Quoteಪೂರ್ವಸಿದ್ಧತೆ ಇಲ್ಲದ ಅಧಿವೇಶನದಲ್ಲಿ 12 ನೇ ತರಗತಿ ಪರೀಕ್ಷೆ ರದ್ದು ಮಾಡಿದುದಕ್ಕಾಗಿ ವಿದ್ಯಾರ್ಥಿಗಳು-ಪೋಷಕರಿಂದ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದರು

 

ಶಿಕ್ಷಣ ಸಚಿವಾಲಯವು ಆಯೋಜಿಸಿದ್ದ ವರ್ಚುವಲ್ ಅಧಿವೇಶನಕ್ಕಾಗಿ ಸೇರಿದ್ದ 12 ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಪೂರ್ವಸಿದ್ಧತೆ ಇಲ್ಲದ ಕ್ರಮವೊಂದರಲ್ಲಿ ಈ ಅಧಿವೇಶನಕ್ಕೆ ಸೇರ್ಪಡೆಗೊಂಡದ್ದರಿಂದ ಸಂತೋಷದ ಜೊತೆ ಆಶ್ಚರ್ಯ ಚಕಿತರಾದರು. ಸಿ.ಬಿ.ಎಸ್.ಸಿ. 12 ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದು ಮಾಡಿರುವುದರ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯವು ಈ ಅಧಿವೇಶನವನ್ನು ಆಯೋಜಿಸಿತ್ತು. ತಮ್ಮ ನಡುವೆ ಪ್ರಧಾನ ಮಂತ್ರಿ ಅವರನ್ನು ಕಾಣುತ್ತಲೇ ಆಶ್ಚರ್ಯಚಕಿತರಾಗಿ ನಕ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ  “ನಾನು ನಿಮ್ಮ ಆನ್ ಲೈನ್ ಸಭೆಗೆ ತೊಂದರೆ ಕೊಡುತ್ತಿಲ್ಲ ಎಂದು ಭಾವಿಸುತ್ತೇನೆ” ಎಂದು ಹೇಳುವ ಮೂಲಕ  ತಮ್ಮ ಮಾತುಗಳನ್ನು ಆರಂಭಿಸಿದರು. ಸಮಯ ಸ್ಪೂರ್ತಿಯಿಂದ ಮಾತನಾಡಿದ ಪ್ರಧಾನ ಮಂತ್ರಿ ಅವರು ಪರೀಕ್ಷೆ ಒತ್ತಡವನ್ನು ನಿವಾರಿಸಲಾಗಿರುವುದನ್ನು ಮನಗಂಡರಲ್ಲದೆ ವಿದ್ಯಾರ್ಥಿಗಳ ಜೊತೆ ಲಘು ಹಾಸ್ಯದ ಸಂದರ್ಭಗಳನ್ನು ಹಂಚಿಕೊಂಡರು. ವೈಯಕ್ತಿಕ ಉಪಾಖ್ಯಾನಗಳನ್ನು ಹಂಚಿಕೊಳ್ಳುವ ಮೂಲಕ ಅವರು ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸಿದರು. ಪಂಚಕುಲದ ವಿದ್ಯಾರ್ಥಿಯೊಬ್ಬರು ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಒತ್ತಡ, ಉದ್ವಿಗ್ನತೆ ಬಗ್ಗೆ ಮಾತನಾಡಿದಾಗ ಪ್ರಧಾನ ಮಂತ್ರಿ ಅವರು ಆ ವಿದ್ಯಾರ್ಥಿಗೆ ಆತನ ನಿವಾಸದ ಸೆಕ್ಟರ್ ಕೇಳಿದರು ಮತ್ತು ತಾನು ಕೂಡಾ ಬಹಳ ಧೀರ್ಘ ಅವಧಿಯವರೆಗೆ ಅಲ್ಲಿ ವಾಸ್ತವ್ಯ ಇದ್ದುದನ್ನು ತಿಳಿಸಿದರು.

