ವಿದಿತ್ ಗುಜರಾತಿ ಮತ್ತು ವೈಶಾಲಿ ಅವರ ಅತ್ಯುತ್ತಮ ವಿಜಯಗಳಿಗಾಗಿ ಪ್ರಧಾನಮಂತ್ರಿ ಅವರು ಅಭಿನಂದನೆ ಹೇಳಿದ್ದಾರೆ
ಎಫ್.ಐ.ಡಿ.ಇ. ಗ್ರ್ಯಾಂಡ್ ಸ್ವಿಸ್ ಓಪನ್ ನಲ್ಲಿ ಅತ್ಯುತ್ತಮ ವಿಜಯಗಳಿಸಿದ್ದಕ್ಕಾಗಿ ವಿದಿತ್ ಗುಜರಾತಿ ಮತ್ತು ವೈಶಾಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ 2024 ಅಭ್ಯರ್ಥಿಗಳಲ್ಲಿ ಇಬ್ಬರೂ ಆಟಗಾರರು ತಮ್ಮ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ, ಪ್ರಧಾನಮಂತ್ರಿ ಅವರು ಈ ರೀತಿ ಹೇಳಿದ್ದಾರೆ;
"ಎಫ್.ಐ.ಡಿ.ಇ. ಗ್ರ್ಯಾಂಡ್ ಸ್ವಿಸ್ ಓಪನ್ ನಲ್ಲಿ ಭಾರತವು ಅಗ್ರಸ್ಥಾನವನ್ನು ಪಡೆದಾಗ ನಮಗೆಲ್ಲರಿಗೂ ಅದು ಅಪಾರ ಹೆಮ್ಮೆಯ ಕ್ಷಣ. @ವಿದಿತ್ ಚೆಸ್ ( @viditchess ) ಮತ್ತು @ಚೆಸ್ ವೈಶಾಲಿ ( @chessVaishali ) ಅವರ ಅತ್ಯುತ್ತಮ ವಿಜಯಗಳಿಗಾಗಿ ಮತ್ತು ಟೊರೊಂಟೊದಲ್ಲಿ ನಡೆಯಲಿರುವ ಪ್ರತಿಷ್ಠಿತ 2024 ಅಭ್ಯರ್ಥಿಗಳಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಕ್ಕಾಗಿ ಅವರುಗಳಿಗೆ ಅಭಿನಂದನೆಗಳು.
ಇದು ಚೆಸ್ ನಲ್ಲಿ ಭಾರತೀಯ ಕ್ರೀಡಾಸಾಧನೆಗೆ ಮತ್ತೊಂದು ನಿದರ್ಶನವಾಗಿದೆ. ಭಾರತ ನಿಜವಾಗಿಯೂ ಉತ್ಸಾಹಭರಿತವಾಗಿದೆ.
A moment of immense pride as India takes the top spot in the FIDE Grand Swiss Open.
— Narendra Modi (@narendramodi) November 6, 2023
Congratulations to @viditchess and @chessVaishali for their outstanding victories, and for securing their spots in the prestigious 2024 Candidates, to be held in Toronto.
This is yet another… pic.twitter.com/GgbsWa48D6