ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರಾದ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 15 ಜುಲೈ 2023 ರಂದು ಅಬುಧಾಬಿಯಲ್ಲಿ ಮಾತುಕತೆ ನಡೆಸಿದರು.

ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಯುಎಇಗೆ ಐದನೇ ಬಾರಿ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಈ ಹಿಂದೆ ಜೂನ್ 2022 ರಲ್ಲಿ ಯುಎಇಗೆ ಭೇಟಿ ನೀಡಿದ್ದರು, ಅವರು ಅಬುಧಾಬಿಗೆ ಭೇಟಿ ನೀಡಿದಾಗ ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿ ಮಾಡಿದ್ದರು. ಯುಎಇಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದರು.  2015 ರಲ್ಲಿ, ಪ್ರಧಾನಿ ಮೋದಿ 34 ವರ್ಷಗಳಲ್ಲಿ ಯುಎಇಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಭೇಟಿಯ ನಂತರ 2016 ರಲ್ಲಿ ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತಕ್ಕೆ ಭೇಟಿ ನೀಡಿದರು, ನಂತರ 2017 ರಲ್ಲಿ ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಭಾರತದ ಗಣರಾಜ್ಯೋತ್ಸವ ಸಮಾರಂಭ ಮುಖ್ಯ ಅತಿಥಿಯಾಗಿದ್ದರು. 2017 ರಲ್ಲಿ ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ-ಯುಎಇ ಸಂಬಂಧವನ್ನು ಔಪಚಾರಿಕವಾಗಿ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಒತ್ತು ನೀಡಲಾಯಿತು.

 

ಯುಎಇ-ಭಾರತ ಸಂಬಂಧಗಳು ಎಲ್ಲಾ ರಂಗಗಳಲ್ಲಿ ಮಹತ್ತರವಾದ ಪ್ರಗತಿಯನ್ನು ಕಂಡಿವೆ ಎಂದು ಉಭಯ ನಾಯಕರು ತಿಳಿಸಿದರು. ಭಾರತ-ಯುಎಇ ವ್ಯಾಪಾರವು 2022 ರಲ್ಲಿ 85 ಶತಕೋಟಿ ಅಮೆರಿಕನ್ ಡಾಲರ್ ಗೆ ಏರಿತು, 2022-23 ರಲ್ಲಿ UAE ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಭಾರತದ ಎರಡನೇ ಅತಿದೊಡ್ಡ ರಫ್ತು ತಾಣವಾಗಿದೆ. ಭಾರತವು ಯುಎಇಯ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ. ಫೆಬ್ರವರಿ 2022 ರಲ್ಲಿ, ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (ಸಿಇಪಿಎ) ಸಹಿ ಹಾಕಿದ ಮೊದಲ ದೇಶವಾಗಿದೆ. 1 ಮೇ 2022 ರಂದು CEPA ಜಾರಿಗೆ ಬಂದ ನಂತರ ದ್ವಿಪಕ್ಷೀಯ ವ್ಯಾಪಾರವು ಸರಿಸುಮಾರು 15% ರಷ್ಟು ಹೆಚ್ಚಾಗಿದೆ.

2023 ರಲ್ಲಿ ಭಾರತವು G20 ಮತ್ತು UAE ನ COP28 ನ ಅಧ್ಯಕ್ಷತೆಯೊಂದಿಗೆ ಎರಡೂ ದೇಶಗಳು ನಿರ್ವಹಿಸಿದ ಮಹತ್ವದ ಜಾಗತಿಕ ಪಾತ್ರಗಳ ಉಭಯ ನಾಯಕರು ವಿವರಿಸಿದರು. ಜನವರಿ 2023 ರಲ್ಲಿ ಭಾರತವು ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯನ್ನು ಆಯೋಜಿಸಿರುವುದನ್ನು UAE ಶ್ಲಾಘಿಸಿದೆ. COP28 ನಲ್ಲಿ ಈ ಭಾಗದ ಹಿತಾಸಕ್ತಿಗಳನ್ನು ಉತ್ತೇಜಿಸುವಲ್ಲಿ ಮತ್ತು COP28 ಅನ್ನು "COP ಆಫ್ ಆಕ್ಷನ್" ಮಾಡುವಲ್ಲಿ ಪ್ರಮುಖ ಪಾತ್ರಕ್ಕಾಗಿ ಭಾರತವನ್ನು UAE ಶ್ಲಾಘಿಸಿದೆ. ಉಭಯ ದೇಶಗಳು I2U2 ಮತ್ತು UAE-ಫ್ರಾನ್ಸ್-ಭಾರತ ತ್ರಿಪಕ್ಷೀಯ ಸಹಕಾರ ಉಪಕ್ರಮದಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ಹೆಚ್ಚಿನ ಸಹಕಾರವನ್ನು ಎದುರು ನೋಡುತ್ತಿವೆ. ಅಂತಹ ವೇದಿಕೆಗಳು ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಏರಿಸಲು ಎರಡೂ ದೇಶಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತವೆ ಎಂದು ಉಭಯ ನಾಯಕರು ತಿಳಿಸಿದರು.

