India signs historic Nuclear Agreement that opens up market for cooperation in the field of nuclear energy between India & Japan
Nuclear agreement opens up new avenues of civil nuclear energy cooperation with international partners
Key MoU inked to promote skill development. Japan to set up skill development institutes in Gujarat, Rajasthan, Karnataka
Japan to establish skill development centres in 3 states. 30000 people to be trained in 10 years
Skill development programmes to begin with Suzuki in Gujarat, with Toyota in Karnataka and with Daikin in Rajasthan
Task force to be set up to develop a concrete roadmap for phased transfer of technology and #MakeInIndia
Mumbai-Ahmedabad High Speed Rail on fast track with PM Modi’s Japan visit
Tokyo 2020 Olympics and Paralympics –Japan to promote sharing of experiences, skills, techniques, information and knowledge
Strongest ever language on terrorism in a Joint Statement with Japan

 

  1. ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಹೊತ್ತು, ಜಪಾನ್ ಪ್ರಧಾನಮಂತ್ರಿ ಘನತೆವೆತ್ತ  ಶ್ರೀ. ಶಿಂಜೋ ಅಬೆ ಅವರ ಆಹ್ವಾನದ ಮೇರೆಗೆ ಜಪಾನ್ ಅಧಿಕೃತ ಪ್ರವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ಇಂದು, ಅಂದರೆ 2016ರ ನವೆಂಬರ್ 11ರಂದು ಇಬ್ಬರೂ ಪ್ರಧಾನಮಂತ್ರಿಯವರು ಟೋಕಿಯೋದಲ್ಲಿ ವಿಸ್ತೃತ ಶ್ರೇಣಿಯ ಸಮಾಲೋಚನೆಯನ್ನು ನಡೆಸಿದರು, ಈ ಸಂದರ್ಭದಲ್ಲಿ 2015ರ ಡಿಸೆಂಬರ್ 12ರಂದು ರೂಪಿಸಲಾದ ‘ಭಾರತ ಮತ್ತು ಜಪಾನ್ ಮುನ್ನೋಟ 2025’ರಲ್ಲಿ ಒತ್ತಿಹೇಳಿರುವಂತೆ ವಿಶೇಷ ಕಾರ್ಯತಂತ್ರಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯ ಸಮಗ್ರ ಪರಾಮರ್ಶೆ ನಡೆಸಿದರು. 2014ರ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಪಾನ್ ಗೆ ಭೇಟಿ ನೀಡಿದಾಗಿನಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ದ್ವಿಪಕ್ಷೀಯ ಬಾಂಧವ್ಯದಲ್ಲಿ ಗಣನೀಯ ಪ್ರಗತಿ ಆಗಿರುವುದನ್ನು ಅವರು ಗುರುತಿಸಿದರು.

ಸಹಭಾಗಿತ್ವದ ಸಮಷ್ಟೀಕರಣ

  1. ಇಬ್ಬರೂ ಪ್ರಧಾನಮಂತ್ರಿಯವರು, ಬುದ್ಧನ ಚಿಂತನೆಯ ಸಮಾನ ಪರಂಪರೆ ಮತ್ತು ಪ್ರಜಾಪ್ರಭುತ್ವಕ್ಕೆ ಹಂಚಿಕೆಯ ಬದ್ಧತೆ, ಮುಕ್ತತೆ ಮತ್ತು ಶಾಂತಿಯುವ ಸಹ ಬಾಳ್ವೆಗೆ ಆಡಳಿತ ಕಾನೂನಿನ ಮೌಲ್ಯ ಸೇರಿದಂತೆ  ಎರಡೂ ರಾಷ್ಟ್ರಗಳ ಜನರ ನಡುವಿನ ನಾಗರಿಕರ ಆಳವಾದನಾಗರಿಕತೆಯ ನಂಟನ್ನು ಪ್ರಶಂಸಿಸಿದರು. ಎರಡೂ ರಾಷ್ಟ್ರಗಳ ದೀರ್ಘಕಾಲೀನ ಪಾಲುದಾರಿಕೆಗೆ ಅವಕಾಶ ನೀಡುವ ರಾಜಕೀಯ, ಆರ್ಥಿಕ ಮತ್ತು ಕಾರ್ಯತಂತ್ರಾತ್ಮಕ ಹಿತಾಸಕ್ತಿಯ ಅತ್ಯುನ್ನತ ಸ್ತರಗಳ ಅವಕಾಶ ಒದಗಿಸುವ ಕ್ರಮವನ್ನು ಅವರು ಸ್ವಾಗತಿಸಿದರು.
  2. ಜಗತ್ತಿನ ಪ್ರಗತಿಗೆ ಭಾರತ – ಪೆಸಿಫಿಕ್ ವಲಯದ ಪ್ರಮುಖ ಚಾಲಕತ್ವದ ಮಹತ್ವ ಹೆಚ್ಚುತ್ತಿರುವುದನ್ನು ಇಬ್ಬರೂ ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅವರು ವಲಯದ ಸಮಗ್ರ ಮತ್ತು ಸಾಂಸ್ಕೃತಿಕ ಪ್ರಗತಿಗೆ ಪ್ರಜಾಪ್ರಭುತ್ವ, ಶಾಂತಿ, ಕಾನೂನಿನ ಪಾತ್ರ, ಸಹಿಷ್ಣುತೆಯ ಮಹತ್ವದ ಮೌಲ್ಯವನ್ನೂ ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅಬೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ  ಪೂರ್ವದತ್ತ ನೀತಿಯ ಅಡಿಯಲ್ಲಿ ವಲಯದಲ್ಲಿನ ಸಕ್ರಿಯ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಪ್ರಧಾನಮಂತ್ರಿ ಮೋದಿ ಅವರಿಗೆ ಮುಕ್ತ ಮತ್ತು ಭಾರತ – ಪೆಸಿಫಿಕ್ ನ ಮುಕ್ತ ಕಾರ್ಯತಂತ್ರದ ಬಗ್ಗೆ ವಿವರಿಸಿದರು. ಪ್ರಧಾನಮಂತ್ರಿ ಮೋದಿ ಅವರು ಸಹ ಜಪಾನ್  ಈ ಕಾರ್ಯತಂತ್ರದಡಿ ವಲಯದಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು. ಅವರು ಆಳವಾದ ದ್ವಿಪಕ್ಷೀಯ ಸಹಕಾರ ಮತ್ತು ನೀತಿ ಮತ್ತು ಕಾರ್ಯತಂತ್ರದ ನಡುವಿನ ಸಹಕಾರದ ಸಾಮರ್ಥ್ಯವನ್ನು ಗುರುತಿಸಿದರು.
  3. ವಲಯದ ಪ್ರಗತಿಯ ಸಾಧನೆಗೆ ಪ್ರಮುಖವಾದ ಮುಕ್ತ ಮತ್ತು ಇಂಡೋ –ಪೆಸಿಫಿಕ್ ಮುಕ್ತ ವಲಯದ ಮೂಲಕ ಏಷ್ಯಾ ಮತ್ತು ಆಫ್ರಿಕಾ ನಡುವೆ ಸಂಪರ್ಕವನ್ನು ಸುಧಾರಣೆ ಮಾಡುವ ಬಗ್ಗೆಯೂ ಅವರು, ಒತ್ತು ನೀಡಿದರು.ಭಾರತದ ಪೂರ್ವದತ್ತ ಕ್ರಮ ನೀತಿ ಮತ್ತು ಆಪ್ತವಾದ ಸಹಯೋಗ, ದ್ವಿಪಕ್ಷೀಯ ಮತ್ತು ಉತ್ತಮ ಪ್ರಾದೇಶಿಕ ಏಕತೆ ಹಾಗೂ ಸುಧಾರಿತ ಸಂಪರ್ಕ ಜೊತೆಗೆ ಕೈಗಾರಿಕಾ ಜಾಲ ಆಧಾರಿತ ನೀತಿಗಳು ಹಾಗೂ ಪರಸ್ಪರ ಮಾತುಕತೆ ಹಾಗೂ ನಂಬಿಕೆಯೊಂದಿಗಿನ  ಜಪಾನ್ ನ ಗುಣಮಟ್ಟದ ಮೂಲಸೌಕರ್ಯಕ್ಕೆ ಪಾಲುದಾರಿಕೆ ವಿಸ್ತರಣೆಯ ಸಮಷ್ಟಿ ಸೂತ್ರಕ್ಕೆ ಅವರು ನಿರ್ಧರಿಸಿದರು.
  4. ಜಾಗತಿಕ ಕಾರ್ಯಕ್ರಮದ ಸಂಕೀರ್ಣತೆ ಮತ್ತು ಅಂತರಅವಲಂಬನೆಯ ಆಳವನ್ನು ಪರಾಮರ್ಶಿಸಿದ ಇಬ್ಬರೂ ಪ್ರಧಾನಮಂತ್ರಿಯವರು, ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆ ನಿಗ್ರಹ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯ ಸುಧಾರಣೆಗಳ ವಿಚಾರದಲ್ಲಿ ತಮ್ಮ ಸಹಕಾರ ವಿಸ್ತರಿಸಲು ನಿರ್ಧರಿಸಿದರು.   
  5. ಜಪಾನ್ ನ ಬಂಡವಾಳ, ನಾವಿನ್ಯತೆ ಮತ್ತು ತಂತ್ರಜ್ಞಾನವನ್ನು ಭಾರತದ ಉನ್ನತ ಪ್ರಗತಿಯ ಆರ್ಥಿಕತೆಯಲ್ಲಿ ಲಭ್ಯವಿರುವ ಶ್ರೀಮಂತ ಮಾನವಶಕ್ತಿ ಮತ್ತು ಅವಕಾಶಗಳೊಂದಿಗೆ ಸೇರಿಸಿ ಅಪಾರ ಸಾಮರ್ಥ್ಯ ಪಡೆಯುವುದನ್ನು ಗಮನದಲ್ಲಿಟ್ಟುಕೊಂಡು, ಇಬ್ಬರೂ ಪ್ರಧಾನಮಂತ್ರಿಯವರು ಉನ್ನತ ತಂತ್ರಜ್ಞಾನ, ಬಾಹ್ಯಾಕಾಶ, ಶುದ್ಧ ಇಂಧನ ಮತ್ತು ಇಂಧನ ವಲಯ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಸ್ಮಾರ್ಟ್ ನಗರಗಳು, ಜೈವಿಕ ತಂತ್ರಜ್ಞಾನ, ಔಷಧ ವಿಜ್ಞಾನ, ಐಸಿಟಿ ಮತ್ತು ಜಾಗತಿಕ ಪಾಲುದಾರಿಕೆ ಹಾಗೂ ವಿಶೇಷ ಕಾರ್ಯತಂತ್ರಕ್ಕೆ ಶೈಕ್ಷಣಿಕ ಮತ್ತು ಕೌಶಲ ಅಭಿವೃದ್ಧಿಯ ಸಹಕಾರ ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. 

