲಾಯಿತು. ಸಿಲಿಕಾನ್ ವ್ಯಾಲಿ ಶೃಂಗಸಭೆಯಲ್ಲಿ ಅಂಕಿತ ಹಾಕಲಾದ ತಿಳಿವಳಿಕೆ ಒಡಂಬಡಿಕೆಯ  ಮೂಲಕ ಭಾರತೀಯ ರಕ್ಷಣಾ ಸಚಿವಾಲಯದ ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡಿಇಎಕ್ಸ್) ಮತ್ತು ಯುಎಸ್ ರಕ್ಷಣಾ ಇಲಾಖೆಯ ರಕ್ಷಣಾ ನಾವೀನ್ಯತೆ ಘಟಕ (ಡಿಐಯು) ನಡುವಿನ ವರ್ಧಿತ ಸಹಯೋಗವನ್ನು ಅವರು ಸ್ವಾಗತಿಸಿದರು. ಇಂಡಸ್-ಎಕ್ಸ್ ಜಾಲದಲ್ಲಿ ರಕ್ಷಣಾ ಮತ್ತು ಪರಸ್ಪರ ಬಳಕೆಯ ಕಂಪನಿಗಳಿಗೆ ಎರಡೂ ದೇಶಗಳಲ್ಲಿನ ಪ್ರಮುಖ ಪರೀಕ್ಷಾ ಶ್ರೇಣಿಗಳನ್ನು ಪ್ರವೇಶಿಸಲು ಮಾರ್ಗಗಳನ್ನು ಸುಗಮಗೊಳಿಸಲು ಇಂಡಸ್ವರ್ಕ್ಸ್ ಒಕ್ಕೂಟದ ಮೂಲಕ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಲಾಯಿತು.

ಯು.ಎಸ್. ಡಿಒಡಿಯ ಡಿಐಯು ಮತ್ತು ಭಾರತೀಯ ರಕ್ಷಣಾ ಸಚಿವಾಲಯದ ರಕ್ಷಣಾ ನಾವೀನ್ಯತೆ ಸಂಸ್ಥೆ (ಡಿಐಒ) ವಿನ್ಯಾಸಗೊಳಿಸಿದ "ಜಂಟಿ ಸವಾಲುಗಳನ್ನು" ಪ್ರಾರಂಭಿಸುವ ಮೂಲಕ ಇಂಡಸ್-ಎಕ್ಸ್ ಅಡಿಯಲ್ಲಿ ರಕ್ಷಣಾ ನಾವೀನ್ಯತೆ ಸೇತುವೆಯನ್ನು ನಿರ್ಮಿಸುವ ಹಂಚಿಕೆಯ ಗುರಿಯ ಸ್ಪಷ್ಟ ನೆರವೇರಿಕೆಯನ್ನು ನಾಯಕರು ಗುರುತಿಸಿದರು. 2024 ರಲ್ಲಿ, ನಮ್ಮ ಸರ್ಕಾರಗಳು ಸಮುದ್ರದೊಳಗಿನ ಸಂವಹನ ಮತ್ತು ಕಡಲ ಗುಪ್ತಚರ, ಕಣ್ಗಾವಲು ಮತ್ತು ಬೇಹುಗಾರಿಕೆ (ಐಎಸ್ಆರ್) ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ ಯುಎಸ್ ಮತ್ತು ಭಾರತೀಯ ಕಂಪನಿಗಳಿಗೆ ಪ್ರತ್ಯೇಕವಾಗಿ 1+ ಮಿಲಿಯನ್ ಡಾಲರ್ ನೀಡಿವೆ. ಈ ಯಶಸ್ಸಿನ ಆಧಾರದ ಮೇಲೆ, ಲೋ ಅರ್ಥ್ ಆರ್ಬಿಟ್ (ಎಲ್ಇಒ) ನಲ್ಲಿ ಬಾಹ್ಯಾಕಾಶ ಪರಿಸ್ಥಿತಿ  ಜಾಗೃತಿ (ಎಸ್ಎಸ್ಎ) ಮೇಲೆ ಕೇಂದ್ರೀಕರಿಸಿದ ಇತ್ತೀಚಿನ ಇಂಡಸ್-ಎಕ್ಸ್ ಶೃಂಗಸಭೆಯಲ್ಲಿ ಹೊಸ ಸವಾಲನ್ನು ಘೋಷಿಸಲಾಯಿತು.

ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್ ಕಾಪಾಡಿಕೊಳ್ಳಲು ನಮ್ಮ ಮಿಲಿಟರಿ ಪಾಲುದಾರಿಕೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಆಳಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ನಾಯಕರು ಸ್ವಾಗತಿಸಿದರು, 2024 ರ ಮಾರ್ಚ್ ನಲ್ಲಿ ನಡೆದ ಟೈಗರ್ ಟ್ರಯಂಫ್ ಕವಾಯತು ಸಮಯದಲ್ಲಿ ಭಾರತವು ಇಲ್ಲಿಯವರೆಗೆ ಅತ್ಯಂತ ಸಂಕೀರ್ಣ, ಅತಿದೊಡ್ಡ ದ್ವಿಪಕ್ಷೀಯ, ತ್ರಿ-ಸೇವಾ/ಸೇನಾ ವ್ಯಾಯಾಮವನ್ನು ಆಯೋಜಿಸಿರುವುದನ್ನೂ ಅವರು ಗಮನಿಸಿದರು.  ಪ್ರಸ್ತುತ ನಡೆಯುತ್ತಿರುವ ದ್ವಿಪಕ್ಷೀಯ ಸೇನಾ ಯುದ್ಧ್ ಅಭ್ಯಾಸ್ ಕವಾಯತು ಹಿನ್ನೆಲೆಯಲ್ಲಿ ಭಾರತದಲ್ಲಿ ಜಾವೆಲಿನ್ ಮತ್ತು ಸ್ಟ್ರೈಕರ್ ವ್ಯವಸ್ಥೆಗಳ ಮೊದಲ ಪ್ರದರ್ಶನ ಸೇರಿದಂತೆ ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಸೇರಿಸಿರುವುದನ್ನು ಅವರು ಸ್ವಾಗತಿಸಿದರು.

ಸಂಪರ್ಕ ಅಧಿಕಾರಿಗಳ ನಿಯೋಜನೆಗೆ ಸಂಬಂಧಿಸಿದ ಒಪ್ಪಂದದ ಮುಕ್ತಾಯ ಮತ್ತು ಯುಎಸ್ ವಿಶೇಷ ಕಾರ್ಯಾಚರಣೆ ಕಮಾಂಡ್ (ಎಸ್ಒಸಿಒಎಂ) ನಲ್ಲಿ ಭಾರತದಿಂದ ಮೊದಲ ಸಂಪರ್ಕ ಅಧಿಕಾರಿಯ ನಿಯೋಜನೆ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದನ್ನು ನಾಯಕರು ಸ್ವಾಗತಿಸಿದರು.

ಬಾಹ್ಯಾಕಾಶ ಮತ್ತು ಸೈಬರ್ ಸೇರಿದಂತೆ ಸುಧಾರಿತ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ  ಕೆಲಸವನ್ನು ನಾಯಕರು ಶ್ಲಾಘಿಸಿದರು ಮತ್ತು ಯುಎಸ್-ಭಾರತ ಸೈಬರ್ ಸಹಕಾರ ಚೌಕಟ್ಟನ್ನು ಎತ್ತರಿಸಲು  2024 ರ ನವೆಂಬರ್ ನಲ್ಲಿ ನಡೆಯುವ ದ್ವಿಪಕ್ಷೀಯ ಸೈಬರ್ ತೊಡಗಿಸಿಕೊಳ್ಳುವಿಕೆಯ ಕಾರ್ಯಕ್ರಮವನ್ನು  ಪರಾಮರ್ಶಿಸಿದರು. ಹೊಸ ಸಹಕಾರದ ಕ್ಷೇತ್ರಗಳಲ್ಲಿ  ಬೆದರಿಕೆ ಮಾಹಿತಿ ಹಂಚಿಕೆ, ಸೈಬರ್ ಭದ್ರತಾ ತರಬೇತಿ ಮತ್ತು ಇಂಧನ ಹಾಗು ದೂರಸಂಪರ್ಕ ಜಾಲಗಳಲ್ಲಿ ದುರ್ಬಲತೆ/ಸಂಭಾವ್ಯ ಅಪಾಯ  ತಗ್ಗಿಸುವ ಸಹಯೋಗವನ್ನು ಒಳಗೊಂಡಿರುತ್ತವೆ. 2024 ರ ಮೇ ತಿಂಗಳಲ್ಲಿ ನಡೆದ ಎರಡನೇ ಯುಎಸ್-ಇಂಡಿಯಾ ಅಡ್ವಾನ್ಸ್ಡ್ ಡೊಮೇನ್ಸ್ ಡಿಫೆನ್ಸ್ ಮಾತುಕತೆ (ಡೈಲಾಗ್) ಯನ್ನು  ನಾಯಕರು ಉಲ್ಲೇಖಿಸಿದರು, ಇದರಲ್ಲಿ ಮೊದಲ ದ್ವಿಪಕ್ಷೀಯ ರಕ್ಷಣಾ ಬಾಹ್ಯಾಕಾಶ ಟೇಬಲ್-ಟಾಪ್ ವ್ಯಾಯಾಮವೂ ಸೇರಿದೆ.

ಶುದ್ಧ ಇಂಧನ ಪರಿವರ್ತನೆಗೆ ವೇಗವರ್ಧನೆ

ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು ಸುರಕ್ಷಿತ ಮತ್ತು ಸುಭದ್ರ ಜಾಗತಿಕ ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ನಿರ್ಮಿಸುವ ಯುಎಸ್-ಭಾರತ ಮಾರ್ಗಸೂಚಿಯನ್ನು ಸ್ವಾಗತಿಸಿದರು, ಇದು ಯುಎಸ್ ಮತ್ತು ಭಾರತೀಯ ಶುದ್ಧ ಇಂಧನ ತಂತ್ರಜ್ಞಾನಗಳು ಮತ್ತು ಘಟಕಗಳ ಉತ್ಪಾದನೆಯ ಮೂಲಕ ಸುರಕ್ಷಿತ ಮತ್ತು ಸುಭದ್ರ ಶುದ್ಧ ಇಂಧನ ಪೂರೈಕೆ ಸರಪಳಿಗಳ ವಿಸ್ತರಣೆಯನ್ನು ವೇಗಗೊಳಿಸಲು ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ. ಆರಂಭಿಕ ಹಂತದಲ್ಲಿ, ನವೀಕರಿಸಬಹುದಾದ ಇಂಧನ, ಇಂಧನ ಸಂಗ್ರಹಣೆ, ವಿದ್ಯುತ್ ಗ್ರಿಡ್ ಮತ್ತು ಪ್ರಸರಣ ತಂತ್ರಜ್ಞಾನಗಳು, ಹೆಚ್ಚಿನ ದಕ್ಷತೆಯ ಶೀತಲ ವ್ಯವಸ್ಥೆಗಳು, ಶೂನ್ಯ ಮಾಲಿನ್ಯ ಹೊರಸೂಸುವ ವಾಹನಗಳು ಮತ್ತು ಇತರ ಉದಯೋನ್ಮುಖ ಶುದ್ಧ ತಂತ್ರಜ್ಞಾನಗಳಿಗಾಗಿ ಶುದ್ಧ ಇಂಧನ ಮೌಲ್ಯ ಸರಪಳಿಯಾದ್ಯಂತ ಯೋಜನೆಗಳನ್ನು ಬೆಂಬಲಿಸಲು 1 ಬಿಲಿಯನ್ ಡಾಲರ್ ಬಹುಪಕ್ಷೀಯ ಹಣಕಾಸು ಬೆಂಬಲದೊಂದಿಗೆ  ಯುಎಸ್ ಮತ್ತು ಭಾರತ ಒಟ್ಟಾಗಿ ಕೆಲಸ ಮಾಡಲಿವೆ.

ಶುದ್ಧ ಇಂಧನ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸಲು ಭಾರತದ ಖಾಸಗಿ ವಲಯದೊಂದಿಗೆ ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್ಸಿ) ಪಾಲುದಾರಿಕೆಯನ್ನು ನಾಯಕರು ಎತ್ತಿ ತೋರಿಸಿದರು. ಇಲ್ಲಿಯವರೆಗೆ, ಡಿಎಫ್ ಸಿ ಸೌರ ಕೋಶ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಟಾಟಾ ಪವರ್ ಸೋಲಾರ್ ಗೆ 250 ಮಿಲಿಯನ್ ಡಾಲರ್ ಸಾಲವನ್ನು ಮತ್ತು ಭಾರತದಲ್ಲಿ ಸೌರ ಮಾಡ್ಯೂಲ್ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಫಸ್ಟ್ ಸೋಲಾರ್ ಗೆ 500 ಮಿಲಿಯನ್ ಡಾಲರ್ ಸಾಲವನ್ನು ವಿಸ್ತರಿಸಿದೆ.

ಇಂಧನ ಭದ್ರತೆಯನ್ನು ಬಲಪಡಿಸಲು, ಶುದ್ಧ ಇಂಧನ ನಾವೀನ್ಯತೆಗೆ/ಅನ್ವೇಷಣೆಗೆ  ಅವಕಾಶಗಳನ್ನು ಸೃಷ್ಟಿಸಲು, ಹವಾಮಾನ ಬದಲಾವಣೆಯನ್ನು ಪರಿಹರಿಸಲು ಮತ್ತು ಸಾಮರ್ಥ್ಯ ವರ್ಧನೆ ಸೇರಿದಂತೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮತ್ತು ಉದ್ಯಮ , ಸಂಶೋಧನೆ ಮತ್ತು ಅಭಿವೃದ್ಧಿ ನಡುವಿನ ಸಹಯೋಗಕ್ಕಾಗಿ 2024 ರ ಸೆಪ್ಟೆಂಬರ್ 16 ರಂದು ವಾಷಿಂಗ್ಟನ್ ಡಿಸಿಯಲ್ಲಿ ನಡೆಸಲಾದ  ವ್ಯೂಹಾತ್ಮಕ  ಶುದ್ಧ ಇಂಧನ ಪಾಲುದಾರಿಕೆ (ಎಸ್ಸಿಇಪಿ) ಅಡಿಯಲ್ಲಿ ಬಲವಾದ ಸಹಯೋಗವನ್ನು ನಾಯಕರು ಶ್ಲಾಘಿಸಿದರು.

ಭಾರತದಲ್ಲಿ ಹೈಡ್ರೋಜನ್ ಸುರಕ್ಷತೆಗಾಗಿ ಹೊಸ ರಾಷ್ಟ್ರೀಯ ಕೇಂದ್ರದ ಸಹಯೋಗವನ್ನು ನಾಯಕರು ಸ್ವಾಗತಿಸಿದರು ಮತ್ತು ಹೈಡ್ರೋಜನ್ ಹಾಗು  ಇಂಧನ ಸಂಗ್ರಹಣೆ ಕುರಿತಂತೆ  ಸಾರ್ವಜನಿಕ-ಖಾಸಗಿ ಕಾರ್ಯಪಡೆಗಳ ಮೂಲಕವೂ ಶುದ್ಧ ಇಂಧನ ಉತ್ಪಾದನೆ ಮತ್ತು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸಹಯೋಗವನ್ನು ಹೆಚ್ಚಿಸಲು ಹೊಸ ನವೀಕರಿಸಬಹುದಾದ ಇಂಧನ ತಂತ್ರಜ್ಞಾನ ಕ್ರಿಯಾ ವೇದಿಕೆಯನ್ನು (ಆರ್ ಇಟಿಎಪಿ) ಬಳಸಿಕೊಳ್ಳುವ ಉದ್ದೇಶವನ್ನು ನಾಯಕರು ಪುನರುಚ್ಚರಿಸಿದರು.

