PM Narendra Modi meets the President of Indonesia, Mr. Joko Widodo
PM Modi & Prez Widodo hold extensive talks on bilateral, regional & global issues of mutual interest
India & Indonesia agree to hold annual Summit meetings, including on the margins of multilateral events
India & Indonesia welcome submission of a Vision Document 2025 by India-Indonesia Eminent Persons Group
Emphasis to further consolidate the security and defence cooperation between the India & Indonesia
India & Indonesia resolve to significantly enhance bilateral cooperation in combating terrorism

• ಇಂಡೋನೇಷಿಯಾ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ. ಜೋಕೋ ವಿಡೋಡೋ ಅವರು ಭಾರತ ಗಣರಾಜ್ಯದ ಘನತೆವೆತ್ತ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ 2016ರ ಡಿಸೆಂಬರ್ 11ರಿಂದ 13ರವರೆಗೆ ಭಾರತ ದೇಶಕ್ಕೆ ಭೇಟಿ ನೀಡಿದ್ದಾರೆ. ಇದು ಜೋಕೋ ವಿಡೋಡೋ ಅವರ ಪ್ರಥಮ ದ್ವಿಪಕ್ಷೀಯ ಭಾರತ ಭೇಟಿ ಆಗಿದೆ.

• ಘನತೆವೆತ್ತ ಅಧ್ಯಕ್ಷ ಜೋಕೋ ವಿಡೋಡೋ ಅವರು 2016ರ ಡಿಸೆಂಬರ್ 12ರಂದು ರಾಷ್ಟ್ರಪತಿ ಭವನದಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿ ಘನತೆವೆತ್ತ ಶ್ರೀ. ಪ್ರಣಬ್ ಮುಖರ್ಜಿ ಅವರೊಂದಿಗೆ ಸಭೆ ನಡೆಸಿದರು, ಸಭೆಯ ಬಳಿಕ ಔತಣ ಏರ್ಪಡಿಸಲಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋಕೋ ವಿಡೋಡೋ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಚಾರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು. 2015ರ ನವೆಂಬರ್ ನಲ್ಲಿ ಇಂಡೋನೇಷಿಯಾಕ್ಕೆ ಭೇಟಿ ನೀಡಿದ್ದ ಭಾರತದ ಉಪ ರಾಷ್ಟ್ರಪತಿ ಶ್ರೀ. ಎಂ. ಹಮೀದ್ ಅನ್ಸಾರಿ ಅವರು ಇಂಡೋನೇಷಿಯಾದ ಅಧ್ಯಕ್ಷರನ್ನು ಭೇಟಿ ಮಾಡಿದರು.

• ಎರಡೂ ರಾಷ್ಟ್ರಗಳು ಹಿಂದೂಧರ್ಮ, ಬೌದ್ಧಧರ್ಮ ಮತ್ತು ಇಸ್ಲಾಂನ ಸಮಾನ ಪರಂಪರೆಯೂ ಸೇರಿದಂತೆ ಜನರೊಂದಿಗಿನ ಆಳವಾದ ನಾಗರಿಕ ಸಂಪರ್ಕದೊಂದಿಗೆ ಭಾರತ ಮತ್ತು ಇಂಡೋನೇಷಿಯಾಗಳು ಕಡಲ ನೆರೆಯ ಬಾಂಧವ್ಯವನ್ನು ಹೊಂದಿವೆ ಎಂಬುದನ್ನು ಪ್ರಧಾನಮಂತ್ರಿ ಮೋದಿ ಹಾಗೂ ಅಧ್ಯಕ್ಷ ವಿಡೋಡೋ ಅವರು ಉಲ್ಲೇಖಿಸಿದರು. ಶಾಂತಿಯುತ ಸಹ –ಅಸ್ತಿತ್ವ ಸಾಧನೆಗೆ ಬಹು ಸಂಸ್ಕೃತಿ, ಪ್ರಜಾಪ್ರಭುತ್ವ ಮತ್ತು ಆಡಳಿತ ಕಾನೂನು ಪ್ರಮುಖ ಮೌಲ್ಯಗಳಾಗಿವೆ ಎಂಬುದನ್ನು ಅವರು ಒತ್ತಿ ಹೇಳಿದರು.

ದೀರ್ಘಕಾಲೀನ ವ್ಯೂಹಾತ್ಮಕ ಪಾಲುದಾರಿಕೆಗೆ ಆಧಾರ ಒದಗಿಸಬಲ್ಲ ರಾಜಕೀಯ, ಆರ್ಥಿಕ ಮತ್ತು ಎರಡೂ ರಾಷ್ಟ್ರಗಳ ನಡುವಿನ ವ್ಯೂಹಾತ್ಮಕ ಹಿತದ ಒಮ್ಮತವನ್ನು ಅವರು ಸ್ವಾಗತಿಸಿದರು.

• 2005ರ ನವೆಂಬರ್ ನಲ್ಲಿ ಕಾರ್ಯತಂತ್ರಾತ್ಮಕ ಪಾಲುದಾರಿಕೆ ಸ್ಥಾಪಿಸಿದ ತರುವಾಯ ಬಾಂಧವ್ಯವು ಹೊಸ ಚಾಲನೆ ಪಡೆದುಕೊಂಡಿದೆ ಎಂಬುದನ್ನು ನಾಯಕರು ಉಲ್ಲೇಖಿಸಿದರು. 2011ರಲ್ಲಿ ಇಂಡೋನೇಷಿಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುಂಬರುವ ದಶಕಕ್ಕಾಗಿ ಭಾರತ – ಇಂಡೋನೇಷಿಯಾ ಹೊಸ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನುವಿಶ್ಲೇಷಿಸುವ ಜಂಟಿ ಹೇಳಿಕೆಯನ್ನು ಅಳವಡಿಸಿಕೊಂಡ ತರುವಾಯ ಮತ್ತು 2013ರ ಅವಧಿಯಲ್ಲಿ ಭಾರತದ ಪ್ರಧಾನಮಂತ್ರಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರ್ಯತಂತ್ರಾತ್ಮಕ ಪಾಲುದಾರಿಕೆಯನ್ನು ಬಲಪಡಿಸಲು ಐದು ಕವಲುಗಳ ಉಪಕ್ರಮವನ್ನು ಅಳವಡಿಸಿಕೊಂಡ ತರುವಾಯ ಇದು ಮತ್ತಷ್ಟು ಚೈತನ್ಯ ಪಡೆಯಿತು. ಇಬ್ಬರೂ ನಾಯಕರು 2014ರ ನವೆಂಬರ್ 13ರಂದು ನೇಪೆಯಲ್ಲಿ ಆಸಿಯಾನ್ ಶೃಂಗಸಭೆಯ ವೇಳೆ ತಾವಿಬ್ಬರೂ ಪ್ರಥಮ ಬಾರಿಗೆ ಭೇಟಿ ಮಾಡಿದ್ದನ್ನು ಸ್ಮರಿಸಿದರು. ಆ ಸಂದರ್ಭದಲ್ಲಿ ಇಬ್ಬರೂ ಭಾರತ ಮತ್ತು ಇಂಡೋನೇಷಿಯಾ ನಡುವಿನ ಸಹಕಾರ ವಲಯಗಳ ಕುರಿತಂತೆ ಸಮಗ್ರವಾಗಿ ಚರ್ಚಿಸಿದ್ದರು.

ಕಾರ್ಯತಂತ್ರಾತ್ಮಕ ಕಾರ್ಯಕ್ರಮಗಳು

• ಇಂಡೋನೇಷಿಯಾದ ಅಧ್ಯಕ್ಷರು ಮತ್ತು ಭಾರತದ ಪ್ರಧಾನಮಂತ್ರಿಯವರು ಬಹುಪಕ್ಷೀಯ ಕಾರ್ಯಕ್ರಮಗಳ ಸಂದರ್ಭದ ಭೇಟಿ ಜೊತೆಗೆ ವಾರ್ಷಿಕ ಶೃಂಗಸಭೆಗಳನ್ನು ನಡೆಸಲು ಸಮ್ಮತಿ ಸೂಚಿಸಿದರು.

• ಸಚಿವರ ಮಟ್ಟದ ಮತ್ತು ಕಾರ್ಯಗುಂಪುಗಳ ವ್ಯವಸ್ಥೆಯೂ ಸೇರಿದಂತೆ ಸದೃಢವಾದ ಮಾತುಕತೆಗಳನ್ನು ರೂಪಿಸುವ ಮೂಲಕ ದ್ವಿಪಕ್ಷೀಯ ಮಾತುಕತೆಗಳನ್ನು ಮುಂದುವರಿಸುವ ಮಹತ್ವವನ್ನೂ ಅವರು ಒತ್ತಿ ಹೇಳಿದರು.

• ಕಲ್ಲಿದ್ದಲು, ಕೃಷಿ, ಭಯೋತ್ಪಾದನೆ ನಿಗ್ರಹ, ಆರೋಗ್ಯ ಮತ್ತು ಮಾದಕದ್ರವ್ಯ, ನಶೆಯ ಪದಾರ್ಥ, ಮನಸ್ಸಿನ ಮೇಲೆ ಪರಿಮಾಣ ಬೀರುವ ವಸ್ತುಗಳ ಕಳ್ಳ ಸಾಗಣೆಯ ತಡೆ ಮತ್ತು ಕುರಿತ ಮತ್ತು ಅದರ ಪೂರ್ವವರ್ತಿಯಾಗಿ 2014ರ ನವೆಂಬರ್ ನಲ್ಲಿ ನೇ ಪೈ ತಾವ್ ನಲ್ಲಿ ಇಬ್ಬರು ನಾಯಕರ ನಡುವೆ ನಡೆದ ಸಭೆಯ ನಂತರದ ಕ್ಷೇತ್ರೀಯ ಜಂಟಿ ಕಾರ್ಯ ಗುಂಪುಗಳಡಿ ಆಗಿರುವ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು. ಸಭೆಯಲ್ಲಿನ ಫಲಶ್ರುತಿಗಳನ್ನು ಅನುಷ್ಠಾನಗೊಳಿಸಲು ನಾಯಕರು ಸಮ್ಮತಿ ಸೂಚಿಸಿದರು.

• ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವೆ ಸಂಸದೀಯ ವಿನಿಮಯದ ಮಹತ್ವವನ್ನು ಈ ನಾಯಕರು ಪುನರುಚ್ಚರಿಸಿದರು ಮತ್ತು ಎರಡೂ ಸಂಸತ್ತುಗಳ ಪ್ರತನಿಧಿಗಳು ನಿಯಮಿತವಾಗಿ ಭೇಟಿ ಮಾಡುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, 2016ರ ಏಪ್ರಿಲ್ ನಲ್ಲಿ ಭಾರತದ ಸಂಸದೀಯ ನಿಯೋಗ ಇಂಡೋನೇಷಿಯಾಕ್ಕೆ ಮತ್ತು 2015ರ ಡಿಸೆಂಬರ್ ನಲ್ಲಿ ಇಂಡೋನೇಷಿಯಾದ ಹೌಸ್ ಆಫ್ ಪೀಪಲ್ಸ್ ಪ್ರತಿನಿಧಿಗಳು ಮತ್ತು ವಲಯಗಳ ಪ್ರತಿನಿಧಿಗಳ ಪರಿಷತ್ತಿನ ಸದಸ್ಯರು ಭಾರತಕ್ಕೆ ಭೇಟಿ ನೀಡಿದ್ದನ್ನು ಅವರು ಪ್ರಶಂಸಿಸಿದರು.

• ಇಬ್ಬರೂ ನಾಯಕರು ಈ ವರ್ಷದ ಆರಂಭದಲ್ಲಿ ತಮ್ಮ ಕಾರ್ಯ ಆರಂಭಿಸಿದ್ದ ಭಾರತ- ಇಂಡೋನೇಷಿಯಾ ತಜ್ಞ ವ್ಯಕ್ತಿಗಳ ಗುಂಪು (ಇಪಿಜಿ) 2025ರ ಮುನ್ನೋಟದ ದಸ್ತಾವೇಜನನ್ನು ಸಲ್ಲಿಸಿರುವುದನ್ನು ಸ್ವಾಗತಿಸಿದರು. ಈ ದಸ್ತಾವೇಜು 2025ರವರೆಗಿನ ಮತ್ತು ಅದರಾಚೆಯ ದ್ವಿಪಕ್ಷೀಯ ಬಾಂಧವ್ಯದ ಭವಿಷ್ಯದ ಪಥದ ಕುರಿತಂತೆ ಶಿಫಾರಸುಗಳನ್ನು ರೂಪಿಸಿದೆ.

• ನಾಯಕರು, ಇಸ್ರೋದಿಂದ 2015ರ ಸೆಪ್ಟೆಂಬರ್ ನಲ್ಲಿ -ಎಲ್.ಎ.ಪಿ.ಎ.ಎನ್ ಎ2 ಮತ್ತು 2016ರ ಜೂನ್ ನಲ್ಲಿ -ಎಲ್.ಎ.ಪಿ.ಎ.ಎಲ್. ಎ.3 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದನ್ನು ಸ್ವಾಗತಿಸಿದರು. ಲಪ್ಯಾನ್ ಮತ್ತು ಇಸ್ರೋ ಬಾಹ್ಯಾಕಾಶ ಕುರಿತಂತೆ ತಮ್ಮ ನಾಲ್ಕನೇ ಜಂಟಿ ಸಮಿತಿ ಸಭೆಯನ್ನು ಆದಷ್ಟು ಬೇಗ ಕರೆದು, ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕಾಗಿ ಬಳಸುವ ಸಹಕಾರ ಒಪ್ಪಂದದ ಅಂತರ ಸರ್ಕಾರ ಚೌಕಟ್ಟನ್ನು ಆಖೈರುಗೊಳಿಸಲು ಮತ್ತು ಜಲರಾಶಿ ಶಾಸ್ತ್ರ, ಹವಾಮಾನ ಮುನ್ಸೂಚನೆ ವಿಕೋಪ ನಿರ್ವಹಣೆ, ಬೆಳೆ ಮುನ್ಸೂಚನೆ ಮತ್ತು ಸಂಪನ್ಮೂಲ ಶೋಧನೆ ಹಾಗೂ ತರಬೇತಿ ಕಾರ್ಯಕ್ರಮಗಳ ಕುರಿತ ಇತರ ಸಂಬಂಧಿತ ಒಪ್ಪಂದಗಳನ್ನು ಶೀಘ್ರ ಆಖೈರುಗೊಳಿಸುವಂತೆಯೂ ಸೂಚಿಸಿದರು.

ರಕ್ಷಣೆ ಮತ್ತು ಭದ್ರತಾ ಸಹಕಾರ

• ಕಾರ್ಯತಂತ್ರಾತ್ಮಕ ಪಾಲುದಾರ ಮತ್ತು ಕಡಲ ನೆರೆಯವರಾಗಿ, ಇಬ್ಬರೂ ನಾಯಕರು, ಎರಡೂ ರಾಷ್ಟ್ರಗಳ ನಡುವೆ ಇನ್ನೂ ಹೆಚ್ಚಿನ ರಕ್ಷಣೆ ಮತ್ತು ಭದ್ರತೆ ಸಹಕಾರವನ್ನು ಸಮಗ್ರೀಕರಿಸುವ ಮಹತ್ವವನ್ನು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ರಕ್ಷಣಾ ಕ್ಷೇತ್ರದಲ್ಲಿನ ಸಹಕಾರ ಚಟುವಟಿಕೆಗಳ ಒಪ್ಪಂದ’ವನ್ನು ರಕ್ಷಣಾ ಸಹಕಾರದ ದ್ವಿಪಕ್ಷೀಯ ಒಪ್ಪಂದವಾಗಿಸಲು ಪರಾಮರ್ಶಿಸಲು ಹಾಗೂ ಮೇಲ್ದರ್ಜೆಗೇರಿಸಲು ರಕ್ಷಣಾ ಸಚಿವರುಗಳ ಮಾತುಕತೆ ಮತ್ತು ರಕ್ಷಣಾ ಸಹಕಾರದ ಜಂಟಿ ಸಮಿತಿ (ಜೆಡಿಸಿಸಿ) ಸಭೆಯನ್ನು ಶೀಘ್ರ ಕರೆಯುವಂತೆ ಅವರು ಸಚಿವರಿಗೆ ನಿರ್ದೇಶನ ನೀಡಿದರು.