ಇಂದು, ಅಬುಧಾಬಿಯಲ್ಲಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಲವು ಮಹತ್ವದ ಘಟನೆಗಳಿಗೆ, ಒಪ್ಪಂದ ವಿನಿಯಮಕ್ಕೆ ಸಾಕ್ಷಿಯಾದರು.

I. ಕೇಂದ್ರ ಬ್ಯಾಂಕ್ಗಳ ಗವರ್ನರ್ಗಳಿಂದ ಗಡಿಯಾಚೆಗಿನ ವಹಿವಾಟುಗಳಿಗಾಗಿ ಸ್ಥಳೀಯ ಕರೆನ್ಸಿಗಳ (INR-AED) ಬಳಕೆಯನ್ನು ಉತ್ತೇಜಿಸಲು ನೀತಿ  ರೂಪಿಸಲು ತಿಳಿವಳಿಕೆ ಪತ್ರಕ್ಕೆ ಸಹಿ ಹಾಕುವುದು.

II. ಆಯಾ ಕೇಂದ್ರ ಬ್ಯಾಂಕ್ಗಳ ಗವರ್ನರ್ಗಳಿಂದ ಇಂಟರ್ಲಿಂಕಿಂಗ್ ಪಾವತಿ ಮತ್ತು ಮೆಸೇಜಿಂಗ್ ಸಿಸ್ಟಮ್ಗಳ ಕುರಿತು ತಿಳಿವಳಿಕೆ ಒಪ್ಪಂದಕ್ಕೆ ಸಹಿ.

III. ಅಬುಧಾಬಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ - ದೆಹಲಿಯನ್ನು ಸ್ಥಾಪಿಸುವ ಯೋಜನೆಗಾಗಿ ತಿಳಿವಳಿಕೆ ಒಪ್ಪಂದಕ್ಕೆ ಸಹಿ.

