We stand on the cusp of a new chapter in India-Israel relations driven by our people & mutual opportunities for betterment of lives: PM
In India, we have been taking steady steps over 3 years at both macro as well as micro-level, to make a difference. Our motto is Reform, Perform and Transform: PM
To enable entry of capital and technology, most of the sectors including defence, have been opened for FDI...We are now among the most open economies: PM
India’s development agenda is huge. It presents a vast economic opportunity for Israeli companies: PM Modi

ಇಸ್ರೇಲ್ ಪ್ರಧಾನಮಂತ್ರಿಗಳಾದ ಘನತೆವೆತ್ತ ಬೆಂಜಮಿನ್ ನೆತನ್ಯಾಹು ಅವರೇ,

ಭಾರತ ಮತ್ತು ಇಸ್ರೇಲ್ ನ ವಾಣಿಜ್ಯ ನಾಯಕರೇ,

 

ಮಹನೀಯರೇ ಮತ್ತು ಮಹಿಳೆಯರೇ,

ನಾನು ಪ್ರಧಾನಿ ನೆತನ್ಯಾಹು ಮತ್ತು ಇಸ್ರೇಲ್ ನಿಯೋಗದ ಸದಸ್ಯರನ್ನು ಎಲ್ಲ ದೇಶವಾಸಿಗಳ ಪರವಾಗಿ ಸ್ವಾಗತಿಸುತ್ತೇನೆ. ಎರಡೂ ದೇಶಗಳ ಸಿಇಓಗಳೊಂದಿಗೆ ಇರುವುದು ನನಗೆ ಅತೀವ ಆನಂದ ತಂದಿದೆ. ದ್ವಿಪಕ್ಷೀಯ ಸಿಇಓಗಳ ವೇದಿಕೆಯಲ್ಲಿ ನಾನು ಮತ್ತು ಪ್ರಧಾನಮಂತ್ರಿ ನೆತನ್ಯಾಹು ಅವರು ಈಗಸ್ಟೇ ಫಲಪ್ರದವಾದ ಸಂವಾದವನ್ನು ಪೂರ್ಣಗೊಳಿಸಿ ಬಂದಿದ್ದೇವೆ. ನಾನು ಕಳೆದ ವರ್ಷ ಆರಂಭಗೊಂಡ ಸಿಇಓಗಳೊಂದಿಗೆ ಸಂವಾದ ಮತ್ತು ಪಾಲುದಾರಿಕೆಯ ಬಗ್ಗೆ ಉನ್ನತ ವಿಶ್ವಾಸವನ್ನು ಹೊಂದಿದ್ದೇನೆ. 

ಸ್ನೇಹಿತರೇ!

ನಾನು ಇಸ್ರೇಲ್ ಮತ್ತು ಅಲ್ಲಿನ ಜನತೆಯ ಬಗ್ಗೆ ಸದಾ ಆಳವಾದ ಆದರ ಹೊಂದಿದ್ದೇನೆ. ನಾನು 2006ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಇಸ್ರೇಲ್ ಗೆ ಭೇಟಿ ನೀಡಿದ್ದೆ. ಮತ್ತೊಮ್ಮೆ ಕಳೆದ ವರ್ಷ ಜುಲೈನಲ್ಲಿ ಇಸ್ರೇಲ್ ಗೆ ಭೇಟಿ ನೀಡಿದ್ದೆ. ಇದು ಭಾರತದ ಪ್ರಪ್ರಥಮ ಅಂಥ ಭೇಟಿಯಾಗಿತ್ತು. 

 

ಅದೊಂದು ಅತ್ಯಂತ ವಿಶೇಷ ಭೇಟಿ. ಅಲ್ಲಿ ನಾನು, ನಾವಿನ್ಯತೆಯ, ಉದ್ಯಮಶೀಲತೆಯ ಮತ್ತು ಇಸ್ರೇಲ್ ಅನ್ನು ಮುನ್ನಡೆಸುತ್ತಿರುವ ಅನುಸರಣೆಗಳ ಅವಿಸ್ಮರಣೀಯ ಅನುಭವವನ್ನು ಪಡೆದೆ. ಕಳೆದ ಕೆಲವು ವರ್ಷಗಳಿಂದ ನಮ್ಮ ಬಾಂಧವ್ಯದಲ್ಲಿ ಹೊಸ ಚೈತನ್ಯ ಮತ್ತು ಉದ್ದೇಶದ ಉತ್ಸಾಹ ಕಂಡು ಬಂದಿದೆ. ಇದು ನಮ್ಮ ಸಹಕಾರವನ್ನು ಉನ್ನತ ಎತ್ತರಕ್ಕೆ ತೆಗೆದುಕೊಂಡು ಹೋಗಲು ನೆರವಾಗಲಿದೆ. ಭಾರತ ಮತ್ತು ಇಸ್ರೇಲ್ ಬಾಂಧವ್ಯದಲ್ಲಿ ನಮ್ಮ ಜನರ ಮತ್ತು ಅವರ ಕ್ಷೇಮಕ್ಕಾಗಿ ಪರಸ್ಪರ ಅವಕಾಶಗಳಿಂದ ಚಾಲಿತವಾದ ಹೊಸ ಉಜ್ವಲ ಅಧ್ಯಾಯದ ಹೊಸ್ತಿಲಲ್ಲಿ ನಾವು ನಿಂತಿದ್ದೇವೆ. 