• ಎರಡೂ ರಾಷ್ಟ್ರಗಳ ಸೇನೆಗಳ ನಡುವೆ (ಆಗಸ್ಟ್ 2016) ಮತ್ತು ನೌಕಾಪಡೆಗಳ ನಡುವೆ (ಜೂನ್ 2015) ಸಿಬ್ಬಂದಿ ಮಟ್ಟದಲ್ಲಿ ಮಾತುಕತೆ ಯಶಸ್ವಿಯಾಗಿ ಮುಗಿದಿರುವುದನ್ನು ಮತ್ತು ಇದರಿಂದ ಎರಡೂ ರಾಷ್ಟ್ರಗಳ ಸಶಸ್ತ್ರ ಪಡೆಗಳ ನಡುವೆ ರಕ್ಷಣಾ ಸಹಕಾರ ಹೆಚ್ಚಳವಾಗಿರುವುದನ್ನು ಮತ್ತು ಶೀಘ್ರವೇ ವಾಯು ಪಡೆಗಳ ಸಿಬ್ಬಂದಿ ನಡುವಿನ ಮಾತುಕತೆ ನಡೆಯಲಿದೆ ಎಂಬುದನ್ನು ನಾಯಕರು ಉಲ್ಲೇಖಿಸಿದರು. ಎರಡೂ ಕಡೆಯವರು ರಕ್ಷಣಾ ವಿನಿಮಯಗಳ, ವಿಶೇಷ ಪಡೆಗಳೂ ಸೇರಿದಂತೆ ತರಬೇತಿ ಮತ್ತು ಜಂಟಿ ಸಮರಾಭ್ಯಾಸದ ಸಂಖ್ಯೆಯನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಿದರು. ತಂತ್ರಜ್ಞಾನ ವರ್ಗಾವಣೆ, ತಾಂತ್ರಿಕ ನೆರವು,ಮತ್ತು ಸಾಮರ್ಥ್ಯವನ್ನು ಸಹಕಾರ ಉಪಕರಣಗಳನ್ನು ಜಂಟಿ ಉತ್ಪಾದನೆಗೆ ರಕ್ಷಣಾ ಕೈಗಾರಿಕೆಗಳ ನಡುವೆ ಸಹಯೋಗ ಅನ್ವೇಷಿಸಲು ಎರಡೂ ಕಡೆಯ ರಕ್ಷಣಾ ಸಚಿವರುಗಳಿಗೆ ಕೆಲಸ ವಹಿಸಿದರು.

• ಇಬ್ಬರೂ ನಾಯಕರು, ಜಾಗತಿಕ ಭಯೋತ್ಪಾದನೆಯಿಂದ ಮತ್ತು ಇತರ ಬಹು ರಾಷ್ಟ್ರೀಯ ಅಪರಾಧಗಳಿಂದ ಎದುರಾಗಿರುವ ಭೀತಿಯ ಬಗ್ಗೆ ಮತ್ತು ಭಯೋತ್ಪಾದನೆ ನಿಗ್ರಹ, ಭಯೋತ್ಪಾದಕರಿಗೆ ಹಣ ಪೂರೈಕೆ ತಡೆ, ಅಕ್ರಮ ಹಣ ಸಾಗಣೆ, ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾನವ ಕಳ್ಳ ಸಾಗಾಟ ಮತ್ತು ಸೈಬರ್ ಅಪರಾಧ ತಡೆಗಟ್ಟುವ ಬಗ್ಗೆ ಚರ್ಚಿಸಿದರು. ನಿಯಮಿತವಾಗಿ ಸಭೆ ಸೇರಿ, ಸೈಬರ್ ಸುರಕ್ಷತೆ ಸೇರಿದಂತೆ ಪರಸ್ಪರ ಹಿತದ ಬಗ್ಗೆ ಚರ್ಚಿಸಲು 2015ರ ಅಕ್ಟೋಬರ್ ನಲ್ಲಿ ನಡೆದ ಹಿಂದಿನ ಸಭೆಯ ಫಲಶ್ರುತಿಯ ಕುರಿತಂತೆ ಪರಾಮರ್ಶಿಸಿದ ಭಯೋತ್ಪಾದನೆ ನಿಗ್ರಹದ ಮೇಲಿನ ಜಂಟಿ ಕಾರ್ಯಪಡೆಯನ್ನು ಅವರು ಶ್ಲಾಘಿಸಿದರು. ಆಗಸ್ಟ್ 2016 ರಲ್ಲಿ ನಡೆದ ಮಾದಕವಸ್ತುಗಳ ಮಾದಕದ್ರವ್ಯ, ಮನಸ್ಸಿನ ಮೇಲೆ ಪ್ರಭಾವ ಬೀರುವ ವಸ್ತುಗಳ ನಿಷೇಧಿತ ಸಾಗಣಿಕೆ ತಡೆಯುವ ಕುರಿತು ಜಂಟಿ ಕಾರ್ಯಪಡೆಯ ಮೊದಲ ಸಭೆಯನ್ನೂ ಅವರು ಸ್ವಾಗತಿಸಿದರು.ಈ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸಲೂ ಎರಡೂ ಕಡೆಯವರು ಸಮ್ಮತಿಸಿದ್ದಾರೆ.

• ದೆಹಲಿಯಲ್ಲಿ ವಿಕೋಪ ಅಪಾಯ ತಗ್ಗಿಸುವ ಕುರಿತ ಏಷಿಯಾ ಸಚಿವರುಗಳ ಮಟ್ಟದ ಸಭೆ 2016ನ್ನು ಯಶಸ್ವಿಯಾಗಿ ಆಯೋಜಿಸಿದ್ದನ್ನು ನಾಯಕರು ಸ್ವಾಗತಿಸಿದರು, ಮತ್ತು ಈ ಕ್ಷೇತ್ರದಲ್ಲಿ ಸಹಕಾರದ ಸಾಮರ್ಥ್ಯವನ್ನು ಗುರುತಿಸಿದರು ಮತ್ತು ನಿಯಮಿತವಾಗಿ ಜಂಟಿ ಸಮರಾಭ್ಯಾಸ ಮತ್ತು ತರಬೇತಿ ಸಹಕಾರವನ್ನು ಸಾಂಸ್ಥೀಕರಿಸಲು ಮತ್ತು ಪ್ರಕೃತಿ ವಿಕೋಪಕ್ಕೆ ಸ್ಪಂದಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು

ಪುನಶ್ಚೇತನಗೊಳಿಸಿಕೊಳ್ಳುವಂತೆ ತಮ್ಮ ತಮ್ಮ ಕಡೆಯವರಿಗೆ ನಿರ್ದೇಶನ ನೀಡಿದರು.

