ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಸ್ಪೇನ್ ಸರ್ಕಾರದ ಅಧ್ಯಕ್ಷರಾದ ಶ್ರೀ ಪೆಡ್ರೊ ಸ್ಯಾಂಚೆಜ್ ಅವರು 28-29 ಅಕ್ಟೋಬರ್ 2024 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಇದು ಅಧ್ಯಕ್ಷ ಸ್ಯಾಂಚೆಜ್ ಅವರ ಭಾರತಕ್ಕೆ ಮೊದಲ ಭೇಟಿ ಮತ್ತು ಮೊದಲನೆಯದು ಮತ್ತು 18 ವರ್ಷಗಳ ನಂತರ ಭಾರತಕ್ಕೆ ಸ್ಪೇನ್ ಸರ್ಕಾರದ ಅಧ್ಯಕ್ಷರ ಭೇಟಿ ಇದಾಗಿದೆ. ಸ್ಪೇನ್ ಸರ್ಕಾರದ ಸಾರಿಗೆ ಮತ್ತು ಸುಸ್ಥಿರ ಚಲನಶೀಲತೆ ಸಚಿವರು, ಕೈಗಾರಿಕೆ ಮತ್ತು ಪ್ರವಾಸೋದ್ಯಮ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿ ಮತ್ತು ಉದ್ಯಮ ರಂಗದ ನಿಯೋಗದೊಂದಿಗೆ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.

ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಪರಿಷ್ಕರಿಸಿದೆ, ಹೊಸ ಆವೇಗ ತುಂಬಿದೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಹೆಚ್ಚಿನ ಸಹಕಾರದ ಹೊಸ ಯುಗಕ್ಕೆ ವೇದಿಕೆ ಸಿದ್ಧಪಡಿಸಿದೆ ಎಂದು ಉಭಯ ನಾಯಕರು ಗಮನಿಸಿದರು. 2017ರಲ್ಲಿ ಸ್ಪೇನ್‌ಗೆ ಪ್ರಧಾನಿ ಮೋದಿ ಅವರು ನೀಡಿದ್ದ ಭೇಟಿಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ದ್ವಿಪಕ್ಷೀಯ ಕಾರ್ಯಸೂಚಿಯನ್ನು ಮತ್ತಷ್ಟು ಪರಿಷ್ಕರಿಸಲು ಮತ್ತು ರಾಜಕೀಯ, ಆರ್ಥಿಕ, ಭದ್ರತೆ, ರಕ್ಷಣೆ, ಜನರಿಂದ ಜನರು ಮತ್ತು ಸಾಂಸ್ಕೃತಿಕ ಸಹಕಾರ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಸಹಕಾರ ಮುಂದುವರಿಸಲು ಇಬ್ಬರೂ ನಾಯಕರು ತಮ್ಮ ತಂಡಗಳಿಗೆ ಸೂಚನೆ ನೀಡಿದರು.

ಅಧ್ಯಕ್ಷ ಸ್ಯಾಂಚೆಝ್ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು, ಅವರು ವಡೋದರಾದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ನಂತರ ಅವರು ಮುಂಬೈಗೆ ಭೇಟಿ ನೀಡಿದರು. ಅಲ್ಲಿ ಅವರು ಪ್ರಮುಖ ಉದ್ಯಮ ನಾಯಕರು, ಸಾಂಸ್ಕೃತಿಕ ಗಣ್ಯರು ಮತ್ತು ಭಾರತೀಯ ಚಲನಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

ಅಧ್ಯಕ್ಷ ಸ್ಯಾಂಚೆಝ್ ಮತ್ತು ಪ್ರಧಾನಮಂತ್ರಿ ಮೋದಿ ಜಂಟಿಯಾಗಿ ಏರ್‌ಬಸ್ ಸ್ಪೇನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಸಹ-ನಿರ್ಮಾಣ ಮಾಡಿದ ಸಿ-295 ವಿಮಾನದ ಅಂತಿಮ ಜೋಡಣಾ ಘಟಕವನ್ನು ವಡೋದರಾದಲ್ಲಿ ಉದ್ಘಾಟಿಸಿದರು. ಈ ಸ್ಥಾವರವು 2026ರಲ್ಲಿ ಮೊದಲ 'ಮೇಡ್ ಇನ್ ಇಂಡಿಯಾ' ಸಿ-295 ವಿಮಾನವನ್ನು ತಯಾರಿಸಲಿದೆ.  ಒಟ್ಟು 40 ವಿಮಾನಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಏರ್‌ಬಸ್ ಸ್ಪೇನ್ 16 ವಿಮಾನಗಳನ್ನು ಹಾರಾಟ ಸ್ಥಿತಿ('ಫ್ಲೈ-ಅವೇ')ಯಲ್ಲಿ ಭಾರತಕ್ಕೆ ತಲುಪಿಸುತ್ತಿದೆ, ಅದರಲ್ಲಿ ಈಗಾಗಲೇ 6 ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ.

ರಾಜಕೀಯ, ರಕ್ಷಣೆ ಮತ್ತು ಭದ್ರತಾ ಸಹಕಾರ

1. ಉಭಯ ನಾಯಕರು ಎರಡು ದೇಶಗಳ ನಡುವಿನ ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು. ಬೆಳೆಯುತ್ತಿರುವ ಪಾಲುದಾರಿಕೆಯ ಬುನಾದಿಯು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಕಾನೂನು ನಿಯಮ, ನ್ಯಾಯೋಚಿತ ಮತ್ತು ಸಮಾನವಾದ ಜಾಗತಿಕ ಆರ್ಥಿಕತೆ, ಹೆಚ್ಚು ಸಮರ್ಥನೀಯ ಮತ್ತು ಹಂಚಿಕೆಯ ಬದ್ಧತೆಯಲ್ಲಿದೆ ಎಂದು ಪ್ರಸ್ತಾಪಿಸಿದರು. ಹೆಚ್ಚು ಹೊಂದಾಣಿಕೆಯ ಮತ್ತು ಸುಸ್ಥಿರ ಪೃಥ್ವಿ ಗ್ರಹ, ನಿಯಮ-ಆಧಾರಿತ ಅಂತಾರಾಷ್ಟ್ರೀಯ ಕ್ರಮ ಮತ್ತು ಹೆಚ್ಚಿನ ಮತ್ತು ಸುಧಾರಿತ ಬಹುಪಕ್ಷೀಯ  ಸಹಕಾರಕ್ಕೆ ಕೇಂದ್ರವಾಗಿ ಎರಡು ರಾಷ್ಟ್ರಗಳ ನಡುವಿನ ನಿರಂತರ ಐತಿಹಾಸಿಕ ಸಂಬಂಧಗಳು ಮತ್ತು ದೀರ್ಘಕಾಲದ ಸ್ನೇಹ ಮುಂದುವರಿಯುತ್ತಿರುವುದನ್ನು ನಾಯಕರು ಪ್ರಸ್ತಾಪಿಸಿದರು.

2. ನಿಯಮಿತ ಉನ್ನತ ಮಟ್ಟದ ಸಂವಾದವು ಪಾಲುದಾರಿಕೆಗೆ ಆವೇಗವನ್ನು ನೀಡುತ್ತಿದೆ. ವಿದೇಶಿ, ಆರ್ಥಿಕತೆ ಮತ್ತು ವಾಣಿಜ್ಯ ಮತ್ತು ರಕ್ಷಣಾ ಸಚಿವಾಲಯಗಳ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಗಮನಿಸಿದರು. ಪ್ರಮುಖವಾಗಿ ದ್ವಿಪಕ್ಷೀಯ ಸಹಕಾರ ಬಲಪಡಿಸುವ ಮತ್ತು ವೈವಿಧ್ಯಗೊಳಿಸುವ ಉದ್ದೇಶದಿಂದ ಎರಡೂ ಕಡೆಯ ಸಂಬಂಧಪಟ್ಟ ಸಚಿವಾಲಯಗಳು, ಏಜೆನ್ಸಿಗಳ ನಡುವೆ ರಕ್ಷಣಾ ಕ್ಷೇತ್ರ, ಸೈಬರ್ ಭದ್ರತೆ, ವ್ಯಾಪಾರ ಮತ್ತು ಆರ್ಥಿಕ ಸಮಸ್ಯೆಗಳು, ಸಂಸ್ಕೃತಿ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಹೆಚ್ಚಿಸಲುನಿಯಮಿತ ಸಂವಾದಗಳನ್ನು ನಡೆಸುವ ಮಹತ್ವಕ್ಕೆ ಒತ್ತು ನೀಡಿದರು.

3. ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ರಕ್ಷಣಾ ಕೈಗಾರಿಕಾ ಸಹಕಾರದ ಸಂಕೇತವಾಗಿ ಸಿ-295 ವಿಮಾನ ಯೋಜನೆಯಲ್ಲಿ ಸಾಧಿಸಿದ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಈ ಬೆಳೆಯುತ್ತಿರುವ ಪಾಲುದಾರಿಕೆಗೆ ಅನುಗುಣವಾಗಿ, ಮತ್ತು ಸ್ಪ್ಯಾನಿಷ್ ರಕ್ಷಣಾ ಉದ್ಯಮದ ಸುಧಾರಿತ ಸಾಮರ್ಥ್ಯಗಳು ಮತ್ತು ಸ್ಪರ್ಧಾತ್ಮಕತೆ ಮತ್ತು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಗುರಿಗಳಿಗೆ ಅದರ ಕೊಡುಗೆಯನ್ನು ಗುರುತಿಸಿ, ಅವರು ಇತರ ವಲಯಗಳಲ್ಲಿ ತಮ್ಮ ರಕ್ಷಣಾ ಉದ್ಯಮಗಳನ್ನು, ಭಾರತದಲ್ಲಿನ ಜಂಟಿ ಯೋಜನೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಿದರು.

ಆರ್ಥಿಕ ಮತ್ತು ವಾಣಿಜ್ಯ ಸಹಕಾರ

4. ಅಧ್ಯಕ್ಷ ಸ್ಯಾಂಚೆಝ್ ಮತ್ತು ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಪಾಲುದಾರಿಕೆಯಲ್ಲಿನ ಇತ್ತೀಚಿನ ಸಕಾರಾತ್ಮಕ ಬೆಳವಣಿಗೆಗಳನ್ನು ಸ್ವಾಗತಿಸಿದರು. ಎರಡೂ ದೇಶಗಳು ಸಕಾರಾತ್ಮಕ ಆರ್ಥಿಕ ದೃಷ್ಟಿಕೋನದಿಂದ ಉತ್ತೇಜಿತವಾಗಿವೆ. ಹಾಗಾಗಿ, ಎರಡು ದೇಶಗಳ ವ್ಯವಹಾರಗಳ ನಡುವೆ ಬಲವಾದ ಸಂಬಂಧಗಳಿಗೆ ಅವರು ಕರೆ ನೀಡಿದರು.

5. ಸ್ಪ್ಯಾನಿಷ್ ಆರ್ಥಿಕತೆಯ ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವದ ಬಗ್ಗೆ ಪ್ರಧಾನಿ ಮೋದಿ ಅಧ್ಯಕ್ಷ ಸ್ಯಾಂಚೆಜ್ ಅವರನ್ನು ಅಭಿನಂದಿಸಿದರು. ಅಧ್ಯಕ್ಷ ಸ್ಯಾಂಚೆಝ್ ಅವರು ಭಾರತದ ವೇಗದ ಆರ್ಥಿಕ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರನ್ನು ಶ್ಲಾಘಿಸಿದರು. ವ್ಯಾಪಾರ-ಸ್ನೇಹಿ ವಾತಾವರಣ ಉತ್ತೇಜಿಸಲು ಸರ್ಕಾರ ಕೈಗೊಂಡ ವಿವಿಧ ಉಪಕ್ರಮಗಳನ್ನು ಅವರು ಶ್ಲಾಘಿಸಿದರು. ಭಾರತದಲ್ಲಿ ಇರುವ ಸುಮಾರು 230 ಸ್ಪ್ಯಾನಿಷ್ ಕಂಪನಿಗಳ ಚಟುವಟಿಕೆಗಳ ಮೂಲಕ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಸ್ಪೇನ್‌ನ ಬದ್ಧತೆಯನ್ನು ಅಧ್ಯಕ್ಷ ಸ್ಯಾಂಚೆಝ್ ಪ್ರಸ್ತಾಪಿಸಿದರು. ಇಬ್ಬರೂ ನಾಯಕರು ಮುಕ್ತ ನಿಯಮ-ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ಮತ್ತು ಎರಡೂ ದೇಶಗಳಲ್ಲಿ ವ್ಯಾಪಾರ-ಸ್ನೇಹಿ ಹೂಡಿಕೆ ಸನ್ನಿವೇಶಕ್ಕೆ ತಮ್ಮ ಬಲವಾದ ಬೆಂಬಲವನ್ನು ಪುನರುಚ್ಚರಿಸಿದರು.

6. ನವೀಕರಿಸಬಹುದಾದ ವಸ್ತುಗಳು, ಪರಮಾಣು ಮತ್ತು ಸ್ಮಾರ್ಟ್ ಗ್ರಿಡ್‌ಗಳು, ಆಹಾರ ಸಂಸ್ಕರಣೆ, ಆರೋಗ್ಯ ಸಂರಕ್ಷಣಾ ಸೇವೆಗಳು, ರೈಲುಗಳು, ರಸ್ತೆಗಳು, ಬಂದರುಗಳು ಮತ್ತು ಸಾರಿಗೆ ಜಾಲ ನಿರ್ವಹಣೆ ಸೇರಿದಂತೆ ವಾಹನ ಮತ್ತು ಸಾರಿಗೆ ಮೂಲಸೌಕರ್ಯ ಸೇರಿದಂತೆ ಇಂಧನ ಕ್ಷೇತ್ರಗಳಲ್ಲಿ ಸ್ಪ್ಯಾನಿಷ್ ಕಂಪನಿಗಳ ಪರಿಣತಿಯನ್ನು ಗುರುತಿಸುವುದು ಸೇರಿದಂತೆ ಈ ಕ್ಷೇತ್ರಗಳಲ್ಲಿ ಮತ್ತಷ್ಟು ಸಹಭಾಗಿತ್ವ ಹೊಂದುವುದನ್ನು ಅವರು ಸ್ವಾಗತಿಸಿದರು. ಮಾಹಿತಿ ತಂತ್ರಜ್ಞಾನ, ಔಷಧಗಳು ಮತ್ತು ಆಟೋಮೊಬೈಲ್ ಮತ್ತು ಆಟೋ ಘಟಕಗಳಂತಹ ಕ್ಷೇತ್ರಗಳಲ್ಲಿ ಸ್ಪ್ಯಾನಿಷ್ ಆರ್ಥಿಕತೆಗೆ ಭಾರತೀಯ ಕಂಪನಿಗಳು ನೀಡುತ್ತಿರುವ ಸಕಾರಾತ್ಮಕ ಕೊಡುಗೆಗಳನ್ನು ಅಧ್ಯಕ್ಷ ಸ್ಯಾಂಚೆಝ್ ಸ್ವಾಗತಿಸಿದರು. ಭಾರತ ಮತ್ತು ಸ್ಪೇನ್‌ನಲ್ಲಿ ಪರಸ್ಪರ ಹೂಡಿಕೆಗೆ ಅನುಕೂಲವಾಗುವಂತೆ 'ಫಾಸ್ಟ್ ಟ್ರ್ಯಾಕ್ ಮೆಕ್ಯಾನಿಸಂ' ಸ್ಥಾಪನೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