 

ನಮ್ಮ ಬಾಂಧವ್ಯದ ಪರಿವರ್ತನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಿಮ್ಮ ಸಂಯೋಜಿತ ಪ್ರಯತ್ನವು ನಮ್ಮ ಸಂವಾದಕ್ಕೆ ನಿಜ ಮೌಲ್ಯ ಸೇರಿಸಿದೆ ಮತ್ತು ವಾಸ್ತವ ಯಶಸ್ಸು ರೂಪಿಸಲು ನೆರವಾಗಿದೆ. ಭಾರತೀಯ ಆರ್ಥಿಕತೆಯ ಗಾತ್ರ ಮತ್ತು ಇಸ್ರೇಲ್ ನ ಅತ್ಯಾಧುನಿಕ ತಂತ್ರಜ್ಞಾನದ ಪ್ರಸ್ತುತತೆಯೊಂದಿಗೆ ಒಗ್ಗೂಡಿ ಶ್ರಮಿಸಿದರೆ, ಗಗನವು ಕೂಡ ನಮಗೆ ಮಿತಿಯಾಗುವುದಿಲ್ಲ!

ಸ್ನೇಹಿತರೇ!

ನಾನು ಕಳೆದ ಜುಲೈನಲ್ಲಿ ಇಸ್ರೇಲ್ ಭೇಟಿ ನೀಡಿದ್ದಾಗ ಪ್ರಕಟಿಸಲಾಗಿದ್ದ,  ಭಾರತ – ಇಸ್ರೇಲ್ ಕೈಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಂತ್ರಜ್ಞಾನಿಕ ನಾವಿನ್ಯತೆ ನಿಧಿ (ಐ4ಎಫ್) ಅಡಿಯಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗೆ ಇಂದು ನಾವು ಪ್ರಥಮ ಕರೆ ನೀಡಿದ್ದೇವೆ ಎಂದು ತಿಳಿಸಲು ಹರ್ಷಿಸುತ್ತೇನೆ. ಈ ನಿಧಿಯನ್ನು 5 ವರ್ಷಗಳ ಅವಧಿಯಲ್ಲಿ ಬಳಕೆ ಮಾಡಲಾಗುತ್ತಿದ್ದು,  ಇದು ವಾಣಿಜ್ಯಿಕವಾಗಿ ಬಳಸಬಹುದಾದ ತಂತ್ರಜ್ಞಾನದ ಪರಿಹಾರಕ್ಕಾಗಿ ಎರಡೂ ರಾಷ್ಟ್ರಗಳ ಪ್ರತಿಭೆಗಳನ್ನು ಒಗ್ಗೂಡಿಸಲು ಉತ್ತಮ ಅವಕಾಶವಾಗಿದೆ ನಾನು ಎರಡೂ ದೇಶಗಳ ಉದ್ಯಮಶೀಲರಿಗೆ ಈ ವೇದಿಕೆಯನ್ನು ಬಳಸಿಕೊಳ್ಳಲು ಬಲವಾಗಿ ಪ್ರೋತ್ಸಾಹ ನೀಡುತ್ತೇನೆ. “ಡಾಟಾ ಅನಾಲಿಟಿಕ್ಸ್” ಮತ್ತು “ಸೈಬರ್ ಪ್ರದೇಶದ ಸುರಕ್ಷತೆ” ಯಂತಹ ಪ್ರದೇಶಗಳಲ್ಲಿನ ಜಂಟಿ ಆರ್ ಮತ್ತು ಡಿ ಯೋಜನೆಗಳ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ವಿನಿಮಯ ಕೇಂದ್ರಗಳಲ್ಲಿ ಸಮಾನವಾಗಿ ಅತ್ಯಾಕರ್ಷಕವಾಗಿವೆ. ಭಾರತ-ಇಸ್ರೇಲ್ ನಾವಿನ್ಯ ಮತ್ತು ತಂತ್ರಜ್ಞಾನ ಕಾಂಕ್ಲೇವ್ 2018ರ ಜುಲೈನಲ್ಲಿ ಭಾರತದಲ್ಲಿ ನಡೆಯಲಿದೆ. ಈ ಕಾಂಕ್ಲೇವ್ ಹೊಸ ತಂತ್ರಜ್ಞಾನಗಳ ಸಹ ಅಭಿವೃದ್ಧಿಗೆ ಸ್ಪರ್ಶ ನೀಡುತ್ತದೆ. ಇದರ ಭೂಮಿಕೆಯನ್ನು ನಾಡಿದ್ದು ಐ ಕ್ರಿಯೇಟ್ ನಿಂದ ಆರಂಭಿಸುತ್ತಿದ್ದೇವೆ. ನಾವಿಬ್ಬರೂ ಈ ಕ್ಯಾಂಪಸ್ ಉದ್ಘಾಟನೆಗಾಗಿ ಗುಜರಾತ್ ಗೆ ಹೋಗುತ್ತಿದ್ದೇವೆ, ಇದನ್ನು ಪ್ರಮುಖ ನಾವಿನ್ಯತೆಯ ತಾಣವಾಗಿ ಅಭಿವೃದ್ಧಿ ಪಡಿಸುತ್ತೇವೆ.