|

ಪ್ರಧಾನ ಮಂತ್ರಿ ಅವರ ಜೊತೆ ಮುಕ್ತವಾಗಿ ಮಾತನಾಡಿದ ಮಕ್ಕಳು ತಮ್ಮ ಕಳವಳಗಳನ್ನು ಮತ್ತು ದೃಷ್ಟಿಕೋನವನ್ನು ಮುಕ್ತವಾಗಿ ಹಂಚಿಕೊಂಡರು. ಹಿಮಾಚಲ ಪ್ರದೇಶದ  ಸೋಲನ್ ನ  ವಿದ್ಯಾರ್ಥಿಯೊಬ್ಬರು ಜಾಗತಿಕ ಸಾಂಕ್ರಾಮಿಕದ ನಡುವೆ ಪರೀಕ್ಷೆಗಳನ್ನು ರದ್ದು ಮಾಡಿರುವುದಕ್ಕೆ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಹೇಳಿದರು ಮತ್ತು ಅದು ಉತ್ತಮ ನಿರ್ಧಾರ ಎಂದು ಶ್ಲಾಘಿಸಿದರು. ಕೆಲವರು ಮುಖಗವಸು ಧರಿಸದಿರುವ, ಸಾಮಾಜಿಕ ಅಂತರ ಕಾಪಾಡದಿರುವ ಹಾಗು  ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸದಿರುವ ಬಗ್ಗೆ ವಿದ್ಯಾರ್ಥಿಯೊಬ್ಬರು ಟೀಕಿಸಿದರು. ಆಕೆ ತನ್ನ ಸ್ಥಳೀಯ ಪ್ರದೇಶದಲ್ಲಿ ಕೈಗೊಂಡ ಜಾಗೃತಿ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಜಾಗತಿಕ ಸಾಂಕ್ರಾಮಿಕದ ಅಪಾಯದ ಬಗ್ಗೆ ಚಿಂತಿತರಾಗಿದ್ದ ವಿದ್ಯಾರ್ಥಿಗಳಿಗೆ ಅಲ್ಲಿ ಸ್ಪಷ್ಟ ಸಮಾಧಾನ ದೊರೆತುದರ ಬಗ್ಗೆ ತೃಪ್ತಿ ಇತ್ತು. ಅವರಲ್ಲಿ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ರದ್ದು ಮಾಡಲು ಕೈಗೊಂಡ ನಿರ್ಧಾರಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಪೋಷಕರು ಕೂಡಾ ಈ ನಿರ್ಧಾರವನ್ನು ಧನಾತ್ಮಕವಾಗಿ ಪರಿಗಣಿಸಿದ್ದಾರೆ. ಮುಕ್ತ ಮತ್ತು ಆರೋಗ್ಯಕರ ಚರ್ಚೆಯಲ್ಲಿ ಪ್ರಧಾನ ಮಂತ್ರಿ ಅವರು ಆ ಕ್ಷಣದ ನಿರ್ಧಾರವಾಗಿ ಸಂವಾದದಲ್ಲಿ ಪಾಲ್ಗೊಳ್ಳುವಂತೆ ಪೋಷಕರಿಗೆ ಕರೆ ನೀಡಿದರು.

ಪರೀಕ್ಷೆಗಳನ್ನು ರದ್ದು ಮಾಡಿದ ಬಳಿಕದಲ್ಲಿ ಉಂಟಾಗಿರುವ ನಿರ್ವಾತ ಪರಿಸ್ಥಿತಿಯ ಬಗ್ಗೆ ಪ್ರಧಾನ ಮಂತ್ರಿ ಅವರು ಕೇಳಿದಾಗ ಉತ್ತರಿಸಿದ ವಿದ್ಯಾರ್ಥಿಯು “ಸರ್ ನೀವು ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸಲ್ಪಡಬೇಕು ಎಂದು ತಾವು ಹೇಳಿದ್ದಿರಿ. ಆದುದರಿಂದ , ಅಲ್ಲಿ ಪರೀಕ್ಷೆಗಳ ಬಗ್ಗೆ ನನ್ನ ಮನಸ್ಸಿನಲ್ಲಿ ಭಯ ಇರಲಿಲ್ಲ” ಎಂದರು. ಆಕೆ, ಗುವಾಹಟಿಯ ವಿದ್ಯಾರ್ಥಿನಿ ತಾನು 10 ನೇ ತರಗತಿಯಿಂದ ಪ್ರಧಾನ ಮಂತ್ರಿ ಅವರ “ಎಕ್ಸಾಂ ವಾರಿಯರ್ಸ್” ಪುಸ್ತಕವನ್ನು ಓದುತ್ತಿರುವುದಾಗಿ ಹೇಳಿದರು. ವಿದ್ಯಾರ್ಥಿಗಳು ಅನಿಶ್ಚಿತ ಸಮಯದಲ್ಲಿ ಯೋಗ ಬಹಳ ದೊಡ್ಡ ಸಹಾಯ ಮಾಡುತ್ತಿರುವುದಾಗಿ ಉಲ್ಲೇಖಿಸಿದರು.