ದ್ವಿಪಕ್ಷೀಯ ವ್ಯಾಪಾರವನ್ನು ಇತ್ಯರ್ಥಪಡಿಸಲು ಉಭಯ ದೇಶಗಳ ನಡುವೆ ಸ್ಥಳೀಯ ಕರೆನ್ಸಿ ಸೆಟಲ್ಮೆಂಟ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುವುದು, ಪರಸ್ಪರ ವಿಶ್ವಾಸದ ಪ್ರತಿಬಿಂಬವಾಗಿದೆ. ಇದಲ್ಲದೆ, ಇದು ಎರಡೂ ದೇಶಗಳಲ್ಲಿನ ಆರ್ಥಿಕತೆಯ ದೃಢತೆ, ಮತ್ತು ಯುಎಇ-ಭಾರತದ ನಡುವಿನ ಆರ್ಥಿಕ ವಹಿವಾಟು ಹೆಚ್ಚಿಸುತ್ತದೆ. ಯುಎಇ ಮತ್ತು ಭಾರತದ ನಡುವಿನ ಗಡಿಯಾಚೆಗಿನ ವಹಿವಾಟುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ತ್ವರಿತ ಪಾವತಿ ವ್ಯವಸ್ಥೆಗಳ ನಡುವೆ ಏಕೀಕರಣವನ್ನು ಸಕ್ರಿಯಗೊಳಿಸುವ ಮೂಲಕ ಪಾವತಿ ವ್ಯವಸ್ಥೆಗಳ ಪ್ರದೇಶದಲ್ಲಿ ಸಹಕಾರವನ್ನು ಬಲಪಡಿಸಲು ಸಾಧ್ಯ. ಅಂತಹ ಸಹಕಾರವು ರಾಷ್ಟ್ರೀಯ ಕಾರ್ಡ್ ಸ್ವಿಚ್ಗಳನ್ನು ಪರಸ್ಪರ ಲಿಂಕ್ ಮಾಡುವ ಮೂಲಕ ದೇಶೀಯ ಕಾರ್ಡ್ ಯೋಜನೆಗಳ ಪರಸ್ಪರ ಸ್ವೀಕಾರವನ್ನು ಒಳಗೊಂಡಿರುತ್ತದೆ. ಈ ವ್ಯವಸ್ಥೆಗಳ ನಡುವಿನ ಏಕೀಕರಣವು ಎರಡು ದೇಶಗಳ ನಾಗರಿಕರು ಮತ್ತು ನಿವಾಸಿಗಳ ಅನುಕೂಲಕ್ಕಾಗಿ ಪಾವತಿ ಸೇವೆ ಹೆಚ್ಚಿಸುತ್ತದೆ ಎಂದು ಉಭಯ ನಾಯಕರು ತಿಳಿಸಿದರು.

 

ಉಭಯ ದೇಶಗಳ ನಡುವಿನ ಹೂಡಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪಇದೆ. ಈ ಸಂದರ್ಭದಲ್ಲಿ, ಹೂಡಿಕೆಯ ದ್ವಿಪಕ್ಷೀಯ ಉನ್ನತ ಮಟ್ಟದ ಜಂಟಿ ಕಾರ್ಯಪಡೆಯ ಪ್ರಯತ್ನಗಳು ಶ್ಲಾಘನೀಯ. 2021-2022ಕ್ಕೆ (ಏಳನೇ ಸ್ಥಾನ) ಹೋಲಿಸಿದರೆ, 2022-2023ರಲ್ಲಿ ಯುಎಇ ಭಾರತದಲ್ಲಿ ನಾಲ್ಕನೇ ಅತಿದೊಡ್ಡ ಹೂಡಿಕೆದಾರವಾಗಿದೆ ಎಂದು ಉಭಯ ನಾಯಕರು ತಿಳಿಸಿದ್ದಾರೆ.  ಮುಂದಿನ ಕೆಲವು ತಿಂಗಳುಗಳಲ್ಲಿ ಗುಜರಾತ್ನಲ್ಲಿ ಹಣಕಾಸು ಮುಕ್ತ ವಲಯವಾದ ಗುಜರಾತ್ ಇಂಟರ್ ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ  (ಗಿಫ್ಟ್ ಸಿಟಿ) ನಲ್ಲಿ ಅಸ್ತಿತ್ವವನ್ನು ಸ್ಥಾಪಿಸಲು ಅಬುಧಾಬಿ ಹೂಡಿಕೆ ಪ್ರಾಧಿಕಾರದ (ಎಡಿಐಎ) ಯೋಜನೆಯನ್ನು ಅವರು ಶ್ಲಾಘಿಸಿದರು. ಇದು ಭಾರತದಲ್ಲಿ ಯುಎಇಗೆ ಹೂಡಿಕೆ ಅವಕಾಶಗಳನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಐಐಟಿ ದೆಹಲಿ - ಅಬುಧಾಬಿ ಸ್ಥಾಪನೆಗಾಗಿ ಭಾರತದ ಶಿಕ್ಷಣ ಸಚಿವಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ದೆಹಲಿ) ಮತ್ತು ಅಬುಧಾಬಿ ಶಿಕ್ಷಣ ಮತ್ತು ಜ್ಞಾನ ಇಲಾಖೆ (ಎಡಿಇಕೆ) ನಡುವಿನ ತ್ರಿಪಕ್ಷೀಯ ತಿಳಿವಳಿಕಾ ಒಪ್ಪಂದದ ಮಹತ್ವದ ಬಗ್ಗೆ ಉಭಯ ನಾಯಕರು ಚರ್ಚಿಸಿದರು. 