ಸ್ನೇಹಿತರೇ!

ನಾನು ಪ್ರಧಾನಮಂತ್ರಿ ನೆತನ್ಯಾಹು ಅವರನ್ನು ಗುಜರಾತ್ ನ ಗ್ರಾಮೀಣ ಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದೇನೆ, ಕಾರಣ ತಂತ್ರಜ್ಞಾನ ಮತ್ತು ನಾವಿನ್ಯತೆಯ ನೈಜ ಶಕ್ತಿ ಶ್ರೀಸಾಮಾನ್ಯನಿಗೆ ಪ್ರಯೋಜನ ತರುವುದರಲ್ಲಿದೆ. ಇಸ್ರೇಲ್, ನಾವಿನ್ಯತೆ ಮತ್ತು ಆರಂಭಿಕತೆಗಾಗಿ ವಿಶಿಷ್ಠ ಪರಿಸರ ವ್ಯವಸ್ಥೆಯೊಂದಿಗೆ ನವೋದ್ಯಮ ರಾಷ್ಟ್ರ ಎಂದೇ ಸಾರ್ವತ್ರಿಕವಾಗಿ ಖ್ಯಾತವಾಗಿದೆ. 

 

ಇದರ ಶ್ರೇಯ ಇಸ್ರೇಲಿ ಉದ್ಯಮಶೀಲರಿಗೆ ಸಲ್ಲಬೇಕು. ನೀವು ಇಸ್ರೇಲ್ ಅನ್ನು ಬಲವಾದ, ಸ್ಥಿರವಾದ ಮತ್ತು ನಾವಿನ್ಯಪೂರ್ಣ ಆರ್ಥಿಕತೆಯಾಗಿ ಮಾಡಿದ್ದೀರಿ. ನೀವು 8 ದಶಲಕ್ಷ ಜನಸಂಖ್ಯೆಯ ರಾಷ್ಟ್ರವನ್ನು ತಂತ್ರಜ್ಞಾನದ ಜಾಗತಿಕ ಶಕ್ತಿ ಕೇಂದ್ರವಾಗಿ ಬೆಳಗಿಸಿದ್ದೀರಿ.

 

ಅದು ಜಲ ತಂತ್ರಜ್ಞಾನವಾಗಿರಲಿ; ಅಥವಾ ಕೃಷಿ ತಂತ್ರಜ್ಞಾನವಾಗಿರಲಿ; ಅದು ಆಹಾರ ಉತ್ಪಾನೆ ಇರಲಿ, ಅದರ ಸಂಸ್ಕರಣೆ ಅಥವಾ ಸಂರಕ್ಷಣೆ ಇರಲಿ; ಇಸ್ರೇಲ್ ಅದು ಹೊಸ ಪ್ರಗತಿ ಮತ್ತು ಬೆಳವಣಿಗೆಗಳಿಗೆ ಉಜ್ವಲ ಉದಾಹರಣೆಯಾಗಿದೆ. ಅದು ಭೌತಿಕ ಅಥವಾ ವಾಸ್ತವ ಸುರಕ್ಷತೆ ಇರಲಿ; ಅದು ಭೂಮಿ, ಜಲ ಅಥವಾ ಬಾಹ್ಯಾಕಾಶದ ಮೇಲೇ ಆಗಲಿ, ನಿಮ್ಮ ತಂತ್ರಜ್ಞಾನ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ಜಲ ಕೊರತೆ ಇರುವ ರಾಜ್ಯದಿಂದ ಬಂದ ನಾನು, ಇಸ್ರೇಲ್ ನ ಜಲ ದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.

