- ಭಾರತದ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಕೆ.ಪಿ. ಶರ್ಮಾ ಓಲಿ ಅವರ ಆಹ್ವಾನದ ಮೇರೆಗೆ 2018ರ ಮೇ 11 ರಿಂದ 12ರವರೆಗೆ ನೇಪಾಳ ಭೇಟಿ ನೀಡಿದ್ದರು.
- 2018ರಲ್ಲಿ ತಮ್ಮ ಎರಡನೇ ದ್ವಿಪಕ್ಷೀಯ ಸಭೆ ನಡೆಸಿದ ಇಬ್ಬರೂ ಪ್ರಧಾನಮಂತ್ರಿಯವರು, 2018ರ ಮೇ 11ರಂದು ಎರಡೂ ದೇಶಗಳ ನಡುವಿನ ಆಳವಾದ ಸ್ನೇಹಸಂಬಂಧ ಹಾಗೂ ತಿಳಿವಳಿಕೆಯನ್ನು ಪ್ರಚುರಪಡಿಸುವ ಸೌಹಾರ್ದ ಮತ್ತು ಅತ್ಯಂತ ಆಪ್ತ ವಾತಾವರಣದಲ್ಲಿನಿಯೋಗಮಟ್ಟದ ಮಾತುಕತೆ ನಡೆಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು2018ರ ಏಪ್ರಿಲ್ ನಲ್ಲಿ ನೇಪಾಳ ಪ್ರಧಾನಮಂತ್ರಿ ಓಲಿ ಅವರ ದೆಹಲಿಗೆ ಭೇಟಿ ವೇಳೆ ನಡೆದ ತಮ್ಮ ಭೇಟಿಯನ್ನು ಸ್ಮರಿಸಿದರು ಮತ್ತು ಹಿಂದೆ ಮಾಡಿಕೊಳ್ಳಲಾದ ಎಲ್ಲಾ ಒಪ್ಪಂದಗಳು ಮತ್ತು ಗ್ರಹಿಕೆಗಳನ್ನು ಅನುಷ್ಠಾನಕ್ಕೆ ತರುವ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭೇಟಿ ನೀಡಿದ ವೇಗವನ್ನು ಕಾಪಾಡಿಕೊಳ್ಳಲು ಸಮ್ಮತಿಸಿದರು. ಇತ್ತೀಚೆಗೆ ಪ್ರಧಾನಮಂತ್ರಿ ಓಲಿ ಅವರು ಭಾರತಕ್ಕೆ ಭೇಟಿ ನೀಡಿದ ವೇಳೆ ಎರಡೂ ಕಡೆಯವರು ಅಂಗೀಕರಿಸಿದ ಕೃಷಿ, ರೈಲ್ವೆ ಸಂಪರ್ಕ ಮತ್ತು ಒಳನಾಡ ಜಲ ಸಾರಿಗೆ ಅಭಿವೃದ್ಧಿಯಲ್ಲಿನ ದ್ವಿಪಕ್ಷೀಯ ಉಪಕ್ರಮಗಳನ್ನು ಸಮರ್ಥ ಜಾರಿಗೆ ಒಪ್ಪಿಗೆ ಸೂಚಿಸಿದರು. ಇದು ಈ ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಪರಿಣಾಮ ಬೀರಲಿವೆ.