• ನಾಯಕರು ತಮ್ಮ ತಮ್ಮ ರಾಷ್ಟ್ರಗಳಿಗೆ, ಸುತ್ತಲಿನ ವಲಯಕ್ಕೆ ಮತ್ತು ವಿಶ್ವಕ್ಕೆ ಕಡಲ ಮಹತ್ವನ್ನು ಪ್ರತಿಪಾದಿಸಿದರು. ತಮ್ಮ ಕಡಲ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಅವರು ಸಂಕಲ್ಪಿಸಿದರು ಮತ್ತು ಈ ನಿಟ್ಟಿನಲ್ಲಿ, ಭೇಟಿ ವೇಳೆ ಪ್ರತ್ಯೇಕವಾದ ಕಡಲ ಸಹಕಾರದ ಮೇಲಿನ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಈ ಹೇಳಿಕೆಯು, ಕಡಲ ಸುರಕ್ಷತೆ, ಕಡಲ ಕೈಗಾರಿಕೆ, ಕಡಲ ಸುರಕ್ಷತೆ ಮತ್ತು ಪಥದರ್ಶಕ ಸೇರಿದಂತೆ ವಿಸ್ತೃತ ಶ್ರೇಣಿಯ ಕ್ಷೇತ್ರಗಳನ್ನು ಮತ್ತು ಎರಡೂ ರಾಷ್ಟ್ರಗಳು ಗುರುತಿಸುವ ದ್ವಿಪಕ್ಷೀಯ ಸಹಕಾರವನ್ನೂ ಒಳಗೊಂಡಿರುತ್ತದೆ.

• ಅಕ್ರಮ ಅನಿಯಂತ್ರಿತ, ಮತ್ತು ವರದಿಯಾಗದ (ಐಯುಯು)ಮೀನುಗಾರಿಕೆ ತಡೆಯುವ, ನಿಗ್ರಹಿಸುವ ಮತ್ತು ಹತ್ತಿಕ್ಕುವ ತುರ್ತು ಅಗತ್ಯವನ್ನು ನಾಯಕರು ಪ್ರತಿಪಾದಿಸಿದರು ಮತ್ತು ಐಯುಯು ಮೀನುಗಾರಿಕೆ ಕುರಿತ ಜಂಟಿ ಸಂದೇಶಕ್ಕೆ ಸಹಿ ಹಾಕುವುದನ್ನು ಮತ್ತು ಇಂಡೋನೇಷ್ಯಾ ಮತ್ತು ಭಾರತದ ನಡುವೆ ಸುಸ್ಥಿರ ಮೀನುಗಾರಿಕೆ ಆಡಳಿತ ಪ್ರಚಾರವನ್ನೂ ಸ್ವಾಗತಿಸಿದರು. ಇಡೀ ವಿಶ್ವಕ್ಕೇ ಭೀತಿಯನ್ನು ಉಂಟು ಮಾಡುತ್ತಿರುವ ಬಹು ರಾಷ್ಟ್ರೀಯ ಸಂಘಟಿತ ಮೀನುಗಾರಿಕೆ ಅಪರಾಧಗಳನ್ನು ಸಹ ಹೊರಹೊಮ್ಮುತ್ತಿರುವ ಅಪರಾಧವೆಂದು ಪರಿಗಣಿಸಲು ಇಬ್ಬರೂ ನಾಯಕರು ನಿರ್ಧರಿಸಿದರು.

ಸಮಗ್ರ ಆರ್ಥಿಕ ಪಾಲುದಾರಿಕೆ

• ಭಾರತ ಮತ್ತು ಇಂಡೋನೇಷಿಯಾ ನಡುವೆ ವಾಣಿಜ್ಯ ಮತ್ತು ಹೂಡಿಕೆಯ ಬಾಂಧವ್ಯದಲ್ಲಿನ ವೃದ್ಧಿಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು, ಮತ್ತು ಎರಡೂ ಕಡೆಯಿಂದ ವಾಣಿಜ್ಯ ಮತ್ತು ಹೂಡಿಕೆಗೆ ಅವಕಾಶ ನೀಡಲು ಖಾಸಗಿ ವಲಯದ ನೇತೃತ್ವದ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಊಹಿಸಬಹುದಾದ ಮುಕ್ತ ಮತ್ತು ಪಾರದರ್ಶಕ ಆರ್ಥಿಕ ನೀತಿಯ ಚೌಕಟ್ಟು ಒದಗಿಸುವ ಮಹತ್ವ ಗುರುತಿಸಿದರು.

• ವಾಣಿಜ್ಯ ಸಚಿವರ ವೇದಿಕೆಯ ದ್ವೈವಾರ್ಷಿಕ (ಬಿಟಿಎಂಎಫ್) ಸಭೆಯನ್ನು ಶೀಘ್ರ ಕರೆಯುವ ಇಂಗಿತವನ್ನು ನಾಯಕರು ವ್ಯಕ್ತಪಡಿಸಿದರು. ಈ ವೇದಿಕೆಯುವ್ಯಾಪಾರ ಮತ್ತು ಹೂಡಿಕೆಯ ಅಡ್ಡಿ ನಿವಾರಿಸುವ ಆರ್ಥಿಕ ನೀತಿಗಳ ಬಗ್ಗೆ ಅಗತ್ಯವಾದ ಮಾತುಕತೆಯನ್ನು ನಡೆಸುತ್ತದೆ.

• ಪ್ರಧಾನಮಂತ್ರಿ ಮೋದಿ ಅವರು ಅಧ್ಯಕ್ಷ ವಿಡೋಡೋ ಅವರಿಗೆ ತಮ್ಮ ಸರ್ಕಾರ ನಾವಿನ್ಯ ಉಪಕ್ರಮಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ವಚ್ಛ ಭಾರತ ಮತ್ತು ಸಾರ್ಟ್ ಅಪ್ ಇಂಡಿಯಾ ಮೂಲಕ ಕೈಗೊಂಡಿರುವ ಭಾರತ ಪರಿವರ್ತನೆಯ ಪ್ರಯತ್ನಗಳ ಬಗ್ಗೆ ವಿವರಿಸಿದರು ಮತ್ತು ಒದಗಿಸಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಇಂಡೋನೇಷಿಯಾ ವಾಣಿಜ್ಯ ಸಮುದಾಯಕ್ಕೆ ಆಹ್ವಾನ ನೀಡಿದರು. ಅಧ್ಯಕ್ಷ ವಿಡೋಡೋ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಇಂಡೋನೆಷಿಯಾ ಇತ್ತೀಚಿಗೆ ಕೈಗೊಂಡಿರುವ ಸುಧಾರಣೆಗಳು ಮತ್ತು ಸುಲಭವಾಗಿ ವಾಣಿಜ್ಯ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು ಮತ್ತು ಔಷಧ, ಮೂಲಸೌಕರ್ಯ, ಐ.ಟಿ., ಇಂಧನ ಮತ್ತು ಉತ್ಪಾದನಾ ಕೈಗಾರಿಕೆಯಲ್ಲಿ ಹೂಡಿಕೆ ಮಾಡಲು ಭಾರತೀಯ ಕಂಪನಿಗಳನ್ನು ಆಹ್ವಾನಿಸಿದರು.

• 2016ರ ಡಿಸೆಂಬರ್ 12ರಂದು ನವದೆಹಲಿಯಲ್ಲಿ ಇಂಡೋನೇಷಿಯಾ – ಭಾರತ ಸಿಇಓಗಳ ವೇದಿಕೆಯಲ್ಲಿ ನಡೆದ ಪ್ರಮುಖ ವಾಣಿಜ್ಯ ನಾಯಕರ ಸಭೆಯನ್ನು ಇಬ್ಬರೂ ನಾಯಕರು ಸ್ವಾಗತಿಸಿದರು, ಮತ್ತು ಸಿಇಓಗಳ ವೇದಿಕೆಯ ಸಭೆಯು ವಾಣಿಜ್ಯ ಮತ್ತು ಹೂಡಿಕೆಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ರಚನಾತ್ಮಕ ಸಲಹೆಗಳನ್ನು ನೀಡಲು ನಿಯಮಿತವಾಗಿ ವಾರ್ಷಿಕ ಸಭೆಯಂತೆ ನಡೆಯಬೇಕು ಎಂದು ಉತ್ತೇಜಿಸಿದರು. ಈ ಸಭೆಯಲ್ಲಿ ಇಂಡೋನೇಷಿಯಾ ಮತ್ತು ಭಾರತದ ಆಯ್ದ ಸಿಇಓಗಲೊಂದಿಗೆ2016ರ ಡಿಸೆಂಬರ್ 13ರಂದು ಸಭೆ ನಡೆಸಲಾಯಿತು, 2016ರ ಡಿಸೆಂಬರ್ 12ರಂದು ನಡೆದ ಸಿಇಓ ವೇದಿಕೆಯ ಸಭೆಯ ಸಹ ಅಧ್ಯಕ್ಷರ ವರದಿಯನ್ನು ಅಧ್ಯಕ್ಷ ಜೋಕೋ ವಿಡೋಡೋ ಅವರಿಗೆ ಸಲ್ಲಿಸಲಾಯಿತು.