 

ಸ್ನೇಹಿತರೆ!

ಭಾರತದಲ್ಲಿ, ನಾವು ಬದಲಾವಣೆ ತರಲು ಮೂರು ವರ್ಷಗಳಲ್ಲಿ ಸ್ಥೂಲವಾಗಿ ಮತ್ತು ಸೂಕ್ಷ್ಮ ಮಟ್ಟದಲ್ಲಿ ಸ್ಥಿರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಧ್ಯೇಯವೇನೆಂದರೆ: ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯಾಗಿದೆ.

 

ಫಲಿತಾಂಶಗಳು ಎರಡು ಪದರದ್ದಾಗಿವೆ. ಒಂದೆಡೆ, ನಮ್ಮ ಕಾರ್ಯವಿಧಾನಗಳು, ಪ್ರಕ್ರಿಯೆಗಳು ಮತ್ತು ವ್ಯವಸ್ಥೆಗಳು ಪ್ರಪಂಚದ ಉತ್ತಮವಾದುದರೊಂದಿಗೆ ಹೊಂದಿಕೊಂಡಿವೆ. ಎರಡನೆಯದಾಗಿ, ನಾವು ವೇಗವಾಗಿ ಬೆಳವಣಿಗೆಯ ವೇಗವನ್ನು ನಿರ್ವಹಿಸಲು ಸಮರ್ಥರಾಗಿದ್ದೇವೆ.
ಆಳವಾದ ವಿನ್ಯಾಸಿತ ಸುಧಾರಣೆಗಳ ಹೊರತಾಗಿ, ನಾವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ಸೇರಿದ್ದೇವೆ.

ಎಫ್.ಡಿ.ಐ. ಹರಿವು ಪ್ರತಿಶತ 40ರೊಂದಿಗೆ ಸಾರ್ವಕಾಲಿಕ ಎತ್ತರಕ್ಕೆ ಹೋಗಿವೆ. 

 

ಯುವಕರಿಗೆ ಉದ್ಯೋಗ ದೊರಕಿಸಲು ಮತ್ತು ಕೌಶಲ್ಯ ಹೆಚ್ಚಿಲು ಅದ್ಭುತ ಕಾರ್ಯ ನಡೆದಿದೆ. ನಮ್ಮ ಜನಸಂಖ್ಯೆಯ ಶೇ.65ರಷ್ಟು ಜನರು 35 ವರ್ಷದೊಳಗಿನವರಾಗಿದ್ದಾರೆ ಮತ್ತು ಅವರು ತಂತ್ರಜ್ಞಾನ ಸಂಪರ್ಕಿತ ವೃದ್ಧಿಯ ದಾಹವನ್ನು ಹೊಂದಿದ್ದಾರೆ. 

ಇದು ನಮ್ಮ ಅತಿದೊಡ್ಡ ಅವಕಾಶವಷ್ಟೇ ಅಲ್ಲ ಸವಾಲೂ ಆಗಿದೆ. ಈ ಉದ್ದೇಶಕ್ಕಾಗಿ  ನಾವು ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನ ಆರಂಭಿಸಿದ್ದೇವೆ. ಈ ಕ್ಷೇತ್ರದಲ್ಲಿ  ಭಾರತ ಮತ್ತು ಇಸ್ರೇಲ್ ಪಾಲುದಾರಿಕೆಗೆ ವಿಫುಲ ಸಾಮರ್ಥ್ಯವಿದೆ. ಭಾರತ-ಇಸ್ರೇಲ್ ನಾವಿನ್ಯ ಸೇತುವೆಯು ಎರಡೂ ಕಡೆಯವರ ನಡುವೆ ಸಂಪರ್ಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತೀಯ ಕೈಗಾರಿಕೆಗಳು, ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು, ಬೃಹತ್ ಜ್ಞಾನ ಸರೋವರದ ಲಾಭಕ್ಕಾಗಿ ಇಸ್ರೇಲ್ ನ ತಮ್ಮ ಸಹವರ್ತಿಗಳೊಂದಿಗೆ ಸಹಯೋಗ ಬೆಳೆಸಬೇಕು.