ಸುರಕ್ಷಿತ ಮತ್ತು ಸ್ಥಿರ ವಿಶ್ವಕ್ಕೆ ಬಲವಾದ ಪಾಲುದಾರಿಕೆಯ ನಿರ್ಮಾಣ

  1. ಭಾರತ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಮತ್ತು ಪ್ರಗತಿಗಾಗಿ ಜಪಾನ್ ಮತ್ತು ಭಾರತದ ಪಾತ್ರವನ್ನು ಪ್ರತಿಪಾದಿಸಿದ ಇಬ್ಬರೂ ಪ್ರಧಾನಮಂತ್ರಿಗಳು, ತಮ್ಮ ರಕ್ಷಣೆ ಮತ್ತು ಭದ್ರತೆಯ ಸಹಕಾರವನ್ನು ಮತ್ತಷ್ಟು ಸಮಗ್ರಗಳಿಸುವ ಅಗತ್ಯವನ್ನೂ ಪುನರುಚ್ಚರಿಸಿದರು. ರಕ್ಷಣಾ ಸಲಕರಣೆ ಮತ್ತು ತಂತ್ರಜ್ಞಾನ ವರ್ಗಾವಣೆ ಮತ್ತು ವರ್ಗೀಕೃತ ಸೇನಾ ಮಾಹಿತಿಯ ಸಂರಕ್ಷಣೆಗೆ ಸಂಬಂಧಿಸಿದ ಭದ್ರತಾ ಕ್ರಮಗಳ ಕುರಿತಂತೆ ಎರಡು ರಕ್ಷಣಾ ಚೌಕಟ್ಟಿನ ಒಪ್ಪಂದಗಳು ಜಾರಿಗೆ ಬಂದಿರುವುದನ್ನುಅವರು ಸ್ವಾಗತಿಸಿದರು. ರಕ್ಷಣಾ ಸಾಧನ ಮತ್ತು ತಂತ್ರಜ್ಞಾನ ಸಹಕಾರ ಕುರಿತ ಜಂಟಿ ಕಾರ್ಯಪಡೆಯ ವಿಸ್ತೃತ ಮಾತುಕತೆಯ ಮೂಲಕ ನಿರ್ದಿಷ್ಟ ಸಾಧನಗಳಿಗೆ ಸಂಬಂಧಿಸಿದಂತೆ ಎರಡೂ ಕಡೆಯ ಸಹಯೋಗ ಮತ್ತು ತಾಂತ್ರಿಕ ಸಹಕಾರ, ಸಹ ಅಭಿವೃದ್ಧಿ ಮತ್ತು ಸಹ ಉತ್ಪಾದನೆ ಮೂಲಕ ರಕ್ಷಣಾ ಕಾರ್ಯಕ್ರಮಗಳ ಹೆಚ್ಚಿನ ವಿಸ್ತರಣೆಯ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.
  2. ದೆಹಲಿಯಲ್ಲಿ ನಡೆದ ರಕ್ಷಣಾ ಸಚಿವಾಲಯ ಮಟ್ಟದ ಯಶಸ್ವೀ ವಾರ್ಷಿಕ ಮಾತುಕತೆ, ಮಲಬಾರ್ ಸಮರಾಭ್ಯಾಸದಲ್ಲಿ ಹಾಗೂ  ವಿಶಾಖಪಟ್ಟಣದ ಕರಾವಳಿಯಲ್ಲಿ ನಡೆದ ಸಮರ ನೌಕಾ ಕಸರತ್ತಿನಲ್ಲಿ  ನಿಯಮಿತವಾಗಿ ಜಪಾನ್  ಪಾಲ್ಗೊಳ್ಳುತ್ತಿರುವುದನ್ನು ಇಬ್ಬರೂ ಪ್ರಧಾನಮಂತ್ರಿಯವರು ಪ್ರಶಂಸಿಸಿದರು. “2+2” ಮಾತುಕತೆಯ ಮೂಲಕ ದ್ವಿಪಕ್ಷೀಯ ಭದ್ರತೆ ಮತ್ತು ರಕ್ಷಣೆ, ರಕ್ಷಣಾ ನೀತಿಯ ಮಾತುಕತೆ, ಸೇನೆಯಿಂದ ಸೇನೆಯೊಂದಿಗಿನ ಮಾತುಕತೆ ಮತ್ತು ಕರಾವಳಿ ಭದ್ರತಾ ಪಡೆಗಳ ನಡುವಿನ ಸಹಕಾರ  ಮಾತುಕತೆಯನ್ನು ಇನ್ನೂ ಹೆಚ್ಚು ಆಳಗೊಳಿಸುವ ಇಚ್ಛೆಯನ್ನು ಪುನರುಚ್ಚರಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ವಾಯುಪಡೆ ಸಿಬ್ಬಂದಿಯ ಆರಂಭಿಕ ಮಾತುಕತೆಯನ್ನೂ ಅವರು ಸ್ವಾಗತಿಸಿದರು. ಈಗ ಎರಡೂ ಕಡೆಯವರು ಸಾಂಸ್ಥಿಕವಾಗಿ ವಿಸ್ತೃತ ಶ್ರೇಣಿಯ ಮಾತುಕತೆಯ ವ್ಯವಸ್ಥೆಯನ್ನು ತಮ್ಮ ಸೇವೆಯಲ್ಲಿ ಅಳವಡಿಸಿಕೊಂಡಿದ್ದಾರೆ. ಇಬ್ಬರೂ ಪ್ರಧಾನಮಂತ್ರಿಗಳು ಮಾನವತೆಯ ಸಹಕಾರ ಮತ್ತು ಪ್ರಕೃತಿ ವಿಕೋಪ ಪರಿಹಾರ ಪ್ರಯತ್ನ ಮತ್ತು ಮತ್ತೊಬ್ಬರ ಕ್ಷೇತ್ರದ ಸಿಬ್ಬಂದಿಗೆ ತರಬೇತಿ ವಿನಿಮಯ ಕುರಿತಂತೆ ರಕ್ಷಣಾ ವಲಯದಲ್ಲಿ ಮಾತುಕತೆ ಮತ್ತು ಸಹಕಾರ ವಿಸ್ತರಣೆಗೆ ತಮ್ಮ ಮಾತುಕತೆಯ ವಿನಿಮಯಕ್ಕೆ ಸಮ್ಮತಿ ಸೂಚಿಸಿದರು.
  3. ಯುಎಸ್ 2 ಆಂಪೀಬಿಯನ್ ವಿಮಾನಂತಹ ಅತ್ಯಾಧುನಿಕ ರಕ್ಷಣಾ ವೇದಿಕೆಯನ್ನು ಒದಗಿಸಲು ಜಪಾನ್ ಸಿದ್ಧವಾಗಿರುವುದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಶಂಸಿಸಿದರು. ಇದು ಎರಡೂ ರಾಷ್ಟ್ರಗಳ ನಡುವಿನ ಉನ್ನತ ಸ್ತರದ ನಂಬಿಕೆ  ಮತ್ತು ಭಾರತ ಮತ್ತು ಜಪಾನ್ ತಮ್ಮ ದ್ವಿಪಕ್ಷೀಯ ರಕ್ಷಣಾ ವಿನಿಮಯದಲ್ಲಿ ಎಷ್ಟು ದೂರ ಕ್ರಮಿಸಿವೆ ಎಂಬುದರ ಸಂಕೇತವಾಗಿದೆ.

