ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ಮಾರ್ಗ ಉತ್ತರ ಪ್ರದೇಶದ ಜನರಿಗೆ ಉದ್ಯೋಗಾವಕಾಶ ಕಲ್ಪಿಸುತ್ತದೆ ಮತ್ತು ಜೊತೆಗೆ ಸ್ಥಳೀಯರಿಗೆ ದೆಹಲಿ ಸೇರಿದಂತೆ ನಗರಗಳೊಂದಿಗೆ ಸಂಪರ್ಕ ಹೊಂದಲು ನೆರವಾಗುತ್ತದೆ. ಪ್ರಧಾನಮಂತ್ರಿ ಮೋದಿ ಅವರು 296 ಕಿಲೋ ಮೀಟರ್ ಉದ್ದದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ಹೆದ್ದಾರಿಗೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಎಕ್ಸ್ ಪ್ರೆಸ್ ಮಾರ್ಗವು ಬುಂದೇಲ್ ಖಂಡ್ ಪ್ರದೇಶವನ್ನು ರಾಷ್ಟ್ರ ರಾಜಧಆನಿ ದೆಹಲಿಯೊಂದಿಗೆ ಆಗ್ರಾ ಲಖನೌ ಎಕ್ಸ್ ಪ್ರೆಸ್ ಮಾರ್ಗ ಮತ್ತು ಯಮುನಾ ಎಕ್ಸ್ ಪ್ರೆಸ್ ಮಾರ್ಗದ ಮೂಲಕ ಸಂಪರ್ಕಿಸಲಿದೆ ಜೊತೆಗೆ ಬುಂದೇಲ್ ಖಂಡ್ ವಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಬುಂದೇಲ್ ಖಂಡದಲ್ಲಿನ ಉತ್ತರ ಪ್ರದೇಶ ರಕ್ಷಣಾ ಕಾರಿಡಾರ್ ನೊಂದಿಗೆ ಎಕ್ಸ್ ಪ್ರೆಸ್ ಮಾರ್ಗವು ವಲಯದ ಸಾಮಾಜಿಕ ಆರ್ಥಿಕ ಸ್ವರೂಪವನ್ನೇ ಬದಲಾಯಿಸಲಿದ್ದು, ರಕ್ಷಣಾ ಯಂತ್ರಾಂಶಗಳ ಜಾಗತಿಕ ರಫ್ತಿಗೆ ಅವಕಾಶ ನೀಡುತ್ತದೆ, ಹೂಡಿಕೆಗೆ ಉತ್ತೇಜನ ನೀಡಿ, ಭವಿಷ್ಯದಲ್ಲಿ ಮೇಕ್ ಇನ್ ಇಂಡಿಯಾದ ಪ್ರಮುಖ ತಾಣವಾಗಲಿದೆ.