2016ರ ತಂಡದ 41 ತರಬೇತಿ ನಿರತ ಭಾರತೀಯ ವಿದೇಶಾಂಗ ಸೇವೆಗಳ ಅಧಿಕಾರಿಗಳು ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಮ್ಮ ಚಿಂತನೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ವಿದೇಶಾಂಗ ಸೇವೆಗಳ ಅಧಿಕಾರಿಗಳು ಹೆಚ್ಚಿನ ಮಾಹಿತಿ ಹೊಂದಿರಬೇಕು ಮತ್ತು ಜಾಗತಿಕ ಸನ್ನಿವೇಶಕ್ಕನುಗುಣವಾಗಿ ಚಿಂತಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ತಮ್ಮ ವೃತ್ತ ಬದುಕಿನಲ್ಲಿ ಇತರ ಸೇವೆಗಳಲ್ಲಿರುವ ತಮ್ಮ ಬ್ಯಾಚ್ ಮೆಟ್ಸ್ ಗಳೊಂದಿಗೆ ಸಂಪರ್ಕದಲ್ಲಿರುವಂತೆ ತರಬೇತಿ ನಿರತ ಅಧಿಕಾರಿಗಳಿಗೆ ತಿಳಿಸಿದ ಪ್ರಧಾನಿ, ಇದರಿಂದಾಗಿ ಸ್ವದೇಶದಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಸದಾ ತಿಳಿಯಬಹುದು ಎಂದರು.
ಭಾರತಕ್ಕೆ ಉಜ್ವಲ ಭವಿಷ್ಯವಿದೆ ಮತ್ತು ಭಾರತದ ಏರುಗತಿಯ ನಿಲುವಿನೊಂದಿಗೆ ಆರಾಮದಾಯಕವಾಗಿರಬಹುದು ಎಂದು ಬಹುತೇಕ ಇಡೀ ವಿಶ್ವವೇ ನಂಬಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು.