ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ.
ನಮ್ಮ ದೇಶದಲ್ಲಿ ಅತ್ಯಂತ ಕಠಿಣ ನಿಯಮ ನಿಷ್ಟೆಗಳಿಂದ ಪಾಲಿಸುವ ಛಟ್ ಪೂಜೆ ದೀಪಾವಳಿ 6 ದಿನಗಳ ನಂತರ ಆಚರಿಸುವ ಬಹು ದೊಡ್ಡ ಹಬ್ಬವಾಗಿದೆ. ಈ ಹಬ್ಬದಲ್ಲಿ ಊಟ ಉಪಚರದಿಂದ ಉಡುಗೆ ತೊಡುಗೆಗಳವರೆಗೆ ಪಾರಂಪರಿಕ ನಿಯಮಗಳನ್ನು ಪಾಲಿಸಲಾಗುತ್ತದೆ. ಛಟ್ ಪೂಜೆಯ ಪವಿತ್ರ ಋತು ಸಂಪೂರ್ಣವಾಗಿ ಪೃಕ್ರತಿ ಮತ್ತು ಪೃಕ್ರತಿ ಉಪಾಸನೆಯೊಂದಿಗೆ ಮಿಳಿತವಾಗಿದೆ. ಸೂರ್ಯ ಮತ್ತು ಜಲ ಛಟ್ ಪೂಜೆಯ ಆರಾಧನೆಯ ಕೇಂದ್ರ ಬಿಂದುಗಳಾಗಿವೆ. ಹಾಗಾಗಿ ಬಿದಿರು ಮತ್ತು ಮಣ್ಣಿನ ಪಾತ್ರೆಗಳು, ಗೆಡ್ಡೆಗಳು, ಗಿಡ ಮೂಲಿಕೆಗಳು ಈ ಪೂಜಾವಿಧಿಯ ಅವಿಭಾಜ್ಯ ಅಂಗವಾಗಿವೆ. ಭಕ್ತಿಯ ಈ ಮಹಾಪರ್ವದಲ್ಲಿ ಉದಯಿಸುವ ಸೂರ್ಯನ ಆರಾಧನೆ ಮತ್ತು ಅಸ್ತಮಿಸುವ ಸೂರ್ಯನ ಪೂಜೆಯ ಸಂದೇಶಗಳು ಅದ್ವಿತೀಯವಾಗಿದ್ದು ಪರಿಪೂರ್ಣವಾಗಿವೆ. ವಿಶ್ವವೆಲ್ಲ ಉದಯಿಸುವ ಸೂರ್ಯನ ಪೂಜೆಯಲ್ಲಿ ನಿರತವಾಗಿದ್ದರೆ, ಛಟ್ ಪೂಜೆ ನಮಗೆ ಸೂರ್ಯನ ಅಸ್ತಮಿಸುವಿಕೆ ನಿಶ್ಚಿತವೇ ಆದ್ದರಿಂದ ಅವನ ಆರಾಧನೆಯ ಸಂದೇಶವನ್ನೂ ನೀಡುತ್ತದೆ. ನಮ್ಮ ಜೀವನದಲ್ಲಿ ಸ್ವಚ್ಛತೆಯ ಮಹತ್ವದ ಕುರಿತಾದ ಅಭಿವ್ಯಕ್ತಿ ಕೂಡಾ ಈ ಹಬ್ಬದಲ್ಲಿದೆ. ಛಟ್ ಪೂಜೆಗೆ ಮೊದಲು ಸಂಪೂರ್ಣ ಮನೆಯ ಸ್ವಚ್ಛತೆಯ ಜೊತೆಗೆ ನದಿ, ಹಳ್ಳ ಕೊಳ್ಳಗಳ ತೀರಗಳ, ಪೂಜಾ ಸ್ಥಳವಾದ ಘಾಟ್ಗಳ ಸ್ವಚ್ಛತೆಯನ್ನು ಸಾಕಷ್ಟು ಹುಮ್ಮಸ್ಸಿನಿಂದ ಎಲ್ಲರೂ ಒಟ್ಟಾಗಿ ಮಾಡುತ್ತಾರೆ. ಸೂರ್ಯ ವಂದನೆ ಇಲ್ಲವೆ ಛಟ್ ಪೂಜೆ – ಪರಿಸರ ಸಂರಕ್ಷಣೆ, ರೋಗಗಳ ನಿವಾರಣೆ ಮತ್ತು ನೀತಿ ನಿಯಮಗಳ ಋತುವಾಗಿದೆ.
ಸಾಮಾನ್ಯವಾಗಿ ಏನನ್ನಾದರೂ ಕೇಳಿ ಪಡೆಯುವುದನ್ನು ಅತ್ಯಂತ ಹೀನ ಭಾವನೆಯಿಂದ ಕಾಣುತ್ತಾರೆ ಆದರೆ ಛಟ್ ಪೂಜೆಯಲ್ಲಿ ಬೆಳಗ್ಗೆ ಅಘ್ರ್ಯ ನೀಡಿದ ನಂತರ ಪ್ರಸಾದವನ್ನು ಕೇಳಿ ತಿನ್ನುವ ಒಂದು ವಿಶಿಷ್ಟವಾದ ಸಂಪ್ರದಾಯವಿದೆ. ಪ್ರಸಾದವನ್ನು ಕೇಳಿ ಪಡೆಯುವ ಈ ಸಂಪ್ರದಾಯದೊಂದಿಗೆ ಅಹಂಕಾರವನ್ನು ನಾಶಗೊಳಿಸುವ ಉದ್ದೇಶವಿದೆ ಎಂದು ಹೇಳಲಾಗುತ್ತದೆ. ಅಹಂಕಾರವೆಂಬುದು ಮಾನವನ ಪ್ರಗತಿಯಲ್ಲಿ ಅಡ್ಡಗೋಡೆಯಾಗಿ ನಿಲ್ಲುತ್ತದೆ. ಭಾರತದ ಈ ಮಹತ್ತರವಾದ ಸಂಪ್ರದಾಯದ ಬಗ್ಗೆ ಎಲ್ಲರಿಗೂ ಹೆಮ್ಮೆ ಎನಿಸುವುದು ಸಹಜವೇ.
ನನ್ನ ಪ್ರಿಯ ದೇಶವಾಸಿಗಳೇ, ಮನದ ಮಾತಿನ ಪ್ರಶಂಸೆಯೂ ಆಗುತ್ತದೆ ಮತ್ತು ಆ ಕುರಿತು ಆಲೋಚನೆಯೂ ನಡೆಯುತ್ತದೆ. ಆದರೆ ನಾನು ಮನದ ಮಾತಿನ ಪ್ರಭಾವದ ಬಗ್ಗೆ ಅವಲೋಕಿಸಿದಾಗ ಮನದ ಮಾತು ನೂರಕ್ಕೆ ನೂರು ಜನರ ಮನದಲ್ಲಿ ಒಂದು ಅವಿನಾಭಾವ ಸಂಬಂಧದೊಂದಿಗೆ ಬೆರೆತು ಹೋಗಿದೆ ಎಂಬ ಧೃಡ ವಿಶ್ವಾಸ ಮೂಡುತ್ತದೆ. ಖಾದಿ ಮತ್ತು ಕೈಮಗ್ಗದ ಉದಾಹರಣೆಯನ್ನೇ ತೆಗೆದುಕೊಳ್ಳಿ, ಗಾಂಧಿ ಜಯಂತಿಯ ಸಂದರ್ಭದಲ್ಲಿ ನಾನು ಯಾವಾಗಲೂ ಖಾದಿ ಮತ್ತು ಕೈಮಗ್ಗದ ಬಗ್ಗೆ ಮಾತನಾಡುತ್ತೇನೆ. ಅದರ ಪರಿಣಾಮವೇನೆಂದು ತಿಳಿದು ನಿಮಗೂ ಸಂತೋಷವಾಗಬಹುದು. ಅಕ್ಟೋಬರ್ 17ರಂದು ಧನ್ತೆರಸ್ ಆಚರಣೆಯ ದಿನ ದೆಹಲಿಯ ಖಾದಿಯ ಗ್ರಾಮೋದ್ಯೋಗ ಭವನದ ಮಳಿಗೆಯಲ್ಲಿ ಸುಮಾರು 1 ಕೋಟಿ 20 ಲಕ್ಷ ರೂಪಾಯಿಯ ದಾಖಲೆಯ ವ್ಯಾಪಾರವಾಗಿದೆ ಎಂದು ನನಗೆ ತಿಳಿದು ಬಂದಿದೆ. ಖಾದಿ ಮತ್ತು ಕೈಮಗ್ಗದ ಒಂದೇ ಮಳಿಗೆಯಲ್ಲಿ ಇಷ್ಟೊಂದು ವ್ಯಾಪಾರವಾಗಿದೆ ಎಂದು ಕೇಳಿ ನಿಮಗೂ ಆನಂದವಾಗಿರಬಹುದು. ದೀಪಾವಳಿಯ ಸಂದರ್ಭದಲ್ಲಿ ಖಾದಿ ಗಿಫ್ಟ್ ಕೂಪನ್ ಮಾರಾಟದಲ್ಲಿ ಸರಿ ಸುಮಾರು 680 ಪ್ರತಿಶತದಷ್ಟು ವೃದ್ಧಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಖಾದಿ ಮತ್ತು ಕರಕುಶಲ ವಸ್ತುಗಳ ಒಟ್ಟು ವ್ಯಾಪಾರದಲ್ಲೂ ಸುಮಾರು ಶೇಕಡಾ 90ರಷ್ಟು ಏರಿಕೆಯಾಗಿದೆ. ಇದು ಏನನ್ನು ತೋರಿಸುತ್ತದೆ ಎಂದರೆ ಇಂದು ಹಿರಿಯರು-ಕಿರಿಯರು, ಮಹಿಳೆಯರು, ಎಲ್ಲ ವಯೋಮಾನದವರು ಖಾದಿ ಮತ್ತು ಕೈಮಗ್ಗದ ವಸ್ತುಗಳನ್ನು ಇಷ್ಟಪಡುತ್ತಿದ್ದಾರೆ ಎಂದು. ಇದರಿಂದ ಎಷ್ಟೋ ಜನ ನೇಕಾರ ಪರಿವಾರಗಳಿಗೆ, ಎಷ್ಟೋ ಜನ ಬಡ ಕುಟುಂಬಗಳಿಗೆ, ಕೈಮಗ್ಗದ ಕೆಲಸ ಮಾಡುವವರಿಗೆ ಎಷ್ಟು ಲಾಭವಾಗಿರಬಹುದು ಎಂದು ನಾನು ಅಂದಾಜಿಸಬಲ್ಲೆ. ಹಿಂದೆ ಖಾದಿ ಎಂಬುದು ‘ದೇಶಕ್ಕಾಗಿ ಖಾದಿ’ ಆಗಿತ್ತು ಆದರೆ ನಾವು ‘ಫೇಷನ್ ಗಾಗಿ ಖಾದಿ’ ಎಂದು ಹೇಳಿದೆವು, ಆದರೆ ಕಳೆದ ಕೆಲ ಸಮಯದ ಅನುಭವದಿಂದ ‘ದೇಶಕ್ಕಾಗಿ ಖಾದಿ’ ಮತ್ತು ‘ಫೇಷನ್ ಗಾಗಿ ಖಾದಿ’ ನಂತರ ಈಗ ‘ಪರಿವರ್ತನೆಗಾಗಿ ( ಬದಲಾವಣೆ/ ರೂಪಾಂತರ) ಖಾದಿ ‘ಎಂಬ ಸ್ಥಾನವನ್ನು ಆಕ್ರಮಿಸುತ್ತಿದೆ ಎಂದು ಹೇಳಬಲ್ಲೆ. ಖಾದಿ ಮತ್ತು ಕೈಮಗ್ಗ ಅತೀ ಬಡವರ ಜೀವನದಲ್ಲೂ ಬದಲಾವಣೆ ತರುವುದರ ಜೊತೆಗೆ ಅವರನ್ನು ಸಶಕ್ತರನ್ನಾಗಿಸುವ ಶಕ್ತಿಯುತ ಸಾಧನವಾಗಿ ಹೊರಹೊಮ್ಮುತ್ತಿದೆ. ಗ್ರಾಮೋದಯದಲ್ಲಿ ಇದು ಬಹು ದೊಡ್ಡ ಪಾತ್ರ ವಹಿಸುತ್ತಿದೆ.