ವೈವಿಧ್ಯಮಯ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುವ ಹೆಚ್ಚು ಸ್ಪಂದಿಸುವ ಮತ್ತು ಸುಸ್ಥಿರ ವಿದ್ಯುತ್ ವ್ಯವಸ್ಥೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟದ ನಡುವೆ ಹೊಸ ಸಹಕಾರ ಒಪ್ಪಂದವನ್ನು ನಾಯಕರು ಘೋಷಿಸಿದರು.

ಮೌಲ್ಯ ಸರಪಳಿಯಲ್ಲಿ ಕಾರ್ಯತಂತ್ರದ ಯೋಜನೆಗಳನ್ನು ಗುರಿಯಾಗಿಸಿಕೊಂಡು ಖನಿಜಗಳ ಭದ್ರತಾ ಪಾಲುದಾರಿಕೆಯಡಿ ನಿರ್ಣಾಯಕ ಖನಿಜಗಳಿಗೆ ವೈವಿಧ್ಯಮಯ ಮತ್ತು ಸುಸ್ಥಿರ ಪೂರೈಕೆ ಸರಪಳಿಗಳ ಅಭಿವೃದ್ಧಿಯನ್ನು ವೇಗಗೊಳಿಸುವ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು. ಮುಂಬರುವ ಯುಎಸ್-ಭಾರತ ವಾಣಿಜ್ಯ ಸಂವಾದದಲ್ಲಿ ನಿರ್ಣಾಯಕ ಖನಿಜಗಳ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ನಾಯಕರು ಎದುರು ನೋಡುತ್ತಿರುವುದಾಗಿ ಹೇಳಿದರು ಮತ್ತು ವರ್ಧಿತ ತಾಂತ್ರಿಕ ನೆರವು ಹಾಗು  ಹೆಚ್ಚಿನ ವಾಣಿಜ್ಯ ಸಹಕಾರದ ಮೂಲಕ ಸ್ಥಿತಿಸ್ಥಾಪಕ ನಿರ್ಣಾಯಕ ಖನಿಜಗಳ ಪೂರೈಕೆ ಸರಪಳಿಗಳನ್ನು ಭದ್ರಪಡಿಸಲು ದ್ವಿಪಕ್ಷೀಯ ಸಹಯೋಗವನ್ನು ತ್ವರಿತಗೊಳಿಸಲು ದೃಢ ನಿರ್ಧಾರ  ಮಾಡಿದರು.

ಅಂತಾರಾಷ್ಟ್ರೀಯ ಇಂಧನ ಕಾರ್ಯಕ್ರಮ ಕುರಿತ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಐಇಎ ಸದಸ್ಯತ್ವಕ್ಕಾಗಿ ಭಾರತವು ಕೆಲಸ ಮಾಡಲು 2023 ರಿಂದ ಜಂಟಿ ಪ್ರಯತ್ನಗಳಲ್ಲಿ ಆಗಿರುವ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು.

ಭಾರತದಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ದಾಸ್ತಾನು ಮತ್ತು ಉದಯೋನ್ಮುಖ ಶುದ್ಧ ತಂತ್ರಜ್ಞಾನದ ಉತ್ಪಾದನೆ ಮತ್ತು ಅನುಷ್ಟಾನ/ನಿಯೋಜನೆಯನ್ನು ವೇಗಗೊಳಿಸುವ ಬದ್ಧತೆಯನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಭಾರತದ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್ಐಐಎಫ್) ಮತ್ತು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ನಡುವೆ ಹಸಿರು ಪರಿವರ್ತನೆ ನಿಧಿಗಾಗಿ ತಲಾ 500 ಮಿಲಿಯನ್ ಡಾಲರ್ವರೆಗೆ ಒದಗಿಸಲು ಮತ್ತು ಈ ಪ್ರಯತ್ನಗಳಿಗೆ ಸರಿಹೊಂದುವಂತೆ ಖಾಸಗಿ ವಲಯದ ಹೂಡಿಕೆದಾರರನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಗತಿಯನ್ನು ಅವರು ಸ್ವಾಗತಿಸಿದರು. ಹಸಿರು ಪರಿವರ್ತನಾ ನಿಧಿಯ ತ್ವರಿತ ಕಾರ್ಯಾಚರಣೆಯನ್ನು ಎರಡೂ ಕಡೆಯವರು ಎದುರು ನೋಡುತ್ತಿದ್ದಾರೆ.

ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸುವುದು ಮತ್ತು ಜಾಗತಿಕ ಆರೋಗ್ಯ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು

ಪಿಲ್ಲರ್ 3, ಪಿಲ್ಲರ್ 4 ರ ಅಡಿಯಲ್ಲಿ ಒಪ್ಪಂದಗಳ ದೃಢೀಕರಣ ಮತ್ತು ಸಮೃದ್ಧಿಗಾಗಿ ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟು (ಐಪಿಇಎಫ್) ಕುರಿತ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದನ್ನು ಮತ್ತು ದೃಢೀಕರಿಸಿರುವುದನ್ನು ನಾಯಕರು ಸ್ವಾಗತಿಸಿದರು. ಐಪಿಇಎಫ್ ತನ್ನ ಸಹಿ ಹಾಕಿದ ದೇಶಗಳ ಆರ್ಥಿಕತೆಗಳ ಸ್ಥಿತಿಸ್ಥಾಪಕತ್ವ, ಸುಸ್ಥಿರತೆ, ಎಲ್ಲರನ್ನೂ ಒಳಗೊಳ್ಳುವಿಕೆ, ಆರ್ಥಿಕ ಬೆಳವಣಿಗೆ, ನ್ಯಾಯಸಮ್ಮತತೆ ಮತ್ತು ಸ್ಪರ್ಧಾತ್ಮಕತೆಯನ್ನು ಮುನ್ನಡೆಸಲು ಪ್ರಯತ್ನಿಸುತ್ತದೆ ಎಂದು ನಾಯಕರು ಒತ್ತಿ ಹೇಳಿದರು. ಜಾಗತಿಕ ಜಿಡಿಪಿಯ 40 ಪ್ರತಿಶತ ಮತ್ತು ಜಾಗತಿಕ ಸರಕು ಮತ್ತು ಸೇವೆಗಳ ವ್ಯಾಪಾರದ 28 ಪ್ರತಿಶತವನ್ನು ಪ್ರತಿನಿಧಿಸುವ 14 ಐಪಿಇಎಫ್ ಪಾಲುದಾರರ ಆರ್ಥಿಕ ವೈವಿಧ್ಯತೆಯನ್ನು ಅವರು ಗಮನಿಸಿದರು.

ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿ ಅವರು 21 ನೇ ಶತಮಾನದ ಹೊಸ ಯುಎಸ್-ಭಾರತ ಔಷಧ ನೀತಿ ಚೌಕಟ್ಟು ಮತ್ತು ಅದರೊಂದಿಗೆ ಲಗತ್ತಾದ ತಿಳಿವಳಿಕಾ ಒಡಂಬಡಿಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಇದು ಸಂಶ್ಲೇಷಿತ ಔಷಧಿಗಳು ಮತ್ತು ಪೂರ್ವಗಾಮಿ ರಾಸಾಯನಿಕಗಳ ಅಕ್ರಮ ಉತ್ಪಾದನೆ ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆಯನ್ನು ತಡೆಯಲು  ಸಹಯೋಗವನ್ನು ಆಳಗೊಳಿಸುತ್ತದೆ ಮತ್ತು ಸಮಗ್ರ ಸಾರ್ವಜನಿಕ ಆರೋಗ್ಯ ಪಾಲುದಾರಿಕೆಯನ್ನು ಬಲಗೊಳಿಸುತ್ತದೆ.

ಸಂಶ್ಲೇಷಿತ ಔಷಧಗಳ ಬೆದರಿಕೆಗಳನ್ನು ಎದುರಿಸಲು ಮತ್ತು ಸಂಘಟಿತ ಕ್ರಮಗಳ ಮೂಲಕ ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸಲು ಪರಸ್ಪರ ಒಪ್ಪಿತ ಉಪಕ್ರಮಗಳ ಮೂಲಕ ಸಂಶ್ಲೇಷಿತ ಔಷಧಗಳು ಮತ್ತು ಅವುಗಳ ಮುನ್ಸೂಚಿತ ಬೆದರಿಕೆಯನ್ನು ಎದುರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜಾಗತಿಕ ಒಕ್ಕೂಟದ ಉದ್ದೇಶಗಳಿಗೆ ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಕ್ಯಾನ್ಸರ್ ವಿರುದ್ಧದ ಪ್ರಗತಿಯ ದರವನ್ನು ವೇಗಗೊಳಿಸಲು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಲು ಎರಡೂ ದೇಶಗಳ ತಜ್ಞರನ್ನು ಒಟ್ಟುಗೂಡಿಸಿದ 2024 ರ ಆಗಸ್ಟ್ ನಲ್ಲಿ ನಡೆದ ಮೊದಲ ಯುಎಸ್-ಭಾರತ ಕ್ಯಾನ್ಸರ್ ಸಂವಾದವನ್ನು ನಾಯಕರು ಶ್ಲಾಘಿಸಿದರು. ಯುನೈಟೆಡ್ ಸ್ಟೇಟ್ಸ್, ಭಾರತ, ಆರ್ ಒಕೆ, ಜಪಾನ್ ಮತ್ತು ಇಯು ನಡುವೆ ಇತ್ತೀಚೆಗೆ ಪ್ರಾರಂಭಿಸಲಾದ ಬಯೋ 5 ಪಾಲುದಾರಿಕೆಯನ್ನು ನಾಯಕರು ಶ್ಲಾಘಿಸಿದರು, ಇದು ಔಷಧೀಯ ಪೂರೈಕೆ ಸರಪಳಿಗಳಲ್ಲಿ ನಿಕಟ ಸಹಕಾರವನ್ನು ಹೆಚ್ಚಿಸುತ್ತದೆ. ಮಕ್ಕಳಿಗಾಗಿ ಹೆಕ್ಸಾವಲೆಂಟ್ (ಸಿಕ್ಸ್-ಇನ್-ಒನ್) ಲಸಿಕೆಗಳನ್ನು ತಯಾರಿಸಲು ಭಾರತೀಯ ಕಂಪನಿ ಪನೇಸಿಯಾ ಬಯೋಟೆಕ್ ಗೆ  ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ 50 ಮಿಲಿಯನ್ ಡಾಲರ್ ಸಾಲವನ್ನು ನೀಡಿರುವುದನ್ನು ನಾಯಕರು ಶ್ಲಾಘಿಸಿದರು, ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಬೆಂಬಲವನ್ನು ಹೆಚ್ಚಿಸುವುದು ಸೇರಿದಂತೆ ಹಂಚಿಕೆಯ ಜಾಗತಿಕ ಆರೋಗ್ಯ ಆದ್ಯತೆಗಳನ್ನು ಮುನ್ನಡೆಸುವ ಜಂಟಿ ಬದ್ಧತೆಯನ್ನು ಪುನರುಚ್ಚರಿಸಿದರು.