ಪ್ರಗತಿಗಾಗಿ ಪಾಲುದಾರಿಕೆ

  1. ಪ್ರಧಾನಮಂತ್ರಿ ಮೋದಿ ಅವರು ಪ್ರಧಾನಮಂತ್ರಿ ಅಬೆ ಅವರಿಗೆ ತಮ್ಮ ಸರ್ಕಾರ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ವಚ್ಛ ಭಾರತ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ವಿವರಿಸಿದರು. ಓಡಿಎ ಸೇರಿದಂತೆ ಜಪಾನ್ ನ ಸಾರ್ವಜನಿಕ ಮತ್ತು ಖಾಸಗಿ ವಲಯದ ಹೂಡಿಕೆಯ ಸಕ್ರಿಯ ಸಂಗ್ರಹಣೆ, ಅತ್ಯಾಧುನಿಕ ಕೌಶಲ ಮತ್ತು ತಂತ್ರಜ್ಞಾನ ವಿನಿಮಯದ ಮೂಲಕ ಈ ಉಪಕ್ರಮಗಳಿಗೆ ಜಪಾನ್ ನ ದೃಢ ಬೆಂಬಲವನ್ನು ಪ್ರಧಾನಮಂತ್ರಿ ಅಬೆ ಅವರು ವ್ಯಕ್ತಪಡಿಸಿದರು. ಈ ಉಪಕ್ರಮಗಳು ಭಾರತ ಮತ್ತು ಜಪಾನ್ ನ ಖಾಸಗಿ ವಲಯದ ಹೆಚ್ಚಿನ ಸಹಯೋಗಕ್ಕೆ ಗಣನೀಯ ಅವಕಾಶಗಳನ್ನು ಒದಗಿಸುತ್ತವೆ ಎಂದು ಇಬ್ಬರೂ ಪ್ರಧಾನಮಂತ್ರಿಗಳು ಒತ್ತಿ ಹೇಳಿದರು.
  2. 2016ರಲ್ಲಿಯೇ ಮೂರು ಬಾರಿ ಜಂಟಿ ಸಮಿತಿ ಮಾತುಕೆ ನಡೆಸುವ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಮಹತ್ವಾಕಾಂಕ್ಷೆಯ ಯೋಜನೆಯಾದ ಮುಂಬೈ – ಅಲಹಾಬಾದ್ ಹೈ ಸ್ಪೀಡ್ ರೈಲು (ಎಂ.ಎ.ಎಚ್.ಎಸ್.ಆರ್.) ಯೋಜನೆಯಲ್ಲಿ ಆಗಿರುವ ಸ್ಥಿರ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು.
  3. ಎಂ.ಎ.ಎಚ್.ಎಸ್.ಆರ್ ಯೋಜನೆಗೆ ನಿಗದಿ ಮಾಡಿರುವ ಕಾಲಮಿತಿ ಕುರಿತಂತೆ ಪ್ರಸ್ತಾಪಿಸಿದ ಇಬ್ಬರೂ ಪ್ರಧಾನಮಂತ್ರಿಯವರು, ಸಾಮಾನ್ಯ ಸಮಾಲೋಚನೆ ಕಾರ್ಯ ಡಿಸೆಂಬರ್ 2016ರಲ್ಲಿ ಆರಂಭವಾಗಲಿದ್ದು, ನಿರ್ಮಾಣ ಕಾರ್ಯ 2018ರ ಅಂತ್ಯದಲ್ಲಿ ಆರಂಭಗೊಳ್ಳಲಿದೆ ಮತ್ತು 2023ರಲ್ಲಿ ಇದು ಕಾರ್ಯಾರಂಭಮಾಡಲಿದೆ ಎಂದರು.
  4. ಮೇಕ್ ಇನ್ ಇಂಡಿಯಾ ಮತ್ತು ತಂತ್ರಜ್ಞಾನದ ಹಂತಹಂತದ ವರ್ಗಾವಣೆಗಾಗಿ ಸಮಗ್ರ ನಕ್ಷೆ ಅಬಿವೃದ್ಧಿ ಪಡಿಸಲು ಎರಡೂ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ಸ್ಥಾಪಿಸುವುದನ್ನೂ ಇಬ್ಬರೂ ಪ್ರಧಾನಿಗಳು ಸ್ವಾಗತಿಸಿದರು. ಅತಿ ವೇಗದ ರೈಲ್ವೆಯಲ್ಲಿ ಎರಡೂ ಕಡೆಯವರು ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಲು ಪಾಲುದಾರಿಕೆಯನ್ನು ಬಲಪಡಿಸಲಿವೆ. ಎಚ್.ಎಸ್.ಆರ್. ಸಂಸ್ಥೆ ಸ್ಥಾಪನೆ ಮತ್ತು ಅದರ ತರಬೇತಿ ಕಾರ್ಯಕ್ರಮದ ಪ್ರಾಥಮಿಕ ಕಾರ್ಯವನ್ನು ಆರಂಭಿಸುವುದೂ ಸೇರಿದಂತೆ ಅತಿ ವೇಗದ ರೈಲು ತಂತ್ರಜ್ಞಾನ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಯೋಜಿತ ಮಾದರಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯ ಮಹತ್ವದ ಪಾತ್ರವನ್ನು ಇಬ್ಬರೂ ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. 2017ರಲ್ಲಿ ಗುದ್ದಲಿಪೂಜೆ ಮಾಡುವ ಮೂಲಕ ಎಂ.ಎ.ಎಚ್.ಎಸ್.ಆರ್. ಯೋಜನೆಯನ್ನು ತ್ವರಿತಗೊಳಿಸುವ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಗುರುತಿಸಿದರು. ಭಾರತ ಮತ್ತು ಜಪಾನ್ ನಡುವೆ ಆಧುನೀಕರಣ ಮತ್ತು ಭಾರತದ ಸಾಂಪ್ರದಾಯಿಕ ರೈಲ್ವೆ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತಂತೆ ಹೆಚ್ಚುತ್ತಿರುವ ಸಹಯೋಗವನ್ನು ಇಬ್ಬರೂ ಪ್ರಧಾನಮಂತ್ರಿಯವರು ಗುರುತಿಸಿದರು.
  5. ಇಬ್ಬರೂ ಪ್ರಧಾನಮಂತ್ರಿಗಳು ಭಾರತದಲ್ಲಿ ಉತ್ಪಾದನಾ ವಲಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯನ್ನು ಉತ್ಪಾದನಾ ಕೌಶಲ ವರ್ಗಾವಣೆ ಉತ್ತೇಜನ ಕಾರ್ಯಕ್ರಮದ ಮೂಲಕ ಮಾಡಲು ನಿರ್ಧರಿಸಿದರು. ಈ ಕಾರ್ಯಕ್ರಮವು ಭಾರತದ ಉತ್ಪಾದನೆ ನೆಲೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಜಪಾನ್ ಸಂಸ್ಥೆಗಳು  ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಕಾರದೊಂದಿಗೆ ವಿನ್ಯಾನಗೊಳಿಸುವ ಜಪಾನ್ ರೂಪಿತ ಕೋರ್ಸ್(ಜೆಇಸಿ) ಗಳೊಂದಿಗೆ ಮತ್ತು ಉತ್ಪಾದನೆಗಾಗಿ ಜಪಾನ್ – ಭಾರತ ಸಂಸ್ಥೆ (ಜೆಐಎಂ) ಸ್ಥಾಪನೆಯೊಂದಿಗೆ ಜಪಾನಿನ ಉತ್ಪಾದನೆ ಶೈಲಿಯ ಕೌಶಲ ಮತ್ತು ಪದ್ಧತಿಗಳ ಮೂಲಕ 30 ಸಾವಿರ ಸಿಬ್ಬಂದಿಗೆ ಮುಂದಿನ 10 ವರ್ಷಗಳಲ್ಲಿ ತರಬೇತಿ ನೀಡುವ ಮೂಲಕ ಮೇಕ್ ಇನ್ ಇಂಡಿಯಾ ಮತ್ತು ಕೌಶಲ ಭಾರತ ಪಕ್ರಮಕ್ಕೂ ಕೊಡುಗೆ ನೀಡುತ್ತದೆ. ಮೊದಲ ಮೂರು ಜೆಐಎಂ ಗಳು 2017ರ ಬೇಸಿಗೆಯಲ್ಲಿ ಈ ಕಾರ್ಯಕ್ರಮದಡಿ ಗುಜರಾತ್, ಕರ್ನಾಟಕ ಮತ್ತು ರಾಜಾಸ್ಥಾನ ರಾಜ್ಯಗಳಲ್ಲಿ ಆರಂಭವಾಗಲಿವೆ.
  6. ಜಪಾನ್  ಭಾರತ ಹೂಡಿಕೆ ಉತ್ತೇಜನ ಪಾಲುದಾರಿಕೆಯಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಬಾರತದಲ್ಲಿ 3.5 ಟ್ರಿಲಿಯನ್ ಯೆನ್ ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಹಣಕಾಸಿನ ನೆರವಿನ ಮೂಲಕ ಸಾಕಾರಗೊಳಿಸುವಲ್ಲಿ ಸ್ಥಿರವಾದ ಪ್ರಗತಿಯನ್ನು ಇಬ್ಬರೂ ಪ್ರಧಾನಮಂತ್ರಿಯವರು ಸ್ವಾಗತಿಸಿದ್ದಾರೆ. ಪಶ್ಚಿಮ ವಿಭಾಗದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್ಸಿ), ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ (ಡಿಎಂಐಸಿ) ಮತ್ತು ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ (ಸಿಬಿಐಸಿ) ಯೋಜನೆಗಳ ಪ್ರಗತಿಯನ್ನೂ ಅವರು ಸ್ವಾಗತಿಸಿದ್ದಾರೆ. ಇಬ್ಬರೂ ಪ್ರಧಾನಮಂತ್ರಿಗಳು ಓಡಿಎ ಯೋಜನೆಗಳ ಸೂಕ್ತ ಜಾರಿಯ ಮಹತ್ವದ ಬಗ್ಗೆಯೂ ಇಬ್ಬರೂ ಪ್ರಧಾನಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.
  7. ಭಾರತದಲ್ಲಿ ಮೂಲಸೌಕರ್ಯದ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಜಪಾನ್ ನ ಓಡಿಎಯ ಗಣನೀಯ ಕೊಡುಗೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಶಂಸಿಸಿದ್ದಾರೆ. ಈ ನಿಟ್ಟಿನಲ್ಲಿ, ಇಬ್ಬರೂ ಪ್ರಧಾನಮಂತ್ರಿಗಳು ನಗರ ಸಾರಿಗೆ ವಲಯ ಅಂದರೆ ಚೆನ್ನೈ ಮತ್ತು ಅಹಮದಾಬಾದ್ ಮೆಟ್ರೋ, ಮುಂಬೈ ಟ್ರಾನ್ಸ್ ಬಂದರು ಸಂಪರ್ಕ ಯೋಜನೆ, ಮತ್ತು ದೆಹಲಿಯಲ್ಲಿ ಪೂರ್ವ ಪೆರಿಫೆರಲ್ ಹೆದ್ದಾರಿಯಲ್ಲಿ ಇಂಟಲಿಜೆನ್ಸ್ ಸಾರಿಗೆ ವ್ಯವಸ್ಥೆ ಅಳವಡಿಕೆಯ ಓಡಿಎ ಯೋಜನೆಗಳ ಪ್ರಗತಿಯನ್ನೂ ಅವರು ಸ್ವಾಗತಿಸಿದ್ದಾರೆ. ಪ್ರಧಾನಮಂತ್ರಿ ಅಬೆ ಅವರು ಗುಜರಾತ್ ರಾಜ್ಯದ ಭಾವನಗರ್ ಜಿಲ್ಲೆಯ ಅಲಾಂಗ್ ನಲ್ಲಿ ಹಡಗು ಪುನರ್ ಬಳಕೆ ಯಾರ್ಡ್ ಮೇಲ್ದರ್ಜೆಗೇರಿಸುವುದಕ್ಕೆ ಬೆಂಬಲ ನೀಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
  8. ಸಂಪರ್ಕವನ್ನು ಹೆಚ್ಚಿಸಲು ಒಟ್ಟಾಗಿ ಶ್ರಮಿಸುವ ಬದ್ಧತೆಯನ್ನು ಇಬ್ಬರೂ ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು. ಮತ್ತು ಈಶಾನ್ಯ ಬಾರತದಲ್ಲಿ ರಸ್ತೆ ಸಂಪರ್ಕ ಹೆಚ್ಚಿಸುವ ಯೋಜನೆಗಳ ಪ್ರಗತಿಯನ್ನು ಸ್ವಾಗತಿಸಿದರು. ಸಮರ್ಥ ಮತ್ತು ಪರಿಣಾಮಕಾರಿ ಮಾದರಿಯಲ್ಲಿ ಸ್ಮಾರ್ಟ್ ದ್ವೀಪಗಳ ಅಭಿವೃದ್ಧಿಗೆ ಅವಕಾಶ ನೀಡುವ ತಂತ್ರಜ್ಞಾನ, ಮೂಲಸೌಕರ್ಯ, ಅಭಿವೃದ್ಧಿ ಕಾರ್ಯತಂತ್ರ ಮತ್ತು ನಿರ್ವಹಣೆ ಪ್ರಕ್ರಿಯೆಗಳನ್ನು ಗುರುತಿಸಲು ಮಾತುಕತೆ ನಡೆಸುವ ಮೂಲಕ ಸ್ಮಾರ್ಟ್ ನಗರಗಳಿಂದ ಸ್ಮಾರ್ಟ್ ದ್ವೀಪಗಳವರೆಗೆ ತಮ್ಮ ಸಹಕಾರವನ್ನು ಕಟ್ಟಲು ಅವರು ನಿರ್ಧರಿಸಿದರು.
  9. ಜಾರ್ಖಂಡ್ ನ ಕೃಷಿ ಯೋಜನೆಗಳಿಗೆ ಸಾಲ ನೀಡುವ, ಒಡಿಶಾದ ಅರಣ್ಯ ಸಂಪನ್ಮೂಲ ಸಮೀಕ್ಷೆಯ ಸಿದ್ಧತಾ ಸಮೀಕ್ಷೆಗೆ ಮತ್ತು ರಾಜಾಸ್ತಾನ ಮತ್ತು ಆಂಧ್ರಪ್ರದೇಶದಲ್ಲಿ ನೀರಾವರಿ ಸುಧಾರಣೆಗೆ  ಓಡಿಎ ಅವಕಾಶವನ್ನು ಪ್ರಧಾನಮಂತ್ರಿ ಮೋದಿ ಪ್ರಶಂಸಿಸಿದರು.
  10. ವಾರಾಣಸಿಯಲ್ಲಿ ಸಮಾವೇಶ ಭವನ ನಿರ್ಮಾಣಕ್ಕೆ ಬೆಂಬಲ ನೀಡುವ ಜಪಾನ್ ಪ್ರಯತ್ನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯವರ್ಧನೆಯ ಸಂಕೇತವಾಗಿರುವ ಇದರ ಮಹತ್ವ ಗುರುತಿಸಿದರು. 
  11. ಭಾರತದಲ್ಲಿ ವಾಣಿಜ್ಯ ವಾತಾವರಣ ಸುಧಾರಣೆ ಮಾಡುವ ಪ್ರಧಾನಮಂತ್ರಿ ಮೋದಿ ಅವರ ಬಲವಾದ ಬದ್ಧತೆಯನ್ನು ಪ್ರಧಾನಮಂತ್ರಿ ಅಬೆ ಶ್ಲಾಘಿಸಿದರು ಮತ್ತು ಹೂಡಿಕೆ ನೀತಿಯನ್ನು ಸರಳೀಕರಿಸುವ, ಉದಾರೀಕರಿಸುವ ಮತ್ತು ತೆರಿಗೆಯನ್ನು ತರ್ಕಬದ್ಧಗೊಳಿಸಲು ಸರಕು ಮತ್ತು ಸೇವೆಗಳ ಐತಿಹಾಸಿಕ ಮಸೂದೆ, ದಿವಾಳಿ ಸಂಹಿತೆ ಮತ್ತು ಇತರ ಉಪಕ್ರಮಗಳಂಥ ಸುಧಾರಣಾ ಕ್ರಮಗಳನ್ನೂ ಸ್ವಾಗತಿಸಿದರು.
  12. ಭಾರತದಲ್ಲಿ ವಾಣಿಜ್ಯ ವಾತಾವರಣ ಸುಧಾರಣೆಗೆ ಹಾಗೂ ಜಪಾನ್ ಹೂಡಿಕೆಗೆ ಅವಕಾಶ ನೀಡಿರುವ ಪ್ರಧಾನಮಂತ್ರಿ ಮೋದಿ ಅವರ ಕ್ರಮವನ್ನು ಅಬೆ ಶ್ಲಾಘಿಸಿದರು. ಅಂತೆಯೇ ಜಪಾನ್ ಕೈಗಾರಿಕಾ ವಸಾಹತು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅಬೆ ಅವರ ಪ್ರಯತ್ನಕ್ಕೆ ಮೋದಿ ಮೆಚ್ಚುಗೆ ಸೂಚಿಸಿದರು. ಈ ವಸಾಹತು ಸ್ಥಾಪನೆ ತಂತ್ರಜ್ಞಾನದ ಪೂರಣ, ನಾವಿನ್ಯತೆ ಮತ್ತು ಭಾರತದ ಉತ್ಪಾದನಾ ವಲಯದಲ್ಲಿ ಉತ್ತಮ ಪದ್ಧತಿಗಳನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
  13. ಇಬ್ಬರೂ ಪ್ರಧಾನಮಂತ್ರಿಗಳು ಜೆಐಟಿ ಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯನ್ನು ಸ್ವಾಗತಿಸಿದರು. ಜೆಐಟಿಗಳ ಅಭಿವೃದ್ಧಿಗೆ ಸಹಕಾರ ಮತ್ತು ಸಮಾಲೋಚನೆ ಮುಂದುವರಿಸಲು ಅವರು ಒಪ್ಪಿಗೆ ಸೂಚಿಸಿದರು.
  14. ಭಾರತದಲ್ಲಿ ಜಪಾನ್ ಕಂಪನಿಗಳಿಗೆ ಜಪಾನ್ ಪ್ಲಸ್ ಒದಗಿಸಿರುವುದಕ್ಕೆ ಮತ್ತು ಜಪಾನ್ ಭಾರತ ಹೂಡಿಕೆಯ ಪಾಲುದಾರಿಕೆ ಉತ್ತೇಜನಕ್ಕೆ ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯ ಪ್ರಧಾನ ಗುಂಪು ಅವಕಾಶ ನೀಡಿರುವುದಕ್ಕೆ ಪ್ರಧಾನಿ ಅಬೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಇಬ್ಬರೂ ಪ್ರಧಾನಮಂತ್ರಿಯವರು ಈ ವರ್ಷ ನಡೆದಿರುವ ಕಾರ್ಯತಂತ್ರಾತ್ಮಕ ಆರ್ಥಿಕ ಮಾತುಕತೆ, ಹಣಕಾಸು ಮಾತುಕತೆ ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)ಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಈ ಮಾತುಕತೆಗಳ ಮಹತ್ವವನ್ನು ಮತ್ತು ಅದರ ಪ ಸಮಿತಿಗಳ  ಆಳವಾದ ದ್ವಿಪಕ್ಷೀಯ ಸಹಕಾರದ ಬಗ್ಗೆ ಒತ್ತಿ ಹೇಳಿದರು. ಸಾಮಾಜಿಕ ಭದ್ರತೆ ಒಪ್ಪಂದವನ್ನು 2016ರ ಅಕ್ಟೋಬರ್ ನಿಂದ ಜಾರಿಗೆ ತಂದಿರುವುದನ್ನು ಅವರು ಸ್ವಾಗತಿಸಿದರು. ಇದು ಭಾರತ ಮತ್ತು ಜಪಾನ್ ನಡುವೆ ಮಾನವ ಮತ್ತು ಆರ್ಥಿಕ ಬದಲಾವಣೆಗೆ ಅವಕಾಶ ನೀಡಲಿದೆ.
  15. ಇಬ್ಬರೂ ಪ್ರಧಾನಮಂತ್ರಿಗಳು ಭಾರತದಲ್ಲಿ ಜಪಾನ್ ಕಂಪನಿಗಳ ನೇರ ಹೂಡಿಕೆ ಉತ್ತೇಜನಕ್ಕೆ ನಿಪ್ಪಾನ್ ಎಕ್ಸ್ ಪೋರ್ಟ್ ಮತ್ತು ಇನ್ ವೆಸ್ಟ್ ಮೆಂಟ್ ಇನ್ಷೂರೆನ್ಸ್ (ಎನ್.ಇ.ಎಕ್ಸ್.ಐ.) ಮತ್ತು ಜಪಾನ್ ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಕೋ ಆಪರೇಷನ್ (ಜೆಬಿಐಸಿ) 1.5 ಟ್ರಿಲಿಯನ್ ಯನ್ ವರೆಗೆ ಜಪಾನ್ ಇಂಡಿಯಾ ಮೇಕ್ ಇನ್ ಇಂಡಿಯಾ ವಿಶೇಷ ಆರ್ಥಿಕ ಸೌಲಭ್ಯ ಜಾರಿ ಮಾಡುವ ಮಹತ್ವನ್ನು ಸ್ಪಷ್ಟಪಡಿಸಿದರು. ನ್ಯಾಷನಲ್ ಇನ್ವೆಸ್ಟ್ ಮೆಂಟ್ ಮತ್ತು ಇನ್ ಫ್ರಾಸ್ಟ್ರಕ್ಚರ್ ಫಂಡ್ (ಎನ್.ಐ.ಐ.ಎಫ್) ಮತ್ತು ಜಪಾನ್ ಓವರ್ ಸೀಸ್ ಇನ್ ಫ್ರಾಸ್ಟ್ರಕ್ಚರ್ ಇನ್ ವೆಸ್ಟ್ ಮೆಂಟ್ ಕಾರ್ಪೊರೇಷನ್ ಫಾರ್ ಟ್ರಾನ್ಸ್ ಪೋರ್ಟ್ ಮತ್ತು ಅರ್ಬನ್ ಡೆವಲಪ್ಮೆಂಟ್ (ಜೆಓಐಎನ್) ಗಳ ನಡುವೆ ಭಾರತದಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಅವಕಾಶ ಬಳಸಿಕೊಳ್ಳಲು ಆಗಿರುವ ತಿಳಿವಳಿಕೆ ಒಪ್ಪಂದವನ್ನೂ ಅವರು ಸ್ವಾಗತಿಸಿದರು.

