ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಸೃಷ್ಟಿಸುವ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ನಿಷೇಧ ಸೇರಿದಂತೆ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯ ತೊಡೆದುಹಾಕುವ ಬದ್ಧತೆಯನ್ನು ಫ್ರಾನ್ಸ್ ಮತ್ತು ಭಾರತ ಹೊರಹಾಕಿವೆ.

ಅಸಮರ್ಪಕ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದಿಂದ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯವು ಜಾಗತಿಕ ಪರಿಸರ ಸಮಸ್ಯೆಯಾಗಿದ್ದು ಅದನ್ನು ತುರ್ತಾಗಿ ಪರಿಹರಿಸಬೇಕು. ಇದು ಸಾಮಾನ್ಯವಾಗಿ ಪರಿಸರ ವ್ಯವಸ್ಥೆಗಳು ಮತ್ತು ನಿರ್ದಿಷ್ಟವಾಗಿ ಸಮುದ್ರ ಪರಿಸರ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ (80% ಪ್ಲಾಸ್ಟಿಕ್ ತ್ಯಾಜ್ಯ ಭೂ ಮೂಲಗಳಿಂದ ಹುಟ್ಟಿಕೊಂಡಿದೆ. 1950ರಿಂದ 9.2 ಶತಕೋಟಿ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗಿದ್ದು, ಅವುಗಳಲ್ಲಿ 7 ಶತಕೋಟಿ ಟನ್ ತ್ಯಾಜ್ಯ ಉತ್ಪಾದನೆಯಾಗಿದೆ. ಪ್ರತಿ ವರ್ಷ 400ದಶಲಕ್ಷ ಟನ್ ಪ್ಲಾಸ್ಟಿಕ್ ಉತ್ಪಾದಿಸಲಾಗುತ್ತಿದೆ, ಅದರಲ್ಲಿ ಮೂರನೇ ಒಂದು ಭಾಗ ಏಕಬಳಕೆಯ ಉತ್ಪನ್ನವಾಗಿದೆ. ಅದರಲ್ಲಿ ಸುಮಾರು 10 ದಶಲಕ್ಷ ಟನ್‌ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಗರಕ್ಕೆ ಎಸೆಯಲಾಗುತ್ತಿದೆ)
 
ಒಮ್ಮೆ ಬಳಸಿದ ನಂತರ ಎಸೆಯುವ ಮತ್ತು ಮರುಬಳಕೆಗೆ ಕಳುಹಿಸುವ‌ ವಿವಿಧ ಪ್ಲಾಸ್ಟಿಕ್  ವಸ್ತುಗಳನ್ನು ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳು ಎಂದು ವ್ಯಾಖ್ಯಾನಿಸಲಾಗಿದೆ. ಇದರಲ್ಲಿ ಆಹಾರ ಪ್ಯಾಕೇಜಿಂಗ್, ಬಾಟಲಿಗಳು, ಸ್ಟ್ರಾಗಳು, ಕಂಟೈನರ್‌ಗಳು, ಕಪ್‌ಗಳು, ಚಾಕು ಕತ್ತರಿಗಳು ಮತ್ತು ಶಾಪಿಂಗ್ ಬ್ಯಾಗ್‌ಗಳು ಸೇರಿವೆ.
  