ಕಳೆದ ವರ್ಷ ಫೆಬ್ರವರಿಯಲ್ಲಿ, ಉಭಯ ನಾಯಕರ ನಡುವಿನ ವರ್ಚುವಲ್ ಶೃಂಗಸಭೆಯಲ್ಲಿ, ಯುಎಇಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಯಿತು. ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು ಉಭಯ ದೇಶಗಳು ಕಳೆದ ಎರಡು ವರ್ಷಗಳಿಂದ ಅವಿರತವಾಗಿ ಶ್ರಮಿಸಿವೆ. ಎನರ್ಜಿ ಟ್ರಾನ್ಸಿಶನ್ ಮತ್ತು ಸಸ್ಟೈನಬಿಲಿಟಿಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ನೀಡುವ ಮೂಲಕ ಐಐಟಿ ದೆಹಲಿ - ಅಬುಧಾಬಿ ಜನವರಿ 2024 ರ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಉಭಯ ನಾಯಕರು ತಮ್ಮ ಅನುಮೋದನೆ ವ್ಯಕ್ತಪಡಿಸಿದರು. 

ಪದವಿ, ಸ್ನಾತಕೋತ್ತರ ಮತ್ತು ಪಿಎಚ್.ಡಿ. ಸುಸ್ಥಿರ ಶಕ್ತಿ, ಹವಾಮಾನ ಅಧ್ಯಯನಗಳು, ಕಂಪ್ಯೂಟಿಂಗ್ ಮತ್ತು ಡೇಟಾ ವಿಜ್ಞಾನಗಳ ಕ್ಷೇತ್ರಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ, ಸೆಪ್ಟೆಂಬರ್ 2024 ರಿಂದ ವಿವಿಧ ಕಾರ್ಯಕ್ರಮಗಳನ್ನು ಆರಂಭಿಸುವ ನಿರೀಕ್ಷೆ ಇದೆ.

ತೈಲ, ಅನಿಲ ಮತ್ತು ನವೀಕರಿಸಬಹುದಾದ ಇಂಧನ, ಇಂಧನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲು ಉಭಯ ನಾಯಕರು ಮುಂದಾದರು. ಹಸಿರು ಹೈಡ್ರೋಜನ್, ಸೌರ ಶಕ್ತಿ ಮತ್ತು ಗ್ರಿಡ್ ಸಂಪರ್ಕದಲ್ಲಿ ಸಹಕಾರಕ್ಕೆ ಒತ್ತು ನೀಡಲಾಗುವುದು. ಭಾರತದ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಪ್ರೋಗ್ರಾಂ ಸೇರಿದಂತೆ ಇಂಧನ ಸ್ಪೆಕ್ಟ್ರಮ್ನಾದ್ಯಂತ ಹೂಡಿಕೆಯನ್ನು ಹೆಚ್ಚಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.

ಹವಾಮಾನ ಬದಲಾವಣೆಯ ಸಮಸ್ಯೆಗಳ ಕುರಿತು ಜಂಟಿ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಯಿತು. ವಿಶೇಷವಾಗಿ ಭಾರತದ G20 ಮತ್ತು UAE ನ COP28 ಅಧ್ಯಕ್ಷತೆಯ ಸಮಯದಲ್ಲಿ COP28 ಅನ್ನು ಯಶಸ್ವಿಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಲಾಯಿತು.