• ಎರಡೂ ದೇಶಗಳ ಆರ್ಥಿಕ ಪ್ರಗತಿಗೆ ವಿಶ್ವಾಸಾರ್ಹ, ಶುದ್ಧ ಮತ್ತು ಕೈಗೆಟಕುವ ದರದ ಇಂಧನ ಅತಿ ಮುಖ್ಯ ಎಂಬುದನ್ನು ಗುರುತಿಸಿರುವ ನಾಯಕರು, ಈ ನಿಟ್ಟಿನಲ್ಲಿ 2015ರ ನವೆಂಬರ್ ನಲ್ಲಿ ಹೊಸ ಮತ್ತು ಪುನರ್ನವೀಕರಿಸುವ ಇಂಧನ ಕುರಿತಂತೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿರುವುದನ್ನು ಸ್ವಾಗತಿಸಿದರು. ಮತ್ತು ಹೊಸ ಮತ್ತು ಪುನರ್ನವೀಕರಿಸುವ ಇಂಧನ ಕುರಿತಂತೆ ಜಂಟಿ ಕಾರ್ಯ ಗುಂಪು ಸ್ಥಾಪಿಸಿ ತಿಳಿವಳಿಕೆ ಒಪ್ಪಂದದ ಜಾರಿಗೆ ಮತ್ತು ದ್ವಿಪಕ್ಷೀಯ ಕ್ರಿಯಾ ಯೋಜನೆಯ ಮುಂದುವರಿಕೆಗೆ ಜಂಟಿ ಕಾರ್ಯ ಗುಂಪಿನ ಪ್ರಥಮ ಸಭೆಯನ್ನು ಶೀಘ್ರ ಕರೆಯಲು ಉತ್ತೇಜನ ನೀಡಿದರು.

• ಅಧ್ಯಕ್ಷ ನಿಡೋಡೋ ಅವರು ಪ್ರಧಾನಮಂತ್ರಿ ಮೋದಿ ಅವರು ಪುನರ್ನವೀಕರಿಸುವ ಇಂಧನ ಕ್ಷೇತ್ರದಲ್ಲಿ ಅದರಲ್ಲೂ ಅಂತಾರಾಷ್ಟ್ರೀಯ ಸೌರ ಸಹಯೋಗ ಸ್ಥಾಪಿಸುವಲ್ಲಿನ ಕ್ರಮವನ್ನು ಸ್ವಾಗತಿಸಿದರು.

• 2015ರ ನವೆಂಬರ್ ನಲ್ಲಿ ನಡೆದ ಕಲ್ಲಿದ್ದಲು ಕುರಿತ ಜಂಟಿ ಕಾರ್ಯ ಗುಂಪಿನ ಮೂರನೇ ಸಭೆಯ ಫಲಶ್ರುತಿಯನ್ನೂ ನಾಯಕರು ಉಲ್ಲೇಖಿಸಿದರು. ಇಬ್ಬರೂ ನಾಯಕರು ಇಂಧನ ಸುರಕ್ಷತೆಗಾಗಿ ಮತ್ತು ಪರಸ್ಪರರ ಹವಾಮಾನ ಬದಲಾವಣೆ ಗುರಿ ಸಾಧನೆಗಾಗಿ ಹಂಚಿಕೆಯ ಆಶಯದೊಂದಿಗೆ ಇಂಧನ ದಕ್ಷತೆ ತಂತ್ರಜ್ಞಾನ, ನೂತನ ಮತ್ತು ಪುನರ್ ನವೀಕರಿಸುವ ಇಂಧನ ತಂತ್ರಜ್ಞಾನಗಳ ಉತ್ತೇಜನಕ್ಕೆ ಸಹಕರಿಸಲು ಒಪ್ಪಿಗೆ ಸೂಚಿಸಿದರು.

• ಭವಿಷ್ಯದಲ್ಲಿ ಇಂಧನ ಮಿಶ್ರಿತ ಬೇಡಿಕೆ ಪೂರೈಕೆಗಾಗಿ ಇಬ್ಬರೂ ನಾಯಕರು, ತೈಲ ಮತ್ತು ಅನಿಲ ಕ್ಷೇತ್ರದ ಸಹಕಾರದ ಮೇಲಿನ ತಿಳಿವಳಿಕೆ ಒಪ್ಪಂದ ನವೀಕರಣಕ್ಕೆ ಮತ್ತು ಅದರ ಜಂಟಿ ಕಾರ್ಯ ಗುಂಪಿನ ಸಹಕಾರಕ್ಕೆ ಉತ್ತೇಜನ ನೀಡಿದರು.

• ಸಾಮಾನ್ಯ ಆರೋಗ್ಯ ಸವಾಲುಗಳನ್ನು ಎದುರಿಸಲು ಆಪ್ತವಾದ ಸಹಯೋಗಕ್ಕೆ ದಾರಿ ಮಾಡಿಕೊಡಲು ಸಹಕಾರಿಯಾಗುವ ಆರೋಗ್ಯ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ನವೀಕರಣವನ್ನು ನಾಯಕರು ಎದಿರು ನೋಡುತ್ತಿದ್ದಾರೆ.

• ನಾಯಕರು, ಎರಡೂ ರಾಷ್ಟ್ರಗಳ ಜನರ ಆಹಾರ ಭದ್ರತೆಯ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಈ ಕ್ಷೇತ್ರದಲ್ಲಿ ಸಮಗ್ರ ಕ್ರಿಯೆಯತ್ತ ಒಗ್ಗೂಡಿ ಶ್ರಮಿಸಲು ಒಪ್ಪಿಗೆ ಸೂಚಿಸಿದರು. ಪ್ರಧಾನಮಂತ್ರಿ ಮೋದಿ ಅವರು, ಇಂಡೋನೇಷಿಯಾದ ಅಗತ್ಯ ಪೂರೈಸಲು ಸಕ್ಕರೆ, ಅಕ್ಕಿ ಮತ್ತು ಸೋಯಾಬೀನ್ ಪೂರೈಸಲು ಭಾರತ ಸಿದ್ಧವಿರುವುದಾಗಿ ಹೇಳಿದರು.

• ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಸವಾಲುಗಳನ್ನು ಮತ್ತು ಅವಕಾಶಗಳನ್ನು ಗುರುತಿಸಿದ ಇಬ್ಬರೂ ನಾಯಕರು, ಡಿಜಿಟಲ್ ಆರ್ಥಿಕತೆ ಮತ್ತು ನಾವಿನ್ಯತೆಗೆ ಬೆಂಬಲ ನೀಡಲು ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ವಲಯದಲ್ಲಿ ಸಹಕಾರ ಅಭಿವೃದ್ಧಿಯ ಬದ್ಧತೆ ವ್ಯಕ್ತಪಡಿಸಿದರು.