  • ಭಾರತ ಗಾತ್ರ ಮತ್ತು ವಿಸ್ತಾರ ಹೊಂದಿದೆ.
  • ಇಸ್ರೇಲ್ ಗೆ ಹರಿತ ಮತ್ತು ತೀಕ್ಷ್ಣತೆ ಇದೆ.

ಭಾರತದಲ್ಲಿ ವಾಣಿಜ್ಯಿಕವಾಗಿ ಹೆಚ್ಚಳ ಮಾಡಬಹುದಾದ ಅಥವಾ ಉಪಯುಕ್ತವಾಗಬಹುದಾದ ಅನೇಕ ಕಲ್ಪನೆಗಳು ಮತ್ತು ತಂತ್ರಜ್ಞಾನಗಳು ಇವೆ.

 

ಸ್ನೇಹಿತರೇ!

ಇಂದು ನಾವು ಅತಿ ದೊಡ್ಡ ಉತ್ಪಾದನಾ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದ್ದೇವೆ. ಆದರೆ ನಾವು ಇನ್ನೂ ಅದನ್ನು ಸಾಧಿಸಿಲ್ಲ. ನಾವು ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ಸ್ಥಿರಗೊಳಿಸಲು ನಮ್ಮ ಯುವಜನರ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ.

ಇದನ್ನು ಸಾಧಿಸಲೆಂದೇ ನಾವು ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ವಿನ್ಯಾಸಗೊಳಿಸಿರುವುದು. ಈ ಉಪಕ್ರಮಗಳ, ಸಂಯೋಜಿತ ಔಪಚಾರಿಕ ಆರ್ಥಿಕತೆಯ ಹೊಸ ಪರಿಸರ ವ್ಯವಸ್ಥೆಯೊಂದಿಗೆ ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯೊಂದಿಗೆ ನಾವು ನವ ಭಾರತದ ನಿರ್ಮಾಣದ ಪ್ರಯತ್ನದಲ್ಲಿದ್ದೇವೆ. 
ನಾವು ಭಾರತವನ್ನು ಜ್ಞಾನಾಧಾರಿತ, ಕೌಶಲ ಬೆಂಬಲಿತ ಮತ್ತು ತಂತ್ರಜ್ಞಾನ ಚಾಲಿತ ಸಮಾಜವಾಗಿ ಅಭಿವೃದ್ಧಿಪಡಿಸಲು ಉತ್ಸುಕರಾಗಿದ್ದೇವೆ. ಡಿಜಿಟಲ್ ಇಂಡಿಯಾ ಮತ್ತು ಕೌಶಲ ಭಾರತ ಉಪಕ್ರಮಗಳೊಂದಿಗೆ ವೈಭವದ ಆರಂಭ ಈಗಾಗಲೇ ದೊರೆತಿದೆ. ಈ ಪರಿವರ್ತನೆಯ ಸಾಕಾರಕ್ಕಾಗಿ ಕಳೆದ ಕೆಲವು ವರ್ಷಗಳಲ್ಲಿ ನನ್ನ ಸರ್ಕಾರ ಹಲವು ಗಮನಾರ್ಹ ಸುಧಾರಣೆಗಳನ್ನು ಕೈಗೊಂಡಿದೆ. ವಾಣಿಜ್ಯ ಮತ್ತು ಕಂಪನಿಗಳ ಎದುರಿಸುತ್ತಿರುವ ಹಲವಾರು ನಿಯಂತ್ರಕ ಮತ್ತು ನೀತಿ ಸಮಸ್ಯೆಗಳನ್ನು ನಾವು ಪರಿಹರಿಸಿದ್ದೇವೆ. ಭಾರತದಲ್ಲಿ ಸುಗಮವಾಗಿ ವಾಣಿಜ್ಯ ನಡೆಸಲು ನಾವು ಪ್ರಾಮಾಣಿಕ ಕಾರ್ಯ ಮಾಡಿದ್ದೇವೆ. 