ಆಹಾರ ಭದ್ರತೆಯ ಪ್ರಾಮುಖ್ಯತೆಯನ್ನು ಗುರುತಿಸಿ, ನಾಯಕರು ಆಹಾರ ಪೂರೈಕೆ ಸರಪಳಿಗಳ ವಿಶ್ವಾಸಾರ್ಹತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸಲು ಮತ್ತು ಭಾರತದಲ್ಲಿ ಆಹಾರ ಕಾರಿಡಾರ್ ಯೋಜನೆಗಳ ಮೂಲಕ ಆಹಾರ ಮತ್ತು ಕೃಷಿ ವ್ಯಾಪಾರವನ್ನು ವಿಸ್ತರಿಸಲು ಸಂಕಲ್ಪ ತೊಡಲಾಗಿದೆ ಎಂದು ಮೋದಿ ಮತ್ತು ನಹ್ಯಾನ್ ಪುನರುಚ್ಚರಿಸಿದರು. ಈ ಪ್ರದೇಶದಲ್ಲಿನ ಯೋಜನೆಗಳ ಆರಂಭಕ್ಕೆ ಉಭಯ ದೇಶಗಳು ಹೆಚ್ಚು ಒತ್ತು ನೀಡಲು ಸಮಾಲೋಚನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಆರೋಗ್ಯ ಸಹಕಾರವನ್ನು ಶಕ್ತಿಯುತಗೊಳಿಸುವ ಮೂಲಕ ಮತ್ತು ಅದನ್ನು ಮತ್ತಷ್ಟು ವೈವಿಧ್ಯಗೊಳಿಸುವ ಮೂಲಕ ದ್ವಿಪಕ್ಷೀಯ ಮತ್ತು ಮೂರನೇ ರಾಷ್ಟ್ರಗಳಲ್ಲಿ ಆರೋಗ್ಯ ಕ್ಷೇತ್ರದ ಪ್ರಾಮುಖ್ಯತೆ ಮತ್ತು ಸಹಕಾರದ ವ್ಯಾಪ್ತಿಯನ್ನು ವಿಸ್ತರಿಸಬೇಕಾದ ಅಗತ್ಯವಿದೆ ಎಂದರು. ಲಸಿಕೆಗಳು ಮತ್ತು ಔಷಧಿಗಳ ಜಾಗತಿಕ ಆರೋಗ್ಯ ಪೂರೈಕೆ ಸರಪಳಿಗಳಲ್ಲಿ ವಿಶ್ವಾಸಾರ್ಹ ಪರ್ಯಾಯವಾಗಲು ಎರಡೂ ದೇಶಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಯುಎಇ ಮತ್ತು ಭಾರತದಲ್ಲಿ ಬೆಳೆಯುತ್ತಿರುವ ಆರೋಗ್ಯ ಮೂಲಸೌಕರ್ಯದಲ್ಲಿ ಸಹಯೋಗದ ಅವಕಾಶಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ವಿವರಿಸಿದರು.

ಶತಮಾನಗಳ ಹಿಂದಿನ ಜನರ ಸಂಪರ್ಕಗಳು ಐತಿಹಾಸಿಕ ಭಾರತ-ಯುಎಇ ಬಾಂಧವ್ಯದ ಪ್ರಬಲ ಮತ್ತು ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ದೊಡ್ಡ ಭಾರತೀಯ ಸಮುದಾಯ ಯುಎಇಯ ಸಮಾಜ ಮತ್ತು ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುವುದನ್ನು ಮುಂದುವರೆಸಿದೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಯುಎಇ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಾರತ, ಯುಎಇ ಮತ್ತು ನೆರೆಹೊರೆಯಲ್ಲಿ ಸಮೃದ್ಧಿಯನ್ನು ಉತ್ತೇಜಿಸಲು ಈ ಪ್ರದೇಶದಲ್ಲಿ ಕಡಲ ಭದ್ರತೆ ಮತ್ತು ಸಂಪರ್ಕವನ್ನು ಬಲಪಡಿಸಲು ದ್ವಿಪಕ್ಷೀಯ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ಒಪ್ಪಿಕೊಂಡರು. ರಕ್ಷಣಾ ವಿನಿಮಯ, ಅನುಭವಗಳ ಹಂಚಿಕೆ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಹೆಚ್ಚಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು.

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲಾ ರೀತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರವಾದ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಜಂಟಿ ಬದ್ಧತೆ ಇದೆ ಎಂದು ಉಭಯ ನಾಯಕರು ತಿಳಿಸಿದರು.