• ವ್ಯಾಪಾರ, ಪ್ರವಾಸೋದ್ಯಮ, ಜನರೊಂದಿಗಿನ ನಂಟಿನ ಹೆಚ್ಚಳಕ್ಕೆ ಸಂಪರ್ಕದ ಮಹತ್ವಕ್ಕಿಂತ ಮತ್ತೊಂದು ಇಲ್ಲ, ಹೀಗಾಗಿ ನಾಯಕರು ಗರುಡ ಇಂಡೋನೇಷಿಯಾದಿಂದ ಜಕಾರ್ತಾ ಮತ್ತು ಮುಂಬೈ ನಡುವೆ ಡಿಸೆಂಬರ್ 2016ರಿಂದ ವಿಮಾನಗಳ ಹಾರಾಟ ಆರಂಭಿಸುತ್ತಿರುವುದನ್ನು ಸ್ವಾಗತಿಸಿದರು. ಭಾರತದಿಂದ ಇಂಡೋನೇಷಿಯಾಕ್ಕೆ ಏರ್ ಲೈನ್ಸ್ ಆಫ್ ಇಂಡಿಯಾದಿಂದ ನೇರ ವಿಮಾನ ಯಾನಕ್ಕೂ ಉತ್ತೇಜನ ನೀಡಿದರು. ಎರಡೂ ರಾಷ್ಟ್ರಗಳು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ಅಥವಾ ಇತರ ವಿನಾಯಿತಿ ಯೋಜನೆಗಳ ಮೂಲಕ ನೇರ ಹಡಗು ಸಂಪರ್ಕ, ಬಂದರು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗಳಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸಿದವು.

• ಎರಡೂ ರಾಷ್ಟ್ರಗಳ ನಡುವೆ ವಾಣಿಜ್ಯಕ್ಕೆ ಅವಕಾಶ ಕಲ್ಪಿಸಲು ಗುಣಮಟ್ಟದ ಮೇಲಿನ ದ್ವಿಪಕ್ಷೀಯ ಸಹಕಾರದ ಮಹತ್ವವನ್ನು ನಾಯಕರು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಇಂಡೋನೇಷಿಯಾ ರಾಷ್ಟ್ರೀಯ ಗುಣಮಟ್ಟ ಸಂಸ್ಥೆ (ಬಿ.ಎಸ್.ಎನ್.) ಮತ್ತು ಭಾರತೀಯ ಗುಣಮಟ್ಟ ಸಂಸ್ಥೆ (ಬಿ.ಐ.ಎಸ್.) ನಡುವೆ ಗುಣಮಟ್ಟದ ಸಹಕಾರಕ್ಕೆ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಿರುವುದನ್ನು ಸ್ವಾಗತಿಸಿದರು.

ಸಾಂಸ್ಕೃತಿಕ ಮತ್ತು ಜನರೊಂದಿಗಿನ ನಂಟು

• 2015-2018ರಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳ ಅಡಿಯಲ್ಲಿ ಕಲೆ,ಸಾಹಿತ್ಯ, ಸಂಗೀತ, ನೃತ್ಯ, ಮತ್ತು ಪುರಾತತ್ತ್ವ ಶಾಸ್ತ್ರದ ಉತ್ತೇಜನದ ಮೂಲಕ ಎರಡೂ ರಾಷ್ಟ್ರಗಳ ಜನರೊಂದಿಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ನಂಟು ಬೆಸೆಯಲು ನಾಯಕರು ತಮ್ಮ ಬದ್ಧತೆ ಪ್ರತಿಪಾದಿಸಿದರು. ಯುವಕರ ಮೇಲೆ ಚಲನಚಿತ್ರದ ಪ್ರಭಾವ ಮತ್ತು ಅದರ ಜನಪ್ರಿಯತೆಯನ್ನು ಗುರುತಿಸಿದ ನಾಯಕರು, ಪ್ರವಾಸೋದ್ಯಮ ಪ್ರೋತ್ಸಹಕ್ಕೆ ಚಲನಚಿತ್ರೋದ್ಯಮದೊಂದಿಗೆ ಸಹಕಾರ ಒಪ್ಪಂದ ಆಖೈರುಗೊಳಿಸಲು ಸಮ್ಮತಿಸಿದರು.

• ಭಾರತದ ಮತ್ತು ಇಂಡೋನೇಷಿಯಾದ ಯುವ ಪೀಳಿಗೆಯನ್ನು ಸಬಲೀಕರಿಸಲು ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಹೂಡಿಕೆಯ ಮಹತ್ವವನ್ನು ನಾಯಕರು ಒತ್ತಿ ಹೇಳಿದರು. ಬೋಧಕರ ವಿನಿಮಯ, ಬೋಧಕರ ತರಬೇತಿ ಮತ್ತು ಎರಡು ಪದವಿ ಕಾರ್ಯಕ್ರಮಕ್ಕಾಗಿ ವಿಶ್ವವಿದ್ಯಾಲಯಗಳೊಂದಿಗಿನ ಸಂಪರ್ಕದ ಸಾಂಸ್ಥೀಕರಣ, ಕುರಿತಂತೆ ಹಾಲಿ ಇರುವ ಶಿಕ್ಷಣ ಸಂಸ್ಥೆಗಳೊಂದಿಗಿನ ಸಹಕಾರವನ್ನು ಎರಡೂ ಕಡೆಯವರು ಉಲ್ಲೇಖಿಸಿದರು. ಉನ್ನತ ಶಿಕ್ಷಣ ವಲಯದಲ್ಲಿನ ಸಹಕಾರಕ್ಕಾಗಿ ಶೀಘ್ರವೇ ಸಹಕಾರ ಒಪ್ಪಂದ ಆಖೈರುಗೊಳಿಸುವ ಮಹತ್ವವನ್ನು ಪ್ರತಿಪಾದಿಸಿದ ನಾಯಕರು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

• ಇಂಡೋನೇಷಿಯಾದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಅಧ್ಯಯನ ಕೇಂದ್ರ ಸ್ಥಾಪಿಸುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಇದೇ ರೀತಿ ಇಂಡೋನೇಷಿಯ ಅಧ್ಯಯನ ಪೀಠಗಳನ್ನು ಭಾರತದ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲೂ ಒಪ್ಪಿಗೆ ಸೂಚಿಸಿದರು.

• ಯುವ ವ್ಯವಹಾರ ಮತ್ತು ಕ್ರೀಡೆಯಲ್ಲಿ ಹೆಚ್ಚಿನ ಸಹಕಾರಕ್ಕೆ ಎರಡೂ ಕಡೆಯವರು ಸಮ್ಮತಿ ಸೂಚಿಸಿದರು ಮತ್ತು ಈ ನಿಟ್ಟಿನಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದನ್ನು ಸ್ವಾಗತಿಸಿದರು.

ಸಾಮಾನ್ಯ ಸವಾಲುಗಳಿಗೆ ಸ್ಪಂದಿಸಲು ಸಹಕಾರ

• ಇಬ್ಬರೂ ನಾಯಕರು, ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ಖಂಡಿಸಿದರು ಮತ್ತು ಪ್ರಬಲ ಪರಿಭಾಷೆಯಲ್ಲಿ ಸ್ಪಷ್ಟವಾಗಿ ಖಂಡಿಸಿದರು. ಭಯೋತ್ಪಾದಕ ಕೃತ್ಯಗಳ ಬಗ್ಗೆ "ಶೂನ್ಯ ಸಂಯಮ"ವನ್ನೂ ಪ್ರತಿಪಾದಿಸಿದರು. ಹೆಚ್ಚುತ್ತಿರುವ ಭಯೋತ್ಪಾದನೆಯ ಪಿಡುಗು ಮತ್ತು ಹಿಂಸಾತ್ಮಕ ವಿಧ್ವಂಸಕತೆ ಮತ್ತು ಅದರ ಜಾಗತಿಕ ವ್ಯಾಪ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಯುಎನ್ಎಸ್.ಸಿ.ಯ 1267ನೇ ನಿರ್ಣಯ ಮತ್ತು ಭಯೋತ್ಪಾದಕ ಘಟಕಗಳನ್ನು ನಿಷೇಧಿಸುವ ಇತರ ಸೂಕ್ತ ನಿರ್ಣಯಗಳನ್ನು ಜಾರಿ ಮಾಡುವಂತೆ ಎಲ್ಲ ದೇಶಗಳಿಗೆ ಅವರು ಮನವಿ ಮಾಡಿದರು. ಭಯೋತ್ಪಾದಕರ ಸುರಕ್ಷಿತ ಸ್ವರ್ಗಗಳು ಮತ್ತು ಮೂಲಸೌಕರ್ಯ ನಿಗ್ರಹ, ಭಯೋತ್ಪಾದಕರ ಜಾಲ ನಾಶ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸಲು ಒಗ್ಗೂಡಿ ಶ್ರಮಿಸುವಂತೆ ಎಲ್ಲ ದೇಶಗಳಿಗೂ ಅವರು ಕರೆ ನೀಡಿದರು. ಎಲ್ಲ ರಾಷ್ಟ್ರಗಳೂ ಸಮರ್ಥವಾದ ಅಪರಾಧ ನ್ಯಾಯ ಸ್ಪಂದನೆಯ ಮೂಲಕ ಬಹುರಾಷ್ಟ್ರೀಯ ಭಯೋತ್ಪಾದನೆಯನ್ನು ತಮ್ಮ ನೆಲೆಯಿಂದ ನಿರ್ಮೂಲನೆ ಮಾಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಇಬ್ಬರೂ ನಾಯಕರು ಎರಡೂ ರಾಷ್ಟ್ರಗಳ ನಡುವೆ ಹೆಚ್ಚಿನ ಬೇಹುಗಾರಿಕೆ ಮತ್ತು ಮಾಹಿತಿಯ ವಿನಿಮಯದೊಂದಿಗೆ ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದರು.