ಅದರ ಫಲಿತಾಂಶ ಕಾಣಲು ಸಿಗುತ್ತಿವೆ: 

  • ಕಳೆದ ಮೂರು ವರ್ಷಗಳಲ್ಲಿ ವಿಶ್ವಬ್ಯಾಂಕ್ ನ ಸುಗಮ ವಾಣಿಜ್ಯ ನಡೆಸುವ ಶ್ರೇಣೀಕರಣದಲ್ಲಿ 42 ಸ್ಥಾನ ಮೇಲೇರಿದೆ;
  • ಎರಡು ವರ್ಷಗಳಲ್ಲಿ ಡಬ್ಲ್ಯು.ಐ.ಪಿ.ಓ.ದ ಜಾಗತಿಕ ನಾವಿನ್ಯತೆಯ ಸೂಚ್ಯಂಕದಲ್ಲಿ ನಾವು 21 ಸ್ಥಾನ ಮುಂದೆ ಸಾಗಿದ್ದೇವೆ;
  • ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಕಳೆದೆರೆಡು ವರ್ಷಗಳಲ್ಲಿ ನಾವು 32 ಸ್ಥಾನ ಮೇಲೇರಿದ್ದೇವೆ- ಇದು ಯಾವುದೇ ರಾಷ್ಟ್ರಕ್ಕೆ ಅತ್ಯಧಿಕವಾಗಿದೆ.
  • ವಿಶ್ವಬ್ಯಾಂಕ್ ನ 2016ನೇ ಸಾಲಿನ ಸರಕು ಸಾಗಣೆ ಸಾಮರ್ಥ್ಯ ಸೂಚ್ಯಂಕದಲ್ಲಿ ನಾವು 19 ಸ್ಥಾನ ಮೇಲೇರಿದ್ದೇವೆ; 
  • ಯು.ಎನ್. ಸಿಟಿಎಡಿ ಪಟ್ಟಿ ಮಾಡಿರುವ ಮುಂಚೂಣಿಯ 10 ಎಫ್.ಡಿ.ಐ. ತಾಣಗಳಲ್ಲಿ ನಾವೂ ಒಬ್ಬರಾಗಿದ್ದೇವೆ. ನಾವು ಇಲ್ಲಿಗೇ ನಿಲ್ಲುವುದಿಲ್ಲ.

ನಾವು ಇನ್ನೂ ಹೆಚ್ಚು ಉತ್ತಮ ಸಾಧನೆ ಮಾಡಲಿಚ್ಛಿಸುತ್ತೇವೆ

ಬಂಡವಾಳ ಮತ್ತು ತಂತ್ರಜ್ಞಾನದ ಪ್ರವೇಶಕ್ಕೆ ಅವಕಾಶ ನೀಡಲು, ರಕ್ಷಣೆ ಸೇರಿದಂತೆ ಬಹುತೇಕ ವಲಯಗಳನ್ನು ಎಫ್.ಡಿ.ಐ.ಗೆ ಮುಕ್ತಗೊಳಿಸಲಾಗಿದೆ. ಶೇ.90ಕ್ಕಿಂತ ಹೆಚ್ಚು ಎಫ್.ಡಿ.ಐ. ಪ್ರಸ್ತಾವನೆಗಳನ್ನು ಸ್ವಯಂಚಾಲಿತ ಮಾರ್ಗದಲ್ಲಿ ತರಲಾಗಿದೆ. 
ನಾವು ಈಗ ಬಹು ಮುಕ್ತ ಆರ್ಥಿಕತೆಯಲ್ಲಿ ಸೇರಿದ್ದೇವೆ. ಕೆಲವೇ ದಿನಗಳ ಹಿಂದೆ, ಏಕ ಬ್ರಾಂಡ್ ಚಿಲ್ಲರೆ ಮಾರಾಟ ಮತ್ತು ನಿರ್ಮಾಣ ಅಭಿವೃದ್ಧಿಯಲ್ಲಿ ಶೇ.100ರ ಸ್ವಯಂಚಾಲಿತ ಮಾರ್ಗಕ್ಕೆ ಅವಕಾಶ ಕಲ್ಪಿಸಿದ್ದೇವೆ. ನಾವು ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾವನ್ನು ವಿದೇಶೀ ಹೂಡಿಕೆಗೆ ಮುಕ್ತಗೊಳಿಸಿದ್ದೇವೆ.

