ಫ್ರಾನ್ಸ್ ಅಧ್ಯಕ್ಷ ಗೌರವಾನ್ವಿತ ಶ್ರೀ ಇಮ್ಯಾನುಯೆಲ್ ಮ್ಯಾಕ್ರನ್ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಫ್ರಾನ್ಸ್ ಕಾರ್ಯತಂತ್ರ ಸಹಭಾಗಿತ್ವದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಫ್ರೆಂಚ್ ಗಣರಾಜ್ಯದ ರಾಷ್ಟ್ರೀಯ ದಿನದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐತಿಹಾಸಿಕ ಭೇಟಿಯನ್ನು ಸಮಾಪನಗೊಳಿಸಿದರು. 1998 ಜನವರಿಯಲ್ಲಿ, ಬದಲಾವಣೆ ಮತ್ತು ಅನಿಶ್ಚಯ ಜಗತ್ತಿನಲ್ಲಿ, ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಫ್ರಾನ್ಸ್ ಅಧ್ಯಕ್ಷ ಜಾಕ್ವೆಸ್ ಚಿರಾಕ್ ಅವರು ಸಂಬಂಧವನ್ನು ಕಾರ್ಯತಂತ್ರದ ಪಾಲುದಾರಿಕೆಗೆ ಕೊಂಡೊಯ್ದರು - ಇದು ಯಾವುದೇ ದೇಶದೊಂದಿಗೆ ಭಾರತ ಹೊಂದಿರುವ ಮೊದಲ ಕಾರ್ಯತಂತ್ರ ಸಹಭಾಗಿತ್ವವಾಗಿದೆ.
ಆ ನಿರ್ಣಾಯಕ ಬದ್ಧತೆಯು 1947ರಲ್ಲಿ ಭಾರತದ ಸ್ವಾತಂತ್ರ್ಯ ಗಳಿಸಿದಾಗಿನಿಂದ ಅಸಾಧಾರಣ ಪ್ರಯತ್ನಗಳ ಬಲವಾದ ಮತ್ತು ಸ್ಥಿರ ಪಾಲುದಾರಿಕೆಯ ಸುದೀರ್ಘ 5 ದಶಕಗಳಲ್ಲಿ ಪ್ರತಿಬಿಂಬಿತವಾದ ಆಳವಾದ ಪರಸ್ಪರ ನಂಬಿಕೆಯ ದೃಢೀಕರಣವಾಗಿದೆ.
ಇಂದು ಉಭಯ ನಾಯಕರು ಭೇಟಿಯಾದಾಗ, ನಮ್ಮದು ಕರಾಳ ಬಿರುಗಾಳಿಗಳಲ್ಲಿ ಚೇತರಿಸಿಕೊಳ್ಳುವ ಮತ್ತು ಅವಕಾಶಗಳ ಉಬ್ಬರವಿಳಿತದ ಮೇಲೆ ಸವಾರಿ ಮಾಡುವಲ್ಲಿ ಧೈರ್ಯಶಾಲಿ ಮತ್ತು ಮಹತ್ವಾಕಾಂಕ್ಷೆಯ ಸಂಬಂಧ ಎಂದು ಒಪ್ಪಿಕೊಂಡರು. ಇದು ಹಂಚಿಕೆಯ ಮೌಲ್ಯಗಳು, ಸಾರ್ವಭೌಮತ್ವ ಮತ್ತು ಕಾರ್ಯತಂತ್ರದ ಸ್ವಾಯತ್ತೆಯಲ್ಲಿ ನಂಬಿಕೆ, ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಾಗರಿಕ ಸನ್ನದಿಗೆ ಅಚಲವಾದ ಬದ್ಧತೆ, ಬಹುಪಕ್ಷೀಯತೆಯಲ್ಲಿ ಅಚಲ ನಂಬಿಕೆ ಮತ್ತು ಸ್ಥಿರ ಬಹುಧ್ರುವ ವಿಶ್ವದ ಸಾಮಾನ್ಯ ಅನ್ವೇಷಣೆಯ ಮೇಲೆ ಸ್ಥಾಪಿಸಲಾಗಿದೆ.