ಈ ಸಂವಾದ ಎಷ್ಟು ಸ್ವಯಂಪ್ರೇರಿತವಾಗಿತ್ತೆಂದರೆ, ಪ್ರಧಾನ ಮಂತ್ರಿ ಅವರು ಇದನ್ನು ಸಂಘಟಿಸುವುದಕ್ಕೆ ಹಾದಿಯನ್ನು ರೂಪಿಸಬೇಕಾಯಿತು. ಪ್ರಧಾನ ಮಂತ್ರಿ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಅವರ ಗುರುತಿಸುವಿಕೆ ನಂಬರನ್ನು ಕಾಗದದ ತುಂಡಿನಲ್ಲಿ ಬರೆಯುವಂತೆ ತಿಳಿಸಿದರಲ್ಲದೆ ತಾವು ಅವರಿಗೆ ಕರೆ ಮಾಡಿ ಸಂವಾದವನ್ನು ಸಂಯೋಜಿಸುವುದಾಗಿ ಹೇಳಿದರು. ಉತ್ಸಾಹಿ ವಿದ್ಯಾರ್ಥಿಗಳು ಈ ವ್ಯವಸ್ಥೆಯನ್ನು ಸಂತೋಷದಿಂದ ಅನುಸರಿಸಿದರು. ಚರ್ಚೆಯ ವಿಷಯವನ್ನು ವಿಸ್ತರಿಸಲು ಪ್ರಧಾನ ಮಂತ್ರಿ ಅವರು ಪರೀಕ್ಷೆ ರದ್ದತಿಯ ನಿರ್ಧಾರದ ಚರ್ಚೆಯಿಂದ ವಿಷಯವನ್ನು ದೂರ ಕೊಂಡೊಯ್ದರು.  ವಿದ್ಯಾರ್ಥಿಗಳು ಮತ್ತು ಪೋಷಕರು ನೃತ್ಯ, ಯೂ ಟ್ಯೂಬ್ ಸಂಗೀತ ವಾಹಿನಿಗಳು, ವ್ಯಾಯಾಮ ಮತ್ತು ರಾಜಕೀಯ ಸಹಿತ ವೈವಿಧ್ಯಮಯ ಸಂಗತಿಗಳ ಬಗ್ಗೆ ಚರ್ಚಿಸಿದರು. ಪ್ರಧಾನ ಮಂತ್ರಿ ಅವರು ಭಾರತದ ಸ್ವಾತಂತ್ರ್ಯದ  75 ವರ್ಷಗಳ ಬಗ್ಗೆ ಅವರವರ ಪ್ರದೇಶಗಳ ವಿಶೇಷ ಪ್ರಸ್ತಾವನೆಯೊಂದಿಗೆ ಸಂಶೋಧನೆ ನಡೆಸಿ ಪ್ರಬಂಧ ಬರೆಯುವಂತೆ ಹೇಳಿದರು.

ಸಭೆಯಲ್ಲಿ, ಪ್ರಧಾನ ಮಂತ್ರಿ ಅವರು ವಿದ್ಯಾರ್ಥಿಗಳ ತಂಡ ಸ್ಫೂರ್ತಿಯನ್ನು ಕೊಂಡಾಡಿದರು. ಅವರ ತಂಡಗಳ ಕೆಲಸ ಮತ್ತು ಸಾರ್ವಜನಿಕ ಸಹಭಾಗಿತ್ವ ಕೋವಿಡ್ -19 ರ ಎರಡನೇ ಅಲೆಯಲ್ಲಿ ಕಂಡುಬಂದಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು. ವಿದ್ಯಾರ್ಥಿಗಳಿಗೆ ನೀವು ಐ.ಪಿ.ಎಲ್. ವೀಕ್ಷಿಸುತ್ತಿರೋ, ಚಾಂಪಿಯನ್ ಲೀಗ್ ವೀಕ್ಷಿಸುತ್ತೀರೋ ಅಥವಾ ಒಲಿಂಪಿಕ್ಸ್ ಅಥವಾ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಕಾಯುತ್ತೀರೋ  ಎಂದು ಪ್ರಧಾನ ಮಂತ್ರಿ ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ವಿದ್ಯಾರ್ಥಿಯೊಬ್ಬರು  ಕಾಲೇಜು ಸೇರ್ಪಡೆಗೆ ಪ್ರವೇಶ ಪರೀಕ್ಷೆಗೆ ತಯಾರಾಗಲು ತನಗೆ ಈಗ ಸಾಕಷ್ಟು ಸಮಯ ದೊರೆಯುತ್ತಿದೆ ಎಂದರು. ಪರೀಕ್ಷೆ ರದ್ದಾದ ಬಳಿಕದ ಸಮಯವನ್ನು ಜಾಗ್ರತೆಯಿಂದ ಫಲಪ್ರದವಾಗಿ  ಬಳಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

  • G.shankar Srivastav April 10, 2022

    🙏🌹🙏
  • Pradeep Kumar Gupta April 01, 2022

    Jai ho 🇮🇳
  • RAKSHIT PRAMANICK February 23, 2022

    বিজেপি জিন্দাবাদ t
  • RAKSHIT PRAMANICK February 23, 2022

    বিজেপি জিন্দাবাদ i
  • RAKSHIT PRAMANICK February 23, 2022

    বিজেপি জিন্দাবাদ বিজেপি জিন্দাবাদ
  • RAKSHIT PRAMANICK February 23, 2022

    বিজেপি জিন্দাবাদ
  • शिवकुमार गुप्ता February 09, 2022

    जय भारत
  • शिवकुमार गुप्ता February 09, 2022

    जय हिंद
  • शिवकुमार गुप्ता February 09, 2022

    जय श्री सीताराम
  • शिवकुमार गुप्ता February 09, 2022

    जय श्री राम
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Over 3.3 crore candidates trained under NSDC and PMKVY schemes in 10 years: Govt

Media Coverage

Over 3.3 crore candidates trained under NSDC and PMKVY schemes in 10 years: Govt
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಜುಲೈ 2025
July 22, 2025

Citizens Appreciate Inclusive Development How PM Modi is Empowering Every Indian