ಭಾರತೀಯ ಉದ್ಯಮಿ ಶ್ರೀ ವಿಶಾಲ್ ಸಿಕ್ಕಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಶ್ರೀ ಮೋದಿಯವರು ಈ ಭೇಟಿಯನ್ನು ಉಪಯುಕ್ತ ಸಂವಾದ ಎಂದು ಬಣ್ಣಿಸಿದರು. ನಾವೀನ್ಯತೆ ಮತ್ತು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಿ ಎಐನಲ್ಲಿ ಮುನ್ನಡೆ ಸಾಧಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು. ಅವರಿಬ್ಬರೂ ಕೃತಕ ಬುದ್ಧಿಮತ್ತೆ ಹಾಗೂ ಭಾರತದ ಮೇಲೆ ಅದರ ಪರಿಣಾಮ ಮತ್ತು ಮುಂಬರುವ ದಿನಗಳಲ್ಲಿನ ಹಲವಾರು ವಿಧಿರೂಪ ಬಗ್ಗೆ ವಿವರವಾದ ವ್ಯಾಪಕ ಚರ್ಚೆ ನಡೆಸಿದರು.
ವಿಶಾಲ್ ಸಿಕ್ಕಾ ಅವರ X ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
"ಇದು ನಿಜಕ್ಕೂ ದೂರದೃಷ್ಟಿಯುಳ್ಳ ಸಂವಾದ. ನಾವೀನ್ಯತೆ ಮತ್ತು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಿ ಎಐನಲ್ಲಿ ಮುನ್ನಡೆ ಸಾಧಿಸಲು ಭಾರತ ಬದ್ಧವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
It was an insightful interaction indeed. India is committed to taking the lead in AI, with a focus on innovation and creating opportunities for the youth. https://t.co/s0Ok9AE09A
— Narendra Modi (@narendramodi) January 4, 2025