ಭಾರತದ ಆಶಾವಾದದ ಕಾರಣಗಳ ಕುರಿತು ಮನಿ ಕಂಟ್ರೋಲ್ ವೆಬ್ ಸೈಟ್ ನ ಲೇಖನಗಳು ಮತ್ತು ಇನ್ಪೋಗ್ರಾಫಿಕ್ಸ್ ಸಂಗ್ರಹಗಳು ಭಾರತದ ದೃಢವಾದ ಆರ್ಥಿಕ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಮನೋಭಾವನೆಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಟ್ವೀಟರ್ ನಲ್ಲಿ ಪ್ರಧಾನಮಂತ್ರಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾರೆ.
“ಈ ಸವಾಲಿನ ಸಮಯದಲ್ಲಿ ಭಾರತದ ಆರ್ಥಿಕತೆ ಭರವಸೆಯ ಬೆಳಕಾಗಿ ಬೆಳಗುತ್ತಿದೆ. ದೃಢವಾದ ಬೆಳವಣಿಗೆ ಮತ್ತು ಚೇತರಿಸಿಕೊಳ್ಳುವ ಚೈತನ್ಯದೊಂದಿಗೆ ಭವಿಷ್ಯ ಭರವಸೆಯಂತೆ ಗೋಚರಿಸುತ್ತಿದೆ. ಈ ವೇಗವನ್ನು ಕಾಯ್ದುಕೊಳ್ಳೋಣ ಮತ್ತು 140 ಕೋಟಿ ಭಾರತೀಯರ ಸಮೃದ್ಧತೆಯನ್ನು ಖಚಿತಪಡಿಸೋಣ!" ಎಂದು ಹೇಳಿದ್ದಾರೆ.
India's economy shines as a beacon of hope in these challenging times. With robust growth and resilient spirit, the future looks promising. Let us keep this momentum and ensure prosperity for 140 crore Indians! https://t.co/MnR4IXZuwm
— Narendra Modi (@narendramodi) August 19, 2023