ಭದ್ರತಾ ಪಡೆಯವರೆಂದಿಗೆ ನನ್ನ ದೀಪವಳಿ ಆಚರಣೆಯ ಅನುಭವದ ಬಗ್ಗೆ ಮತ್ತು ನಮ್ಮ ಭದ್ರತಾ ಪಡೆಯ ಸೇನಾನಿಗಳು ಹೇಗೆ ದೀಪಾವಳಿ ಆಚರಿಸುತ್ತಾರೆ ಎಂದು ತಿಳಿದುಕೊಳ್ಳಬೇಕೆಂದು ಶ್ರೀಯುತ ರಾಜನ್ ಭಟ್ ಎಂಬುವರು ನರೇಂದ್ರ ಆಪ್ ಗೆ ಬರೆದು ತಿಳಿಸಿದ್ದಾರೆ. ಶ್ರೀಮಾನ್ ತೇಜಸ್ ಗಾಯಕ್ ವಾಡ್ ಎಂಬುವವರು ನಮ್ಮ ಮನೆಯ ಮಿಠಾಯಿ ಸುರಕ್ಷಾ ಬಲದವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆಯೇ? ನಮಗೂ ವೀರ ಸೇನಾನಿಗಳ ನೆನಪಾಗುತ್ತದೆ ಎಂದು ನಮಗೂ ಅನ್ನಿಸುತ್ತದೆ. ನೀವೆಲ್ಲರೂ ದೀಪಾವಳಿಯನ್ನು ಹರ್ಷ ಉಲ್ಲಾಸದಿಂದ ಆಚರಿಸಬಹುದು. ನನಗಂತೂ ಈ ವರ್ಷವೂ ದೀಪಾವಳಿ ಒಂದು ವಿಶಿಷ್ಟ ಅನುಭವವನ್ನು ಹೊತ್ತು ತಂದಿತ್ತು. ನನಗೆ ಮತ್ತೊಮ್ಮೆ ಗಡಿಯಲ್ಲಿ ಕಟ್ಟೆಚ್ಚರದಿಂದ ಕಾಯುತ್ತಿರುವ ವೀರ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸೌಭಾಗ್ಯ ದೊರೆಯಿತು. ಈ ಬಾರಿ ಜಮ್ಮು – ಕಾಶಮೀರದ ಗುರೇಜ್ ನಲ್ಲಿ ಭದ್ರತಾ ಪಡೆಯವರೊಂದಿಗೆ ದೀಪಾವಳಿ ಆಚರಿಸಿದ್ದು ನನಗೆ ಅವಿಸ್ಮರಣೀಯವಾಗಿದೆ. ಗಡಿಯಲ್ಲಿ ಎಂಥ ಕಠಿಣ ಮತ್ತು ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತಾ ನಮ್ಮ ಸೇನಾನಿಗಳು ದೇಶದ ರಕ್ಷಣೆ ಮಾಡುತ್ತಾರೆ. ಅವರ ಆ ಸಂಘರ್ಷ, ಸಮರ್ಪಣೆ ಮತ್ತು ತ್ಯಾಗಕ್ಕೆ ಎಲ್ಲ ದೇಶ ವಾಸಿಗಳ ಪರವಾಗಿ ನಮ್ಮ ಭದ್ರತಾ ಪಡೆಯ ಪ್ರತಿ ಸೈನಿಕನನ್ನು ಗೌರವಿಸುತ್ತೇನೆ. ನಮಗೆ ಅವಕಾಶ ಸಿಕ್ಕಾಗ ನಮ್ಮ ಸೈನಿಕರ ಅನುಭವಗಳನ್ನು ತಿಳಿದುಕೊಳ್ಳಬೇಕು. ಅವರ ಯಶೋಗಾಥೆಗಳನ್ನು ಕೇಳಬೇಕು, ನಮ್ಮಲ್ಲಿ ಬಹಳಷ್ಟು ಜನರಿಗೆ ನಮ್ಮ ಗಡಿ ಭದ್ರತಾ ಪಡೆಯ ಸೈನಿಕರು ಕೇವಲ ನಮ್ಮ ಗಡಿಯಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಶಾಂತಿ ಸ್ಥಾಪಿಸುವ ಮಹತ್ವಪೂರ್ಣ ಪಾತ್ರ ವಹಿಸುತ್ತಿದ್ದಾರೆ. ಶಾಂತಿದೂತರುಗಳಾಗಿ ಅವರು ವಿಶ್ವದಲ್ಲೇ ಹಿಂದೂಸ್ತಾನದ ಹೆಸರನ್ನು ಬೆಳಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಕ್ಟೋಬರ್ 24ರಂದು ವಿಶ್ವಾದ್ಯಂತ ಯುಎನ್ ಡೇ, ಸಂಯುಕ್ತ ರಾಷ್ಟ್ರ ದಿನವನ್ನು ಆಚರಿಸಲಾಯಿತು. ವಿಶ್ವದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ವಿಶ್ವಸಂಸ್ಥೆಯ ಪ್ರಯತ್ನವನ್ನು ಅದರ ಸಕಾರಾತ್ಮಕ ಪಾತ್ರವನ್ನು ಎಲ್ಲರೂ ನೆನೆಯುತ್ತಾರೆ. ಅಲ್ಲದೆ ನಾವಂತೂ ವಸುದೈವ ಕುಟುಂಬಕಂ ಎಂಬುದನ್ನು ನಂಬಿದವರು. ಅಂದರೆ, ಸಂಪೂರ್ಣ ವಿಶ್ವ ನಮಮ ಪರಿವಾರ ಎಂದು. ಇದೇ ವಿಶ್ವಾಸದಿಂದಾಗಿಯೇ ಭಾರತ ಆರಂಭದಿಂದಲೂ ವಿಶ್ವಸಂಸ್ಥೆಯ ವಿಭಿನ್ನ ಮಹತ್ವಪೂರ್ಣವಾದ ಉಪಕ್ರಮಗಳಲ್ಲಿ ಸಕ್ರಿಯ ಪಾಲುದಾರಿಕೆಯನ್ನು ನಿರ್ವಹಿಸುತ್ತಾ ಬಂದಿದೆ. ನಿಮಗೆ ಗೊತ್ತೇ ಇದೆ ಭಾರತದ ಸಂವಿಧಾನದ ಪ್ರಸ್ತಾವನೆಯು ಮತ್ತು ವಿಶ್ವಸಂಸ್ಥೆಯ ಯೆನ್ ಚಾಪ್ಟರ್ ಪ್ರಸ್ತಾವನೆಯ ವಿ ದ ಪೀಪಲ್ ಎಂಬ ಶಬ್ದಗಳೊಂದಿಗೆ ಆರಂಭವಾಗುತ್ತದೆ.
