2 ಮತ್ತು 3 ನೇ ಶ್ರೇಣಿ ನಗರಗಳ ಬೆಳವಣಿಗೆಯನ್ನು ಟೈಮ್ಸ್ ನೌ ಶೃಂಗಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿಯವರು, ಡಿಜಿಟಲ್ ವಹಿವಾಟು ಮತ್ತು ಸ್ಟಾರ್ಟ್ ಅಪ್ ನೋಂದಣಿಗಳ ಹೆಚ್ಚಳದಿಂದ ಈ ನಗರಗಳು ಆರ್ಥಿಕ ಚಟುವಟಿಕೆಯ ಹೊಸ ಕೇಂದ್ರಗಳಾಗುತ್ತಿವೆ ಎಂದರು,
2 ಮತ್ತು 3ನೇ ಶ್ರೇಣಿ ನಗರಗಳಲ್ಲಿ ಹೆಚ್ಚಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರಿದ್ದಾರೆ. ಆದ್ದರಿಂದಲೇ ಸರ್ಕಾರವು ಮೊದಲ ಬಾರಿಗೆ ಸಣ್ಣ ನಗರಗಳು ಮತ್ತು ಪಟ್ಟಣಗಳ ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸುವುದರ ಜೊತೆಗೆ ಈ ನಗರಗಳಲ್ಲಿ ವಾಸಿಸಿರುವ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಾರ್ಷಿಕ 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರಿಗೆ ಶೂನ್ಯ ತೆರಿಗೆಯ ಸರ್ಕಾರದ ನಿರ್ಧಾರದಿಂದಾಗಿ ಇಂತಹ ಪಟ್ಟಣಗಳಲ್ಲಿ ವಾಸಿಸುವ ಹೆಚ್ಚಿನ ಜನರು ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.2 ಮತ್ತು 3ನೇ ಶ್ರೇಣಿ ನಗರಗಳನ್ನು ಎಕ್ಸ್‌ಪ್ರೆಸ್‌ವೇಗಳು ಮತ್ತು ಹೊಸ ವಿಮಾನ ಮಾರ್ಗಗಳ ಉತ್ತಮ ಸಂಪರ್ಕದ ಮೂಲಕ ಹೇಗೆ ತ್ವರಿತವಾಗಿ ಸಂಪರ್ಕಿಸಲಾಗುತ್ತಿದೆ ಎಂಬ ಬಗ್ಗೆಯೂ ಅವರು ಪ್ರಸ್ತಾಪಿಸಿದರು.