ಕೊರೋನಾ ಸೋಂಕಿನ ವಿರುದ್ದದ ಹೋರಾಟದ ಸಂದರ್ಭದಲ್ಲಿ ದೇಶದ ಜನತೆ ಪೂರ್ಣ ಪ್ರಮಾಣದಲ್ಲಿ ಪ್ರದರ್ಶಿಸಿದ ಬಲಿಷ್ಠ ನಿಸ್ವಾರ್ಥ ಸ್ಫೂರ್ತಿಯನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ವಿಡಿಯೋ ಸಂವಾದದ ಮೂಲಕ ದೇಶಾದ್ಯಂತ ಕೋವಿಡ್-19 ಸೋಂಕಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಕಳೆದ ವರ್ಷ ದೇಶದ ಜನತೆ ವ್ಯಕ್ತಿಗಳು, ಕುಟುಂಬ ಮತ್ತು ರಾಷ್ಟ್ರವಾಗಿ ಸಾಕಷ್ಟು ಕಲಿತರು ಮತ್ತು ಸಹಿಸಿಕೊಂಡರು. ಖ್ಯಾತ ತೆಲಗು ಕವಿ ಗುರಜದ ವೆಂಕಟ ಅಪ್ಪಾರಾವ್ ಅವರನ್ನು ಉಲ್ಲೇಕಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇತರರಿಗಾಗಿ ನಾವು ಸದಾ ನಿಸ್ವಾರ್ಥ ಮನೋಭಾವನೆಯಿಂದ ಕೆಲಸ ಮಾಡಬೇಕು. ದೇಶವೆಂದರೆ ಕೇವಲ ಮಣ್ಣಲ್ಲ, ನೀರು ಮತ್ತು ಕಲ್ಲುಗಳಲ್ಲ. ಆದರೆ ದೇಶ “ನಾವು ಭಾರತೀಯ ಜನತೆ” ಎಂದು ಎದ್ದು ನಿಲ್ಲುತ್ತದೆ. ಇದೇ ಸ್ಪೂರ್ತಿಯಿಂದ ಭಾರತದಲ್ಲಿ ಕೊರೋನಾ ವಿರುದ್ದ ಹೋರಾಟ ಮಾಡಲಾಗಿದೆ ಎಂದು ಹೇಳಿದರು.
ತಮ್ಮ ಸಮೀಪದವರು ಸೋಂಕಿನಿಂದ ತೊಂದರೆಗೆ ಒಳಗಾದಾಗ ನೆರವಿಗೆ ಧಾವಿಸುವ ವಿಚಾರದಲ್ಲಿ ದೇಶದ ಜನತೆ ಗೊಂದಲಕ್ಕೆ ಒಳಗಾದ, ಅಸಹಾಯಕರಾದ ಆರಂಭಿಕ ಹಂತವನ್ನು ಸೂಕ್ಷ್ಮತೆ ಮತ್ತು ಅನುಭೂತಿಯಿಂದಲೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ಮರಿಸಿಕೊಂಡರು. ಈ ರೋಗ ಸೋಂಕಿತರನ್ನು ಪ್ರತ್ಯೇಕವಾಗಿ ಮತ್ತು ಏಕಾಂಗಿಯಾಗಿಸಿತು. ಅನಾರೋಗ್ಯ ಮಕ್ಕಳನ್ನು ತಾಯಂದಿರಿಂದ ಬೇರ್ಪಡಿಸಲಾಯಿತು. ವಯಸ್ಸಾದ ಪೋಷಕರು ಆಸ್ಪತ್ರೆಗಳಲ್ಲಿ ರೋಗದ ವಿರುದ್ಧ ಹೋರಾಟ ಮಾಡುವಂತೆ ಒತ್ತಾಯಿಸಲ್ಪಡುವಂತಹ ವಾತಾವರಣ ನಿರ್ಮಾಣ ಮಾಡಲಾಯಿತು. ಕೊರೋನಾ ವಿರುದ್ಧ ಹೋರಾಟ ಮಾಡಿ ಅಗಲಿದ ಸಂಬಂಧಿಕರಿಗೆ ಸೂಕ್ತ ರೀತಿಯಲ್ಲಿ ಬೀಳ್ಕೊಡುಗೆ ನೀಡಲು ಸಾದ್ಯವಾಗಲಿಲ್ಲ. ಅಂತಹ ನೆನಪು ಇಂದಿಗೂ ನಮಗೆ ದುಖಃ ತರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಭಾವನಾತ್ಮಕವಾಗಿ ತಮ್ಮ ನಿಲವು ವ್ಯಕ್ತಪಡಿಸಿದರು.
ಅಂತಹ ಕರಾಳ ದಿನಗಳಲ್ಲಿ ಕೆಲವು ಜನತೆ ಭರವಸೆ ಮತ್ತು ನೆರವು ತರುತ್ತಿದ್ದರು ಎಂಬುದನ್ನು ಪ್ರಧಾನಮಂತ್ರಿ ಅವರು ಸ್ಪರಿಸಿಕೊಂಡರು. ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಆಶಾ ಕಾರ್ಯಕರ್ತೆಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು. ಇತರೆ ಪ್ರಮುಖ ಸೇನಾನಿಗಳು ಇನ್ನೊಬ್ಬರ ಜೀವ ರಕ್ಷಣೆಗಾಗಿ ತಮ್ಮನ್ನು ಈ ಹೋರಾಟದಲ್ಲಿ ತೊಡಗಿಸಿಕೊಂಡಿದ್ದನ್ನು ಸುದೀರ್ಘವಾಗಿಯೇ ಪ್ರಸ್ತಾಪಿಸಿದರು. ಇವರು ವೈಯಕ್ತಿಕ ಹಿತಾಸಕ್ತಿಗಿಂತ ಮಾನವೀಯತೆಯಿಂದ ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿದರು. ಕೊರೋನಾ ವಿರುದ್ಧದ ಹೋರಾಟದಲ್ಲಿ ಕೆಲವರು ತಮ್ಮ ಜೀವ ಕಳೆದುಕೊಂಡರು. ನಂತರ ಅಂತಹವರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗಲಿಲ್ಲ ಎಂಬುದನ್ನು ಗಂಭೀರವಾಗಿಯೇ ನೆನಪುಮಾಡಿಕೊಂಡರು. ನಿರಾಶೆ ಮತ್ತು ಭಯದ ವಾತಾವರಣದಲ್ಲಿ ಮಂಚೂಣಿ ಸೇನಾನಿಗಳು ಭರವಸೆ ತಂದರು. ಇಂದು ಇಂತಹ ಪ್ರಮುಖ ಯೋಧರಿಗೆ ಮೊದಲು ಲಸಿಕೆ ಹಾಕುವ ಮೂಲಕ ದೇಶ ತನ್ನ ಕೃತಜ್ಞತೆಯನ್ನು ತೋರುತ್ತಿದೆ ಎಂದರು.