ಭಾರತ ಸ್ತ್ರೀ ಸಮಾನೆತ ಬಗ್ಗೆ ಎಂದಿಗೂ ಒತ್ತು ನೀಡುತ್ತಾ ಬಂದಿದೆ. ಅದೇ ರೀತಿ ವಿಶ್ವಸಂಸ್ಥೆಯ ಮಾನವ ಹಕ್ಕು ಘೋಷಣೆ ಇದರ ಜ್ವಲಂತ ಸಾಕ್ಷಿಯಾಗಿದೆ. ಅದರ ಉಪಕ್ರಮ ವಾಕ್ಯದಲ್ಲಿ ಪ್ರಸ್ತಾಪಿಸಿದ್ದೇನೆಂದರೆ ಎಲ್ಲಾ ಮನುಷ್ಯರೂ ಮುಕ್ತರು ಮತ್ತು ಸಮಾನರು ಅದನ್ನು ಭಾರತದ ಪ್ರತಿನಿಧಿ ಹಂಸಾ ಮೆಹತಾ ಅವರ ಪ್ರಯತ್ನದಿಂದಾಗಿ ಬದಲಾಯಿಸಲಾಯಿತು ಮತ್ತು ನಂತರ ಎಲ್ಲ ಮಾನವರೂ ಹುಟ್ಟುತ್ತಾರೆ, ಮುಕ್ತವಾಗಿ ಮತ್ತು ಸಮಾನರಾಗಿ ಎಂದು ಸ್ವೀಕರಿಸಲಾಯಿತು. ಇದೊಂದು ಅತ್ಯಂತ ಸಣ್ಣ ಬದಲಾವಣೆ ಎನ್ನಿಸಬಹುದು. ಆದರೆ ಇದೊಂದು ಆರೋಗ್ಯಪೂರ್ಣ ವಿಚಾರ ಎಂಬುದು ಬಿಂಬಿತವಾಗುತ್ತದೆ. ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯು ವಿಶ್ವಸಂಸ್ಥೆಯ ಸಂಪೂರ್ಣ ರಕ್ಷಣೆಯ ಛತ್ರಿಯಾಗಿದ್ದು ಇದರಲ್ಲಿ ಭಾರತದ ಪಾತ್ರ ಒಂದು ಮಹತ್ವಪೂರ್ಣ ಮತ್ತು ಬಹುದೊಡ್ಡ ಪಾಲುದಾರಿಕೆಯಾಗಿದೆ. ವಿಶ್ವಸಂಸ್ಥೆಯ ಶಾಂತಿ ರಕ್ಷಣೆಯ ಮಿಶನ್ ನಲ್ಲಿ ಭಾರತ ಎಂದಿಗೂ ಸಕ್ರಿಯ ಪಾತ್ರವನ್ನು ವಹಿಸುತ್ತಾ ಬಂದಿದೆ. ನಿಮ್ಮಲ್ಲಿ ಬಹಳಷ್ಟು ಜನರಿಗೆ ಈ ವಿಷಯ ಬಹುಶಃ ಮೊದಲ ಬಾರಿಗೆ ತಿಳಿಯುತ್ತಿರಬಹುದು. 18 ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ಭದ್ರತಾ ಪಡೆ ಸಿಬ್ಬಂದಿ ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಸುಮಾರು 7 ಸಾವಿರ ಸೈನಿಕರು ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಸಂಖ್ಯೆಯಾಗಿದೆ. ಆಗಸ್ಟ್ 2017ರ ವರೆಗೆ ವಿಶ್ವಸಂಸ್ಥೆಯ ವಿಶ್ವಾದ್ಯಂತ ನಡೆಸಿದ 71 ವಿಶ್ವಸಂಸ್ಥೆಯ ಶಾಂತಿ ಪ್ರಕ್ರಿಯೆ ಸುಮಾರು 50 ಪ್ರಕ್ರಿಯೆಗಳಲ್ಲಿ ಭಾರತೀಯ ಸೈನಿಕರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಕೊರಿಯಾ, ಕೊಂಬೊಡಿಯಾ , ಲಾನ್, ವಿಯೆಟ್ನಾಂ, ಕೋಂಗೋ, ಸಿಪ್ರಸ್, ಲಿಬೆರಿಯಾ , ಲೆಬೆನೋನ್, ಸುಡಾನ್ ಸೇರಿದಂತೆ ವಿಶ್ವದ ಭೂ ಭಾಗದ ಅನೇಕ ದೇಶಗಳಲ್ಲಿ ಈ ಕಾರ್ಯಪ್ರಕ್ರಿಯೆಗಳು ನಡೆದಿವೆ. ಕಾಂಗೋ ಮತ್ತು ದಕ್ಷಿಣ ಸೂಡಾನ್ ಗಳಲ್ಲಿ ಭಾರತೀಯ ಸೇನಾ ಆಸ್ಪತ್ರೆಯಲ್ಲಿ 20 ಸಾವಿರಕ್ಕೂ ಅಧಿಕ ರೋಗಿಗಳ ಶುಶ್ರೂಷೆ ಮಾಡಲಾಗಿದೆ ಮತ್ತು ಅಸಂಖ್ಯಾತ ಜನರನ್ನು ರಕ್ಷಿಸಲಾಗಿದೆ. ಭಾರತೀಯ ಭದ್ರತಾ ಪಡೆಯವರು ವಿಭಿನ್ನ ರಾಷ್ಟ್ರಗಳಲ್ಲಿ ಕೇವಲ ಅಲ್ಲಿ ಜನರನ್ನು ರಕ್ಷಿಸುವುದು ಮಾತ್ರವಲ್ಲದೆ ಜನಹಿತ ಕಾರ್ಯ ಪ್ರಕ್ರಿಯೆ ನಡೆಸಿ ಅಲ್ಲಿಯ ಜನರ ಮನವನ್ನೂ ಗೆದ್ದಿದ್ದಾರೆ. ಭಾರತೀಯ ಮಹಿಳೆಯರು ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೂಲ್ಯ ಪಾತ್ರವನ್ನು ವಹಿಸಿದ್ದಾರೆ. ಲಿಬೆರಿಯಾ ವಿಶ್ವಸಂಸ್ಥೆಯ ಶಾಂತಿ ಅಭಿಯಾನ ಮಿಶನ್ ಗಾಗಿ ಮಹಿಳಾ ಪೊಲೀಸ್ ಪಡೆಯನ್ನು ಕಳುಹಿಸಿದ ಪ್ರಥಮ ದೇಶ ಭಾರತ ಎಂಬುದು ಬಹಳ ಕಡಿಮೆ ಜನರಿಗೆ ತಿಳಿಸಿದೆ. ಭಾರತದ ಈ ಹೆಜ್ಜೆ ವಿಶ್ವದಾದ್ಯಂತದ ದೇಶಗಳಿಗೆ ಪ್ರೇರಣಾದಾಯಕವಾಯಿತು. ಇದರ ನಂತರ ಎಲ್ಲ ದೇಶಗಳು ತಮ್ಮ ತಮ್ಮ ಮಹಿಳಾ ಪೊಲೀಸ್ ಪಡೆಗಳನ್ನು ಕಳುಹಿಸಲು ಆರಂಭಿಸಿವೆ. ಭಾರತದ ಪಾತ್ರ ಕೇವಲ ಶಾಂತಿ ಕಾರ್ಯ ಪ್ರಕ್ರಿಯೆವರೆಗೆ ಮಾತ್ರ ಸೀಮಿತವಾಗಿರದೇ ಭಾರತ 85 ರಾಷ್ಟ್ರಗಳ ಶಾಂತಿ ಪಡೆಗಳಿಗೆ ತರಬೇತಿ ನೀಡುತ್ತಿದೆ ಎಂದು ಕೇಳಿ ನಿಮಗೆ ಹೆಮ್ಮೆ ಎನ್ನಿಸಬಹುದು. ಮಹಾತ್ಮಾ ಗಾಂಧಿ ಮತ್ತು ಗೌತಮ ಬುದ್ಧರ ಈ ಭೂಮಿಯಿಂದ ನಮ್ಮ ವೀರ ಶಾಂತಿ ರಕ್ಷಕರು ವಿಶ್ವಾದ್ಯಂತ ಶಾಂತಿ ಮತ್ತು ಸದ್ಭಾವನೆಯ ಸಂದೇಶ ತಲುಪಿಸಿದ್ದಾರೆ. ಶಾಂತಿ ಕಾರ್ಯ ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಭದ್ರತಾ ಪಡೆಯ ಸೈನಿಕರು ದುರ್ಗಮ ಸ್ಥಳಗಳಿಗೆ ಹೋಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಿಭಿನ್ನ ಜನರ ಮಧ್ಯೆ ಇರಬೇಕಾಗುತ್ತದೆ. ಅವರಿಗೆ ಅಲ್ಲಿಯ ಸ್ಥಳೀಯ ಅವಶ್ಯಕತೆಗಳು ಮತ್ತು ಪರಿಸ್ಥಿತಿಗನುಗುಣವಾಗಿ ತಮ್ಮನ್ನು ತಾವು ಬದಲಾಯಿಸಿಕೊಳ್ಳಬೇಕಾಗುತ್ತದೆ.