7. 2023ರಲ್ಲಿ ನಡೆದ ಭಾರತ-ಸ್ಪೇನ್ 'ಜಾಯಿಂಟ್ ಕಮಿಷನ್ ಫಾರ್ ಎಕನಾಮಿಕ್ ಕೋಆಪರೇಷನ್'(ಜೆಸಿಇಸಿ)ನ 12ನೇ ಅಧಿವೇಶನದ ಪ್ರಗತಿಯನ್ನು ಉಭಯ ನಾಯಕರು ಗಮನಿಸಿದರು. 2025ರ ಆರಂಭದಲ್ಲಿ ಸ್ಪೇನ್‌ನಲ್ಲಿ ಜೆಸಿಇಸಿಯ ಮುಂದಿನ ಅಧಿವೇಶನ ಕರೆಯಲು ಒಪ್ಪಿಕೊಂಡರು. ಈ ಸಂದರ್ಭದಲ್ಲಿ, ಅವರು ಆರ್ಥಿಕ ಸಂಬಂಧಗಳನ್ನು ಗಾಢವಾಗಿಸುವ ಮತ್ತು ನವೀಕರಿಸಬಹುದಾದ ಇಂಧನ, ತಂತ್ರಜ್ಞಾನ ಮತ್ತು ಸುಸ್ಥಿರ ಮೂಲಸೌಕರ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯತಂತ್ರ ಸಹಕಾರ ಅನ್ವೇಷಿಸುವ ಪ್ರಾಮುಖ್ಯತೆಯನ್ನು ಸಹ ಒಪ್ಪಿಕೊಂಡರು. ಉಭಯ ನಾಯಕರು ನಗರ ಸುಸ್ಥಿರ ಅಭಿವೃದ್ಧಿ ಕುರಿತು ತಿಳಿವಳಿಕೆ ಒಪ್ಪಂದದ ಆರಂಭಿಕ ತೀರ್ಮಾನವನ್ನು ಎದುರು ನೋಡುತ್ತಿದ್ದಾರೆ.

8. ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಸಹಕಾರ ಉತ್ತೇಜಿಸಲು ಅಕ್ಟೋಬರ್ 29, 2024ರಂದು ಮುಂಬೈನಲ್ಲಿ ಜರುಗಿದ ಭಾರತ-ಸ್ಪೇನ್ ಸಿಇಒಗಳ ವೇದಿಕೆ ಮತ್ತು ಭಾರತ-ಸ್ಪೇನ್ ವ್ಯಾಪಾರ ಶೃಂಗಸಭೆಯ 2ನೇ ಸಭೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

9. ದ್ವಿಪಕ್ಷೀಯ ಪಾಲುದಾರಿಕೆ ಮುನ್ನಡೆಸುವಲ್ಲಿ ನಾವೀನ್ಯತೆ ಮತ್ತು ಆರಂಭಿಕ ಪರಿಸರ ವ್ಯವಸ್ಥೆಗಳ ಪ್ರಮುಖ ಪ್ರಾಮುಖ್ಯತೆಯನ್ನು ಉಭಯ ನಾಯಕರು ಗುರುತಿಸಿದರು. ಅಂತಹ ಎಲ್ಲಾ ಅವಕಾಶಗಳನ್ನು ಪರಸ್ಪರ ಆಸಕ್ತಿಯಿಂದ ಅನ್ವೇಷಿಸಲು ಕರೆ ನೀಡಿದರು. ರೈಸಿಂಗ್ ಅಪ್ ಇನ್ ಸ್ಪೇನ್ ಮತ್ತು ಸ್ಟಾರ್ಟಪ್ ಇಂಡಿಯಾ ಉಪಕ್ರಮದಂತಹ ಮಾರ್ಗಸೂಚಿ ಒಳಗೊಂಡಂತೆ ಭವಿಷ್ಯದಲ್ಲಿ ಅಂತಹ ಯಾವುದೇ ವಿನಿಮಯವನ್ನು ಆಳವಾಗಿಸಲು ಕೆಲಸ ಮಾಡಲು ಎರಡೂ ದೇಶಗಳ ಸಂಬಂಧಿತ ಏಜೆನ್ಸಿಗಳನ್ನು ಅವರು ಪ್ರೋತ್ಸಾಹಿಸಿದರು.

10. ರೈಲು ಸಾರಿಗೆ ಕ್ಷೇತ್ರದಲ್ಲಿ ಸಹಕಾರ ಮತ್ತು ಸೀಮಾಸುಂಕ(ಕಸ್ಟಮ್ಸ್) ವಿಷಯದಲ್ಲಿ ಸಹಕಾರ ಮತ್ತು ಪರಸ್ಪರ ಸಹಾಯದ ಒಪ್ಪಂದದ ಕುರಿತು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕುವಲ್ಲಿ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.

11. ಆರ್ಥಿಕ ಮತ್ತು ವ್ಯಾಪಾರ ಅವಕಾಶಗಳನ್ನು ಚಾಲನೆ ಮಾಡುವಲ್ಲಿ ಮತ್ತು ಎರಡೂ ದೇಶಗಳ ಜನರ ನಡುವೆ ತಿಳುವಳಿಕೆ ಹೆಚ್ಚಿಸುವಲ್ಲಿ ಪ್ರವಾಸೋದ್ಯಮದ ಪಾತ್ರ ಮತ್ತು ಅದನ್ನು ಮತ್ತಷ್ಟು ಉತ್ತೇಜಿಸಬೇಕು ಎಂದು ಒಪ್ಪಿಕೊಂಡರು. ಸ್ಪೇನ್ ಮತ್ತು ಭಾರತದ ನಡುವೆ ನೇರ ವಿಮಾನಯಾನ ಆರಂಭಿಸಲು ವಿಮಾನಯಾನ ಸಂಸ್ಥೆಗಳು ತೋರಿದ ಆಸಕ್ತಿಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು.

2026 ಭಾರತ-ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಎಐ ವರ್ಷ

12. ಭಾರತ ಮತ್ತು ಸ್ಪೇನ್ ನಡುವಿನ ಆಳವಾದ ಸಂಬಂಧ ಮತ್ತು ಎರಡು ದೇಶಗಳ ಜನರ ನಡುವಿನ ದೀರ್ಘಕಾಲದ ಸ್ನೇಹವನ್ನು ಗಣನೆಗೆ ತೆಗೆದುಕೊಂಡು, ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ ಅವರು 2026 ಅನ್ನು ಭಾರತ ಮತ್ತು ಸ್ಪೇನ್ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವರ್ಷವನ್ನಾಗಿ ಮಾಡಲು ಒಪ್ಪಿಕೊಂಡಿದ್ದಾರೆ.

13. ವರ್ಷದಲ್ಲಿ, ಎರಡೂ ಕಡೆಯವರು ತಮ್ಮ ವಸ್ತುಸಂಗ್ರಹಾಲಯಗಳು, ಕಲೆ, ಜಾತ್ರೆಗಳು, ಚಲನಚಿತ್ರಗಳು, ಉತ್ಸವಗಳು, ಸಾಹಿತ್ಯ, ವಾಸ್ತುಶಿಲ್ಪಿಗಳ ಸಭೆಗಳು ಮತ್ತು ಚರ್ಚೆ ಮತ್ತು ಚಿಂತನೆಯ ವಲಯಗಳಲ್ಲಿ ಇತರರ ಸಾಂಸ್ಕೃತಿಕ ಉಪಸ್ಥಿತಿಯನ್ನು ಹೆಚ್ಚಿಸಲು ಗರಿಷ್ಠ ಪ್ರಯತ್ನ ಮಾಡಲಿದ್ದಾರೆ.

14. ಅಂತೆಯೇ, ಪ್ರವಾಸಿಗರ ಹರಿವು ಹೆಚ್ಚಿಸುವ ವಿಧಾನಗಳಿಗೆ ವಿಶೇಷ ಗಮನ ನೀಡಲಾಗುತ್ತದೆ, ಪರಸ್ಪರ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತದೆ, ನಗರ ಮತ್ತು ಗ್ರಾಮೀಣ ಪ್ರವಾಸೋದ್ಯಮದಲ್ಲಿ ಆತಿಥ್ಯ, ವಾಸ್ತುಶಿಲ್ಪ, ಪಾಕಪದ್ಧತಿ, ಮಾರ್ಕೆಟಿಂಗ್‌ನ ಹಲವು ಕ್ಷೇತ್ರಗಳಲ್ಲಿ ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ. ಇದು ಇಬ್ಬರಿಗೂ ಸಾಮರಸ್ಯದ ಅಭಿವೃದ್ಧಿ ಮತ್ತು ಸುಧಾರಣೆಗೆ ಪ್ರಯೋಜನ ನೀಡುತ್ತದೆ.