ಪ್ರತಿ ದಿನ, ನಾವು ಭಾರತದಲ್ಲಿ ಸುಗಮ ವಾಣಿಜ್ಯ ನಡೆಸಲು ಶ್ರಮಿಸುತ್ತಿದ್ದೇವೆ. ತೆರಿಗೆಯಲ್ಲಿ, ನಾವು ಹಲವು ಐತಿಹಾಸಿಕ ಸುಧಾರಣೆ ಮಾಡಿದ್ದೇವೆ. ಜಿ.ಎಸ್.ಟಿ. ಸುಧಾರಣೆ ಇವುಗಳಲ್ಲಿ ಅತಿ ಮುಖ್ಯವಾದುದಾಗಿದ್ದು, ಇದನ್ನು ಯಶಸ್ವಿಯಾಗಿ ಮತ್ತು ಸುಗಮವಾಗಿ ಪರಿಚಯಿಸಿದ್ದೇವೆ.
ಇದು ಭಾರತ ಕೈಗೊಂಡ ಅತಿ ದೊಡ್ಡ ವಾಣಿಜ್ಯ ಮತ್ತು ಆರ್ಥಿಕ ಸುಧಾರಣೆಯಾಗಿದೆ. ಜಿಎಸ್ಟಿ ಮತ್ತು ಹಣಕಾಸು ತಾಂತ್ರಿಕತೆ ಮತ್ತು ಡಿಜಿಟಲ್ ವಹಿವಾಟು ಜಾರಿಯೊಂದಿಗೆ, ನಾವು ಆಧುನಿಕ ತೆರಿಗೆ ವ್ಯವಸ್ಥೆಯತ್ತ ಸಾಗಿದ್ದೇವೆ, ಇದು ಪಾರದರ್ಶಕ, ಸ್ಥಿರ ಮತ್ತು ಊಹಾತ್ಮಕವಾದುದಾಗಿದೆ.

ಸ್ನೇಹಿತರೆ!

ಹಲವು ಇಸ್ರೇಲಿ ಕಂಪನಿಗಳು ಭಾರತೀಯ ಕಂಪನಿಗಳೊಂದಿಗೆ ಭಾರತದಲ್ಲಿ ತಯಾರಿಕೆ ಮಾಡಲು ಕೈಜೋಡಿಸಿವೆ.ಇನ್ನು ಅನೇಕರು, ಅದರಲ್ಲೂ ಆಧುನಿಕ ಜಲ ತಂತ್ರಜ್ಞಾನ ಮತ್ತು ಕೃಷಿ ತಂತ್ರಜ್ಞಾನ, ರಕ್ಷಣೆ ಮತ್ತು ಸುರಕ್ಷತಾ ವ್ಯವಸ್ಥೆ, ಮತ್ತು ಔಷಧ ಜ್ಞಾನ ಹೊಂದಿರುವವರು, ಭಾರತದಲ್ಲಿ ಒಂದು ಕಾಲು ಇಟ್ಟಿದ್ದಾರೆ. ಅದೇ ರೀತಿ, ಭಾರತೀಯ ಕಂಪನಿಗಳು ಐಟಿ, ನೀರಾವರಿ ಮತ್ತು ಔಷಧ ಸೇರಿದಂತೆ ಹಲವು ವಲಯಗಳಲ್ಲಿ ಇಸ್ರೇಲ್ ನಲ್ಲಿ ಗಮನಾರ್ಹವಾಗಿ ನೆಲೆ ನಿಂತಿದ್ದಾರೆ. 

 

ನಮ್ಮ ವಾಣಿಜ್ಯ ಸಂಬಂಧದಲ್ಲಿ ವಜ್ರ ಬಲವಾದುದಾಗಿದೆ. ಇಂದು ಹಿಂದೆಂದಿಗಿಂತಲೂ ಹೆಚ್ಚು ಜಂಟಿ ಸಹಭಾಗಿತ್ವದ ವಾಣಿಜ್ಯ ನಡೆಯುತ್ತಿದೆ. ಆದಾಗ್ಯೂ, ಇದು ಕೇವಲ ಆರಂಭ. ಇಸ್ರೇಲ್ ನೊಂದಿಗಿನ ನಮ್ಮ ವಾಣಿಜ್ಯ 5 ಶತಕೋಟಿ ಡಾಲರ್ ಮೀರಿ ಬೆಳೆಯಬೇಕು. 

 

