ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಲಕ್ಸೆಂಬರ್ಗ್ ಪ್ರಧಾನಮಂತ್ರಿ ಗೌರವಾನ್ವಿತ ಝೇವಿಯರ್ ಬೆಟೆಲ್ ಅವರ ನಡುವೆ 2020ರ ನವೆಂಬರ್ 19ರಂದು ವರ್ಚುವಲ್ ಶೃಂಗಸಭೆ ನಡೆಯಲಿದೆ.
ಕಳೆದ ಎರಡು ದಶಕಗಳಿಂದೀಚೆಗೆ ಭಾರತ ಮತ್ತು ಲಕ್ಸೆಂಬರ್ಗ್ ನಡುವೆ ನಡೆಯುತ್ತಿರುವ ಮೊದಲ ಶೃಂಗಸಭೆ ಇದಾಗಿದೆ. ಉಭಯ ನಾಯಕರು ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ–ಲಕ್ಸೆಂಬರ್ಗ್ ನಡುವಿನ ಸಂಬಂಧ ಬಲವರ್ಧನೆ ಸೇರಿದಂತೆ ದ್ವೀಪಕ್ಷೀಯ ಸಂಬಂಧಗಳ ನಾನಾ ಆಯಾಮಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೆ, ಪರಸ್ಪರ ಹಿತಾಸಕ್ತಿಯ ಜಾಗತಿಕ ಮತ್ತು ಅಂತಾರಾಷ್ಟ್ರೀಯ ವಿಚಾರಗಳ ಬಗ್ಗೆಯೂ ಇಬ್ಬರೂ ನಾಯಕರು ತಮ್ಮ ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಲಕ್ಸೆಂಬರ್ಗ್ ಗರಿಷ್ಠ ಮಟ್ಟದ ಮಾತುಕತೆಗಳ ವಿನಿಮಯವನ್ನು ಕಾಯ್ದುಕೊಳ್ಳುವುದನ್ನು ಮುಂದುವರಿಸಿವೆ. ಈ ಇಬ್ಬರೂ ಪ್ರಧಾನಮಂತ್ರಿಗಳು ಈ ಹಿಂದೆ ಮೂರು ಭಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.