ಮಹಾತ್ಮಾ ಗಾಂಧಿ ಅವರ ಜೀವಿತ ಕಾಲದಲ್ಲಿದ್ದಂತೆ , ಇಂದಿನ ವಿಶ್ವದಲ್ಲಿ ಈಗಲೂ ಪ್ರಸ್ತುತರು ಎಂದು ನನ್ನ ಭಾವನೆ: ಶ್ರೀ ನರೇಂದ್ರ ಮೋದಿ.

ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಶ್ರೀ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ ಆದರ್ಶಗಳು, ತತ್ವಗಳು, ಮತ್ತು ಬೋಧನೆಗಳನ್ನು ಭಾರತ ಮತ್ತು ವಿದೇಶಗಳಲ್ಲಿ ತಮ್ಮ ಭಾಷಣ ಮತ್ತು ಕ್ರಿಯೆಗಳ ಮೂಲಕ ಎತ್ತಿ ಹಿಡಿದರು.

ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕವನ್ನು ಪ್ರಧಾನ ಮಂತ್ರಿ ಜನವರಿ 30, 2019 ರಂದು ಅವರು ದೇಶಕ್ಕೆ ಸಮರ್ಪಿಸಿದ್ದು, ಅದು ಭಾರತೀಯ ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿ ಮತ್ತು ಶಕ್ತಿಯನ್ನು ಪುನಾರಚಿಸಿ ವ್ಯಾಖ್ಯಾನಿಸುತ್ತದೆ. ಇದು ವಸಾಹತುಶಾಹಿ ಆಡಳಿತದಲ್ಲಿ ಉಪ್ಪು ತಯಾರಿಸಿದ ಮಹಾತ್ಮಾ ಅವರ ದಂಡಿ ಯಾತ್ರೆಯನ್ನು ಚಿತ್ರಿಸುತ್ತದೆ ಮತ್ತು ಅವರ 80 ಮಂದಿ ಸತ್ಯಾಗ್ರಹಿ ಸಹಚರರನ್ನು ಒಳಗೊಂಡಿದೆ.

ಉಪ್ಪಿನ ಸತ್ಯಾಗ್ರಹ ಸ್ಮಾರಕವು ಪ್ರಧಾನ ಮಂತ್ರಿ ಅವರು ಮಹಾತ್ಮಾ ಗಾಂಧಿ ಅವರ ಪರಂಪರೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಕೈಗೊಂಡ ಹಲವು ಉಪಕ್ರಮಗಳಲ್ಲಿ ಒಂದಾಗಿದೆ.

ಶ್ರೀ ನರೇಂದ್ರ ಮೋದಿ ಅವರ ಅತ್ಯಂತ ಇಷ್ಟದ ಯೋಜನೆಯಾದ , ಸ್ವಚ್ಚ ಭಾರತ್ ಅಭಿಯಾನ, ಮಹಾತ್ಮಾ ಗಾಂಧೀಜಿ ಅವರ ಬೋಧನೆಗಳ ಸ್ಪೂರ್ತಿಯಿಂದಾಗಿ ರೂಪುಗೊಂಡಿದೆ, ಇದನ್ನು 2014 ರ ಅಕ್ಟೋಬರ್ 2 ರಂದು ಹೊಸದಿಲ್ಲಿಯಲ್ಲಿ ಆರಂಭಿಸಲಾಯಿತು. ಈ ಯೋಜನೆಯನ್ನು ಜಾರಿಗೆ ತರುವಾಗ ಅವರು “ ಸ್ವಚ್ಚ ಭಾರತ ಎಂಬುದು 2019 ರಲ್ಲಿ ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ವರ್ಷದಲ್ಲಿ ಅವರಿಗೆ ನೀಡಬಹುದಾದ ಅತ್ಯುತ್ತಮ ಶೃದ್ದಾಂಜಲಿಯಾಗುತ್ತದೆ “ ಎಂಬುದಾಗಿ ಹೇಳಿದ್ದರು.