ಶುದ್ಧ ಮತ್ತು ಬೃಹತ್ ಭವಿಷ್ಯಕ್ಕಾಗಿ ಒಗ್ಗೂಡಿ ಕಾರ್ಯ ನಿರ್ವಹಣೆ

  1. ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಗೆ ವಿಶ್ವಾಸಾರ್ಹ, ಶುದ್ಧ ಮತ್ತು ಕೈಗೆಟಕುವ ದರದ ಇಂಧನದ ಲಭ್ಯತೆ ಅಗತ್ಯ ಎಂಬುದನ್ನು ಮನಗಂಡ ಇಬ್ಬರೂ ಪ್ರಧಾನಮಂತ್ರಿಗಳು, ಈ ನಿಟ್ಟಿನಲ್ಲಿ, 2016ರ ಜನವರಿಯಲ್ಲಿ ನಡೆದ ಜಪಾನ್- ಭಾರತ 8ನೇ ಇಂಧನ ಮಾತುಕತೆಯಲ್ಲಿ ಕೈಗೊಂಡ ಜಪಾನ್ ಭಾರತ ಇಂಧನ ಪಾಲುದಾರಿಕೆ ಉಪಕ್ರಮವನ್ನು ಸ್ವಾಗತಿಸಿದರು. ಜಾಗತಿಕ ತಾಪಮಾನದ ಸವಾಲುಗಳ  ಹಿನ್ನೆಲೆಯಲ್ಲಿ ತಮ್ಮ ಎರಡು ರಾಷ್ಟ್ರಗಳಿಗಷ್ಟೇ ಅಲ್ಲ ಇಡೀ ವಿಶ್ವಕ್ಕೆ ಕೊಡುಗೆ ನೀಡಲು ಇಂಧನ ಸಹಕಾರದ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ನಿರ್ಧರಿಸಿದರು. ಪಾರದರ್ಶಕ ಮತ್ತು ವಿವಿಧ್ಯಪೂರ್ಣ ದ್ರವೀಕೃತ ನೈಸರ್ಗಿಕ ಅನಿಲ ಮಾರುಕಟ್ಟೆ ಉತ್ತೇಜನದ ತಮ್ಮ ಇಂಗಿತವನ್ನು ಪುನರುಚ್ಚರಿಸಿದರು.
  2. ಇಬ್ಬರೂ ಪ್ರಧಾನಮಂತ್ರಿಗಳು ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಒಪ್ಪಂದವನ್ನು ಬೇಗನೇ ಜಾರಿಗೆ ತರುವ ಪ್ರಯತ್ನ ಸ್ವಾಗತಿಸಿದರು ಮತ್ತು  ಒಪ್ಪಂದದ ಯಶಸ್ವೀ ಜಾರಿಗೆ ಒಗ್ಗೂಡಿ ಶ್ರಮಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಜಂಟಿ ಕ್ರೆಡಿಟಿಂಗ್ ವ್ಯವಸ್ಥೆಯಲ್ಲಿ ಆದಷ್ಟು ಬೇಗ ಮುಂದಿನ ಮಾತುಕತೆ ನಡೆಸುವ ಇಂಗಿತವನ್ನೂ ವಿನಿಮಯ ಮಾಡಿಕೊಂಡರು.
  3. ಪ್ರಧಾನಮಂತ್ರಿ ಅಬೆ ಅವರು, ಅಂತಾರಾಷ್ಟ್ರೀಯ ಸೌರ ಸಹಯೋಗ ಸ್ಥಾಪನೆ ಸೇರಿದಂತೆ ಪುನರ್ ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಮೋದಿ ಅವರ ಪ್ರಯತ್ನಗಳನ್ನು ಅಬೆ ಅರು ಸ್ವಾಗತಿಸಿದರು.
  4. ಇಬ್ಬರೂ ಪ್ರಧಾನಮಂತ್ರಿಗಳು ಜಪಾನ್ ಸರ್ಕಾರ ಮತ್ತು ಭಾರತ ಗಣರಾಜ್ಯದ ನಡುವೆ ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಇಂಧನ ಬಳಕೆ ಕುರಿತ ಒಪ್ಪಂದಕ್ಕೆ ಅಂಕಿತ ಹಾಕಿದ್ದನ್ನು ಸ್ವಾಗತಿಸಿದರು.
  5. ಪರಿಸರ ಸ್ನೇಹಿಯಾದ ಇಂಧನ ದಕ್ಷತೆ ತಂತ್ರಜ್ಞಾನದಲ್ಲಿ ತಮ್ಮ ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನಡುವೆ ಹೆಚ್ಚಿನ ಸಹಯೋಗ ಏರ್ಪಟ್ಟಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನ ಮತ್ತು  ಪರಿಸರ ಸ್ನೇಹಿಯಾದ ಹೈಬ್ರೀಡ್ ಮತ್ತು ಎಲೆಕ್ರಿಕ್ ವಾಹನಗಳನ್ನು ಜಯಪ್ರಿಯಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು.  
  6. ಸುರಕ್ಷಿತ  ಮತ್ತು ಪರಿಸರಾತ್ಮಕವಾಗಿ ಹಡಗುಗಳ ಮರು ಬಳಕೆ ಮಾಡುವ 2009ರ  ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಸಮಾವೇಶದ ನಿರ್ಣಯಗಳನ್ನು ಶೀಘ್ರ ಸಾಧಿಸುವ ಇಂಗಿತವನ್ನು ಇಬ್ಬರೂ ಪ್ರಧಾನಮಂತ್ರಿಗಳು ವ್ಯಕ್ತಪಡಿಸಿದರು.