ವ್ಯಾಪಾರ ಮತ್ತು ರಫ್ತು ಹಣಕಾಸು, ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯಾಪಾರದಂತಹ ಕ್ಷೇತ್ರಗಳಲ್ಲಿ ಸಾಮರ್ಥ್ಯ ವರ್ಧನೆ ಕಾರ್ಯಾಗಾರಗಳ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ಸುಧಾರಿಸುವ ಮೂಲಕ ಯುಎಸ್ ಮತ್ತು ಭಾರತೀಯ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗು  ಸಣ್ಣ ಉದ್ಯಮ ಆಡಳಿತ ಸಚಿವಾಲಯದ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ನಾಯಕರು ಸ್ವಾಗತಿಸಿದರು.  ಈ ತಿಳುವಳಿಕಾ ಒಡಂಬಡಿಕೆಯು ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಮತ್ತು ಎರಡೂ ದೇಶಗಳ ಮಹಿಳಾ ಮಾಲೀಕತ್ವದ ಸಣ್ಣ ಉದ್ಯಮಗಳ ನಡುವೆ ವ್ಯಾಪಾರ ಪಾಲುದಾರಿಕೆಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಜಂಟಿಯಾಗಿ ನಡೆಸಲು ಅವಕಾಶ ನೀಡುತ್ತದೆ. 2023 ರ ಜೂನ್  ನಲ್ಲಿ ಅಧಿಕೃತ  ಭೇಟಿಯ ನಂತರ, ಅಭಿವೃದ್ಧಿ ಹಣಕಾಸು ನಿಗಮವು ಭಾರತೀಯ ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಎಂಟು ಯೋಜನೆಗಳಲ್ಲಿ 177 ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವುದಕ್ಕೆ  ನಾಯಕರು ಸಂಭ್ರಮವನ್ನು ಹಂಚಿಕೊಂಡರು.

ಹವಾಮಾನ-ಸ್ಮಾರ್ಟ್ ಕೃಷಿ, ಕೃಷಿ ಉತ್ಪಾದಕತೆಯ ಬೆಳವಣಿಗೆ, ಕೃಷಿ ನಾವೀನ್ಯತೆ ಮತ್ತು ಅಪಾಯಗಳಿಂದ ಬೆಳೆ ರಕ್ಷಣೆ ಮತ್ತು ಕೃಷಿ ಸಾಲಕ್ಕೆ ಸಂಬಂಧಿಸಿದ ಉತ್ತಮ ಪದ್ಧತಿಗಳ ಹಂಚಿಕೆಯಂತಹ ಕ್ಷೇತ್ರಗಳಲ್ಲಿ ಯು.ಎಸ್. ಕೃಷಿ ಇಲಾಖೆ ಮತ್ತು ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ನಡುವೆ ಕೃಷಿಯಲ್ಲಿ ಹೆಚ್ಚಿದ ಸಹಕಾರವನ್ನು ನಾಯಕರು ಸ್ವಾಗತಿಸಿದರು. ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ನಿಯಂತ್ರಕ ವಿಷಯಗಳು ಮತ್ತು ನಾವೀನ್ಯತೆಗಳ ಬಗ್ಗೆ ಚರ್ಚೆಗಳ ಮೂಲಕ ಎರಡೂ ಕಡೆಯವರು ಖಾಸಗಿ ವಲಯದೊಂದಿಗಿನ ಸಹಕಾರವನ್ನು ಹೆಚ್ಚಿಸಲುದ್ದೇಶಿಸಿದ್ದಾರೆ.