ಸ್ವಚ್ಚತಾ ಒಂದು ಜನಾಂದೋಲನವಾದುದಕ್ಕೆ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು . ಇದು ಮಹಾತ್ಮಾ ಗಾಂಧಿ ಅವರ ಕಾಲದಲ್ಲಿ ಸ್ವಾತಂತ್ರ್ಯದ ಹಂಬಲ ಜನಾಂದೋಲನವಾದ ದಿನಗಳನ್ನು ನೆನಪಿಗೆ ತರುತ್ತದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ಯೋಜನೆ ಭಾರತದ ಉದ್ದಗಲಕ್ಕೂ ಪರಿವರ್ತನೆ ತಂದಿದೆ. ಇದು ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸಿದೆ. ಬಯಲು ಶೌಚ ಮುಕ್ತ ಸ್ಪರ್ಧೆಯಲ್ಲಿ ರಾಜ್ಯಗಳು ಬಿರುಸಿನ ಸ್ಪರ್ಧೆ ನೀಡಿವೆ. ಮತ್ತು ಭಾರತವೀಗ 100 % ಗ್ರಾಮೀಣ ನೈರ್ಮಲ್ಯೀಕರಣ ವ್ಯಾಪ್ತಿ ಸಾಧನೆಯ ಹಾದಿಯಲ್ಲಿದೆ.

https://twitter.com/narendramodi/status/973583560308293632

 

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧಿ ಅವರು ಖಾದಿಯನ್ನು ಭಾರತದ ಆತ್ಮಸಾಕ್ಷಿಯ, ಪ್ರಜ್ಞೆಯ ತಿರುಳಾಗಿ ಬಳಸಿದರು. ಆ ದಿನಗಳ ಬಳಿಕ ಖಾದಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಅದಕ್ಕೆ ಪ್ರಧಾನ ಮಂತ್ರಿ ಅವರು ತಮ್ಮ ಭಾಷಣದ ಮೂಲಕ ವಿಶೇಷವಾಗಿ ಪುನಶ್ಚೇತನ ನೀಡಿದರು. ಶ್ರೀ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಕಾರ್ಯಕ್ರಮವಾದ “ಮನ್ ಕಿ ಬಾತ್” ಕಾರ್ಯಕ್ರಮದ ಮೂಲಕ ಜನರನ್ನು ಖಾದಿ ಖರೀದಿಸುವಂತೆ ಉತ್ತೇಜಿಸಿದರಲ್ಲದೆ ಆ ಮೂಲಕ ಖಾದಿ ಮತ್ತು ಗ್ರಾಮೋದ್ಯೋಗಗಳ ಕೈಗಾರಿಕೆಗೆ ಪುನಶ್ಚೇತನ ನೀಡಿದರು. ಶ್ರೀ ನರೇಂದ್ರ ಮೋದಿ ಅವರ ಕರೆ ಎಂತಹ ಪರಿಣಾಮ ಬೀರಿತೆಂದರೆ ಖಾದಿ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಪ್ರಮಾಣದ ಹೆಚ್ಚಳವಾಯಿತು.

 

 

ಮಹಾತ್ಮಾ ಗಾಂಧಿ ಅವರ 150 ನೇ ವರ್ಷಾಚರಣೆ ಹಲವು ಕಾರ್ಯಕ್ರಮಗಳೊಂದಿಗೆ ಎರಡು ವರ್ಷದ ಅವಧಿಯಲ್ಲಿ ಆಚರಿಸಲಾಗುತ್ತಿದೆ. ಮಹಾತ್ಮಾ ಗಾಂಧಿ ಅವರ ಚಿಂತನೆಯ ಸ್ಮರಣೆಯ ಪ್ರತೀಕವಾಗಿ ಮಹಾತ್ಮಾ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲ್ಯ ಸಮಾವೇಶವನ್ನು (ಎಂ.ಜಿ. ಐ.ಎಸ್.ಸಿ.) ಯನ್ನು 2018 ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿತ್ತು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಸಚಿವರು ಮತ್ತು ವಿಶ್ವದ ನೈರ್ಮಲ್ಯೀಕರಣ ವಲಯದ ನಾಯಕರು ಭಾಗವಹಿಸಿ ಅವರ ಅನುಭವ ಮತ್ತು ಪ್ರಯೋಗಗಳನ್ನು ಹಂಚಿಕೊಂಡಿದ್ದರು.