ಭವಿಷ್ಯ ಆಧಾರಿತ ಪಾಲುದಾರಿಕೆಗೆ ಬುನಾದಿ

  1. ಇಬ್ಬರೂ ಪ್ರಧಾನಿಗಳು ಸಮಾಜವನ್ನು ಮೂಲಭೂತವಾಗಿ ಪರಿವರ್ತಿಸಲು ತಂತ್ರಜ್ಞಾನ ಮತ್ತು ವಿಜ್ಞಾನದ ಆಳವಾದ ದ್ವಿಪಕ್ಷೀಯ ಸಹಯೋಗದ ವಿಶಾಲ ಸಾಮರ್ಥ್ಯವನ್ನು ಗುರುತಿಸಿದರು. ಬಾಹ್ಯಾಕಾಶ ಸಹಕಾರ ಹೆಚ್ಚಿಸುವ ಮಹತ್ವವನ್ನೂ ಒತ್ತಿ ಹೇಳಿದ ಅವರು ಈ ನಿಟ್ಟಿನಲ್ಲಿ ಜೆಎಎಕ್ಸ್ಎ ಮತ್ತು ಇಸ್ರೋ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು. ಭೂ ವಿಜ್ಞಾನ ಸಚಿವಾಲಯ ಮತ್ತು ಜೆಎಎಂಎಸ್.ಟಿ.ಇ.ಸಿ. ನಡುವೆ ಸಹಕಾರ ಒಪ್ಪಂದ (ಎಂ.ಓ.ಸಿ.) ಮೂಲಕ  ಸಾಗರ, ಭೂ ಮತ್ತು ವಾತಾವರಣ ವಿಜ್ಞಾನ ಕ್ಷೇತ್ರಗಳ ಸಹಕಾರ ವಿಸ್ತರಣೆಯನ್ನು ಅವರು ಪ್ರಶಂಸಿಸಿದರು. ಜೆಇಟಿಆರ್ ಓ ದೊಂದಿಗಿನ ಸಹಕಾರದಲ್ಲಿ ಜಪಾನ್ ಮತ್ತು ಭಾರತ ಐಓಟಿ ಹೂಡಿಕೆಗೆ ಸಂಬಂಧಿಸಿದಂತೆ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಮೇಲಿನ ಜಂಟಿ ಕಾರ್ಯ ಗುಂಪು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಜಂಟಿ ಸಮಿತಿಯ ದ್ವಿಪಕ್ಷೀಯ ಸಹಕಾರದ ಮೂಲಕ ಐಓಟಿ ಮತ್ತು ಐಟಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಅವರು ಉಲ್ಲೇಖಿಸಿದರು.
  2. ಇಬ್ಬರೂ ಪ್ರಧಾನಮಂತ್ರಿಗಳು, ವಿಕೋಪ ಅಪಾಯ ತಗ್ಗಿಸುವ ಏಷ್ಯಾ ಸಚಿವರುಗಳ ಮಟ್ಟದ ಸಮಾವೇಶ2016ನ್ನು  ದೆಹಲಿಯಲ್ಲಿ ಯಶಸ್ವಿಯಾಗಿ ನಡೆಸಿದ್ದನ್ನು ಸ್ವಾಗತಿಸಿದರು. ವಿಕೋಪ ನಿರ್ವಹಣೆ ಮತ್ತು ವಿಕೋಪ ಅಪಾಯ  ತಗ್ಗಿಸುವಿಕೆ ಕ್ಷೇತ್ರದಲ್ಲಿನ ಸಹಕಾರದ ವ್ಯಾಪ್ತಿಯನ್ನು ಅವರು ಪರಿಗಣಿಸಿದರು. ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಸುನಾಮಿ ದಿನ ಆಚರಣೆ ಮಹತ್ವವನ್ನೂ ಅವರು ಉಲ್ಲೇಖಿಸಿದರು.
  3. ಇಬ್ಬರೂ ಪ್ರಧಾನಮಂತ್ರಿಗಳು,ಆಂಟಿಮೈಕ್ರೊಬಿಯಲ್ ಪ್ರತಿರೋಧ, ಕಾಂಡಕೋಶ ಸಂಶೋಧನೆ, ಔಷಧೀಯ ಹಾಗೂ ವೈದ್ಯಕೀಯ ಸಾಧನಗಳು ಸೇರಿದಂತೆ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿನ ಸಹಕಾರದ ಪ್ರಗತಿಯನ್ನು ಸ್ವಾಗತಿಸಿದರು. ಜಪಾನ್ ನಲ್ಲಿ ಜನರಿಕ್ ಔಷಧಗಳ ಗಣನೀಯ ಪಾಲಿನ ಕುರಿತಂತೆ ಭಾರತ ಮತ್ತು ಜಪಾನ್ ಔಷಧ ತಯಾರಿಕಾ ಕಂಪನಿಗಳ ಸಹಯೋಗದ ಅವಕಾಶಗಳನ್ನೂ ಅವರು ಉಲ್ಲೇಖಿಸಿದರು.

ದೀರ್ಘ ಬಾಳಿಕೆಯ ಪಾಲುದಾರಿಕೆಗಾಗಿ ಜನರ ಮೇಲೆ ಹೂಡಿಕೆ

 

  1. ಇಬ್ಬರೂ ಪ್ರಧಾನಮಂತ್ರಿಗಳು, ಪ್ರವಾಸೋದ್ಯಮ, ಯುವಕರ ವಿನಿಮಯ ಮತ್ತು ಶೈಕ್ಷಣಿಕ ಸಹಯೋಗದ ಅವಕಾಶಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಪ್ರತಿಪಾದಿಸಿದರು ಮತ್ತು 2017ನ್ನು ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಭಾರತ – ಜಪಾನ್ ಸ್ನೇಹ ವಿನಿಮಯ ವರ್ಷವಾಗಿ ಆಚರಿಸಲು ನಿರ್ಧರಿಸಿದರು. ಅವರು ಸಾಂಸ್ಕೃತಿಕ ರಂಗದಲ್ಲಿನ ಎಂ.ಓ.ಸಿ.ಯನ್ನು ಸ್ವಾಗತಿಸಿದರು. ಎರಡೂ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮದ ಹರಿವು ಹೆಚ್ಚಳದ ಉತ್ತೇಜನ ಕುರಿತಂತೆ ಬಲವಾದ ಆಸಕ್ತಿ ವ್ಯಕ್ತಪಡಿಸಿದರು. ಭಾರತ ಮತ್ತು ಜಪಾನ್ ನಡುವಿನ ಪ್ರವಾಸೋದ್ಯಮ ಮಂಡಳಿ ಆರಂಭಿಕ ಸಭೆಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಅವರು, 2017ರಲ್ಲಿ ನಡೆಯಲಿರುವ ಎರಡನೇ ಸಭೆಯನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು. ಜಪಾನ್ ರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ (ಜೆಎನ್ಟಿಓ) ಕಚೇರಿಯನ್ನು ದೆಹಲಿಯಲ್ಲಿ 2016ರ ಹಣಕಾಸು ವರ್ಷದಲ್ಲಿ ತೆರೆಯುವ ಯೋಜನೆಯನ್ನೂ ಸ್ವಾಗತಿಸಿದರು.
  2. ಪ್ರಧಾನಮಂತ್ರಿ ಅಬೆ ಅವರು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ಅಗತ್ಯದಲ್ಲಿ ಕೆಲವು ರಿಯಾಯಿತಿಯನ್ನು ಘೋಷಿಸಿದರು ಮತ್ತು ವೀಸಾ ಅರ್ಜಿಗಳ ಸೈಟ್ ಗಳ ಸಂಕ್ಯೆಯನ್ನು ಭಾರತೀಯ ಪ್ರಜೆಗಳಿಗಾಗಿ 20ಕ್ಕೆ ಏರಿಸುವ ವಿಸ್ತರಣೆಯ ಇಂಗಿತವನ್ನೂ ವ್ಯಕ್ತಪಡಿಸಿದರು. ಜಪಾನ್ ನ ಹೂಡಿಕೆದಾರರಿಗೆ ಮತ್ತು ಪ್ರವಾಸಿಗಳಿಗೆ ದೀರ್ಘಾವಧಿಯ 10 ವರ್ಷಗಳ ವೀಸಾ ಮತ್ತು ಬಂದಿಳಿದ ಬಳಿಕ ನೀಡಲಾಗುವ ವೀಸಾ ಸೌಲಭ್ಯಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರನ್ನು ಅಭಿನಂದಿಸಿದರು.
  3. ಪ್ರಧಾನಿ ಅಬೆ ಅವರು, ಏಷ್ಯಾದಲ್ಲಿ ಕುಶಲ ಮಾನವ ಸಂಪನ್ಮೂಲದ ವಿನಿಮಯವನ್ನು ಹೆಚ್ಚಿಸುವ ಜಪಾನ್ ನ ಹೊಸ ಉಪಕ್ರಮ ಇನೋವೇಟಿವ್ ಏಷ್ಯಾ ಕುರಿತಂತೆ ವಿವರಿಸಿದರು. ಈ ಉಪಕ್ರಮವು ಭಾರತೀಯ ವಿದ್ಯಾರ್ಥಿಗಳಿಗೆ ಹೊಸ ವಿದ್ಯಾರ್ಥಿವೇತನದ ಮಾರ್ಗ ಮತ್ತು ಇಂಟರ್ನ್ ಶಿಪ್ ಅವಕಾಶ ಒದಗಿಸುತ್ತದೆ ಮತ್ತು ತ್ವರಿತ ನಾವಿನ್ಯತೆಗೆ ದಾರಿ ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಇಬ್ಬರೂ ಪ್ರಧಾನಮಂತ್ರಿಗಳು ವ್ಯಕ್ತಪಡಿಸಿದರು.
  4. ಶಿಕ್ಷಣದ ಮೇಲಿನ ಮೊದಲ ಉನ್ನತ ಮಟ್ಟದ ನೀತಿಯ ದ್ವಿಪಕ್ಷೀಯ ಸಭೆಯ ಯಶಸ್ವೀ ಸಾಕಾರವನ್ನು ಇಬ್ಬರೂ ಪ್ರಧಾನಮಂತ್ರಿಗಳು ಉಲ್ಲೇಖಿಸಿದರು. ಮತ್ತು ವಿಶ್ವವಿದ್ಯಾಲಯಗಳ ನಡುವಿನ ಸಾಂಸ್ಥಿಕ ನಂಟೂ ಸೇರಿದಂತೆ ಶಿಕ್ಷಣದಲ್ಲಿನ ಸಹಯೋಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
  5. ಇಬ್ಬರೂ ಪ್ರಧಾನಮಂತ್ರಿಗಳು ಶಿಕ್ಷಣದ ಮಾದರಿಗಳು, ಸಕುರ ವಿಜ್ಞಾನ ಯೋಜನೆ (ವಿಜ್ಞಾನದಲ್ಲಿ ಜಪಾನ್ – ಏಷ್ಯಾ ಯುವ ವಿನಿಮಯ ಕಾರ್ಯಕ್ರಮ) ಯಂಥ ನಾವಿನ್ಯತೆಗಳು ಕುರಿತಂತೆ ಉತ್ತಮ ಪದ್ಧತಿಗಳ ವಿನಿಮಯದ ಮಹತ್ವವನ್ನೂ ಒತ್ತಿ ಹೇಳಿದರು. ಈ ಕಾರ್ಯಕ್ರಮದಡಿ ಭಾರತೀಯ ಯುವ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಜಪಾನ್ ಗೆ ಭೇಟಿ ನೀಡುತ್ತಿದ್ದಾರೆ.
  6. ಇಬ್ಬರೂ ಪ್ರಧಾನಮಂತ್ರಿಗಳು ಟೋಕಿಯೋದ 2020 ಒಲಿಂಪಿಕ್ಸ್ ಮತ್ತು ಪ್ಯಾರಾ ಒಲಿಂಪಿಕ್ಸ್ ಮೇಲೆ ವಿಶೇಷ ಗಮನ ಹರಿಸಿ, ಅನುಭವ, ಕೌಶಲ, ಮಾಹಿತಿ ಮತ್ತು ಜ್ಞಾನ ವಿನಿಮಯಕ್ಕಾಗಿ ಭಾರತದ ಕ್ರಿಡಾ ಮತ್ತು ಯುವ ವ್ಯವಹಾರಗಳ ಸಚಿವಾಲಯ ಮತ್ತು ಜಪಾನ್ ನ ಶಿಕ್ಷಣ, ಸಂಸ್ಕೃತಿ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನಡುವೆ  ಅಂಕಿತ ಹಾಕಲಾಗಿರುವ ಎಂ.ಓ.ಸಿ.ಯನ್ನು ಸ್ವಾಗತಿಸಿದರು.
  7. ಇಬ್ಬರೂ ಪ್ರಧಾನಮಂತ್ರಿಗಳು, ಸರ್ಕಾರದ ಎಲ್ಲ ಹಂತಗಳಲ್ಲಿ, ಸಂಸತ್ ಸದಸ್ಯರು ಮತ್ತು ಪ್ರಾಂತ್ಯಗಳು ಮತ್ತು ರಾಜ್ಯಗಳ ನಡುವೆ ಹೆಚ್ಚಿನ ಮಾತುಕತೆಯ ಮಹತ್ವನ್ನು ಪ್ರತಿಪಾದಿಸಿದರು. ಅವರು ಗುಜರಾತ್ ರಾಜ್ಯ ಮತ್ತು ಹೊಯ್ಗೋ ಪ್ರಾಂತ್ಯದ ನಡುವೆ ಪರಸ್ಪರ ಸಹಕಾರಕ್ಕಾಗಿ ಆಗಿರುವ ತಿಳಿವಳಿಕೆ ಒಪ್ಪಂದವನ್ನು ಸ್ವಾಗತಿಸಿದರು. ಎರಡು ಪುರಾತನ ಮತ್ತು ಸಾಂಸ್ಕೃತಿಕ ಪರಂಪರೆಯ ನಗರಗಳಾದ ಟೋಕಿಯೋ ಮತ್ತು ವಾರಾಣಸಿಯ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಅವರು ಸಂತೃಪ್ತಿ ವ್ಯಕ್ತಪಡಿಸಿದರು.
  8. ಅಂತಾರಾಷ್ಟ್ರೀಯ ಯೋಗಾ ದಿನವನ್ನು ಆಚರಿಸುವ ನಿಟ್ಟಿನಲ್ಲಿ ಜಪಾನ್ ನಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರಧಾನಿ ಮೋದಿ ಅವರು ಸ್ವಾಗತಿಸಿದರು. ಜಪಾನ್ ನ ಯೋಗ ಆಸಕ್ತರು ಅತ್ಯಂತ ಪ್ರತಿಷ್ಠಿತ ಭಾರತೀಯ ಯೋಗ ಸಂಸ್ಥೆಯ ಶಿಷ್ಯವೇತನದ ಸೌಲಭ್ಯ ಪಡೆಯುವಂತೆ ಉತ್ತೇಜಿಸಿದರು.
  9. ಇಬ್ಬರೂ ಪ್ರಧಾನಮಂತ್ರಿಗಳು ಮಹಿಳಾ ಸಬಲೀಕರಣದ ಮಹತ್ವವನ್ನು ಪ್ರತಿಪಾದಿಸಿದರು ಮತ್ತು ವಿಶ್ವ ಮಹಿಳಾ ಸಮಾವೇಶದಂಥ ಪ್ರಯತ್ನಗಳೊಂದಿಗೆ ಈ ಕ್ಷೇತ್ರದ ಸಹಕಾರ ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಏಷ್ಯಾದ ಭವಿಷ್ಯವು ಧನಾತ್ಮಕ ಸಂಪ್ರದಾಯಗಳಾದ ಅಹಿಂಸೆ, ಸಹಿಷ್ಣುತೆ ಮತ್ತು ಏಷ್ಯಾದ ಪ್ರಜಾಪ್ರಭುತ್ವದ ಮೇಲೆ ನಿರ್ಮಾಣವಾಗಬೇಕಾಗಿರುವ ಹಿನ್ನೆಲೆಯಲ್ಲಿ ಇಬ್ಬರೂ ಪ್ರಧಾನಮಂತ್ರಿಗಳು, 2016ರಲ್ಲಿ ಟೋಕಿಯೋದಲ್ಲಿ ನಡೆದ ವಿನಿಮಯಿತ ಮೌಲ್ಯಗಳು ಮತ್ತು ಏಷ್ಯಾದ ಪ್ರಜಾಪ್ರಭುತ್ವ ಕುರಿತ ವಿಚಾರಗೋಷ್ಠಿಯನ್ನು ಸ್ವಾಗತಿಸಿದರು ಮತ್ತು 2017ರಲ್ಲಿ ನಡೆಯಲಿರುವ ಮುಂದಿನ ಸಮಾವೇಶ ಎದಿರು ನೋಡುತ್ತಿರುವುದಾಗಿ ಹೇಳಿದರು.