ಏಷ್ಯಾ ಮತ್ತು ಆಫ್ರಿಕಾದಲ್ಲಿ ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳ ಜವಾಬ್ದಾರಿಯುತ ಬಳಕೆಯನ್ನು ನಿಯೋಜಿಸಲು ಯುಎಸ್ ಮತ್ತು ಭಾರತೀಯ ಖಾಸಗಿ ವಲಯದ ಕಂಪನಿಗಳು, ತಂತ್ರಜ್ಞಾನ ಮತ್ತು ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿರುವ ಹೊಸ ಯುಎಸ್-ಇಂಡಿಯಾ ಗ್ಲೋಬಲ್ ಡಿಜಿಟಲ್ ಡೆವಲಪ್ಮೆಂಟ್ ಪಾರ್ಟ್ನರ್ಶಿಪ್ನ ಔಪಚಾರಿಕ ಆರಂಭವನ್ನು ನಾಯಕರು ಸ್ವಾಗತಿಸಿದರು.

ಜಾಗತಿಕ ಅಭಿವೃದ್ಧಿ ಸವಾಲುಗಳನ್ನು ಜಂಟಿಯಾಗಿ ಎದುರಿಸಲು ಮತ್ತು ಇಂಡೋ-ಪೆಸಿಫಿಕ್ ನಲ್ಲಿ ಸಮೃದ್ಧಿಯನ್ನು ಉತ್ತೇಜಿಸಲು ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಮತ್ತು ಭಾರತದ ಅಭಿವೃದ್ಧಿ ಪಾಲುದಾರಿಕೆ ಆಡಳಿತದ ನೇತೃತ್ವದಲ್ಲಿ ತ್ರಿಕೋನ ಅಭಿವೃದ್ಧಿ ಸಹಭಾಗಿತ್ವದ ಮೂಲಕ ತಾಂಜೇನಿಯಾದೊಂದಿಗೆ ಬಲಪಡಿಸಲಾದ ತ್ರಿಪಕ್ಷೀಯ ಸಹಕಾರವನ್ನು ನಾಯಕರು ಸ್ವಾಗತಿಸಿದರು. ಈ ಪಾಲುದಾರಿಕೆಯು ತಾಂಜೇನಿಯಾದಲ್ಲಿ ಇಂಧನ ಮೂಲಸೌಕರ್ಯ ಮತ್ತು ಪ್ರವೇಶವನ್ನು/ಲಭ್ಯತೆಯನ್ನು ಹೆಚ್ಚಿಸಲು ಸೌರ ಶಕ್ತಿ ಸೇರಿದಂತೆ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಮುನ್ನಡೆಸುವತ್ತ ಗಮನ ಹರಿಸುತ್ತದೆ, ಆ ಮೂಲಕ ಇಂಡೋ-ಪೆಸಿಫಿಕ್ ನಲ್ಲಿ ಇಂಧನ ಸಹಕಾರವನ್ನು ಹೆಚ್ಚಿಸುತ್ತದೆ. ಆರೋಗ್ಯ ಸಹಕಾರದ ಕ್ಷೇತ್ರಗಳಲ್ಲಿ, ವಿಶೇಷವಾಗಿ ಡಿಜಿಟಲ್ ಆರೋಗ್ಯ ಮತ್ತು ದಾದಿಯರ  ಹಾಗು  ಇತರ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ವರ್ಧನೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ನಿರ್ಣಾಯಕ ತಾಂತ್ರಿಕ ಕ್ಷೇತ್ರಗಳಲ್ಲಿ ತ್ರಿಕೋನ ಅಭಿವೃದ್ಧಿ ಪಾಲುದಾರಿಕೆಯ ವಿಸ್ತರಣೆಯನ್ನು ಅನ್ವೇಷಿಸಲು ಅವರು ಆಶಯ ವ್ಯಕ್ತಪಡಿಸಿದರು.

ಸಾಂಸ್ಕೃತಿಕ ಮಹತ್ವದ ಆಸ್ತಿಯ ಅಕ್ರಮ ಆಮದು, ರಫ್ತು ಮತ್ತು ಮಾಲೀಕತ್ವದ ವರ್ಗಾವಣೆಯನ್ನು ನಿಷೇಧಿಸುವ ಮತ್ತು ತಡೆಗಟ್ಟುವ ವಿಧಾನಗಳ ಕುರಿತ 1970 ರ ಸಮಾವೇಶದ ಅನುಷ್ಠಾನಕ್ಕೆ ಅನುಕೂಲವಾಗುವಂತೆ ದ್ವಿಪಕ್ಷೀಯ ಸಾಂಸ್ಕೃತಿಕ ಆಸ್ತಿ ಒಪ್ಪಂದಕ್ಕೆ 2024ರ ಜುಲೈಯಲ್ಲಿ ಸಹಿ ಹಾಕಿರುವುದನ್ನು ನಾಯಕರು ದೃಢೀಕರಿಸಿದರು. ಈ ಒಪ್ಪಂದವು ಉಭಯ  ದೇಶಗಳ ತಜ್ಞರ ವರ್ಷಗಳ ಶ್ರದ್ಧೆಯ ಕೆಲಸದ ಮಹತ್ವವನ್ನು ಗುರುತಿಸಿದೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಸಹಕಾರವನ್ನು ಹೆಚ್ಚಿಸುವ ಅಧ್ಯಕ್ಷ ಬೈಡೆನ್ ಮತ್ತು ಪ್ರಧಾನಿ ಮೋದಿಯವರ ಬದ್ಧತೆಯನ್ನು ಈಡೇರಿಸುತ್ತದೆ. ಈ ನಿಟ್ಟಿನಲ್ಲಿ, 2024ರಲ್ಲಿ ಅಮೆರಿಕದಿಂದ 297 ಭಾರತೀಯ ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ವಾಪಸು ಕಳುಹಿಸಿರುವುದನ್ನು ನಾಯಕರು ಸ್ವಾಗತಿಸಿದರು.

ರಿಯೊ ಡಿ ಜನೈರೊದ ಜಿ 20 ನಾಯಕರ ಶೃಂಗಸಭೆಯಲ್ಲಿ ಹಂಚಿಕೆಯ ಆದ್ಯತೆಗಳನ್ನು ಈಡೇರಿಸಲು  ಭಾರತದ ಮಹತ್ವಾಕಾಂಕ್ಷೆಯ ಜಿ 20 ಅಧ್ಯಕ್ಷತೆಯಲ್ಲಿ  ಕೈಗೊಂಡ ನಿರ್ಧಾರಗಳ ಆಧಾರದ ಮೇಲೆ ಕಾರ್ಯಾಚರಿಸುವುದನ್ನು ಉಭಯ ನಾಯಕರು ಎದುರು ನೋಡುತ್ತಿದ್ದಾರೆ, ಅವುಗಳಲ್ಲಿ : ದೊಡ್ಡ, ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿ ಎಂಡಿಬಿಗಳು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವ ವಿಶ್ವ ಬ್ಯಾಂಕಿನ ಸಾಮರ್ಥ್ಯವನ್ನು ಹೆಚ್ಚಿಸಲು ಹೊಸದಿಲ್ಲಿಯಲ್ಲಿ ಕೈಗೊಂಡ ನಾಯಕರ ಪ್ರತಿಜ್ಞೆಗಳನ್ನು ಅನುಸರಿಸುವುದು ಸೇರಿದಂತೆ, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಅನಿವಾರ್ಯತೆಯನ್ನು ಗುರುತಿಸುವುದು; ಹೆಚ್ಚು ಊಹಿಸಬಹುದಾದ, ಕ್ರಮಬದ್ಧ, ಸಮಯೋಚಿತ ಮತ್ತು ಸಂಘಟಿತ ಸಾರ್ವಭೌಮ ಸಾಲ ಪುನಾರಚನೆ ಪ್ರಕ್ರಿಯೆ; ಮತ್ತು ಹೆಚ್ಚುತ್ತಿರುವ ಸಾಲದ ಹೊರೆಗಳ ನಡುವೆ ಹಣಕಾಸು ಸವಾಲುಗಳನ್ನು ಎದುರಿಸುತ್ತಿರುವ ಉನ್ನತ ಮಹತ್ವಾಕಾಂಕ್ಷೆಯ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೆಳವಣಿಗೆಯ ಹಾದಿಯಾಗಿರುವ  ಹಣಕಾಸು ಪ್ರವೇಶವನ್ನು/ಲಭ್ಯತೆಯನ್ನು  ಹೆಚ್ಚಿಸುವ ಮೂಲಕ ಮತ್ತು ದೇಶದ ನಿರ್ದಿಷ್ಟ ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡು ಹಣಕಾಸಿನ ಅವಕಾಶವನ್ನು ಒದಗಿಸುವ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಬಹುದು ಎಂಬಿತ್ಯಾದಿ ವಿಷಯಗಳು ಸೇರಿವೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi addresses the Parliament of Guyana
November 21, 2024


Prime Minister Shri Narendra Modi addressed the National Assembly of the Parliament of Guyana today. He is the first Indian Prime Minister to do so. A special session of the Parliament was convened by Hon’ble Speaker Mr. Manzoor Nadir for the address.

In his address, Prime Minister recalled the longstanding historical ties between India and Guyana. He thanked the Guyanese people for the highest Honor of the country bestowed on him. He noted that in spite of the geographical distance between India and Guyana, shared heritage and democracy brought the two nations close together. Underlining the shared democratic ethos and common human-centric approach of the two countries, he noted that these values helped them to progress on an inclusive path.

Prime Minister noted that India’s mantra of ‘Humanity First’ inspires it to amplify the voice of the Global South, including at the recent G-20 Summit in Brazil. India, he further noted, wants to serve humanity as VIshwabandhu, a friend to the world, and this seminal thought has shaped its approach towards the global community where it gives equal importance to all nations-big or small.

Prime Minister called for giving primacy to women-led development to bring greater global progress and prosperity. He urged for greater exchanges between the two countries in the field of education and innovation so that the potential of the youth could be fully realized. Conveying India’s steadfast support to the Caribbean region, he thanked President Ali for hosting the 2nd India-CARICOM Summit. Underscoring India’s deep commitment to further strengthening India-Guyana historical ties, he stated that Guyana could become the bridge of opportunities between India and the Latin American continent. He concluded his address by quoting the great son of Guyana Mr. Chhedi Jagan who had said, "We have to learn from the past and improve our present and prepare a strong foundation for the future.” He invited Guyanese Parliamentarians to visit India.

Full address of Prime Minister may be seen here.