“ ನಮ್ಮಲ್ಲಿ ಒಬ್ಬೊಬ್ಬರ ವೈಯ್ಯಕ್ತಿಕ ಪಾಸ್ ಪೋರ್ಟ್ ಭಿನ್ನವಿರಬಹುದು, ಆದರೆ ಇವುಗಳು ಸಧೃಢ ಮಾನವೀಯತೆಯ ಬಂಧನಕ್ಕಿಂತ ಮಿಗಿಲಾಗದು” – ಇದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯಾವುದೇ ನೈಸರ್ಗಿಕ ಆಪತ್ತಿನ, ಪ್ರಕೃತಿಕ ವಿಪತ್ತಿನ ಸಂದರ್ಭಗಳಲ್ಲೆಲ್ಲ ಬಹುತೇಕವಾಗಿ ಹೇಳುತ್ತಿದ್ದ ಮುಖ್ಯ ಸಂದೇಶದ ಸಾರಾಂಶ.
ಯಮನ್, ಸಂದಿಗ್ಧತೆಯ ಉಚ್ಛ್ರಾಯ ಸ್ಥಿತಿಯಲ್ಲಿ ಹಲವು ದೇಶಗಳು ಅಸಹಾಯಕವಾದರೂ, ಭಾರತ ಸಹಾಯ ಹಸ್ತ ನೀಡಿತು.ಯಾವುದೇ ಒಂದು ಪ್ರಕ್ರಿಯೆಯನ್ನೂ ವ್ಯರ್ಥಗೊಳಿಸಸದೆ, ತನ್ನೆಲ್ಲಾ ಸಾಮರ್ಥ್ಯದಿಂದ ಮಾಡಿದ ಸಕಾರಾತ್ಮಕ ಸಹಾಯದ ಪರಿಣಾಮವಾಗಿ, ಮುಂಬರುವ ದಿನಗಳಲ್ಲಿ, ಇಂಥಹ ಸಂದರ್ಭಗಳಲ್ಲಿ ಅನೇಕ ದೇಶಗಳು ಭಾರತದ ಸಹಾಯವನ್ನು ಯಾಚಿಸಿದವು.
ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ಪರಿಹಾರ ಮತ್ತು ಸಹಾಯ ಉಪಕ್ರಮಗಳ ಬಗ್ಗೆ ನಿಕಟ ಸಂಪರ್ಕವಿಟ್ಟು ಗಮನಿಸಿ, ಸೂಚನೆ ನೀಡುತ್ತಿದ್ದರು, ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ವಿ.ಕೆ ಸಿಂಗ್ ಅವರು ಸ್ವತಃ ಯಮನ್ ಮತ್ತು ಜಿಬೊಟಿಗೆ ತೆರಳಿ ಪರಿಹಾರ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅಲ್ಲಿಂದ ಪ್ರತಿಯೊಂದೂ ಚಟುವಟಿಕೆಗಳನ್ನು ಯುದ್ದೋಪಾದಿಯಲ್ಲಿ ಸಮರ್ಪಕವಾಗಿ ನೆರವೇರಿಸಿಕೊಟ್ಟರು.
ನೇಪಾಲದ ಪ್ರಕೃತಿಕ ವಿಪತ್ತು.25ನೇ ಎಪ್ರಿಲ್ 2015ರಂದು ಭಾರತವನ್ನು ತಲ್ಲಣಗೊಳಿಸಿದ ಇನ್ನೊಂದು ಘಟನೆ. ಪ್ರಧಾನಿಯವರ ಅಧ್ಯಕ್ಷತೆಯಲ್ಲಿ, ನೇಪಾಲದ ಸಹೋದರ ಮತ್ತು ಸಹೋದರಿಯರ ಸಹಾಯಕ್ಕಾಗಿ ವಿಶೇಷ ಉನ್ನತ ಮಟ್ಟದ ಸಮಿತಿ ನಿರ್ಮಿಸಿ. ಭೂಕಂಪನದಿಂದ ಹಾನಿಗೊಳಗಾದ ನೆರೆದೇಶಕ್ಕೆ ಹಿರಿಯಣ್ಣನ ಸ್ಥಾನದಲ್ಲಿ ಆಶ್ರಯದಾಸರೆಯಾಗಿ ಮುಂದೆ ನಿಂತು ಸಹಾಯ-ಪರಿಹಾರ ನೀಡಿ ಅವರ ಕಣ್ಣೀರು ಒರೆಸಲು ಪ್ರಯತ್ನಿಸಿತು.l ,
ವಿಶ್ವಸಂಸ್ಥೆ ಪ್ರಶಂಸಿಸಿತು. ಭಾರತದ ಉಪಕಾರದ ಮನೋಭಾವವನ್ನು, ಮಾನವೀಯತೆಯ ನಡೆಯನ್ನು ಯು.ಎಸ್.ಎ ಶ್ಲಾಘಿಸಿತು. ಬಹುತೇಕ ಇಡೀ ವಿಶ್ವವೇ ಹೊಗಳಿತು ಅನ್ನಬಹುದು.