ಆದರೆ, ಇದು ಇನ್ನೂ ನಮ್ಮ ವಾಸ್ತವ ಸಾಮರ್ಥ್ಯಕ್ಕಿಂತ ಕೆಳಗಿದೆ. ನಾವು ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ನಮ್ಮ ಬಾಂಧವ್ಯದಲ್ಲಿ ಸಾಧಿಸಬೇಕು. ಇದು ಕೇವಲ ರಾಜತಾಂತ್ರಿಕ ವಿಧಿರೂಪವಷ್ಟೇ ಅಲ್ಲ, ಆರ್ಥಿಕವಾಗಿಯೂ ಆಗಬೇಕು. ನಮ್ಮ ಸಂಯೋಜಿತ ಸಾಮರ್ಥ್ಯವನ್ನು ಹೇಗೆ ಹೊರಗೆಳೆಯಬೇಕು ಎಂಬ ಬಗ್ಗೆ ನಿಮ್ಮ ಸಲಹೆಯನ್ನು ನಾನು ಸ್ವಾಗತಿಸುತ್ತೇನೆ. ನಾವಿನ್ಯತೆ, ಅಳವಡಿಕೆ ಮತ್ತು ಸಮಸ್ಯೆ ಪರಿಹರಿಸುವ ಸ್ಫೂರ್ತಿ, ಎರಡೂ ದೇಶಗಳಲ್ಲಿ ಅಂತರ್ಗತವಾಗಿದೆ. 
ಕೆಲವು ಉದಾಹರಣೆ ನೀಡುವುದಾದರೆ:

ನಾವು ನಮ್ಮ ಹಣ್ಣು, ತರಕಾರಿಗಳು ಮತ್ತು ತೋಟಗಾರಿಕೆಗೆ ಹಾಗೂ ಅದೇ ರೀತಿ ನೀರಿಗೂ, ಮೌಲ್ಯವನ್ನು ಸೇರಿಸಿದರೆ, ನಾವು ವ್ಯರ್ಥವಾಗುವುದನ್ನು ಉಳಿಸಲು ಸಹಯೋಗ ನೀಡಿದರೆ ಪರಿಸರ ಮತ್ತು ಆರ್ಥಿಕ ಲಾಭಗಳನ್ನು ಊಹಿಸಬಹುದು. 
ನಾವು ಅಧಿಕ ನೀರು ಮತ್ತು ನೀರಿನ ಕೊರತೆ ಸನ್ನಿವೇಶ ಎದುರಿಸಿದ್ದೇವೆ. ಹಸಿವಿನಿಂದ ಅನೇಕರು ಬಳಲುತ್ತಿರುವಾಗ ಅನೇಕರು ಆಹಾರವನ್ನು ಎಸೆದ ಸಂದರ್ಭಗಳನ್ನು ನೋಡಿದ್ದೇವೆ.
ಸ್ನೇಹಿತರೆ!

ಭಾರತದ ಅಭಿವೃದ್ಧಿಯ ಕಾರ್ಯಕ್ರಮ ದೊಡ್ಡದಾಗಿದೆ. ಅದು ಇಸ್ರೇಲ್ ಕಂಪನಿಗಳಿಗೆ ವಿಶಾಲ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ನಾನು ಹೆಚ್ಚು ಹೆಚ್ಚು ಇಸ್ರೇಲ್ ಜನರು, ವಾಣಿಜ್ಯ ಸಂಸ್ಥೆಗಳು ಮತ್ತು ಕಂಪನಿಗಳು ಭಾರತಕ್ಕೆ ಬಂದು ಕೆಲಸ ಮಾಡಬೇಕು ಎಂದು ಆಹ್ವಾನ ನೀಡುತ್ತೇನೆ.

ಸರ್ಕಾರ ಮತ್ತು ಜನರೊಂದಿಗೆ, ಭಾರತದ ವಾಣಿಜ್ಯ ಸಮುದಾಯ ಕೂಡ, ಇದಕ್ಕೆ ಕೈಜೋಡಿಸಲು ಉತ್ಸುಕವಾಗಿದೆ. ನಾನು ನಿಮ್ಮ ಕಂಪನಿಗಳಿಗೆ ಮತ್ತು ಅವುಗಳ ಪ್ರಯತ್ನಕ್ಕೆ ಯಶಸ್ಸು ಕೋರುತ್ತೇನೆ. ನಾನು ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ನನ್ನ ಸರ್ಕಾರದ ಬೆಂಬಲವನ್ನು ನೀಡುವ ಭರವಸೆ ನೀಡುತ್ತೇನೆ. ಭಾರತ-ಇಸ್ರೇಲ್ ವಾಣಿಜ್ಯ ಮತ್ತು ಆರ್ಥಿಕ ಸಹಯೋಗವನ್ನು ತ್ವರಿತಗೊಳಿಸಲು ಪ್ರಧಾನಮಂತ್ರಿ ನೆತನ್ಯಾಹು ಅವರ ಬೆಂಬಲಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಪಾಲುದಾರಿಕೆಗೆ ಹಲವು ಯಶಸ್ಸು ಕಾದಿದೆ ಎಂಬ ವಿಶ್ವಾಸ ನನಗಿದೆ
ಧನ್ಯವಾದಗಳು!

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi