ಭಾರತೀಯ ಕ್ರಿಕೆಟಿಗ ಚೇತೇಶ್ವರ ಪೂಜಾರ ಮತ್ತು ಅವರ ಪತ್ನಿ ಪೂಜಾ ಇಂದು ದೆಹಲಿಯ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ 100 ನೇ ಟೆಸ್ಟ್ ಪಂದ್ಯ ಆಡುವ ಮೊದಲು ಭೇಟಿಯಾದರು. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿಯವರು ಚೇತೇಶ್ವರ ಪೂಜಾರ ಅವರಿಗೆ ಶುಭ ಹಾರೈಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮಂತ್ರಿಗಳು,
“ಇಂದು ಪೂಜ ಮತ್ತು ನಿಮ್ಮನ್ನು ಭೇಟಿಯಾಗಿದ್ದಕ್ಕೆ ಸಂತೋಷವಾಯಿತು. ನಿಮ್ಮ 100 ನೇ ಟೆಸ್ಟ್ ಮತ್ತು ಮುಂದಿನ ನಿಮ್ಮ ವೃತ್ತಿಜೀವನಕ್ಕೆ ಶುಭಾಶಯಗಳು.''ಎಂದು ಬರೆದುಕೊಂಡಿದ್ದಾರೆ.
Delighted to have met Puja and you today. Best wishes for your 100th Test and your career.@cheteshwar1 https://t.co/Ecnv7XWLfv
— Narendra Modi (@narendramodi) February 14, 2023