ಪಿಎಂ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರನ್ ಅವರು ಕಳೆದ 25 ವರ್ಷಗಳಲ್ಲಿ, ದ್ವಿಪಕ್ಷೀಯ ಸಹಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ಸಂಬಂಧದ ರೂಪಾಂತರ ಮತ್ತು ವಿಸ್ತರಣೆಯನ್ನು ಪರಿಶೀಲಿಸಿದರು ಮತ್ತು ಪ್ರಾದೇಶಿಕ ಜವಾಬ್ದಾರಿಗಳು ಮತ್ತು ಜಾಗತಿಕ ಪ್ರಾಮುಖ್ಯತೆಯ ಪಾಲುದಾರಿಕೆಯಾಗಿ ಅದರ ವಿಕಾಸವನ್ನು ಎತ್ತಿ ತೋರಿಸಿದರು.
ನಮ್ಮ ರಾಜಕೀಯ ಮತ್ತು ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯು ಹತ್ತಿರದಿಂದ ಮತ್ತು ಅತ್ಯಂತ ವಿಶ್ವಾಸಾರ್ಹವಾಗಿವೆ. ನಮ್ಮ ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಯು ಪ್ರಬಲವಾಗಿದೆ, ಸಮುದ್ರ ತಳದಿಂದ ಬಾಹ್ಯಾಕಾಶದವರೆಗೂ ವಿಸ್ತರಿಸಿದೆ. ನಮ್ಮ ಆರ್ಥಿಕ ಸಂಬಂಧಗಳು ನಮ್ಮ ಸಮೃದ್ಧಿ ಮತ್ತು ಸಾರ್ವಭೌಮತ್ವವನ್ನು ಬಲಪಡಿಸುತ್ತವೆ, ಚೇತರಿಸಿಕೆಯ ಪೂರೈಕೆ ಸರಪಳಿಗಳನ್ನು ಮುನ್ನಡೆಸುತ್ತವೆ. ಶುದ್ಧ ಇಂಧನ ಮತ್ತು ಕಡಿಮೆ ಇಂಗಾಲವನ್ನು ಉತ್ತೇಜಿಸುವುದು, ಜೀವವೈವಿಧ್ಯ ಸಂರಕ್ಷಿಸುವುದು, ಸಾಗರ ಭಾಗಗಳನ್ನು ರಕ್ಷಿಸುವುದು ಮತ್ತು ಮಾಲಿನ್ಯ ಎದುರಿಸುವುದು ನಮ್ ಸಹಕಾರದ ಪ್ರಮುಖ ಆಧಾರಸ್ತಂಭವಾಗಿದೆ. ನಮ್ಮ ಎರಡು ದೇಶಗಳಿಗೆ ಡಿಜಿಟಲ್, ನಾವೀನ್ಯತೆ ಮತ್ತು ಸ್ಟಾರ್ಟಪ್ ಪಾಲುದಾರಿಕೆಯು ಬೆಳವಣಿಗೆಯ ಹೊಸ ಕ್ಷೇತ್ರವಾಗಿದ್ದು, ಇದು ಆಳವಾದ ಒಮ್ಮುಖ ಮತ್ತು ಬಲವಾದ ಪೂರಕತೆ ನಿರ್ಮಿಸುತ್ತದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು..
ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ, ನಮ್ಮ ಬೆಳೆಯುತ್ತಿರುವ ಯುವ ಸಮುದಾಯದ ವಿನಿಮಯ, ಹೆಚ್ಚು ಸಾಧಿಸಿದ ಮತ್ತು ಬೆಳೆಯುತ್ತಿರುವ ಯುವ ಸಮುದಾಯದಲ್ಲಿ ನಮ್ಮ ಆಳವಾದ ಸಂಬಂಧಗಳು ಜನರನ್ನು ಹತ್ತಿರಕ್ಕೆ ತರುತ್ತಿವೆ ಮತ್ತು ಭವಿಷ್ಯದ ಪಾಲುದಾರಿಕೆಯ ಬೀಜಗಳನ್ನು ಬಿತ್ತುತ್ತಿವೆ.