ಇಂದು ನಾವು ನಮ್ಮ ವೀರ ಯುಎನ್ ಶಾಂತಿ ಕಾರ್ಯ ಪಡೆಯನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದಾದಾಗ ಕ್ಯಾಪ್ಟನ್ ಗುರ್ಬಚನ್ ಸಿಂಗ್ ಸಲಾರಿಯಾ ಅವರನ್ನು ನರೆಯಲಾಗುತ್ತದೆಯೇ?. ಅವರು ಆಫ್ರಿಕಾದ ಕಾಂಗೋನಲ್ಲಿ ಶಾಂತಿಗಾಗಿ ಹೋರಾಡಿದ್ದರು. ತಮ್ಮ ಸರ್ವಸ್ವವನ್ನು ಸಮರ್ಪಿಸಿದ್ದರು. ಅವರನ್ನು ನೆನೆದು ದೇಶದ ಪ್ರತಿಯೊಬ್ಬರೂ ಹೆಮ್ಮೆಯಿಂದ ಬೀಗುತ್ತಾರೆ. ಅವರು ಪರಮವೀರ ಚಕ್ರ ನೀಡಿ ಸನ್ಮಾನಿಸಲ್ಪಟ್ಟ ಏಕಮಾತ್ರ ವೀರರೂ ಮತ್ತು ವಿಶ್ವಸಂಸ್ಥೆಯ ಶಾಂತಿ ದೂತರಾಗಿದ್ದರು. ಸೈಪ್ರಸ್ ನಲ್ಲಿ ವಿಶಿಷ್ಟವಾದ ಛಾಪು ಮೂಡಿಸಿದಂತ ವೀರರಲ್ಲಿ ಲೆಫ್ಟಿನೆಂಟ್ ಜನರಲ್ ಪ್ರೇಮ್ ಚಂದ್ ಒಬ್ಬರಾಗಿದ್ದಾರೆ. 1989ರಲ್ಲಿ 72ರ ವಯೋಮಾನದ ಪ್ರೇಮ್ ಚಂದ್ ಅವರನ್ನು ನಮಿಬಿಯಾದಲ್ಲಿ ಆಪರೇಶನ್ ಗಾಗಿ ಫೋರ್ಸ್ ಕಮಾಂಡರ್ ಎಂದು ನೇಮಿಸಿದರು ಮತ್ತು ಅವರು ಆ ದೇಶಕ್ಕೆ ಸ್ವತಂತ್ರವನ್ನು ತಂದುಕೊಡುವಲ್ಲಿ ತಮ್ಮ ಸೇವೆ ಸಲ್ಲಿಸಿದರು. ಭಾರತೀಯ ಸೇನೆಯ ಪ್ರಮುಖರಾಗಿದ್ದ ಜನರಲ್ ತಿಮ್ಮಯ್ಯ ಅವರು ಸೈಪ್ರಸ್ ನಲ್ಲಿ ವಿಶ್ವಸಂಸ್ಥೆ ಶಾಂತಿ ಕಾರ್ಯಪಡೆ ನೇತೃತ್ವ ವಹಿಸಿದ್ದರು ಮತ್ತು ಶಾಂತಿ ಕಾರ್ಯಕ್ಕಾಗಿ ತಮ್ಮ ಸರ್ವಸ್ವವನ್ನು ಅರ್ಪಿಸಿದರು. ಭಾರತ ಶಾಂತಿದೂತನಂತೆ ಎಂದಿಗೂ ವಿಶ್ವಾದ್ಯಂತ ಶಾಂತಿ, ಏಕತೆ ಮತ್ತು ಸದ್ಭಾವನೆಯ ಸಂದೇಶ ಸಾರುತ್ತಿದೆ. ಎಲ್ಲರೂ ಶಾಂತಿ ಮತ್ತು ಸದ್ಭಾವನೆಯೊಂದಿಗೆ ಬಾಳಲಿ ಮತ್ತು ಉತ್ತಮ ಶಾಂತಿಪೂರ್ವಕ ದಿಕ್ಕಿನತ್ತ ಮುನ್ನಡೆಯಲಿ ಎಂಬುದು ನನ್ನ ಆಶಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪುಣ್ಯ ಭೂಮಿಯು ಯಾರು ನಿಸ್ವಾರ್ಥ ಭಾವದಿಂದ ಮಾನವತೆಯ ಸೇವೆ ಮಾಡಿದ್ದಾರೋ ಅಂತಹ ಮಹಾ ಜನರಿಂದ ಶೋಭಿತವಾಗಿದೆ. ಸಿಸ್ಟರ್ ನಿವೇದಿತಾ ಅವರನ್ನು ನಾವು ಸೋದರಿ ನಿವೇದಿತಾ ಎಂದೂ ಸಹ ಕರೆಯುತ್ತೇವೆ, ಅವರೂ ಸಹ ಆ ಅಸಾಧಾರಣ ಜನರಲ್ಲಿ ಒಬ್ಬರಾಗಿದ್ದರು. ಅವರು ಐರ್ಲೆಂಡ್ ನಲ್ಲಿ ಮಾರ್ಗರೆಟ್ ಎಲಿಜಬೆತ್ ನೊಬೆಲ್ ಎನ್ನುವ ಹೆಸರಿನಿಂದ ಹುಟ್ಟಿದ್ದರು ಆದರೆ ಸ್ವಾಮಿ ವಿವೆಕಾನಂದರು ಅವರಿಗೆ ನಿವೇದಿತಾ ಎನ್ನುವ ಹೆಸರನ್ನು ಕೊಟ್ಟರು, ನಿವೇದಿತಾ ಎನ್ನುವುದರ ಅರ್ಥ ಪೂರ್ಣ ರೂಪದಲ್ಲಿ ಸಮರ್ಪಿಸಿಕೊಳ್ಳುವುದು ಎಂದು. ಆ ನಂತರ ಅವರು ತಮ್ಮ ಹೆಸರಿನಂತೆ ತಮ್ಮನ್ನು ತಾವು ನಿರೂಪಿಸಿ ತೋರಿಸಿದರು. ನಿನ್ನೆ ಸಿಸ್ಟರ್ ನಿವೇದಿತಾ ಅವರ 150 ನೇ ಜಯಂತಿ ಆಗಿತ್ತು. ಅವರು ಸ್ವಾಮಿ ವಿವೇಕಾನಂದರಿಂದ ಎಷ್ಟು ಪ್ರಭಾವಿತರಾಗಿದ್ದರೆಂದರೆ ತಮ್ಮ ಸುಖ ಸಮೃದ್ಧಿಯಾದ ಜೀವನವನ್ನು ತ್ಯಾಗ ಮಾಡಿ ತಮ್ಮ ಜೀವನವನ್ನೇ ಬಡವರ ಸೇವೆಗಾಗಿ ಸಮರ್ಪಿಸಿದರು. ಸಿಸ್ಟರ್ ನಿವೇದಿತಾರವರು ಬ್ರಿಟಿಷ್ ಆಳ್ವಿಕೆಯಲ್ಲಿ ಅತ್ಯಾಚಾರಗಳಿಂದ ತುಂಬಾ ಆತಂಕಗೊಂಡಿದ್ದರು. ಬ್ರಿಟಿಷರು ನಮ್ಮ ದೇಶವನ್ನು ಗುಲಾಮಗಿರಿಗೆ ತಳ್ಳಿದ್ದಷ್ಟೇಅಲ್ಲ, ನಮ್ಮನ್ನು ಸಹ ಮಾನಸಿಕವಾಗಿ ಗುಲಾಮರನ್ನಾಗಿ ಮಾಡಲು ಪ್ರಯತ್ನ ಪಟ್ಟಿದ್ದರು. ನಮ್ಮ ಸಂಸ್ಕೃತಿಯನ್ನು ಕನಿಷ್ಠವೆಂದು ಬಿಂಬಿಸಿ ನಮ್ಮಲ್ಲಿ ನಿಕೃಷ್ಟ ಭಾವನೆಯನ್ನು ಹುಟ್ಟುಹಾಕುವಂತಹ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತಿತ್ತು.
ಸೋದರಿ ನಿವೇದಿತಾರವರು ಭಾರತೀಯ ಸಂಸ್ಕೃತಿಯ ಗೌರವವನ್ನು ಮತ್ತೆ ಸ್ಥಾಪಿಸಿದರು. ರಾಷ್ಟ್ರೀಯತೆಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡಿದರು. ಅವರು ವಿಶ್ವದ ಬೇರೆ ಬೇರೆ ದೇಶಗಳಿಗೆ ಹೋಗಿ ಸನಾತನ ಧರ್ಮ ಮತ್ತು ದರ್ಶನದ ಬಗ್ಗೆ ಮಾಡುತ್ತಿದ್ದ ಅಪಪ್ರಚಾರದ ವಿರುಧ್ಧ ಧ್ವನಿ ಎತ್ತಿದರು. ಪ್ರಸಿಧ್ಧ ರಾಷ್ಟ್ರವಾದಿ ಮತ್ತು ತಮಿಳು ಕವಿ ಸುಬ್ರಮಣ್ಯ ಭಾರತಿ ಯವರು ತಮ್ಮ ಕ್ರಾಂತಿಕಾರಿ ಕವಿತೆ ಪುದುಮೈ ಪೆಣ್, ನ್ಯೂ ವಿಮೆನ್ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಈ ಕೆಲಸಕ್ಕೆ ಪ್ರೇರಣೆ ಸೋದರಿ ನಿವೇದಿತಾ ಅವರು ಎಂದು ಹೇಳುತ್ತಾರೆ.
ಸೋದರಿ ನಿವೇದಿತಾರವರು ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರಿಗೆ ಕೂಡ ಸಹಕಾರ ನೀಡಿದರು. ಅವರು ತಮ್ಮ ಬರವಣಿಗೆ ಮತ್ತು ಸಮ್ಮೇಳನಗಳ ಮುಖಾಂತರ ಬೋಸ್ ರವರ ರಿಸರ್ಚ್ ಗಳ ಪ್ರಕಟಣೆ ಮತ್ತು ಪ್ರಚಾರಕ್ಕೆ ಸಹಾಯ ಮಾಡಿದರು. ನಮ್ಮ ಸಂಸ್ಕೃತಿಯಲ್ಲಿ ಅಧ್ಯಾತ್ಮಿಕತೆ ಮತ್ತು ವಿಜ್ಞಾನ ಎರಡೂ ಒಂದಕ್ಕೊಂದು ಪೂರಕವಾಗಿದೆ ಎನ್ನುವುದೇ ಭಾರತದಲ್ಲಿ ಒಂದು ವಿಶೇಷ. ಸಿಸ್ಟರ್ ನಿವೇದಿತಾ ಮತ್ತು ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಇದಕ್ಕೊಂದು ಬಲವಾದ ಉದಾಹರಣೆ. 1899 ರಲ್ಲಿ ಕೋಲ್ಕತ್ತಾದಲ್ಲಿ ಭಯಾನಕವಾದ ಪ್ಲೇಗ್ ಹರಡಿತು ಮತ್ತು ನೋಡು ನೋಡುತ್ತಲೇ ನೂರಾರು ಜನರ ಪ್ರಾಣ ಹೊರಟು ಹೋಯಿತು. ಸಿಸ್ಟರ್ ನಿವೇದಿತಾ ಅವರು ತಮ್ಮ ಆರೋಗ್ಯದ ಚಿಂತೆಯನ್ನು ಸಹ ಮಾಡದೆ ಚರಂಡಿ ಮತ್ತು ರಸ್ತೆಗಳನ್ನು ಶುಚಿಗೊಳಿಸುವ ಕೆಲಸವನ್ನು ಪ್ರಾರಂಭಿಸಿದರು. ಅವರು ಎಂತಹ ಮಹಿಳೆಯೆಂದರೆ ತುಂಬಾ ಆರಾಮದಾಯಕ ಜೀವನವನ್ನು ನಡೆಸಬಹುದಾಗಿದ್ದರೂ ಕೂಡ ಬಡವರ ಸೇವೆಯಲ್ಲಿ ತೊಡಗಿಸಿಕೊಂಡರು. ಅವರ ಈ ತ್ಯಾಗದಿಂದ ಪ್ರೇರಿತರಾಗಿ ಜನರು ಸೇವಾಕಾರ್ಯಗಳಲ್ಲಿ ಅವರಜೊತೆ ಕೈ ಜೋಡಿಸಿದರು. ಅವರು ತಮ್ಮ ಕಾರ್ಯಗಳಿಂದ ಜನರಿಗೆ ಸ್ವಚ್ಚತೆ ಮತ್ತು ಸೇವೆಯ ಮಹತ್ವದ ಪಾಠ ಹೇಳಿಕೊಟ್ಟರು. ಅವರ ಸಮಾಧಿಯ ಮೇಲೆ ‘ ಹಿಯರ್ ರಿಪೋಸೆಸ್ ಸಿಸ್ಟರ್ ನಿವೇದಿತ ಹೋ ಗೇವ್ ಹರ್ ಆಲ್ ಟು ಇಂಡಿಯಾ ‘ ಯಾರು ತಮ್ಮ ಸರ್ವಸ್ವವನ್ನು ಭಾರತಕ್ಕೆ ನೀಡಿದರೋ ಅಂತಹ ಸಿಸ್ಟರ್ ನಿವೇದಿತಾ ಇಲ್ಲಿ ವಿಶ್ರಮಿಸುತ್ತಿದ್ದಾರೆ ? ಎಂದು ಬರೆದಿದೆ.
ನಿಸ್ಸಂದೇಹವಾಗಿ ಅವರು ಹಾಗೆಯೇ ಮಾಡಿದರು.
ಪ್ರತಿಯೊಬ್ಬ ಭಾರತೀಯನೂ ಅವರ ಜೀವನದಿಂದ ಪಾಠ ಕಲಿತು ಸ್ವತಃ ಅಂತಹ ಸೇವೆಯ ದಾರಿಯಲ್ಲಿ ನಡೆಯಲು ಪ್ರಯತ್ನ ಪಡುವುದೇ ಅಂಥಹ ಮಹಾನ್ ವ್ಯಕ್ತಿತ್ವಕ್ಕೆ ಸಲ್ಲುವ ಶ್ರಧ್ಧಾಂಜಲಿ.
ಫೋನ್ ಕಾಲ್ ?
ಮಾನನೀಯ ಪ್ರಧಾನಮಂತ್ರಿಗಳೇ, ನನ್ನ ಹೆಸರು ಡಾ. ಪಾರ್ಥ್ ಷಾ ಎಂದು. ನವೆಂಬರ್ 14 ನ್ನು ರಂದು ನಾವು ಮಕ್ಕಳ ದಿನವನ್ನಾಗಿ ಆಚರಿಸುತ್ತೇವೆ ಏಕೆಂದರೆ ಅದು ನಮ್ಮ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮ ದಿನ. ಅದೇ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಸಹ ಪರಿಗಣಿಸಲಾಗಿದೆ. ಮಧುಮೇಹ ಕೇವಲ ದೊಡ್ಡವರ ಖಾಯಿಲೆಯಲ್ಲ, ಅದು ಬಹಳಷ್ಟು ಮಕ್ಕಳಲ್ಲಿ ಸಹ ಕಂಡುಬಂದಿದೆ. ಇಂತಹ ಸವಾಲಿಗೆ ನಾವು ಏನು ಮಾಡಬಹುದು?
ನಿಮ್ಮ ದೂರವಾಣಿ ಕರೆಗೆ ಧನ್ಯವಾದಗಳು. ಎಲ್ಲಕ್ಕಿಂತ ಮೊದಲಿಗೆ ನಮ್ಮ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಅವರ ಜನ್ಮದಿನದಂದು ಚಿಲ್ದೆರ್ನ್ ಡೇ, ಮಕ್ಕಳ ದಿನಾಚರಣೆ ಪ್ರಯುಕ್ತ ಎಲ್ಲ ಮಕ್ಕಳಿಗೂ ಹಾರ್ದಿಕ ಶುಭಾಷಯಗಳು. ಮಕ್ಕಳು ನವ ಭಾರತದ ನಿರ್ಮಾಣದಲ್ಲಿ ಎಲ್ಲಕ್ಕಿಂತ ಮುಖ್ಯವಾದ ಹೀರೋಗಳು, ನಾಯಕರು. ನಿಮ್ಮ ಯೋಚನೆ ಸರಿಯಾಗಿದೆ. ಮೊದಲು ಯಾವ ರೋಗಗಳು ದೊಡ್ಡವರಲ್ಲಿ, ಜೀವನದ ಅಂತಿಮ ಘಟ್ಟದಲ್ಲಿ ಬರುತ್ತಿತ್ತೋ ಅದು ಈಗೀಗ ಮಕ್ಕಳಲ್ಲಿ ಸಹ ಕಾಣಿಸಿಕೊಳ್ಳುತ್ತಿದೆ. ಮಕ್ಕಳೂ ಕೂಡ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಎಂದು ಕೇಳುವುದಕ್ಕೆ ಬಹಳ ಆಶ್ಚರ್ಯ ಎನಿಸುತ್ತದೆ. ಹಿಂದಿನ ಕಾಲದಲ್ಲಿ ಇಂತಹ ರೋಗಗಳನ್ನು ರಾಜ ರೋಗ ಎನ್ನುವ ಹೆಸರಿನಿಂದ ಕರೆಯುತ್ತಿದ್ದರು. ರಾಜರೋಗ ಅಂದರೆ ಇಂತಹ ರೋಗಗಳು ಕೇವಲ ಶ್ರೀಮಂತ ಜನರಿಗೆ, ಆರಾಮವಾಗಿ ಜೀವನ ನಡೆಸುವವರಿಗೆ ಮಾತ್ರ ಬರುತ್ತಿತ್ತು. ಯುವಕರಲ್ಲಿ ಇಂತಹ ಖಾಯಿಲೆಗಳು ಅಪರೂಪವಾಗಿತ್ತು. ಆದರೆ ನಮ್ಮ ಜೀವನ ಶೈಲಿ ಬದಲಾಗಿದೆ. ಇಂದು ಇಂತಹ ಖಾಯಿಲೆಗಳನ್ನು ಹೆಸರಿಂದ ಗುರುತಿಸುತ್ತೇವೆ.
ಯವ್ವನದಲ್ಲಿ ಇಂತಹ ಖಾಯಿಲೆಗಳಿಗೆ ತುತ್ತಾಗುವುದಕ್ಕೆ ಒಂದು ಪ್ರಮುಖ ಕಾರಣ ನಮ್ಮ ಜೀವನಶೈಲಿ ಯಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗಿರುವುದು ಮತ್ತು ನಮ್ಮ ಆಹಾರ ಕ್ರಮದಲ್ಲಿ ಆಗಿರುವ ಬದಲಾವಣೆ. ಸಮಾಜ ಮತ್ತು ಕುಟುಂಬಗಳು ಇಂತಹವುಗಳ ಬಗ್ಗೆ ಗಮನ ಹರಿಸಬೇಕಾಗಿರುವುದು ಅಗತ್ಯವಾಗಿದೆ. ಯಾವಾಗ ಈ ವಿಚಾರವನ್ನು ನಾವು ಯೋಚಿಸುತ್ತವೆಯೋ ಆಗ ನೋಡಿ, ಏನೂ ಅತಿಶಯವಾಗಿ ಮಾಡುವ ಅವಶ್ಯಕತೆ ಇರುವುದಿಲ್ಲ. ಒಂದೇ ಒಂದರ ಅವಶ್ಯಕತೆ ಇದೆ, ಅದೆಂದರೆ, ಸಣ್ಣ ಸಣ್ಣ ಸಂಗತಿಗಳನ್ನು ನಿಯಮಿತ ರೂಪದಲ್ಲಿ ಮಾಡುತ್ತಾ ತಮ್ಮ ಅಭ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮತ್ತು ಅದನ್ನು ನಮ್ಮ ಸ್ವಭಾವವನ್ನಾಗಿ ಮಾಡಿಕೊಳ್ಳುವುದು.ಕುಟುಂಬದ ಸದಸ್ಯರು ತಮ್ಮ ಮಕ್ಕಳಿಗೆ ಪ್ರಜ್ಞಾಪೂರ್ವಕವಾಗಿ ತೆರೆದ ಮೈದಾನದಲ್ಲಿ ಆಟವಾಡುವ ಅಭ್ಯಾಸವನ್ನು ಮಾಡಿಸಲು ಪ್ರಯತ್ನಿಸಬೇಕೆಂದು ನಾನು ಬಯಸುತ್ತೇನೆ. ಸಾಧ್ಯವಾದರೆ ಕುಟುಂಬದ ಹಿರಿಯರು ಸಹ ಮಕ್ಕಳ ಜೊತೆ ಸ್ವಲ್ಪ ಹೊರಗೆ ಹೋಗಿ ಆಟವಾಡಿ. ಮಕ್ಕಳಿಗೆ ಲಿಫ್ಟ್ ನಲ್ಲಿ ಮೇಲೆ ಕೆಳಗೆ ಓಡಾಡಿಸುವ ಬದಲು ಮೆಟ್ಟಿಲು ಹತ್ತುವ ಅಭ್ಯಾಸ ಮಾಡಿಸಿ. ರಾತ್ರಿ ಊಟವಾದ ಮೇಲೆ ಕುಟುಂಬದ ಎಲ್ಲರೂ ಮಕ್ಕಳನ್ನು ಜೊತೆಗೆ ಕರೆದುಕೊಂಡು ನಡೆದಾಡುವ ಪ್ರಯತ್ನ ಮಾಡಿ. ಯೋಗಾ ಫೋರ್ ಯಂಗ್ ಇಂಡಿಯಾ. ಯೋಗವು ವಿಶೇಷವಾಗಿ ನಮ್ಮ ಯುವ ಮಿತ್ರರಿಗೆ ಒಂದು ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವಲ್ಲಿ ಮತ್ತು ಜೀವನ ಶೈಲಿಯಿಂದ ಬರುವ ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ನೋಡಿ, ಶಾಲೆಯ ಪ್ರಾರಂಭಕ್ಕೆ ಮುನ್ನ 30 ನಿಮಿಷ ಮುಂಚೆ ಯೋಗ ಮಾಡಿದರೆ, ಎಷ್ಟು ಅನುಕೂಲವಾಗುತ್ತದೆ ಎಂದು. ಮನೆಯಲ್ಲಿ ಕೂಡ ಮಾಡಬಹುದು. ಯೋಗದ ವಿಶೇಷಯೆಂದರೆ ಅದೇ. ಅದು ಸಹಜ, ಸರಳ, ಸರ್ವ ಸುಲಭ.ಅದ್ದರಿಂದ ಹೇಳುತ್ತಿದ್ದೇನೆ, ಯಾವುದೇ ವಯಸ್ಸಿನ ವ್ಯಕ್ತಿಯೂ ಸುಲಭವಾಗಿ ಮಾಡಬಹುದು. ಸರಳ ಯಾಕೆಂದರೆ ಸುಲಭವಾಗಿ ಕಲಿತುಕೊಳ್ಳಬಹುದು, ಸರ್ವ ಸುಲಭ ಏಕೆಂದರೆ ಎಲ್ಲಿಯಾದರೂ ಮಾಡಬಹುದು. ವಿಶೇಷ ಉಪಕರಣಗಳು ಅಥವಾ ಮೈದಾನದ ಅವಶ್ಯಕತೆ ಇರುವುದಿಲ್ಲ. ಮಧುಮೇಹ ನಿಯಂತ್ರಣಕ್ಕೆ ಯೋಗ ಎಷ್ಟೊಂದು ಸಹಕಾರಿ ಎನ್ನುವುದರ ಬಗ್ಗೆ ಅಧ್ಯಯನ ಕೂಡ ನಡೆಯುತ್ತಿದೆ. ಎ.ಐ.ಐ.ಎಮ್.ಎಸ್ ಕೂಡ ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇಲ್ಲಿಯವರೆಗೂ ಬಂದಿರುವ ಫಲಿತಾಂಶಗಳು ತುಂಬಾ ಪ್ರೋತ್ಸಾಹದಾಯಕವಾಗಿದೆ. ಆಯುರ್ವೇದ ಮತ್ತು ಯೋಗ ಇವುಗಳನ್ನು ನಾವು ಬರೀ ಚಿಕಿತ್ಸೆಯ ಮಾಧ್ಯಮವಾಗಿ ಮಾತ್ರ ನೋಡಬಾರದು. ಅವುಗಳನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು.
