ಭಾರತೀಯ ಪೊಲೀಸ್ ಸೇವೆಯ 2016ನೇ ತಂಡದ 110ಕ್ಕೂ ಹೆಚ್ಚು ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು
![](https://cdn.narendramodi.in/cmsuploads/0.32857400_1510137657_684-modi-in-a-group-photograph-with-the-ips-officer-trainees-of-2016-batch.jpg)
ಪ್ರಶಿಕ್ಷು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪೊಲೀಸ್ ಕಾರ್ಯನಿರ್ವಹಣೆಯಲ್ಲಿ ಮಾನವೀಯತೆ ಮತ್ತು ತಾಂತ್ರಿಕತೆಯ ಮಹತ್ವವನ್ನು ಪ್ರತಿಪಾದಿಸಿದರು. ಸ್ವಾತಂತ್ರ್ಯ ಬಂದ ದಿನದಿಂದ ಇಂದಿನವರೆಗೆ ಕರ್ತವ್ಯದ ವೇಳೆ ಬಲಿದಾನಗೈದ 33 ಸಾವಿರ ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಅವರು ಸ್ಮರಿಸಿದರು.
![](https://cdn.narendramodi.in/cmsuploads/0.07909800_1510137729_684-2-modi-in-a-group-photograph-with-the-ips-officer-trainees-of-2016-batch.jpg)
ರಾಷ್ಟ್ರೀಯ ಭದ್ರತಾ ಸಲಹೆಗಾರ ಶ್ರೀ ಅಜಿತ್ ದೋವಲ್ ಈ ಸಂವಾದದ ವೇಳೆ ಹಾಜರಿದ್ದರು.