ಜಾಗತಿಕ ಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸಲಾಗಿದೆ. ಗಮನಾರ್ಹ ಕ್ರಮಗಳಲ್ಲಿ ನಿರಂತರ ಸಾವಯವ ಮಾಲಿನ್ಯಕಾರಕಗಳ ಮೇಲಿನ ಸ್ಟಾಕ್‌ಹೋಮ್ ಸಮಾವೇಶ ಒಪ್ಪಂದ, ಪ್ಲಾಸ್ಟಿಕ್ ತ್ಯಾಜ್ಯ ಗಡಿಯಾಚೆಗೆ ಹೋಗುವ  ಸಮಸ್ಯೆ ಪರಿಹರಿಸಲು ಬಾಸೆಲ್ ಒಪ್ಪಂದದ ಅನುಬಂಧಗಳಿಗೆ ತಿದ್ದುಪಡಿ, ಪ್ರಾದೇಶಿಕ ಸಾಗರಗಳ ಒಪ್ಪಂದಗಳ ಅಡಿ, ಸಮುದ್ರ ಕಸದ ಕ್ರಿಯಾಯೋಜನೆಗಳು ಮತ್ತು ಹಡಗುಗಳಿಂದ ಸಮುದ್ರಕ್ಕೆ ಕಸ ಸೇರುವುದನ್ನು ತಡೆಯುವ ಯೋಜನೆಯ ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (ಐಎಂಒ) ಕ್ರಮಗಳು ಸಹ ಸೇರಿವೆ. 2014ರಿಂದ ವಿಶ್ವಸಂಸ್ಥೆಯ ಪರಿಸರ ಅಸೆಂಬ್ಲಿ(ಯುಎನ್ಇಎ) ನಿರ್ಣಯಗಳ ಸರಣಿಯು ಅನೇಕ ಸವಾಲುಗಳನ್ನು ಪರಿಹರಿಸಿದೆ. ಅಲ್ಲದೆ, ಸಾಗರದ ಮೇಲಿನ ಕಸದ ಸಂಭಾವ್ಯ ಪರಿಹಾರಗಳನ್ನು ಗುರುತಿಸಲು 2017ರಲ್ಲಿ ಯುಎನ್ಇಎ3 ಮೂಲಕ  ಹಂಗಾಮಿ ಮುಕ್ತ ತಜ್ಞರ ಗುಂಪು ಸ್ಥಾಪಿಸಲಾಯಿತು. 2020 ನವೆಂಬರ್ 13ರಂದು ಇದು ತನ್ನ ಕೆಲಸ ಮುಕ್ತಾಯಗೊಳಿಸಿತು, "ಏಕಬಳಕೆಯ ಪ್ಲಾಸ್ಟಿಕ್ ಸೇರಿದಂತೆ ಪ್ಲಾಸ್ಟಿಕ್‌ನ ಅನಗತ್ಯ ಮತ್ತು ತಪ್ಪಿಸಬಹುದಾದ ಬಳಕೆಯ ವ್ಯಾಖ್ಯಾನಗಳ" ಅಭಿವೃದ್ಧಿ ಸೇರಿದಂತೆ ಹಲವಾರು ಪ್ರತಿಕ್ರಿಯೆ ಆಯ್ಕೆಗಳನ್ನು ವಿವರಿಸಿದೆ.
 
ಆದ್ದರಿಂದ, ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ನಮ್ಮ ಬಳಕೆಯನ್ನು ನಿರ್ದಿಷ್ಟವಾಗಿ ಕಡಿಮೆ ಮಾಡುವ ಮತ್ತು ಪರ್ಯಾಯ ಪರಿಹಾರಗಳನ್ನು ಪರಿಗಣಿಸುವ ಅವಶ್ಯಕತೆಯಿದೆ. 2019 ಮಾರ್ಚ್ ನಲ್ಲಿ 4ನೇ ವಿಶ್ವಸಂಸ್ಥೆಯ ಪರಿಸರ ಅಸೆಂಬ್ಲಿ(UNEA-4)ಯು "ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಮಾಲಿನ್ಯ ಪರಿಹರಿಸುವ ಕುರಿತು ನಿರ್ಣಯ ಅಂಗೀಕರಿಸಿತು, ಇದು ಸದಸ್ಯ ರಾಷ್ಟ್ರಗಳು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಸೂಕ್ತವಾದ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರಿಸರಸ್ನೇಹಿ ಪರ್ಯಾಯಗಳ ಗುರುತಿಸುವಿಕೆ ಮತ್ತು ಅಭಿವೃದ್ಧಿ ಉತ್ತೇಜಿಸಲು, ಆ ಪರ್ಯಾಯಗಳ ಸಂಪೂರ್ಣ ಜೀವನ ಚಕ್ರದ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು, ಏಕಬಳಕೆಯ ಪ್ಲಾಸ್ಟಿಕ್ ಸಮಸ್ಯೆ ಪರಿಹರಿಸಲು ಪ್ರಕೃತಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಒಕ್ಕೂಟ(ಐಯುಸಿಎನ್), 3 ನಿರ್ಣಯಗಳನ್ನು ಅಳವಡಿಸಿಕೊಂಡಿದೆ. "ಸಂರಕ್ಷಿತ ಪ್ರದೇಶಗಳಲ್ಲಿ ಎಲ್ಲಾ ಪ್ಲಾಸ್ಟಿಕ್ ಮಾಲಿನ್ಯ ತೆಗೆದುಹಾಕುವ ಅಂತಿಮ ಗುರಿಯೊಂದಿಗೆ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಸಂರಕ್ಷಿತ ಪ್ರದೇಶಗಳ ಮಾಲಿನ್ಯ ತಡೆಗಟ್ಟಲು 2025ರ ವೇಳೆಗೆ ಆದ್ಯತೆಯ ಕ್ರಮಗಳನ್ನು ಕೈಗೊಳ್ಳುವಂತೆ 69ನೇ ನಿರ್ಣಯವು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸುತ್ತದೆ".
 
ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಉತ್ಪತ್ತಿ ಮಾಡುವ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಹಂತ ಹಂತವಾಗಿ ತೆಗೆದುಹಾಕಬೇಕು. ಪರಿಸರಸ್ನೇಹಿ ಆರ್ಥಿಕ ಬೆಳವಣಿಗೆಯ ವಿಧಾನಗಳನ್ನು ಆಧರಿಸಿ ಮರುಬಳಕೆ ಮಾಡಬಹುದಾದ ಉತ್ಪನ್ನಗಳಿಂದ ಅವುಗಳನ್ನು ಬದಲಾಯಿಸಬೇಕು. ಪರಿಹಾರಗಳು ಅಸ್ತಿತ್ವದಲ್ಲಿವೆ ಮತ್ತು ಅವುಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸುವುದರಿಂದ ನಾವೀನ್ಯತೆ, ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಸೃಷ್ಟಿಗೆ ಹೊಸ ಅವಕಾಶಗಳನ್ನು ತರುವಂತಹ ಪರಿಹಾರಗಳು ಒಳಗೊಂಡಿರಬೇಕು. 

ಗುರುತಿಸಲಾದ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧ; ಪರ್ಯಾಯಗಳು ಸುಲಭವಾಗಿ ಲಭ್ಯವಿರಬೇಕು ಮತ್ತು ಕೈಗೆಟಕುವ ದರದಲ್ಲಿ ಸಿಗುವಂತಿರಬೇಕು.
ಉತ್ಪಾದಕರ ವಿಸ್ತೃತ ಜವಾಬ್ದಾರಿ (ಇಪಿಆರ್) ಅಂದರೆ ಉತ್ಪಾದಕರು ಪರಿಸರದ ಉತ್ತಮ ತ್ಯಾಜ್ಯ ನಿರ್ವಹಣೆಗೆ ಜವಾಬ್ದಾರರಾಗಿರುತ್ತಾರೆ;
  
ಮರುಬಳಕೆ ಉತ್ತೇಜಿಸಿ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯದ ಕನಿಷ್ಠ ಮಟ್ಟದ ಮರುಬಳಕೆ, ಮರುಬಳಕೆಯ ಪ್ಲಾಸ್ಟಿಕ್ ವಿಷಯದ ಬಳಕೆ ಸೂಚಿಸುವುದು.

ಉತ್ಪಾದಕನ ವಿಸ್ತೃತ ಜವಾಬ್ದಾರಿಯು (EPR) ಅನುಸರಣೆ ಪರಿಶೀಲಿಸುವುದು ಮತ್ತು  ಮೇಲ್ವಿಚಾರಣೆ ಮಾಡುವುದು.