ಭಯೋತ್ಪಾದನೆ, ಭಯೋತ್ಪಾದತೆಗೆ ಹಣಕಾಸು ಮತ್ತು ಉಗ್ರವಾದದ ವಿರುದ್ಧದ ಹೋರಾಟದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಆಳಗೊಳಿಸಬೇಕಾದ ಅಗತ್ಯವಿದೆ. ಈ ಸಂದರ್ಭದಲ್ಲಿ, ಜನರಲ್ಲಿ ಶಾಂತಿ, ಸಂಯಮ, ಸಹಬಾಳ್ವೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಉತ್ತೇಜಿಸುವ ಪ್ರಾಮುಖ್ಯತೆಯೂ ಅಗತ್ಯವಿದೆ. ಎಲ್ಲಾ ರೀತಿಯ ಉಗ್ರವಾದ, ದ್ವೇಷದ ಮಾತು, ತಾರತಮ್ಯ ಮತ್ತು ಪ್ರಚೋದನೆಯನ್ನು ತ್ಯಜಿಸಬೇಕಾಗಿದೆ ಎಂದು ಭಾರತ ಮತ್ತು ಯುಎಇ ನಾಯಕರು ತಿಳಿಸಿದರು.

ಬಹುಪಕ್ಷೀಯತೆಯ ಪ್ರಾಮುಖ್ಯತೆ. ನ್ಯಾಯಯುತ, ನಿಯಮಗಳ ಆಧಾರಿತ ಜಾಗತಿಕ ಕ್ರಮವನ್ನು ಉತ್ತೇಜಿಸಲು ಸಾಮೂಹಿಕ ಕ್ರಮಕ್ಕೆ ಕರೆ ನೀಡಬೇಕಾದ ಅಗತ್ಯವಿದೆ. ಯುಎನ್ ಸೆಕ್ಯುರಿಟಿ ಕೌನ್ಸಿಲ್ ವಿಷಯಗಳಲ್ಲಿ ಉಭಯ ಪಕ್ಷಗಳ ನಡುವಿನ ಸಮನ್ವಯ ಹೆಚ್ಚಿಸಬೇಕು ಎಂದು ಉಭಯ ನಾಯಕರು ತಿಳಿಸಿದರು.

ವಿಶೇಷವಾಗಿ 2022 ರಲ್ಲಿ, ಎರಡೂ ದೇಶಗಳು ಯುಎನ್ಎಸ್ಸಿಯ ಖಾಯಂ ಸದಸ್ಯರಾಗಿ ಸೇವೆ ಸಲ್ಲಿಸಿದಾಗ. ಭದ್ರತಾ ಮಂಡಳಿಯ ಚುನಾಯಿತ ಸದಸ್ಯರಾಗಿ ಯುಎಇ ಅವಧಿಯಲ್ಲಿ ಯುಎಇಯ ಸಾಧನೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. 

ಇಬ್ಬರೂ ನಾಯಕರು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು, ಸಹಯೋಗದ ಉದಯೋನ್ಮುಖ ಕ್ಷೇತ್ರಗಳನ್ನು ಅನ್ವೇಷಿಸಲು ಮತ್ತು ಪ್ರದೇಶ ಮತ್ತು ಅದರಾಚೆಗೆ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ತಾವು ಬದ್ಧರಾಗಿದ್ದೇವೆ ಎಂದು ನರೇಂದ್ರ ಮೋದಿ ಮತ್ತು ಜಾಯೆದ್ ಅಲ್ ನಹ್ಯಾನ್ ಪುನರುಚ್ಚರಿಸಿದರು. 

ಪ್ರಧಾನಿ ಮೋದಿಯವರು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಧನ್ಯವಾದ ಅರ್ಪಿಸಿದರು. ನವದೆಹಲಿಯಲ್ಲಿ 9-10 ಸೆಪ್ಟೆಂಬರ್ 2023 ರಂದು G20 ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಬೇಕು ಎಂದು ಹೆಚ್ ಹೆಚ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಪ್ರಧಾನಿ ಮೋದಿ ಆಹ್ವಾನ ನೀಡಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Space Sector: A Transformational Year Ahead in 2025

Media Coverage

India’s Space Sector: A Transformational Year Ahead in 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India