ಭಾರತ-ಪೆಸಿಪಿಕ್ ವಲಯ ಮತ್ತು ಅದರಾಚೆ ನಿಯಮ ಆಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಬಲಪಡಿಸಲು ಜಂಟಿಯಾಗಿ ಕಾರ್ಯ ನಿರ್ವಹಣೆ.

  1. ಇಬ್ಬರೂ ಪ್ರಧಾನಮಂತ್ರಿಗಳು, 21ನೇ ಶತಮಾನದಲ್ಲಿ  ಭಾರತ-ಪೆಸಿಫಿಕ್ ವಲಯ ಪ್ರಗತಿಯ ಸಾಕಾರಕ್ಕೆ ಭಾರತ ಮತ್ತು ಜಪಾನ್ ಸಹಯೋಗದ ಸಾಮರ್ಥ್ಯವನ್ನು ಪ್ರತಿಪಾದಿಸಿದರು. ವಲಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ, ಸಾಮರ್ಥ್ಯ ನಿರ್ಮಾಣ, ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ಪ್ರದೇಶದಲ್ಲಿ ಪ್ರಚಾರ, ಹಂಚಿಕೆಯ ಮೌಲ್ಯಗಳು ಒಮ್ಮುಖವಾಗಿರುವ ಆಸಕ್ತಿಗಳು ಮತ್ತು ನೈಪುಣ್ಯಗಳುಳ್ಳ ಮತ್ತು ಸಂಪನ್ಮೂಲಗಳನ್ನು ಬಲಪಡಿಸಲು ಅವರು ನಿರ್ಧರಿಸಿದರು. ಈ ನಿಟ್ಟಿನಲ್ಲಿ ಪ್ರಧಾನಿ ಅಬೆ ಅವರು, ಜಪಾನ್ ನ ಓಡಿಓ ಯೋಜನೆ ಮೂಲಕವೂ ಸೇರಿದಂತೆ ಎರಡೂ ರಾಷ್ಟ್ರಗಳ ಮಾನವ ಸಂಪನ್ಮೂಲ, ಹಣಕಾಸು ಮತ್ತು ತಾಂತ್ರಿಕ ಸಂಪನ್ಮೂಲವನ್ನು ಸೇರಿಸಿ ಬಲಪಡಿಸುವ ಹೊಸ ಉಪಕ್ರಮವನ್ನು ಪ್ರಸ್ತಾಪಿಸಿದರು.  ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ಪ್ರಧಾನಿ ಮೋದಿ ಅವರು ಕೂಡ ಪ್ರತಿಪಾದಿಸಿದರು.
  2. ಆರೋಗ್ಯ, ಮೂಲಸೌಕರ್ಯ, ತರಬೇತಿ, ಮತ್ತು ಸಂಪರ್ಕ ಸೇರಿದಂತೆ ನಿರ್ದಿಷ್ಟ ಜಂಟಿ ಯೋಜನೆಗಳ ಅನ್ವೇಷಿಸುವ ಗುರಿಯೊಂದಿಗೆ ಆಫ್ರಿಕದಲ್ಲಿ ಸಹಯೋಗ ಮತ್ತು ಸಹಕಾರ ಉತ್ತೇಜಿಸಲು ಭಾರತ ಮತ್ತು ಜಪಾನ್ ಮಾತುಕತೆಯ ಮಹತ್ವವನ್ನೂ ಇಬ್ಬರೂ ಪ್ರಧಾನಮಂತ್ರಿಗಳು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಒಗ್ಗೂಡಿ ಶ್ರಮಿಸುವ ಮತ್ತು ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಾಗಾರಿಕಾ ಕಾರಿಡಾರ್ ಮತ್ತು ಕೈಗಾರಿಕಾ ಜಾಲ ಅಭಿವೃದ್ಧಿ ಪಡಿಸಿ ಉತ್ತೇಜಿಸಲು ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಸಹಕಾರಾತ್ಮಕವಾಗಿ ಸ್ಪಂದಿಸುವ ಇಂಗಿತ ವ್ಯಕ್ತಪಡಿಸಿದರು.
  3. ಇಬ್ಬರೂ ಪ್ರಧಾನಮಂತ್ರಿಗಳು ದಕ್ಷಿಣ ಏಷ್ಯಾ ಮತ್ತು ನೆರೆಯ ವಲಯದಲ್ಲಿ ಅಂದರೆ ಇರಾನ್ ಮತ್ತು ಆಫ್ಗಾನಿಸ್ತಾನಗಳ ನಡುವೆ ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಸಹಕಾರ, ಇತರ ವಿಷಯಗಳ ನಡುವೆ ಸಹಕಾರ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಚಬಹರ್ ಸಂಪರ್ಕದ ಮೂಲಕ ಶಾಂತಿ ಮತ್ತು ಸಮೃದ್ಧಿ ಉತ್ತೇಜಿಸಲು ಎರಡೂ ರಾಷ್ಟ್ರಗಳ ನಡುವಿನ ಸಹಕಾರವನ್ನು ಸ್ವಾಗತಿಸಿದರು. ಈ ಸಹಕಾರಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ವಿವರವಾದ ಕಾರ್ಯಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
  4. ಜಪಾನ್, ಭಾರತ ಮತ್ತು ಅಮೆರಿಕಾ ನಡುವೆ ತ್ರಿಪಕ್ಷೀಯ ಮಾತುಕತೆ ಏರ್ಪಟ್ಟಿರುವುದನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಎಚ್ಎ/ಡಿಆರ್, ಪ್ರಾದೇಶಿಕ ಸಂಪರ್ಕ, ಸಾಗರ ಭದ್ರತೆ ಮತ್ತು ಸುರಕ್ಷತೆಗಳ ಸಹಕಾರ ಮತ್ತು ಸಹಯೋಗ ಬಲಪಡಿಸುತ್ತಿರುವುದನ್ನು ಸ್ವಾಗತಿಸಿದರು. ಜಪಾನ್, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತ್ರಿಪಕ್ಷೀಯ ಮಾತುಕತೆ ಆಳವಾಗಿರುವುದನ್ನು ಮತ್ತು ಮುಂದುವರಿದಿರುವುದನ್ನೂ ಅವರು ಸ್ವಾಗತಿಸಿದರು.
  5. ಪೂರ್ವ ಏಷ್ಯಾ ಶೃಂಗ (ಇ.ಎ.ಎಸ್.) ಪ್ರಕ್ರಿಯೆಯನ್ನು ಬಲಪಡಿಸುವಲ್ಲಿನ ಪ್ರಗತಿಯನ್ನು ಅವರು ಸ್ವಾಗತಿಸಿದರು. ಈ ಶೃಂಗ ಹೆಚ್ಚು ಕ್ರಿಯಾಶೀಲವಾಗಿ ಸಕಾರಾತ್ಮಕವನ್ನಾಗಿ ಮಾಡಲು ಇಬ್ಬರೂ ಪ್ರಧಾನಮಂತ್ರಿಗಳು ನಿರ್ಧರಿಸಿದರು. ಜಕಾರ್ತಾದಲ್ಲಿ ಇ.ಎ.ಎಸ್. ರಾಯಭಾರಿಗಳ ಸಬೆಯನ್ನು ಆಯೋಜಿಸುತ್ತಿರುವುದನ್ನು ಮತ್ತು ಆಸಿಯಾನ್ ಸಚಿವಾಲಯದಲ್ಲಿ ಇ..ಎಸ್. ಘಟಕ ಸ್ಥಾಪಿಸುತ್ತಿರುವುದನ್ನೂ ಅವರು ಸ್ವಾಗತಿಸಿದರು. ಇಎಎಸ್ ಚೌಕಟ್ಟಿನೊಳಗೆ ಪ್ರಾದೇಶಿಕ ಸಂಪರ್ಕ ಮತ್ತು ಕಡಲ ಸಹಕಾರ ವರ್ಧನೆಯ ಮಹತ್ವವನ್ನೂ ಅವರು ಪ್ರತಿಪಾದಿಸಿದರು.
  6. ಆಸಿಯಾನ್ – ನೇತೃತ್ವದ ವೇದಿಕೆಗಳು ಅಂದರೆ, ಆಸಿಯಾನ್ ಪ್ರಾದೇಶಿಕ ವೇದಿಕೆ, ಆಸಿಯಾನ್ ರಕ್ಷಣಾ ಸಚಿವರುಗಳ ಸಭೆ, ವಿಸ್ತರಿತ ಆಸಿಯಾನ್ ಕಡಲ ವೇದಿಕೆ ಮತ್ತು ಕಡಲ ಸುರಕ್ಷತೆ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಅವರ ಸಹಯೋಗದ ಕ್ರಮ, ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆ ಹಾಗೂ ಹವಾಮಾನ ಬದಲಾವಣೆಗಳಲ್ಲಿ ಪ್ರಾದೇಶಿಕ ಸ್ವರೂಪದ ಮೂಲಕ ಬಲಪಡಿಸುವ ಮತ್ತು ಅದಕ್ಕೆ ರೂಪ ನೀಡುವ ಇಂಗಿತವನ್ನು ಇಬ್ಬರೂ ಪ್ರಧಾನಿಗಳು ವ್ಯಕ್ತಪಡಿಸಿದರು.
  7. ಈ ಪ್ರಾದೇಶಿಕ ಮತ್ತು ತ್ರಿಪಕ್ಷೀಯ ಮಾತುಕತೆಗಳ ವ್ಯವಸ್ಥೆಯು ಸಮತೋಲಿತ, ಮುಕ್ತ, ಸಮಗ್ರ, ಸ್ಥಿರ, ಪಾರದರ್ಶಕ ಮತ್ತು ನಿಯಮ ಆಧಾರಿತ ಆರ್ಥಿಕತೆ, ರಾಜಕೀಯ ಮತ್ತು ಭಾರತ ಫೆಸಿಪಿಕ್ ವಲಯದಲ್ಲಿ ಸುರಕ್ಷತೆಯ ವಿನ್ಯಾಸವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. .
  8. ಇಬ್ಬರೂ ಪ್ರಧಾನಮಂತ್ರಿಗಳು ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ಉಗ್ರ ಶಬ್ದಗಳಿಂದ ಖಂಡಿಸಿದರು ಮತ್ತು ಅದರ ಬಗ್ಗೆ ಶೂನ್ಯ ಸಹಿಷ್ಣತೆಯನ್ನು ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆ ಮತ್ತು ಅದು ವಿಶ್ವಾದ್ಯಂತ ಪಸರಿಸುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಢಾಕಾ ಮತ್ತು ಉರಿ ಸೇರಿದಂತೆ ಎರಡೂ ದೇಶಗಳಲ್ಲಿ ಇತ್ತೀಚೆಗೆ ಭಯೋತ್ಪಾದಕ ದಾಳಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದರು. ಭಯೋತ್ಪಾದಕ ಕಾಯಗಳನ್ನು ಗುರಿ ಮಾಡುವ ಕುರಿತಂತೆ ಯುಎನ್ಎಸ್ ಸಿ ನಿರ್ಣಯ 1267 ಮತ್ತು ಇತರ ಸೂಕ್ತ ನಿರ್ಣಯಗಳನ್ನು ಜಾರಿ ಮಾಡುವಂತೆ ಅವರು ಎಲ್ಲ ರಾಷ್ಟ್ರಗಳಿಗೂ ಮನವಿ ಮಾಡಿದರು. ಭಯೋತ್ಪಾದಕರ ಸುರಕ್ಷಿತ ತಾಣಗಳು ಮತ್ತು ಮೂಲಸೌಕರ್ಯ ನಾಶಪಡಿಸುವಂತೆ, ಭಯೋತ್ಪಾದಕರ ಜಾಲಕ್ಕೆ ತಡೆಯುವಂತೆ ಮತ್ತು ಅವರಿಗೆ ಆರ್ಥಿಕ ನೆರವಿನ ಜಾಲ ಹತ್ತಿಕ್ಕುವಂತೆ, ಭಯೋತ್ಪಾದಕರ ಗಡಿಯಾಚೆಗಿನ ಓಡಾಟಕ್ಕೆ ಕಡಿವಾಣ ಹಾಕುವಂತೆ ಅವರು ಎಲ್ಲ ರಾಷ್ಟ್ರಗಳಿಗೂ ಕರೆ ನೀಡಿದರು. ಎಲ್ಲ ರಾಷ್ಟ್ರಗಳೂ ಬಹು ರಾಷ್ಟ್ರೀಯ ಭಯೋತ್ಪಾದನೆಯನ್ನು ತಮ್ಮ ನೆಲದಿಂದ ಸಮರ್ಥವಾಗಿ ಕಿತ್ತೊಗೆಯುವ ಅಗತ್ಯವನ್ನೂ ಅವರು  ಒತ್ತಿ ಹೇಳಿದರು. ಭಯೋತ್ಪಾದನೆ ಮತ್ತು ಹಿಂಸಾತ್ಮಕ ವಿಧ್ವಂಸಕತೆ ಹತ್ತಿಕ್ಕಲು ಬೇಹುಗಾರಿಕೆಯ ಮಾಹಿತಿ ವಿನಿಮಯದ ಮೂಲಕ ಅಂತಾರಾಷ್ಟ್ರೀಯ ಪಾಲುದಾರಿಕೆಗೆ ಅವರು ಕರೆ ನೀಡಿದರು. ಭಯೋತ್ಪಾದನೆ ನಿಗ್ರಹ ಕುರಿತಂತೆ ನಡೆಯುತ್ತಿರುವ ದ್ವಿಪಕ್ಷೀಯ ಮಾತುಕತೆಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಸ್ವಾಗತಿಸಿದರು ಮತ್ತು ಎರಡೂ ಕಡೆಗಳಿಂದ ಹೆಚ್ಚಿನ ಬೇಹುಗಾರಿಕೆ ಮತ್ತು ಮಾಹಿತಿ ವಿನಿಮಯದೊಂದಿಗೆ ಹೆಚ್ಚಿನ ಸಹಕಾರಕ್ಕೆ ಅವರು ಕರೆ ನೀಡಿದರು. ಮುಂಬೈನಲ್ಲಿ  ನವೆಂಬರ್ 2008ರಲ್ಲಿ ನಡೆದ ಭಯೋತ್ಪಾದಕ ದಾಳಿ ಮತ್ತು 2016ರ ಪಟಾಠ್ ಕೋಟ್ ಭಯೋತ್ಪಾದಕ ದಾಳಿಗೆ ಕಾರಣರಾದವರನ್ನು ಕಾನೂನಿನಡಿ ತಂದು ಶಿಕ್ಷಿಸುವಂತೆ ಪಾಕಿಸ್ತಾನವನ್ನು ಅವರು ಒತ್ತಾಯಿಸಿದರು.
  9. ಇಬ್ಬರೂ ಪ್ರಧಾನಮಂತ್ರಿಗಳು, ಜಾಗತಿಕ ಕಾಮನ್ಸ್ ಮತ್ತು ಡೊಮೈನ್ಸ್ ಅಂದರೆ ಕಡಲು, ಸೈಬರ್ ಪ್ರದೇಶಗಳನ್ನು ರಕ್ಷಿಸಲು ಆಪ್ತ ಸಹಕಾರವನ್ನು ಸ್ಪಷ್ಟಪಡಿಸಿದರು.