 

ಮಹಾತ್ಮಾ ಗಾಂಧಿ ಅವರ ಅಚ್ಚು ಮೆಚ್ಚಿನ “ವೈಷ್ಣವ ಜನ್ ತೋ” ಗೆ 124 ಕ್ಕೂ ಅಧಿಕ ದೇಶಗಳ ಕಲಾವಿದರು ತಮ್ಮ ಸಂಗೀತ ಧ್ವನಿ ಸೇರಿಸುವ ಮೂಲಕ ಅದು ಜಾಗತಿಕ ಮಟ್ಟಕ್ಕೆ ಪಸರಿಸಿದೆ. ಈ ಯೋಜನೆ ಸುಂದರ ಭಾರತೀಯ ಭಜನ್ ಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಿದೆ.

ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದಿನಲ್ಲಿ ಮಹಾತ್ಮಾ ಗಾಂಧಿ ಅವರು ಸ್ಥಾಪಿಸಿದ ಸಾಬರಮತಿ ಆಶ್ರಮವನ್ನು ಭಾರತೀಯ ರಾಜತಾಂತ್ರಿಕತೆಯ ಮುಂಚೂಣಿಗೆ ತಂದರು. ಅವರ ಹಾಜರಾತಿಯಲ್ಲಿ, ಚೀನಾ ಅಧ್ಯಕ್ಷರಾದ ಕ್ಸಿ ಜಿನ್ ಪಿಂಗ್ , ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತಾನ್ಯಾಹು, ಜಪಾನ್ ಪ್ರಧಾನಮಂತ್ರಿ ಶಿಂಜೋ ಅಬೆ ಸಹಿತ ಪ್ರಮುಖ ಜಾಗತಿಕ ನಾಯಕರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮಾ ಅವರಿಗೆ ಗೌರವ ಸಲ್ಲಿಸಿದ್ದರು. ಚೀನಾ ಅಧ್ಯಕ್ಷರು ಸಾಬರಮತಿ ಆಶ್ರಮಕ್ಕೆ ತಮ್ಮ ಭೇಟಿಯನ್ನು ತಮ್ಮ ಜೀವನದ ಅತ್ಯಂತ ಸ್ಮರಣೀಯ ಮತ್ತು ಜ್ಞಾನದಾಯಕ ಸಂದರ್ಭ ಎಂದು ಬಣ್ಣಿಸಿದ್ದರು. ಪ್ರಧಾನಮಂತ್ರಿ ಮತ್ತು ವಿವಿಧ ಜಾಗತಿಕ ನಾಯಕರು ಚರಕ ಬಳಸುವ ಮೂಲಕ ಗಾಂಧೀಜಿ ಅವರು ಸ್ವಾವಲಂಬನೆಯ ಸಂಕೇತವಾಗಿ ಚರಕ ಬಳಸುತ್ತಿದ್ದ ನೆನಪುಗಳನ್ನು ಮುನ್ನೆಲೆಗೆ ತಂದರು.

