ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಶ್ಲಾಘಿಸಿದ್ದಾರೆ. ಇದು ಸಹಕಾರ, ನಾವೀನ್ಯತೆ ಮತ್ತು ಹಂಚಿಕೆಯ ಆಕಾಂಕ್ಷೆಗಳು ಮತ್ತು ಹಂಚಿಕೆಯ ಪ್ರಗತಿಯ ದಾರಿದೀಪವಾಗಲಿದೆ ಎಂದು ಅವರು ಭರವಸೆ ನೀಡಿದರು.
ಪ್ರಧಾನಮಂತ್ರಿ ಅವರು ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ
"ಹಂಚಿಕೊಂಡ ಆಕಾಂಕ್ಷೆಗಳು ಮತ್ತು ಕನಸುಗಳ ಪ್ರಯಾಣವನ್ನು ಪಟ್ಟಿಮಾಡುತ್ತಾ ಹೋದಾಗ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮುಂಬರುವ ದಿನಗಳಲ್ಲಿ ಸಹಕಾರ, ನಾವೀನ್ಯತೆ ಮತ್ತು ಹಂಚಿಕೆಯ ಪ್ರಗತಿಯ ದಾರಿದೀಪವಾಗಲಿದೆ ಎಂಬ ಭರವಸೆ ನೀಡುತ್ತದೆ. ಇತಿಹಾಸವು ತೆರೆದುಕೊಳ್ಳುತ್ತಿದ್ದಂತೆ, ಖಂಡಗಳಾದ್ಯಂತ ಮಾನವ ಪ್ರಯತ್ನ ಮತ್ತು ಏಕತೆಗೆ ಈ ಕಾರಿಡಾರ್ ಸಾಕ್ಷಿಯಾಗಲಿ."
Charting a journey of shared aspirations and dreams, the India-Middle East-Europe Economic Corridor promises to be a beacon of cooperation, innovation, and shared progress. As history unfolds, may this corridor be a testament to human endeavour and unity across continents. pic.twitter.com/vYBNo2oa5W
— Narendra Modi (@narendramodi) September 9, 2023