ನನ್ನ ಪ್ರೀತಿಯ ದೇಶವಾಸಿಗಳೇ, ಮುಖ್ಯವಾಗಿ ನನ್ನ ಯುವ ಜನರೇ,ಕ್ರೀಡಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಸುದ್ದಿ ಬಂದಿದೆ. ಬೇರೆ ಬೇರೆ ಆಟಗಳಲ್ಲಿ ನಮ್ಮ ಆಟಗಾರರು ದೇಶದ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಹಾಕಿಯಲ್ಲಿ ಭಾರತವು ಅದ್ಭುತವಾಗಿ ಆಡಿ ಏಶಿಯ ಕಪ್ ಹಾಕಿ ಪ್ರಶಸ್ತಿ ಗೆದ್ದಿದೆ. ನಮ್ಮ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಅದರ ಬಲದಿಂದ ಭಾರತವು 10 ವರ್ಷಗಳ ನಂತರ ಏಶಿಯ ಕಪ್ ಚಾಂಪಿಯನ್ ಆಗಿದೆ. ಇದಕ್ಕೂ ಮುಂಚೆ ಭಾರತವು 2003 ಮತ್ತು 2007 ರಲ್ಲಿ ಏಶಿಯ ಕಪ್ ಚಾಂಪಿಯನ್ ಆಗಿತ್ತು. ತಂಡದವರೆಲ್ಲರಿಗೂ ಬೆಂಬಲ ಕೊಟ್ಟ ಸಿಬ್ಬಂದಿಗೆ ನನ್ನ ಕಡೆಯಿಂದ, ದೇಶವಾಸಿಗಳ ಕಡೆಯಿಂದ ಹಾರ್ದಿಕ ಅಭಿನಂದನೆಗಳು. ಹಾಕಿಯ ನಂತರ ಬ್ಯಾಡ್ಮಿಂಟನ್ ನಲ್ಲಿ ಸಹ ಭಾರತಕ್ಕೆ ಒಳ್ಳೆಯ ಸುದ್ದಿ ಬಂತು. ಬ್ಯಾಡ್ಮಿಂಟನ್ ಸ್ಟಾರ್ ಕಿಡಂಬಿ ಶ್ರೀಕಾಂತ್ ಉತ್ಕೃಷ್ಟ ಪ್ರದರ್ಶನ ನೀಡಿ ಡೆನ್ಮಾರ್ಕ್ ಓಪನ್ ಪ್ರಶಸ್ತಿಗೆದ್ದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ತಂದಿದ್ದಾರೆ. ಇಂಡೋನೇಷಿಯ ಓಪನ್ ಮತ್ತು ಆಸ್ಟ್ರೇಲಿಯಾ ಓಪನ್ ನಂತರಇದು ಅವರ ಮೂರನೇ ಸೂಪರ್ ಸೀರೀಸ್ ಪ್ರೀಮಿಯರ್ ಪ್ರಶಸ್ತಿಯಾಗಿದೆ. ನಾನು ನನ್ನ ಯುವ ಸ್ನೇಹಿತನಿಗೆ ಅವರ ಈ ಒಂದು ಗರಿಮೆಗೆ ಮತ್ತು ಭಾರತದ ಗೌರವವನ್ನು ಹೆಚ್ಚಿಸಿದ್ದಕ್ಕೆ ಬಹಳ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ಸ್ನೇಹಿತರೇ, ಇದೇ ತಿಂಗಳು ಫಿಫಾ ಅಂಡರ್ -17 ವರ್ಲ್ಡ್ ಕಪ್ ಆಯೋಜನೆಯಾಗಿತ್ತು. ವಿಶ್ವದೆಲ್ಲೆಡೆಯಿಂದ ತಂಡಗಳು ಭಾರತಕ್ಕೆ ಬಂದವು ಮತ್ತು ಎಲ್ಲ ತಂಡಗಳು ಫುಟ್ ಬಾಲ್ ಮೈದಾನದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದವು. ನನಗೂ ಸಹ ಒಂದು ಮ್ಯಾಚ್ ಗೆ ಹೋಗಲು ಅವಕಾಶ ಸಿಕ್ಕಿತ್ತು. ಆಟಗಾರರು, ಪ್ರೇಕ್ಷಕರು ಎಲ್ಲರಲ್ಲೂ ತುಂಬಾ ಉತ್ಸಾಹ ಇತ್ತು. ವಲ್ರ್ಡ್ ಕಪ್ ನಂಥಹ ದೊಡ್ಡ ಘಟನೆ, ಪೂರಾ ಜಗತ್ತು ನಿಮ್ಮನ್ನು ನೋಡುತ್ತಿದೆ, ಎಂತಹ ದೊಡ್ಡ ಮ್ಯಾಚ್, ನಾನಂತೂ ಯುವ ಆಟಗಾರರ ಶಕ್ತಿ, ಉತ್ಸಾಹ, ಏನನ್ನಾದರೂ ಸಾಧಿಸುವ ಮನಸ್ಥಿತಿ ನೋಡಿ ಆಶ್ಚರ್ಯಚಕಿತನಾದೆ. ವಲ್ರ್ಡ್ ಕಪ್ ನ ಆಯೋಜನೆ ಸಫಲವಾಯಿತು ಮತ್ತು ಎಲ್ಲಾ ತಂಡಗಳೂ ತಮ್ಮ ಸರ್ವ ಶ್ರೇಷ್ಠ ಪ್ರದರ್ಶನ ನೀಡಿದವು. ಭಾರತವುಪ್ರಶಸ್ತಿ ಗೆಲ್ಲಲಿಲ್ಲ ಸರಿ, ಆದರೆ ಭಾರತದ ಯುವ ಆಟಗಾರರಂತೂ ಎಲ್ಲರ ಹೃದಯವನ್ನು ಗೆದ್ದರು. ಭಾರತವೂ ಸೇರಿದಂತೆ ಇಡೀ ವಿಶ್ವವು ಆಟದ ಈ ಮಹೋತ್ಸವವನ್ನು ಆನಂದಿಸಿತುಮತ್ತು ಈ ಎಲ್ಲಾ ಪಂದ್ಯಗಳು ಫುಟ್ ಬಾಲ್ ಪ್ರೇಮಿಗಳಿಗೆ ರೋಚಕ ಮತ್ತು ಮನೋರಂಜನೆ ನೀಡಿತ್ತು. ಫುಟ್ ಬಾಲ್ ನ ಭವಿಷ್ಯ ಉಜ್ವಲವಾಗಿದೆ. ಇದರ ಸೂಚನೆ ಕಾಣಿಸುತ್ತಿದೆ. ನಾನು ಮತ್ತೆ ಇನ್ನೊಂದು ಬಾರಿ ಎಲ್ಲಾ ಆಟಗಾರರಿಗೂ, ಅವರ ಜೊತೆಗಾರರಿಗೂ ಮತ್ತು ಎಲ್ಲಾ ಕ್ರೀಡಾ ಪ್ರೇಮಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ, ಶುಭಕಾಮನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಚ್ಚ ಬಾರತ ದ ವಿಷಯದಲ್ಲಿ ಎಷ್ಟೊಂದು ಜನ ಬರೆಯುತ್ತಾರೆ ಅಂದರೆ ಒಂದು ವೇಳೆ ನಾನು ಅವರ ಭಾವನೆಗಳಿಗೆ ನ್ಯಾಯ ಒದಗಿಸಬೇಕು ಅಂತ ಅಂದುಕೊಂಡರೆ ನನಗೆ ಪ್ರತಿದಿನ ಮನ್ ಕಿ ಬಾತ್ ಕಾರ್ಯಕ್ರಮ ಮಾಡಬೇಕಾಗುತ್ತದೆ ಮತ್ತು ಪ್ರತಿದಿನ ನಾನು ಸ್ವಚ್ಚತೆಯ ವಿಷಯಕ್ಕೆ ಸಂಬಂಧಿಸಿದತೆಯೇ ಮನ್ ಕಿ ಬಾತ್ ಅನ್ನು ಅರ್ಪಣೆ ಮಾಡಬೇಕಾಗುತ್ತದೆ. ಕೆಲವರು ಚಿಕ್ಕ ಚಿಕ್ಕ ಮಕ್ಕಳ ಪ್ರಯತ್ನಗಳನ್ನು ಫೊಟೋ ತೆಗೆದು ಕಳುಹಿಸಿದರೆ ಕೆಲವೊಮ್ಮೆ ಯುವಕರ ತಂಡ ಈ ಪ್ರಯತ್ನಗಳ ಭಾಗವಾಗಿರುತ್ತದೆ. ಎಲ್ಲೋ ಸ್ವಚ್ಚತೆಯನ್ನು ಗುರಿಯಾಗಿಟ್ಟುಕೊಂಡು ಒಂದು ಆವಿಷ್ಕಾರದ ಕಥೆ ಬರುತ್ತದೆ ಅಥವಾ ಯಾವುದೋ ಅಧಿಕಾರಿಯ ಹುಮ್ಮಸ್ಸಿನೊಂದಿಗೆ ಬದಲಾವಣೆಗಳಾದ ಸುದ್ದಿಗಳು ಬರುತ್ತವೆ.
ಕೆಲವು ದಿನಗಳ ಹಿಂದೆ ನನಗೆ ತುಂಬಾ ವಿಸ್ತ್ರತವಾದ ಒಂದು ವರದಿ ಸಿಕ್ಕಿತು. ಅದರಲ್ಲಿ ಮಹಾರಾಷ್ಟ್ರದ ಚಂದ್ರಪುರದ ಕೋಟೆಯ ಕಾಯಕಲ್ಪದ ಕಥೆ ಇತ್ತು. ಅಲ್ಲಿ ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ಎಂಬ ಹೆಸರಿನ ಒಂದು ಪೂರ್ತಿ ತಂಡ ಚಂದ್ರಪುರದ ಕೋಟೆಯಲ್ಲಿ ಶುಚಿತ್ವದ ಒಂದು ಅಭಿಯಾನ ನಡೆಸಿದರು. 200 ದಿನಗಳವರೆಗೆ ನಡೆದ ಈ ಅಭಿಯಾನದಲ್ಲಿ ಜನರು ನಿಲ್ಲಿಸದೆ, ಸುಸ್ತಾಗದೆ ಒಂದು ತಂಡದಂತೆ ಕೋಟೆಯ ಸ್ವಚ್ಚತೆಯ ಕೆಲಸವನ್ನು ಮಾಡಿದರು. ಸತತ 200 ದಿನ.. ಮೊದಲು ಮತ್ತು ನಂತರ ಎನ್ನುವ ಫೊಟೋ ಅವರು ನನಗೆ ಕಳುಹಿಸಿದ್ದಾರೆ. ಫೋಟೋ ನೋಡಿ ನಾನು ಆಶ್ಚರ್ಯಚಕಿತನಾದೆ. ಯಾರ ಮನಸ್ಸಿನಲ್ಲಿ ನಮ್ಮ ಅಕ್ಕ ಪಕ್ಕದಲ್ಲಿ ಕೊಳಕನ್ನು ನೋಡಿ ನಿರಾಶೆ ಮೂಡುತ್ತದೆಯೋ, ಸ್ವಚ್ಚತೆಯ ಕನಸು ಹೇಗೆ ನನಸಾಗುತ್ತದೆ ಎಂದು ಅನ್ನಿಸುತ್ತದೆಯೋ ಅಂತಹವರಿಗೆ ನಾನು ಹೇಳುವುದು ಏನೆಂದರೆ- ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ನ ಯುವಕರನ್ನೂ, ಅವರು ಹರಿಸಿರುವ ಬೆವರನ್ನೂ, ಅವರ ಮನಸ್ಥೈರ್ಯವನ್ನೂ, ಅವರ ಸಂಕಲ್ಪವನ್ನೂ ಆ ಜೀವಕಳೆ ತುಂಬಿದ ಭಾವಚಿತ್ರದಲ್ಲಿ ನೀವು ನೋಡಬಹುದು. ಅದನ್ನು ನೋಡುತ್ತಲೇ ನಿಮ್ಮ ನಿರಾಶೆ ವಿಶ್ವಾಸವಾಗಿ ಬದಲಾವಣೆಯಾಗುತ್ತದೆ. ಸ್ವಚ್ಚತೆಯ ಈ ಭಗೀರಥ ಪ್ರಯತ್ನವು ಸೌಂದರ್ಯ, ಒಗ್ಗಟ್ಟು ಮತ್ತು ಪ್ರಾತ್ಯಕ್ಷಿಕೆಯ ಒಂದು ಅದ್ಭುತ ಉದಾಹರಣೆ. ಕೋಟೆಗಳು ನಮ್ಮ ಪರಂಪರೆಯ ಪ್ರತೀಕ. ಐತಿಹಾಸಿಕ ಸ್ಮಾರಕಗಳನ್ನು ಸುರಕ್ಷಿತವಾಗಿ ಮತ್ತು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಎಲ್ಲಾ ದೇಶವಾಸಿಗಳ ಜವಾಬ್ದಾರಿಯಾಗಿದೆ. ನಾನು ಇಕೋಲೋಜಿಕಲ್ ಪ್ರೊಟೆಕ್ಷನ್ ಓರ್ಗನೈಸೇಷನ್ ಗೆ, ಅವರ ತಂಡಕ್ಕೆ ಮತ್ತು ಚಂದ್ರಪುರದ ಸಮಸ್ತ ನಾಗರೀಕರಿಗೂ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
ನನ್ನ ಪ್ರಿಯ ದೇಶವಾಸಿಗಳೇ, ಬರುವ ನವೆಂಬರ್ 4 ರಂದು ನಾವೆಲ್ಲರೂ ಗುರು ನಾನಕ್ ರ ಜನ್ಮದಿನವನ್ನು ಆಚರಿಸುತ್ತೇವೆ. ಗುರು ನಾನಕ್ ರು ಬರೀ ಸಿಖ್ಖರ ಮೊದಲ ಗುರು ಮಾತ್ರವಲ್ಲ, ಅವರು ಜಗತ್ತಿಗೇ ಗುರುಗಳು.
ಅವರು ಎಲ್ಲಾ ಮಾನವತೆಯ ಕಲ್ಯಾಣದ ಬಗ್ಗೆ ಯೋಚಿಸಿದರು, ಅವರು ಎಲ್ಲಾ ಜಾತಿಗಳನ್ನೂ ಒಂದೇ ಎಂದು ಹೇಳಿದರು. ಮಹಿಳಾ ಸಬಲೀಕರಣ ಮತ್ತು ಸ್ತ್ರೀ ಗೌರವಕ್ಕೆ ತುಂಬಾ ಪ್ರಾಮುಖ್ಯತೆ ಕೊಟ್ಟಿದ್ದರು. ಗುರು ನಾನಕ್ ರು ಕಾಲ್ನಡಿಗೆಯಲ್ಲಿ 28 ಸಾವಿರ ಕಿಲೋಮೀಟರ್ ಯಾತ್ರೆ ಮಾಡಿದರುಮತ್ತು ತಮ್ಮ ಈ ಯಾತ್ರೆಯ ಮೂಲಕ ಅವರು ನಿಜವಾದ ಮಾನವತೆಯ ಸಂದೇಶ ಕೊಟ್ಟರು. ಅವರು ಜನರೊಂದಿಗೆ ಸಂವಾದ ನಡೆಸಿದರು ಮತ್ತು ಅವರಿಗೆ ಸತ್ಯ, ತ್ಯಾಗ ಮತ್ತು ಕರ್ಮ ನಿಷ್ಠೆಯ ಮಾರ್ಗ ತೋರಿಸಿದರು.ಅವರು ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದರು ಮತ್ತು ತಮ್ಮ ಈ ಸಂದೇಶವನ್ನು ಮಾತಿನಲ್ಲಿ ಮಾತ್ರವಲ್ಲ, ತಮ್ಮ ಕೃತಿಯಿಂದ ಸಹ ಮಾಡಿ ತೋರಿಸಿದರು. ಅವರು ಸಾಮೂಹಿಕ ಅಡಿಗೆ ಮನೆಯನ್ನು ಅಂದರೆ ಲಂಗರ್ ನಡೆಸಿದರು.
ಅದರಿಂದ ಜನರಿಗೆ ಸೇವಾ ಮನೋಭಾವನೆ ಹುಟ್ಟಿತು. ಒಟ್ಟಿಗೆ ಕುಳಿತುಅಡಿಗೆ ಮಾಡಿ ತಿನ್ನುವಲ್ಲಿ ಜನರಿಗೆ ಏಕತೆ ಮತ್ತು ನಮಾನತೆಯ ಭಾವನೆಗಳು ಬೆಳೆದವು. ಗುರು ನಾನಕರು ಸಾರ್ಥಕ ಜೀವನಕ್ಕಾಗಿ 3 ಸಂದೇಶಗಳನ್ನು ನೀಡಿದರು. ಅವೆಂದರೆ- ಪರಮಾತ್ಮನ ನಾಮವನ್ನು ಜಪಿಸು, ಕಷ್ಟ ಪಟ್ಟು ದುಡಿಮೆ ಮಾಡು, ಮತ್ತು ಅವಶ್ಯಕತೆ ಇದ್ದವರಿಗೆ ಸಹಾಯ ಮಾಡು, ಗುರು ನಾನಕರು ತಮ್ಮ ಮಾತುಗಳನ್ನು ಹೇಳಲು ಗುರುಬಾನಿಗಳನ್ನು ರಚಿಸಿದರು. ಬರುವ 2019 ರಲ್ಲಿ ನಾವು ಗುರು ನಾನಕರ 550 ನೇ ಜಯಂತಿಯನ್ನು ಆಚರಿಸಲು ಯೋಜಿಸಿದ್ದೇವೆ. ಬನ್ನಿ, ನಾವು ಅವರ ಸಂದೇಶ ಮತ್ತು ಶಿಕ್ಷಣ ದ ಮಾರ್ಗದಲ್ಲಿ ಮುಂದೆ ಹೋಗುವ ಪ್ರಯತ್ನ ಮಾಡೋಣ.