• ಇಬ್ಬರೂ ನಾಯಕರು, ವಿಶ್ವಸಂಸ್ಥೆಯ ಸಮುದ್ರದ ಶಾಸನ ಕುರಿತ ಸಮಾವೇಶ(ಯುಎನ್.ಸಿ.ಎಲ್.ಓ.ಎಸ್)ದಲ್ಲಿ ಗಮನಾರ್ಹವಾಗಿ ಬಿಂಬಿಸಲಾದ, ಅಂತಾರಾಷ್ಟ್ರೀಯ ಕಾನೂನಿನ ನೀತಿಗಳ ಆಧಾರದ ಮೇಲೆ ಪಥದರ್ಶಕ ಮತ್ತು ಫ್ಲೈಟ್ ನ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಮತ್ತು ಕಾನೂನುಬದ್ಧ ವಾಣಿಜ್ಯಕ್ಕೆ ಅಡಚಣೆಯುಂಟುಮಾಡದ ತಮ್ಮ ಬದ್ಧತೆ ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಅಂಥ ಚಟುವಟಿಕೆಗಳ ವಿವಾದಗಳನ್ನು ಬೆದರಿಕೆ ಅಥವಾ ಬಲ ಪ್ರದರ್ಶನ ಮತ್ತು ಸ್ವಯಂ ನಿಯಂತ್ರಣದ ಕಸರತ್ತು ಬಳಕೆ ಮಾಡದೆ ಶಾಂತಿ ಸಂಧಾನದ ಮೂಲಕ ಪರಿಹರಿಸಿಕೊಳ್ಳುವಂತೆ ಮತ್ತು ಉದ್ವಿಗ್ನತೆ ಹೆಚ್ಚಿಸುವಂಥ ಏಕಪಕ್ಷೀಯ ನಿರ್ಧಾರ ಕೈಗೊಳ್ಳದಂತೆ ಅವರು ಎಲ್ಲ ಪಕ್ಷಕಾರರಿಗೂ ಮನವಿ ಮಾಡಿದರು.

ಯುಎನ್.ಸಿ.ಎಲ್.ಓ.ಎಸ್.ನ ಸದಸ್ಯ ರಾಷ್ಟ್ರದ ನಾಯಕರಾಗಿ, ತಾವು ಎಲ್ಲಾ ಪಕ್ಷಕಾರರೂ ಸಮುದ್ರ ಮತ್ತು ಸಾಗರದ ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆ ಕಾಪಾಡುವ ಯುಎನ್.ಸಿ.ಎಲ್.ಓ.ಎಸ್.ಗೆ ಅತ್ಯಂತ ಗೌರವ ತೋರಿಸಬೇಕು ಎಂದು ಒತ್ತಾಯಿಸುವುದಾಗಿ ಹೇಳಿದರು. ದಕ್ಷಿಣ ಚೀನಾ ಸಮುದ್ರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಜಾಗತಿಕವಾಗಿ ಪರಿಗಣಿಸಲಾಗಿರುವ ಯುಎನ್.ಸಿ.ಎಲ್.ಓ.ಎಸ್ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಶಾಂತಿಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕಾದ ಮಹತ್ವವನ್ನು ಒತ್ತಿ ಹೇಳಿದರು.

• ಎರಡೂ ಕಡೆಯವರು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆಗಾಗಿ ಮಾತುಕತೆಯನ್ನು ತ್ವರಿತವಾಗಿ ಪೂರೈಸುವ ಹಾಗೂ ಮಾತುಕತೆಯನ್ನು ಮುಂದುವರಿಸುವ ಮಹತ್ವವನ್ನು ಪುನರುಚ್ಚರಿಸಿದರು.

• ಇಂದಿನ ಜಗತ್ತಿನ ಅಸಂಖ್ಯಾತ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವಂತೆ, ವಿಶ್ವಸಂಸ್ಥೆಯನ್ನು ಇನ್ನೂ ಹೆಚ್ಚು ಪ್ರಜಾಸತ್ತಾತ್ಮಕ, ಪಾರದರ್ಶಕ ಮತ್ತು ಸಮರ್ಥ ಮಾಡುವ ನಿಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಅದರ ಪ್ರಧಾನ ಸಂಘಟನೆಗಳು ಮತ್ತು ವಿಶ್ವಸಂಸ್ಥೆಯ ಸುಧಾರಣೆಗೆ ತಮ್ಮ ಬೆಂಬಲವನ್ನು ಇಬ್ಬರೂ ನಾಯಕರು ಪುನರುಚ್ಚರಿಸಿದರು. ಇಂದಿನ ವಿಶ್ವದ ವಾಸ್ತವತೆಗೆ ಅನುಗುಣವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಹೆಚ್ಚು ಪ್ರಜಾಸತ್ತಾತ್ಮಕ, ಪಾರದರ್ಶಕ ಮತ್ತು ಸಂವೇದನಾತ್ಮಕ ಗೊಳಿಸಲು ಭದ್ರತಾ ಮಂಡಲಿಯನ್ನು ಶೀಘ್ರವೇ ಪುನಾರಚಿಸುವ ಮಹತ್ವವನ್ನು ಅವರು ಪ್ರತಿಪಾದಿಸಿದರು. ಭದ್ರತಾ ಮಂಡಲಿಯ ಇಂಥ ಪುನಾರಚನೆಯಿಂದ ಮಂಡಳಿಯಲ್ಲಿ ಅಭಿವೃದ್ಧಿಶೀಲ ವಿಶ್ವ ಸಹ ಸೂಕ್ತ ಶಾಶ್ವತ ಸದಸ್ಯತ್ವದೊಂದಿಗೆ ಪ್ರತಿನಿಧಿಸಲು ಅರ್ಹವಾಗುತ್ತವೆ ಎಂದು ಒತ್ತಿ ಹೇಳಿದರು. ವಿಶ್ವಸಂಸ್ಥೆಯ ಸುಧಾರಣೆಗೆ ಸಂಬಂಧಿಸಿದ ವಿವಿಧ ವಿಚಾರಗಳಲ್ಲಿ ಆಪ್ತವಾಗಿ ಉಳಿಯಲು ಇಬ್ಬರೂ ನಾಯಕರು ಸಮ್ಮತಿ ಸೂಚಿಸಿದರು.

• ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಚೇತರಿಕೆಯ ಪರಿಣಾಮಗಳ ಸಮಾನ ಸವಾಲನ್ನು ಅಂತಾರಾಷ್ಟ್ರೀಯ ಸಮುದಾಯ ಎದುರಿಸುತ್ತಿರುವುದನ್ನು ಮನಗಂಡು, ಇಬ್ಬರೂ ನಾಯಕರು, ತಾವು ಅಂತಾರಾಷ್ಟ್ರೀಯ ಸಮುದಾಯದ ಪ್ರಮುಖ ಸದಸ್ಯರಾಗಿ, ಭಾರತ ಮತ್ತು ಇಂಡೋನೇಷಿಯಾ ಬಹುಪಕ್ಷೀಯ ವೇದಿಕೆಗಳಲ್ಲಿ ಒಗ್ಗೂಡಿ ಸಮರ್ಥನಾಗಿ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದರು.

