ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ (ರೋಮನ್ ಕ್ಯಾಥೋಲಿಕ್ ಚರ್ಚ್ ನ ಗಣ್ಯರು) ಆಗಿ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ಹ್ಯಾಂಡಲ್ ಪೋಸ್ಟ್ ನಲ್ಲಿ ಹೀಗೆ ಹೇಳಿದೆ:
“ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ ಆಗಿ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ.
ಈ ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತ ಸರ್ಕಾರವು ಕೇಂದ್ರ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ನೇತೃತ್ವದ ನಿಯೋಗವನ್ನು ಕಳುಹಿಸಿದೆ.
ಸಮಾರಂಭಕ್ಕೂ ಮುನ್ನ, ಭಾರತೀಯ ನಿಯೋಗವು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದೆ.
@Pontifex
@GeorgekurianBjp”
It is a matter of immense pride for India that Archbishop George Koovakad will be created as a Cardinal by His Holiness Pope Francis.
— PMO India (@PMOIndia) December 7, 2024
The Government of India sent a delegation led by Union Minister Shri George Kurian to witness this Ceremony.
Prior to the Ceremony, the Indian… pic.twitter.com/LPgX4hOsAW