ನನ್ನ ಪ್ರೀತಿಯ ದೇಶವಾಸಿಗಳೇ, 2 ದಿನಗಳ ನಂತರ 31 ಅಕ್ಟೋಬರ್ ರಂದು ನಾವು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ಅವರ ಹುಟ್ಟು ಹಬ್ಬವನ್ನು ಆಚರಿಸೋಣ. ಆಧುನಿಕ ಅಖಂಡ ಭಾರತದ ಪ್ರಸ್ತಾವನೆಯನ್ನು ಇವರೇ ಕೊಟ್ಟಿದ್ದು ಎಂದು ನಮಗೆಲ್ಲರಿಗೂ ಗೊತ್ತು. ಭಾರತ ಮಾತೆಯ ಆ ಮಹಾನ್ ಸಂತಾನದ ಅಸಾಧಾರಣ ಜೀವನದಿಂದ ಇಂದು ನಾವು ಬಹಳ ತಿಳಿದುಕೊಳ್ಳಬಹುದು. 31 ಅಕ್ಟೋಬರ್ ರಂದು ಶ್ರೀಮತಿ ಇಂದಿರಾ ಗಾಂಧಿ ಯವರು ಸಹ ಈ ಜಗತ್ತನ್ನು ತೊರೆದು ಹೋದರು. ಸರ್ದಾರ್ ವಲ್ಲಬ್ ಭಾಯಿ ಪಟೇಲರ ವಿಶೇಷವೆಂದರೆ ಅವರು ಬರೀ ಪರಿವರ್ತನೆ ವಿಚಾರಗಳನ್ನು ಹೇಳುತ್ತಿರಲಿಲ್ಲ, ಅದನ್ನು ಮಾಡಿ ತೋರಿಸುವ ಸಲುವಾಗಿ ಕಷ್ಟಾತಿಕಷ್ಟವಾದ ಸಮಸ್ಯೆಗಳನ್ನು ವ್ಯಾವಹಾರಿಕವಾಗಿ ಪರಿಹರಿಸುವ ಉಪಾಯ ಹುಡುಕುವುದರಲ್ಲಿ ಸಮರ್ಥರಿದ್ದರು. ವಿಚಾರಗಳನ್ನು ಸಾಕಾರಗೊಳಿಸುವುದರಲ್ಲಿ ಅವರು ಸಮರ್ಥರು. ಸರ್ದಾರ್ ವಲ್ಲಭಭಾಯಿ ಪಟೇಲ್ ಭಾರತದ ಪ್ರಭುತ್ವವನ್ನು ಒಂದೇ ಸೂತ್ರದಲ್ಲಿ ಹಿಡಿದಿಟ್ಟು ನಿಯಂತ್ರಿಸಿದರು. ಕೋಟ್ಯಾಂತರ ಭಾರತೀಯರನ್ನು ?ಒಂದು ರಾಷ್ಟ್ರ ಮತ್ತು ಒಂದು ಸಂವಿಧಾನದ ನೆಲೆಯೊಳಗೆ ತರಬೇಕೆಂದು ನಿಶ್ಚಯಿಸಿದ್ದರು.
ಅವರ ಧೃಢ ನಿಶ್ಚಯ ಅವರಿಗೆ ಎಲ್ಲ ಅಡೆತಡೆ ಗಳನ್ನೂ ದಾಟಿ ಹೋಗುವ ಸಾಮರ್ಥ ಕೊಟ್ಟಿತು. ಎಲ್ಲಿ ಮನಸ್ಸನ್ನು ಬದಲಿಸುವ ಅವಶ್ಯಕತೆ ಇತ್ತೋ ಅಲ್ಲಿ ಅವರು ಮನ ಒಲಿಸಿದರು, ಎಲ್ಲಿ ಬಲಪ್ರಯೋಗದ ಅವಶ್ಯಕತೆ ಬಿತ್ತೋ ಅಲ್ಲಿ ಬಲಪ್ರಯೋಗ ಮಾಡಿದರು. ಅವರು ಒಂದು ಉದ್ದೇಶವನ್ನು ನಿಶ್ಚಯ ಮಾಡಿದ್ದರು ಮತ್ತು ಅದರೆಡೆಗೆ ತುಂಬಾ ಧೃಡತೆಯಿಂದ ಹೋಗುತ್ತಲೇ ಇದ್ದರು. ದೇಶವನ್ನು ಒಗ್ಗೂಡಿಸುವ ಈ ಕಾರ್ಯವನ್ನು ಅವರೊಬ್ಬರೇ ಮಾಡಬಲ್ಲವರಾಗಿದ್ದರು ಯಾಕೆಂದರೆ ಅವರು ಎಲ್ಲಾ ಜನರೂ ಸಮಾನರಾಗಿ ಇರುವಂತಹ ದೇಶದ ಪರಿಕಲ್ಪನೆಯನ್ನು ಮಾಡಿದ್ದರು ಮತ್ತು ಅವರು? ಜಾತಿ ಮತ್ತು ಪಂಥಗಳ ಯಾವುದೇ ಬೇಧ ನಮ್ಮನ್ನು ತಡೆಯದಿರಲಿ, ಎಲ್ಲರೂ ಭಾರತದ ಸುಪುತ್ರ ಮತ್ತು ಸುಪುತ್ರಿಯರು, ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸಬೇಕು ಮತ್ತು ಪರಸ್ಪರ ಪ್ರೇಮ ಮತ್ತು ಸದ್ಭಾವನೆಯಿಂದ ನಮ್ಮ ಗುರಿಯನ್ನು ನಿರ್ಮಿಸಿಕೊಳ್ಳಬೇಕಾಗಿದೆ? ಎಂದು ಹೇಳಿದ್ದರು. ಸರ್ದಾರ್ ವಲ್ಲಬ್ ಭಾಯಿ ಪಟೇಲರ ಮಾತು ಎಂದೂ ಯಾವಾಗಲೂ ನಮ್ಮೆಲ್ಲರಿಗೆ ಪ್ರೇರಣೆಯಾಗಿರಬೇಕು ಎಂದು ನಾನು ಹೇಳುತ್ತಿದ್ದೇನೆ.
ಸರ್ದಾರ್ ರ ಈ ಮಾತು ಇಂದಿಗೂ ಕೂಡ ನಮ್ಮ ನ್ಯೂ ಇಂಡಿಯಾ ದ ವಿಷನ್ ಗೆ ಪ್ರೇರಕವಾಗಿದೆ, ಪ್ರಾಸಂಗಿಕವಾಗಿದೆ. ಇದೇ ಕಾರಣದಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸ ಎಂದು ಆಚರಿಸಲಾಗುತ್ತಿದೆ.
ದೇಶಕ್ಕೆ ಒಂದು ಅಖಂಡ ರಾಷ್ಟ್ರದ ಸ್ವರೂಪ ಕೊಡುವುದಕ್ಕೆ ಅವರ ಕೊಡುಗೆ ಅನನ್ಯವಾದುದು. ಸರ್ದಾರ್ ಪಟೇಲ್ ರ ಜನ್ಮ ಜಯಂತಿ ಅಂಗವಾಗಿ 31 ಅಕ್ಟೋಬರ್ ರಂದು ದೇಶದೆಲ್ಲೆಡೆ ರನ್ ಫೋರ್ ಯುನಿಟಿ ಯನ್ನು ಅಯೋಜನೆಯಾಗುತ್ತದೆ. ಇದರಲ್ಲಿ ದೇಶದ ಎಲ್ಲಾ ಕಡೆಗಳಿಂದ ಮಕ್ಕಳು, ಯುವಕರು,ಮಹಿಳೆಯರು, ಎಲ್ಲಾ ವಯಸ್ಸಿನ ಜನರು ಭಾಗಿಯಾಗುತ್ತಾರೆ. ನೀವು ಸಹ ನಮ್ಮೆಲ್ಲರಲ್ಲಿ ಸದ್ಭಾವನೆ ಬೆಳೆಸುವ ಈ ರನ್ ಫೋರ್ ಯುನಿಟಿ ಉತ್ಸವದಲ್ಲಿ ಭಾಗಿಯಾಗಿ ಎಂದು ನಾನು ನಿಮ್ಮೆಲ್ಲರನ್ನೂ ಆಗ್ರಹಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ದೀಪಾವಳಿಯ ರಜೆಯ ನಂತರ ಹೊಸ ಸಂಕಲ್ಪದೊಂದಿಗೆ, ಹೊಸ ನಿಶ್ಚಯದೊಂದಿಗೆ, ನೀವೆಲ್ಲರೂ ನಿಮ್ಮ ದಿನನಿತ್ಯದ ಜೀವನದಲ್ಲಿ ಮತ್ತೊಮ್ಮೆ ಮುಳುಗಿರುತ್ತೀರಿ. ನನ್ನ ಕಡೆಯಿಂದ ಎಲ್ಲಾ ದೇಶವಾಸಿಗಳಿಗೆ, ಅವರ ಎಲ್ಲಾ ಕನಸುಗಳು ಸಾಕಾರವಾಗಲಿ ಎನ್ನುವ ಶುಭಕಾಮನೆಗಳು. ಅನಂತ ಧನ್ಯವಾದಗಳು.
PM @narendramodi on Chhath Puja in #MannKiBaat pic.twitter.com/3Pxi05xJcr
— PMO India (@PMOIndia) October 29, 2017
Khadi for Transformation!#MannKiBaat pic.twitter.com/Gz3ni9CE3I
— PMO India (@PMOIndia) October 29, 2017
Entire Nation is proud of our brave Jawans!#MannKiBaat pic.twitter.com/AghugV4Gun
— PMO India (@PMOIndia) October 29, 2017
Our Jawans are playing a vital role in UN peace-keeping missions across the world.#MannKiBaat pic.twitter.com/LgfOcWCw1F
— PMO India (@PMOIndia) October 29, 2017
The UN declaration of Human Rights is testimony to India's push for gender equality#MannKiBaat pic.twitter.com/Vhxc9Lr3lV
— PMO India (@PMOIndia) October 29, 2017
Our belief of 'Vasudhaiva Kutumbakam' & our contribution to world peace.#MannKiBaat pic.twitter.com/L8TdDx4v01
— PMO India (@PMOIndia) October 29, 2017
India has been blessed with great people, who served humanity with selflessness.#MannKiBaat pic.twitter.com/Cb4k2N1IS9
— PMO India (@PMOIndia) October 29, 2017
Sister Nivedita worked to unite people by awakening national consciousness.#MannKiBaat pic.twitter.com/L29htFbyKY
— PMO India (@PMOIndia) October 29, 2017
Diseases like Diabetes are now also affecting the young.#MannKiBaat pic.twitter.com/IsWnbUjCGv
— PMO India (@PMOIndia) October 29, 2017
Yoga for Young India!
— PMO India (@PMOIndia) October 29, 2017
Yoga will help our children from lifestyle disorders.#MannKiBaat pic.twitter.com/gGMTUg5jfl
Guru Nanak Dev ji is not only the first Guru of Sikhs, but he is also a 'Jagat Guru'.#MannKiBaat pic.twitter.com/IRFrC7YnJv
— PMO India (@PMOIndia) October 29, 2017
Sardar Patel's contribution in uniting our Nation is invaluable.#MannKiBaat pic.twitter.com/hpwVKCvSZ6
— PMO India (@PMOIndia) October 29, 2017
I urge all of you to participate in 'Run for Unity'.#MannKiBaat pic.twitter.com/O8BfjmCIUq
— PMO India (@PMOIndia) October 29, 2017