• ಕಳೆದ ಇಪ್ಪತ್ತನಾಲ್ಕು ವರ್ಷಗಳಲ್ಲಿ ಆಸಿಯಾನ್ – ಭಾರತದ ಮಾತುಕತೆಯಲ್ಲಿ ನಡೆದಿರುವ ಸ್ಥಿರ ಪ್ರಗತಿಯ ಬಗ್ಗೆ ಇಬ್ಬರೂ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಭಾರತ-ಆಸಿಯಾನಾ ಮಾತುಕತೆಯ 25ನೇ ವಾರ್ಷಿಕೋತ್ಸವ ಮತ್ತು 5ನೇ ಕಾರ್ಯತಂತ್ರಾತ್ಮಕ ಪಾಲುದಾರಿಕೆ 2017ನ್ನು ಸ್ಮರಣೀಯಗೊಳಿಸಲು 2017ನೇ ವರ್ಷದಾದ್ಯಂತ ಭಾರತದಲ್ಲಿ ಮತ್ತು ಆಸಿಯಾನ್ ಸದಸ್ಯ ರಾಷ್ಟ್ರಗಳಲ್ಲಿ ರೂಪಿಸಿರುವ ಯೋಜನೆಗಳನ್ನು ಸ್ವಾಗತಿಸಿದರು. ಇದರಲ್ಲಿ ಭಾರತದಲ್ಲಿ ಸ್ಮರಣಾರ್ಥ ಶೃಂಗಸಭೆ, ಸಚಿವರ ಮಟ್ಟದ ಸಭೆಗಳು, ವಾಣಿಜ್ಯ ಮೇಳಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಭಾರತ- ಆಸಿಯಾನ್ ಪಾಲುದಾರಿಕೆಯನ್ನು ನಮ್ಮ ಜನರ ಬಳಿಗೆ ತೆಗೆದುಕೊಂಡು ಹೋಗುವ ಇತರ ಕಾರ್ಯಕ್ರಮಗಳೂ ಸೇರಿವೆ. ಆಸಿಯಾನ್ ಸಂಬಂಧಿತ ವ್ಯವಸ್ಥೆಯಲ್ಲಿ ಅಂದರೆ, ಪೂರ್ವ ಏಷ್ಯಾ ಶೃಂಗಸಭೆ (ಇ.ಎ.ಎಸ್.), ಆಸಿಯಾನ್ ಪ್ರಾದೇಶಿಕ ವೇದಿಕೆ (ಎ.ಆರ್.ಎಫ್.) ಮತ್ತು ಆಸಿಯಾನ್ ರಕ್ಷಣಾ ಸಚಿವರುಗಳ ಮೀಟಿಂಗ್ ಪ್ಲಸ್ (ಎಡಿಎಂಎಂ+)ಗಳಲ್ಲಿ ಆಪ್ತವಾದ ಸಹಯೋಗ ಮುಂದುವರಿಸಲು ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದರು.

• ಹಿಂದೂ ಮಹಾಸಾಗರದ ವ್ಯಾಪ್ತಿಯ ಎರಡು ದೊಡ್ಡ ರಾಷ್ಟ್ರಗಳಾದ ಭಾರತ ಮತ್ತು ಇಂಡೋನೇಷಿಯಾಗಳು ಹಿಂದೂಮಹಾಸಾಗರ ರಿಮ್ ಸಂಘಟನೆ (ಐಓಆರ್.ಎ)ಯ ಪರಿಣಾಮಕಾರಿತ್ವದಲ್ಲಿ ಮತ್ತು ಸಂಘಟನೆ ಗುರುತಿಸುವ ಕ್ಷೇತ್ರಗಳಲ್ಲಿ ಪ್ರಾದೇಶಿಕ ಸಹಕಾರ ಉತ್ತೇಜಿಸುವಲ್ಲಿ ಹಾಗೂ ಹಿಂದೂ ಮಹಾಸಾಗರದ ನೌಕಾ ವಿಚಾರಮಾಲೆ (ಐಓಎನ್ಎಸ್)ಯಲ್ಲಿ ಉನ್ನತ ಬಾಧ್ಯತೆಯನ್ನು ಹೊಂದಿವೆ ಎಂಬುದನ್ನು ಈ ನಾಯಕರು ಉಲ್ಲೇಖಿಸಿದರು. ಐಓಆರ್.ಎ.ಗೆ ಇಂಡೋನೇಷಿಯಾದ ಸಮರ್ಥ ನಾಯಕತ್ವಕ್ಕೆ ಹಾಗೂ ಮುಂದಿನ ವರ್ಷ ಪ್ರಥಮ ಐ.ಓ.ಆರ್.ಎ. ಶೃಂಗ ಏರ್ಪಡಿಸುತ್ತಿರುವುದಕ್ಕೆ ಅಧ್ಯಕ್ಷ ವಿಡೋಡೋ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದರು.

ಇಬ್ಬರೂ ನಾಯಕರು, ತಾವು ನಡೆಸಿರುವ ಚರ್ಚೆಯ ಅನುಸರಣೆಗೆ ಸಮ್ಮತಿ ಸೂಚಿಸಿದರು, ಮತ್ತು 2017ರ ಮೊದಲರ್ಧ ಭಾಗದಲ್ಲಿಯೇ ಈ ಕೆಳಗಿನ ವ್ಯವಸ್ಥೆಯ ಸಭೆಗಳ ಮೂಲಕ ದ್ವಿಪಕ್ಷೀಯ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗಲು ಒಪ್ಪಿಗೆ ಸೂಚಿಸಿದರು:

i). ಸಚಿವರುಗಳ ಮಟ್ಟದ ಜಂಟಿ ಆಯೋಗ

ii). ರಕ್ಷಣಾ ಸಚಿವರ ಮಾತುಕತೆ ಮತ್ತು ಜಂಟಿ ರಕ್ಷಣಾ ಸಹಕಾರ ಸಮಿತಿ (ಜೆಡಿಸಿಸಿ)

iii).ವಾಣಿಜ್ಯ ಸಚಿವರ ವೇದಿಕೆಯ ದ್ವೈವಾರ್ಷಿಕ ಸಭೆ (ಬಿಟಿಎಂಎಫ್)

iv). ಇಂಧನ ಸಹಕಾರಕ್ಕಾಗಿ ಮಾರ್ಗಸೂಚಿ ರೂಪಿಸಲು ಇಂಧನ ವೇದಿಕೆ ಸಭೆ ಏರ್ಪಡಿಸುವುದು

v). ರಕ್ಷಣಾ ಸಹಕಾರ ಕುರಿತ ಸಮಗ್ರ ಕ್ರಿಯಾ ಯೋಜನೆ ಅಭಿವೃದ್ಧಿಪಡಿಸುವ ಸಲುವಾಗಿ ಭದ್ರತೆಯ ಮಾತುಕತೆ ಆರಂಭಿಸುವುದು.

ಅಧ್ಯಕ್ಷ ವಿಡೋಡೋ ಅವರು ಪ್ರಧಾನಮಂತ್ರಿ ಮೋದಿ ಅವರನ್ನು ಆದಷ್ಟು ಹತ್ತಿರದ ದಿನಾಂಕದಲ್ಲಿ ಇಂಡೋನೇಷಿಯಾಗೆ ಭೇಟಿ ನೀಡುವಂತೆ ಆಹ್ವಾನಿಸಿದರು, ಈ ಆಹ್ವಾನವನ್ನು ಭಾರತದ ಪ್ರಧಾನಿಯವರು ಅಂಗೀಕರಿಸಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi