ಪ್ರಸ್ತುತ ವಿದೇಶಾಂಗ ಸೇವೆಗಳ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ವಿದೇಶಾಂಗ ಸೇವೆಯ 39 ತರಬೇತಿ ನಿರತ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ತರಬೇತಿನಿರತ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಭಾರತದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳ ನಿಟ್ಟಿನಲ್ಲಿ ವಿದೇಶದಲ್ಲಿ ಭಾರತದಲ್ಲಿ ಭಾರತವನ್ನು ಪ್ರತಿನಿಧಿಸುವ ಮಹತ್ವವನ್ನು ಒತ್ತಿ ಹೇಳಿದರು. ಐಎಫ್ಎಸ್ ಅಧಿಕಾರಿಗಳು ಪ್ರಸ್ತುತ ರಾಷ್ಟ್ರೀಯ ಆದ್ಯತೆಗಳಿಗೆ ಮಾತ್ರವಲ್ಲ, ರಾಷ್ಟ್ರೀಯ ಅಭಿವೃದ್ಧಿಯ ಭವಿಷ್ಯದ ಅವಶ್ಯಕತೆಗಳನ್ನೂ ಜೀವಂತವಾಗಿಡಬೇಕು ಎಂದು ಪ್ರಧಾನ ಮಂತ್ರಿ ಹೇಳಿದರು.
ಹೆಚ್ಚು ಟೆಕ್ ಸ್ಯಾವಿಗಳಾಗುವಂತೆ ಮತ್ತು ವಿದೇಶ ಬಾಂಧವ್ಯದಲ್ಲಿ ಮಹತ್ವದ ಬಾಧ್ಯಸ್ಥರಾಗಿರುವ ರಾಜ್ಯ ಸರ್ಕಾರಗಳು ಮತ್ತು ಭಾರತೀಯ ಸಮುದಾಯದೊಂದಿಗೆ ಸಂಪೂರ್ಣವಾಗಿ ತೊಡಗಿಕೊಳ್ಳುವಂತೆ ತರಬೇತಿನಿರತ ಅಧಿಕಾರಿಗಳಿಗೆ ಉತ್ತೇಜನ ನೀಡಿದರು.
ವಿದೇಶಾಂಗ ಸೇವೆಗಳ ಸಂಸ್ಥೆಯಲ್ಲಿ ಪ್ರಸ್ತುತ ತರಬೇತಿಯಲ್ಲಿರುವ ಭೂತಾನ್ ನ ಇಬ್ಬರು ರಾಜತಾಂತ್ರಿಕರು ಕೂಡ ಈ ಗುಂಪಿನಲ್ಲಿದ್ದರು.