ನಮ್ಮ ಕಾಲದ ಪ್ರಕ್ಷುಬ್ಧತೆ ಮತ್ತು ಸವಾಲುಗಳಲ್ಲಿ, ಈ ಪಾಲುದಾರಿಕೆ ಎಂದಿಗಿಂತಲೂ ಹೆಚ್ಚು ಅರ್ಥಪೂರ್ಣ - ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವುದು; ವಿಘಟಿತ ಜಗತ್ತಿನಲ್ಲಿ ಒಗ್ಗಟ್ಟನ್ನು ಮುಂದುವರಿಸುವುದು; ಬಹುಪಕ್ಷೀಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಪುನಶ್ಚೇತನಗೊಳಿಸುವುದು; ಸುರಕ್ಷಿತ ಮತ್ತು ಶಾಂತಿಯುತ ಇಂಡೋ-ಪೆಸಿಫಿಕ್ ವಲಯವನ್ನು ನಿರ್ಮಿಸುವುದು; ಹವಾಮಾನ ಬದಲಾವಣೆ, ಶುದ್ಧ ಇಂಧನ, ಆರೋಗ್ಯ, ಆಹಾರ ಭದ್ರತೆ, ಬಡತನ ಮತ್ತು ಅಭಿವೃದ್ಧಿಯ ಜಾಗತಿಕ ಸವಾಲುಗಳನ್ನು ಪರಿಹರಿಸುವುದಾಗಿದೆ.
ಇಂದು ನಾವು ಭಾರತ ಸ್ವಾತಂತ್ರ್ಯದ ಶತಮಾನೋತ್ಸವ, ನಮ್ಮ ರಾಜತಾಂತ್ರಿಕ ಸಂಬಂಧಗಳ ಶತಮಾನೋತ್ಸವ ಮತ್ತು ನಮ್ಮ ಅರ್ಧ ಶತಮಾನವನ್ನು ಆಚರಿಸುವ 2047 ಮತ್ತು ಅದಕ್ಕೂ ಮೀರಿದ ನಮ್ಮ ಕಾರ್ಯತಂತ್ರ ಪಾಲುದಾರಿಕೆಯ ಪ್ರಯಾಣಕ್ಕಾಗಿ ಮುಂದಿನ 25 ವರ್ಷಗಳನ್ನು ಎದುರು ನೋಡುತ್ತಿದ್ದೇವೆ.
ನಮ್ಮ ಜನರಿಗೆ ಮತ್ತು ನಾವು ಈ ಗ್ರಹವನ್ನು ಹಂಚಿಕೊಳ್ಳುವವರಿಗೆ ಉತ್ತಮ ಭವಿಷ್ಯ ನಿರ್ಮಿಸಲು ಮುಂದಿನ 25 ವರ್ಷಗಳು ನಮ್ಮ ಎರಡು ದೇಶಗಳಿಗೆ ಮತ್ತು ನಮ್ಮ ಪಾಲುದಾರಿಕೆಗೆ ನಿರ್ಣಾಯಕ ಕ್ಷಣವಾಗಿದೆ. ಭಾರತ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ ಮುಂದಿನ ಹಂತಕ್ಕೆ ತಮ್ಮ ಹಂಚಿತ ದೃಷ್ಟಿಕೋನವನ್ನು ಹೊಂದಿಸಲು, ಇಬ್ಬರೂ ನಾಯಕರು "ಭಾರತ-ಫ್ರೆಂಚ್ ಕಾರ್ಯತಂತ್ರದ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವದಂದು ಹೊರೈಜನ್-2047 ಮಾರ್ಗಸೂಚಿ ಅಳವಡಿಸಿಕೊಂಡರು: “ಫ್ರೆಂಚ್-ಭಾರತೀಯ ಸಂಬಂಧಗಳ ಶತಮಾನದ ಕಡೆಗೆ" ವ್ಯಾಪಕ ಶ್ರೇಣಿಯ ಪ್ರದೇಶಗಳನ್ನು ಒಳಗೊಂಡ ಹಲವಾರು ಇತರೆ ಫಲಿತಾಂಶಗಳೊಂದಿಗೆ ಹೊರೈಜನ್-2047 ಮಾರ್ಗಸೂಚಿ ಮತ್ತು ಫಲಿತಾಂಶಗಳ ಪಟ್ಟಿಯನ್ನು ಇಲ್ಲಿ ಕಾಣಬಹುದಾಗಿದೆ.