 

 

 

ಪ್ರಧಾನ ಮಂತ್ರಿ ಅವರು ಸಾಗರೋತ್ತರ ದೇಶಗಳಲ್ಲಿ ಮಹಾತ್ಮಾ ಅವರ ಬಗ್ಗೆ ಅರಿವು ಮೂಡಿಸಲು ಬ್ರಿಸ್ಬೇನ್ ನಿಂದ ಹ್ಯಾನ್ನೋವರ್ ನಿಂದ ಹಿಡಿದು ಆಶ್ಗಬಟ್ ವರೆಗೆ ಮಹಾತ್ಮಾ ಅವರ ಪ್ರತಿಮೆಗಳನ್ನು ಅನಾವರಣ ಮಾಡಿದ್ದಾರೆ. https://twitter.com/narendramodi/status/533948745717526528

2018 ರಲ್ಲಿ ರಾಜ್ ಕೋಟ್ ನ ಆಲ್ಫ್ರೆಡ್ ಹೈಸ್ಕೂಲ್ ನಲ್ಲಿ ಮಹಾತ್ಮಾ ಗಾಂಧಿ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಲಾಗಿದೆ. ಮಹಾತ್ಮಾ ಗಾಂಧಿ ಅವರು 1887 ರಲ್ಲಿ ಈ ಶಾಲೆಯಿಂದ ತಮ್ಮ ಮೆಟ್ರಿಕ್ಯುಲೇಶನ್ ಉತ್ತೀರ್ಣರಾಗಿದ್ದರು.

ಪ್ರಧಾನ ಮಂತ್ರಿ ಅವರು ಮಹಾತ್ಮಾ ಗಾಂಧಿ ಅವರ ಚಿಂತನೆಯನ್ನು ಅನುಷ್ಟಾನಕ್ಕೆ ತಂದು . 21 ನೇ ಶತಮಾನದಲ್ಲಿಯೂ ಅವರ ಚಿಂತನೆಗಳು ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ಜನರನ್ನು ಒಗ್ಗೂಡಿಸಲು ಮತ್ತು ನವ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ಮಹಾತ್ಮಾ ಗಾಂಧಿ ಅವರ ಬೋಧನೆಗಳನ್ನು ಬಳಸಿಕೊಂಡರು. ಅವರ ಕ್ರಮಗಳು ಮಹಾತ್ಮಾ ಗಾಂಧಿ ಅವರ ತತ್ವಗಳು ಮತ್ತು ಮೌಲ್ಯಗಳನ್ನು ವಾಸ್ತವೀಕರಿಸಿದವು.

2018 ರ ಅಕ್ತೋಬರ್ 2 ರಂದು ಪ್ರಧಾನಮಂತ್ರಿ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡ ಮಾತುಗಳು ಬಾಪೂಜಿ ಅವರ ಪರಂಪರೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅವರ ಚಿಂತನೆಯನ್ನು ತೋರಿಸುತ್ತವೆ. ಅವರು ಬರೆಯುತ್ತಾರೆ “ ಭಾರತವು ವೈವಿಧ್ಯತೆಯ ದೇಶ. ಅಲ್ಲಿ ಎಲ್ಲರನ್ನೂ ಒಗ್ಗೂಡಿಸಿದ ವ್ಯಕ್ತಿಯೊಬ್ಬರು ಇದ್ದರೆ , ಭಿನ್ನಾಭಿಪ್ರಾಯಗಳನ್ನು ಮೀರಿ ಜನರು ಎದ್ದು ನಿಲ್ಲುವಂತೆ ಮಾಡಿದ್ದರೆ, ವಸಾಹತುಶಾಹಿಯ ವಿರುದ್ದ ಹೋರಾಡುವಂತೆ ಮಾಡಿದ್ದರೆ, ಭಾರತದ ಸ್ಥಾನಮಾನವನ್ನು ವಿಶ್ವ ಮಟ್ಟದಲ್ಲಿ ಎತ್ತರಿಸಿದವರು ಇದ್ದರೆ ಅದು ಮಹಾತ್ಮಾ ಗಾಂಧಿ. ಇಂದು ನಾವು 1.3 ಬಿಲಿಯನ್ ಭಾರತೀಯರು ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಬಾಪು ಅವರು ದೇಶಕ್ಕಾಗಿ ಕಂಡ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಬದ್ದರಾಗಿದ್ದೇವೆ” .

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.