  10. ಇಬ್ಬರೂ ಪ್ರಧಾನಮಂತ್ರಿಗಳು, ವಿಶ್ವಸಂಸ್ಥೆಯ ಸಮುದ್ರದ ಶಾಸನ ಕುರಿತ ಸಮಾವೇಶ (ಯುಎನ್.ಸಿ.ಎಲ್.ಓ.ಎಸ್)ದಲ್ಲಿ ಗಮನಾರ್ಹವಾಗಿ ಬಿಂಬಿಸಲಾದ, ಅಂತಾರಾಷ್ಟ್ರೀಯ ಕಾನೂನಿನ ನೀತಿಗಳ ಆಧಾರದ ಮೇಲೆ ಪಥದರ್ಶಕ ಮತ್ತು  ಫ್ಲೈಟ್ ನ  ಸ್ವಾತಂತ್ರ್ಯಕ್ಕೆ ಗೌರವ ನೀಡುವ ಮತ್ತು ಕಾನೂನುಬದ್ಧ ವಾಣಿಜ್ಯಕ್ಕೆ ಅಡಚಣೆಯುಂಟುಮಾಡದ ತಮ್ಮ ಬದ್ಧತೆ ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಅಂಥ ಚಟುವಟಿಕೆಗಳ ವಿವಾದಗಳನ್ನು ಬೆದರಿಕೆ ಅಥವಾ ಬಲ ಪ್ರದರ್ಶನ ಮತ್ತು ಸ್ವಯಂ ನಿಯಂತ್ರಣದ ಕಸರತ್ತು ಬಳಕೆ ಮಾಡದೆ ಶಾಂತಿ ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಮತ್ತು ಉದ್ವಿಗ್ನತೆ ಹೆಚ್ಚಿಸುವಂಥ ಏಕಪಕ್ಷೀಯ ನಿರ್ಧಾರ ಕೈಗೊಳ್ಳದಂತೆ ಅವರು ಎಲ್ಲ ಪಕ್ಷಕಾರರಿಗೂ ಮನವಿ ಮಾಡಿದರು. ಯುಎನ್. ಸಿ.ಎಲ್.ಓ.ಎಸ್.ನ ಸದಸ್ಯ ರಾಷ್ಟ್ರದ ನಾಯಕರಾಗಿ, ಯುಎನ್.ಸಿ.ಎಲ್.ಓ.ಎಸ್.ಗೆ ಅತ್ಯಂತ ಗೌರವ ತೋರಿಸಬೇಕು ಎಂದು ಒತ್ತಾಯಿಸುವುದಾಗಿ ಇಬ್ಬರೂ ಪ್ರಧಾನಮಂತ್ರಿಗಳು ಹೇಳಿದರು. ದಕ್ಷಿಣ ಚೀಣಾ ಸಮುದ್ರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಜಾಗತಿಕವಾಗಿ ಪರಿಗಣಿಸಲಾಗಿರುವ ಯುಎನ್.ಸಿ.ಎಲ್.ಓ.ಎಸ್ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ  ಶಾಂತಿಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಾದ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಒತ್ತಿ ಹೇಳಿದರು.
  11. ಇಬ್ಬರೂ ಪ್ರಧಾನಮಂತ್ರಿಗಲು ಯುರೇನಿಯಂ ಶಕ್ತ ಚಟುವಟಿಕೆ ಸೇರಿದಂತೆ ಉತ್ತರ ಕೊರಿಯಾ ತನ್ನ ಪರಮಾಣು ಅಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವುದನ್ನು ಮುಂದುವರಿಸಿರುವುದನ್ನು ಬಲವಾಗಿ ಖಂಡಿಸಿದರು ಮತ್ತು ಮುಂದೆ ಇಂಥ ಪ್ರಚೋದನಾತ್ಮಕ ಚಟುವಟಿಕೆಗಳಿಂದ ದೂರ ಉಳಿಯುವಂತೆ, ಅಂತಾರಾಷ್ಟ್ರೀಯ ಹೊಣೆಗಾರಿಕೆ ಮತ್ತು ಬದ್ಧತೆಗಳನ್ನು ನಿಬಾಯಿಸುವಂತೆ ಹಾಗೂ ಕೊರಿಯನ್ ಪೆನಿನ್ಸುಲಾದಲ್ಲಿ ಪರಮಾಣು ನಿಶ್ಶಸ್ತ್ರೀಕರಣದ ಯು.ಎನ್.ಎಸ್.ಸಿ. ನಿರ್ಣಯವನ್ನು ಸಂಪೂರ್ಣ ಪಾಲಿಸುವಂತೆ ಒತ್ತಾಯಿಸಿದರು. ಇಬ್ಬರೂ ಪ್ರಧಾನ ಮಂತ್ರಿಗಳು ವಲಯಕ್ಕೆ ಅಪಾಯ ಒಡ್ಡಿರುವ ಪ್ರಸರಣ ಚಟುವಟಿಕೆಗಳ ವಿರುದ್ಧದ ಹೋರಾಟಕ್ಕೆ ಸಹಕರಿಸಲು ತಮ್ಮ ನಿರ್ಧಾರದ ಸ್ಪಷ್ಟಪಡಿಸಿದರು. ಅಪಹರಣ ವಿಷಯವನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸುವಂತೆ ಉತ್ತರ ಕೊರಿಯಾವನ್ನು ಅವರು ಒತ್ತಾಯಿಸಿದರು.
  12. ಜಪಾನ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಇನ್ನೂ ಹೆಚ್ಚಿನ ಕೊಡುಗೆ ನೀಡಲಿದೆ ಎಂದು ಪ್ರಧಾನಮಂತ್ರಿ ಅಬೆ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು. ಪ್ರಧಾನಮಂತ್ರಿ ಮೋದಿ ಅವರು, ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆ ಮತ್ತು ಏಳಿಗೆಗೆ ನೀಡುತ್ತಿರುವ ಧನಾತ್ಮಕ ಕೊಡುಗೆಯನ್ನು ಕೊಂಡಾಡಿದರು.
  13. ಇಪ್ಪತ್ತೊಂದನೇ ಶತಮಾನದ ಸಮಕಾಲೀನ ವಾಸ್ತವಗಳನ್ನು ಗಣನೆಗೆ ತೆಗೆದುಕೊಂಡು  ಸಮರ್ಥವಾಗಿ ಮತ್ತು ಪ್ರತಿನಿಧಿತ್ವದಿಂದ ಹಾಗೂ ಹೆಚ್ಚು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸಲು ಯುಎನ್.ಎಸ್.ಸಿ. ಸೇರಿದಂತೆ ತ್ವರಿತವಾಗಿ ವಿಶ್ವಸಂಸ್ಥೆಯ ಸುಧಾರಣೆಗಳಿಗೆ ಇಬ್ಬರೂ ಪ್ರಧಾನಮಂತ್ರಿಗಳು ಕರೆ ನೀಡಿದರು ಮತ್ತು, ಸಮಾನ ಮನಸ್ಕ ಪಾಲುದಾರರಾಗಿ ಗುರಿ ಸಾಧನೆಗಾಗಿ ಒಗ್ಗೂಡಿ ಕೆಲಸ ಮಾಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು. 
  14. ಭಾರತವು ಏಷ್ಯಾ ಪೆಸಿಫಿಕ್ ನಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಮತ್ತು ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರ ಎಂಬುದನ್ನು ಪರಿಗಣನೆಯಲ್ಲಿಟ್ಟುಕೊಂಡು ಎಪಿಇಸಿಯಲ್ಲಿ ಭಾರತದ ಸದಸ್ಯತ್ವಕ್ಕೆ ಜಪಾನ್ ದೃಢ ಬೆಂಬಲ ನೀಡುವುದಾಗಿ ತಿಳಿಸಿದರು.  ಏಷ್ಯಾ ಪೆಸಿಫಿಕ್ ವಲಯದಲ್ಲಿ ಉದಾರೀಕರಣ ಮತ್ತು ವಾಣಿಜ್ಯ ಅವಕಾಶ ಮತ್ತು ಹೂಡಿಕೆಯ ವಿಚಾರದಲ್ಲಿ ಒಗ್ಗೂಡಿ ಶ್ರಮಿಸಲು ಇಬ್ಬರೂ ಪ್ರಧಾನಮಂತ್ರಿಗಳು ನಿರ್ಧರಿಸಿದರು.
  15. ಆಧುನಿಕ, ಸಮಗ್ರ, ಉನ್ನತ ಗುಣಮಟ್ಟದ ಮತ್ತು ಪರಸ್ಪರರಿಗೆ ಲಾಭವಾಗುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್.ಸಿ.ಇ.ಪಿ.) ಒಪ್ಪಂದದ ಆಖೈರಿನ ಸಹಕಾರಕ್ಕೆ ತಮ್ಮ ಬದ್ಧತೆ ಪುನರುಚ್ಚರಿಸಿದರು.  ಇಬ್ಬರೂ ಪ್ರಧಾನ ಮಂತ್ರಿಗಳು ಡಬ್ಲ್ಯುಟಿಓಮೂಲಕ ವಾಣಿಜ್ಯ ಸೌಲಭ್ಯಗಳನ್ನು ಒಪ್ಪಂದಗಳ ಉದಾರೀಕರಣ ಮತ್ತು ವ್ಯಾಪಾರ ಸುಲಭಗೊಳಿಸುವ ನಿಟ್ಟಿನಲ್ಲಿ ಹಾಗೂ ಏಷ್ಯಾ ಪೆಸಿಫಿಕ್ ವಲಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ಸರಕು ಮತ್ತು ಸೇವೆಗಳ ವಾಣಿಜ್ಯದ ಹೆಚ್ಚಳಕ್ಕೆ ಕೆಲಸ ಮಾಡಲು ನಿರ್ಧರಿಸಿದರು. ಈ ವರ್ಷ ಜಿ 20 ನಾಯಕರು ಕರೆ ನೀಡಿರುವಂತೆ ಉಕ್ಕು ಕೈಗಾರಿಕೆಯಲ್ಲಿ ಹೆಚ್ಚಿನ ಸಾಮರ್ಥ್ಯಕ್ಕೆ ಜಾಗತಿಕ ವೇದಿಕೆ ರೂಪಿಸುವುದೂ ಸೇರಿದಂತೆ ಉಕ್ಕು ಕೈಗಾರಿಕೆಯಲ್ಲಿ ಹೆಚ್ಚಿನ ಸಹಕಾರ ಮತ್ತು ಸಂವಹನ ಮಹತ್ವವನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು.
  16. ಪರಮಾಣು ಶಸ್ತ್ರಾಶ್ತ್ರಗಳ ಸಂಪೂರ್ಣ ನಿರ್ಮೂಲನೆಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಇಬ್ಬರೂ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು. ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದ (ಸಿಟಿಬಿಟಿ)ಯ ಶೀಘ್ರ ಜಾರಿಯ ಮಹತ್ವವನ್ನು ಪ್ರಧಾನಮಂತ್ರಿ ಅಬೆ ಅವರು ಒತ್ತಿ ಹೇಳಿದರು. ತಾರತಮ್ಯರಹಿತವಾದ, ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯವಾದ ಮತ್ತು ಸಮರ್ಥವಾಗಿಪರಿಶೀಲಿಸಬಹುದಾದ ವಿದಳನೀಯ ಸಾಮಗ್ರಿಗಳನ್ನು ತಡೆಯುವ ಒಪ್ಪಂದ (ಎಫ್.ಎಂ.ಸಿ.ಟಿ)ಯ ಶೀಘ್ರ ಆಖೈರು ಮಾತುಕತೆಯ ಬದ್ಧತೆಗೂ ಅವರು ಕರೆ ನೀಡಿದರು. ಪರಮಾಣು ಪ್ರಸರಣ ಮತ್ತು ಪರಮಾಣು ಭಯೋತ್ಪಾದನೆಯ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯವಾಗಿ ಬಲವಾದ ಸಹಕಾರದ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.
  17. ಇಬ್ಬರೂ ಪ್ರಧಾನಮಂತ್ರಿಗಳು ರಾಷ್ಟ್ರೀಯ ರಫ್ತು ನಿಯಂತ್ರಣ ವ್ಯವಸ್ಥೆಯ ಮಹತ್ವನ್ನು ಗುರುತಿಸಿದರು. ಜಪಾನ್, ಭಾರತದ ಇತ್ತೀಚಿನ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಂ.ಟಿ.ಸಿ.ಆರ್.) ಮತ್ತು ಖಂಡಾಂತರ ಕ್ಷಿಪಣಿ ಪ್ರಸರಣದ ಕುರಿತಂತೆ ಹೇಗ್ ನೀತಿ ಸಂಹಿತೆ(ಎಚ್.ಸಿ.ಓ.ಸಿ.)ಯನ್ನು ಸ್ವಾಗತಿಸಿತು. ಅಂತಾರಾಷ್ಟ್ರೀಯ ಪರಮಾಣು ಪ್ರಸರಣ ತಡೆಯನ್ನು ಬಲಪಡಿಸುವ ಉದ್ದೇಶದಿಂದ ಇಬ್ಬರೂ ಪ್ರಧಾನಮಂತ್ರಿಗಳು ಭಾರತವು ಉಳಿದ ಮೂರು ಅಂತಾರಾಷ್ಟ್ರೀಯ ರಫ್ತು ನಿಯಂತ್ರಣ ಆಡಳಿತದಲ್ಲಿ ಅಂದರೆ ಪರಮಾಣು ಸರಬರಾಜು ಗುಂಪು, ವಸ್ಸೇನಾರ್ ಒಪ್ಪಂದ ಮತ್ತು ಆಸ್ಟ್ರೇಲಿಯಾ ಗುಂಪಿನಲ್ಲಿ ಪೂರ್ಣ ಸದಸ್ಯನಾಗಲು ಒಗ್ಗೂಡಿ ದುಡಿಯುವುದಾಗಿ ಪುನರುಚ್ಚರಿಸಿದರು.