15. ಜಿ-20 ನಾಯಕರ ಹೊಸದೆಹಲಿ ಘೋಷಣೆಗೆ ಅನುಗುಣವಾಗಿ, ಭಾರತ ಮತ್ತು ಸ್ಪೇನ್ ಎಐ ಅನ್ನು ಉತ್ತಮ ಬಳಕೆಗಾಗಿ ಮತ್ತು ಅನೇಕ ಕ್ಷೇತ್ರಗಳಲ್ಲಿ ಅದರ ಸಕಾರಾತ್ಮಕ ಅನುಷ್ಠಾನಕ್ಕೆ ಮುಖ್ಯವಾದ ಪಾತ್ರ ವಹಿಸುತ್ತದೆ. ಎರಡೂ ದೇಶಗಳು ಎಐ ಸಕಾರಾತ್ಮಕ ಬಳಕೆ ಉತ್ತೇಜಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಿವೆ. ಉತ್ಪಾದಕ ಆರ್ಥಿಕತೆಯ ಎಐ ಕ್ಷೇತ್ರದಲ್ಲಿ ಹೊಸ ಪ್ರಗತಿಗಳ ಪ್ರಾಯೋಗಿಕ ಅನುಷ್ಠಾನಕ್ಕಾಗಿ ಕೆಲಸ ಮಾಡುತ್ತವೆ.

16. ಈ ಉಪಕ್ರಮದ ಪ್ರಾಮುಖ್ಯತೆ ಗುರುತಿಸಲು, ಇಬ್ಬರೂ ನಾಯಕರು ಆಯಾ ದೇಶಗಳಲ್ಲಿ ವರ್ಷವನ್ನು ಅತ್ಯಂತ ಸೂಕ್ತವಾದ ರೀತಿಯಲ್ಲಿ ಆಚರಿಸಲು ಸಂಬಂಧಪಟ್ಟ ಪಾಲುದಾರರಿಗೆ ನಿರ್ದೇಶನ ನೀಡಿದರು.

ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಬಂಧಗಳು

17. ರಾಷ್ಟ್ರಗಳನ್ನು ಹತ್ತಿರ ತರುವಲ್ಲಿ ಸಾಂಸ್ಕೃತಿಕ ಸಂಬಂಧಗಳ ಪಾತ್ರವನ್ನು ಇಬ್ಬರು ನಾಯಕರು ಒಪ್ಪಿಕೊಂಡರು. ಭಾರತ ಮತ್ತು ಸ್ಪೇನ್‌ನ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಶ್ಲಾಘಿಸಿದರು. ಭಾರತ ಮತ್ತು ಸ್ಪೇನ್ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ವಿನಿಮಯ ಮತ್ತು ಪುಷ್ಟೀಕರಣ ವಿಶೇಷವಾಗಿ ಸ್ಪ್ಯಾನಿಷ್ ಇಂಡಾಲಜಿಸ್ಟ್‌ಗಳು ಮತ್ತು ಭಾರತೀಯ ಹಿಸ್ಪಾನಿಸ್ಟ್‌ಗಳ ಪಾತ್ರವನ್ನು ಶ್ಲಾಘಿಸಿದರು.  ಸಂಗೀತ, ನೃತ್ಯ, ರಂಗಭೂಮಿ, ಸಾಹಿತ್ಯ, ವಸ್ತುಸಂಗ್ರಹಾಲಯಗಳು ಮತ್ತು ಉತ್ಸವಗಳಲ್ಲಿ ದ್ವಿಪಕ್ಷೀಯ ವಿನಿಮಯವನ್ನು ಉತ್ತೇಜಿಸಲು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು.

18. ಎರಡೂ ದೇಶಗಳ ಸಂಸ್ಕೃತಿಗಳು ಮತ್ತು ಭಾಷೆಗಳ ಅಧ್ಯಯನದಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಇಬ್ಬರು ನಾಯಕರು ಶ್ಲಾಘಿಸಿದರು. ಸ್ಪ್ಯಾನಿಷ್ ಭಾರತದಲ್ಲಿ ಜನಪ್ರಿಯ ವಿದೇಶಿ ಭಾಷೆಗಳಲ್ಲಿ ಒಂದಾಗಿದೆ. ಭಾರತ - ಸ್ಪೇನ್ ಸಾಂಸ್ಕೃತಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವಲ್ಲಿ ಪರಸ್ಪರ ಆಸಕ್ತಿ ಹೊಂದುವುದಕ್ಕೆ ಅವರು ಒತ್ತು ನೀಡಿದರು. ಎರಡೂ ದೇಶಗಳ ಸಾಂಸ್ಕೃತಿಕ ಸಂಸ್ಥೆಗಳಾದ ನವದೆಹಲಿಯ ಇನ್ ಸ್ಟಿಟ್ಯೂಟೊ ಸೆರ್ವಾಂಟೆಸ್ ಮತ್ತು ವಲ್ಲಾಡೋಲಿಡ್‌ನಲ್ಲಿರುವ ಕಾಸಾ ಡೆ ಲಾ ಇಂಡಿಯಾ ನಡುವೆ ಸಹಕಾರದ ಬಲವರ್ಧನೆಗೆ ಒತ್ತು ನೀಡಿದರು.

19. ವಲ್ಲಡೋಲಿಡ್ ವಿಶ್ವವಿದ್ಯಾಲಯದಲ್ಲಿ ಹಿಂದಿ ಮತ್ತು ಭಾರತೀಯ ಅಧ್ಯಯನಗಳ ಕುರಿತು ಐಸಿಸಿಐರ್ ಪೀಠ ಸ್ಥಾಪನೆಯನ್ನು ಇಬ್ಬರು ನಾಯಕರು ಸ್ವಾಗತಿಸಿದರು. ಭಾರತವು ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) 2020ರ ಅಡಿ, ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆಯ ಬದಲಾವಣೆಗಳನ್ನು ತರುತ್ತಿದೆ. ಈ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ಮೋದಿ ಅವರು ಭಾರತೀಯ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಮತ್ತು ಸಂಶೋಧನಾ ಪಾಲುದಾರಿಕೆ ಬಲಪಡಿಸಲು ಪ್ರಮುಖ ಸ್ಪ್ಯಾನಿಷ್ ವಿಶ್ವವಿದ್ಯಾಲಯಗಳನ್ನು ಪ್ರೋತ್ಸಾಹಿಸಿದರು, ಜಂಟಿ/ದ್ವಿ ಪದವಿ ಮತ್ತು ಅವಳಿ ವ್ಯವಸ್ಥೆಗಳ ಮೂಲಕ ಸಾಂಸ್ಥಿಕ ಸಂಪರ್ಕಗಳನ್ನು ನಿರ್ಮಿಸಿ ಮತ್ತು ಭಾರತದಲ್ಲಿ ಶಾಖೆಯ ಕ್ಯಾಂಪಸ್‌ಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕರೆ ನೀಡಿದರು.