ಏಕಬಳಕೆಯ ಪ್ಲಾಸ್ಟಿಕ್‌ಗಳಿಗೆ ಪರ್ಯಾಯಗಳನ್ನು ವಿನ್ಯಾಸಗೊಳಿಸಲು ಉತ್ಪಾದಕರಿಗೆ ಸಹಾಯ ಮಾಡಲು ಪ್ರೋತ್ಸಾಹ.

ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದನ್ನು ಸೂಚಿಸುವ ಲೇಬಲಿಂಗ್ ಅವಶ್ಯಕತೆಗಳು.
 
ಜಾಗೃತಿ ಮೂಡಿಸುವ ಕ್ರಮಗಳು 

ಫ್ರಾನ್ಸ್ ಮತ್ತು ಭಾರತ ಕೆಲವು ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮತ್ತು ಉತ್ಪಾದನೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಮತ್ತು ತೆಗೆದುಹಾಕುವ ತಮ್ಮ ಬದ್ಧತೆಯನ್ನು ನವೀಕರಿಸುತ್ತವೆ. ಕೆಳಗೆ ನೀಡಲಾದ ಪ್ಲಾಸ್ಟಿಕ್ ಮಾಲಿನ್ಯ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿವೆ:

2020 ಫೆಬ್ರವರಿ 10ರ ಕಾನೂನಿನ ಅಡಿ, ಫ್ರಾನ್ಸ್ 2021 ಜನವರಿಯಿಂದ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಾದ ಕಟ್ಲರಿ, ಪ್ಲೇಟ್‌ಗಳು, ಸ್ಟ್ರಾಗಳು ಮತ್ತು ಸ್ಟಿಕರ್‌ಗಳು, ಪಾನೀಯಗಳಿಗೆ ಕಪ್‌ಗಳು, ಆಹಾರ ಪಾತ್ರೆಗಳು, ಬಲೂನ್‌ಗಳಿಗೆ ಸ್ಟಿಕ್‌ಗಳು, ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಬಡ್ ಗಳನ್ನು ನಿಷೇಧಿಸಿದೆ. ಪರಿಸರಸ್ನೇಹಿ ಆರ್ಥಿಕತೆಗಾಗಿ ಐರೋಪ್ಯ ಒಕ್ಕೂಟದ ಏಕಬಳಕೆಯ ಪ್ಲಾಸ್ಟಿಕ್ ಮತ್ತು ತ್ಯಾಜ್ಯ ನಿರ್ವಹಣೆಯ ನಿರ್ದೇಶನಗಳನ್ನು ಅನುಸರಿಸುತ್ತಿದೆ. 2040ರ ವೇಳೆಗೆ ಏಕಬಳಕೆಯ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಕೊನೆಗೊಳಿಸಲು ಫ್ರಾನ್ಸ್ ಗುರಿ ಹಾಕಿಕೊಂಡಿದೆ.

ಭಾರತವು 2022 ಜುಲೈ 1ರೊಳಗೆ ಕಡಿಮೆ ತೂಕದ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಬಡ್ ಗಳು, ಪ್ಲಾಸ್ಟಿಕ್ ಕಡ್ಡಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಕಡಿಮೆ ಉಪಯುಕ್ತತೆ ಮತ್ತು ಹೆಚ್ಚಿನ ಕಸ ಉತ್ಪತ್ತಿ ಮಾಡುವ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಹಂತ ಹಂತವಾಗಿ ಹೊರಹಾಕಲು 2021 ಆಗಸ್ಟ್ 12ರಂದು ನಿಯಮಗಳನ್ನು ತಂದಿದೆ. ಬಲೂನ್ ಗಳು (ಆಕಾಶಬುಟ್ಟಿಗಳು), ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಸ್ಟಿಕ್‌ಗಳು, ಐಸ್ ಕ್ರೀಮ್ ಸ್ಟಿಕ್‌ಗಳು ಮತ್ತು ಪಾಲಿಸ್ಟೈರೀನ್, ಪ್ಲಾಸ್ಟಿಕ್ ಪ್ಲೇಟ್‌ಗಳು, ಗ್ಲಾಸ್‌ಗಳು, ಚಾಕು ಕತ್ತರಿಗಳು (ಪ್ಲಾಸ್ಟಿಕ್ ಫೋರ್ಕ್‌ಗಳು, ಚಮಚಗಳು, ಚಾಕುಗಳು, ಟ್ರೇಗಳು), ಪ್ಲಾಸ್ಟಿಕ್ ಸ್ಟಿರರ್‌ಗಳು ಇತ್ಯಾದಿಗಳು ಅದರಲ್ಲಿ ಸೇರಿವೆ.