ಅಫ್ಘಾನ್ ಉಗ್ರರು 8 ತಿಂಗಳ ಕಾಲ ಬಂಧಿಸಿಟ್ಟಿದ್ದ ಫಾದರ್ ಅಲೆಕ್ಸ್ ಪ್ರೇಮ್ ಕುಮಾರ್ ಅವರನ್ನು ಯಶಸ್ವಿಯಾಗಿ ಬಂಧಮುಕ್ತಗೊಳಿಸಿ 2015ರ ಫೆಬ್ರವರಿಯಲ್ಲಿ ತಾಯ್ನಾಡಿಗೆ ಕೆರೆತರಲಾಯಿತು. ಅವರ ಕುಟುಂಬದ ಸಮ್ಮಿಳನ, ಕಟುಂಬದ ಆನಂದ ಮತ್ತು ಕುಟುಂಬದ ನೆಮ್ಮದಿಯ ನಿಟ್ಟುಸಿರು.ಕೇಂದ್ರ ಸರಕಾರಕ್ಕೆ ಅದರಲ್ಲೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪಾಲಿಗೆ ಬಹುದೊಡ್ಡ ಯಶಸ್ಸಿನ ಮುಕುಟಗರಿಯಾಗಿದೆ.
ಮಧ್ಯಪ್ರಾಚ್ಯ ಗಲ್ಫ್ ರಾಷ್ಟ್ರಗಳಲ್ಲಿ ಅನೇಕ ಮಂದಿ ಕೇಂದ್ರ ಸರಕಾರದ ಕಾರ್ಯಪಡೆಯಿಂದ ಸುರಕ್ಷಿತವಾಗಿ ತಾಯಿನಾಡು ಸೇರಿದರು ಅದರಲ್ಲೂ ಇರಾಕ್ ನಲ್ಲಿ ಉದ್ಯೋಗದ ಮೋಸಕ್ಕೆ ಬಲಿಯಾಗಿ, ದೌರ್ಜನ್ಯಕ್ಕೊಳಗಾದ ಕೇರಳ ಮೂಲದ ನರ್ಸ್ ಗಳನ್ನು ಬಂಧನದಿಂದ ರಕ್ಷಿಸಿ, ಸುರಕ್ಷಿತವಾಗಿ ಮನೆಗೆ ತಲುಪಿಸಿಕೊಟ್ಟರು. ಇದರ ಗಂಭೀರತೆಗೆ ಮತ್ತು ತ್ವರಿತ ಪರಿಹಾರದ ಯಶಸ್ಸಿಗೆ, ಅಂದಿನ ಕೇರಳ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಅವರು ಸ್ವತಃ ನೀಡಿದ ಧನ್ಯವಾದ ಪತ್ರವೇ ಸಾಕ್ಷಿ.
ಹೀಗೆ ಅನೇಕ ಬಾರಿ, ವಿವಿಧ ಸಂದರ್ಭಗಳಲ್ಲಿ, ಪಾಸ್ ಪೊರ್ಟಿನ ಬಣ್ಣಕ್ಕಿಂತ ಮಾನವೀಯತೆಯ ಸಂಬಂಧಗಳು ಮುಖ್ಯವೆಂದು ಪುನರಪಿ ತೋರಿಸಿಕೊಟ್ಟ ಕೇಂದ್ರ ಸರಕಾರದ ಸಾಮಾಜಿಕ ಕಾಳಜಿಯ ಘಟನೆಗಳಲ್ಲಿ ಕೇವಲ ಉದಾಹರಣೆಗಳು ಮಾತ್ರ.