- ವಿವಿಧ ಹಂತಗಳಲ್ಲಿ ಎರಡೂ ದೇಶಗಳ ನಡುವಿನ ಬಹುಮುಖಿ ಬಾಂಧವ್ಯ ಮತ್ತು ಆಪ್ತತೆಯನ್ನು ಪರಾಮರ್ಶಿಸಿದ ಇಬ್ಬರೂ ಪ್ರಧಾನಮಂತ್ರಿಯವರು, ವೈವಿಧ್ಯಮಯ ಕ್ಷೇತ್ರಗಳಲ್ಲಿನ ಹಾಲಿ ಸಹಕಾರವನ್ನು ಬಲಪಡಿಸುವ ಮತ್ತು ಸಮಾನತೆ, ಪರಸ್ಪರ ನಂಬಿಕೆ, ಗೌರವ ಮತ್ತು ಪರಸ್ಪರ ಪ್ರಯೋಜನದ ನೀತಿಯ ಆಧಾರದ ಮೇಲೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗಾಗಿ ಪಾಲುದಾರಿಕೆಯನ್ನು ವಿಸ್ತರಿಸುವ ಮೂಲಕ ದ್ವಿಪಕ್ಷೀಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಒಗ್ಗೂಡಿ ಶ್ರಮಿಸುವ ದೃಢ ನಿರ್ಧಾರವನ್ನು ಪುನರುಚ್ಚರಿಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು ದ್ವಿಪಕ್ಷೀಯ ಬಾಂಧವ್ಯದ ಸಂಪೂರ್ಣ ಪರಾಮರ್ಶೆಗಾಗಿ ಮತ್ತು ಆರ್ಥಿಕ ಹಾಗೂ ಅಭಿವೃದ್ಧಿ ಸಹಕಾರದ ಯೋಜನೆಗಳ ಜಾರಿಯನ್ನು ತ್ವರಿತಗೊಳಿಸಲು ವಿದೇಶ/ವಿದೇಶಾಂಗ ವ್ಯವಹಾರ ಸಚಿವಾಲಯ ಮಟ್ಟದಲ್ಲಿ ನೇಪಾಳ – ಭಾರತ ಜಂಟಿ ಆಯೋಗವೂ ಸೇರಿದಂತೆ ನಿಯಮಿತವಾದ ದ್ವಿಪಕ್ಷೀಯ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದರು.
- ಭಾರತ ಮತ್ತು ನೇಪಾಳ ನಡುವಿನ ವಾಣಿಜ್ಯ ಮತ್ತು ಆರ್ಥಿಕ ಬಾಂಧವ್ಯದ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಭಾರತದೊಂದಿಗೆ ನೇಪಾಳದ ವೃದ್ಧಿಸುತ್ತಿರುವ ವಾಣಿಜ್ಯ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಓಲಿ, ಈ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವ ಅಗತ್ಯ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ, ಇಬ್ಬರೂ ಪ್ರಧಾನಮಂತ್ರಿಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಸಮಗ್ರ ವಿಮರ್ಶೆಯನ್ನು ಜಂಟಿಯಾಗಿ ಪ್ರಾರಂಭಿಸಲು ಅನಧಿಕೃತ ವ್ಯಾಪಾರವನ್ನು ನಿಯಂತ್ರಿಸಲು ವ್ಯಾಪಾರ,ಸಾಗಣೆ ಮತ್ತು ಸಹಕಾರ ಮತ್ತು ಭಾರತೀಯ ಮಾರುಕಟ್ಟೆಗೆ ನೇಪಾಳ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸಲು,ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಮತ್ತು ನೇಪಾಳದ ಸಾಗಣೆ ವ್ಯಾಪಾರವನ್ನು ಸುಗಮಗೊಳಿಸುವ ದೃಷ್ಟಿಯಿಂದ ಸಂಬಂಧಿಸಿದ ಒಪ್ಪಂದಗಳ ಕುರಿತ ಅಂತರ ಸರ್ಕಾರೀಯ ಸಮಿತಿ ಸಭೆಯ ಫಲಶ್ರುತಿಯನ್ನು ಸ್ವಾಗತಿಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು, ಆರ್ಥಿಕ ಪ್ರಗತಿ ಮತ್ತು ಜನರ ಸಂಚಾರ ಉತ್ತೇಜಿಸುವಲ್ಲಿ ಸಂಪರ್ಕದ ಪಾತ್ರದ ವೇಗವರ್ಧಕ ಪಾತ್ರವನ್ನು ಒತ್ತಿ ಹೇಳಿದರು. ವಾಯು, ಭೂ ಮತ್ತು ಜಲದ ಆರ್ಥಿಕ ಮತ್ತು ಭೌತಿಕ ಸಂಪರ್ಕದ ಹೆಚ್ಚಳಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲು ಸಮ್ಮತಿಸಿದರು. ಸ್ವೇಹಮಯ ದ್ವಿಪಕ್ಷೀಯ ಬಾಂಧವ್ಯಕ್ಕೆ ಜನರೊಂದಿಗಿನ ಚಲನಶೀಲತೆಯನ್ನು ಪರಿಗಣಿಸಿದ ಇಬ್ಬರೂ ಪ್ರಧಾನಮಂತ್ರಿಗಳು, ನೇಪಾಳಕ್ಕೆ ಸಂಬಂಧಿತ ತಾಂತ್ರಿಕ ತಂಡಗಳ ಹೆಚ್ಚುವರಿ ವಾಯು ಪ್ರವೇಶದ ತಾಂತ್ರಿಕ ಚರ್ಚೆಯೂ ಸೇರಿದಂತೆ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸಹಕಾರ ವಿಸ್ತರಣೆಗೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
- ಇಬ್ಬರೂ ಪ್ರಧಾನಮಂತ್ರಿಗಳು, ಪರಸ್ಪರರ ಅನುಕೂಲಕ್ಕಾಗಿ ನದಿ ತರಬೇತಿ ಕಾಮಗಾರಿ,ಮುಳುಗಡೆ ಮತ್ತು ಪ್ರವಾಹ ನಿರ್ವಹಣೆ,ನೀರಾವರಿ,ಮತ್ತು ಹಾಲಿ ದ್ವಿಪಕ್ಷೀಯ ಯೋಜನೆಗಳ ಅನುಷ್ಠಾನದ ಗತಿಯನ್ನು ಹೆಚ್ಚಿಸುವ ಕ್ಷೇತ್ರಗಳಲ್ಲಿ ಜಲ ಸಂಪನ್ಮೂಲ ಸಹಕಾರವನ್ನು ಮುಂದುವರಿಸುವ ಮಹತ್ವವನ್ನು ಪುನರುಚ್ಚರಿಸಿದರು.ಮುಳುಗಡೆಯಾದ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಸುಸ್ಥಿರ ಪರಿಹಾರಕ್ಕಾಗಿ ಸೂಕ್ತ ಕ್ರಮ ಪರಿಗಣಿಸಲು ಜಂಟಿ ತಂಡ ರಚನೆಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು ನೇಪಾಳದಲ್ಲಿ 900 ಮೆವ್ಯಾ ಅರುಣ್–IIIಜಲ ವಿದ್ಯುತ್ ಯೋಜನೆಗೆ ಜಂಟಿಯಾಗಿ ಶಂಕುಸ್ಥಾಪನೆ ನೆರವೇರಿಸಿದರು. ಯೋಜನೆಯು ಕಾರ್ಯಗತವಾದಾಗ, ಎರಡೂ ರಾಷ್ಟ್ರಗಳ ನಡುವೆ ವಿದ್ಯುತ್ ಉತ್ಪಾದನೆ ಮತ್ತು ಮಾರಾಟದ ಸಹಕಾರ ಹೆಚ್ಚಳಕ್ಕೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಬ್ಬರೂ ಪ್ರಧಾನಮಂತ್ರಿಗಳು ಇತ್ತೀಚೆಗಷ್ಟೇ ಮುಕ್ತಾಯಗೊಂಡ ಅಂದರೆ 2018ರ ಏಪ್ರಿಲ್ 17ರಂದು ನಡೆದ ವಿದ್ಯುತ್ ವಲಯದ ಸಹಕಾರ ಕುರಿತ ಜಂಟಿಸ್ಟೀರಿಂಗ್ ಸಮಿತಿ ಸಭೆಯ ಫಲಶ್ರುತಿಯನ್ನು ಸ್ವಾಗತಿಸಿದರು. ದ್ವಿಪಕ್ಷೀಯ ವಿದ್ಯುತ್ ಮಾರಾಟ ಒಪ್ಪಂದದ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಅವರು ಸಮ್ಮತಿಸಿದರು.
- ಪ್ರಧಾನಮಂತ್ರಿ ಮೋದಿ ಅವರು ಜನಕ್ ಪುರ ಮತ್ತು ಮುಕ್ತಿನಾಥಕ್ಕೂ ಭೇಟಿ ನೀಡಿದ್ದರು ಮತ್ತು ಜನಕ್ಪುರ ಮತ್ತು ಕಠ್ಮಂಡುವಿನಲ್ಲಿ ನಾಗರಿಕ ಸತ್ಕಾರ ಕೂಟದಲ್ಲೂ ಭಾಗಿಯಾದರು.
- ಎರಡೂ ರಾಷ್ಟ್ರಗಳ ಮತ್ತು ಜನತೆಯ ನಡುವೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಪ್ತ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಇಬ್ಬರೂ ಪ್ರಧಾನಮಂತ್ರಿಗಳು ಸೀತಾಮಾತೆಯ ಜನ್ಮಭೂಮಿ ಜನಕ್ಪುರವನ್ನು ಅಯೋಧ್ಯೆ ಹಾಗೂ ರಾಮಾಯಣದ ಇತರತಾಣಗಳೊಂದಿಗೆ ಸಂಪರ್ಕಿಸುವ ನೇಪಾಳ – ಭಾರತ ರಾಮಾಯಣ ಸರ್ಕೀಟ್ ಗೂ ಚಾಲನೆ ನೀಡಿದರು. ಜನಕ್ಪುರದಲ್ಲಿ, ಇಬ್ಬರೂ ಪ್ರಧಾನಮಂತ್ರಿಗಳು ಜನಕ್ಪುರ ಮತ್ತು ಅಯೋಧ್ಯೆ ನಡುವಿನ ನೇರ ಬಸ್ ಸೇವೆಯನ್ನೂ ಉದ್ಘಾಟಿಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು ಎಲ್ಲ ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುವ ಉದ್ದೇಶದೊಂದಿಗೆ 2018ರ ಸೆಪ್ಟೆಂಬರೊಳಗೆ ಬಾಕಿ ಇರುವ ವಿಷಯಗಳನ್ನು ನಿಭಾಯಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
- ಇಬ್ಬರೂ ಪ್ರಧಾನಮಂತ್ರಿಗಳು ಗುರುತಿಸಲಾದ ವಲಯಗಳಲ್ಲಿ ಅರ್ಥಪೂರ್ಣವಾದ ಸಹಕಾರ ಮೂಡಿಸಲು ಬಿಮ್ ಸ್ಟೆಕ್, ಸಾರ್ಕ್ ಮತ್ತು ಬಿಬಿಐಎನ್ ಚೌಕಟ್ಟಿನಡಿಯಲ್ಲಿ ಪ್ರಾದೇಶಿಕ ಮತ್ತು ಉಪ ಪ್ರಾದೇಶಿಕ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
- ಪ್ರಧಾನಮಂತ್ರಿ ಮೋದಿ ಅವರ ನೇಪಾಳದ ಮೂರನೇ ಮೈಲುಗಲ್ಲು ಭೇಟಿ, ಎರಡೂ ರಾಷ್ಟ್ರಗಳ ನಡುವಿನ ದೀರ್ಘಕಾಲದ ಸ್ನೇಹಸಂಬಂಧವನ್ನು ಮತ್ತಷ್ಟು ಹೆಚ್ಚಿಸಿದೆ ಮತ್ತು ನಮ್ಮ ಬೆಳೆಯುತ್ತಿರುವ ಪಾಲುದಾರಿಕೆಗೆ ಹೊಸ ಚೈತನ್ಯ ನೀಡಿದೆ ಎಂಬುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಒಪ್ಪಿಕೊಂಡರು.
- ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಓಲಿ ಅವರಿಗೆ ಅವರ ಆತ್ಮೀಯ ಆಥಿತ್ಯ ಮತ್ತು ಆಹ್ವಾನಕ್ಕೆ ಧನ್ಯವಾದ ಅರ್ಪಿಸಿದರು.