ಫ್ರಾನ್ಸ್ 1993 ರಿಂದ ಮನೆಯ ಪ್ಯಾಕೇಜಿಂಗ್‌ಗಾಗಿ ವಿಸ್ತೃತ ಉತ್ಪಾದಕರ ಜವಾಬ್ದಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಮತ್ತು 2023 ರಿಂದ ಅಡುಗೆ ಪ್ಯಾಕೇಜಿಂಗ್‌ನಲ್ಲಿ, 2024 ರಿಂದ ಚೂಯಿಂಗ್-ಗಮ್‌ಗಳ ಮೇಲೆ ಮತ್ತು 2025 ರಿಂದ ಕೈಗಾರಿಕಾ ಮತ್ತು ವಾಣಿಜ್ಯ ಪ್ಯಾಕೇಜಿಂಗ್ ಮತ್ತು ಮೀನುಗಾರಿಕೆಯಲ್ಲಿ ಇಪಿಆರ್ ಅನ್ನು ಅಭಿವೃದ್ಧಿಪಡಿಸುತ್ತದೆ.

2016ರಲ್ಲಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯಕ್ಕಾಗಿ ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರ ಮೇಲೆ ಉತ್ಪಾದಕರ ವಿಸ್ತೃತ ಜವಾಬ್ದಾರಿಯನ್ನು ಭಾರತ ಕಡ್ಡಾಯಗೊಳಿಸಿತ್ತು.

ಭಾರತವು 2022 ಫೆಬ್ರವರಿಯಲ್ಲಿ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ ಗೆ ಸಂಬಂಧಿಸಿದಂತೆ ಉತ್ಪಾದಕರ ವಿಸ್ತೃತ ಜವಾಬ್ದಾರಿಗಾಗಿ ಮಾರ್ಗಸೂಚಿಗಳನ್ನು ಸೂಚಿಸಿದೆ, ಇದು ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರಿಗೆ (i) ವಿವಿಧ ವರ್ಗಗಳ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನ ಮರುಬಳಕೆಗಾಗಿ ಜಾರಿಗೊಳಿಸಬಹುದಾದ ಗುರಿಗಳನ್ನು ಕಡ್ಡಾಯಗೊಳಿಸುತ್ತದೆ, (ii) ಗುರುತಿಸಲಾದ ಕಠಿಣ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯದ ಮರುಬಳಕೆ ಮತ್ತು ( iii) ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಮರುಬಳಕೆಯ ಪ್ಲಾಸ್ಟಿಕ್ ಅಂಶದ ಬಳಕೆಯ ನಿಯಮಗಳನ್ನು ಸೂಚಿಸಿದೆ.

ಐತಿಹಾಸಿಕ ಯುಎನ್‌ಇಎ 5.2 ನಿರ್ಣಯಕ್ಕೆ ಅನುಸಾರವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಲು ಅಂತಾರಾಷ್ಟ್ರೀಯ ಕಾನೂನುಬದ್ಧ ಸಾಧನಕ್ಕಾಗಿ ಮಾತುಕತೆಗಳನ್ನು ಬಲಪಡಿಸಲು ಭಾರತ ಮತ್ತು ಫ್ರಾನ್ಸ್ ಇತರೆ ಸಮಾನ ಮನಸ್ಕ ರಾಷ್ಟ್ರಗಳನ್ನು ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿವೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.