20. ಮುಂಬೈನಲ್ಲಿ ಸ್ಪೇನ್-ಇಂಡಿಯಾ ಕೌನ್ಸಿಲ್ ಫೌಂಡೇಶನ್ ಮತ್ತು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಸಹ-ಸಂಘಟಿಸಿದ 4ನೇ ಸ್ಪೇನ್-ಇಂಡಿಯಾ ಫೋರಮ್‌ನಲ್ಲಿ ಅಧ್ಯಕ್ಷ ಸ್ಯಾಂಚೆಜ್ ಮುಖ್ಯ ಭಾಷಣ ನೀಡಲಿದ್ದಾರೆ. ಭಾರತ ಮತ್ತು ಸ್ಪ್ಯಾನಿಷ್ ನಾಗರಿಕ ಸಮಾಜಗಳು, ಕಂಪನಿಗಳು, ಚಿಂತಕರ ಚಾವಡಿಗಳು, ಆಡಳಿತಗಳು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಸಂಪರ್ಕ ಬಲಪಡಿಸುವಲ್ಲಿ ಸರ್ಕಾರಗಳಿಗೆ ಪೂರಕವಾದ ಪಾತ್ರ ಹೊಂದಿರುವ ಈ ಸಂಸ್ಥೆಯ ಅಮೂಲ್ಯ ಕೊಡುಗೆಗಳನ್ನು ನಾಯಕರು ಗುರುತಿಸಿದರು. ಇವುಗಳ ನಡುವೆ ಬಲವಾದ ಪಾಲುದಾರಿಕೆ ಬೆಳೆಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲಿನ ಸದಸ್ಯರು ಮತ್ತು ಅದರ ಚಟುವಟಿಕೆಗಳು ಮತ್ತು ಪರಸ್ಪರ ಜ್ಞಾನ ಹೆಚ್ಚಿಸುವ ಸಲುವಾಗಿ ಎರಡು ದೇಶಗಳನ್ನು ಒಟ್ಟಿಗೆ ತರುವುದು ಇದರ ಉದ್ದೇಶವಾಗಿದೆ.

21. ಐಸಿಸಿಆರ್‌ನಿಂದ ಸ್ಪೇನ್‌ನ ಜನರಿಗೆ ಉಡುಗೊರೆಯಾಗಿ ನೀಡಿದ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಪ್ರತಿಮೆಯನ್ನು ವಲ್ಲಾಡೋಲಿಡ್‌ನಲ್ಲಿ ಸ್ಥಾಪಿಸುವುದನ್ನು ಉಭಯ ನಾಯಕರು ಸ್ವಾಗತಿಸಿದರು. ಟ್ಯಾಗೋರ್ ಅವರ ಅನುವಾದಿತ ಕೃತಿಗಳನ್ನು ಮ್ಯಾಡ್ರಿಡ್‌ನ ಇನ್‌ಸ್ಟಿಟ್ಯೂಟೊ ಸರ್ವಾಂಟೆಸ್‌ನ ಕಮಾನುಗಳಲ್ಲಿ ಇರಿಸಿರುವುದು  ಎರಡು ದೇಶಗಳ ಜನರ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಹೆಚ್ಚಿಸಲು ಸಾಕ್ಷಿಯಾಗಿದೆ.

22. ಚಲನಚಿತ್ರ ಮತ್ತು ಆಡಿಯೊ-ದೃಶ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಹಕಾರವನ್ನು ಎರಡು ಕಡೆಯವರು ತೃಪ್ತಿಯಿಂದ ಗಮನಿಸಿದರು. 2023ರಲ್ಲಿ ನಡೆದ ಸೆಮಿನ್ಸಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತವು ಅತಿಥಿ ರಾಷ್ಟ್ರವಾಗಿತ್ತು. ಐಎಫ್ಎಫ್ಐ ಸತ್ಯಜಿತ್ ರೇ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಹೆಸರಾಂತ ಸ್ಪ್ಯಾನಿಷ್‌ ನಿರ್ದೇಶಕ ಕಾರ್ಲೋಸ್ ಸೌರಾ ಅವರಿಗೆ ನೀಡಲಾಗಿದೆ. ಭಾರತ ಮತ್ತು ಸ್ಪೇನ್‌ನಲ್ಲಿರುವ ಬಹುದೊಡ್ಡ ಚಲನಚಿತ್ರ ಮತ್ತು ಆಡಿಯೊ-ವಿಷುಯಲ್ ಉದ್ಯಮಗಳನ್ನು ಅಂಗೀಕರಿಸಿದ ಇಬ್ಬರೂ ನಾಯಕರು, ಆಡಿಯೋ-ವಿಷುಯಲ್ ಸಹ-ನಿರ್ಮಾಣ ಒಪ್ಪಂದದ ಅಡಿ, ಉಭಯ ದೇಶಗಳ ನಡುವಿನ ಸಹಭಾಗಿತ್ವ ವ್ಯಾಪ್ತಿಯನ್ನು ಹೆಚ್ಚಿಸಬಹುದು ಎಂದು ಒಪ್ಪಿಕೊಂಡರು, ಸಹಭಾಗಿತ್ವ ಸುಧಾರಿಸಲು ಜಂಟಿ ಆಯೋಗ ರಚಿಸುವುದನ್ನು ಸ್ವಾಗತಿಸಿದರು. ಈ ಸಹಭಾಗಿತ್ವವು ಆಡಿಯೋ-ವಿಶುವಲ್ ಕ್ಷೇತ್ರದಲ್ಲಿ ಎರಡು ದೇಶಗಳು ಮತ್ತು ಚಲನಚಿತ್ರಗಳ ಸಹ-ನಿರ್ಮಾಣ ಉತ್ತೇಜನವನ್ನು ಸುಗಮಗೊಳಿಸುತ್ತವೆ.

23. ಎರಡು ದೇಶಗಳಲ್ಲಿ ಜನರು-ಜನರ ಸಂಬಂಧಗಳು ಮತ್ತು ರಾಯಭಾರ ಸೇವೆಗಳನ್ನು ಹೆಚ್ಚಿಸುವ ಸಲುವಾಗಿ, ಸ್ಪೇನ್‌ನ ಬಾರ್ಸಿಲೋನಾದಲ್ಲಿ  ಭಾರತದ ಮೊದಲ ಕಾನ್ಸುಲೇಟ್ ಜನರಲ್ ಕಾರ್ಯಾಚರಣೆ ಮತ್ತು ಬೆಂಗಳೂರಿನಲ್ಲಿ ಸ್ಪೇನ್‌ನ ಕಾನ್ಸುಲೇಟ್ ಜನರಲ್ ತೆರೆಯುವ ನಿರ್ಧಾರವನ್ನು ಇಬ್ಬರು ನಾಯಕರು ಸ್ವಾಗತಿಸಿದರು.

ಐರೋಪ್ಯ ಒಕ್ಕೂಟ(ಇಯು) ಮತ್ತು ಭಾರತ ಸಂಬಂಧಗಳು

24. ಪ್ರಧಾನ ಮಂತ್ರಿ ಮೋದಿ ಮತ್ತು ಅಧ್ಯಕ್ಷ ಸ್ಯಾಂಚೆಝ್ ಅವರು ಭಾರತ-ಐರೋಪ್ಯ ಒಕ್ಕೂಟ(ಇಯು) ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸಲು ಮತ್ತು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದ, ಹೂಡಿಕೆ ಸಂರಕ್ಷಣಾ ಒಪ್ಪಂದ ಮತ್ತು ಭೌಗೋಳಿಕ ಸೂಚನೆಗಳ ಒಪ್ಪಂದದ ಇಯು-ಭಾರತ ತ್ರಿಪಕ್ಷೀಯ ಮಾತುಕತೆಗಳನ್ನು ಮುಂದುವರೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

25. ಇಯು-ಭಾರತದ ಸಂಪರ್ಕ ಪಾಲುದಾರಿಕೆಯ ಉದ್ದೇಶಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ತಮ್ಮ ಸಹಭಾಗಿತ್ವ ಹೆಚ್ಚಿಸಲು ಒಪ್ಪಿಕೊಂಡರು. ಭಾರತ ಮತ್ತು ಯುರೋಪ್ ನಡುವಿನ ಸಂಪರ್ಕ ಹೆಚ್ಚಿಸಲು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆ(ಐಎಂಇಇಸಿ)ಯ ಸಾಮರ್ಥ್ಯವನ್ನು ಗುರುತಿಸಿದರು. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಇಂಧನ, ಸರಕು ಸಾಗಣೆ, ಬಂದರುಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪ್ರಾದೇಶಿಕ ದೇಶಗಳ ನಡುವೆ ಸಹಕಾರಕ್ಕಾಗಿ ಮಾರ್ಗಗಳನ್ನು ಅವರು ಅನ್ವೇಷಿಸಿದರು.

