ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಿ ಘನತೆವೆತ್ತ ಶ್ರೀ ಉಲ್ಫ್ ಕ್ರಿಸ್ಟರ್ಸನ್ ಅವರು ದುಬೈನಲ್ಲಿ ನಡೆದ ಸಿಒಪಿ-28ರಲ್ಲಿ 2024-26ರ ಅವಧಿಯ ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪಿನ (ಲೀಡ್ ಐಟಿ 2.0) ಎರಡನೇ ಹಂತಕ್ಕೆ ಸಹ ಚಾಲನೆ ನೀಡಿದರು.
ಭಾರತ ಮತ್ತು ಸ್ವೀಡನ್ ಉದ್ಯಮ ಪರಿವರ್ತನೆ ವೇದಿಕೆಯನ್ನು ಸಹ ಪ್ರಾರಂಭಿಸಿವೆ, ಇದು ಎರಡೂ ದೇಶಗಳ ಸರ್ಕಾರಗಳು, ಕೈಗಾರಿಕೆಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧಕರು ಮತ್ತು ಚಿಂತಕರ ಚಾವಡಿಗಳನ್ನು ಸಂಪರ್ಕಿಸುತ್ತದೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು, ಲೀಡ್ ಐಟಿ 2.0 ಈ ಕೆಳಗಿನವುಗಳ ಮೇಲೆ ಗಮನ ಹರಿಸಲಿದೆ ಎಂದು ಒತ್ತಿ ಹೇಳಿದರು:
ಅಂತರ್ಗತ ಮತ್ತು ನ್ಯಾಯಯುತ ಕೈಗಾರಿಕಾ ಪರಿವರ್ತನೆ:
ಕಡಿಮೆ ಇಂಗಾಲದ ತಂತ್ರಜ್ಞಾನದ ಸಹ-ಅಭಿವೃದ್ಧಿ ಮತ್ತು ವರ್ಗಾವಣೆ , ಉದ್ಯಮ ಪರಿವರ್ತನೆಗಾಗಿ ಉದಯೋನ್ಮುಖ ಆರ್ಥಿಕತೆಗಳಿಗೆ ಆರ್ಥಿಕ ಬೆಂಬಲ
2019 ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ಸಂಸ್ಥೆ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾರತ ಮತ್ತು ಸ್ವೀಡನ್ ಲೀಡ್ ಐಟಿಯನ್ನು ಸಹ-ಪ್ರಾರಂಭಿಸಿದ್ದವು