ಅಂತಿಮವಾಗಿ

  1. ಪ್ರಧಾನಮಂತ್ರಿ ಮೋದಿ ಅವರು ತಮಗೆ ನೀಡಿದ ಆತ್ಮೀಯ ಆತಿಥ್ಯಕ್ಕಾ ಜಪಾನ್ ಸರ್ಕಾರ ಮತ್ತು ಜನತೆಗೆ ಧನ್ಯವಾದ ಅರ್ಪಿಸಿದರು ಮತ್ತು ಮುಂದಿನ ಶೃಂಗಸಭೆಗಾಗಿ ಪರಸ್ಪರರಿಗೆ ಅನುಕೂಲಕರವಾದ ಸಮಯದಲ್ಲಿ ಭಾರತಕ್ಕೆ ಬೇಟಿ ನೀಡುವಂತೆ ಪ್ರಧಾನಿ ಅಬೆ ಅವರಿಗೆ ಆತ್ಮೀಯ ಆಹ್ವಾನ ನೀಡಿದರು. ಪ್ರಧಾನಿ ಅಬೆ ಅವರು ಮೆಚ್ಚುಗೆಯೊಂದಿಗೆ ಆಹ್ವಾನವನ್ನು ಅಂಗೀಕರಿಸಿದರು.
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s coffee exports zoom 45% to record $1.68 billion in 2024 on high global prices, demand

Media Coverage

India’s coffee exports zoom 45% to record $1.68 billion in 2024 on high global prices, demand
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಜನವರಿ 2025
January 04, 2025

Empowering by Transforming Lives: PM Modi’s Commitment to Delivery on Promises