- ಪ್ರಧಾನಮಂತ್ರಿ ಮೋದಿ ಪ್ರಧಾನಮಂತ್ರಿ ಓಲಿ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಪ್ರಧಾನಮಂತ್ರಿ ಓಲಿ ಈ ಆಹ್ವಾನ ಅಂಗೀಕರಿಸಿದರು. ರಾಜತಾಂತ್ರಿಕ ಮಾರ್ಗಗಳ ಮೂಲಕ ಭೇಟಿ ದಿನಾಂಕ ಆಖೈರುಗೊಳಿಸಲಾಗುವುದು.
Explore More
ಜನಪ್ರಿಯ ಭಾಷಣಗಳು
Media Coverage
Nm on the go

Citizens Appreciate Economic Surge: India Soars with PM Modi’s Leadership
PM Modi’s 'Mann Ki Baat' once again inspires the nation! From Chaitra Navratri to sustainability, water conservation, and youth empowerment, his vision shapes a progressive India. His unwavering dedication to national growth is truly commendable. Grateful for his leadership! pic.twitter.com/0yWuvB5MGq
— Shrayesh (@shrayesh65) March 30, 2025
Tribal empowerment gets a major boost with PM Vanbandhu Kalyan Yojana! Focused on education, healthcare, and economic upliftment, it’s ensuring holistic development for India’s indigenous communities. PM Modi’s commitment to inclusive growth is making a difference! #TribalWelfare pic.twitter.com/BipDJ4NCTk
— Shivam (@Shivam1998924) March 30, 2025
IT'S POURING DOLLARS
— Zahid Patka (Modi Ka Parivar) (@zahidpatka) March 30, 2025
Forex reserves rises to over four-month high, jumps $4.52 billion to $658.8 billion
Foreign Currency Assets
Up $1.67 Bn At $558.86 Bn
Gold reserves up by USD 2.883 billion to USD 77.275 billion
Thanks PM @narendramodi Ji https://t.co/fL5HENe6WZ@PMOIndia pic.twitter.com/KtPJTxBbRx
Joined the latest Mann Ki Baat session with PM and I'm inspired by his vision for a self-reliant India! He highlighted the importance of unity, cultural heritage, & innovation. The session also touched on the growing animation & gaming industry. Exciting times ahead for India!
— Aashima (@Aashimaasingh) March 30, 2025
महुआ के फूल हमारी परंपरा, संस्कृति और आजीविका का अहम हिस्सा रहे हैं। आदिवासी समुदायों की यह अनमोल विरासत अब नए अवसरों के साथ आगे बढ़ रही है। प्रधानमंत्री @narendramodi जी के प्रयासों से यह यात्रा और समृद्ध हो रही है! #Mahua #Heritage #MannKiBaat pic.twitter.com/u4GZfnRE8h
— Vimal Mishra (@VimalMishr29) March 30, 2025
A giant leap for India's space ambitions! 🚀
— Prerna Sharma (@PrernaS99946384) March 30, 2025
ISRO advances in developing a semi-cryogenic engine, enhancing our indigenous capabilities for heavier payloads. Kudos to PM @narendramodi for empowering #AatmanirbharBharat in space exploration#ISRO #SpaceTech #MakeInIndia pic.twitter.com/VHv7IuUjDL
Thank you, Shri Modi Ji, for your unwavering commitment to Babasaheb Ambedkar’s vision. Deekshabhoomi stands as a beacon of equality and justice, inspiring generations. Your leadership ensures that India's progress remains rooted in dignity, empowerment, and social harmony. https://t.co/9DQg8uRspt
— Aditya Sethi (@BIKASHC85165894) March 30, 2025
Under the visionary leadership of PM Modi, India is making rapid strides across various sectors. Initiatives like #MakeInIndia, #DigitalIndia, and #AtmanirbharBharat are driving the nation towards #ViksitBharat, fostering self-reliance and a prosperous future
— Rishabh_Jha (@d_atticus_) March 30, 2025
India, under guidance of PM Modi, is always ready to help.The Earthquake in Mynmar has left behind destruction,loss of lives. Apart from relief materials, India sends a team of 118 members from Indian Army Field Hospital Unit 2provide medical services 2d affected #OperationBrahma pic.twitter.com/FzGaG3F49z
— Rukmani Varma 🇮🇳 (@pointponder) March 30, 2025