ಜಾಗತಿಕ ಸಮಸ್ಯೆಗಳು

26. ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ನಾಯಕರು ತಮ್ಮ ಆಳವಾದ ಕಾಳಜಿ ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯ ಅಗತ್ಯವನ್ನು ಪುನರುಚ್ಚರಿಸಿದರು. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಒಳಗೊಂಡಂತೆ ವಿಶ್ವಸಂಸ್ಥೆ ಸನ್ನದು ಉದ್ದೇಶಗಳು ಮತ್ತು ತತ್ವಗಳಿಗೆ ಅನುಗುಣವಾಗಿರಲು ಒಪ್ಪಿಗೆ ಸೂಚಿಸಿದರು. ಸಂವಾದ ಮತ್ತು ರಾಜತಾಂತ್ರಿಕತೆಯ ಪ್ರಾಮುಖ್ಯತೆಗೆ ಒತ್ತು ನೀಡಿದರು. ಸಂಘರ್ಷಗಳಿಗೆ ಸುಸ್ಥಿರ ಮತ್ತು ಶಾಂತಿಯುತ ಪರಿಹಾರ ಸಾಧಿಸಲು ಎಲ್ಲಾ ಪಾಲುದಾರರು ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಸಂಘರ್ಷದ ಮಾತುಕತೆಯ ಇತ್ಯರ್ಥಕ್ಕೆ ಉದ್ದೇಶಿಸಿರುವ ಪ್ರಯತ್ನಗಳನ್ನು ಬೆಂಬಲಿಸಲು, ನಿರಂತರ ಸಂಪರ್ಕದಲ್ಲಿರಲು ಎರಡೂ ಕಡೆಯವರು ಒಪ್ಪಿಕೊಂಡರು.

27. ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸಲು ತಮ್ಮ ದೃಢವಾದ ಬದ್ಧತೆಯನ್ನು ಹಂಚಿಕೊಂಡರು. ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವುದಕ್ಕೆ ತಮ್ಮ ಆಳವಾದ ಕಳವಳ ವ್ಯಕ್ತಪಡಿಸಿದರು, ಸಂಬಂಧಪಟ್ಟ ಎಲ್ಲರೂ ಸಂಯಮದಿಂದ ವರ್ತಿಸಲು ಕರೆ ನೀಡಿದರು. ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು. ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲಿನ ಭಯೋತ್ಪಾದಕ ದಾಳಿಯನ್ನು ಇಬ್ಬರು ನಾಯಕರು ಖಂಡಿಸಿದರು. ದೊಡ್ಡ ಪ್ರಮಾಣದ ನಾಗರಿಕರ ಜೀವಹಾನಿ ಮತ್ತು ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಸ್ವೀಕಾರಾರ್ಹವಲ್ಲ, ಅದು ಸಾಧ್ಯವಾದಷ್ಟು ಬೇಗ ಕೊನೆಗೊಳ್ಳಬೇಕು ಎಂದು ಒಪ್ಪಿಕೊಂಡರು. ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲು, ತಕ್ಷಣವೇ ಕದನ ವಿರಾಮ ಮತ್ತು ಗಾಜಾಕ್ಕೆ ಮಾನವೀಯ ನೆರವು, ನಿರಂತರ ಪ್ರವೇಶಕ್ಕೆ ಕರೆ ನೀಡಿದರು. ನಾಗರಿಕರ ಜೀವಗಳನ್ನು ರಕ್ಷಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು.  ಅಂತಾರಾಷ್ಟ್ರೀಯ ಕಾನೂನು ಅನುಸರಿಸಲು ಎಲ್ಲಾ ಪಕ್ಷಗಳನ್ನು ಅವರು ಒತ್ತಾಯಿಸಿದರು. ಎರಡು ದೇಶಗಳಿಗೂ ಪರಿಹಾರದ ಅನುಷ್ಠಾನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಇದು ಸಾರ್ವಭೌಮ, ಕಾರ್ಯಸಾಧು ಮತ್ತು ಸ್ವತಂತ್ರ ಪ್ಯಾಲೆಸ್ತೀನ್ ಸ್ಥಾಪಿಸಲು ಕಾರಣವಾಗುತ್ತದೆ. ಸುರಕ್ಷಿತ ಮತ್ತು ಪರಸ್ಪರ ಗುರುತಿಸಲ್ಪಟ್ಟ ಗಡಿಗಳ ಒಳಗೆ ಬದುಕಲು, ಇಸ್ರೇಲ್ ನೊಂದಿಗೆ ಶಾಂತಿ ಮತ್ತು ಭದ್ರತೆ ಕಾಪಾಡಿಕೊಳ್ಳಲು ಮತ್ತು ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ಸದಸ್ಯತ್ವ ಬೆಂಬಲಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು.

28. ಲೆಬನಾನ್‌ನಲ್ಲಿ ಹಿಂಸಾಚಾರ ಉಲ್ಬಣಕ್ಕೆ ತಮ್ಮ ಕಳವಳ ಪುನರುಚ್ಚರಿಸಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ 1701ರ ಸಂಪೂರ್ಣ ಅನುಷ್ಠಾನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಶಾಂತಿಪಾಲಕರ ಸುರಕ್ಷತೆ ಮತ್ತು ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ, ಅದನ್ನು ಎಲ್ಲರೂ ಖಚಿತಪಡಿಸಿಕೊಳ್ಳಬೇಕು. ವಿಶ್ವಸಂಸ್ಥೆಯ  ಆದೇಶದ ಪಾವಿತ್ರ್ಯವನ್ನು ಎಲ್ಲರೂ ಗೌರವಿಸಬೇಕು.

29. ಮುಕ್ತ, ತೆರೆದ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ವಲಯವನ್ನು ಉತ್ತೇಜಿಸಲು ಒತ್ತು ನೀಡಿದರು, ನಿಯಮಗಳು ಆಧಾರಿತ ಅಂತಾರಾಷ್ಟ್ರೀಯ ಕ್ರಮಗಳ ಸಾರ್ವಭೌಮತ್ವವನ್ನು ಪರಸ್ಪರ ಗೌರವ ಮತ್ತು ವಿವಾದಗಳ ಶಾಂತಿಯುತ ಪರಿಹಾರವನ್ನು ಸಮರ್ಥ ಪ್ರಾದೇಶಿಕ ಸಂಸ್ಥೆಗಳು ಬೆಂಬಲಿಸಬೇಕು. ಜಲಮಾರ್ಗಗಳಲ್ಲಿ ಅಡೆತಡೆಯಿಲ್ಲದ ವಾಣಿಜ್ಯ ಮತ್ತು ಸಂಚಾರ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು, ಅಂತರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ, ವಿಶೇಷವಾಗಿ ಸಮುದ್ರದ ಕಾನೂನು(ಯುಎನ್ ಸಿಎಲ್ಒಎಸ್) 1982ರ ವಿಶ್ವಸಂಸ್ಥೆಯ ಒಪ್ಪಂದ ಪಾಲಿಸಲು ಕರೆ ನೀಡಿದರು. ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮದಲ್ಲಿ ಭಾಗವಹಿಸಲು ಸ್ಪೇನ್‌ಗೆ ಭಾರತದ ಆಹ್ವಾನವನ್ನು ಎರಡೂ ಕಡೆಯವರು ಒಪ್ಪಿಕೊಂಡರು. ಇಂಡೋ-ಪೆಸಿಫಿಕ್‌ ವಲಯದ ನಿರ್ವಹಣೆ, ಸಂರಕ್ಷಣೆ, ಸುಸ್ಥಿರತೆ, ಭದ್ರತೆ ಮತ್ತು ಕಡಲ ಅಭಿವೃದ್ಧಿಯ ಗುರಿ  ಹೊಂದಿರುವ ಸಹಬಾಗಿತ್ವದ ಪ್ರಯತ್ನಗಳನ್ನು ಇದು ಒಳಗೊಂಡಿದೆ. ಭಾರತದ ಇಂಡೋ-ಪೆಸಿಫಿಕ್ ಮುನ್ನೋಟ ಮತ್ತು ಇಂಡೋ-ಪೆಸಿಫಿಕ್‌ ಸಹಕಾರಕ್ಕಾಗಿ ಇಯು ಕಾರ್ಯತಂತ್ರದ ನಡುವಿನ ಪೂರಕತೆಯನ್ನು ಅವರು ಗುರುತಿಸಿದರು.

30. ಭಾರತ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶದ ನಡುವೆ ಬೆಳೆಯುತ್ತಿರುವ ರಾಜಕೀಯ ಮತ್ತು ವಾಣಿಜ್ಯ ಸಂಬಂಧಗಳು ಮತ್ತು ಸ್ಪೇನ್‌ನೊಂದಿಗೆ ಅದು ಹಂಚಿಕೊಳ್ಳುವ ಐತಿಹಾಸಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಗಮನಿಸಿ, ಇಬ್ಬರೂ ನಾಯಕರು ಈ ಪ್ರದೇಶದಲ್ಲಿ ಹೂಡಿಕೆ ಮತ್ತು ಅಭಿವೃದ್ಧಿಗೆ ತ್ರಿಪಕ್ಷೀಯ ಸಹಕಾರದ ಅಪಾರ ಸಾಮರ್ಥ್ಯವನ್ನು ಗುರುತಿಸಿದರು. ಲ್ಯಾಟಿನ್ ಅಮೆರಿಕ ದೇಶಗಳೊಂದಿಗೆ ಬಾಂಧವ್ಯ ಬಲಪಡಿಸಲು ವೇದಿಕೆ ಒದಗಿಸುವ ಅಸೋಸಿಯೇಟ್ ಅಬ್ಸರ್ವರ್ ಆಗಿ ಐಬೆರೋ-ಅಮೆರಿಕ ಸಮ್ಮೇಳನಕ್ಕೆ ಸೇರಬೇಕೆಂಬ ಭಾರತದ ಅರ್ಜಿಯನ್ನು ಸ್ಪೇನ್ ಸ್ವಾಗತಿಸಿದೆ. 2026ರಲ್ಲಿ ಸ್ಪೇನ್‌ನಲ್ಲಿ ನಡೆಯಲಿರುವ ಐಬೆರೋ-ಅಮೆರಿಕ ಶೃಂಗಸಭೆಯ ಮೂಲಕ ಪ್ರಕ್ರಿಯೆ ಅಂತಿಮಗೊಳಿಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ. ಇದರಿಂದಾಗಿ ಭಾರತವು ಸ್ಪೇನ್‌ನ ಪ್ರೊ ಟೆಂಪೋರ್ ಸೆಕ್ರೆಟರಿಯೇಟ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು.

ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಹಕಾರ

31. ವಿಶ್ವಸಂಸ್ಥೆ ಭದ್ರತಾ ಮಂಡಳಿ(ಯುಎನ್‌ಎಸ್‌ಸಿ) ಮತ್ತು ಇತರ ಬಹುಪಕ್ಷೀಯ ವೇದಿಕೆಗಳನ್ನು ಒಳಗೊಂಡಂತೆ ವಿಶ್ವಸಂಸ್ಥೆಯೊಳಗೆ ಸಹಕಾರ ಮತ್ತು ಸಮನ್ವಯ ಹೆಚ್ಚಿಸಲು ಇಬ್ಬರೂ ನಾಯಕರು ಒಪ್ಪಿಕೊಂಡರು. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿ ಖಾತ್ರಿಪಡಿಸಿಕೊಳ್ಳಲು ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶದ ಮಹತ್ವಕ್ಕೆ ಅವರು ಒತ್ತು ನೀಡಿದರು. ಯುಎನ್‌ಎಸ್‌ಸಿ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಹೆಚ್ಚು ಪ್ರಾತಿನಿಧಿಕ, ಪರಿಣಾಮಕಾರಿ, ಪ್ರಜಾಸತ್ತಾತ್ಮಕ, ಜವಾಬ್ದಾರಿಯುತ ಮತ್ತು ಪಾರದರ್ಶಕವಾಗಿಸುವ, ಇಂದಿನ ವಾಸ್ತವಗಳನ್ನು ಪ್ರತಿಬಿಂಬಿಸುವ ಬಹುಪಕ್ಷೀಯತೆಯನ್ನು ಮುನ್ನಡೆಸಲು ಎರಡೂ ಕಡೆಯವರು ಬದ್ಧರಾಗಿದ್ದಾರೆ. 2031-32 ಅವಧಿಗೆ ಸ್ಪೇನ್‌ನ ಯುಎನ್‌ಎಸ್‌ಸಿ ಉಮೇದುವಾರಿಕೆಗೆ ಭಾರತ ತನ್ನ ಬೆಂಬಲ ವ್ಯಕ್ತಪಡಿಸಿದರೆ, 2028-29ರ ಅವಧಿಗೆ ಭಾರತದ ಉಮೇದುವಾರಿಕೆಗೆ ಸ್ಪೇನ್ ತನ್ನ ಬೆಂಬಲ ವ್ಯಕ್ತಪಡಿಸಿತು.

32. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಸಂಪನ್ಮೂಲ ಕಂದಕ ಮುಚ್ಚಲು ಸಹಾಯ ಮಾಡುವ ಆದ್ಯತೆಯ ಕ್ರಮಗಳನ್ನು ಗುರುತಿಸಲು ಒಂದು ನಿರ್ಣಾಯಕ ಅವಕಾಶವಾಗಿ 2025ರಲ್ಲಿ ಸೆವಿಲ್ಲಾ(ಸ್ಪೇನ್)ದಲ್ಲಿ ನಡೆಯಲಿರುವ ಅಭಿವೃದ್ಧಿಗಾಗಿ ಹಣಕಾಸು ಕುರಿತ 4ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಇಬ್ಬರೂ ನಾಯಕರು ಎದುರು ನೋಡುತ್ತಿದ್ದಾರೆ.

33. ಪ್ರಮುಖ ಮತ್ತು ಸಂಕೀರ್ಣವಾದ ಜಾಗತಿಕ ದಕ್ಷಿಣ ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದ ಜಿ-20ರ ಭಾರತದ ಅಧ್ಯಕ್ಷತೆಗೆ ಸ್ಪೇನ್ ಅಧ್ಯಕ್ಷ ಸ್ಯಾಂಚೆಝ್ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದರು. ಜಿ-20ಕ್ಕೆ ಕಾಯಂ ಆಹ್ವಾನಿತರಾಗಿ ಚರ್ಚೆಗಳಿಗೆ ಸ್ಪೇನ್ ನೀಡಿದ ಅಮೂಲ್ಯ ಕೊಡುಗೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

34. ಸುಸ್ಥಿರ ಇಂಧನ ಉತ್ತೇಜಿಸುವಲ್ಲಿ ಮತ್ತು ಹವಾಮಾನ ಬದಲಾವಣೆ ಸಹಕಾರ ಬಲಪಡಿಸಲು ಉಭಯ ನಾಯಕರು ಒಪ್ಪಿಕೊಂಡರು. ಹವಾಮಾನ ಬದಲಾವಣೆ ಎದುರಿಸುವ ಜಾಗತಿಕ ಕ್ರಮಗಳನ್ನು ವೇಗಗೊಳಿಸುವ ತುರ್ತುಸ್ಥಿತಿಯನ್ನು ಅವರು ಗುರುತಿಸಿದರು. ಬಾಕುದಲ್ಲಿ ಮುಂಬರುವ ಹವಾಮಾನ ಶೃಂಗಸಭೆಯ(ಸಿಒಪಿ29) ಸಂದರ್ಭದಲ್ಲಿ ಸಹಭಾಗಿತ್ವ ಹೊಂದಲು ಬದ್ಧರಾಗಿರಲು ಒಪ್ಪಿಗೆ ಸೂಚಿಸಿದರು. ಇದು ಪ್ಯಾರಿಸ್ ಒಪ್ಪಂದದ ಹವಾಮಾನ ಬದಲಾವಣೆಯ ಗುರಿ ಸಾಧಿಸಲು ಸಹಾಯ ಮಾಡುವ ಹವಾಮಾನ ಹಣಕಾಸು ಕುರಿತ ಹೊಸ ಸಾಮೂಹಿಕ ಪ್ರಮಾಣಿತ ಗುರಿ ಒಳಗೊಂಡಂತೆ ಮಹತ್ವಾಕಾಂಕ್ಷೆಯ ಫಲಿತಾಂಶವನ್ನು ಸಾಧಿಸಲು ಬದ್ಧವಾಗಿದೆ. ವಿಶ್ವಾದ್ಯಂತ ಹವಾಮಾನ ಬದಲಾವಣೆಯ ಹೆಚ್ಚುತ್ತಿರುವ ಪರಿಣಾಮಗಳ ಮುಖಾಂತರ ದೇಶಗಳ ಚೇತರಿಕೆ ಮತ್ತು ಹೊಂದಾಣಿಕೆಯ ಸಾಮರ್ಥ್ಯಗಳನ್ನು ಬಲಪಡಿಸುವ  ಕ್ರಮಗಳನ್ನು ಉತ್ತೇಜಿಸುವ ಅಗತ್ಯಕ್ಕೆ ಅವರು ಎತ್ತು ನೀಡಿದರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಿಳುವಳಿಕೆ ಒಪ್ಪಂದದ ಆರಂಭಿಕ ತೀರ್ಮಾನವನ್ನು ಉಭಯ ನಾಯಕರು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಹಸಿರು ಪರಿವರ್ತನೆಯತ್ತ ಸ್ಪೇನ್‌ನ ಬದ್ಧತೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು, ಅಂತಾರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರುವಂತೆ ಸ್ಪೇನ್ ಅನ್ನು ಸ್ವಾಗತಿಸಿದರು. ಅಧ್ಯಕ್ಷ ಸ್ಯಾಂಚೆಝ್ ಅವರು ಗುರಿಗಿಂತ ಮುಂಚಿತವಾಗಿ ನವೀಕರಿಸಬಹುದಾದ ಇಂಧನ ಗುರಿಗಳನ್ನು ಸಾಧಿಸುವಲ್ಲಿ ಭಾರತ ಮಾಡಿದ ಪ್ರಗತಿಯನ್ನು ಶ್ಲಾಘಿಸಿದರು. ಹವಾಮಾನ ಬದಲಾವಣೆಯ ಕಾಳಜಿಯನ್ನು ಪರಿಹರಿಸಲು ಜಾಗತಿಕ ಪ್ರಯತ್ನದ ಅಗತ್ಯವಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು. ರಾಷ್ಟ್ರೀಯ ಸನ್ನಿವೇಶದಲ್ಲಿ, ಸಿಒಪಿ28 ಫಲಿತಾಂಶಗಳಿಗೆ ಎರಡೂ ಕಡೆಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

35. ದೇಶಗಳು, ನಗರಗಳು ಮತ್ತು ಸಮುದಾಯಗಳ ದುರ್ಬಲತೆಯನ್ನು ಸನ್ನದ್ಧತೆ ಮತ್ತು ಹೊಂದಾಣಿಕೆಯ ಕ್ರಮಗಳ ಮೂಲಕ ಬರಗಾಲಕ್ಕೆ ತಗ್ಗಿಸಲು ಕಾಂಕ್ರೀಟ್ ಕ್ರಮಗಳನ್ನು ಉತ್ತೇಜಿಸುವ ವೇದಿಕೆಯಾದ 2022 ರಲ್ಲಿ ಪ್ರಾರಂಭವಾದ IDRA, ಇಂಟರ್ನ್ಯಾಷನಲ್ ಡ್ರೈ ರೆಸಿಲಿಯನ್ಸ್ ಅಲೈಯನ್ಸ್ ಅನ್ನು ಸೇರಲು ಸ್ಪೇನ್ ಭಾರತವನ್ನು ಆಹ್ವಾನಿಸಿದೆ.

36. ಭಯೋತ್ಪಾದಕ ತಾಣಗಳ ಬಳಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರವಾದವನ್ನು ಇಬ್ಬರೂ ನಾಯಕರು ಖಂಡಿಸಿದರು. ಭಯೋತ್ಪಾದನೆಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಗಂಭೀರ ಬೆದರಿಕೆಯಾಗಿ ಉಳಿದಿದೆ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಎಲ್ಲಾ ಭಯೋತ್ಪಾದಕ ದಾಳಿಗಳ ಅಪರಾಧಿಗಳನ್ನು ವಿಳಂಬವಿಲ್ಲದೆ ನ್ಯಾಯದ ಕಟಕಟಿಗೆ ತರಲು ಕರೆ ನೀಡಿದರು. ತಮ್ಮ ನಿಯಂತ್ರಣದಲ್ಲಿರುವ ಪ್ರದೇಶವನ್ನು ಭಯೋತ್ಪಾದಕ ಉದ್ದೇಶಗಳಿಗಾಗಿ ಬಳಸುವುದನ್ನು ತಡೆಯಲು ಎಲ್ಲಾ ದೇಶಗಳು ತಕ್ಷಣದ, ನಿರಂತರ ಮತ್ತು ಬದಲಾಯಿಸಲಾಗದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಬಂಧಿತ ನಿರ್ಣಯಗಳ ದೃಢವಾದ ಅನುಷ್ಠಾನದ ಅಗತ್ಯವನ್ನು ಒತ್ತಿಹೇಳಿದರು. ಜೊತೆಗೆ ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರದ ವಿಶ್ವಸಂಸ್ಥೆಯ ಜಾಗತಿಕ ಸನ್ನದು   ಅನುಷ್ಠಾನಕ್ಕೆ ಕರೆ ನೀಡಿದರು. ಅಲ್ ಖೈದಾ, ಐಸಿಸ್,  ದೇಶ್, ಲಷ್ಕರ್-ಎ-ತಯ್ಯಿಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್(ಜೆಎಂ) ಮತ್ತು ಅದರ ಗುಂಪುಗಳು ಸೇರಿದಂತೆ ಯುಎನ್‌ಎಸ್‌ಸಿ ನಿಷೇಧಿಸಿರುವ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕಾಗಿ ಅವರು ಕರೆ ನೀಡಿದರು. ಭಯೋತ್ಪಾದನೆಯ ಸಂತ್ರಸ್ತರ ಬೆಂಬಲ ಮತ್ತು ಅವರ ಸಬಲೀಕರಣಕ್ಕಾಗಿ ಸ್ಪೇನ್‌ನ ಬಹುಪಕ್ಷೀಯ ಉಪಕ್ರಮಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

37. ಭೇಟಿಯ ಸಮಯದಲ್ಲಿ ತನಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತ ಮತ್ತು ಆತಿಥ್ಯಕ್ಕಾಗಿ ಅಧ್ಯಕ್ಷ ಸ್ಯಾಂಚೆಝ್ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು, ಮುಂದಿನ ದಿನಗಳಲ್ಲಿ ಸ್ಪೇನ್‌ಗೆ ಭೇಟಿ ನೀಡುವಂತೆ ಅವರು ಆಹ್ವಾನ ನೀಡಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Income inequality declining with support from Govt initiatives: Report

Media Coverage

Income inequality declining with support from Govt initiatives: Report
NM on the go

Nm on the go

Always be the first to hear from the PM. Get the App Now!
...
Chairman and CEO of Microsoft, Satya Nadella meets Prime Minister, Shri Narendra Modi
January 06, 2025

Chairman and CEO of Microsoft, Satya Nadella met with Prime Minister, Shri Narendra Modi in New Delhi.

Shri Modi expressed his happiness to know about Microsoft's ambitious expansion and investment plans in India. Both have discussed various aspects of tech, innovation and AI in the meeting.

Responding to the X post of Satya Nadella about the meeting, Shri Modi said;

“It was indeed a delight to meet you, @satyanadella! Glad to know about Microsoft's ambitious expansion and investment plans in India. It was also wonderful discussing various aspects of tech, innovation and AI in our meeting.”